ಬೆಂಗಳೂರು: ಈ ಬೇಸಿಗೆ ಪ್ರವಾಸದ (summer travel) ಮಾತು ಬಂದಾಗ ಮೊದಲು ನೆನಪಾಗುವ ಹೆಸರು ಕೂರ್ಗ್. ಈ ಹೆಸರು ಕೇಳುತ್ತಲೇ ಪ್ರವಾಸಿಗರ ಕಿವಿ ನೆಟ್ಟಗಾಗುತ್ತದೆ. ಹೌದು ಇದು ಧರೆಗಿಳಿದ ಸ್ವರ್ಗವೆಂದರೆ ತಪ್ಪಾಗಲಾರದು! ಎಲ್ಲೆಡೆ ಹಸಿರು, ಧುಮ್ಮಿಕ್ಕಿ ಹರಿಯುವ ಜಲಪಾತಗಳು, ಉದ್ಯಾನವನಗಳು, ಬೆಟ್ಟ ಗುಡ್ಡಗಳು ಒಂದಾ ಎರಡಾ…? ನಿಮ್ಮನ್ನು ಹೊಸದೊಂದು ಲೋಕಕ್ಕೆ ಕೂರ್ಗ್ ಕರೆದುಕೊಂಡು ಹೋಗುತ್ತದೆ. ಈ ಎಲ್ಲಾ ಕಾರಣಗಳಿಂದ ಕೂರ್ಗ್ ಪ್ರವಾಸಿ ಪ್ರಿಯರ ಪಟ್ಟಿಯಲ್ಲಿ ತನ್ನ ಸ್ಥಾನವನ್ನು ಗಟ್ಟಿಗಳಿಸಿಕೊಂಡಿದೆ. ಕೂರ್ಗ್ (Coorg Restaurants) ಕೇವಲ ಮನಸ್ಸಿಗೆ ಮುದ ನೀಡುವುದಲ್ಲದೇ, ಭೋಜನಪ್ರಿಯರಿಗೆ ಕೂಡ ಹೇಳಿ ಮಾಡಿಸಿದ ಸ್ಥಳ.
ಯಾವುದಾದರೂ ಪ್ರವಾಸಿ ತಾಣಗಳಿಗೆ ಹೊರಟಾಗ ಮೊದಲು ತಲೆಗೆ ಬರುವ ಯೋಚನೆ ಎಲ್ಲಿ ಉಳಿದುಕೊಳ್ಳುವುದು, ಅಲ್ಲಿ ಯಾವ ಯಾವ ಸುಂದರ ಸ್ಥಳಗಳಿವೆ, ಹಾಗೇ ಉತ್ತಮ ರೆಟ್ಟೊರೆಂಟ್ ಗಳು ಯಾವುದು ಎಂದು. ಆದರೆ ನೀವು ಕೂರ್ಗ್ ಗೆ ಭೇಟಿ ನೀಡುವ ಯೋಚನೆಯಲ್ಲಿದ್ದರೆ ಈ ಎಲ್ಲಾ ಚಿಂತೆಗಳನ್ನು ಬಿಟ್ಟು ಬಿಡಿ. ಯಾಕೆಂದರೆ ಕೂರ್ಗ್ ನಲ್ಲಿರುವ ಅತ್ಯುತ್ತಮ ರೆಸ್ಟೊರೆಂಟ್ ಗಳ ಬಗ್ಗೆ ಇಲ್ಲಿ ಸಂಪೂರ್ಣವಾದ ಮಾಹಿತಿ ಇದೆ.
ಕೂರ್ಗ್‌ನಲ್ಲಿ ನಿಮ್ಮ ಹಸಿವಿನ ದಾಹವನ್ನು ನೀಗಿಸುವ ಉತ್ತಮ ರೆಸ್ಟೋರೆಂಟ್ ಗಳ ಮಾಹಿತಿ ಇಲ್ಲಿದೆ ಓದಿ:
ರೈನ್ ಟ್ರೀ ರೆಸ್ಟೋರೆಂಟ್
ಕಾಫಿ ತೋಟದ ನಡುವೆ ಇರುವ ಈ ರೈನ್ ಟ್ರೀ ರೆಸ್ಟೋರೆಂಟ್ ಕೊಡಗಿನ ರುಚಿಕರವಾದ ಹಾಗೂ ಸಾಂಪ್ರದಾಯಿಕ ಆಹಾರವನ್ನು ನಿಮಗೆ ಉಣಬಡಿಸುತ್ತದೆ. ಪಂದಿ ಕರಿ(ಪೋರ್ಕ್ ಕರಿ), ಕಡಂಬಟ್ಟು (ಹಬೆಯಲ್ಲಿ ಬೇಯಿಸಿದ ಅಕ್ಕಿಯ ಕಡುಬು), ನೂಲಪುಟ್ಟು (ಶ್ಯಾವಿಗೆ) ಇತ್ಯಾದಿ ವಿಶಿಷ್ಟ ಆಹಾರಗಳ ಮೂಲಕ ನಿಮ್ಮ ಹೊಟ್ಟೆಯ ಹಸಿವನ್ನು ಈ ರೆಸ್ಟೋರೆಂಟ್ ನೀಗಿಸುತ್ತದೆ. ಇಲ್ಲಿಯ ವಾತಾವರಣ ಕೂಡ ತುಂಬಾನೇ ಹಿತಕರವಾಗಿದ್ದು, ನೀವು ಒಮ್ಮೆ ಭೇಟಿ ನೀಡಿದರೆ ಮತ್ತೆ ಮತ್ತೆ ಹೋಗಬೇಕೆನಿಸುವ ಜಾಗ ಇದಾಗಿದೆ.
ಬೀನ್ಸ್ ಆ್ಯಂಡ್ ಬ್ರೇವ್ಸ್ ಕೆಫೆ
ಬೇರೆ ಬೇರೆ ದೇಶದ ಆಹಾರಗಳನ್ನು ಸವಿಯಬೇಕು ಎಂಬ ಆಸೆ ಇದ್ದವರು ಈ ಬೀನ್ಸ್ ಆ್ಯಂಡ್ ಬ್ರೇವ್ಸ್ ಕೆಫೆಗೆ ಭೇಟಿ ನೀಡಿ. ಯಾಕೆಂದರೆ ಇದು ಪ್ರಪಂಚದ ಇತರ ಮೂಲೆಗಳ ಖಾದ್ಯಗಳನ್ನು ನಿಮಗೆ ಪರಿಚಯಿಸುತ್ತದೆ. ಇದರ ಜೊತೆಗೆ ಇವರು ತಯಾರಿಸುವ ವಿಶೇಷ ಹಾಗೂ ವಿಭಿನ್ನವಾದ ಕಾಫಿ ಕೂಡ ಅಷ್ಟೇ ರುಚಿಕರವಾಗಿದೆ. ಮಡಿಕೇರಿಯಲ್ಲಿರುವ ಈ ಕಫೆಯಲ್ಲಿ ನಿಮಗೆ ರುಚಿಕರವಾದ ಫಿಜ್ಜಾ, ಬರ್ಗರ್, ಪಾಸ್ತಾ, ಸ್ಯಾಂಡ್ ವಿಚ್, ತುಂಬಾ ರುಚಿಕರವಾದ ಕಾಫಿ ಹಾಗೂ ಇತರೆ ತಂಪಾದ ಪಾನೀಯಗಳು ನಿಮ್ಮ ದಾಹ ನೀಗಿಸಲಿವೆ.
ಇದನ್ನೂ ಓದಿ:ಸಹೋದರ ಸಿದ್ಧಾರ್ಥ ಎಂಗೇಜ್‌ಮೆಂಟ್‌ನಲ್ಲಿ ಮಿಂಚಿದ ಪ್ರಿಯಾಂಕ ದಂಪತಿ
ಅಂಬ್ಯಾಟಿ ಗ್ರೀನ್ಸ್ ರೆಸಾರ್ಟ್
ನಿಮ್ಮ ಮೈ ಮನದ ಆಯಾಸವನ್ನು ಕಡಿಮೆ ಮಾಡಿಕೊಂಡು ಮನಸ್ಸನ್ನು ಹುರುಪುಗೊಳಿಸಬೇಕೆಂದರೆ ತಪ್ಪದೇ ಭೇಟಿ ನೀಡಿ ಈ ಅಂಬ್ಯಾಟಿ ಗ್ರೀನ್ಸ್ ರೆಸಾರ್ಟ್‌ಗೆ. ಇಲ್ಲಿನ ಆಹಾರ ಕೂಡ ಅಷ್ಟೇ ಚೆನ್ನಾಗಿದೆ. ಸ್ಥಳೀಯವಾಗಿ ಸಿಗುವ ಸಾಮಗ್ರಿಗಳನ್ನು ಬಳಸಿಕೊಂಡು ಮಾಡುವ ಆಹಾರದ ರುಚಿಯೇ ಅಮೋಘವಾದದ್ದು.
ಟುಸ್ಕ್ ಆ್ಯಂಡ್ ಡಾನ್ ಕೆಫೆ
ಮಡಿಕೇರಿಯ ಹೃದಯ ಭಾಗದಲ್ಲಿರುವ ಈ ಕಫೆ ನಿಮ್ಮ ಮನಸ್ಸನ್ನು ರಿಲ್ಯಾಕ್ಸ್ ಮಾಡುವುದರ ಜೊತೆಗೆ ನಿಮಗೆ ಅತ್ಯುತ್ತಮವಾದ ಆಹಾರವನ್ನು ನೀಡುವಲ್ಲಿ ಇದು ಹೆಸರುವಾಸಿ. ಒಂದು ಕಪ್ ಬಿಸಿ ಬಿಸಿ ಕಾಫಿ ಕುಡಿಯುತ್ತಾ ಇಲ್ಲಿನ ಪ್ರಕೃತಿಯ ಸೌಂದರ್ಯವನ್ನು ಕಣ್ತುಂಬಿಸಿಕೊಳ್ಳಬಹುದು. ಹಾಗೇ ಇಲ್ಲಿ ಸಿಗುವ ಸ್ಯಾಂಡ್ ವಿಚ್, ಬರ್ಗರ್ ಕೂಡ ತುಂಬಾ ಚೆನ್ನಾಗಿದೆ.
ಕೂರ್ಗ್ ಕ್ಯುಸಿನ್
ಮಡಿಕೇರಿಯ ಹೊರಭಾಗದಲ್ಲಿರುವ ಕೂರ್ಗ್ ಕ್ಯುಸಿನ್ ನಿಮಗೆ ಮನೆಯ ವಾತಾವರಣವನ್ನು ನೀಡುತ್ತದೆ. ಇಲ್ಲಿ ಸಿಗುವ ಅಕ್ಕಿ ರೊಟ್ಟಿ, ಕೂರ್ಗಿ ಚಿಕನ್ ಕರಿ ಸವಿಯುತ್ತಿದ್ದರೆ ಅದರ ಮಜಾನೇ ಬೇರೆ. ಹಾಗೇ ಇಲ್ಲಿಯ ವಾತಾವರಣ ಕೂಡ ಆಹ್ಲಾದಕರವಾಗಿದ್ದು ಒಮ್ಮೆ ಭೇಟಿ ನೀಡಿದರೆ ಮತ್ತೊಮ್ಮೆ ನೀಡಬೇಕು ಅನಿಸುವಷ್ಟು ಹಿತವಾಗಿದೆ.
.