Site icon Vistara News

Maldives : ಭಾರತವನ್ನು ಎದುರು ಹಾಕಿಕೊಂಡ ಮಾಲ್ಡೀವ್ಸ್​​ಗೆ ಟೂರಿಸಂನಲ್ಲಿ ಸಿಕ್ಕಾಪಟ್ಟೆ ಲಾಸ್​

Maldives

ಬೆಂಗಳೂರು: ಭಾರತ ಮತ್ತು ಮತ್ತು ದ್ವೀಪರಾಷ್ಟ್ರ ಮಾಲ್ಡೀವ್ಸ್​​ (Maldives) ನಡುವಿನ ದ್ವಿಪಕ್ಷೀಯ ಸಂಬಂಧಗಳು ಹದಗೆಡುತ್ತಿರುವುದರಿಂದ ಅಲ್ಲಿನ ಪ್ರವಾಸೋದ್ಯಮದ ಮೇಲೆ ಭಾರಿ ಪರಿಣಾಮ ಬೀರಿದೆ, ಅಲ್ಲಿನ ಸಚಿವಾಲಯದ ಅಂಕಿಅಂಶಗಳನ್ನು ಉಲ್ಲೇಖಿಸಿ ಮಾಡಿರುವ ಇತ್ತೀಚಿನ ವರದಿಯ ಪ್ರಕಾರ ಕಳೆದ ವರ್ಷದ ಮಾರ್ಚ್​ಗೆ ಹೋಲಿಸಿದರೆ ಆ ದೇಶದಲ್ಲಿ ಭಾರತೀಯ ಪ್ರವಾಸಿಗರ ಸಂಖ್ಯೆ ಶೇಕಡಾ 33 ರಷ್ಟು ಕಡಿಮೆಯಾಗಿದೆ.

ಮಾರ್ಚ್ 2023 ರಲ್ಲಿ, 41,000 ಕ್ಕೂ ಹೆಚ್ಚು ಭಾರತೀಯ ಪ್ರವಾಸಿಗರು ಮಾಲ್ಡೀವ್ಸ್​ಗೆ ಭೇಟಿ ನೀಡಿದ್ದರೆ, ಮಾರ್ಚ್ 2024 ರಲ್ಲಿ ಈ ಸಂಖ್ಯೆ ಕೇವಲ 27,224 ಕ್ಕೆ ಅದರ ಪ್ರಮಾಣ ಇಳಿದಿದೆ. ಇದು ಶೇಕಡಾ 33 ರಷ್ಟು ತೀವ್ರ ಕುಸಿತ ಎಂದು ಮಾಲೆ ಮೂಲದ ಅಧಾಧು ವರದಿ ಹೇಳಿದೆ. ಈ ಕುಸಿತದ ಹಿಂದಿನ ಪ್ರಾಥಮಿಕ ಕಾರಣವೆಂದರೆ ಭಾರತ ಸರ್ಕಾರದ ಪ್ರವಾಸೋದ್ಯಮ ಅಭಿಯಾನ. ಇದು ಲಕ್ಷದ್ವೀಪ ದ್ವೀಪಗಳಿಗೆ ಪ್ರವಾಸ ಹೋಗಲು ತನ್ನ ನಾಗರಿಕರನ್ನು ಪ್ರೋತ್ಸಾಹಿಸುತ್ತಿದೆ.

ಮಾರ್ಚ್ 2023 ರವರೆಗೆ ಮಾಲ್ಡೀವ್ಸ್​​ಗೆ ಭಾರತದ ನಾಗರಿಕರೇ ಪ್ರವಾಸೋದ್ಯಮದ ಎರಡನೇ ಅತಿದೊಡ್ಡ ಮೂಲವಾಗಿತ್ತು. ಅಲ್ಲಿನ ಮಾರುಕಟ್ಟೆಯಲ್ಲಿ 10 ಪ್ರತಿಶತದಷ್ಟು ಪಾಲನ್ನು ಹೊಂದಿತ್ತು ಎಂದು ವರದಿ ತಿಳಿಸಿದೆ. ಆದಾಗ್ಯೂ, ಉಭಯ ದೇಶಗಳ ನಡುವಿನ ರಾಜತಾಂತ್ರಿಕ ಉದ್ವಿಗ್ನತೆಯಿಂದಾಗಿ ಭಾರತದ ಪಾಲು ಶೇಕಡಾ 6ರಷ್ಟಾಗಿದ್ದು ಆರನೇ ಸ್ಥಾನಕ್ಕೆ ಕುಸಿದಿದೆ.

ಚೀನಾದ ಪ್ರವಾಸಿಗರ ಏರಿಕೆ

ಭಾರತವು ಪ್ರವಾಸಿಗರ ಸಂಖ್ಯೆಯಲ್ಲಿ ಪ್ರಮುಖ ಕುಸಿತವನ್ನು ಕಂಡರೆ, ಚೀನಾದ ಪ್ರವಾಸಿಗರು ಮಾಲ್ಡೀವ್ಸ್​ಗೆ ಭೇಟಿ ನೀಡುವ ಪ್ರಮಾಣ ಹಠಾತ್ ಏರಿಕೆಯನ್ನು ಕಂಡಿದೆ. ಚೀನಾ ಮತ್ತು ಮಾಲ್ಡೀವ್ಸ್ ನಡುವಿನ ಸಂಬಂಧಗಳು ಬಲಗೊಳ್ಳುತ್ತಿದ್ದಂತೆ 2024 ರಲ್ಲಿ ದೇಶಕ್ಕೆ 54,000 ಕ್ಕೂ ಹೆಚ್ಚು ಪ್ರವಾಸಿಗರು ಭೇಟಿ ನೀಡಿದ್ದಾರೆ.

ಚೀನಾ ಈಗ ಮಾಲ್ಡೀವ್ಸ್​ಗೆ ಅತಿ ಹೆಚ್ಚು ಪ್ರವಾಸಿಗರು ಭೇಟಿ ನೀಡುವ ದೇಶವಾಗಿದೆ, ಇದು ಮಾರುಕಟ್ಟೆಯ ಗಮನಾರ್ಹ ಭಾಗವನ್ನು ಹೊಂದಿದೆ. ದ್ವೀಪ ರಾಷ್ಟ್ರವು ಈ ವರ್ಷದ ಫೆಬ್ರವರಿಯಲ್ಲಿ ಒಟ್ಟು 217,394 ಪ್ರವಾಸಿಗರನ್ನು ಕಂಡಿದೆ. ಅದರಲ್ಲಿ 34,600 ಕ್ಕೂ ಹೆಚ್ಚು ಚೀನಾದಿಂದ ಬಂದವರು. ಗಮನಾರ್ಹವಾಗಿ, ಭಾರತವು 2021, 2022 ಮತ್ತು 2023 ರಲ್ಲಿ ಮಾಲ್ಡೀವ್ಸ್​​​ಗೆ ಅಗ್ರ ಪ್ರವಾಸಿ ಮಾರುಕಟ್ಟೆಯಾಗಿದ್ದು. ವರ್ಷಕ್ಕೆ 200,000 ಕ್ಕೂ ಹೆಚ್ಚು ಪ್ರವಾಸಿಗರು ಅಲ್ಲಿಗೆ ಹೋಗುತ್ತಿದ್ದರು.

ರಾಜತಾಂತ್ರಿಕ ವಿವಾದ

ಚೀನಾ ಪರ ನಾಯಕ ಎಂದು ಕರೆಯಲ್ಪಡುವ ಮಾಲ್ಡೀವ್ಸ್​ ಅಧ್ಯಕ್ಷ ಮೊಹಮ್ಮದ್ ಮುಯಿಝು ಅವರ ನೇಮಕದ ನಂತರ ಮಾಲ್ಡೀವ್ಸ್​​ಗೆ ಭಾರತೀಯ ಪ್ರವಾಸಿ ಮಾರುಕಟ್ಟೆ ಗಮನಾರ್ಹ ಕುಸಿತವನ್ನು ಕಾಣಲು ಪ್ರಾರಂಭಿಸಿತು. ಮಾಲ್ಡೀವ್ಸ್​ನಿಂದ ಭಾರತದ ಮಿಲಿಟರಿ ಸಿಬ್ಬಂದಿಯನ್ನು ಹೊರಹಾಕುವ ಆದೇಶವನ್ನು ಮುಯಿಝು ಹೊರಡಿಸಿದ್ದು, ಇದು ಉಭಯ ದೇಶಗಳ ನಡುವಿನ ಉದ್ವಿಗ್ನತೆಗೆ ಕಾರಣವಾಯಿತು.

ಇದನ್ನೂ ಓದಿ : Narendra Modi: ಕಾಜಿರಂಗ ಅಭಯಾರಣ್ಯದಲ್ಲಿ ರಾತ್ರಿ ಕಳೆಯುವ ಮೂಲಕ ದಾಖಲೆ ನಿರ್ಮಿಸಲಿದ್ದಾರೆ ಮೋದಿ; ಅದೇನು?

ಇದೇ ವೇಳೆ ಮಾಲ್ಡೀವ್ಸ್ ಸಚಿವರೊಬ್ಬರು ಸಾಮಾಜಿಕ ಮಾಧ್ಯಮದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದಾಗ ಉಭಯ ದೇಶಗಳ ನಡುವಿನ ಸಂಬಂಧವು ಹದಗೆಟ್ಟಿತು. ಇದು ಜಾಗತಿಕ ಆಕ್ರೋಶದ ಅಲೆಯನ್ನು ಹುಟ್ಟುಹಾಕಿತು.

ಪ್ರಧಾನಿ ಮೋದಿ ವಿರುದ್ಧ ಅವಹೇಳನಕಾರಿ ಕಾಮೆಂಟ್​​ಗಳನ್ನು ಪೋಸ್ಟ್ ಮಾಡಿದ ಒಂದು ವಾರದ ನಂತರ ಅಧ್ಯಕ್ಷ ಮುಯಿಝು ಚೀನಾಕ್ಕೆ ಭೇಟಿ ನೀಡಿದ್ದರು. ದ್ವೀಪ ರಾಷ್ಟ್ರದ ಆರ್ಥಿಕತೆ ಹೆಚ್ಚಿಸಲು ಮಾಲ್ಡೀವ್ಸ್​​ನಲ್ಲಿ ತನ್ನ ಪ್ರವಾಸೋದ್ಯಮ ಮಾರುಕಟ್ಟೆಯನ್ನು ಪುನರುಜ್ಜೀವನಗೊಳಿಸುವಂತೆ ಅವರು ಚೀನಾಕ್ಕೆ ಕೋರಿದ್ದರು.

Exit mobile version