Site icon Vistara News

Summer Travel Tips : ಬೇಸಿಗೆ ಪ್ರವಾಸಕ್ಕೆ ಸಿದ್ಧರಾಗುತ್ತಿದ್ದೀರಾ? ಲಗೇಜ್‌ನಲ್ಲಿ ಇವುಗಳೂ ಇರಲಿ

ಈಗಾಗಲೇ ಶಾಲಾ ಮಕ್ಕಳಿಗೆ (school childrens) ಬೇಸಿಗೆ ರಜೆ (summer holiday) ಪ್ರಾರಂಭವಾಗಿದೆ. ಹೀಗಾಗಿ ದೇಶದ ವಿವಿಧ ಭಾಗಗಳಿಗೆ ಪ್ರವಾಸ ಹೊರಡಬೇಕು ಎನ್ನುವ ಯೋಚನೆ ಎಲ್ಲರ ಮನಸಲ್ಲೂ ಸಿದ್ಧಗೊಳ್ಳುತ್ತಿದೆ. ಈ ನಡುವೆ ಉರಿ ಬಿಸಿಲಿನ ನಡುವೆ ಹೇಗಪ್ಪಾ ದೇಶ ಸುತ್ತುವುದು ಎನ್ನುವ ಚಿಂತೆಯೂ ಕಾಡುತ್ತಿದೆ.

ಬಿಸಿಲಿನ ಪ್ರಖರತೆ ಹೆಚ್ಚಾಗಿರುವುದರಿಂದ ರಸ್ತೆ ಸಂಚಾರವಂತೂ ತುಂಬಾ ಕಷ್ಟ ಎನ್ನುವ ಪರಿಸ್ಥಿತಿ ಇರುವಾಗ ಹೆಚ್ಚಿನ ಜನರು ಬೆಟ್ಟ ಗುಡ್ಡ, ನದಿ, ಜಲಪಾತಗಳಿರುವ ತಣ್ಣನೆಯ ಪ್ರದೇಶಗಳಲ್ಲಿ ಸುತ್ತಾಡಲು ಬಯಸುತ್ತಾರೆ. ಹೀಗಾಗಿ ಬೇಸಿಗೆಯಲ್ಲಿ ಪ್ರವಾಸಿ ಕೇಂದ್ರಗಳಲ್ಲಿ ಜನದಟ್ಟಣೆ ಕಡಿಮೆಯಾಗಿರುತ್ತದೆ. ಆದ್ದರಿಂದ ಕೆಲವರು ದೂರದೂರದ ಪ್ರವಾಸಕ್ಕೆ ಹೊರಡಲು ಸಿದ್ಧತೆ ಮಾಡಿಕೊಳ್ಳುತ್ತಾರೆ. ಬೇಸಿಗೆಯಲ್ಲಿ ದೇಶದ ವಿವಿಧ ಭಾಗಗಳಿಗೆ ಪ್ರವಾಸ ಹೊರಡುವ ಯೋಜನೆ ಮಾಡುತ್ತಿದ್ದರೆ ಕೆಲವೊಂದು ಅಗತ್ಯ ವಸ್ತುಗಳನ್ನು ಕೊಂಡೊಯ್ಯುವುದನ್ನು ಮರೆಯದಿರಿ.

1. ನೀರಿನ ಬಾಟಲಿಗಳು

ದೇಶದ ವಿವಿಧ ಭಾಗಗಳಲ್ಲಿ ನೀರಿನ ರುಚಿ ಬೇರೆಬೇರೆಯಾಗಿರುತ್ತದೆ. ಕೆಲವು ಪ್ರದೇಶಗಳ ನೀರು ಸುರಕ್ಷಿತ ಎಂದು ನಂಬಲು ಸಾಧ್ಯವಿಲ್ಲ. ಪ್ರವಾಸದ ವೇಳೆ ಕುಡಿಯುವ ನೀರಿನ ವಿಚಾರದಲ್ಲಿ ಜಾಗರೂಕರಾಗಿರುವುದು ಹೆಚ್ಚು ಅಗತ್ಯ. ಇಲ್ಲವಾದರೆ ಪ್ರವಾಸದ ಮಧ್ಯೆಯೇ ಆರೋಗ್ಯ ಹದಗೆಡಬಹುದು. ಹೀಗಾಗಿ ನೀರಿನ ಬಾಟಲಿ ಜೊತೆಯಲ್ಲಿದ್ದರೆ ಸಿಕ್ಕಿದಾಗ ಸ್ವಚ್ಛವಾದ ಕುಡಿಯುವ ನೀರನ್ನು ಬಾಟಲಿಯಲ್ಲಿ ತುಂಬಿಸಿಕೊಳ್ಳಬಹುದು.

2. ಗ್ಲೂಕೋಸ್ ಪಾನೀಯ

Girls Sunglass

ದೂರ ಪ್ರವಾಸ ಹೊರಡುವಾಗ ನೀರಿನ ಜೊತೆಗೆ ಸಾಕಷ್ಟು ಪ್ರಮಾಣದ ಗ್ಲೂಕೋಸ್ ಪಾನೀಯ ಜೊತೆಯಲ್ಲಿ ಇರಲಿ. ಇದು ದೇಹವನ್ನು ನಿರ್ಜಲೀಕರಣಗೊಳಿಸುವುದನ್ನು ತಡೆಯುತ್ತದೆ. ಆಗಾಗ ಗ್ಲೂಕೋಸ್ ಪಾನೀಯ ಸೇವಿಸುವುದರಿಂದ ಪ್ರವಾಸದ ಮಧ್ಯೆ ಹೆಚ್ಚು ಸುಸ್ತು ಕಾಡುವುದಿಲ್ಲ ಪ್ರವಾಸವನ್ನು ಪೂರ್ತಿಯಾಗಿ ಸಂತೋಷದಿಂದ ಪೂರ್ಣಗೊಳಿಸಬಹುದು.

ಇದನ್ನು ಓದಿ: Travel Time: ಸಮುದ್ರದಲ್ಲೇ ಜೀವನ; ಹೊಸ ಬಗೆಯ ಅಲೆಮಾರಿ ಪ್ರವಾಸಿ ದಂಪತಿ ಇವರು!

3. ಎನರ್ಜಿ ಬಾರ್

Girls Sunglass

ಬೇಸಿಗೆಯಲ್ಲಿ ದೇಹದಲ್ಲಿ ಸಕ್ಕರೆ ಮಟ್ಟವನ್ನು ಕಾಪಾಡಿಕೊಳ್ಳುವುದು ಬಹುಮುಖ್ಯ. ಇಲ್ಲವಾದರೆ ಆರೋಗ್ಯ ಸಮಸ್ಯೆ ಕಾಡಬಹುದು. ಬೇಸಿಗೆಯಲ್ಲಿ ಹೆಚ್ಚು ಊಟ ಮಾಡಲು ಆಗುವುದಿಲ್ಲ. ಹೀಗಾಗಿ ಸದಾ ಎನರ್ಜಿ ಬಾರ್‌ಗಳು ಜೊತೆ ಇದ್ದರೆ ದೇಹಕ್ಕೆ ಬೇಕಾದ ಪೋಷಕಾಂಶಗಳನ್ನು ಅದು ಒದಗಿಸುತ್ತದೆ. ಆದರೆ ಎನರ್ಜಿ ಬಾರ್ ಖರೀದಿ ಮಾಡುವಾಗ ಉತ್ತಮ ಗುಣಮಟ್ಟಕ್ಕೆ ಆದ್ಯತೆ ನೀಡಿ.

4. ಒದ್ದೆ ಟಿಶ್ಯು

ಬೆವರು ಒರೆಸಲು, ಕೈಗಳನ್ನು ಸ್ವಚ್ಛಗೊಳಿಸಲು ಒದ್ದೆ ಟಿಶ್ಯು ಜೊತೆಗಿರುಸುವುದು ಉತ್ತಮ. ಇದರಿಂದ ಮುಖ ಹೆಚ್ಚು ಸ್ವಚ್ಛವಾಗಿರುತ್ತದೆ. ಬೆವರು, ಎಣ್ಣೆಯಿಂದ ಉಂಟಾಗುವ ಅಲರ್ಜಿ ತೊಂದರೆಗಳು ಕಾಡುವುದಿಲ್ಲ. ಇದು ನಿಮಗೆ ಹೆಚ್ಚು ಉಲ್ಲಾಸದ ಅನುಭವ ಕೊಡುತ್ತದೆ.

5. ಸನ್‌ಗ್ಲಾಸ್‌

Girls Sunglass

ಬೇಸಿಗೆಯಲ್ಲಿ ಪ್ರವಾಸ ಹೊರಡುವಾಗ ಸನ್ ಗ್ಲಾಸ್ ಜೊತೆಗೆ ಇರಲಿ. ಇದು ಹೆಚ್ಚು ಬಿಸಿಲಿನಲ್ಲಿ ಕಣ್ಣಿಗೆ ತಂಪನ್ನು ಕೊಡುತ್ತದೆ. ಬಿಳಿ ಅಮೃತಶಿಲೆಯನ್ನು ಹಾಕಿರುವ, ಬೆಳಕನ್ನು ಪ್ರತಿಫಲಿಸುವ ಪ್ರವಾಸಿ ಕೇಂದ್ರಗಳಲ್ಲಿ ಇದು ಹೆಚ್ಚು ಉಪಯುಕ್ತವಾಗುತ್ತದೆ.

6. ಹತ್ತಿ ಬಟ್ಟೆ

ಆದಷ್ಟು ಬೇಸಿಗೆಯಲ್ಲಿ ಪ್ರವಾಸ ಹೋಗುವಾಗ ಹತ್ತಿ ಅಥವಾ ಲಿನಿನ್ ಬಟ್ಟೆಯನ್ನೇ ಧರಿಸಿ. ಇತರೆ ಬಟ್ಟೆಗಳು ಚರ್ಮದ ತೊಂದರೆ ಉಂಟುಮಾಡಬಹುದು. ಕಾಟನ್ ಶರ್ಟ್‌, ಪ್ಯಾಂಟ್‌ಗಳು ಬೇಸಿಗೆ ಪ್ರವಾಸಕ್ಕೆ ಅತ್ಯುತ್ತಮ ಆಯ್ಕೆ.

ಇದನ್ನು ಓದಿ: Summer Travel Tips: ಬೇಸಿಗೆ ರಜೆಯಲ್ಲಿ ವಿದೇಶ ಪ್ರವಾಸ ಮಾಡಬೇಕೇ? ಇಲ್ಲಿವೆ ನೋಡಿ ಪರ್ಫೆಕ್ಟ್‌ ತಾಣಗಳು!

7. ಸನ್‌ಸ್ಕ್ರೀನ್ ಲೋಷನ್

ಪ್ರವಾಸ ಹೋಗುವಾಗ ಚರ್ಮದ ಆರೋಗ್ಯದ ಕಡೆ ಹೆಚ್ಚು ಗಮನ ಕೊಡಲು ಸಾಧ್ಯವಿಲ್ಲ. ಹೀಗಾಗಿ ಸೂರ್ಯನ ಬಿಸಿಲು ಚರ್ಮವನ್ನು ಕಳೆಗುಂದಿಸಬಹುದು. ಇದಕ್ಕಾಗಿ ಬಿಸಿಲಿಗೆ ಮೈಯೊಡ್ಡುವಾಗ ಸನ್‌ಸ್ಕ್ರೀನ್ ಲೋಷನ್ ಗಳನ್ನು ಬಳಸಿ. ಇದರ ಡಬ್ಬ ನಿಮ್ಮ ಕೈ ಬ್ಯಾಗ್ ನಲ್ಲೇ ಇರಲಿ.

8. ಸ್ಯಾನಿಟೈಸರ್

ಪದೇಪದೇ ಕೈಗಳನ್ನು ಸಾಬೂನ್ ಬಳಸುವುದು ಆರೋಗ್ಯಕರವಲ್ಲ. ಅಲ್ಲದೇ ಎಲ್ಲ ಕಡೆ ಕೈ ತೊಳೆಯಲು ನೀರು ಲಭ್ಯವಿರುತ್ತದೆ ಎಂದು ಹೇಳುವುದು ಸಾಧ್ಯವಿಲ್ಲ. ಹೀಗಾಗಿ ಪ್ರವಾಸದಲ್ಲಿ ಕೈಗಳನ್ನು ಸ್ವಚ್ಛವಾಗಿಡಲು ಹ್ಯಾಂಡ್ ಸ್ಯಾನಿಟೈಜರ್ ವೊಂದು ನಿಮ್ಮ ಬ್ಯಾಗ್ ನಲ್ಲಿ ಇರಲಿ.

9. ಸೊಳ್ಳೆ ನಿವಾರಕ ಕ್ರೀಮ್

ಪ್ರವಾಸದ ವೇಳೆ ಸೊಳ್ಳೆಗಳು ಕಿರಿಕಿರಿ ಉಂಟು ಮಾಡಬಹುದು. ಮಾರಕ ಸೋಂಕಿಗೂ ಕಾರಣವಾಗಬಹುದು. ಹೀಗಾಗಿ ಸೊಳ್ಳೆ ನಿವಾರಕ ಕ್ರೀಮ್‌ ಗಳು ಸದಾ ಜೊತೆ ಇರಲಿ.

ಬೇಸಿಗೆಯಲ್ಲಿ ಪ್ರವಾಸ ಮಾಡುವಾಗ ಹೆಚ್ಚು ಸಂತೋಷವಾಗಿರಲು ಅರೋಗ್ಯ ಕಾಪಾಡಿಕೊಳ್ಳುವುದು ಬಹುಮುಖ್ಯ. ಹೀಗಾಗಿ ಈ ಎಲ್ಲ ಪ್ರವಾಸ ಹೊರಡುವಾಗ ಈ ಎಲ್ಲ ಅಂಶಗಳು ನೆನಪಿನಲ್ಲಿರಲಿ.

Exit mobile version