ದಿಮಾಪುರ್: ಮಕ್ಕಳ ಮನಸ್ಸೇ ಹಾಗೆ, ಹೂವಿನಂತೆ. ಎಂತಹ ಕಲ್ಲು ಹೃದಯವಾದರೂ ಸರಿ ಕ್ಷಣಾರ್ಧದಲ್ಲಿ ಕರಗಿಸಬಲ್ಲ ಶಕ್ತಿ ಮಕ್ಕಳ ಮುಗ್ಧತೆಗೆ ಇರುತ್ತದೆ. ಇಲ್ಲಿರುವ ಒಂದು ವಿಡಿಯೊ ಖಂಡಿತವಾಗಿಯೂ ನಿಮಗೆ ಇಷ್ಟ ಆಗುತ್ತದೆ. ವಿಮಾನ ನಿಲ್ದಾಣದಲ್ಲಿ ʻಲ್ಯಾಬ್ರಡಾರ್ ರಿಟ್ರೀವರ್ʼ ನಾಯಿಯ ಜೊತೆಗೆ ಅಂಬೆಗಾಲಿಡುವ ಮಗುವೊಂದರ ವಿಡಿಯೊ ತುಂಬಾ ಮುದ್ದಾಗಿದೆ. ಈಗ ಅದು ಇಂಟರ್‌ನೆಟ್ ನಲ್ಲಿ ಟ್ರೆಂಡಿಂಗ್ ಆಗ್ತಾ ಇದೆ.
ಹೇಯಾನ್ ಜೈನ್ ಎಂಬ ಹುಡುಗನ heyaan_jain Instagram ಪುಟದಲ್ಲಿ ವಿಡಿಯೊ ಪೋಸ್ಟ್ ಮಾಡಲಾಗಿದೆ. ಜುಲೈ 9ರಂದು ವಿಡಿಯೊವನ್ನು ಪೋಸ್ಟ್ ಮಾಡಲಾಗಿದ್ದು, ಇದುವರೆಗೆ 2.3 ಮಿಲಿಯನ್ ವೀಕ್ಷಣೆ ಪಡೆದ ವೈರಲ್ ವಿಡಿಯೊ ಇದು. ಹ್ಯಾಶ್‌ಟ್ಯಾಗ್‌ಗಳ ಪ್ರಕಾರ ಇದು ನಾಗಾಲ್ಯಾಂಡ್‌ನ ದಿಮಾಪುರ್ ವಿಮಾನ ನಿಲ್ದಾಣದ್ದು ಎನ್ನಲಾಗುತ್ತಿದೆ. ಕ್ಲಿಪ್‌ನಲ್ಲಿ, ಹುಡುಗ ಸಿಐಎಸ್‌ಎಫ್‌ಗೆ ಸೇರಿದ ಲ್ಯಾಬ್ರಡಾರ್ ರಿಟ್ರೀವರ್ ನಾಯಿಯನ್ನು ಮುದ್ದಿಸುತ್ತಿರುವುದು ಕಂಡುಬಂದಿದೆ ಸಿಐಎಸ್ಎಫ್ ಸಿಬ್ಬಂದಿ ನಾಯಿಯ ಕೊರಳಪಟ್ಟಿಯನ್ನು ಹಿಡಿದು ಹುಡುಗನಿಗೆ ಪರಿಚಯಿಸುತ್ತಾರೆ. ನಾಯಿಯು ಬಾಲಕನ ಮುಖದ ಮೇಲೆ ಬಾಲ ಅಲ್ಲಾಡಿಸುತ್ತಿರುವುದು ತುಂಬಾ ಮುದ್ದಾಗಿದೆ. “ನಾನು ವಿಮಾನ ನಿಲ್ದಾಣದಲ್ಲಿ ʻಲ್ಯಾಬ್ರಡಾರ್ ರಿಟ್ರೀವರ್ʼ ಎಂಬ ಹೊಸ ಸ್ನೇಹಿತನನ್ನು ಭೇಟಿಯಾದೆ,” ಎಂದು ವಿಡಿಯೊದ ಶೀರ್ಷಿಕೆ ಇದೆ.
ಈ ವಿಡಿಯೊಗೆ 1.54 ಲಕ್ಷಕ್ಕೂ ಹೆಚ್ಚು ಲೈಕ್‌ಗಳು ಬಂದಿವೆ. ಸಾವಿರಾರು ಜನರು ಕಮೆಂಟ್ ಮಾಡಿದ್ದಾರೆ. ಸುರಕ್ಷತಾ ಸಿಬ್ಬಂದಿಗೆ ಸುರಕ್ಷತೆಯ ಬಗ್ಗೆ ತುಂಬಾ ಅರಿವಿತ್ತು, ನಾಯಿಯೊಂದಿಗೆ ಮಗುವಿನೊಂದಿಗೆ ಸಂವಹನ ನಡೆಸುವಾಗ ಅವರು ಕಾಲರ್ ಅನ್ನು ಹಿಡಿದಿದ್ದಾರೆ ಎಂದು Instagram ಬಳಕೆದಾರರೊಬ್ಬರು ಕಾಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ| ನಾಗಿನ್ ಹಾರ್ನ್ ಸದ್ದಿಗೆ ರಸ್ತೆಯಲ್ಲೇ ಕುಣಿದ ಯುವಕರು, ವಿಡಿಯೋ ವೈರಲ್