Viral Video | ಅಗ್ನಿಸಾಕ್ಷಿಯಾಗಿ ಮದುವೆಯಾಗುವ ಜೋಡಿಗಳು ಸದಾ ಒಟ್ಟಿಗಿದ್ದು ಸುಖವಾಗಿ ಸಂಸಾರ ನಡೆಸುವ ಪ್ರಮಾಣ, ಇನ್ನೊಬ್ಬರಿಗೆ ನೋವಾಗದಂತೆ ನೋಡಿಕೊಳ್ಳುವ ಪ್ರಮಾಣ, ಪರಸ್ಪರ ಪ್ರೀತಿಸಿ ಅನ್ಯೋನ್ಯವಾಗಿ ಬಾಳುವ ಪ್ರಮಾಣ ಮಾಡುವುದೆಲ್ಲವೂ ಹಳೇ ರೀತಿ ರಿವಾಜುಗಳು. ಇಲ್ಲೊಂದು ಜೋಡಿ ಹೊಸ ರೀತಿಯ ಒಪ್ಪಂದಕ್ಕೆ ಸಹಿ ಮಾಡಿದ್ದಾರೆ.
ಅಸ್ಸಾಂನಲ್ಲಿ ಶಾಂತಿ ಹಾಗೂ ಮಿಂಟು ಎಂಬುವವರ ಮದುವೆಯ ಸಂದರ್ಭದಲ್ಲಿ ಈ ಹೊಸಬಗೆಯ ಒಪ್ಪಂದ ಕಂಡಿದೆ. ಅವರ ಸ್ನೇಹಿತರು ಒಂದು ವಿಶೇಷವಾದ ಕಾಂಟ್ರಾಕ್ಟ್ ಸಿದ್ಧಪಡಿಸಿ ಇಬ್ಬರೂ ಸಹಿ ಮಾಡುವಂತೆ ಹೇಳಿದ್ದಾರೆ. ಈ ಒಪ್ಪಂದದಲ್ಲಿರುವ ನಿಯಮ ಮತ್ತು ಷರತ್ತುಗಳನ್ನು ಕಂಡು ನೆಟ್ಟಿಗರು ಬೆಚ್ಚಿಬಿದ್ದಿದ್ದಾರೆ. ಇವರಿಬ್ಬರ ಈ ಹೊಸ ಒಪ್ಪಂದದ ವಿಡಿಯೊ ಈಗ ಎಲ್ಲೆಡೆ ವೈರಲ್ ಆಗಿದೆ.
ಏನಿದು ಹೊಸ ಒಪ್ಪಂದ?
ಈ ಜೋಡಿಗಳು ʼಒಂದು ತಿಂಗಳಲ್ಲಿ ಕೇವಲ ಒಂದು ಪಿಜ್ಜಾ ತಿನ್ನಬೇಕುʼ. ಅಲ್ಲದೆ, ಪ್ರತಿದಿನ ಜಿಮ್‌ಗೆ ಹೋಗಬೇಕು ಹಾಗೂ ಮನೆ ಊಟ ಮಾಡಬೇಕು ಎಂಬುದೆಲ್ಲ ಈ ಒಪ್ಪಂದದ ನಿಯಮಗಳು.
ಷರತ್ತುಗಳು:
- ತಿಂಗಳಿಗೆ ಒಂದೇ ಪಿಜ್ಜಾ
- ಪ್ರತಿದಿನ ಮನೆಯ ಊಟವನ್ನು ಸೇವಿಸಬೇಕು
- ಪ್ರತಿನಿತ್ಯ ಸೀರೆ ಉಡುವುದು ಕಡ್ಡಾಯ
- ರಾತ್ರಿಯ ಪಾರ್ಟಿಗೆ ಹೋಗಬಹುದು ಆದರೆ ಪತಿಯ ಜತೆ ಮಾತ್ರ
- ಪ್ರತಿದಿನ ಜಿಮ್ ಹೋಗಬೇಕು
- ಭಾನುವಾರ ಬೆಳಗ್ಗಿನ ತಿಂಡಿ ಪತ್ನಿ ಮಾಡಬೇಕು
- ಪ್ರತಿ ಪಾರ್ಟಿಯಲ್ಲಿ ಒಳ್ಳೆಯ ಫೋಟೊ ತೆಗೆಸಿಕೊಳ್ಳಬೇಕು
- 15 ದಿನಕ್ಕೊಮ್ಮೆ ಮಾತ್ರ ಶಾಪಿಂಗ್ ಹೋಗುವುದು
ಈ ಷರತ್ತುಗಳನ್ನು ನೋಡಿ ನೆಟ್ಟಿಗರು ಶಾಕ್ ಆಗಿದ್ದಾರೆ. ಅನೇಕರು ಕನಿಕರ ತೋರಿಸಿ ಕಾಮೆಂಟ್ ಮಾಡಿದ್ದಾರೆ. ʼಕೊನೇಪಕ್ಷ ವಾರಕ್ಕೆ ಒಂದು ಪಿಜ್ಜಾ ತಿನ್ನುವ ಒಪ್ಪಂದ ಮಾಡಬೇಕಿತ್ತು ಎಂದು ಒಬ್ಬರು ಕಾಮೆಂಟ್ ಮಾಡಿದರೆ, ʼಪ್ರತಿದಿನವೂ ಸೀರೆ ಉಡಬೇಕುʼ ಎಂಬ ಷರತ್ತನ್ನು ಅನುಸರಿಸುವುದು ಸಾಧ್ಯವೇ ಇಲ್ಲ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.
ಈ ನವಜೋಡಿ ಎಲ್ಲ ಷರತ್ತುಗಳಿಗೆ ಒಪ್ಪಿ ಸಹಿ ಮಾಡಿದ ವಿಡಿಯೊ ಇಲ್ಲಿದೆ ನೋಡಿ:
ಇದನ್ನೂ ಓದಿ: ನಾಗಿನ್ ಹಾರ್ನ್ ಸದ್ದಿಗೆ ರಸ್ತೆಯಲ್ಲೇ ಕುಣಿದ ಯುವಕರು, ವಿಡಿಯೋ ವೈರಲ್