ಬೆಂಗಳೂರು: ತಮ್ಮ ʼನಿರ್ದಿಗಂತʼ (Nirdigantha) ರಂಗಸಂಸ್ಥೆಗೆ (Theatre Group) ಸರ್ಕಾರದಿಂದ ಭಾರಿ ಹಣ ಅನುದಾನ ಪಡೆಯುತ್ತಿರುವ ನಟ ಪ್ರಕಾಶ್ ರೈ (Actor Prakash rai) ಅವರ ವಿರುದ್ಧ ಜಾತ್ಯತೀತ ಜನತಾ ದಳ (JDS) ಟ್ವೀಟ್ (X) ಸಮರ ಶುರುಮಾಡಿದೆ. “ರಂಗಾಯಣಗಳಿಗೆ (Rangayana) ಕೊಡಲು ಸರಕಾರದ ಬಳಿ ಬಿಡಿಗಾಸೂ ಇಲ್ಲದಿದ್ದರೂ, ಕಾಂಗ್ರೆಸ್ (Congress) ಪರ ವಕೀಲಿಕೆ ನಡೆಸುತ್ತಿರುವ ಪ್ರಕಾಶ್ ರೈಗೆ ಮಾತ್ರ ಹಣದ ಹೊಳೆ ಹರಿಯುತ್ತಿದೆ” ಎಂದು ಟೀಕಿಸಿದೆ.
ಜೆಡಿಎಸ್ ಕರ್ನಾಟಕ ಎಕ್ಸ್ ಖಾತೆಯಲ್ಲಿ ಪ್ರಕಾಶ್ ರೈ ಕುರಿತು ಮಾಡಿದ ಪೋಸ್ಟ್‌ನ ಪೂರ್ಣ ರೂಪ ಹೀಗಿದೆ:
•ಕರ್ನಾಟಕದಲ್ಲಿ @INCKarnataka ಸರಕಾರ ಅಧಿಕಾರಕ್ಕೆ ಬಂದ ಮೇಲೆ ಪ್ರಕಾಶ್ ರೈ ಉರುಫ್ @prakashraaj ಎಂಬ ಕಲಾವಿದ ದಾರಿ ತಪ್ಪಿದ್ದಾರೆ. ಅದಕ್ಕೆ ಇಲ್ಲಿದೆ ಸಾಕ್ಷ್ಯ.
— Janata Dal Secular (@JanataDal_S) April 16, 2024
ಕಲಾಸೇವೆ ಬಿಟ್ಟು ಕಾಂಗ್ರೆಸ್ಸಿಗೆ ಪರಿಚಾರಿಕೆ ಮಾಡುತ್ತಿರುವ ಅವರಿಗೆ ತಕ್ಕ ಪ್ರತಿಫಲವೂ ಸಂದಾಯವಾಗುತ್ತಿದೆ. ಸರಕಾರದ ಅನಧಿಕೃತ ವಕ್ತಾರನಾದರೆ ಈ ಪರಿ ಲಾಭವಿದೆಯಾ?
Just… pic.twitter.com/xiKahlW0TY
“ರಾಜ್ಯದಲ್ಲಿ @INCKarnataka ಸರಕಾರ ಅಧಿಕಾರಕ್ಕೆ ಬಂದ ಮೇಲೆ ಪ್ರಕಾಶ್ ರೈ ಉರುಫ್ @prakashraaj ಎಂಬ ಕಲಾವಿದ ದಾರಿ ತಪ್ಪಿದ್ದಾರೆ. ಅದಕ್ಕೆ ಇಲ್ಲಿದೆ ಸಾಕ್ಷ್ಯ… ಕಲಾಸೇವೆ ಬಿಟ್ಟು ಕಾಂಗ್ರೆಸ್ಸಿಗೆ ಪರಿಚಾರಿಕೆ ಮಾಡುತ್ತಿರುವ ಅವರಿಗೆ ತಕ್ಕ ಪ್ರತಿಫಲವೂ ಸಂದಾಯವಾಗುತ್ತಿದೆ. ಸರಕಾರದ ಅನಧಿಕೃತ ವಕ್ತಾರನಾದರೆ ಈ ಪರಿ ಲಾಭವಿದೆಯಾ? Just Asking.. ಅಷ್ಟೇ ಪ್ರಕಾಶ್ ರಾಜ್ ಅವರೇ..”
“ಮೊರಾರ್ಜಿ ವಸತಿ ಶಾಲೆಗಳಷ್ಟೇ ಅಲ್ಲ… ಸರಕಾರಿ ವಸತಿ ನಿಲಯಗಳಿಗೆ ಹಣ ಕೊಡಲು ಕಾಂಗ್ರೆಸ್ ಸರಕಾರಕ್ಕೆ ಕೈ ಬರುತ್ತಿಲ್ಲ. ಅಲ್ಲಿನ ಮಕ್ಕಳಿಗೆ ಒಳ್ಳೇ ಆಹಾರವಿಲ್ಲ… ನೀರೂ ಇಲ್ಲ. ಸರಕಾರಿ ರಂಗಾಯಣಗಳಿಗೆ ಬಿಡಿಗಾಸೂ ಇಲ್ಲ. ಈಚೆಗಷ್ಟೇ ನೀವು ಸ್ಥಾಪಿಸಿದ ‘ನಿರ್ದಿಗಂತʼಕ್ಕೆ ಹಣದ ಹೊಳೆ ಹರಿಸುತ್ತಿದೆ ಸರಕಾರ… ನಿಮ್ಮ ಜೋಳಿಗೆ ಭರ್ತಿ ಆಗುತ್ತಿದೆ… Just Asking.. ಅಷ್ಟೇ ಪ್ರಕಾಶ್ ರಾಜ್ ಅವರೇ..”
“ಗ್ಯಾರಂಟಿಗಳ ವಿಶೇಷ ತೌಲನಿಕ ಅಧ್ಯಯನಕ್ಕಾಗಿ ಪಾಲಸಿ ಫ್ರಂಟ್ ಎಂಬ ಮಟ್ಟು-ಪಟ್ಟಿನ ಕಳ್ಳಕಂಪನಿಗೆ ಕೋಟಿ ಕೋಟಿ ಸುರಿದಿರುವ ಸರಕಾರ.. ನಿಮ್ಮ ʼನಿರ್ದಿಗಂತʼಕ್ಕೂ ಹಣ ಸುರಿಯುತ್ತಿದೆ. ಕನ್ನಡ ಸಂಸ್ಕೃತಿ ಇಲಾಖೆಯಲ್ಲಿ ಕಸ ಹೊಡೆಯೋರು ದಿಕ್ಕಿಲ್ಲ. ಕನ್ನಡ ಭವನದಲ್ಲಿ ಧೂಳು ಕೊಡವೋರು ಗತಿ ಇಲ್ಲ. ಇಲ್ಲಿ ನಿಮ್ಮ ಜೋಳಿಗೆಯಲ್ಲಿ ಭರ್ತಿ ಝಣ ಝಣ ಕಾಂಚಾಣ!! ಹೆಂಗೆ? Just Asking.. ಅಷ್ಟೇ ಪ್ರಕಾಶ್ ರಾಜ್ ಅವರೇ..”
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ರಂಗ ಚಟುವಟಿಕೆಗಳಿಗಾಗಿ ಈ ವರ್ಷ 4.20 ಕೋಟಿ ರೂಪಾಯಿಗಳ ಅನುದಾನ ನೀಡಲಾಗಿದ್ದು, ಅದರಲ್ಲಿ ಪ್ರಕಾಶ್ ರೈ ಅವರ ʼನಿರ್ದಿಗಂತʼ ರಂಗಸಂಸ್ಥೆಗೆ ಸಿಂಹಪಾಲು ನೀಡಲು ಇಲಾಖೆಯ ಜ್ಞಾಪನಪತ್ರದಲ್ಲಿ ಆದೇಶಿಸಲಾಗಿದೆ ಎಂದು ಇತ್ತೀಚೆಗೆ ʼದಿ ಫೈಲ್ʼ ವರದಿ ಮಾಡಿತ್ತು. ವರದಿಯ ಲಿಂಕ್ ಇಲ್ಲಿದೆ: ನಿರ್ದಿಗಂತ
ಇದನ್ನೂ ಓದಿ: Sanatan Dharma: ಪ್ರಕಾಶ್ ರೈ ಮತ್ತೊಂದು ವಿವಾದಾತ್ಮಕ ಹೇಳಿಕೆ, ಉದಯನಿಧಿಗೆ ಸಮರ್ಥನೆ, ಟ್ರೋಲ್