Site icon Vistara News

Video Viral : ಚೆಂದ ಚೆಂದದ ನರ್ಸ್‌ಗಳು ಅಜ್ಜ ಅಂದ್ರೆ ತ್ರಾಸ್‌ ಆಕೇತಿ ಅಂದ್ರು ರಾಜು ಕಾಗೆ!

Raju kage talk about Beautiful nurses

ಬೆಳಗಾವಿ: ಕಾಗವಾಡದ ಕಾಂಗ್ರೆಸ್‌ ಶಾಸಕ ರಾಜು ಕಾಗೆ (MLA Raju Kage) ಅವರು ಈಗ ವಿವಾದಿತ ಹೇಳಿಕೆಯೊಂದನ್ನು ನೀಡಿ ಕಾಂಗ್ರೆಸ್‌ ಪಕ್ಷವನ್ನು ಮುಜುಗರಕ್ಕೆ ಸಿಲುಕಿಸಿದ್ದಾರೆ. ಅಥಣಿ ತಾಲೂಕಿನ ಪಿ.ಕೆ. ನಾಗನೂರ ಗ್ರಾಮದಲ್ಲಿ ಭಾನುವಾರ ರಾತ್ರಿ ಆಯೋಜಿಸಲಾಗಿದ್ದ ದಸರಾ ಕಾರ್ಯಕ್ರಮದಲ್ಲಿ (Dasara Programme) ನರ್ಸ್‌ಗಳ ಬಗ್ಗೆ ಆಡಿರುವ ಮಾತುಗಳ ವಿಡಿಯೊ ಈಗ ವೈರಲ್‌ (Video Viral) ಆಗಿದೆ. ಶಾಸಕರ ಮಾತಿಗೆ ವೇದಿಕೆ ಎದುರಿನಿಂದ ಅಭಿಮಾನಿಗಳು ಶಿಳ್ಳೆ, ಚಪ್ಪಾಳೆಗಳನ್ನು ಹೊಡೆದರಾದರೂ ಈ ಮಾತಿನ ಬಗ್ಗೆ ಸಾರ್ವಜನಿಕವಾಗಿ ಸಾಕಷ್ಟು ಟೀಕೆಗಳು ಬರುತ್ತಿವೆ.

ಚೆಂದ ಚೆಂದದ ಹುಡುಗಿಯರು (ನರ್ಸ್) ನನ್ನನ್ನು ಅಜ್ಜ ಎಂದು ಕರೆದರೆ ಮನಸ್ಸಿಗೆ ನೋವಾಗುತ್ತದೆ ಎಂದು ರಾಜು ಕಾಗೆ ಅವರು ತುಂಬಿದ ಸಭೆಯಲ್ಲಿ ಹೇಳಿಕೆ ನೀಡಿದ್ದರು. ಇದನ್ನು ಕೇಈಸಿಕೊಂಡ ವೇದಿಕೆ ಮೇಲಿದ್ದ ಕಾಂಗ್ರೆಸ್‌ ಗಣ್ಯರು ಸಹ ನಕ್ಕು ಸುಮ್ಮನಾಗಿದ್ದರು. ಆದರೆ, ಸಮಾಜವನ್ನು ಪ್ರತಿನಿಧಿಸುವ ಒಬ್ಬ ಚುನಾಯಿತ ಪ್ರತಿನಿಧಿ ಮಹಿಳೆಯರ ಬಗ್ಗೆ ಇಷ್ಟು ಹಗುರವಾಗಿ ಮಾತನಾಡುವುದು ಸರಿಯೇ ಎಂದು ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ.

ರಾಜು ಕಾಗೆ ಹೇಳಿದ್ದೇನು?

ಕೆಲವು ವರ್ಷಗಳ ಹಿಂದೆ ನನಗೆ ಲಿವರ್‌ ಸಮಸ್ಯೆ ಎದುರಾಗಿತ್ತು. ಹೀಗಾಗಿ ನಾನು ಲಿವರ್ ಕಸಿಗಾಗಿ ಒಂದು ತಿಂಗಳು ಆಸ್ಪತ್ರೆಗೆ ದಾಖಲಾಗಿದ್ದೆ. ನನಗೆ ಆಪರೇಷನ್ ಏನೋ ಆಯಿತು. ನನ್ನನ್ನು ಪ್ರತಿ ದಿನ ವಿಚಾರಿಸಲು ಬರುತ್ತಿದ್ದ ಡಾಕ್ಟರ್, “ಆರಾಮೇನ್ರೀ..” ಅಂತ ವಿಚಾರಿಸುತ್ತಿದ್ದರು. ಆಗ ನಾನು ಅವರ ಬಳಿ ನನ್ನ ನೋವನ್ನು ಹೇಳಿಕೊಂಡೆ. ನಾನು ಆರಾಮಾಗೇ ಇದ್ದೇನೆ. ನಿಮ್ಮ ಈ ಆಸ್ಪತ್ರೆಯಲ್ಲಿ ಇದ್ದ ನರ್ಸ್‌ಗಳು ಚೆಂದಗೆ ಇದ್ದಾರೆ. ಆದರೆ, ಅವರೆಲ್ಲರೂ ನನ್ನನ್ನು ಅಜ್ಜ ಎಂದು ಕರೆಯುತ್ತಿರುವುದೇ ನನಗೆ ತ್ರಾಸ್ ಆಗಿತ್ತು.‌ ಮಾನಸಿಕ ಮಾಡಿತ್ತು” ಎಂದು ಹೇಳಿದ್ದಾಗಿ ಹಳೇ ಕಥೆಯನ್ನು ವಿವರಿಸಿದರು.

ಶಾಸಕ ರಾಜು ಕಾಗೆ ಈ ಮಾತುಗಳನ್ನು ಹೇಳುತ್ತಿದ್ದಂತೆ ಅಲ್ಲಿ ಸೇರಿದ್ದ ಕಾಂಗ್ರೆಸ್‌ ಕಾರ್ಯಕರ್ತರು, ಗ್ರಾಮಸ್ಥರು ಚಪ್ಪಾಳೆ ಹೊಡೆದು, ಶಿಳ್ಳೆ ಹಾಕಿ ಖುಷಿ ಪಟ್ಟಿದ್ದಾರೆ.

ನರ್ಸ್‌ಗಳ ಬಗ್ಗೆ ರಾಜು ಕಾಗೆ ಹೇಳಿದ ಮಾತು; ವೈರಲ್‌ ಆಯ್ತು ವಿಡಿಯೊ

ನಕ್ಕು ಸುಮ್ಮನಾದ ಸವದಿ

ರಾಜು ಕಾಗೆ ಅವರು ಸಭೆಯಲ್ಲಿ ಮಾತನಾಡುತ್ತಿದ್ದಾಗ ಲಕ್ಷ್ಮಣ ಸವದಿ ಅವರನ್ನು ನೋಡುತ್ತಾ ಈ ಕಥೆಯನ್ನು ಹೇಳಿದರು. ಸವದಿ ಜತೆಗೆ ಎಂಎಲ್‌ಸಿ ಚನ್ನರಾಜ ಹಟ್ಟಿಹೊಳಿ ಇದ್ದರು. ಶಾಸಕರ ಮಾತಿಗೆ ಅವರಿಬ್ಬರೂ ನಕ್ಕು ಸುಮ್ಮನಾದರು.

ಇದನ್ನೂ ಓದಿ: BJP Ticket Fraud : ಮತ್ತೊಂದು ಬಿಜೆಪಿ ಟಿಕೆಟ್‌ ಮೋಸ; 2.55 ಕೋಟಿ ರೂ. ವಂಚನೆ ಸಂಬಂಧ FIR ದಾಖಲು!

ಶಾಸಕರೆಂದರೆ ಎಲ್ಲರಿಗೂ ಮಾದರಿಯಾಗಿರಬೇಕು. ಈಗಿನ ಯುವ ಸಮೂಹಕ್ಕೆ ಆದರ್ಶವಾಗಿ ನಡೆ-ನುಡಿ ಎಲ್ಲವೂ ಇರಬೇಕು. ಆದರೆ, ಇವರು ಸ್ತ್ರೀಯರ ಬಗ್ಗೆ ಇಷ್ಟು ಲಘುವಾಗಿ ಮಾತನಾಡಿದ್ದು ಸರಿಯೇ? ಅದೂ ಸಾರ್ವಜನಿಕ ಸಭೆಯಲ್ಲಿ ಹೀಗೆ ಮಾತನಾಡಿದರೆ ಯಾವ ಸಂದೇಶ ರವಾನೆ ಮಾಡಿದಂತೆ ಆಗುತ್ತದೆ. ಕಾಂಗ್ರೆಸ್‌ ಪಕ್ಷವು ಇಂಥ ಮಾತುಗಳನ್ನು ಸಹಿಸುತ್ತದೆಯೆ ಎಂದು ನೆಟ್ಟಿಗರು ಪ್ರಶ್ನೆ ಮಾಡುತ್ತಿದ್ದಾರೆ.

Exit mobile version