Site icon Vistara News

Chudidar Gang: ಚಡ್ಡಿ ಗ್ಯಾಂಗ್ ಆಯ್ತು, ಈಗ ದರೋಡೆಕೋರರ ಚೂಡಿದಾರ್ ಗ್ಯಾಂಗ್ ಆ್ಯಕ್ಟಿವ್ ಆಗಿದೆ; ಹುಷಾರ್! ವಿಡಿಯೊ ನೋಡಿ

Viral video

ಹೈದರಾಬಾದ್‌: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಜನರನ್ನು ನಿದ್ದೆಗೆಡಿಸಿದ್ದ ಚಡ್ಡಿ ಗ್ಯಾಂಗ್‌ನಂತಹದ್ದೇ ಮತ್ತೊಂದು ಗ್ಯಾಂಗ್‌ ತೆಲಂಗಾಣದ ಹೈದರಾಬಾದ್‌(Hyderabad)ನಲ್ಲಿ ಜನರನ್ನು ಆತಂಕಕ್ಕೀಡು ಮಾಡಿದೆ. ಆದರೆ ಇದು ಚಡ್ಡಿ ಗ್ಯಾಂಗ್‌(Chaddi Gang) ಅಲ್ಲ.. ಇದು ಚೂಡಿದಾರ್‌ ಗ್ಯಾಂಗ್‌. ಮಹಿಳೆಯರಂತೆ ಚೂಡಿದಾರ್‌(Chudidar gang), ಬುರ್ಖಾ ಮತ್ತು ಹಿಜಾಬ್‌ ಧರಿಸಿ ಮನೆಮನೆಗಳಿಗೆ ನುಗ್ಗುವ ಈ ಗ್ಯಾಂಗ್‌ ಚಲನವಲನ ಸಿಸಿಟಿವಿಯಲ್ಲಿ ಪತ್ತೆ ಆಗಿದೆ. ಬಹುತೇಕ ಅಪಾರ್ಟ್‌ಮೆಂಟ್‌ಗಳನ್ನೇ ಟಾರ್ಗೆಟ್‌ ಮಾಡುವ ಈ ಗ್ಯಾಂಗ್‌ ಜನರ ನಿದ್ದೆಗೆಡಿಸಿದೆ

ಎಸ್‌.ಆರ್‌ ನಗರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಬರುವ ಜೆಕ್‌ ಕಾಲೋನಿಯಲ್ಲಿರುವ ಅಪಾರ್ಟ್‌ಮೆಂಟ್‌ವೊಂದಕ್ಕೆ ಶನಿವಾರ ನುಗ್ಗಿದ್ದ ಈ ಗ್ಯಾಂಗ್‌ ದರೋಡೆ ನಡೆಸಿತ್ತು. ಕೆ. ವೆಂಕಟರಾವ್‌ ಎಂಬವರಿಗೆ ಸೇರಿದ್ದ ಅಪಾರ್ಟ್‌ಮೆಂಟ್‌ ಇದಾಗಿದ್ದು, ದರೋಡೆ ವೇಳೆ ಅವರು ಮತ್ತು ಅವರ ಕುಟುಂಬಸ್ಥರು ಬೇರೆ ಊರಿಗೆ ತೆರಳಿದ್ದರು. ಬೆಳಗ್ಗೆ ಮನೆಗೆಲಸದವಳು ಬಂದಾಗ ಮನೆಯ ಬೀಗ ಒಡೆದಿರುವುದು ಗಮನಕ್ಕೆ ಬಂದಿತ್ತು.

ತಕ್ಷಣ ವೆಂಕಟರಾವ್‌ ಪೊಲೀಸರಿಗೆ ದೂರು ನೀಡಿದ್ದು, ಸ್ಥಳಕ್ಕೆ ಬಂದ ಪೊಲೀಸರು ಸಿಸಿಟಿವಿ ಪರಿಶೀಲನೆ ನಡೆಸಿದ್ದಾರೆ. ಆಗ ಇಬ್ಬರು ದರೋಡೆಕೋರರು ಮನೆಯೊಳಗೆ ನುಗ್ಗಿರುವುದು ಖಚಿತವಾಗಿದೆ. ಇನ್ನು ಇಬ್ಬರು ಕಳ್ಳರ ಚೂಡಿದಾರ ಧರಿಸಿದ್ದು, ಮುಖಕ್ಕೆ ಮಾಸ್ಕ್‌ ಹಾಕಿರುವುದು ಸಿಸಿಟಿವಿ ದೃಶ್ಯದಲ್ಲಿ ಸಾಬೀತಾಗಿದೆ. ಇನ್ನು ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಜನ ಎಚ್ಚರದಿಂದ ಇರುವಂತೆ ಪೊಲೀಸರು ಜನರಿಗೆ ಎಚ್ಚರಿಸಿದ್ದಾರೆ. ಅಲ್ಲದೇ ಅನುಮಾನಾಸ್ಪದ ವ್ಯಕ್ತಿಗಳ ಬಗ್ಗೆ ಮಾಹಿತಿ ನೀಡುವಂತೆ ಮನವಿ ಮಾಡಿದ್ದಾರೆ. ಇನ್ನು ದರೋಡೆಕೋರರು 3,90,000 ನಗದಿನ ಜೊತೆಗೆ ಎಸ್ಕೇಪ್‌ ಆಗಿದ್ದಾರೆ. ಅವರ ಪತ್ತೆಗಾಗಿ ವಿಶೇಷ ತಂಡ ರಚಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೆಲವು ತಿಂಗಳ ಹಿಂದೆ ಬೆಂಗಳೂರಿನಲ್ಲಿ ರಾತ್ರಿ ದಾರಿಹೋಕರನ್ನು ಅಡ್ಡಗಟ್ಟಿ ದೋಚುವ, ಮನೆಮನೆಗೆ ನುಗ್ಗಿ ಕಳವು (Theft case) ಮಾಡುವ ಅಪಾಯಕಾರಿ ಚಡ್ಡಿ ಗ್ಯಾಂಗ್‌ (Chaddi gang) ಬೆಂಗಳೂರಿಗೆ ಎಂಟ್ರಿ ಕೊಟ್ಟಿತ್ತು. ಇವರ ಚಲನವಲನ ಸಿಸಿ ಟಿವಿ ಕ್ಯಾಮೆರಾಗಳಲ್ಲಿ ದಾಖಲಾಗಿದ್ದವು. ಮುಖಕ್ಕೆ ಮುಖಗವುಸು ಹಾಕಿಕೊಂಡು ಗುರುತು ಮರೆ ಮಾಡಿ, ಚಡ್ಡಿ ತೊಟ್ಟಿರುವ ಐದಾರು ಜನ ಮಾರಕಾಸ್ತ್ರಗಳನ್ನು ಕೈಯಲ್ಲಿ ಹಿಡಿದುಕೊಂಡು ರಾತ್ರಿ ನಿರ್ಜನ ಬೀದಿಯಲ್ಲಿ ಓಡಾಡುತ್ತಿರುವ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಹೈಟೆಕ್‌ ಏರಿಯಾಗಳೇ ಈ ಗ್ಯಾಂಗ್‌ನ ಟಾರ್ಗೆಟ್ ಆಗಿದೆ ಎಂದು ಭಾವಿಸಲಾಗಿದೆ. ಯಾಕೆಂದರೆ ಸರ್ಜಾಪುರ ರಸ್ತೆ ಸುತ್ತಮುತ್ತಲಿನ ಅಪಾರ್ಟ್‌ಮೆಂಟ್, ವಿಲ್ಲಾಗಳ ಬಳಿ ಇವರ ಓಡಾಟ ದಾಖಲಾಗಿದೆ.
ಇದನ್ನೂ ಓದಿ:ಕುಡಿದು ಕಾರು ಓಡಿಸಿ ಇಬ್ಬರ ಜೀವ ತೆಗೆದ ಅಪ್ರಾಪ್ತನ ತಂದೆಯನ್ನು ಬಂಧಿಸಿದ ಪೊಲೀಸರು; ಬಾರ್‌ ಮಾಲೀಕನ ವಿರುದ್ಧವೂ ಕ್ರಮ

Exit mobile version