ನವದೆಹಲಿ: ಪ್ರೀತಿ-ಪ್ರೇಮದ ಮದ, ಕಾಲೇಜು ಓದುವಾಗಲೇ ಡೇಟಿಂಗ್ (Dating), ರೀಲ್ಸ್ ಹುಚ್ಚು ಸೇರಿ ಯುವ ಜೋಡಿಗಳು ಸಾರ್ವಜನಿಕ ಸ್ಥಳಗಳಲ್ಲೇ ಅಸಭ್ಯವಾಗಿ ವರ್ತಿಸುವ ವಿಡಿಯೊಗಳು (Viral Video) ಇತ್ತೀಚೆಗೆ ವೈರಲ್ ಆಗುತ್ತಲೇ ಇರುತ್ತವೆ. ಯಾರು ಏನೆಂದುಕೊಂಡಾರೋ ಎಂಬ ಅಳುಕೇ ಇಲ್ಲದೆ, ಪರಸ್ಪರ ತಬ್ಬಿಕೊಳ್ಳುವುದು, ತಬ್ಬಿ ಮುದ್ದಾಡುವುದು, ಲಿಪ್‌ಲಾಕ್ ಮಾಡುವುದು ಸೇರಿ ಸಾರ್ವಜನಿಕ ಸ್ಥಳಗಳಲ್ಲಿ ಹಲವು ರೀತಿಯ ಅಸಭ್ಯ ವರ್ತನೆಗಳು ದಿನೇದಿನೆ ಜಾಸ್ತಿಯಾಗುತ್ತಿವೆ. ಇದರ ಬೆನ್ನಲ್ಲೇ, ಯುವಕ ಹಾಗೂ ಯುವತಿಯು ಹಾರುತ್ತಿದ್ದ ವಿಮಾನದಲ್ಲಿಯೇ ನಾಲ್ಕು ತಾಸು ರೊಮ್ಯಾನ್ಸ್ (PDA On Flight) ಮಾಡಿದ್ದಾರೆ. ಈ ಫೋಟೊಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ (Viral News) ಆಗಿದ್ದು, ಜನರ ಆಕ್ರೋಶಕ್ಕೂ ಗುರಿಯಾಗಿವೆ.
ಹೌದು, ಫ್ಲೀ (FLEA) ಎಂಬ ಎಕ್ಸ್ ಖಾತೆಯಿಂದ ಜೋಡಿಯು ವಿಮಾನದಲ್ಲಿಯೇ ಸರಸವಾಡಿದ ಫೋಟೊಗಳನ್ನು ಶೇರ್ ಮಾಡಲಾಗಿದೆ. ನಾಲ್ಕು ತಾಸಿನ ವಿಮಾನ ಪ್ರಯಾಣದಲ್ಲಿ ಮಾರ್ಗದುದ್ದಕ್ಕೂ ಯುವ ಜೋಡಿಯು ವಿಮಾನದಲ್ಲಿಯೇ ತಬ್ಬಿಕೊಳ್ಳುವುದು, ಮುತ್ತು ಕೊಡುವುದು ಸೇರಿ ಹಲವು ರೀತಿಯ ಸರಸ ಸಲ್ಲಾಪದಲ್ಲಿ ತೊಡಗಿದೆ. ವಿಮಾನದಲ್ಲಿರುವ ಪ್ರಯಾಣಿಕರು ಏನೆಂದುಕೊಳ್ಳುತ್ತಾರೋ, ನಮ್ಮ ವರ್ತನೆಯಿಂದ ಅವರಿಗೆ ಬೇಸರವಾಗುತ್ತದೆಯೋ ಎಂಬುದರ ಪರಿವೇ ಇಲ್ಲದೆ ಜೋಡಿಯು ಸರಸದಲ್ಲಿಯೇ ಪ್ರಯಾಣವನ್ನು ಮುಗಿಸಿದೆ.
Can't believe my view on the plane
— FLEA 🇭🇹 (@babyibeenajoint) April 5, 2024
It was like this the whole 4 hour flight. 😆😆 pic.twitter.com/ruz39rLzDm
ವಿಮಾನದಲ್ಲಿಯೇ ಜೋಡಿಯು ರೊಮ್ಯಾನ್ಸ್ ಮಾಡಿದ ಫೋಟೊಗಳು ವೈರಲ್ ಆಗುತ್ತಲೇ ಸಾವಿರಾರು ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಇದು ಅಸಹ್ಯ ಹುಟ್ಟಿಸುವ ವರ್ತನೆ. ಅವರಿಬ್ಬರು ಹೀಗೆ ವರ್ತಿಸುತ್ತಿದ್ದರೂ ವಿಮಾನದ ಸಿಬ್ಬಂದಿ ಏಕೆ ಸುಮ್ಮನಿದ್ದರು” ಎಂದು ಒಬ್ಬರು ಪ್ರಶ್ನಿಸಿದ್ದಾರೆ. “ಇದು ಪ್ರೇಮ ಅಲ್ಲ, ಕಾಮದ ಮದ. ಇಬ್ಬರೂ ಎರಡೇ ತಿಂಗಳಲ್ಲಿ ಬ್ರೇಕಪ್ ಮಾಡಿಕೊಳ್ಳುತ್ತಾರೆ” ಎಂಬುದಾಗಿ ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ. “ಸಾರ್ವಜನಿಕವಾಗಿ ಹೇಗಿರಬೇಕು ಎಂಬ ಕಾಮನ್ ಸೆನ್ಸ್ ಇಲ್ಲ ಇವರಿಗೆ. ವಿಮಾನಯಾನ ಸಂಸ್ಥೆಯು ಕ್ರಮ ತೆಗೆದುಕೊಳ್ಳಬೇಕು” ಎಂದು ಇನ್ನೊಬ್ಬರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ವಿಮಾನದಲ್ಲಿ ಸಿಬ್ಬಂದಿ ಜತೆ ಪ್ರಯಾಣಿಕರು ಅನುಚಿತವಾಗಿ ವರ್ತಿಸುವ, ಜಗಳವಾಡುತ್ತಿರುವ ಘಟನೆಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿವೆ. ಕೆಲ ತಿಂಗಳ ಹಿಂದಷ್ಟೇ, ಲಂಡನ್‌ನಿಂದ ಮುಂಬೈ ಏರ್ ಇಂಡಿಯಾ ವಿಮಾನದ ಪ್ರಯಾಣಿಕರೊಬ್ಬರು ವಿಮಾನದ ಶೌಚಾಲಯದಲ್ಲಿ ಧೂಮಪಾನ ಮಾಡುತ್ತಿದ್ದರು. ಅವರ ಈ ಅಶಿಸ್ತಿನ ವರ್ತನೆಗಾಗಿ ಪ್ರಕರಣ ದಾಖಲಾಗಿತ್ತು. ಇನ್ನು 2022ರ ನವೆಂಬರ್‌ನಲ್ಲಿ ಸಹ ಪ್ರಯಾಣಿಕರೊಬ್ಬರ ಮೇಲೆ ಮೂತ್ರ ವಿಸರ್ಜನೆ ಪ್ರಕರಣದಲ್ಲಿ ನಿಯಮಗಳನ್ನು ಅನುಸರಿಸಲು ವಿಫಲವಾದ ಕಾರಣ ಏರ್ ಇಂಡಿಯಾಗೆ ಸಂಸ್ಥೆಗೆ 30 ಲಕ್ಷ ರೂ. ದಂಡ ವಿಧಿಸಲಾಯಿತು. ನವೆಂಬರ್ 26 ರಂದು ನ್ಯೂಯಾರ್ಕ್-ದಿಲ್ಲಿ ವಿಮಾನದಲ್ಲಿ ಶಂಕರ್ ಮಿಶ್ರಾ ಎಂಬ ಪ್ರಯಾಣಿಕರು ಕುಡಿದ ಅಮಲಿನಲ್ಲಿ ವಯಸ್ಸಾದ ಮಹಿಳೆಯ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದರು. ಈ ಪ್ರಕರಣ ಭಾರಿ ಸುದ್ದಿ ಮಾಡಿತ್ತು.
ಇದನ್ನೂ ಓದಿ: Viral News: ಇಂಡಿಗೋ ವಿಮಾನದಲ್ಲಿ ಕಿತ್ತೋಗಿರೋ ಕುಶನ್ !; ನೆಟ್ಟಿಗರ ತೀವ್ರ ಗೇಲಿ