ಚಿಕ್ಕೋಡಿ: ನಾಯಿಗಳು ಸ್ವಾಮಿನಿಷ್ಠೆಗೆ (loyalty) ಹೆಸರಾದವು ಎಂಬುದು ನಮಗೆಲ್ಲ ಗೊತ್ತಿದ್ದದ್ದೇ. ಅಂಥ ಹಲವು ಘಟನೆಗಳನ್ನೂ ಕೇಳಿರುತ್ತೇವೆ. ಆದರೆ ಇಲ್ಲೊಂದು ನಾಯಿ ತನ್ನ ಸ್ವಾಮಿನಿಷ್ಠೆ, ಪ್ರೀತಿ, (Dog love) ಚುರುಕುತನದಿಂದ ಎಲ್ಲರನ್ನೂ ಅಚ್ಚರಿ ಆನಂದಲ್ಲಿ ಕೆಡವಿದೆ. 195 ಕಿಲೋಮೀಟರ್ ಕ್ರಮಿಸಿ ತನ್ನ ಮಾಲೀಕನ (Owner) ಮನೆಯ ಮುಂದೆ ಪ್ರತ್ಯಕ್ಷವಾಗಿದೆ! ಈ ಸುದ್ದಿ ಹಾಗೂ ನಾಯಿಯ ಫೋಟೋ ಎಲ್ಲೆಡೆ ವೈರಲ್ (Viral News) ಆಗುತ್ತಿದೆ.
ಬೆಳಗಾವಿ (Belagavi news) ಜಿಲ್ಲೆಯ ನಿಪ್ಪಾಣಿ ತಾಲೂಕಿನ ಯಮಗರ್ಣಿಯ ಜ್ಞಾನದೇವ ಕುಂಬಾರ ಎಂಬವರಿಗೆ ಸೇರಿದ ಶ್ವಾನವಿದು. ಇದರ ಹೆಸರು ಮಹಾರಾಜ. ಮಹಾರಾಷ್ಟ್ರದಲ್ಲಿ ನಾಪತ್ತೆಯಾಗಿದ್ದ ಈ ಶ್ವಾನ 4 ದಿನಗಳ ಬಳಿಕ ಮನೆಯ ಮುಂದೆ ಪ್ರತ್ಯಕ್ಷವಾದುದನ್ನು ಕಂಡು ಮಾಲೀಕ ದಂಗಾಗಿದ್ದಾರೆ. ಇದು ಹೇಗೆ ಮರಳಿ ದಾರಿ ಹುಡುಕಿಕೊಂಡಿರಬಹುದು ಎಂಬ ಆಶ್ಚರ್ಯ ಎಲ್ಲರಲ್ಲೂ ಮೂಡಿದೆ.
ಇತ್ತೀಚೆಗೆ ಆಷಾಢ ಏಕಾದಶಿ ನಿಮಿತ್ತ ಇವರು ಕುಟುಂಬ ಸಮೇತ ಸೊಲ್ಹಾಪುರದ ಪಂಢರಪುರಕ್ಕೆ ತೀರ್ಥಯಾತ್ರೆಗೆ ಹೋಗಿದ್ದರು. ಜೊತೆಗೆ ಮಹಾರಾಜನೂ ತೆರಳಿತ್ತು. ಆದರೆ ಅಲ್ಲಿ ಜನಜಂಗುಳಿಯ ನಡುವೆ ಮಹಾರಾಜ ಮಿಸ್ ಆಗಿದ್ದ. ಎಷ್ಟೇ ಹುಡುಕಿದರೂ ಸಹ ಕಾಣದಾಗಿದ್ದ. ಆತನನ್ನು ಹುಡುಕಿ ಕಾಣದೆ ಇನ್ನು ಈತ ಸಿಗಲಾರ ಎಂದುಕೊಂಡ ಮರಳಿ ಬಂದಿದ್ದರು.
ಪಂಢರಪುರದಿಂದ ಯಮಗರ್ಣಿಗೆ 195 ಕಿಲೋಮೀಟರ್ ದೂರವಿದೆ. ಇವರು ಮನೆಗೆ ಬಂದ ನಾಲ್ಕು ದಿನಗಳ ಬಳಿಕ ಮಹಾರಾಜ, ಮನೆಯ ಮುಂದೆ ಕಾಣಿಸಿಕೊಂಡಿದ್ದಾನೆ! ಸುಮಾರು 195 ಕಿಮೀ ಕ್ರಮಿಸಿ ಮನೆಗೆ ಮರಳಿದ್ದಾನೆ. ಇದನ್ನು ಕಂಡು ಕುಟುಂಬದವರು ಮಾತ್ರವಲ್ಲ, ಇಡೀ ಗ್ರಾಮ ಚಕಿತವಾಗಿದೆ. ಶ್ವಾನಕ್ಕೆ ಹಾರ ಹಾಕಿ ಗುಲಾಲ್ ಹಚ್ಚಿ ಗ್ರಾಮಸ್ಥರು ಸಂಭ್ರಮಿಸಿದ್ದಾರೆ. ಶ್ವಾನ ನಿಷ್ಠೆಗೆ ಇಡೀ ಯಮಗರ್ಣಿ ಗ್ರಾಮಸ್ಥರು ಫಿದಾ ಆಗಿದ್ದಾರೆ.
ಕಚೇರಿಯ ಟೇಬಲ್‌ನೊಳಗೆ ಅಡಗಿದ್ದ ಬೃಹತ್ ಹಾವನ್ನು ಹಿಡಿದ ಮಹಿಳಾ ಸಿಬ್ಬಂದಿ!
ಸಾಮಾನ್ಯವಾಗಿ ಮಹಿಳೆಯರು ಹಾವನ್ನು ನೋಡಿದರೆ ಭಯಬೀಳುತ್ತಾರೆ. ಒಂದು ಚಿಕ್ಕ ಹುಳ ಮೈಮೇಲೆ ಹರಿದಾಡಿದರೆ ದೊಡ್ಡ ಹಾವು ಮೈಮೇಲೆ ಬಿದ್ದಂತೆ ಕಿರುಚುತ್ತಾ ಓಡುತ್ತಾರೆ. ಅಂತಹದರಲ್ಲಿ ಮಹಿಳೆಯೊಬ್ಬಳು ಯಾವುದೇ ಭಯವಿಲ್ಲದೆ ದೊಡ್ಡ ಗಾತ್ರದ ಹಾವನ್ನೇ ಕೈಯಲ್ಲಿ ಸಲೀಸಾಗಿ ಹಿಡಿದಿದ್ದಾಳೆ. ಮಹಿಳೆ ಕಚೇರಿಯಲ್ಲಿ ಕೈಯಲ್ಲಿ ಹಾವನ್ನು ಹಿಡಿದು ಸ್ಟಂಟ್ ಮಾಡುತ್ತಿರುವ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ.
ಮಹಿಳೆಯ ಈ ಧೈರ್ಯಶಾಲಿ ಕೆಲಸವನ್ನು ಕಂಡು ಅಲ್ಲಿದ್ದ ಜನರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಈ ಧೈರ್ಯಶಾಲಿ ಮಹಿಳೆ ಕಚೇರಿಯಲ್ಲಿ ಇರುವ ದೊಡ್ಡ ಗಾತ್ರದ ಹಾವನ್ನು ಯಾವುದೇ ಸುರಕ್ಷತಾ ಉಡುಗೆ ಅಥವಾ ಅಗತ್ಯ ಉಪಕರಣಗಳಿಲ್ಲದೆ ಬಹಳ ಸುಲಭವಾಗಿ ಹಿಡಿದಿದ್ದಾಳೆ.ಇದಕ್ಕೆ ಸಂಬಂಧಪಟ್ಟ ವಿಡಿಯೊವನ್ನು @moronhumor ಎಕ್ಸ್ (ಹಿಂದೆ ಟ್ವಿಟರ್) ನಲ್ಲಿ ಪೋಸ್ಟ್ ಮಾಡಿದ್ದಾರೆ, ವಿಡಿಯೊದಲ್ಲಿ ಮಹಿಳೆ ಒಬ್ಬ ವ್ಯಕ್ತಿಯೊಂದಿಗೆ ಬರುತ್ತಿದ್ದು, ಅಲ್ಲಿ ಕಂಪ್ಯೂಟರ್ ಕೇಬಲ್ ಅನ್ನು ಸರಿಪಡಿಸುತ್ತಿದ್ದಾಳೆ ಎಂದು ವೀಕ್ಷಕರು ಭಾವಿಸುವಂತಿದೆ.
ಆದರೆ ಆಕೆ ಸಡನ್ ಆಗಿ ಹಾವಿನ ತಲೆಯನ್ನು ಹಿಡಿದು ಮೇಲಕ್ಕೆ ಎತ್ತಿದ್ದಾಳೆ. ನಂತರ ಹಾವು ಕಚ್ಚುತ್ತದೆ ಎಂಬ ಭಯವು ಇಲ್ಲದೇ ಅದನ್ನು ಚೀಲದಲ್ಲಿ ತುಂಬಿಸಿ ದಿನಸಿ ಸಾಮಾಗ್ರಿಗಳನ್ನು ತೆಗೆದುಕೊಂಡು ಹೋಗುವಂತೆ ಹೊರಗೆ ತೆಗೆದುಕೊಂಡು ಬಂದಿದ್ದಾಳೆ. ಆ ವೇಳೆ ಅವಳ ಮುಖದಲ್ಲಿ ಭಯದ ಬದಲು ನಗು ಕಂಡುಬಂದಿದೆ. ಅಲ್ಲದೇ ಮಹಿಳೆ ಈ ವೇಳೆ ಹಾವಿನ ಬಗ್ಗೆ ಕೆಲವು ಸಲಹೆಗಳನ್ನು ಸಹ ಹಂಚಿಕೊಳ್ಳುತ್ತಾಳೆ. ಹಾವು ವಿಷಕಾರಿಯಲ್ಲ ಎಂದು ಅವಳು ತನ್ನ ಸಹೋದ್ಯೋಗಿಗಳಿಗೆ ಹೇಳಿದಳು. ಅವಳು ಹಾವುಗಳ ವಿವಿಧ ಲಕ್ಷಣಗಳು ಮತ್ತು ಹಾವನ್ನು ನಿರ್ವಹಿಸುವ ವಿಧಾನದ ಬಗ್ಗೆ ಜನರಿಗೆ ಮಾರ್ಗದರ್ಶನ ನೀಡಿದ್ದಾಳೆ. ಅಲ್ಲಿ ಹಾಜರಿದ್ದ ಜನರು ಆಕೆ ಸುಲಭವಾಗಿ ಹಾವನ್ನು ಹಿಡಿಯುವುದನ್ನು ಕಂಡು ಆಶ್ಚರ್ಯಚಕಿತರಾದರು. ಈ ವಿಡಿಯೊ ಅನೇಕರ ಗಮನವನ್ನು ಸೆಳೆದಿದೆ ಮತ್ತು ಅನೇಕರು ಕಾಮೆಂಟ್ ಮಾಡಿದ್ದಾರೆ. ನೆಟ್ಟಿಗರು ಮಹಿಳೆಯ ವೀಡಿಯೊವನ್ನು ಕಂಡು ಅವಳ ಶಾಂತ, ಧೈರ್ಯಶಾಲಿ ಕಾರ್ಯವನ್ನು ಕಂಡು ಹೊಗಳಿದ್ದಾರೆ.
ಬಳಕೆದಾರರೊಬ್ಬರು ಅವಳ ಕಾರ್ಯಕ್ಕೆ ಮತ್ತು ಅವಳ ತಿಳಿವಳಿಕೆಯನ್ನು ಕಂಡು ಆಕೆಯನ್ನು ರಾಕ್‌ಸ್ಟಾರ್ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, ಈ ಮೊದಲು ಸೋಶಿಯಲ್ ಮೀಡಿಯಾದಲ್ಲಿ ಯಾವುದೇ ಹೆಣ್ಣು ಹಾವು ಹಿಡಿಯುವುದನ್ನು ನೋಡಿಲ್ಲ ಎಂದು ಹೇಳಿ ಮಹಿಳೆಗೆ ಅಭಿನಂದನೆ ಸಲ್ಲಿಸಿದ್ದಾರೆ. ಮೂರನೆಯವರು ಈಕೆ ನಿಜವಾದ ನಾಯಕಿ. ಹೀರೋಗಳಿಗಿಂತ ಒಂದು ಹೆಜ್ಜೆ ಮುಂದೆ ಎಂದು ಹೊಗಳಿದ್ದಾರೆ.
ಇದನ್ನೂ ಓದಿ: Viral News: ಜಗಳವಾಡಿಕೊಂಡು ನಡುರಸ್ತೆಯಲ್ಲಿ ಬೆತ್ತಲೆ ಓಡಾಟ; ಜೋಡಿಯ ಹುಚ್ಚಾಟ ಮೊಬೈಲ್‌ನಲ್ಲಿ ಸೆರೆ; ಭಾರೀ ಆಕ್ರೋಶ ವ್ಯಕ್ತ