Viral News: 195 ಕಿ.ಮೀ ಒಂಟಿಯಾಗಿ ನಡೆದು ಮಾಲೀಕನಲ್ಲಿಗೆ ಮರಳಿದ ನಾಯಿ ಮಹಾರಾಜ! - Vistara News

ವೈರಲ್ ನ್ಯೂಸ್

Viral News: 195 ಕಿ.ಮೀ ಒಂಟಿಯಾಗಿ ನಡೆದು ಮಾಲೀಕನಲ್ಲಿಗೆ ಮರಳಿದ ನಾಯಿ ಮಹಾರಾಜ!

Dog Love: ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಯಮಗರ್ಣಿಯ ಜ್ಞಾನದೇವ ಕುಂಬಾರ ಎಂಬವರಿಗೆ ಸೇರಿದ ಶ್ವಾನವಿದು. ಇದರ ಹೆಸರು ಮಹಾರಾಜ. ಮಹಾರಾಷ್ಟ್ರದಲ್ಲಿ ನಾಪತ್ತೆಯಾಗಿದ್ದ ಈ ಶ್ವಾನ 4 ದಿನಗಳ ಬಳಿಕ ಮನೆಯ ಮುಂದೆ ಪ್ರತ್ಯಕ್ಷವಾದುದನ್ನು ಕಂಡು ಮಾಲೀಕ ದಂಗಾಗಿದ್ದಾರೆ. ಇದು ಹೇಗೆ ಮರಳಿ ದಾರಿ ಹುಡುಕಿಕೊಂಡಿರಬಹುದು ಎಂಬ ಆಶ್ಚರ್ಯ ಎಲ್ಲರಲ್ಲೂ ಮೂಡಿದೆ.

VISTARANEWS.COM


on

dog love
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಚಿಕ್ಕೋಡಿ: ನಾಯಿಗಳು ಸ್ವಾಮಿನಿಷ್ಠೆಗೆ (loyalty) ಹೆಸರಾದವು ಎಂಬುದು ನಮಗೆಲ್ಲ ಗೊತ್ತಿದ್ದದ್ದೇ. ಅಂಥ ಹಲವು ಘಟನೆಗಳನ್ನೂ ಕೇಳಿರುತ್ತೇವೆ. ಆದರೆ ಇಲ್ಲೊಂದು ನಾಯಿ ತನ್ನ ಸ್ವಾಮಿನಿಷ್ಠೆ, ಪ್ರೀತಿ, (Dog love) ಚುರುಕುತನದಿಂದ ಎಲ್ಲರನ್ನೂ ಅಚ್ಚರಿ ಆನಂದಲ್ಲಿ ಕೆಡವಿದೆ. 195 ಕಿಲೋಮೀಟರ್‌ ಕ್ರಮಿಸಿ ತನ್ನ ಮಾಲೀಕನ (Owner) ಮನೆಯ ಮುಂದೆ ಪ್ರತ್ಯಕ್ಷವಾಗಿದೆ! ಈ ಸುದ್ದಿ ಹಾಗೂ ನಾಯಿಯ ಫೋಟೋ ಎಲ್ಲೆಡೆ ವೈರಲ್‌ (Viral News) ಆಗುತ್ತಿದೆ.

ಬೆಳಗಾವಿ (Belagavi news) ಜಿಲ್ಲೆಯ ನಿಪ್ಪಾಣಿ ತಾಲೂಕಿನ ಯಮಗರ್ಣಿಯ ಜ್ಞಾನದೇವ ಕುಂಬಾರ ಎಂಬವರಿಗೆ ಸೇರಿದ ಶ್ವಾನವಿದು. ಇದರ ಹೆಸರು ಮಹಾರಾಜ. ಮಹಾರಾಷ್ಟ್ರದಲ್ಲಿ ನಾಪತ್ತೆಯಾಗಿದ್ದ ಈ ಶ್ವಾನ 4 ದಿನಗಳ ಬಳಿಕ ಮನೆಯ ಮುಂದೆ ಪ್ರತ್ಯಕ್ಷವಾದುದನ್ನು ಕಂಡು ಮಾಲೀಕ ದಂಗಾಗಿದ್ದಾರೆ. ಇದು ಹೇಗೆ ಮರಳಿ ದಾರಿ ಹುಡುಕಿಕೊಂಡಿರಬಹುದು ಎಂಬ ಆಶ್ಚರ್ಯ ಎಲ್ಲರಲ್ಲೂ ಮೂಡಿದೆ.

ಇತ್ತೀಚೆಗೆ ಆಷಾಢ ಏಕಾದಶಿ ನಿಮಿತ್ತ ಇವರು ಕುಟುಂಬ ಸಮೇತ ಸೊಲ್ಹಾಪುರದ ಪಂಢರಪುರಕ್ಕೆ ತೀರ್ಥಯಾತ್ರೆಗೆ ಹೋಗಿದ್ದರು. ಜೊತೆಗೆ ಮಹಾರಾಜನೂ ತೆರಳಿತ್ತು. ಆದರೆ ಅಲ್ಲಿ ಜನಜಂಗುಳಿಯ ನಡುವೆ ಮಹಾರಾಜ ಮಿಸ್‌ ಆಗಿದ್ದ. ಎಷ್ಟೇ ಹುಡುಕಿದರೂ ಸಹ ಕಾಣದಾಗಿದ್ದ. ಆತನನ್ನು ಹುಡುಕಿ ಕಾಣದೆ ಇನ್ನು ಈತ ಸಿಗಲಾರ ಎಂದುಕೊಂಡ ಮರಳಿ ಬಂದಿದ್ದರು.

ಪಂಢರಪುರದಿಂದ ಯಮಗರ್ಣಿಗೆ 195 ಕಿಲೋಮೀಟರ್‌ ದೂರವಿದೆ. ಇವರು ಮನೆಗೆ ಬಂದ ನಾಲ್ಕು ದಿನಗಳ ಬಳಿಕ ಮಹಾರಾಜ, ಮನೆಯ ಮುಂದೆ ಕಾಣಿಸಿಕೊಂಡಿದ್ದಾನೆ! ಸುಮಾರು 195 ಕಿಮೀ ಕ್ರಮಿಸಿ ಮನೆಗೆ ಮರಳಿದ್ದಾನೆ. ಇದನ್ನು ಕಂಡು ಕುಟುಂಬದವರು ಮಾತ್ರವಲ್ಲ, ಇಡೀ ಗ್ರಾಮ ಚಕಿತವಾಗಿದೆ. ಶ್ವಾನಕ್ಕೆ ಹಾರ ಹಾಕಿ ಗುಲಾಲ್‌ ಹಚ್ಚಿ ಗ್ರಾಮಸ್ಥರು ಸಂಭ್ರಮಿಸಿದ್ದಾರೆ. ಶ್ವಾನ‌ ನಿಷ್ಠೆಗೆ ಇಡೀ ಯಮಗರ್ಣಿ‌ ಗ್ರಾಮಸ್ಥರು ಫಿದಾ ಆಗಿದ್ದಾರೆ.

ಕಚೇರಿಯ ಟೇಬಲ್‌ನೊಳಗೆ ಅಡಗಿದ್ದ ಬೃಹತ್‌ ಹಾವನ್ನು ಹಿಡಿದ ಮಹಿಳಾ ಸಿಬ್ಬಂದಿ!

ಸಾಮಾನ್ಯವಾಗಿ ಮಹಿಳೆಯರು ಹಾವನ್ನು ನೋಡಿದರೆ ಭಯಬೀಳುತ್ತಾರೆ. ಒಂದು ಚಿಕ್ಕ ಹುಳ ಮೈಮೇಲೆ ಹರಿದಾಡಿದರೆ ದೊಡ್ಡ ಹಾವು ಮೈಮೇಲೆ ಬಿದ್ದಂತೆ ಕಿರುಚುತ್ತಾ ಓಡುತ್ತಾರೆ. ಅಂತಹದರಲ್ಲಿ ಮಹಿಳೆಯೊಬ್ಬಳು ಯಾವುದೇ ಭಯವಿಲ್ಲದೆ ದೊಡ್ಡ ಗಾತ್ರದ ಹಾವನ್ನೇ ಕೈಯಲ್ಲಿ ಸಲೀಸಾಗಿ ಹಿಡಿದಿದ್ದಾಳೆ. ಮಹಿಳೆ ಕಚೇರಿಯಲ್ಲಿ ಕೈಯಲ್ಲಿ ಹಾವನ್ನು ಹಿಡಿದು ಸ್ಟಂಟ್ ಮಾಡುತ್ತಿರುವ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ.

ಮಹಿಳೆಯ ಈ ಧೈರ್ಯಶಾಲಿ ಕೆಲಸವನ್ನು ಕಂಡು ಅಲ್ಲಿದ್ದ ಜನರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಈ ಧೈರ್ಯಶಾಲಿ ಮಹಿಳೆ ಕಚೇರಿಯಲ್ಲಿ ಇರುವ ದೊಡ್ಡ ಗಾತ್ರದ ಹಾವನ್ನು ಯಾವುದೇ ಸುರಕ್ಷತಾ ಉಡುಗೆ ಅಥವಾ ಅಗತ್ಯ ಉಪಕರಣಗಳಿಲ್ಲದೆ ಬಹಳ ಸುಲಭವಾಗಿ ಹಿಡಿದಿದ್ದಾಳೆ.ಇದಕ್ಕೆ ಸಂಬಂಧಪಟ್ಟ ವಿಡಿಯೊವನ್ನು @moronhumor ಎಕ್ಸ್ (ಹಿಂದೆ ಟ್ವಿಟರ್) ನಲ್ಲಿ ಪೋಸ್ಟ್ ಮಾಡಿದ್ದಾರೆ, ವಿಡಿಯೊದಲ್ಲಿ ಮಹಿಳೆ ಒಬ್ಬ ವ್ಯಕ್ತಿಯೊಂದಿಗೆ ಬರುತ್ತಿದ್ದು, ಅಲ್ಲಿ ಕಂಪ್ಯೂಟರ್ ಕೇಬಲ್ ಅನ್ನು ಸರಿಪಡಿಸುತ್ತಿದ್ದಾಳೆ ಎಂದು ವೀಕ್ಷಕರು ಭಾವಿಸುವಂತಿದೆ.

ಆದರೆ ಆಕೆ ಸಡನ್ ಆಗಿ ಹಾವಿನ ತಲೆಯನ್ನು ಹಿಡಿದು ಮೇಲಕ್ಕೆ ಎತ್ತಿದ್ದಾಳೆ. ನಂತರ ಹಾವು ಕಚ್ಚುತ್ತದೆ ಎಂಬ ಭಯವು ಇಲ್ಲದೇ ಅದನ್ನು ಚೀಲದಲ್ಲಿ ತುಂಬಿಸಿ ದಿನಸಿ ಸಾಮಾಗ್ರಿಗಳನ್ನು ತೆಗೆದುಕೊಂಡು ಹೋಗುವಂತೆ ಹೊರಗೆ ತೆಗೆದುಕೊಂಡು ಬಂದಿದ್ದಾಳೆ. ಆ ವೇಳೆ ಅವಳ ಮುಖದಲ್ಲಿ ಭಯದ ಬದಲು ನಗು ಕಂಡುಬಂದಿದೆ. ಅಲ್ಲದೇ ಮಹಿಳೆ ಈ ವೇಳೆ ಹಾವಿನ ಬಗ್ಗೆ ಕೆಲವು ಸಲಹೆಗಳನ್ನು ಸಹ ಹಂಚಿಕೊಳ್ಳುತ್ತಾಳೆ. ಹಾವು ವಿಷಕಾರಿಯಲ್ಲ ಎಂದು ಅವಳು ತನ್ನ ಸಹೋದ್ಯೋಗಿಗಳಿಗೆ ಹೇಳಿದಳು. ಅವಳು ಹಾವುಗಳ ವಿವಿಧ ಲಕ್ಷಣಗಳು ಮತ್ತು ಹಾವನ್ನು ನಿರ್ವಹಿಸುವ ವಿಧಾನದ ಬಗ್ಗೆ ಜನರಿಗೆ ಮಾರ್ಗದರ್ಶನ ನೀಡಿದ್ದಾಳೆ. ಅಲ್ಲಿ ಹಾಜರಿದ್ದ ಜನರು ಆಕೆ ಸುಲಭವಾಗಿ ಹಾವನ್ನು ಹಿಡಿಯುವುದನ್ನು ಕಂಡು ಆಶ್ಚರ್ಯಚಕಿತರಾದರು. ಈ ವಿಡಿಯೊ ಅನೇಕರ ಗಮನವನ್ನು ಸೆಳೆದಿದೆ ಮತ್ತು ಅನೇಕರು ಕಾಮೆಂಟ್ ಮಾಡಿದ್ದಾರೆ. ನೆಟ್ಟಿಗರು ಮಹಿಳೆಯ ವೀಡಿಯೊವನ್ನು ಕಂಡು ಅವಳ ಶಾಂತ, ಧೈರ್ಯಶಾಲಿ ಕಾರ್ಯವನ್ನು ಕಂಡು ಹೊಗಳಿದ್ದಾರೆ.

ಬಳಕೆದಾರರೊಬ್ಬರು ಅವಳ ಕಾರ್ಯಕ್ಕೆ ಮತ್ತು ಅವಳ ತಿಳಿವಳಿಕೆಯನ್ನು ಕಂಡು ಆಕೆಯನ್ನು ರಾಕ್‌ಸ್ಟಾರ್‌ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, ಈ ಮೊದಲು ಸೋಶಿಯಲ್ ಮೀಡಿಯಾದಲ್ಲಿ ಯಾವುದೇ ಹೆಣ್ಣು ಹಾವು ಹಿಡಿಯುವುದನ್ನು ನೋಡಿಲ್ಲ ಎಂದು ಹೇಳಿ ಮಹಿಳೆಗೆ ಅಭಿನಂದನೆ ಸಲ್ಲಿಸಿದ್ದಾರೆ. ಮೂರನೆಯವರು ಈಕೆ ನಿಜವಾದ ನಾಯಕಿ. ಹೀರೋಗಳಿಗಿಂತ ಒಂದು ಹೆಜ್ಜೆ ಮುಂದೆ ಎಂದು ಹೊಗಳಿದ್ದಾರೆ.

ಇದನ್ನೂ ಓದಿ: Viral News: ಜಗಳವಾಡಿಕೊಂಡು ನಡುರಸ್ತೆಯಲ್ಲಿ ಬೆತ್ತಲೆ ಓಡಾಟ; ಜೋಡಿಯ ಹುಚ್ಚಾಟ ಮೊಬೈಲ್‌ನಲ್ಲಿ ಸೆರೆ; ಭಾರೀ ಆಕ್ರೋಶ ವ್ಯಕ್ತ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದೇಶ

Taj Mahal : ತಾಜ್​ ಮಹಲ್ ಅಥವಾ ತೇಜೋ ಮಹಾಲಯ? ಐತಿಹಾಸಿಕ ಸ್ಮಾರಕ ಶಿವ ದೇವಾಲಯ ಎಂದು ವಾದಿಸಿ ಗಂಗಾಜಲ ಅರ್ಪಿಸಲು ಮುಂದಾದ ಮಹಿಳೆ!

Taj Mahal : ಆಕೆಯನ್ನು ಪಶ್ಚಿಮ ದ್ವಾರದ ಬಳಿ ತಡೆಯಲಾಯಿತು. ಹೀಗಾಗಿ ಅವರಿಗೆ ತಾಜ್ ಮಹಲ್ ಪ್ರವೇಶಿಸಲು ಸಾಧ್ಯವಾಗಲಿಲ್ಲ. ಸ್ವಲ್ಪ ಸಮಯದ ನಂತರ, ರಾಜೇಶ್ವರ ದೇವಸ್ಥಾನದಲ್ಲಿ ಗಂಗಾಜಲವನ್ನು ಅರ್ಪಿಸಿದರು ” ಎಂದು ತಾಜ್ ಸುರಕ್ಷಾದ ಸಹಾಯಕ ಪೊಲೀಸ್ ಆಯುಕ್ತ (ಎಸಿಪಿ) ಸೈಯದ್ ಆರೀಬ್ ಅಹ್ಮದ್ ಹೇಳಿದ್ದಾರೆ.

VISTARANEWS.COM


on

Taj Mahal
Koo

ನವದೆಹಲಿ: ಕನ್ವರ್ ಯಾತ್ರೆಗೆ ಬಂದಿದ್ದ ಮಹಿಳೆಯೊಬ್ಬರು ಸೋಮವಾರ ಐತಿಹಾಸಿಕ ಸ್ಮಾರಕ ಹಾಗೂ ಪ್ರೀತಿಯ ಪ್ರತೀಕ ಎಂದು ಪರಿಗಣಿಸಲಾಗಿರುವ ತಾಜ್ ಮಹಲ್ (Taj Mahal ) ಹೊರಗೆ ‘ಕವಾಡ್’ ನೊಂದಿಗೆ (ಕನ್ವರ್ ಯಾತ್ರೆಯ ಸಮಯದಲ್ಲಿ ಗಂಗಾ ನದಿಯಿಂದ ಪವಿತ್ರ ನೀರು ಸಾಗಿಸುವ ಮಡಕೆಗಳು) ಬಂದ ಘಟನೆ ನಡೆಯಿತು. ಅವರು ತಾಜ್​ ಮಹಲ್ ಅಲ್ಲ, ಶಿವ ದೇವಾಲಯ ಎಂದು ವಾದಿಸಿದ್ದಾರೆ.

ಅಖಿಲ ಭಾರತ ಹಿಂದೂ ಮಹಾಸಭಾದ ಜಿಲ್ಲಾಧ್ಯಕ್ಷೆ ಮೀನು ರಾಥೋಡ್ ಗಂಗಾಜಲ ಅರ್ಪಿಸಲು ಮುಂದಾದ ಮಹಿಳೆ. ಸೋಮವಾರ ತಾಜ್ ಮಹಲ್ನ ಪಶ್ಚಿಮ ದ್ವಾರಕ್ಕೆ ‘ಕವಡ್’ ಅನ್ನು ಹೆಗಲ ಮೇಲೆ ಹೊತ್ತುಕೊಂಡು ಬಂದಾಗ ಅವರನ್ನು ತಡೆಯಲಾಯಿತು. ಆವರಣದಲ್ಲಿ ನಿಯೋಜಿಸಲಾಗಿದ್ದ ‘ತಾಜ್ ಸುರಕ್ಷಾ’ದ ಪೊಲೀಸರು ಆಕೆಗೆ ಮುಂದೆ ಹೋಗಲು ಅವಕಾಶ ನೀಡಲಿಲ್ಲ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

“ಆಕೆಯನ್ನು ಪಶ್ಚಿಮ ದ್ವಾರದ ಬಳಿ ತಡೆಯಲಾಯಿತು. ಹೀಗಾಗಿ ಅವರಿಗೆ ತಾಜ್ ಮಹಲ್ ಪ್ರವೇಶಿಸಲು ಸಾಧ್ಯವಾಗಲಿಲ್ಲ. ಸ್ವಲ್ಪ ಸಮಯದ ನಂತರ, ರಾಜೇಶ್ವರ ದೇವಸ್ಥಾನದಲ್ಲಿ ಗಂಗಾಜಲವನ್ನು ಅರ್ಪಿಸಿದರು ” ಎಂದು ತಾಜ್ ಸುರಕ್ಷಾದ ಸಹಾಯಕ ಪೊಲೀಸ್ ಆಯುಕ್ತ (ಎಸಿಪಿ) ಸೈಯದ್ ಆರೀಬ್ ಅಹ್ಮದ್ ಹೇಳಿದ್ದಾರೆ.

ತಾಜ್ ಮಹಲ್ ಅನ್ನು ಪ್ರಾಚೀನ ಶಿವ ದೇವಾಲಯದ ಮೇಲೆ ನಿರ್ಮಿಸಲಾಗಿದೆ ಎಂದು ಬಲಪಂಥೀಯ ಹಿಂದೂ ಗುಂಪುಗಳು ವಾದಿಸುತ್ತಿವೆ. ಅಂತೆಯೇ ಈ ವಾದವನ್ನು ಉಲ್ಲೇಖಿಸಿ ಮೀನು ರಾಥೋಡ್ “ತೇಜೋ ಮಹಾಲಯ” ದಲ್ಲಿ ‘ಗಂಗಾಜಲ’ ಅರ್ಪಿಸಲು ಅನುಮತಿ ನೀಡುವಂತೆ ಪೊಲೀಸ್ರಿಗೆ ಬೇಡಿಕೆ ಇಟ್ಟಿದ್ದರು.

ಅದು ತೇಜೋ ಮಹಾಲಯ’

ಘಟನೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮೀನು ರಾಥೋಡ್, ತನ್ನ ಕನಸಿನಲ್ಲಿ ಶಿವ ಬಂದಿದ್ದು ತೇಜೋ ಮಹಾಲಯದಲ್ಲಿ ಗಂಗಾಜಲವನ್ನು ಅರ್ಪಿಸಲು ಆದೇಶಿಸಿದ್ದ ಎಂದು ಹೇಳಿದ್ದಾರೆ. “ನಾನು ಗಂಗಾಜಲ ಅರ್ಪಿಸಲು ತೇಜೋ ಮಹಾಲಯಕ್ಕೆ ಬಂದಿದ್ದೇನೆ. ಭೋಲೆ ಬಾಬಾ ನನ್ನ ಕನಸಿನಲ್ಲಿ ನನ್ನ ಬಳಿಗೆ ಬಂದಿದ್ದರು. ನಾನು ತೇಜೋ ಮಹಾಲಯದಲ್ಲಿ ಅರ್ಪಿಸಲು ಕನ್ವರ್ ಅನ್ನು ತಂದಿದ್ದೆ . ಆದರೆ, ಪೊಲೀಸರು ನನ್ನನ್ನು ಮುಂದೆ ಹೋಗದಂತೆ ತಡೆದಿದ್ದಾರೆ ಎಂದು ರಾಥೋಡ್ ಹೇಳಿದ್ದಾರೆ.

ಇದನ್ನೂ ಓದಿ: NEET-UG : ಆಗಸ್ಟ್ 14ರಿಂದ ನೀಟ್-ಯುಜಿ ಕೌನ್ಸೆಲಿಂಗ್ ಆರಂಭ

ಬಲಪಂಥೀಯ ಗುಂಪಿನ ವಕ್ತಾರ ಸಂಜಯ್ ಜಾಟ್​ ಅವರು “ತೇಜೋ ಮಹಾಲಯ” ಎಂಬುದನ್ನು ಪುನರುಚ್ಚರಿಸಿದರು. ತಾಜ್ ಮಹಲ್ ಶಿವನ ದೇವಾಲಯವಾಗಿರುವುದರಿಂದ ಗಂಗಾಜಲವನ್ನು ಅರ್ಪಿಸುವುದು “ನಮ್ಮ ಹಕ್ಕು” ಎಂದು ಪ್ರತಿಪಾದಿಸಿದರು.

ತಾಜ್ ಮಹಲ್ ಶಿವನ ದೇವಾಲಯವಾದ ‘ತೇಜೋ ಮಹಾಲಯ’ ಆಗಿರುವುದರಿಂದ ತಾಜ್ ಮಹಲ್​​ನಲ್ಲಿ ‘ಗಂಗಾ ಜಲ’ ಅರ್ಪಿಸುವುದು ನಮ್ಮ ಹಕ್ಕು. ಮೀನು ಅವರು ಕಾಸ್​ಗಂಜ್​ನ ಸೊರೊನ್ ಜಿಯಿಂದ ಕನ್ವರ್ ತಂದು ಎರಡು ದಿನಗಳ ನಂತರ ಆಗ್ರಾ ತಲುಪಿದ್ದರು ಎಂದು ಜಾಟ್ ಹೇಳಿದ್ದಾರೆ.

ತಾಜ್ ಮಹಲ್

ವಿಶ್ವದ ಏಳು ಅದ್ಭುತಗಳಲ್ಲಿ ಒಂದಾದ ತಾಜ್ ಮಹಲ್ ಉತ್ತರ ಪ್ರದೇಶದ ಆಗ್ರಾದಲ್ಲಿ ಯಮುನಾ ನದಿಯ ದಡದಲ್ಲದೆ. ಇದು ಬಿಳಿ ಅಮೃತಶಿಲೆಯಲ್ಲಿ ನಿರ್ಮಿಸಿದ ಸಮಾಧಿಯಾಗಿದೆ. ಈ ಅಪ್ರತಿಮ ಸ್ಮಾರಕವನ್ನು ಕ್ರಿ.ಶ 1631 ರಲ್ಲಿ ಐದನೇ ಮೊಘಲ್ ಚಕ್ರವರ್ತಿ ಶಹಜಹಾನ್ ತನ್ನ ಪತ್ನಿ ಮುಮ್ತಾಜ್ ನೆನಪಿನ ಸಮಾಧಿಯನ್ನು ಕಟ್ಟಿದ್ದ ಎಂದು ಇತಿಹಾಸ ಹೇಳುತ್ತದೆ.

ಈ ಸಂಕೀರ್ಣ ಸುಮಾರು 42 ಎಕರೆ ಪ್ರದೇಶದಲ್ಲಿ ನಿರ್ಮಿಸಲಾಗಿದ್ದು, ಸಮಾಧಿಯು ಅದರ ಕೇಂದ್ರಬಿಂದುವಾಗಿದೆ. ಈ ಸಂಕೀರ್ಣವು ಮಸೀದಿ ಮತ್ತು ಅತಿಥಿ ಗೃಹ ಸಹ ಒಳಗೊಂಡಿದೆ/. ಉದ್ಯಾನಗಳಲ್ಲಿ ಮೂರು ಬದಿಗಳಲ್ಲಿ ಕ್ರೆನೆಲ್ಡ್ ಗೋಡೆಯಿಂದ ಸುತ್ತುವರೆದಿದೆ. ತಾಜ್ ಮಹಲ್ ನಲ್ಲಿ 1658 ರಲ್ಲಿ ನಿಧನರಾದ ಶಹಜಹಾನ್ ಅವರ ಸಮಾಧಿಯೂ ಇದೆ.

Continue Reading

ವೈರಲ್ ನ್ಯೂಸ್

Viral News: ಜಗಳವಾಡಿಕೊಂಡು ನಡುರಸ್ತೆಯಲ್ಲಿ ಬೆತ್ತಲೆ ಓಡಾಟ; ಜೋಡಿಯ ಹುಚ್ಚಾಟ ಮೊಬೈಲ್‌ನಲ್ಲಿ ಸೆರೆ; ಭಾರೀ ಆಕ್ರೋಶ ವ್ಯಕ್ತ

Viral News: ನಗರದ ಲಕ್ಷ್ಮೀನಗರ ಚೌಕ್ ಬಳಿ ಘಟನೆ ನಡೆದಿದ್ದು, ಈ ಘಟನೆ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ. ಈ ವಿಡಿಯೋದಲ್ಲಿ ದಂಪತಿಗಳು ನಗ್ನ ಸ್ಥಿತಿಯಲ್ಲಿ ಕಾರಿನಿಂದ ಇಳಿದು ರಸ್ತೆಯಲ್ಲಿ ಓಡಾಡುತ್ತಿರುವುದು ಕಂಡುಬಂದಿದೆ. ಈ ದೃಶ್ಯವನ್ನು ಅಲ್ಲೇ ಹಾದು ಹೋಗುತ್ತಿದ್ದ ನಗರದ ಕೆಲ ಯುವಕರು ತಮ್ಮ ಮೊಬೈಲ್‌ನಲ್ಲಿ ವಿಡಿಯೋ ಮಾಡಿದ್ದಾರೆ.

VISTARANEWS.COM


on

Koo

ನಾಗ್ಪುರ: ಕಾರು-ಬೈಕುಗಳಲ್ಲಿ ಜೋಡಿಗಳ ರೊಮ್ಯಾನ್ಸ್‌, ಅಶ್ಲೀಲ ಕೃತ್ಯಗಳು ಇತ್ತೀಚಿನ ದಿನಗಳಲ್ಲಿ ಸರ್ವೇ ಸಾಮಾನ್ಯ ಎನ್ನುವ ರೀತಿಯಲ್ಲಿ ಆಗಾಗ ಬೆಳಕಿಗೆ ಬರುತ್ತಿರುತ್ತವೆ. ಮಹಾರಾಷ್ಟ್ರದ ಉಪ-ರಾಜಧಾನಿ ನಾಗ್ಪುರದಲ್ಲಿ ಇದೀಗ ಅಂತಹದ್ದೇ ಮತ್ತೊಂದು ಘಟನೆ ಜನರನ್ನು ಬೆಚ್ಚಿ ಬೀಳಿಸುವಂತಿದೆ. ಜೋಡಿಯೊಂದು ನಗ್ನ ಸ್ಥಿತಿಯಲ್ಲಿ ಕಾರಿನಿಂದ ಇಳಿದು ರಸ್ತೆಯಲ್ಲಿ ತಿರುಗಾಡಿದ್ದಾರೆ. ಇದನ್ನು ಕಂಡು ಜನ ಶಾಕ್‌ ಆಗಿದ್ದು, ಈ ಘಟನೆಗೆ ಖಂಡನೆ ವ್ಯಕ್ತವಾಗಿದೆ(Viral News).

ಘಟನೆ ವಿವರ:

ನಗರದ ಲಕ್ಷ್ಮೀನಗರ ಚೌಕ್ ಬಳಿ ಘಟನೆ ನಡೆದಿದ್ದು, ಈ ಘಟನೆ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ. ಈ ವಿಡಿಯೋದಲ್ಲಿ ದಂಪತಿಗಳು ನಗ್ನ ಸ್ಥಿತಿಯಲ್ಲಿ ಕಾರಿನಿಂದ ಇಳಿದು ರಸ್ತೆಯಲ್ಲಿ ಓಡಾಡುತ್ತಿರುವುದು ಕಂಡುಬಂದಿದೆ. ಈ ದೃಶ್ಯವನ್ನು ಅಲ್ಲೇ ಹಾದು ಹೋಗುತ್ತಿದ್ದ ನಗರದ ಕೆಲ ಯುವಕರು ತಮ್ಮ ಮೊಬೈಲ್‌ನಲ್ಲಿ ವಿಡಿಯೋ ಮಾಡಿದ್ದಾರೆ.

ಸಿಕ್ಕಿರುವ ಮಾಹಿತಿ ಪ್ರಕಾರ ಶನಿವಾರ ರಾತ್ರಿ 2 ಗಂಟೆ ಸುಮಾರಿಗೆ ಲಕ್ಷ್ಮೀನಗರ ಚೌಕ್‌ನಿಂದ ಶ್ರದ್ಧಾನಂದಪೇಟ್ ಚೌಕ್‌ಗೆ ಹೋಗುವ ರಸ್ತೆಯಲ್ಲಿ ಜೋಡಿಯೊಂದು ಜಗಳ ಮಾಡಿಕೊಂಡು ಯುವಕನೊಬ್ಬ ಕಾರಿನಿಂದ ಇಳಿದಿದ್ದಾನೆ. ಅವನ ಮೈಮೇಲೆ ಒಂದೇ ಒಂದು ಬಟ್ಟೆಯೂ ಇರಲಿಲ್ಲ. ಸ್ವಲ್ಪ ಸಮಯದ ನಂತರ ಅದೇ ಸ್ಥಿತಿಯಲ್ಲಿದ್ದ ಯುವತಿಯೊಬ್ಬಳು ಕೂಡ ಕಾರಿನಿಂದ ಇಳಿದು ಯುವಕನ ಬಳಿ ಕ್ಷಮೆ ಯಾಚಿಸುತ್ತಿರುವುದು ಕಂಡು ಬಂದಿದೆ. ಇದಾದ ಬಳಿಕ ಯುವಕ ಫುಟ್ ಪಾತ್ ಬದಿಯಲ್ಲಿದ್ದ ತೆರೆದ ಮನೆಯತ್ತ ತೆರಳಿದ್ದಾನೆ. ಆಗ ರಸ್ತೆಯಲ್ಲಿ ಕೆಲವೇ ವಾಹನಗಳು ಸಂಚರಿಸುತ್ತಿದ್ದವು. ಹೀಗಿರುವಾಗ ಎರಡು ಬೈಕ್‌ಗಳಲ್ಲಿ ಹೋಗುತ್ತಿದ್ದ ಕೆಲ ಹುಡುಗರು ಈ ದೃಶ್ಯವನ್ನು ವಿಡಿಯೋ ಮಾಡಿ ವೈರಲ್ ಮಾಡಿದ್ದಾರೆ.

ಪೊಲೀಸರು ಹೇಳೋದೇನು?

ಬಜಾಜ್ ನಗರ ಪೊಲೀಸ್ ಠಾಣೆಯ ಹಿರಿಯ ಇನ್ಸ್‌ಪೆಕ್ಟರ್ ವಿಠಲ್ ರಜಪೂತ್ ದಂಪತಿಯನ್ನು ಭಾನುವಾರ ಬೆಳಿಗ್ಗೆ ಗುರುತಿಸಲಾಯಿತು ಆದರೆ ಅವರು ಮಾನಸಿಕವಾಗಿ ಅಸ್ವಸ್ಥರಾಗಿರುವಂತೆ ತೋರುತ್ತಿದ್ದರಿಂದ ಯಾವುದೇ ಕಾನೂನು ಕ್ರಮವನ್ನು ತೆಗೆದುಕೊಂಡಿಲ್ಲ. ಘಟನೆ ಬಗ್ಗೆ ಪರಿಶೀಲಿಸಲಾಗಿದೆ. “ನಾವು ದಂಪತಿಗಳು ಮತ್ತು ಅವರ ಕುಟುಂಬ ಸದಸ್ಯರನ್ನು ಕರೆಸಿದ್ದೇವೆ, ಸಾರ್ವಜನಿಕ ಸ್ಥಳಗಳಲ್ಲಿ ಇಂತಹ ಅನಿಯಂತ್ರಿತ ನಡವಳಿಕೆಯ ವಿರುದ್ಧ ಸಮರ್ಪಕವಾಗಿ ಸಲಹೆ ನೀಡಲಾಯಿತು. ದಂಪತಿಗೆ ಮಾನಸಿಕ ಆರೋಗ್ಯ ಸಮಸ್ಯೆಗಳಿರುವುದರಿಂದ ಪೊಲೀಸರು ಕ್ರಮ ಕೈಗೊಳ್ಳಲಿಲ್ಲ ಎಂದು ಅವರು ವರದಿಯಲ್ಲಿ ತಿಳಿಸಿದ್ದಾರೆ.

ಈ ಹಿಂದೆಯೂ ನಡೆದಿತ್ತು ಇಂತಹದ್ದೇ ಘಟನೆ

ಇತ್ತೀಚೆಗಷ್ಟೇ ನಗರದಲ್ಲಿ ಚಲಿಸುತ್ತಿರುವ ಕಾರಿನಲ್ಲಿ ಜೋಡಿಯೊಂದು ರೋಮ್ಯಾನ್ಸ್ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದಾದ ಬಳಿಕ ಸೀತಾಬುಲ್ಡಿ ಪೊಲೀಸರು ಯುವಕ ಹಾಗೂ ಯುವತಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಕುಟುಂಬ ಸಮೇತ ಠಾಣೆಗೆ ಕರೆಸಿ ಇಬ್ಬರಿಗೂ ವಾರ್ನಿಂಗ್‌ ಮಾಡಿದ್ದರು. ಇದಾದ ಬಳಿಕ ಬೈಕ್‌ನಲ್ಲಿ ರೊಮ್ಯಾನ್ಸ್ ಮಾಡುತ್ತಿರುವ ವಿಡಿಯೋ ವೈರಲ್ ಆಗಿತ್ತು.

ಇದನ್ನೋ ಓದಿ: Viral News: ಕಾಲಿಗೆ ಕಬ್ಬಿಣದ ಸರಪಳಿ.. ಕೈಯಲ್ಲಿ ಅಮೆರಿಕ ಪಾಸ್‌ಪೋರ್ಟ್‌..ದಟ್ಟ ಕಾಡಿನಲ್ಲಿ ಮಹಿಳೆ ಪತ್ತೆ-ವಿಡಿಯೋ ವೈರಲ್‌

Continue Reading

ವೈರಲ್ ನ್ಯೂಸ್

Viral Video: ಕಾರಿನಲ್ಲೇ ಸೆಕ್ಸ್‌.. ಡಿವೈಡರ್‌ಗೆ ಡಿಕ್ಕಿ; ನಗ್ನ ಸ್ಥಿತಿಯಲ್ಲಿದ್ದ ಇಬ್ಬರು ಯುವಕರು, ಯುವತಿಯನ್ನು ಕಂಡು ಜನ ಶಾಕ್‌-ವಿಡಿಯೋ ಇದೆ

Viral Video: ಮಕ್ಕಳನ್ನು ಕೂರಿಸಿಕೊಂಡು ಇಬ್ಬರು ಯುವಕರು ಮತ್ತು ಒಬ್ಬ ಮಹಿಳೆ ಕಾರಿನಲ್ಲೇ ಅಸಹಜ ಲೈಂಗಿಕ ಕ್ರಿಯೆ ನಡೆಸಿದ್ದಾರೆ. ಕುಡಿದ ಮತ್ತಿನಲ್ಲಿ ವೇಗವಾಗಿ ಕಾರು ಚಲಾಯಿಸುತ್ತಾ, ಮಹಿಳೆಯ ಜೊತೆ ಲೈಂಗಿಕ ಕ್ರಿಯೆ ನಡೆಸಿದ್ದಾರೆ. ಹೀಗಾಗಿ ಕಾರು ನಿಯಂತ್ರಣ ತಪ್ಪಿ ಡಿವೈಡರ್‌ಗೆ ಗುದ್ದಿದೆ. ಘಟನೆಯಲ್ಲಿ ಮಹಿಳೆ ಮತ್ತು ಮಕ್ಕಳಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

VISTARANEWS.COM


on

Viral video
Koo

ಕಾನ್ಪುರ: ಜನನಿಬಿಡ ಪ್ರದೇಶದಲ್ಲಿ ಅತ್ಯಂತ ವೇಗವಾಗಿ ಬಂದ ಕಾರೊಂದು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದಿತ್ತು. ಅಯ್ಯೋ ಕಾರು ಅಪಘಾತವಾಯಿತಲ್ಲಾ ಅಂತಾ ಅಲ್ಲಿದ್ದ ಜನ ಸಹಾಯಕ್ಕೆಂದು ಧಾವಿಸುತ್ತಾರೆ. ಹಾಗೆ ಬಂದ ಜನ ಕಾರಿನ ಬಳಿ ಬರುತ್ತಿದ್ದಂತೆ ಒಂದು ಕ್ಷಣಕ್ಕೆ ದಂಗಾಗಿ ಬಿಡ್ತಾರೆ. ಹಾಗಿದ್ದರೆ ಅಂತಹದ್ದೇನಿತ್ತು ಆ ಕಾರಿನಲ್ಲಿ ಅಂತ ನೋಡೋದಾದ್ರೆ ಅರೆಬೆತ್ತಲೆಯಾಗಿ ಇಬ್ಬರು ಯುವಕರು, ಪೂರ್ತಿ ನಗ್ನ ಸ್ಥಿತಿಯಲ್ಲಿ ಮಹಿಳೆಯೊಬ್ಬಳು ಕಾರಿನೊಳಗೆ ಇರುವುದನ್ನು ಕಂಡು ಜನ ಶಾಕ್‌ ಆಗಿದ್ದಾರೆ. ಸಾಲದೆನ್ನುವಂತೆ ನಾಲ್ಕು ಮಕ್ಕಳೂ ಕಾರಿನಲ್ಲಿದ್ದಾರೆ. ಘಟನೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಫುಲ್‌ ವೈರಲ್‌(Viral Video) ಆಗುತ್ತಿದೆ.

ಹೌದು.. ಇಂತಹದ್ದೊಂದು ಘಟನೆ ಕಾನ್ಪುರದಲ್ಲಿ ವರದಿಯಾಗಿದೆ. ಮಕ್ಕಳನ್ನು ಕೂರಿಸಿಕೊಂಡು ಇಬ್ಬರು ಯುವಕರು ಮತ್ತು ಒಬ್ಬ ಮಹಿಳೆ ಕಾರಿನಲ್ಲೇ ಅಸಹಜ ಲೈಂಗಿಕ ಕ್ರಿಯೆ ನಡೆಸಿದ್ದಾರೆ. ಕುಡಿದ ಮತ್ತಿನಲ್ಲಿ ವೇಗವಾಗಿ ಕಾರು ಚಲಾಯಿಸುತ್ತಾ, ಮಹಿಳೆಯ ಜೊತೆ ಲೈಂಗಿಕ ಕ್ರಿಯೆ ನಡೆಸಿದ್ದಾರೆ. ಹೀಗಾಗಿ ಕಾರು ನಿಯಂತ್ರಣ ತಪ್ಪಿ ಡಿವೈಡರ್‌ಗೆ ಗುದ್ದಿದೆ. ಘಟನೆಯಲ್ಲಿ ಮಹಿಳೆ ಮತ್ತು ಮಕ್ಕಳಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಜಾಜ್‌ಮೌ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿರುವ ಜೆ ಕೆ ಚೌರಾ ಪ್ರದೇಶದಲ್ಲಿ ಜು.27ರಂದು ಈ ಘಟನೆ ನಡೆದಿದೆ. ಮಹಿಳೆ ಒಂದೇ ಸಮಯದಲ್ಲಿ ಇಬ್ಬರು ಯುವಕರ ಜೊತೆ ನಾಲ್ಕು ಮಕ್ಕಳ ಎದುರೇ ಲೈಂಗಿಕ ಕ್ರಿಯೆ ನಡೆಸುತ್ತಿದ್ದಳು. ಈ ವೇಳೆ ಕಾರು ಅಪಘಾತಕ್ಕೀಡಾಗಿದೆ ಎನ್ನಲಾಗಿದೆ. ಸ್ಥಳೀಯರಿಗೆ ಕಾರಿನಲ್ಲಿ ಮದ್ಯದ ಬಾಟಲಿಗಳು, ಇತರೆ ವಸ್ತುಗಳು ಪತ್ತೆಯಾಗಿದೆ. ಸ್ಥಳೀಯರು ಪೊಲೀಸರು ದೂರು ನೀಡಿದ್ದು, ಇಬ್ಬರು ಯುವಕರನ್ನು ಅರೆಸ್ಟ್‌ ಮಾಡಿದ್ದಾರೆ. ಮಹಿಳೆ ಮತ್ತು ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಅಪಘಾತಕ್ಕೀಡಾಗಿರುವ ಕಾರಿನ ಸಮೀಪ ಜನ ಜಮಾಯಿಸಿ ಯುವಕರನ್ನು ವಿಚಾರಿಸುತ್ತಿರುವುದನ್ನು, ಚಾಲಕ ಕಾರಿನಿಂದ ಕೆಳಗಿಳಿದು ಸ್ಥಳೀಯರೊಂದಿಗೆ ವಾಗ್ವಾದಕ್ಕಿಳಿದಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ನಂತರ ಅವರು ಕಾರಿನೊಳಗೆ ಕುಳಿತುಕೊಳ್ಳುತ್ತಾರೆ. ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ಶಾಂತಿ ಕದಡುವ ಆರೋಪ ಹೊರಿಸಿದ್ದಾರೆ. ಅವರಿಗೆ ದಂಡ ವಿಧಿಸಲಾಯಿತು ಮತ್ತು ನಂತರ ಹೋಗಲು ಅನುಮತಿಸಲಾಗಿದೆ ಎಂದು ವರದಿಯಾಗಿದೆ. ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ನಂತರ ಮಹಿಳೆಯನ್ನು ಆಕೆಯ ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ ಎನ್ನಲಾಗಿದೆ. ಇನ್ನು ಕಾರಿನಲ್ಲಿದ್ದ ಮಕ್ಕಳು ಯಾರದ್ದು ಎಂಬ ಬಗ್ಗೆ ಮಾಹಿತಿ ಸಿಕ್ಕಿಲ್ಲ.

ಇದನ್ನೂ ಓದಿ: Viral News: ಕಾಲಿಗೆ ಕಬ್ಬಿಣದ ಸರಪಳಿ.. ಕೈಯಲ್ಲಿ ಅಮೆರಿಕ ಪಾಸ್‌ಪೋರ್ಟ್‌..ದಟ್ಟ ಕಾಡಿನಲ್ಲಿ ಮಹಿಳೆ ಪತ್ತೆ-ವಿಡಿಯೋ ವೈರಲ್‌

Continue Reading

ದೇಶ

Rahul Gandhi: ರಾಹುಲ್‌ ಮಾತಿಗೆ ಹಣೆ ಚಚ್ಚಿಕೊಂಡು, ಮುಖ ಮುಚ್ಚಿಕೊಂಡ ಸಚಿವೆ ನಿರ್ಮಲಾ: ಭಾರೀ ವೈರಲಾಗ್ತಿದೆ ಈ ವಿಡಿಯೋ

Rahul Gandhi: ಕೇಂದ್ರ ಬಜೆಟ್ ಕುರಿತು ಮಾತನಾಡುತ್ತಿದ್ದ ರಾಹುಲ್ ಗಾಂಧಿ, ಹಲ್ವಾ ಕಾರ್ಯಕ್ರಮ(Halwa Ceremony)ದ ಫೋಟೋ ಪ್ರದರ್ಶನ ಮಾಡಿದಾಗ ನಿರ್ಮಲಾ ಸೀತಾರಾಮನ್ ಅವರು ನಗುತ್ತಾ ಮುಖ ಮುಚ್ಚಿಕೊಂಡರು. ಇದೀಗ ಈ ವಿಡಿಯೋ ಎಲ್ಲೆಡೆ ವೈರಲ್ ಆಗತೊಡಗಿದೆ ಅಲ್ಲದೇ ಹಲವು ಪರ ವಿರೋಧ ಟೀಕೆಗಳು ವ್ಯಕ್ತವಾಗಿವೆ.

VISTARANEWS.COM


on

Rahul Gandhi
Koo

ನವದೆಹಲಿ: ಇಂದು ಸಂಸತ್ತಿನ ಮುಂಗಾರು ಅಧಿವೇಶನ(Parliament Session)ದ ಒಂಬತ್ತನೇ ದಿನ. ಇಂದು ದೆಹಲಿ ಕೋಚಿಂಗ್‌ ಸೆಂಟರ್‌ ದುರಂತ, ಅಗ್ನಿಪಥ್‌ ಯೋಜನೆ ಸೇರಿದಂತೆ ಹಲವು ವಿಚಾರಗಳನ್ನಿಟ್ಟುಕೊಂಡು ವಿಪಕ್ಷ ನಾಯಕ ರಾಹುಲ್‌ ಗಾಂಧಿ(Rahul Gandhi) ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಈ ವೇಳೆ ರಾಹುಲ್‌ ಆರೋಪಕ್ಕೆ ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್‌(Nirmala Seetharaman) ಮುಖ ಮುಚ್ಚಿಕೊಂಡ ಅಪರೂಪದ ಘಟನೆಗೆ ಸದನ ಸಾಕ್ಷಿಯಾಯಿತು.

ಕೇಂದ್ರ ಬಜೆಟ್ ಕುರಿತು ಮಾತನಾಡುತ್ತಿದ್ದ ರಾಹುಲ್ ಗಾಂಧಿ, ಹಲ್ವಾ ಕಾರ್ಯಕ್ರಮ(Halwa Ceremony)ದ ಫೋಟೋ ಪ್ರದರ್ಶನ ಮಾಡಿದಾಗ ನಿರ್ಮಲಾ ಸೀತಾರಾಮನ್ ಅವರು ನಗುತ್ತಾ ಮುಖ ಮುಚ್ಚಿಕೊಂಡರು. ಇದೀಗ ಈ ವಿಡಿಯೋ ಎಲ್ಲೆಡೆ ವೈರಲ್ ಆಗತೊಡಗಿದೆ ಅಲ್ಲದೇ ಹಲವು ಪರ ವಿರೋಧ ಟೀಕೆಗಳು ವ್ಯಕ್ತವಾಗಿವೆ. ಕೇಂದ್ರ ಬಜೆಟ್ ನ್ನು ಮಧ್ಯಮ ವರ್ಗ, ಹಿಂದುಳಿದ ವರ್ಗಗಳ ವಿರೋಧಿ ಬಜೆಟ್ ಎಂದು ರಾಹುಲ್ ಗಾಂಧಿ ತಮ್ಮ ಭಾಷಣದಲ್ಲಿ ಟೀಕಾ ಪ್ರಹಾರ ನಡೆಸಿದರು.

ರಾಹುಲ್ ಗಾಂಧಿ ಬಜೆಟ್ ಪೂರ್ವದಲ್ಲಿ ನಡೆಯುವ ಸಾಂಪ್ರದಾಯಿಕ ಹಲ್ವಾ ಸಮಾರಂಭದ ಪೋಸ್ಟರ್ ನ್ನು ಪ್ರದರ್ಶಿಸಿದ್ದು, ಬಜೆಟ್ ತಯಾರಿಕೆಯ ತಂಡದಲ್ಲಿದ್ದ 20 ಅಧಿಕಾರಿಗಳ ಪೈಕಿ ದಲಿತರು, ಒಬಿಸಿ, ಆದಿವಾಸಿಗಳು ಇಲ್ಲವೇ ಇಲ್ಲ. 20 ಅಧಿಕಾರಿಗಳ ಪೈಕಿ ಯಾರೊಬ್ಬರೂ ಹಿಂದುಳಿದ ವರ್ಗ, ದಲಿತ ಹಾಗೂ ಆದಿವಾಸಿ ಸಮುದಾಯಕ್ಕೆ ಸೇರಿದವರು ಇಲ್ಲ. ನಾನು ಬೇಕಿದ್ದರೆ ಅವರ ಹೆಸರುಗಳನ್ನೂ ಹೇಳಬಲ್ಲೆ ಎಂದರು. ಈ ವೇಳೆ ರಾಹುಲ್ ಗಾಂಧಿ ಈ ಹೇಳಿಕೆ ನೀಡುತ್ತಿದ್ದಂತೆ ನಿರ್ಮಲಾ ಸೀತಾರಾಮನ್ ಅವರು ಹಣೆ ಚಚ್ಚಿಕೊಂಡು, ತಮ್ಮ ಎರಡೂ ಕೈಗಳಿಂದ ಮುಖ ಮುಚ್ಚಿಕೊಂಡು ನಕ್ಕರು.

ಮಹಾಭಾರತದ ಚಕ್ರವ್ಯೂಹವನ್ನು ಉಲ್ಲೇಖಿಸಿದ ರಾಹುಲ್‌ ಗಾಂಧಿ ಅವರು ನರೇಂದ್ರ ಮೋದಿ (Narendra Modi) ಹಾಗೂ ಬಿಜೆಪಿ ವಿರುದ್ಧ ವಾಗ್ಬಾಣ ಪ್ರಯೋಗಿಸಿದ್ದಾರೆ. “ಮಹಾಭಾರತದ ಚಕ್ರವ್ಯೂಹದಂತೆ (Chakravyuh) ಈಗಲೂ ಒಂದು ಚಕ್ರವ್ಯೂಹ ರಚಿಸಲಾಗಿದೆ. ದೇಶದ ಜನರು ಆ ಚಕ್ರವ್ಯೂಹಕ್ಕೆ ಸಿಲುಕಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಸೇರಿ 6 ಮಂದಿಯು ಈ ಚಕ್ರವ್ಯೂಹವನ್ನು ನಿಯಂತ್ರಿಸುತ್ತಿದ್ದಾರೆ” ಎಂದು ಹೇಳಿದ್ದಾರೆ.

“ಸಾವಿರಾರು ವರ್ಷಗಳ ಹಿಂದೆ, ಹರಿಯಾಣದಲ್ಲಿ ಕುರುಕ್ಷೇತ್ರ ನಡೆಯುವಾಗ 6 ಜನ ಸೇರಿ ಚಕ್ರವ್ಯೂಹವನ್ನು ರಚಿಸಿದ್ದರು. ಆರು ಜನ ಸೇರಿ ಆ ಚಕ್ರವ್ಯೂಹದಲ್ಲಿ ಅಭಿಮನ್ಯುವಿನನ್ನು ಸಿಲುಕಿಸಿ ಕೊಲೆ ಮಾಡಿದರು. ನಾನು ಚಕ್ರವ್ಯೂಹದ ಕುರಿತು ಸಣ್ಣದೊಂದು ಸಂಶೋಧನೆ ಮಾಡಿದ್ದೇನೆ. ಚಕ್ರವ್ಯೂಹವನ್ನು ಪದ್ಮವ್ಯೂಹ ಎಂದೂ ಕರೆಯಲಾಗುತ್ತದೆ. ಪದ್ಮವ್ಯೂಹ ಎಂದರೆ ಕಮಲದ ರಚನೆಯಾಗಿದೆ. ಚಕ್ರವ್ಯೂಹ ಕೂಡ ಕಮಲದ ಆಕಾರದಲ್ಲಿದೆ” ಎಂಬುದಾಗಿ ಬಿಜೆಪಿಯನ್ನು ಕುಟುಕಿದರು.

ಇದನ್ನೂ ಓದಿ: Rahul Gandhi: ನೀಟ್‌ನಲ್ಲಿ ‘ಎಷ್ಟು ವೋಟ್‌’ ಪಡೆದಿರಿ ಎಂದು ವಿದ್ಯಾರ್ಥಿಗಳಿಗೆ ಕೇಳಿದ ರಾಹುಲ್‌ ಗಾಂಧಿ; Video ವೈರಲ್

Continue Reading
Advertisement
Liquor Price Karnataka
ಪ್ರಮುಖ ಸುದ್ದಿ6 mins ago

Liquor Price Karnataka: ನೊರೆ ನೊರೆ ಬಿಯರ್‌ ಮದ್ಯಪ್ರಿಯರ ಜೇಬಿಗೆ ಇನ್ನಷ್ಟು ಹೊರೆ

Parliament Session
ರಾಜಕೀಯ10 mins ago

Parliament Session: ಸಂಸತ್‌ನ ಬಜೆಟ್‌ ಅಧಿವೇಶನದಲ್ಲಿ ಸರ್ಕಾರವನ್ನು ಇಕ್ಕಟಿಗೆ ಸಿಲುಕಿಸಲು ಪ್ರತಿಪಕ್ಷಗಳು ಸಜ್ಜು; Live ಇಲ್ಲಿ ವೀಕ್ಷಿಸಿ

Kerala Landslide
ದೇಶ17 mins ago

Kerala Landslide: ಕೇರಳದಲ್ಲಿ ಭೀಕರ ಭೂ ಕುಸಿತ; ಸಾವಿನ ಸಂಖ್ಯೆ 20ಕ್ಕೆ ಏರಿಕೆ, ಮತ್ತಷ್ಟು ಮಂದಿ ಸಿಲುಕಿರುವ ಭೀತಿ

ದೇಶ20 mins ago

Jio Games: ಜಿಯೋಗೇಮ್ಸ್‌ನಲ್ಲಿ ಗೂಗಲ್‌ನ ಗೇಮ್‌ಸ್ನ್ಯಾಕ್ಸ್‌ ಗೇಮ್ಸ್‌ ಲಭ್ಯ

Rebel star Prabhas starrer The Rajasaab short glimpse released
ದೇಶ33 mins ago

The RajaSaab Movie: ‘ದಿ ರಾಜಾಸಾಬ್’; ಎಲ್ಲರ ಗಮನ ಸೆಳೆಯುತ್ತಿದೆ ರೆಬೆಲ್‌ ಸ್ಟಾರ್‌ ಪ್ರಭಾಸ್‌ ಡ್ಯಾಶಿಂಗ್‌ ಲುಕ್‌!

IPL 2025
ಕ್ರೀಡೆ45 mins ago

IPL 2025: ಆರ್​ಸಿಬಿ ಇನ್​ಸ್ಟಾಗ್ರಾಮ್​ ಖಾತೆ ಅನ್​ಫಾಲೋ ಮಾಡಿದ ಮ್ಯಾಕ್ಸ್​ವೆಲ್; ಕಾರಣವೇನು?

ಪ್ರಮುಖ ಸುದ್ದಿ47 mins ago

Uttara Kannada Landslide: ನೀರಿನಡಿ ಇನ್ನೂ 9 ದೇಹಗಳಿವೆ ಎಂದ ಸ್ವಾಮೀಜಿ! ಬರಲಿದೆ ಕೇರಳದಿಂದ ಬಾರ್ಜ್‌ ಮೌಂಟೆಡ್‌ ಹಿಟಾಚಿ

Mahila Samman Savings Certificate
ಮನಿ-ಗೈಡ್49 mins ago

Mahila Samman Savings Certificate: ಮಹಿಳಾ ಸಮ್ಮಾನ್‌‌ನಲ್ಲಿ ಹೂಡಿಕೆಯಿಂದ ಏನು ಲಾಭ?

Kerala Landslide
ದೇಶ58 mins ago

Kerala Landslide: ಕೇರಳದಲ್ಲಿ ವರುಣನ ರೌದ್ರ ನರ್ತನ ಶುರು; ಭಾರೀ ಭೂಕುಸಿತಕ್ಕೆ ಐವರು ಬಲಿ

Yogi Adithyanath
ದೇಶ1 hour ago

Yogi Adityanath: ಲವ್‌ ಜಿಹಾದ್‌ ಮಟ್ಟ ಹಾಕಲು ಯೋಗಿ ಆದಿತ್ಯನಾಥ್‌ ಪಣ; ಅಪರಾಧ ಸಾಬೀತಾದರೆ ಜೀವಾವಧಿ ಶಿಕ್ಷೆಯ ಪ್ರಸ್ತಾವ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Rain
ಮಳೆ16 hours ago

Karnataka Rain: ಮತ್ತೆ ಶುರು ಮಳೆ ಅಬ್ಬರ; ಗಾಳಿಗೆ ಹಾರಿ ಹೋದ ಮನೆಗಳ ಚಾವಣಿ, ಶಿರಾಡಿಘಾಟ್‌ನಲ್ಲಿ ಮತ್ತೆ ಭೂ ಕುಸಿತ

Elephant combing Makna elephant captured near Bannerghatta
ಬೆಂಗಳೂರು ಗ್ರಾಮಾಂತರ17 hours ago

Elephant combing: ಭೀಮ, ಮಹೇಂದ್ರರ ಮುಂದೆ ಮಂಡಿಯೂರಿದ ಮಕ್ನಾ ಆನೆ; ಹೇಗಿತ್ತು ಗೊತ್ತಾ ಕಾರ್ಯಾಚರಣೆ

karnataka rain
ಮಳೆ20 hours ago

Karnataka rain: ಪ್ರವಾಹದ ಭೀಕರತೆ; ಹಳ್ಳದಲ್ಲಿ ತೇಲಿಬಂದ ಎಮ್ಮೆಗಳ ಕಳೇಬರ

Tungabhadra Dam
ಕೊಪ್ಪಳ2 days ago

Tungabhadra Dam: ಕಾಲುವೆಯಲ್ಲಿ ಬಾಲಕರ ಈಜಾಟ; ಅಧಿಕಾರಿಗಳಿಗೆ ಪೀಕಲಾಟ!

Elephant attack
ಮಳೆ2 days ago

Elephant attack : ಮಳೆ ಮಧ್ಯೆ ಮಲೆನಾಡಿನಲ್ಲಿ ಕಾಡಾನೆಗಳ ಕಾಟ; ಪ್ರವಾಹಕ್ಕೆ ಸಿಲುಕಿದ ಪಟಗುಂದಿ ಗ್ರಾಮ

karnataka Rain
ಮಳೆ2 days ago

Karnataka Rain : ಮಳೆ ನಿಂತರೂ ಕಡಿಮೆಯಾಗದ ಅನಾಹುತ; ಮಾದಪುರ ಟೌನ್ ಸಮೀಪ ಗುಡ್ಡ ಕುಸಿತ

karnataka Rain
ಮಳೆ2 days ago

Karnataka Rain : ರಭಸವಾಗಿ ಬೀಸಿದ ಗಾಳಿಗೆ ಮನೆ ಮೇಲೆ ಬಿದ್ದ ತೆಂಗಿನ ಮರ; ನದಿ ನೀರು ಸೇವಿಸದಂತೆ ಸೂಚನೆ

Karnataka weather Forecast
ಮಳೆ3 days ago

Karnataka Weather : ವೀಕೆಂಡ್‌ ಮೋಜಿಗೆ ಮಳೆರಾಯ ಅಡ್ಡಿ; ಬೆಂಗಳೂರಲ್ಲಿ ಮೋಡ ಕವಿದ ವಾತಾವರಣ

ramanagara news
ರಾಮನಗರ3 days ago

Ramanagar News : ರಾಮನಗರದಲ್ಲಿ ಎರಡು ಜಡೆ ಹಾಕಿಲ್ಲವೆಂದು ವಿದ್ಯಾರ್ಥಿನಿಯರ ಕೂದಲು ಕತ್ತರಿಸಿದ ಶಿಕ್ಷಕರು ಅಮಾನತು

karnataka rain
ಮಳೆ3 days ago

Karnataka Rain : ಕಾವೇರಿ ನದಿ ತೀರದಲ್ಲಿ ಪ್ರವಾಹ ಭೀತಿ; ಮುತ್ತತ್ತಿಗೆ ಪ್ರವಾಸಿಗರ ನಿಷೇಧ, ಶ್ರೀರಂಗಪಟ್ಟಣದಲ್ಲಿ ಪಿಂಡ ಪ್ರದಾನಕ್ಕೆ ಬ್ರೇಕ್

ಟ್ರೆಂಡಿಂಗ್‌