Site icon Vistara News

Infosys Narayanamurty : ಮಗಳು ಅಕ್ಷತಾ ಜತೆ ಶಾಪ್‌ಗೆ ಬಂದು ಐಸ್‌ ಕ್ರೀಂ ಸವಿದ ಇನ್ಫಿ ನಾರಾಯಣ ಮೂರ್ತಿ

Infosys Narayanamurthy icecream

ಬೆಂಗಳೂರು: ಎರಡು ದಿನದ ಹಿಂದೆ ಜಯನಗರದ ಜನಪ್ರಿಯ ಐಸ್‌ ಕ್ರೀಂ ಶಾಪ್‌ ಐಕಾನಿಕ್‌ ಕಾರ್ನರ್‌ (Ice Cream Corner Jayanagara) ಹೌಸ್‌ಗೆ ಇಬ್ಬರು ಅಪರೂಪದ ಅತಿಥಿಗಳು ಬಂದಿದ್ದರು. ಸೀದಾ ಸಾದಾ ದಿರಸಿನಲ್ಲಿದ್ದ ಅಪ್ಪ ಮತ್ತು ಮಗಳು ಆರಾಮವಾಗಿ ಕುಳಿತು ಐಸ್‌ ಕ್ರೀಂ ಸವಿದರು (Ice cream). ಆಗ ಕೆಲವರು ಯಾರಪ್ಪಾ ಇವರು ಅಂತ ಕುತೂಹಲದಿಂದ ನೋಡಿದರು. ಕೆಲವರು ಯಾರೋ ಅಪ್ಪ-ಮಗಳು ಬಂದಿದ್ದಾರೆ ಅಂದುಕೊಂಡು ಸುಮ್ಮನಾದರು. ಅಂದ ಹಾಗೆ ಆವತ್ತು ಅಲ್ಲಿಗೆ ಬಂದಿದ್ದರು ಸಾಮಾನ್ಯದವರಂತೂ ಅಲ್ಲ. ಒಬ್ಬರು ಜಗತ್ತಿನ ಅತಿ ದೊಡ್ಡ ಐಟಿ ಕಂಪನಿಗಳಲ್ಲಿ ಒಂದರ ಸ್ಥಾಪಕರು. ಇನ್ನೊಬ್ಬರು ಬ್ರಿಟನ್‌ ಪ್ರಧಾನಿಯ ಪತ್ನಿ. ಹೌದು, ಅವರೇ ಇನ್ಫೋಸಿಸ್‌ನ ಎನ್‌.ಆರ್‌. ನಾರಾಯಣಮೂರ್ತಿ (Infosys Narayanamurty) ಮತ್ತು ಅವರ ಮಗಳು ಬ್ರಿಟನ್‌ ಪ್ರಧಾನಿ ರಿಷಿ ಸುನಕ್‌ ಅವರ ಪತ್ನಿ ಅಕ್ಷತಾ ಮೂರ್ತಿ (Akshatha Murthy)

ನಾರಾಯಣಮೂರ್ತಿ ಮತ್ತು ಸುಧಾ ಮೂರ್ತಿ ದಂಪತಿ ಈಗ ಪರಮ ಶ್ರೀಮಂತರೇ ಆಗಿದ್ದರೂ ತಾವು ಬೆಳೆದು ಬಂದ ದಾರಿಯನ್ನು ಎಂದೂ ಮರೆತಿಲ್ಲ. ಹೀಗಾಗಿ ಸದಾ ಸರಳ ಜೀವನವನ್ನೇ ನಡೆಸುತ್ತಿದ್ದಾರೆ. ಇದೇ ಹವ್ಯಾಸವನ್ನು ಮಗಳಿಗೂ ಬೆಳೆಸಿದ್ದಾರೆ. ಹೀಗಾಗಿ ಅಪ್ಪ ಮತ್ತು ಮಗಳು ಅನಾಮಿಕರಂತೆ ಬಂದು ಐಸ್‌ ಕ್ರೀಂ ತಿಂದಿದ್ದರು.

ಅವರಿಬ್ಬರು ಐಸ್‌ ಕ್ರೀಂ ತಿನ್ನುತ್ತಿದ್ದುದನ್ನು ನೋಡಿದ ಆದರ್ಶ್‌ ಹೆಗ್ಡೆ ಎಂಬವರು ಫೋಟೊ ತೆಗೆದು ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ. ಕ್ಯಾಶುವಲ್‌ ಉಡುಪಿನಲ್ಲಿರುವ ಅಪ್ಪ-ಮಗಳ ಈ ಚೈತನ್ಯದ ಚಿಲುಮೆಯಂಥ ಚಿತ್ರ ಈಗ ಇಂಟರ್ನೆಟ್‌ನಲ್ಲಿ ಸೆನ್ಸೇಷನ್‌ ಆಗಿದೆ. ಹಲವಾರು ಮಂದಿ ತಂದೆ-ಮಗಳು ಐಸ್‌ಕ್ರೀಂ ಸವಿಯುವ ಫೋಟೋಗೆ ಕಮೆಂಟ್‌ ಮಾಡಿದ್ದಾರೆ, ತಾವೂ ಶೇರ್‌ ಮಾಡಿಕೊಂಡಿದ್ದಾರೆ.

Infosys Narayanamurthy Ice cream Rohan Murthy

ಬೆಂಗಳೂರಿಗೆ ಬಂದಿದ್ದ ಅಕ್ಷತಾ‌ ಮೂರ್ತಿ ಕುಟುಂಬ

ಫೆಬ್ರವರಿ 10 ರಂದು ಬೆಂಗಳೂರಿನಲ್ಲಿ ಚಿತ್ರಾ ಬ್ಯಾನರ್ಜಿ ದಿವಾಕರುಣಿ ಅವರ “An Uncommon Love: The Early Life of Sudha and Narayana Murthy” ಪುಸ್ತಕ ಬಿಡುಗಡೆ ಕಾರ್ಯಕ್ರಮವಿತ್ತು. ಇದರಲ್ಲಿ ನಾರಾಯಣಮೂರ್ತಿ ಅವರ ಇಡೀ ಕುಟುಂಬ ಭಾಗಿಯಾಗಿತ್ತು. ನಾರಾಯಣ ಮೂರ್ತಿ ಅವರು, ಅವರ ಪತ್ನಿ ಸುಧಾ ಮೂರ್ತಿ ಸಮಾರಂಭದ ವೇದಿಕೆಯಲ್ಲಿದ್ದರು. ಮೂರ್ತಿ ಅವರ ಪುತ್ರ ರೋಹನ್‌ ಮೂರ್ತಿ ಭಾಗಿಯಾಗಿದ್ದರು. ಈ ಕಾರ್ಯಕ್ರಮದಲ್ಲಿ ಭಾಗಿಯಾಗುವುದಕ್ಕಾಗಿಯೇ ಅಕ್ಷತಾ ಮೂರ್ತಿ ತಮ್ಮ ಪುತ್ರಿಯರಾದ ಅನೌಷ್ಕಾ ಮತ್ತು ಕೃಷ್ಣ ಅವರನ್ನು ಕರೆದುಕೊಂಡು ಬ್ರಿಟನ್‌ನಿಂದ ಬಂದಿದ್ದರು.

Infosys Narayanamurthy Ice cream Rohan Murthy

ಸೇಂಟ್ ಜೋಸೆಫ್ಸ್ ಕಾಲೇಜ್ ಆಫ್ ಕಾಮರ್ಸ್‌ನಲ್ಲಿ ಈ ಕಾರ್ಯಕ್ರಮವಿತ್ತು. ಕಾೃಯಕ್ರಮದಲ್ಲಿ ದಂಪತಿ ತಮ್ಮ ಮದುವೆ ಪೂರ್ವ ಮತ್ತು ನಂತರದ ದಿನಗಳನ್ನು, ಕಷ್ಟ ಸುಖಗಳನ್ನು ಹಂಚಿಕೊಂಡಿದ್ದರು. 1970ರ ದಶಕದ ಆರಂಭದಲ್ಲಿ ನಡೆದ ಮೊದಲ ಭೇಟಿ, ಪರಸ್ಪರ ಆಸಕ್ತಿಗಳ ಹಂಚೋಣ, ಮುಂದೆ ಸಂಸ್ಥೆ ಕಟ್ಟಲು ಹೆಗಲೆಣೆಯಾಗಿ ನಿಂತಿದ್ದನ್ನು ನೆನಪಿಸಿಕೊಂಡಿದ್ದರು. ಆಗ ರಾಯಣ ಮೂರ್ತಿಯವರು ಸುಧಾ ಕುಲಕರ್ಣಿ ಆಗಿದ್ದ ಸುಧಾ ಮೂರ್ತಿ ಅವರನ್ನು ಹತ್ತಿರದ ರೆಸ್ಟೊರೆಂಟ್‌ನಲ್ಲಿ ಊಟ ಕೊಡಿಸಿದ ಕಥೆಯನ್ನೂ ವಿವರಿಸಿದ್ದರು.

ಇದನ್ನೂ ಓದಿ : NR Narayana Murthy: “70 ಅಲ್ಲ, 90 ಗಂಟೆ ಕೆಲಸ…ʼʼ ನಾರಾಯಣ ಮೂರ್ತಿ ಇನ್ನೊಂದು ಬಾಂಬ್‌

ಹೀಗೆ ಬೆಂಗಳೂರಿಗೆ ಬಂದಿದ್ದ ಅಕ್ಷತಾ ಮೂರ್ತಿ ತಮ್ಮ ಹಳೆ ಬೆಂಗಳೂರಿನ ನೆನಪುಗಳನ್ನು ಮತ್ತೆ ಜೀವಂತಗೊಳಿಸುವುದಕ್ಕಾಗಿ ತಾವು ಮೊದಲು ತಿರುಗಾಡುತ್ತಿದ್ದ ಜಾಗಗಳಿಗೆ ಅಪ್ಪನನ್ನು ಕರೆದುಕೊಂಡು ಹೋಗಿದ್ದರು. ಅದರಲ್ಲಿ ಐಸ್‌ ಕ್ರೀಂ ಜಾಯಿಂಟ್‌ ಕೂಡಾ ಒಂದು.

Exit mobile version