ಮಲೇಷ್ಯಾ: ಮಲೇಷ್ಯಾದಿಂದ (Malasia) ವರದಿಯಾದ ದುರಂತ ಘಟನೆಯೊಂದರಲ್ಲಿ (Helicopter Crash) ಮಂಗಳವಾರ ಮಲೇಷ್ಯಾ ಸಶಸ್ತ್ರ ಪಡೆಗಳ ಎರಡು ಹೆಲಿಕಾಪ್ಟರ್‌ಗಳು ಗಾಳಿಯಲ್ಲಿ ಡಿಕ್ಕಿ (Air Accident) ಹೊಡೆದು ಕನಿಷ್ಠ ಹತ್ತು ಮಂದಿ ಸಾವನ್ನಪ್ಪಿದ್ದಾರೆ. ಈ ಭೀಕರ ಅಪಘಾತ ಇಂದು ಬೆಳಿಗ್ಗೆ ಲುಮುಟ್‌ನಲ್ಲಿರುವ ರಾಯಲ್ ಮಲೇಷಿಯನ್ ನೇವಿ (ಆರ್‌ಎಂಎನ್) ನೆಲೆಯಲ್ಲಿ ಸಂಭವಿಸಿದೆ ಎಂದು ವರದಿಯಾಗಿದೆ. ಸೋಶೀಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಈ ಘಟನೆಯ ವೀಡಿಯೊ (Viral video), ದುರಂತದ ಕ್ಷಣಗಳನ್ನು ತೋರಿಸಿದೆ.
🚨 BREAKING: 2 military helicopters collide in Lumut, Malaysia – 10 people killed pic.twitter.com/yMXqLMoesb
— Quick News Alerts (@QuickNewsAlerts) April 23, 2024
ಮಧ್ಯ ಆಕಾಶದಲ್ಲಿ ಉಂಟಾದ ಘರ್ಷಣೆಯ ವೀಡಿಯೊ ಇಂಟರ್ನೆಟ್‌ನಲ್ಲಿ ಕಾಣಿಸಿಕೊಂಡಿತು. ಮಿಲಿಟರಿ ಹೆಲಿಕಾಪ್ಟರ್‌ಗಳ ವಾಯು ಹಾರಾಟದ ಕುಶಲತೆಯನ್ನು ಪ್ರದರ್ಶಿಸುತ್ತಿರುವಾಗ ಅವುಗಳಲ್ಲಿ ಎರಡು ಡಿಕ್ಕಿ ಹೊಡೆದುಕೊಂಡವು. ಸ್ಥಳೀಯ ಸುದ್ದಿವಾಹಿನಿಗಳ ಆರಂಭಿಕ ದೃಢೀಕೃತ ವರದಿಗಳ ಪ್ರಕಾರ, ಎರಡು ಹೆಲಿಕಾಪ್ಟರ್‌ಗಳಲ್ಲಿದ್ದವರಲ್ಲಿ ಯಾರೂ ಅಪಘಾತದಲ್ಲಿ ಬದುಕುಳಿಯಲಿಲ್ಲ.
ಎರಡೂ ಹೆಲಿಕಾಪ್ಟರ್‌ಗಳಲ್ಲಿದ್ದ ಚಾಲಕರು ತರಬೇತಿ ಪಡೆಯುತ್ತಿದ್ದವರಾಗಿದ್ದರು. ಕೆಲವು ತರಬೇತಿ ವಿದ್ಯಾರ್ಥಿಗಳು ಹಾಗೂ ತರಬೇತಿದಾರರು ಇವುಗಳಲ್ಲಿದ್ದರು. ಸ್ಥಳೀಯ ವರದಿಗಳ ಪ್ರಕಾರ, M503-3 ಮಾರಿಟೈಮ್ ಆಪರೇಷನ್ಸ್ ಹೆಲಿಕಾಪ್ಟರ್ (HOM) ಏಳು ಸಿಬ್ಬಂದಿಯನ್ನು ಹೊಂದಿತ್ತು. ಆದರೆ ಇನ್ನೊಂದು, M502-6, ಮೂರು ಸದಸ್ಯರನ್ನು ಹೊಂದಿತ್ತು. ಎರಡೂ ಹೆಲಿಕಾಪ್ಟರ್‌ಗಳು ಮೇ 3-5ರಿಂದ ನಡೆಯಲಿರುವ ನೌಕಾಪಡೆಯ ದಿನ ಆಚರಣೆಗೆ ಸಂಬಂಧಿಸಿದ ತಾಲೀಮನ್ನು ಪಡೆಯುತ್ತಿದ್ದವು.
ಇದನ್ನೂ ಓದಿ: Viral Video: ಲ್ಯಾಂಬೋರ್ಗಿನಿ ಕಾರಿನ ಮೇಲೆ ಕುಣಿದು ಕುಪ್ಪಳಿಸಿದ ಮಹಿಳೆ; ಕಾರಿನ ಸ್ಥಿತಿ ನೋಡಿ ಮರುಗಿದ ನೆಟ್ಟಿಗರು!