Viral video: ಸೇನಾ ಹೆಲಿಕಾಪ್ಟರ್‌ಗಳ ಭಯಾನಕ ಡಿಕ್ಕಿ; 10 ಸಾವು - Vistara News

ವೈರಲ್ ನ್ಯೂಸ್

Viral video: ಸೇನಾ ಹೆಲಿಕಾಪ್ಟರ್‌ಗಳ ಭಯಾನಕ ಡಿಕ್ಕಿ; 10 ಸಾವು

Viral video: ಮಧ್ಯ ಆಕಾಶದಲ್ಲಿ ಉಂಟಾದ ಘರ್ಷಣೆಯ ವೀಡಿಯೊ ಇಂಟರ್ನೆಟ್‌ನಲ್ಲಿ ಕಾಣಿಸಿಕೊಂಡಿತು. ಮಿಲಿಟರಿ ಹೆಲಿಕಾಪ್ಟರ್‌ಗಳ ವಾಯು ಹಾರಾಟದ ಕುಶಲತೆಯನ್ನು ಪ್ರದರ್ಶಿಸುತ್ತಿರುವಾಗ ಅವುಗಳಲ್ಲಿ ಎರಡು ಡಿಕ್ಕಿ ಹೊಡೆದುಕೊಂಡವು. ಎರಡು ಹೆಲಿಕಾಪ್ಟರ್‌ಗಳಲ್ಲಿದ್ದವರಲ್ಲಿ ಯಾರೂ ಅಪಘಾತದಲ್ಲಿ ಬದುಕುಳಿಯಲಿಲ್ಲ.

VISTARANEWS.COM


on

malasia helicopter crash viral video
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಮಲೇಷ್ಯಾ: ಮಲೇಷ್ಯಾದಿಂದ (Malasia) ವರದಿಯಾದ ದುರಂತ ಘಟನೆಯೊಂದರಲ್ಲಿ (Helicopter Crash) ಮಂಗಳವಾರ ಮಲೇಷ್ಯಾ ಸಶಸ್ತ್ರ ಪಡೆಗಳ ಎರಡು ಹೆಲಿಕಾಪ್ಟರ್‌ಗಳು ಗಾಳಿಯಲ್ಲಿ ಡಿಕ್ಕಿ (Air Accident) ಹೊಡೆದು ಕನಿಷ್ಠ ಹತ್ತು ಮಂದಿ ಸಾವನ್ನಪ್ಪಿದ್ದಾರೆ. ಈ ಭೀಕರ ಅಪಘಾತ ಇಂದು ಬೆಳಿಗ್ಗೆ ಲುಮುಟ್‌ನಲ್ಲಿರುವ ರಾಯಲ್ ಮಲೇಷಿಯನ್ ನೇವಿ (ಆರ್‌ಎಂಎನ್) ನೆಲೆಯಲ್ಲಿ ಸಂಭವಿಸಿದೆ ಎಂದು ವರದಿಯಾಗಿದೆ. ಸೋಶೀಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿರುವ ಈ ಘಟನೆಯ ವೀಡಿಯೊ (Viral video), ದುರಂತದ ಕ್ಷಣಗಳನ್ನು ತೋರಿಸಿದೆ.

ಮಧ್ಯ ಆಕಾಶದಲ್ಲಿ ಉಂಟಾದ ಘರ್ಷಣೆಯ ವೀಡಿಯೊ ಇಂಟರ್ನೆಟ್‌ನಲ್ಲಿ ಕಾಣಿಸಿಕೊಂಡಿತು. ಮಿಲಿಟರಿ ಹೆಲಿಕಾಪ್ಟರ್‌ಗಳ ವಾಯು ಹಾರಾಟದ ಕುಶಲತೆಯನ್ನು ಪ್ರದರ್ಶಿಸುತ್ತಿರುವಾಗ ಅವುಗಳಲ್ಲಿ ಎರಡು ಡಿಕ್ಕಿ ಹೊಡೆದುಕೊಂಡವು. ಸ್ಥಳೀಯ ಸುದ್ದಿವಾಹಿನಿಗಳ ಆರಂಭಿಕ ದೃಢೀಕೃತ ವರದಿಗಳ ಪ್ರಕಾರ, ಎರಡು ಹೆಲಿಕಾಪ್ಟರ್‌ಗಳಲ್ಲಿದ್ದವರಲ್ಲಿ ಯಾರೂ ಅಪಘಾತದಲ್ಲಿ ಬದುಕುಳಿಯಲಿಲ್ಲ.

ಎರಡೂ ಹೆಲಿಕಾಪ್ಟರ್‌ಗಳಲ್ಲಿದ್ದ ಚಾಲಕರು ತರಬೇತಿ ಪಡೆಯುತ್ತಿದ್ದವರಾಗಿದ್ದರು. ಕೆಲವು ತರಬೇತಿ ವಿದ್ಯಾರ್ಥಿಗಳು ಹಾಗೂ ತರಬೇತಿದಾರರು ಇವುಗಳಲ್ಲಿದ್ದರು. ಸ್ಥಳೀಯ ವರದಿಗಳ ಪ್ರಕಾರ, M503-3 ಮಾರಿಟೈಮ್ ಆಪರೇಷನ್ಸ್ ಹೆಲಿಕಾಪ್ಟರ್ (HOM) ಏಳು ಸಿಬ್ಬಂದಿಯನ್ನು ಹೊಂದಿತ್ತು. ಆದರೆ ಇನ್ನೊಂದು, M502-6, ಮೂರು ಸದಸ್ಯರನ್ನು ಹೊಂದಿತ್ತು. ಎರಡೂ ಹೆಲಿಕಾಪ್ಟರ್‌ಗಳು ಮೇ 3-5ರಿಂದ ನಡೆಯಲಿರುವ ನೌಕಾಪಡೆಯ ದಿನ ಆಚರಣೆಗೆ ಸಂಬಂಧಿಸಿದ ತಾಲೀಮನ್ನು ಪಡೆಯುತ್ತಿದ್ದವು.

ಇದನ್ನೂ ಓದಿ: Viral Video: ಲ್ಯಾಂಬೋರ್ಗಿನಿ ಕಾರಿನ ಮೇಲೆ ಕುಣಿದು ಕುಪ್ಪಳಿಸಿದ ಮಹಿಳೆ; ಕಾರಿನ ಸ್ಥಿತಿ ನೋಡಿ ಮರುಗಿದ ನೆಟ್ಟಿಗರು!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೀಡೆ

Hardik Pandya: ಪ್ರೇಯಸಿಯ ದೋಖಾದ ಸುಳಿವು ಮೊದಲೇ ಇತ್ತಾ? ಬಹುತೇಕ ಆಸ್ತಿಯನ್ನು ಪೋಷಕರ ಹೆಸರಲ್ಲಿಟ್ಟ ಚಾಲಾಕಿ ಹಾರ್ದಿಕ್!

Hardik Pandya: ಅಹಮದಾಬಾದ್ ಮಿರರ್ ವರದಿ ಪ್ರಕಾರ, ವಿಚ್ಛೇದನದ ಸಂದರ್ಭದಲ್ಲಿ ಹಾರ್ದಿಕ್ ಪಾಂಡ್ಯ ತನ್ನ ಆಸ್ತಿಯಲ್ಲಿ ಶೇ. 70 ಪ್ರತಿಶತವನ್ನು ನತಾಶಾಗೆ ನೀಡಬೇಕಾಗಬಹುದು. ಏಕೆಂದರೆ ಪಾಂಡ್ಯ ಅವರ ಹೆಂಡತಿ ಸರ್ಬಿಯಾ ದೇಶದವರು. ಹೀಗಾಗಿ ಅವರು ಜೀವನಾಂಶವನ್ನು ಸರ್ಬಿಯನ್ ದಿನಾರ್​ನಲ್ಲಿ ಪಡೆದುಕೊಳ್ಳುವ ಸಾಧ್ಯತೆಯಿದೆ ಎನ್ನಲಾಗಿದೆ. ಆದರೆ ಇದು ಅಸಾಧ್ಯ ಎನ್ನುವಂತಿದೆ.

VISTARANEWS.COM


on

Hardik Pandya
Koo

ಮುಂಬಯಿ: ಆಲ್​ರೌಂಡರ್​ ಹಾರ್ದಿಕ್ ಪಾಂಡ್ಯ(Hardik Pandya) ಅವರು ಪತ್ನಿ, ಸರ್ಬಿಯಾದ ನಟಿ ನತಾಶಾ ಸ್ಟಾನ್‌ಕೋವಿಕ್‌(Natasa Stankovic) ಅವರಿಗೆ ವಿಚ್ಛೇದನ ನೀಡಿದರೆ(Hardik Pandya and Natasa Stankovic divorce) ಪತ್ನಿಗೆ ಜೀವನಾಂಶವಾಗಿ ತಮ್ಮ ಆಸ್ತಿಯಲ್ಲಿ ಶೇ. 70 ರಷ್ಟು ಭಾಗವನ್ನು ನೀಡಬೇಕಾಗಬಹುದು ಎಂದು ಹೇಳಲಾಗಿದೆ. ಆದರೆ, ಚಾಲಾಕಿ ಪಾಂಡ್ಯ ಅವರ ಬುದ್ಧಿವಂತಿಕೆಯಿಂದ ಪತ್ನಿಗೆ ನಯಾ ಪೈಸೆಯೂ ಸಿಗುವುದು ಅನುಮಾನ ಎನ್ನುವಂತಿದೆ.

ಅಹಮದಾಬಾದ್ ಮಿರರ್ ವರದಿ ಪ್ರಕಾರ, ವಿಚ್ಛೇದನದ ಸಂದರ್ಭದಲ್ಲಿ ಹಾರ್ದಿಕ್ ಪಾಂಡ್ಯ ತನ್ನ ಆಸ್ತಿಯಲ್ಲಿ ಶೇ. 70 ಪ್ರತಿಶತವನ್ನು ನತಾಶಾಗೆ ನೀಡಬೇಕಾಗಬಹುದು. ಏಕೆಂದರೆ ಪಾಂಡ್ಯ ಅವರ ಹೆಂಡತಿ ಸರ್ಬಿಯಾ ದೇಶದವರು. ಹೀಗಾಗಿ ಅವರು ಜೀವನಾಂಶವನ್ನು ಸರ್ಬಿಯನ್ ದಿನಾರ್​ನಲ್ಲಿ ಪಡೆದುಕೊಳ್ಳುವ ಸಾಧ್ಯತೆಯಿದೆ ಎನ್ನಲಾಗಿದೆ. ಆದರೆ ಇದು ಅಸಾಧ್ಯ ಎನ್ನುವಂತಿದೆ.

ಹೌದು, ಹಾರ್ದಿಕ್​ ಪಾಂಡ್ಯ ಅವರು ಮುಂಬೈಯಲ್ಲಿ ವಿಲಾಸಿ ಜೀವನ ನಡೆಸುತ್ತಿದ್ದರೂ ಕೂಡ ತಮ್ಮ ಹೆಸರಿನಲ್ಲಿ ಹೆಚ್ಚು ಆಸ್ತಿಯನ್ನು ಮಾಡಿಲ್ಲ. ಬಹುತೇಕ ಆಸ್ತಿಯನ್ನು ತನ್ನ ಪೋಷಕರ ಹೆಸರಿನಲ್ಲಿ ಮಾಡಿಟ್ಟಿದ್ದಾರೆ. ಈ ವಿಚಾರವನ್ನು ಪಾಂಡ್ಯ ಹಿಂದೊಮ್ಮೆ ಸಂದರ್ಶನದಲ್ಲಿ ಹೇಳಿದ್ದರು. ಈ ಸಂದರ್ಶನದಲ್ಲಿ ಮನಬಿಚ್ಚಿ ಮಾತನಾಡಿದ್ದ ಪಾಂಡ್ಯ, “ನಾನು ಜಾಹಿರಾತು, ಕ್ರಿಕೆಟ್​ ಸೇರಿ ಇನ್ನಿತರ ಮೂಲಗಳಿಂದ ಎಷ್ಟೇ ಹಣ ಸಂಪಾದಿಸಿದರೂ ಕೂಡ ಇದನೆಲ್ಲ ನನ್ನ ಹೆಸರಿನಲ್ಲಿ ಇಟ್ಟಿಲ್ಲ. ನನ್ನ ಬಳಿ ದುಬಾರಿ ಕಾರು, ಬಂಗಲೆ ಇದ್ದರೂ ಕೂಡ ಇದೆಲ್ಲ ನನ್ನ ಸಹೋದರ, ತಂದೆ ಮತ್ತು ತಾಯಿಯ ಹೆಸರಿನಲ್ಲಿದೆ. ಹೀಗಾಗಿ ನಾನು ಯಾವುದೇ ಸಮಸ್ಯೆ ಬಂದರೂ ಕೂಡ ಯಾರೀಗೂ ನನ್ನ ಆಸ್ತಿಯಲ್ಲಿ ಶೇ. 50ರಷ್ಟು ಜೀವನಾಂಶ ಕೊಡುವ ಪ್ರಮೇಯವೇ ಬರುವುದಿಲ್ಲ ಎಂದು ಹೇಳಿದ್ದರು. ಈ ವಿಡಿಯೊ ಈಗ ವೈರಲ್​ ಆಗಿದ್ದು ಪಾಂಡ್ಯಗೆ ಜೀವನದಲ್ಲಿ ಮುದೊಂದು ದಿನ ಪ್ರೇಯಸಿಯಿಂದ ದೋಖಾ ಎದುರಾಗುವ ಸುಳಿವು ಮೊದಲೇ ತಿಳಿದಿತ್ತಾ? ಎನ್ನುವ ನಿಗೂಡ ಪ್ರಶ್ನೆಯೊಂದು ಹುಟ್ಟಿಕೊಂಡಿದೆ.

ಇದನ್ನೂ ಓದಿ Hardik Pandya: ಪತ್ನಿಗೆ ಶೇ.70ರಷ್ಟು ಆಸ್ತಿ ವರ್ಗಾಯಿಸಲು ಮುಂದಾದ ಹಾರ್ದಿಕ್​ ಪಾಂಡ್ಯ; ಶೀಘ್ರದಲ್ಲೇ ವಿಚ್ಛೇದನ!

ಹಾರ್ದಿಕ್​ ಪಾಂಡ್ಯ ಅವರ ಅಂದಿನ ಸಂದರ್ಶನ ಕಂಡ ನೆಟ್ಟಿಗರು ಇದೀಗ ವಿಭಿನ್ನ ಕಮೆಂಟ್​ ಮಾಡಿದ್ದಾರೆ. ನೀವು ನಿಜವಾಗಿಯೂ ಕೂಡ ಗುಜರಾತಿ ಎನ್ನುವುದು ಸಾಬೀತುಪಡಿಸಿದ್ದೀರಿ ಎಂದಿದ್ದಾರೆ. ನೆಟ್ಟಿಗರು ಈ ಮಾತು ಹೇಳಲು ಕೂಡ ಒಂದು ಕಾರಣವಿದೆ. ಗುಜರಾತಿಗಳು ಪಕ್ಕಾ ಲೆಕ್ಕಾಚಾರದ ಜೀವನ ನಡೆಸುವುದುರಲ್ಲಿ ಎತ್ತಿದ ಕೈ ಇದೇ ಕಾರಣದಿಂದ ಈ ಕಮೆಂಟ್​ ಮಾಡಿದ್ದಾರೆ.

ಹಾರ್ದಿಕ್‌ ಮತ್ತು ನತಾಶಾ ಕಳೆದ 2020ರಲ್ಲೇ ರಿಜಿಸ್ಟರ್‌ ರೀತಿಯಲ್ಲಿ ವಿವಾಹವಾಗಿದ್ದರು. ಮದುವೆಗೂ ಮುನ್ನವೇ ನತಾಶಾ ಅವರನ್ನು ಪಾಂಡ್ಯ ಗರ್ಭಿಣಿ ಮಾಡಿದ್ದರು. ಈ ಜೋಡಿಗೆ ಒಬ್ಬ ಪುತ್ರನಿದ್ದಾನೆ. ಈತನ ಹೆಸರು ಅಗಸ್ತ್ಯ. ಕಳೆದ ವರ್ಷ ಫೆ.14 ರಂದು ರಾಜಸ್ಥಾನದ ಉದಯ್‌ಪುರದಲ್ಲಿ ಕ್ರಿಷ್ಚಿಯನ್‌ ಸಂಪ್ರದಾಯದಂತೆ ಹಾರ್ದಿಕ್‌ ಮತ್ತು ನತಾಶಾ ಮತ್ತೊಮ್ಮೆ ಅದ್ದೂರಿಯಾಗಿ ಪುನರ್‌ ವಿವಾಹವಾಗಿದ್ದರು. ಕುಟುಂಬಸ್ಥರು ಮತ್ತು ಗೆಳೆಯರ ಸಮ್ಮುಖದಲ್ಲಿ ಮತ್ತೊಮ್ಮೆ ವಿವಾಹವಾಗಿದ್ದರು. ಇವರ ವಿವಾಹ ಸಮಾರಂಭದಲ್ಲಿ ಕೊಹ್ಲಿ-ಅನುಷ್ಕಾ, ರಾಹುಲ್‌-ಅಥಿಯಾ, ರಾಕಿಣಗ್​ ಸ್ಟಾರ್ ಯಶ್​ ಸೇರಿ ಹಲವು ಗಣ್ಯರೂ ಭಾಗಿಯಾಗಿದ್ದರು.

ಮಾರ್ಚ್ 4 ರಂದು ಪತ್ನಿ ನತಾಶಾ ಅವರ ಹುಟ್ಟುಹಬ್ಬವಿತ್ತು. ಆದರೆ, ಪತ್ನಿಯ ಹುಟ್ಟುಹಬ್ಬಕ್ಕೆ ಹಾರ್ದಿಕ್ ಯಾವುದೇ ಶುಭ ಹಾರೈಕೆಯ ಪೋಸ್ಟ್ ಮಾಡಿಲ್ಲ. ಕೆಲ ದಿನಗಳ ಹಿಂದೆ ನತಾಶಾ ಅವರು ಸಿಂಗಲ್​ ಫೋಟೋವನ್ನು ಮತ್ತು ಮಗನ ಜತೆಗಿನ ಫೋಟೊವನ್ನು ಮಾತ್ರ ಪೋಸ್ಟ್​ ಮಾಡಿದ್ದರು. ಇದೆನೆಲ್ಲ ನೋಡುವಾಗ ಈ ಜೋಡಿ ಸದ್ಯದಲ್ಲೇ ದೂರವಾಗು ಸೂಚನೆಯೊಂದು ಲಭಿಸಿದೆ. ಹಾರ್ದಿಕ್ ಜತೆಗಿರುವ ಇತ್ತೀಚಿನ ಎಲ್ಲ ಪೋಸ್ಟ್‌ಗಳನ್ನು ತೆಗೆದುಹಾಕಿದ್ದಾರೆ ಎಂದು ಹೇಳಲಾಗಿದೆ. 

ಐಪಿಎಲ್​ ಪಂದ್ಯದಲ್ಲಿಯೂ ನತಾಶಾ ಸ್ಟೇಡಿಯಂಗೆ ಬಂದು ಗಂಡನಿಗೆ ಬೆಂಬಲ ಸೂಚಿಸಿದ್ದರು. ಆದರೆ ಈ ಬಾರಿ ಮುಂಬೈ ತಂಡವನ್ನು ಮುನ್ನಡೆಸಿ ವೇಳೆ ಒಮ್ಮೆಯೂ ಕೂಡ ನತಾಶಾ ಪಂದ್ಯ ನೋಡಲು ಸ್ಟೇಡಿಯಂಗೆ ಬಂದಿರಲಿಲ್ಲ. ಅಲ್ಲದೆ ನತಾಶಾ ಅವರು ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ತಮ್ಮ ಹೆಸರನ್ನು ಕೂಡ ಬದಲಿಸಿದ್ದಾರೆ ಹೀಗಾಗಿ ಈ ಜೋಡಿ ಬೇರ್ಪಡಲಿದ್ದಾರೆ ಎನ್ನಲಾಗಿದೆ. ಆದರೆ ಈ ಕುರಿತು ಪಾಂಡ್ಯ ಆಗಲಿ ನತಾಶ ಇದುವರೆಗೆ ಯಾವುದೆ ಪ್ರತಿಕ್ರಿಯೆ ನೀಡಿಲ್ಲ.

Continue Reading

ವೈರಲ್ ನ್ಯೂಸ್

Google maps: ರಸ್ತೆಯೆಂದು ಕೊಂಡೊಯ್ದು ನದಿಗಿಳಿಸಿದ ಗೂಗಲ್‌ ಮ್ಯಾಪ್!‌ ನೀರು ಕುಡಿದು ಪಾರಾದ ಪ್ರಯಾಣಿಕರು

Google maps: ಹೈದರಾಬಾದ್‌ನ ಪ್ರವಾಸಿ ತಂಡವೊಂದು ದಕ್ಷಿಣ ಕೇರಳ ಜಿಲ್ಲೆಯ ಕುರುಪ್ಪಂಥಾರ ಬಳಿ ನ್ಯಾವಿಗೇಟ್ ಮಾಡಲು ಗೂಗಲ್ ಮ್ಯಾಪ್‌ಗಳನ್ನು ಬಳಸುತ್ತಿತ್ತು. ಗೂಗಲ್‌ ಮ್ಯಾಪ್‌ ಅವರನ್ನು ನೀರಿನಿಂದ ತುಂಬಿಕೊಂಡಿದ್ದ ಹೊಳೆಯೊಳಗೆ ಕರೆದುಕೊಂಡು ಹೋಯಿತು. ಕಾರಿನಲ್ಲಿ ಮಹಿಳೆ ಸೇರಿದಂತೆ ನಾಲ್ವರ ಗುಂಪು ಆಲಪ್ಪುಳ ಕಡೆಗೆ ಹೋಗುತ್ತಿತ್ತು. ಶುಕ್ರವಾರ ತಡರಾತ್ರಿ ಈ ಘಟನೆ ನಡೆದಿದೆ.

VISTARANEWS.COM


on

google maps kerala river
Koo

ಕೊಟ್ಟಾಯಂ, ಕೇರಳ: ಗೂಗಲ್‌ ಮ್ಯಾಪ್ಸ್ (Google maps) ಬಳಸಿ ಪ್ರಯಾಣಿಸುತ್ತಿದ್ದ ಪ್ರವಾಸಿ (tourists) ತಂಡವೊಂದು ಕೇರಳದಲ್ಲಿ (Kerala) ಸೀದಾ ಹೋಗಿ ನದಿನೀರಿಗೆ (River) ಇಳಿದಿದೆ. ಕಾರು ಮುಳುಗಿದೆ; ಆದರೆ ಪ್ರಯಾಣಿಕರು ಹೇಗೋ ಪಾರಾಗಿದ್ದಾರೆ.

ಹೈದರಾಬಾದ್‌ನ ಪ್ರವಾಸಿ ತಂಡವೊಂದು ದಕ್ಷಿಣ ಕೇರಳ ಜಿಲ್ಲೆಯ ಕುರುಪ್ಪಂಥಾರ ಬಳಿ ನ್ಯಾವಿಗೇಟ್ ಮಾಡಲು ಗೂಗಲ್ ಮ್ಯಾಪ್‌ಗಳನ್ನು ಬಳಸುತ್ತಿತ್ತು. ಗೂಗಲ್‌ ಮ್ಯಾಪ್‌ ಅವರನ್ನು ನೀರಿನಿಂದ ತುಂಬಿಕೊಂಡಿದ್ದ ಹೊಳೆಯೊಳಗೆ ಕರೆದುಕೊಂಡು ಹೋಯಿತು. ಕಾರಿನಲ್ಲಿ ಮಹಿಳೆ ಸೇರಿದಂತೆ ನಾಲ್ವರ ಗುಂಪು ಆಲಪ್ಪುಳ ಕಡೆಗೆ ಹೋಗುತ್ತಿತ್ತು. ಶುಕ್ರವಾರ ತಡರಾತ್ರಿ ಈ ಘಟನೆ ನಡೆದಿದೆ.

ಅವರು ಪ್ರಯಾಣಿಸುತ್ತಿದ್ದ ರಸ್ತೆಯ ಪಕ್ಕ ಹೊಳೆಯಿದ್ದು, ಭಾರೀ ಮಳೆಯಿಂದಾಗಿ ರಸ್ತೆ ಕೂಡ ತುಂಬಿ ಹರಿಯುತ್ತಿತ್ತು. ಪ್ರವಾಸಿಗರಿಗೆ ಈ ಪ್ರದೇಶದ ಪರಿಚಯವಿಲ್ಲದ ಕಾರಣ, ಅವರು ಗೂಗಲ್ ಮ್ಯಾಪ್ ಬಳಸಿ ನ್ಯಾವಿಗೇಟ್ ಮಾಡುತ್ತಿದ್ದರು. ಅದು ಅವರನ್ನು ನೇರವಾಗಿ ನೀರಿನೊಳಗೇ ಕೊಂಡೊಯ್ದಿತ್ತು!

ಹತ್ತಿರದ ಪೊಲೀಸ್ ಗಸ್ತು ಘಟಕ ಮತ್ತು ಸ್ಥಳೀಯ ನಿವಾಸಿಗಳ ರಕ್ಷಣಾ ಪ್ರಯತ್ನಗಳಿಂದ ನಾಲ್ವರು ಅಪಾಯವಿಲ್ಲದೆ ಪಾರಾಗುವಲ್ಲಿ ಯಶಸ್ವಿಯಾದರು. ಆದರೆ ಅವರ ವಾಹನ ನೀರಿನಲ್ಲಿ ಮುಳುಗಿದೆ. “ವಾಹನವನ್ನು ಹೊರತೆಗೆಯಲು ಪ್ರಯತ್ನಗಳು ನಡೆಯುತ್ತಿವೆ” ಎಂದು ಕಡುತುರುತಿ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕೇರಳದಲ್ಲಿ ಇಂತಹ ಘಟನೆ ವರದಿಯಾಗುತ್ತಿರುವುದು ಇದೇ ಮೊದಲಲ್ಲ. ಕಳೆದ ವರ್ಷ ಅಕ್ಟೋಬರ್‌ನಲ್ಲಿ, ಇಬ್ಬರು ಯುವ ವೈದ್ಯರು ಹೀಗೇ ಒಂದು ಕಾರು ಅಪಘಾತದಲ್ಲಿ ಸಾವನ್ನಪ್ಪಿದ್ದರು. ಅವರು Google map ನಿರ್ದೇಶನಗಳನ್ನು ಅನುಸರಿಸಿ ಕಾರು ಓಡಿಸಿ ನದಿಗೆ ಬಿದ್ದಿದ್ದರು. ಈ ಘಟನೆಯ ನಂತರ, ಕೇರಳ ಪೊಲೀಸರು ಮಳೆಗಾಲದಲ್ಲಿ ಈ ತಂತ್ರಜ್ಞಾನವನ್ನು ಬಳಸುವ ಬಗ್ಗೆ ಎಚ್ಚರಿಕೆಯ ಮಾರ್ಗಸೂಚಿಗಳನ್ನು ನೀಡಿದ್ದರು.

ಬೆಂಗಳೂರಿಗರಿಗೆ ಗುಡ್‌ ನ್ಯೂಸ್;‌ ಶೀಘ್ರವೇ ಬರಲಿದೆ ಹೊಸ ನ್ಯಾವಿಗೇಟಿಂಗ್‌ ಆ್ಯಪ್‌

ಬೆಂಗಳೂರು: ಹೊಸತನ, ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವುದರಲ್ಲಿ ಸಿಲಿಕಾನ್‌ ಸಿಟಿ ಬೆಂಗಳೂರು (Bengaluru) ಎಂದಿಗೂ ಹಿಂದೆಬಿದ್ದಿಲ್ಲ. ಇದೇ ಕಾರಣಕ್ಕಾಗಿ ಬೆಂಗಳೂರು ದೇಶದ ನಾನಾ ಭಾಗಗಳ ಜನರನ್ನು ಕೈಬೀಸಿ ಕರೆಯುತ್ತದೆ. ಇದಕ್ಕೆ ನಿದರ್ಶನ ಎಂಬಂತೆ ಬೆಂಗಳೂರು ಈಗ ಮತ್ತೊಂದು ಹೊಸತನಕ್ಕೆ ತೆರೆದುಕೊಳ್ಳುತ್ತಿದೆ. ಹೌದು, ರಾಜ್ಯ ರಾಜಧಾನಿಯಲ್ಲಿ ಶೀಘ್ರವೇ ಪ್ರಯಾಣಿಕರ (Commuters) ಅನುಕೂಲಕ್ಕಾಗಿ ಹೊಸ ನ್ಯಾವಿಗೇಟಿಂಗ್‌ ಆ್ಯಪ್‌ (Navigating App) ಬರಲಿದೆ. ಬೆಂಗಳೂರಿನಲ್ಲಿ ಸಂಚರಿಸುವರಿಗೆ ಇದು ಉತ್ತಮ ‘ಮಾರ್ಗ’ದರ್ಶನ ನೀಡಲಿದೆ.

ಬೆಂಗಳೂರಿನಲ್ಲಿ ಸಂಚರಿಸುವವರಿಗೆ ಅನುಕೂಲವಾಗಲಿ, ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಬರಲಿ ಎಂಬ ದೃಷ್ಟಿಯಿಂದ ಬೆಂಗಳೂರು ಟ್ರಾಫಿಕ್‌ ಪೊಲೀಸ್‌ ಇಲಾಖೆಯು ಮ್ಯಾಪ್‌ಪ್ಲಸ್‌ ಮ್ಯಾಪ್‌ಮೈಇಂಡಿಯಾ (Mappls MapmyIndia) ಎಂಬ ಕಂಪನಿಯ ಜತೆ ಒಡಂಡಿಕೆ (MoU) ಮಾಡಿಕೊಂಡಿದೆ. ಈಗಾಗಲೇ ಮ್ಯಾಪ್‌ಪ್ಲಸ್‌ ಮ್ಯಾಪ್‌ಮೈಇಂಡಿಯಾ ಕಂಪನಿಯು ಆ್ಯಪ್‌ ಅಭಿವೃದ್ಧಿಪಡಿಸಿದ್ದು, ಶೀಘ್ರದಲ್ಲೇ ಸಾರ್ವಜನಿಕರಿಗೆ ಲಭ್ಯವಿರಲಿದೆ ಎಂದು ಹೇಳಲಾಗುತ್ತಿದೆ.

ಹೊಸ ಆ್ಯಪ್‌ನಿಂದ ಏನೆಲ್ಲ ಅನುಕೂಲ?

ಹೊಸ ಆ್ಯಪ್‌ನಿಂದ ಸಾರ್ವಜನಿಕರಿಗೆ ಹಲವು ರೀತಿಯಲ್ಲಿ ಅನುಕೂಲವಾಗಲಿದೆ. ಕಡಿಮೆ ಟ್ರಾಫಿಕ್‌ ಇರುವ ರಸ್ತೆಗಳನ್ನು ಸೂಚಿಸುವುದು, ರಿಯಲ್‌ ಟೈಮ್‌ ಆಗಿ ನ್ಯಾವಿಗೇಟ್‌ ಮಾಡುವುದು, ಯಾವ ರಸ್ತೆಗಳು ಕ್ಲೋಸ್‌ ಆಗಿವೆ, ಯಾವ ಕಡೆ ಹೋದರೆ ಉತ್ತಮ ರಸ್ತೆ ಇದೆ, ಯಾವ ಮಾರ್ಗಗಳು ಇಕ್ಕಟ್ಟವಾಗಿವೆ ಎಂಬುದು ಸೇರಿ ಪ್ರಯಾಣಿಕರಿಗೆ ಹಲವು ಮಾಹಿತಿ ನೀಡಲಿದೆ. ಇದು ಗೂಗಲ್‌ ಮ್ಯಾಪ್‌ಗೆ ಪರ್ಯಾಯವಾಗಿ ಹಾಗೂ ಪ್ರಯಾಣಿಕರಿಗೆ ಇನ್ನಷ್ಟು ಅನುಕೂಲವಾಗಲಿ ಎಂಬುದಾಗಿ ತಿಳಿದುಬಂದಿದೆ.

“ಹೊಸ ಆ್ಯಪ್‌ನಿಂದ ಪ್ರಯಾಣಿಕರಿಗೆ ಮಾತ್ರವಲ್ಲ ಟ್ರಾಫಿಕ್‌ ಪೊಲೀಸರಿಗೆ ಇದು ಅನುಕೂಲವಾಗಲಿದೆ. ಎಲ್ಲೆಲ್ಲಿ ಟ್ರಾಫಿಕ್‌ ಇದೆ ಎಂಬುದನ್ನು ಆ್ಯಪ್‌ ಮೂಲಕವೇ ಪತ್ತೆಹಚ್ಚಿ, ಆ ಸಂಚಾರ ದಟ್ಟಣೆಯನ್ನು ನಿಯಂತ್ರಿಸಬಹುದಾಗಿದೆ. ರೋಡ್‌ಬ್ಲಾಕ್‌ಗಳು, ಗುಂಡಿಗಳು, ದುರಸ್ತಿ ಕೆಲಸ ನಡೆಯುತ್ತಿರುವ ರಸ್ತೆಗಳ ಕುರಿತು ಕೂಡ ಮಾಹಿತಿ ನೀಡಲಿದೆ” ಎಂಬುದಾಗಿ ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: Google: 10 ಲಕ್ಷ ಕೋಟಿ ರೂ. ಮೌಲ್ಯದ ಪಿಂಚಣಿ ಡೇಟಾ ಡಿಲೀಟ್‌ ಮಾಡಿ Sorry ಎಂದ ಗೂಗಲ್; ಮುಂದೇನು?

Continue Reading

ಉತ್ತರ ಕನ್ನಡ

Traffic violation : ನಗೆಪಾಟಲಾದ ಟ್ರಾಫಿಕ್‌ ಪೊಲೀಸರು; ಹೆಲ್ಮೆಟ್ ಹಾಕಿಲ್ಲವೆಂದು ಟಿಪ್ಪರ್ ಲಾರಿ ಚಾಲಕನಿಗೆ 500 ರೂ. ದಂಡ

Traffic violation : ಬೈಕ್‌ ಓಡಿಸುವಾಗ ಸವಾರರು ಹೆಲ್ಮೆಟ್‌ ಹಾಕಿಲ್ಲವೆಂದರೆ ದಂಡ ವಿಧಿಸುವುದು ಮಾಮೂಲಿ. ಆದರೆ ಹೊನ್ನಾವರದಲ್ಲಿ ಟಿಪ್ಪರ್‌ ಲಾರಿ ಚಾಲಕ ಹೆಲ್ಮೆಟ್‌ ಧರಿಸದೇ ಇರುವುದಕ್ಕೆ ದಂಡ ತೆತ್ತಿದ್ದಾನೆ. ಟ್ರಾಫಿಕ್‌ ಪೊಲೀಸರ ಈ ಎಡವಟ್ಟು ಈಗ ನಗೆಪಾಟಲಿಗೆ ಕಾರಣವಾಗಿದೆ. ಟಿಪ್ಪರ್‌ ಲಾರಿ ಚಾಲಕನಿಗೆ ನೀಡಿರುವ ರಶೀದಿ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ.

VISTARANEWS.COM


on

By

traffic violation
Koo

ಕಾರವಾರ: ಟಿಪ್ಪರ್ ಲಾರಿ ಚಾಲಕ ಹೆಲ್ಮೆಟ್ ಧರಿಸಿಲ್ಲವೆಂದು ಟ್ರಾಫಿಕ್‌ ಪೊಲೀಸರು ದಂಡ ಹಾಕಿ (Traffic violation) ರಶೀದಿ ನೀಡಿದ್ದಾರೆ. ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ಪಟ್ಟಣದಲ್ಲಿ ಘಟನೆ ನಡೆದಿದೆ.

ಹೊನ್ನಾವರದ ಉಸುಕು ಸಾಗಾಟದ ಟಿಪ್ಪರ್ ಚಾಲಕನಿಗೆ ಹೆಲ್ಮೆಟ್ ಧರಿಸಿಲ್ಲವೆಂದು ದಂಡ ವಿಧಿಸಿದ್ದಾರೆ. ಹೊನ್ನಾವರದ ಉಪ್ಪೋಣಿಯ ವಿನುತಾ ವಿನೋದ ನಾಯ್ಕ ಮಾಲೀಕತ್ವದ ಟಿಪ್ಪರ್ ಲಾರಿಯನ್ನು ಚಾಲಕ ಚಂದ್ರಕಾಂತ ಎಂಬಾತ ಚಲಾಯಿಸುತ್ತಿದ್ದ.

ಚಂದ್ರಕಾಂತ ಸಮವಸ್ತ್ರ ಧರಿಸದೇ ವಾಹನ ಚಲಾಯಿಸಿದ್ದನ್ನು ಕಂಡು ಪೊಲೀಸರು ವಾಹನವನ್ನು ತಡೆದಿದ್ದರು. ಈ ವೇಳೆ ಹೆಲ್ಮೆಟ್ ಧರಿಸದ ಕಾರಣಕ್ಕೆ ರಶೀದಿ ನೀಡಿ 500 ರೂಪಾಯಿ ದಂಡ ವಸೂಲಿ ಮಾಡಿದ್ದಾರೆ. ಇತ್ತ ದಂಡದ ರಶೀದಿ ಕಂಡು ಟಿಪ್ಪರ್ ಚಾಲಕ ಅವಾಕ್ಕಾಗಿದ್ದಾರೆ.

ಇನ್ನು ಟಿಪ್ಪರ್ ಲಾರಿ ಚಾಲಕನ ಹೆಲ್ಮೆಟ್ ದಂಡದ ರಶೀದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಂದಹಾಗೇ ದಂಡ ಹಾಕುವಾಗ ಸಮವಸ್ತ್ರದ ಬದಲು ಹೆಲ್ಮೆಟ್ ಆಯ್ಕೆಯಾಗಿರುವುದು ಇದಕ್ಕೆಲ್ಲ ಕಾರಣವೆಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: Viral Video: ದಬಾಂಗ್‌ ಸ್ಟೈಲ್‌ನಲ್ಲಿ ಆಸ್ಪತ್ರೆಯೊಳಗೆ ನುಗ್ಗಿದ ಪೊಲೀಸ್‌ ಜೀಪ್‌! ವಿಡಿಯೋ ವೈರಲ್‌

ವಿವಾಹ ಮಂಟಪದಲ್ಲಿ ನಾಗವಲ್ಲಿ ಅವತಾರ ತಾಳಿದ ವಧು; ವರ ಈಗ ಕೋಮಾದಲ್ಲಿದ್ದಾನೆ ಎಂದ ನೆಟ್ಟಿಗರು

ಬೆಂಗಳೂರು: ಮದುವೆ ಎನ್ನುವುದು ಸ್ವರ್ಗದಲ್ಲೇ ನಿಶ್ಚಯವಾಗಿರುತ್ತದೆ ಎನ್ನುವ ಮಾತಿದೆ. ಜತೆಗೆ ಭಾರತೀಯ ಸಂಸ್ಕೃತಿಯಲ್ಲಿ ಮದುವೆಗೆ ಮಹತ್ವದ ಸ್ಥಾನವಿದೆ. ಶಾಸ್ತ್ರೋಕ್ತವಾಗಿ ವಧು-ವರರು ವೈವಾಹಿಕ ಜೀವನಕ್ಕೆ ಕಾಲಿಡುತ್ತಾರೆ. ಈ ಅಪರೂಪದ ಘಳಿಗೆಯನ್ನು ಸ್ಮರಣೀಯವಾಗಿಸಲು ಮೊದಲೇ ಸಾಕಷ್ಟು ಸಿದ್ಧತೆ ನಡೆಸಲಾಗುತ್ತದೆ. ಆದರೆ ಕೆಲವೊಮ್ಮೆ ಮದುವೆ ಮನೆಯಲ್ಲಿ ನಡೆಯುವ ಎಡವಟ್ಟುಗಳು ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡಿ ವೈರಲ್‌ ಆಗುತ್ತವೆ. ಸದ್ಯ ಅಂತಹದ್ದೇ ವಿಡಿಯೊವೊಂದು ಇಂಟರ್‌ನೆಟ್‌ನಲ್ಲಿ ಸದ್ದು ಮಾಡುತ್ತಿದೆ (Viral Video).

ಅದ್ಧೂರಿ ಮದುವೆಯೊಂದನ್ನು ಆಯೋಜಿಸಲಾಗಿತ್ತು. ಎಲ್ಲವೂ ಅಂದುಕೊಂಡಂತೆ ನಡೆಯುತ್ತಿತ್ತು. ಆದರೆ ಇದ್ದಕ್ಕಿದ್ದಂತೆ ವಧು ವಿಚಿತ್ರವಾಗಿ ಆಡಲು ಶುರು ಮಾಡುತ್ತಾಳೆ. ಅದುವರೆಗೆ ಸಂತೋಷದಿಂದ ಕೂಡಿದ್ದ ಮದುವೆ ಹಾಲ್‌ ಗೊಂದಲದ ಗೂಡಾಗುತ್ತದೆ. ಈ ವಿಡಿಯೊದ ಮೂಲ ಎಲ್ಲಿ ಎನ್ನುವುದು ಪತ್ತೆಯಾಗಿಲ್ಲ. ಸದ್ಯ ವೈರಲ್‌ ಆಗಿರುವ ಈ ವಿಡಿಯೊವನ್ನು ಈಗಾಗಲೇ ಲಕ್ಷಾಂತರ ಮಂದಿ ವೀಕ್ಷಿಸಿದ್ದಾರೆ.

ವಿಡಿಯೊದಲ್ಲಿ ಏನಿದೆ?

ಅ‍ದ್ಧೂರಿ ವಿವಾಹ ಮಂಟಪ. ಬಲ್ಪ್‌, ಹೂಗಳಿಂದ ಅಲಂಕರಿಸಿರುವ ಈ ಮಂಟಪದ ಆಸನದಲ್ಲಿ ಚೆನ್ನಾಗಿ ಮೇಕಪ್‌ ಮಾಡಿಕೊಂಡ ವಧು ಕೂತಿರುತ್ತಾಳೆ. ಆಕೆಯ ಎದುರು ವರ ನಿಂತಿದ್ದರೆ ಸುತ್ತ ನೆಂಟರಿಷ್ಟರು ನೆರೆದಿದ್ದಾರೆ. ಇದ್ದಕ್ಕಿದ್ದಂತೆ ವದು ಮೈಮೇಲೆ ದೆವ್ವ ಬಂದಂತೆ ಆಡಲು ಶುರು ಮಾಡುತ್ತಾಳೆ. ಕಣ್ಣನ್ನು ವಿಚಿತ್ರವಾಗಿ ತಿರುಗಿಸಿ ಅಕ್ಷರಶಃ ʼಆಪ್ತಮಿತ್ರʼ ಸಿನಿಮಾದಲ್ಲಿ ಬರುವ ನಾಗವಲ್ಲಿ ಅವತಾರ ತಾಳುತ್ತಾಳೆ. ಕೂದಲನ್ನು ಬಿಚ್ಚಿ ಹಾಕಿ ದೆವ್ವ ಮೈಮೇಲೆ ಬಂದವರು ಆಡುತ್ತಾರೆ ಎನ್ನುತ್ತಾರ ಹಾಗೆ ವರ್ತಿಸುತ್ತಾಳೆ. ಜತೆಗೆ ಜೋರಾಗಿ ನಗುತ್ತಾಳೆ. ಇದರಿಂದ ಬೆಚ್ಚಿಬೀಳುವ ವರ ಹಾರಿ ಬೀಳುತ್ತಾನೆ. ಸುತ್ತಲಿದ್ದವರು ಭಯ, ಗೊಂದಲದಲ್ಲಿ ಏನು ಮಾಡಬೇಕೆಂದು ತೋಚದೆ ದಿಗ್ಭ್ರಾಂತರಾಗಿ ನಿಲ್ಲುತ್ತಾರೆ. ಆಗ ಆಕೆಯ ಸಂಬಂಧಿಕರಿಬ್ಬರು ಧೈರ್ಯದಿಂದ ಮುಂದೆ ಬಂದು ಆಕೆಯನ್ನು ಹಿಡಿದುಕೊಳ್ಳುತ್ತಾರೆ. ಇವಿಷ್ಟು ವಿಡಿಯೊದಲ್ಲಿ ಕಂಡು ಬಂದಿದೆ.

ನೆಟ್ಟಿಗರು ಏನಂದ್ರು?

ಕೇವಲ 17 ಸೆಕೆಂಡ್‌ಗಳ ಈ ವಿಡಿಯೊದ ಬಗ್ಗೆಯೇ ಚರ್ಚೆ ಆರಂಭವಾಗಿದೆ. ಹಲವರು ವಿಡಿಯೊ ನೋಡಿ ಅಲ್ಲಿದ್ದವರಂತೆ ಶಾಕ್‌ಗೆ ಒಳಗಾಗಿದ್ದಾರೆ. ಪಾಪದ ವರ ಇದನ್ನು ನೋಡಿ ಕೋಮಾಕ್ಕೆ ಜಾರಿರಬೇಕು ಎನ್ನುವ ಕ್ಯಾಪ್ಶನ್‌ ನೀಡಿ ವಿಡಿಯೊ ಹಂಚಿಕೊಳ್ಳಲಾಗಿದೆ. ಕೆಲವರು ಇದನ್ನು ಪೂರ್ವ ನಿಯೋಜಿತ ಎಂದು ಕರೆದಿದ್ದಾರೆ. ಹೆಚ್ಚು ವ್ಯೂವ್ಸ್‌ ಪಡೆದುಕೊಳ್ಳಲು ಬೇಕಂತಲೇ ನಾಟಕ ಮಾಡಿದ್ದಾರೆ ಎಂದು ಹೇಳಿದ್ದಾರೆ. ವಿಡಿಯೊ ನೋಡಿದ ಕೆಲವರು ನಾಗವಲ್ಲಿ ಪಾತ್ರವನ್ನು ನೆಪಿಸಿಕೊಂಡಿದ್ದಾರೆ. ಇನ್ನು ಕೆಲವರು ಇದು ನಿಜವೆ? ಎಲ್ಲಿ ನಡೆದಿರುವುದು? ಮುಂತಾಗಿ ಪ್ರಶ್ನಿಸಿದ್ದಾರೆ.

ಇನ್ನೊಂದು ವಿಡಿಯೊ

ಇದೇ ರೀತಿಯ ಇನ್ನೊಂದು ಘಟನೆಯ ವಿಡಿಯೊ ಕೂಡ ಇದೀಗ ಸದ್ದು ಮಾಡುತ್ತಿದೆ. ಇದರಲ್ಲಿ ಈ ವಧು-ವರರಿಬ್ಬರು ವೇದಿಕೆ ಮೇಲೆ ಪರಸ್ಪರ ಹೊಡೆದಾಡಿಕೊಳ್ಳುತ್ತಿರುವುದು ಕಂಡು ಬಂದಿದೆ. ವರ ಚಪ್ಪಲಿ ಕೈಯಲ್ಲಿ ಹಿಡಿದು ಹಲ್ಲೆಗೆ ಮುಂದಾದರೆ ತಾನು ಯಾವುದರಲ್ಲಿಯೂ ಕಡಿಮೆ ಇಲ್ಲ ಎನ್ನುವಂತೆ ವಧು ಕೂಡ ಪ್ರತಿ ದಾಳಿ ನಡೆಸುತ್ತಾಳೆ. ಪಕ್ಕದಲ್ಲಿದ್ದವರು ತಡೆಯಲು ಪ್ರಯತ್ನಿಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಕ್ರೀಡೆ

Viral Video: ತಂಡ ಗೆದ್ದ ಸಂತಸದಲ್ಲಿ ಬಣ್ಣದ ಚಿಟ್ಟೆಯಂತೆ ಹಾರಾಡಿ ಸಂಭ್ರಮಿಸಿದ ಹೈದರಾಬಾದ್​ ಮಾಲಕಿ ಕಾವ್ಯಾ ಮಾರನ್

Viral Video: 31 ಹರೆಯದ ಕಾವ್ಯಾ ತನ್ನ ಅದ್ಭುತ ನೋಟ ಮತ್ತು ಆಟದ ಮೇಲಿನ ಅಪಾರ ಉತ್ಸಾಹಕ್ಕೆ ಹೆಸರುವಾಸಿಯಾಗಿದ್ದಾರೆ. ಪಂದ್ಯ ಸೋತಾಗ ಮತ್ತು ಗೆದ್ದಾಗ ಅವರು ವಿಭಿನ್ನವಾಗಿ ಕಂಡುಬರುತ್ತಾರೆ. ಕ್ಯಾಮೆರಾ ಮೆನ್​ಗಳು ಕೂಡ ಪಂದ್ಯದ ವೇಳೆ ಇವರ ಮೇಲೆ ವಿಶೇಷ ನಿಗಾ ಇರಿಸಿರುತ್ತಾರೆ.

VISTARANEWS.COM


on

Viral Video
Koo

ಚೆನ್ನೈ ರಾಜಸ್ಥಾನ್​ ರಾಯಲ್ಸ್​ ತಂಡದ ವಿರುದ್ಧ ಶುಕ್ರವಾರ ನಡೆದ ಕ್ವಾಲಿಫೈಯರ್​-2 ಪಂದ್ಯದಲ್ಲಿ ಸನ್​ರೈಸರ್ಸ್​ ಹೈದರಾಬಾದ್​ ತಂಡ 36 ರನ್​ಗಳ ಗೆಲುವು ಸಾಧಿಸಿ ಫೈನಲ್​ ಪ್ರವೇಶಿಸಿದೆ. ಈ ಗೆಲುವನ್ನು ತಂಡದ ಆಟಗಾರರಿಗಿಂತಲ್ಲೂ ಹೆಚ್ಚು ಸಂಭ್ರಮಿಸಿದ್ದು ತಂಡದ ಮಾಲಕಿ ಕಾವ್ಯಾ ಮಾರನ್(Kavya Maran)​. ಗ್ಯಾಲರಿಯಲ್ಲಿದ್ದ ಕಾವ್ಯಾ(Kavya Maran’s Happiness) ತಂಡ ಗೆಲ್ಲುತ್ತಿದ್ದಂತೆ ಫುಲ್​ ಜೋಶ್​ನಲ್ಲಿ ಕುಣಿದು ಕುಪ್ಪಳಿಸಿದ್ದಾರೆ. ಈ ವಿಡಿಯೊ ವೈರಲ್(viral video)​ ಆಗಿದೆ.

31 ಹರೆಯದ ಕಾವ್ಯಾ ತನ್ನ ಅದ್ಭುತ ನೋಟ ಮತ್ತು ಆಟದ ಮೇಲಿನ ಅಪಾರ ಉತ್ಸಾಹಕ್ಕೆ ಹೆಸರುವಾಸಿಯಾಗಿದ್ದಾರೆ. ಪಂದ್ಯ ಸೋತಾಗ ಮತ್ತು ಗೆದ್ದಾಗ ಅವರು ವಿಭಿನ್ನವಾಗಿ ಕಂಡುಬರುತ್ತಾರೆ. ಕ್ಯಾಮೆರಾ ಮೆನ್​ಗಳು ಕೂಡ ಪಂದ್ಯದ ವೇಳೆ ಇವರ ಮೇಲೆ ವಿಶೇಷ ನಿಗಾ ಇರಿಸಿರುತ್ತಾರೆ. ಪಂದ್ಯ ಸೋತಾಗ ಅತಿಯಾದ ಬೇಸರಿಂದ ಸಪ್ಪೆ ಮೋರೆ ಹಾಕಿ ಕುಳಿತಿದ್ದ ವಿಡಿಯೊ ಮತ್ತು ಫೋಟೊಗಳು ಕೂಡ ಹಲವು ಬಾರಿ ವೈರಲ್​ ಆಗಿತ್ತು.

ಖ್ಯಾತ ಸೂಪರ್​ ಸ್ಟಾರ್​ ನಟ ರಜನಿಕಾಂತ್ ಅವರು ಐಪಿಎಲ್​ ಆರಂಭಕ್ಕೂ ಮುನ್ನ ನಡೆದಿದ್ದ ಸಿನೆಮಾ ಕಾರ್ಯಕ್ರಮದ ಸಮಾರಂಭದ ವೇದಿಕೆಯಲ್ಲಿ ಸನ್​ರೈಸರ್ಸ್ ಹೈದರಾಬಾದ್​ ತಂಡಕ್ಕೆ ಒಳ್ಳೆ ಆಟಗಾರರನ್ನು ಆಯ್ಕೆ ಮಾಡಿ ಏಕೆಂದರೆ ಈ ಪಂದ್ಯ ಸೋತಾಗ ಕಾವ್ಯಾ ಅವರು ನೋಡಲು ಸಾಧ್ಯವಾಗುದಿಲ್ಲ ಎಂದು ಹೇಳಿದ್ದರು.

ಕಾವ್ಯ ಚೆನ್ನೈ ಮೂಲದ ಮಾಧ್ಯಮ ಮತ್ತು ಟಿವಿ ಸಮೂಹ ಸನ್ ಟಿವಿ ನೆಟ್‌ವರ್ಕ್‌ನ ಮಾಲಕ ಕಲಾನಿತಿ ಮಾರನ್ ಅವರ ಪುತ್ರಿ. ನ್ಯೂಯಾರ್ಕ್ ವಿಶ್ವವಿದ್ಯಾಲಯದ ಸ್ಟರ್ನ್ ಸ್ಕೂಲ್ ಆಫ್ ಬ್ಯುಸಿನೆಸ್‌ನಲ್ಲಿ ಪದವೀಧರರಾಗಿದ್ದಾರೆ. ಐಪಿಎಲ್​ ಪಂದ್ಯದಲ್ಲಿ ಮಾತ್ರವಲ್ಲದೆ ಹರಾಜಿನ ವೇಳೆಯೂ ಅವರು ಪ್ರಧಾನ ಆಕರ್ಷಣೆಯಾಗಿರುತ್ತಾರೆ.

ನಿನ್ನೆ(ಶುಕ್ರವಾರ) ನಡೆದ ಪಂದ್ಯದಲ್ಲಿ ಹೈದರಾಬಾದ್​ ಬ್ಯಾಟಿಂಗ್​ ಇನಿಂಗ್ಸ್​ ವೇಳೆ ಸಪ್ಪೆಯಾಗಿದ್ದ ಕಾವ್ಯಾ ಆ ಬಳಿಕ ಪಂದ್ಯದಲ್ಲಿ ತನ್ನ ತಂಡ ಹಿಡಿತ ಸಾಧಿಸುತ್ತಿದ್ದಂತೆ ಸಂಭ್ರಮಿಸಲು ಆರಂಭಿಸಿದರು. ರಾಜಸ್ಥಾನ್ ತಂಡ ಒಂದೊಂದು ವಿಕೆಟ್​ ಬೀಳುತ್ತಿದ್ದಾಗಲೂ ಕೂಡ ಆಟಗಾರರಿಗಿಂತಲೂ ಹೆಚ್ಚು ಸಂಭ್ರಮಾಚರಣೆ ಮಾಡುತ್ತಿದ್ದರು. ಅವರ ಸಂತಸಕ್ಕೆ ಪಾರವೇ ಇರಲಿಲ್ಲ. ಹಲವು ಬಾರಿ ಓಡಿ ಬಂದು ತಮ್ಮ ತಂದೆಯನ್ನು ಅಪ್ಪಿಕೊಂಡು ಸಂಭ್ರಮಿಸಿದ್ದು ಕೂಡ ಕಂಡು ಬಂತು.

ಇದನ್ನೂ ಓದಿ SRH vs RR: ಹೈದರಾಬಾದ್​ಗೆ ಗೆಲುವಿನ ‘ಸನ್​ರೈಸ್’; ಫೈನಲ್​ನಲ್ಲಿ ಕೆಕೆಆರ್ ವಿರುದ್ಧ ಕಣಕ್ಕೆ​

ಫೈನಲ್​ನಲ್ಲಿ ಕೆಕೆಆರ್​ ಎದುರಾಳಿ


ಇಲ್ಲಿನ ಎಂ.ಎ. ಚಿದಂಬರಂ ಸ್ಟೇಡಿಯಂನಲ್ಲಿ ನಿನ್ನೆ(ಶುಕ್ರವಾರ) ನಡೆದ ಈ ಪಂದ್ಯದಲ್ಲಿ ಟಾಸ್​ ಸೋತು ಬ್ಯಾಟಿಂಗ್​ ಆಹ್ವಾನ ಪಡೆದ ಸನ್​ರೈಸರ್ಸ್​ ಹೈದರಾಬಾದ್​ ತಂಡ ನಿಗದಿತ 20 ಓವರ್​ಗಳಲ್ಲಿ 9 ವಿಕೆಟ್​ಗೆ 175 ರನ್​ ಬಾರಿಸಿತು. ಜವಾಬಿತ್ತ ರಾಜಸ್ಥಾನ್​ ಉತ್ತಮ ಆರಂಭ ಪಡೆದರೂ ಕೂಡ ಆ ಬಳಿಕ ನಾಟಕೀಯ ಕುಸಿತ ಕಂಡು 7 ವಿಕೆಟ್​ ನಷ್ಟಕ್ಕೆ 139 ರನ್​ಗಳಿಸಲಷ್ಟೇ ಶಕ್ತವಾಗಿ ಸೋಲೊಪ್ಪಿಕೊಂಡಿತು. ರಾಜಸ್ಥಾನ್​ ತಂಡದ ಸೋಲು ಕಂಡು ಪುಟ್ಟ ಅಭಿಮಾನಿಯೊಬ್ಬಳು ಕಣ್ಣೀರು ಸುರಿಸಿದ ದೃಶ್ಯ ಕೂಡ ಕಂಡು ಬಂತು. ನಾಳೆ(ಭಾನುವಾರ) ನಡೆಯುವ ಫೈನಲ್​ ಪಂದ್ಯದಲ್ಲಿ ಸನ್​ರೈಸರ್ಸ್​ ಹೈದರಾಬಾದ್​ ತಂಡ ಕೆಕೆಆರ್​ ವಿರುದ್ಧ ಆಡಲಿದೆ.

Continue Reading
Advertisement
Hardik Pandya
ಕ್ರೀಡೆ13 mins ago

Hardik Pandya: ಪ್ರೇಯಸಿಯ ದೋಖಾದ ಸುಳಿವು ಮೊದಲೇ ಇತ್ತಾ? ಬಹುತೇಕ ಆಸ್ತಿಯನ್ನು ಪೋಷಕರ ಹೆಸರಲ್ಲಿಟ್ಟ ಚಾಲಾಕಿ ಹಾರ್ದಿಕ್!

ಕರ್ನಾಟಕ24 mins ago

Lockup Death: ಲಾಕಪ್‌ ಡೆತ್‌ ಅಲ್ಲ ಎಂದಿದ್ದ ಮೃತ ಯುವಕನ ತಂದೆ ಮತ್ತೆ ಉಲ್ಟಾ!

Actor Kiran Raj Ronny Movie Reels with Fans Song
ಸ್ಯಾಂಡಲ್ ವುಡ್24 mins ago

Actor Kiran Raj: ʻರಾನಿʼ ಸಿನಿಮಾ ಸಾಂಗ್‌ ಔಟ್‌; ಇದೇ ಭಾನುವಾರ ಕಿರಣ್ ರಾಜ್‌ ʻರೀಲ್ಸ್ with ಫ್ಯಾನ್ಸ್ʼ!

Speech Fasting
ಆರೋಗ್ಯ25 mins ago

Speech Fasting: ಸದಾ ವಟವಟ ಮಾತಾಡ್ತಾ ಇರ್ತೀರಾ? ʼಮೌನವ್ರತʼ ಮಾಡಿ, ಆರೋಗ್ಯ ಸುಧಾರಣೆ ನೋಡಿ!

Jawa Yezdi
ಆಟೋಮೊಬೈಲ್26 mins ago

Jawa Yezdi : ಜಾವಾ ಯೆಜ್ಡಿ ಮೋಟಾರ್‌ಸೈಕಲ್ಸ್ ನ ಜಾವಾ 42 ಬಾಬರ್ ರೆಡ್ ಶೀನ್‌ ಬಿಡುಗಡೆ

road Accident
ಕಲಬುರಗಿ39 mins ago

Road Accident : ಅಯೋಧ್ಯೆಯಲ್ಲಿ ಭೀಕರ ಅಪಘಾತ; ಕಲಬುರಗಿ ಮೂಲದ ಮೂವರು ದುರ್ಮರಣ, 19 ಮಂದಿಗೆ ಗಾಯ

KKR vs SRH Final 2024
ಕ್ರೀಡೆ53 mins ago

KKR vs SRH Final 2024: ನಾಳೆ ಕೆಕೆಆರ್​-ಹೈದರಾಬಾದ್​ ಫೈನಲ್​ ಕಾದಾಟ; ಯಾರಿಗೆ ಒಲಿಯಲಿದೆ ಐಪಿಎಲ್​ ಕಿರೀಟ?

Life Expectancy
ಆರೋಗ್ಯ1 hour ago

Life Expectancy: ಕೊರೊನಾದಿಂದ ನಮ್ಮ ಆಯುಷ್ಯದಲ್ಲಿ 2 ವರ್ಷ ಕಡಿತ; WHO ಭೀಕರ ವರದಿ

Tiger Project PM Modi hotel bill in Karnataka dues Rs 6 crore and Centre vs state departments clash
ರಾಜಕೀಯ1 hour ago

PM Modi: ಮೋದಿ ಬಂಡೀಪುರ ಭೇಟಿ ಆತಿಥ್ಯಕ್ಕೆ 6 ಕೋಟಿ ರೂ. ಖರ್ಚು; ಬಿಲ್‌ ಬಾಕಿಗೆ ಕೇಂದ್ರ – ರಾಜ್ಯ ಇಲಾಖೆಗಳ ಜಟಾಪಟಿ

Karnataka Rain
ಮಳೆ1 hour ago

Karnataka Rain : ಭಾರಿ ಮಳೆಗೆ ರಸ್ತೆ ಕಾಣದೆ ರಾಜಕಾಲುವೆಗೆ ಉರುಳಿದ ಆಟೋ; ಚಾಲಕ ಸ್ಥಳದಲ್ಲೇ ಸಾವು

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ1 hour ago

Karnataka Rain : ಭಾರಿ ಮಳೆಗೆ ರಸ್ತೆ ಕಾಣದೆ ರಾಜಕಾಲುವೆಗೆ ಉರುಳಿದ ಆಟೋ; ಚಾಲಕ ಸ್ಥಳದಲ್ಲೇ ಸಾವು

dina bhavishya read your daily horoscope predictions for May 23 2024
ಭವಿಷ್ಯ3 days ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

Karnataka Weather Forecast
ಮಳೆ3 days ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ4 days ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

Love Case Father throws hot water on man who loved his daughter for coming home
ಕೊಡಗು4 days ago

Love Case : ಮನೆಗೆ ಬಂದ ಪ್ರೇಮಿಗೆ ಕೊತ ಕೊತ ಕುದಿಯುವ ನೀರು ಎರಚಿದ ಯುವತಿ ತಂದೆ!

Contaminated Water
ಮೈಸೂರು4 days ago

Contaminated Water : ಡಿ ಸಾಲುಂಡಿಯಲ್ಲಿ ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡಿದ್ದ ಯುವಕ ಸಾವು

Karnataka Rain
ಮಳೆ5 days ago

Karnataka Rain : ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ; ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ

Karnataka Rain
ಮಳೆ6 days ago

Karnataka Rain : ಒಂದೇ ಮಳೆಗೆ ಹೊಳೆಯಂತಾದ ಬೆಂಗಳೂರು ರಸ್ತೆಗಳು! ಕಳಸದಲ್ಲೂ ಮುಂದುವರಿದ ಅಬ್ಬರ

Karnataka rain
ಮಳೆ6 days ago

Karnataka Rain : ವಿಜಯನಗರದಲ್ಲಿ ಸಿಡಿಲಿಗೆ ಜಾನುವಾರು ಬಲಿ; ಬೆಂಗಳೂರು ಸೇರಿ ಹಲವೆಡೆ ಭಾರಿ ಮಳೆ

Karnataka Rain
ಮಳೆ6 days ago

Karnataka Rain: ಧಾರಾಕಾರ ಮಳೆಗೆ ಕಾಂಪೌಂಡ್ ಕುಸಿದು 4 ಬೈಕ್‌ಗಳು ಜಖಂ; ಮದುವೆ ಮಂಟಪಕ್ಕೆ ನುಗ್ಗಿದ ನೀರು‌

ಟ್ರೆಂಡಿಂಗ್‌