Site icon Vistara News

Viral Video: ಕಳೆದುಕೊಂಡಿದ್ದ ಪರ್ಸ್​ ವಾಪಸ್​ ಕೊಟ್ಟ ಭಾರತೀಯ ಯುವಕನ ದಯಾಗುಣಕ್ಕೆ ಮನಸೋತ ಯುಎಸ್​ ಮಹಿಳೆ

Man Returns Wallet of US Woman Viral Video

#image_title

ಪರ್ಸ್​, ಮೊಬೈಲ್​​ಗಳೆಲ್ಲ ಕಳೆದು ಹೋಗುವುದು ಸಾಮಾನ್ಯ. ನಾವೆಷ್ಟೇ ಎಚ್ಚರಿಕೆಯಿಂದ ಇದ್ದರೂ, ಒಂದಲ್ಲ ಒಂದು ಸಲ ಕಣ್ತಪ್ಪಿನಿಂದ ಇಂಥ ವಸ್ತುಗಳು ಕಳೆದು ಹೋಗುತ್ತವೆ. ಅದು ವಾಪಸ್​ ಸಿಕ್ಕವರು ಅದೃಷ್ಟವಂತರು, ಸಿಕ್ಕ ಪರ್ಸ್​​/ಮೊಬೈಲ್​ ಅಥವಾ ಇನ್ಯಾವುದೇ ವಸ್ತುಗಳನ್ನು ವಾಪಸ್​ ತಂದುಕೊಟ್ಟವರು ಹೃದಯವಂತರು ಎಂದೇ ಹೇಳಬೇಕು. ಹೀಗೆ ಭಾರತಕ್ಕೆ ಬಂದು, ಕಳೆದುಕೊಂಡ ಪರ್ಸ್​ನ್ನು ವಾಪಸ್​ ಪಡೆದ ಖುಷಿಯನ್ನು ಯುಎಸ್​ ಮಹಿಳೆಯೊಬ್ಬರು ತಮ್ಮ ಇನ್​ಸ್ಟಾಗ್ರಾಂ ಪೇಜ್​ನಲ್ಲಿ ಹಂಚಿಕೊಂಡಿದ್ದಾರೆ.

ನಾನು ರೈಲಿನಲ್ಲಿ ಪ್ರಯಾಣಿಸಿದೆ. ಆದರೆ ರೈಲು ಇಳಿಯುವಾಗ ಪರ್ಸ್​ ಮರೆತುಹೋದೆ. ಇನ್ನೇನು ಮಾಡುವುದು ಎಂದು ಗಾಬರಿಯಲ್ಲಿದ್ದಾಗಲೇ, ನನ್ನ ಇನ್​ಸ್ಟಾಗ್ರಾಂಗೆ ಸಂದೇಶವೊಂದು ಬಂತು. ‘ನನ್ನ ಹೆಸರು ಚಿರಾಗ್​, ನಿಮ್ಮ ಪರ್ಸ್​ ಸಿಕ್ಕಿದೆ. ಅದರಲ್ಲಿ ನಿಮ್ಮ ಎಟಿಎಂ ಕಾರ್ಡ್​, ಡ್ರೈವಿಂಗ್​ ಲೈಸೆನ್ಸ್​ ಮತ್ತಿತರ ಡಾಕ್ಯುಮೆಂಟ್​ಗಳ ಇವೆ. ನಾನು ಇರುವ ಸ್ಥಳ ನಿಮಗೆ ಹೇಳುತ್ತೇನೆ, ಬಂದು ತೆಗೆದುಕೊಳ್ಳಿ’ ಎಂದು ಮೆಸೇಜ್​ ಇತ್ತು. ನಾವಲ್ಲಿಗೆ ಹೋದರೆ, ಒಂದು ಅಂಗಡಿಯಲ್ಲಿ ಇದ್ದ ಚಿರಾಗ್​, ನನ್ನ ಪರ್ಸ್​ ವಾಪಸ್​ ಕೊಟ್ಟರು. ನನಗೆ ಅವರು ಮಾಡಿದ ಸಹಾಯಕ್ಕೆ ಟಿಪ್ಸ್​ ಕೊಡಲು (ಹಣ) ಮುಂದಾದೆ. ಆದರೆ ಅವರು ತೆಗೆದುಕೊಳ್ಳಲೇ ಇಲ್ಲ. ನಿಜಕ್ಕೂ ಅವರ ಸಹಾಯ ಮಾಡುವ ಮನೋಭಾವ, ಅವರಲ್ಲಿರುವ ದಯೆ ನನ್ನ ಹೃದಯಸ್ಪರ್ಶಿಸಿತು’ ಎಂದು ಆ ಮಹಿಳೆ ಹೇಳಿಕೊಂಡಿದ್ದಾರೆ. ವಿಡಿಯೊವನ್ನೂ ಕೂಡ ಪೋಸ್ಟ್ ಮಾಡಿದ್ದಾರೆ.

ಭಾರತ ನಿಜಕ್ಕೂ ಸುಂದರವಾದ ದೇಶ. ಭಾರತದ ಬಗ್ಗೆ ಹಲವು ನೆಗೆಟಿವ್​ ಸುದ್ದಿಗಳನ್ನು ಕೇಳುತ್ತಿರುತ್ತೇವೆ. ಆದರೆ ವಾಸ್ತವದಲ್ಲಿ ಹಾಗಿಲ್ಲ. ಇದೇ ಅಮೆರಿಕದಲ್ಲಿ ಇದ್ದರೆ ಜನ ಅಲ್ಲಿ ಹೇಗೆ ವ್ಯವಹಾರ ಮಾಡುತ್ತಿದ್ದರು ಎಂಬುದೂ ನನ್ನ ಕಣ್ಮುಂದೆ ಬಂತು. ನನ್ನ ಪರ್ಸ್​ ಸಿಕ್ಕಿದ್ದು ಖುಷಿಯಾಯಿತು. ಚಿರಾಗ್​ಗೆ ತುಂಬ ಧನ್ಯವಾದ ಎಂದಿದ್ದಾರೆ. ವಿಡಿಯೊ ನೋಡಿದ ನೆಟ್ಟಿಗರು ಚಿರಾಗ್​ ಅವರನ್ನು ಹೊಗಳಿದ್ದಾರೆ. ಚಿರಾಗ್​ನ ಸಹಾಯ ಮಾಡುವ ಮನಸ್ಥಿತಿ ನೋಡಿ ನಿಜಕ್ಕೂ ಖುಷಿಯಾಯಿತು ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ‘ಭಾರತ ಎಂದರೇ ಹೀಗೆ, ನೀವಿಲ್ಲಿ ಸಂತೋಷದಿಂದ ನಿಮ್ಮ ಪ್ರವಾಸ ಮುಂದುವರಿಸಿ’ ಎಂದು ಹೇಳಿದ್ದಾರೆ.

ಯುಎಸ್​ ಮಹಿಳೆ ಹಂಚಿಕೊಂಡ ವಿಡಿಯೊ ಇಲ್ಲಿದೆ:

Exit mobile version