ನವ ದೆಹಲಿ: ವೇಗವಾಗಿ ಹೋಗುವ ಟ್ರಕ್ನ ಒಳಗೆ ಮಲಗುವುದೇ ಭಯಾನಕ ಸಂಗತಿ. ಅಂಥದ್ದರಲ್ಲಿ ಅದರ ಚಕ್ರದ ಪಕ್ಕದಲ್ಲಿಯೇ ಗಡದ್ದಾಗಿ ನಿದ್ದೆ ಹೊಡೆಯುವುದು ಎಂದರೆ ಆತನ ಧೈರ್ಯಕ್ಕೆ ಹ್ಯಾಟ್ಸ್ಆಫ್ ಹೇಳಲೇಬೇಕು. ಈ ರೀತಿಯಾಗಿ ಚಲಿಸುತ್ತಿರುವ ಟ್ರಕ್ನ ಕೆಳಗೆ ಚೆನ್ನಾಗಿ ನಿದ್ದೆ ಮಾಡುತ್ತಾ ಹೋಗುತ್ತಿರುವ ವಿಡಿಯೊವೊಂದು ವೈರಲ್ ಆಗಿದೆ. ಸಾಮಾಜಿಕ ಮಾಧ್ಯಮ ಬಳಕೆದಾರರನ್ನು ಈ ವಿಡಿಯೊ (Viral Video) ದಿಗ್ಭ್ರಮೆಗೊಳಿಸಿದೆ.
ವಿಡಿಯೊದಲ್ಲಿ ಚಕ್ರದ ಪಕ್ಕದಲ್ಲಿರುವ ಕಂಪಾರ್ಟ್ಮೆಂಟ್ನಲ್ಲಿ ವ್ಯಕ್ತಿಯೊಬ್ಬರು ಗಾಢ ನಿದ್ರೆಗೆ ಜಾರಿದ್ದಾರೆ. ವೀಕ್ಷಕರು ಈ ಧೈರ್ಯಶಾಲಿ ವ್ಯಕ್ತಿ ಯಾರೆಂದು ಹುಡುಕಾಡುತ್ತಿದ್ದಾರೆ. ವೈರಲ್ ಆಗಿರುವ ವೀಡಿಯೊದಲ್ಲಿ, ವೇಗವಾಗಿ ಚಲಿಸುತ್ತಿದ್ದ ಟ್ರಕ್ ಪಕ್ಕದಲ್ಲಿ ಮೋಟಾರ್ ಬೈಕಿನಲ್ಲಿದ್ದ ಹೋಗುತ್ತಿದ್ದ ವ್ಯಕ್ತಿ ವ್ಯಕ್ತಿ ಮಲಗಿರುವುದನ್ನು ವಿಡಿಯೊ ಮಾಡಿದ್ದಾರೆ.
ಚಕ್ರ ಪಕ್ಕದಲ್ಲೇ ಇರುವ ಡಕ್ಟ್ನಲ್ಲಿ ವ್ಯಕ್ತಿ ನಿದ್ದೆ ಮಾಡಿರುವುದಕ್ಕೆ ಹಲವು ಕಾರಣಗಳಿರಬಹುದು ಎಂದು ನೆಟ್ಟಿಗರು ಅಂದಾಜು ಮಾಡಿದ್ದಾರೆ . ಒಂದು ಸುಡುವ ಬಿಸಿಲಿನಿಂದ ತಪ್ಪಿಸಿಕೊಳ್ಳುವುದು. ಎರಡನೆಯದ್ದು ಚೆನ್ನಾಗಿ ಗಾಳಿ ಬೀಸಲಿ ಎಂದು ಹಾಗೂ ಮೂರನೆಯದ್ದು ಮಲಗಲು ಸಾಕಷ್ಟು ಜಾಗ ಸಿಗಲಿ ಎಂದು ನೆಟ್ಟಿಗರು ಬರೆದುಕೊಂಡಿದ್ದಾರೆ.
ವೀಡಿಯೊದ ಶೀರ್ಷಿಕೆಯು ಟರ್ಕಿಶ್ ಭಾಷೆಯಲ್ಲಿದೆ. ಜತೆಗೆ ಇಂಗ್ಲಿಷ್ಗೆ ಭಾಷಾಂತರ ಮಾಡಲಾಗಿದೆ. ನೀವು ಇಂಥದ್ದೊಂದು ಹಾಸಿಗೆಯನ್ನು ಎಂದಿಗೂ ನೋಡಿಲ್ಲ ಎಂದು ಹಾಸ್ಯಮಯವಾಗಿ ಹೇಳಲಾಗಿದೆ. ಟ್ರಕನ್ ಟೈರ್ ಗಳು ಸ್ಫೋಟಗೊಳ್ಳುವ ಸಾಧ್ಯತೆಯಿರುವ ಬಗ್ಗೆ ಲಘು ತಮಾಷೆಗಳಿಂದ ಹಿಡಿದು ವ್ಯಕ್ತಿಯ ಸುರಕ್ಷತೆಯ ಬಗ್ಗೆ ನಿಜವಾದ ಕಾಳಜಿಯವರೆಗೆ ಹಲವಾರು ಕಾಮೆಂಟ್ ಗಳು ಬಂದಿವೆ. “ಚಾಲಕ ಬಲವಾಗಿ ಬ್ರೇಕ್ ಹೊಡೆಯುವವರೆಗೂ ಅವನು ಚೆನ್ನಾಗಿರುತ್ತಾನೆ” ಎಂದು ಒಂದು ಕಾಮೆಂಟ್ ಬರೆಯಲಾಗಿದೆ.
ಇದನ್ನೂ ಓದಿ : Samantha Ruth Prabhu: ಮತ್ತೆ ಒಂದಾಗ್ತಾರಾ ಸಮಂತಾ-ನಾಗಚೈತನ್ಯ? ಫೋಟೊ ವೈರಲ್!
ಇನ್ನೊಬ್ಬರು ತಮಾಷೆಯಾಗಿ ಯೋಚಿಸಿದರು ಟೈರ್ ಗಳು ಸ್ಫೋಟಗೊಂಡರೆ ಏನಾಗುತ್ತದೆ?” ಏತನ್ಮಧ್ಯೆ, ಸಹಾನುಭೂತಿಯುಳ್ಳ ವ್ಯಕ್ತಿಯೊಬ್ಬರು ಓ ದೇವರೇ! ಈ ಬಡವ ತನ್ನ ಜೀವನೋಪಾಯಕ್ಕಾಗಿ ಬಹಳ ಕಷ್ಟಪಟ್ಟು ಕೆಲಸ ಮಾಡಿರಬೇಕು. ದಯವಿಟ್ಟು ಅವನ ಬಗ್ಗೆ ಕರುಣೆ ತೋರು! ಎಂದು ಹೇಳಿದ್ದಾರೆ. ಅಂದ ಹಾಗೆ ಈ ವಿಡಿಯೊ ಇನ್ಸ್ಟಾಗ್ರಾಮ್ನಲ್ಲಿ 7.6 ಮಿಲಿಯನ್ ವೀಕ್ಷಣೆಗಳನ್ನು ಕಂಡಿವೆ.
ಎಲ್ಲಿನ ವಿಡಿಯೊ ಎಂದು ಗೊತ್ತಿಲ್ಲ
ವೀಡಿಯೊದ ಎಲ್ಲಿನದು ಎಂಬುದು ರಹಸ್ಯವಾಗಿ ಉಳಿದಿದೆ, ವಾಹನದ ನಂಬರ್ ಪ್ಲೇಟ್ ಸೇರಿದಂತೆ ಗುರುತಿಸಬಹುದಾದ ಯಾವುದೇ ಸುಳಿವು ಸಿಕ್ಕಿಲ್ಲ, ಬೈಕ್ನಲ್ಲಿ ಸಾಗುತ್ತಿದ್ದ ವ್ಯಕ್ತಿಯೊಬ್ಬರು ಸ್ಮಾರ್ಟ್ಫೋನ್ನಲ್ಲಿ ವಿಡಿಯೊ ಮಾಡಿ ಅಪ್ಲೋಡ್ ಮಾಡಿದಂತಿದೆ. ಅವರು ನಿರೀಕ್ಷೆ ಮಾಡದ ರೀತಿಯಲ್ಲಿ ವೈರಲ್ ಆಗಿದೆ.
ಈ ವಿಡಿಯೊ ಬೆಂಗಳೂರಿನಲ್ಲಿ ನಡೆದ ದುರಂತವೊಂದನ್ನು ನೆನಪಿಗೆ ತರುತ್ತದೆ, ಅಲ್ಲಿ ಕಾರ್ಮಿಕನೊಬ್ಬ ಮಳೆಯಿಂದ ಆಶ್ರಯ ಪಡೆಯಲೆಂದು ನಿಲ್ಲಿಸಿದ್ದ ಟ್ರಕ್ ಅಡಿಯಲ್ಲಿ ಮಲಗಿದ್ದ. ಆದರೆ, ಆತ ಮಲಗಿರುವುದು ತಿಳಿಯದ ಟ್ರಕ್ ಚಾಲಕ ಲಾರಿಯನ್ನು ಮುಂದಕ್ಕೆ ಚಲಾಯಿಸಿದ್ದ. ಕೆಳಗೆ ಮಲಗಿದ್ದ ವ್ಯಕ್ತಿ ನೇರವಾಗಿ ಚಕ್ರದ ಅಡಿಗೆ ಸಿಲುಕಿ ಮೃತಪಟ್ಟಿದ್ದ.