Viral Video : ಅಬ್ಬಾ ಏನು ಧೈರ್ಯ; ವೇಗವಾಗಿ ಚಲಿಸುತ್ತಿದ್ದ ಟ್ರಕ್​ನ ಚಕ್ರದ​ ಪಕ್ಕದಲ್ಲಿಯೇ ಗಡದ್ದಾಗಿ ನಿದ್ದೆ ಹೊಡೆದ ! Vistara News

ವೈರಲ್ ನ್ಯೂಸ್

Viral Video : ಅಬ್ಬಾ ಏನು ಧೈರ್ಯ; ವೇಗವಾಗಿ ಚಲಿಸುತ್ತಿದ್ದ ಟ್ರಕ್​ನ ಚಕ್ರದ​ ಪಕ್ಕದಲ್ಲಿಯೇ ಗಡದ್ದಾಗಿ ನಿದ್ದೆ ಹೊಡೆದ !

ವೇಗವಾಗಿ ಚಲಿಸುವ ಟ್ರಕ್​ನ ಪಕ್ಕದಲ್ಲೇ ಇರುವ ಡಕ್ಟ್​ ಮೇಲೆ ವ್ಯಕ್ತಿಯೊಬ್ಬ ಮಲಗಿರುವುದನ್ನು ನೋಡಿ ಆತನ ಧೈರ್ಯಕ್ಕೆ ಮೆಚ್ಚಬೇಕು ಎಂದು ನೆಟ್ಟಿಗರು ವೈರಲ್ (Viral Video) ​ ಮಾಡಿದ್ದಾರೆ.

VISTARANEWS.COM


on

Viral Video
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವ ದೆಹಲಿ: ವೇಗವಾಗಿ ಹೋಗುವ ಟ್ರಕ್​ನ ಒಳಗೆ ಮಲಗುವುದೇ ಭಯಾನಕ ಸಂಗತಿ. ಅಂಥದ್ದರಲ್ಲಿ ಅದರ ಚಕ್ರದ ಪಕ್ಕದಲ್ಲಿಯೇ ಗಡದ್ದಾಗಿ ನಿದ್ದೆ ಹೊಡೆಯುವುದು ಎಂದರೆ ಆತನ ಧೈರ್ಯಕ್ಕೆ ಹ್ಯಾಟ್ಸ್​​ಆಫ್​ ಹೇಳಲೇಬೇಕು. ಈ ರೀತಿಯಾಗಿ ಚಲಿಸುತ್ತಿರುವ ಟ್ರಕ್​ನ ಕೆಳಗೆ ಚೆನ್ನಾಗಿ ನಿದ್ದೆ ಮಾಡುತ್ತಾ ಹೋಗುತ್ತಿರುವ ವಿಡಿಯೊವೊಂದು ವೈರಲ್​ ಆಗಿದೆ. ಸಾಮಾಜಿಕ ಮಾಧ್ಯಮ ಬಳಕೆದಾರರನ್ನು ಈ ವಿಡಿಯೊ (Viral Video) ದಿಗ್ಭ್ರಮೆಗೊಳಿಸಿದೆ.

ವಿಡಿಯೊದಲ್ಲಿ ಚಕ್ರದ ಪಕ್ಕದಲ್ಲಿರುವ ಕಂಪಾರ್ಟ್​ಮೆಂಟ್​​ನಲ್ಲಿ ವ್ಯಕ್ತಿಯೊಬ್ಬರು ಗಾಢ ನಿದ್ರೆಗೆ ಜಾರಿದ್ದಾರೆ. ವೀಕ್ಷಕರು ಈ ಧೈರ್ಯಶಾಲಿ ವ್ಯಕ್ತಿ ಯಾರೆಂದು ಹುಡುಕಾಡುತ್ತಿದ್ದಾರೆ. ವೈರಲ್ ಆಗಿರುವ ವೀಡಿಯೊದಲ್ಲಿ, ವೇಗವಾಗಿ ಚಲಿಸುತ್ತಿದ್ದ ಟ್ರಕ್ ಪಕ್ಕದಲ್ಲಿ ಮೋಟಾರ್ ಬೈಕಿನಲ್ಲಿದ್ದ ಹೋಗುತ್ತಿದ್ದ ವ್ಯಕ್ತಿ ವ್ಯಕ್ತಿ ಮಲಗಿರುವುದನ್ನು ವಿಡಿಯೊ ಮಾಡಿದ್ದಾರೆ.

ಚಕ್ರ ಪಕ್ಕದಲ್ಲೇ ಇರುವ ಡಕ್ಟ್​ನಲ್ಲಿ ವ್ಯಕ್ತಿ ನಿದ್ದೆ ಮಾಡಿರುವುದಕ್ಕೆ ಹಲವು ಕಾರಣಗಳಿರಬಹುದು ಎಂದು ನೆಟ್ಟಿಗರು ಅಂದಾಜು ಮಾಡಿದ್ದಾರೆ . ಒಂದು ಸುಡುವ ಬಿಸಿಲಿನಿಂದ ತಪ್ಪಿಸಿಕೊಳ್ಳುವುದು. ಎರಡನೆಯದ್ದು ಚೆನ್ನಾಗಿ ಗಾಳಿ ಬೀಸಲಿ ಎಂದು ಹಾಗೂ ಮೂರನೆಯದ್ದು ಮಲಗಲು ಸಾಕಷ್ಟು ಜಾಗ ಸಿಗಲಿ ಎಂದು ನೆಟ್ಟಿಗರು ಬರೆದುಕೊಂಡಿದ್ದಾರೆ.

ವೀಡಿಯೊದ ಶೀರ್ಷಿಕೆಯು ಟರ್ಕಿಶ್ ಭಾಷೆಯಲ್ಲಿದೆ. ಜತೆಗೆ ಇಂಗ್ಲಿಷ್​ಗೆ ಭಾಷಾಂತರ ಮಾಡಲಾಗಿದೆ. ನೀವು ಇಂಥದ್ದೊಂದು ಹಾಸಿಗೆಯನ್ನು ಎಂದಿಗೂ ನೋಡಿಲ್ಲ ಎಂದು ಹಾಸ್ಯಮಯವಾಗಿ ಹೇಳಲಾಗಿದೆ. ಟ್ರಕನ್​ ಟೈರ್ ಗಳು ಸ್ಫೋಟಗೊಳ್ಳುವ ಸಾಧ್ಯತೆಯಿರುವ ಬಗ್ಗೆ ಲಘು ತಮಾಷೆಗಳಿಂದ ಹಿಡಿದು ವ್ಯಕ್ತಿಯ ಸುರಕ್ಷತೆಯ ಬಗ್ಗೆ ನಿಜವಾದ ಕಾಳಜಿಯವರೆಗೆ ಹಲವಾರು ಕಾಮೆಂಟ್ ಗಳು ಬಂದಿವೆ. “ಚಾಲಕ ಬಲವಾಗಿ ಬ್ರೇಕ್ ಹೊಡೆಯುವವರೆಗೂ ಅವನು ಚೆನ್ನಾಗಿರುತ್ತಾನೆ” ಎಂದು ಒಂದು ಕಾಮೆಂಟ್ ಬರೆಯಲಾಗಿದೆ.

ಇದನ್ನೂ ಓದಿ : Samantha Ruth Prabhu: ಮತ್ತೆ ಒಂದಾಗ್ತಾರಾ ಸಮಂತಾ-ನಾಗಚೈತನ್ಯ? ಫೋಟೊ ವೈರಲ್‌!

ಇನ್ನೊಬ್ಬರು ತಮಾಷೆಯಾಗಿ ಯೋಚಿಸಿದರು ಟೈರ್ ಗಳು ಸ್ಫೋಟಗೊಂಡರೆ ಏನಾಗುತ್ತದೆ?” ಏತನ್ಮಧ್ಯೆ, ಸಹಾನುಭೂತಿಯುಳ್ಳ ವ್ಯಕ್ತಿಯೊಬ್ಬರು ಓ ದೇವರೇ! ಈ ಬಡವ ತನ್ನ ಜೀವನೋಪಾಯಕ್ಕಾಗಿ ಬಹಳ ಕಷ್ಟಪಟ್ಟು ಕೆಲಸ ಮಾಡಿರಬೇಕು. ದಯವಿಟ್ಟು ಅವನ ಬಗ್ಗೆ ಕರುಣೆ ತೋರು! ಎಂದು ಹೇಳಿದ್ದಾರೆ. ಅಂದ ಹಾಗೆ ಈ ವಿಡಿಯೊ ಇನ್​ಸ್ಟಾಗ್ರಾಮ್​ನಲ್ಲಿ 7.6 ಮಿಲಿಯನ್ ವೀಕ್ಷಣೆಗಳನ್ನು ಕಂಡಿವೆ.

ಎಲ್ಲಿನ ವಿಡಿಯೊ ಎಂದು ಗೊತ್ತಿಲ್ಲ

ವೀಡಿಯೊದ ಎಲ್ಲಿನದು ಎಂಬುದು ರಹಸ್ಯವಾಗಿ ಉಳಿದಿದೆ, ವಾಹನದ ನಂಬರ್ ಪ್ಲೇಟ್ ಸೇರಿದಂತೆ ಗುರುತಿಸಬಹುದಾದ ಯಾವುದೇ ಸುಳಿವು ಸಿಕ್ಕಿಲ್ಲ, ಬೈಕ್​ನಲ್ಲಿ ಸಾಗುತ್ತಿದ್ದ ವ್ಯಕ್ತಿಯೊಬ್ಬರು ಸ್ಮಾರ್ಟ್​​ಫೋನ್​ನಲ್ಲಿ ವಿಡಿಯೊ ಮಾಡಿ ಅಪ್​ಲೋಡ್​ ಮಾಡಿದಂತಿದೆ. ಅವರು ನಿರೀಕ್ಷೆ ಮಾಡದ ರೀತಿಯಲ್ಲಿ ವೈರಲ್​ ಆಗಿದೆ.

ಈ ವಿಡಿಯೊ ಬೆಂಗಳೂರಿನಲ್ಲಿ ನಡೆದ ದುರಂತವೊಂದನ್ನು ನೆನಪಿಗೆ ತರುತ್ತದೆ, ಅಲ್ಲಿ ಕಾರ್ಮಿಕನೊಬ್ಬ ಮಳೆಯಿಂದ ಆಶ್ರಯ ಪಡೆಯಲೆಂದು ನಿಲ್ಲಿಸಿದ್ದ ಟ್ರಕ್ ಅಡಿಯಲ್ಲಿ ಮಲಗಿದ್ದ. ಆದರೆ, ಆತ ಮಲಗಿರುವುದು ತಿಳಿಯದ ಟ್ರಕ್ ಚಾಲಕ ಲಾರಿಯನ್ನು ಮುಂದಕ್ಕೆ ಚಲಾಯಿಸಿದ್ದ. ಕೆಳಗೆ ಮಲಗಿದ್ದ ವ್ಯಕ್ತಿ ನೇರವಾಗಿ ಚಕ್ರದ ಅಡಿಗೆ ಸಿಲುಕಿ ಮೃತಪಟ್ಟಿದ್ದ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ವಿದೇಶ

Viral Video: ತುಂಬಿದ ಸಭೆಯಲ್ಲಿ ಕಣ್ಣೀರಿಟ್ಟ ಉತ್ತರ ಕೊರಿಯಾ ಸರ್ವಾಧಿಕಾರಿ!

Viral Video: ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್​ ಜಾಂಗ್​ ಉನ್ ತುಂಬಿದ ಸಭೆಯಲ್ಲಿ ಕಣ್ಣೀರು ಸುರಿಸಿರುವ ವಿಡಿಯೊ ವೈರಲ್‌ ಆಗಿದೆ. ಈ ಕುರಿತಾದ ವಿವರ ಇಲ್ಲಿದೆ.

VISTARANEWS.COM


on

kim
Koo

ಉತ್ತರ ಕೊರಿಯಾ: ಉತ್ತರ ಕೊರಿಯಾ (North Korea)ದಲ್ಲಿ ಮಕ್ಕಳ ಸಂಖ್ಯೆ ಕಡಿಮೆ ಇದೆ. ಹೀಗಾಗಿ ಸರ್ವಾಧಿಕಾರಿ ಕಿಮ್​ ಜಾಂಗ್​ ಉನ್(Kim Jong Un) ಹೆಚ್ಚು ಮಕ್ಕಳನ್ನು ಹೆರುವಂತೆ ಮಹಿಳೆಯರಲ್ಲಿ ಮನವಿ ಮಾಡಿ ಕಣ್ಣೀರು ಸುರಿಸಿದ್ದಾರೆ. ಭಾನುವಾರ (ಡಿಸೆಂಬರ್‌ 3) ನಡೆದ ತಾಯಂದಿರ ರಾಷ್ಟ್ರೀಯ ಸಭೆಯಲ್ಲಿ ಈ ಘಟನೆ ನಡೆದಿದೆ. ಸದ್ಯ ಕಿಮ್​ ಜಾಂಗ್​ ಉನ್ ಕಣ್ಣೀರು ಸುರಿಸಿರುವ ವಿಡಿಯೊ ವೈರಲ್ ಆಗುತ್ತಿದೆ (Viral Video).

ಉತ್ತರ ಕೊರಿಯಾದಲ್ಲಿ ಜನನ ಪ್ರಮಾಣವು ಕುಸಿಯುತ್ತಿದೆ. ಆದ್ದರಿಂದ ‘ರಾಷ್ಟ್ರೀಯ ಶಕ್ತಿಯನ್ನು ಬಲಪಡಿಸುವ’ ಪ್ರಯತ್ನದ ಭಾಗವಾಗಿ ಹೆಚ್ಚಿನ ಮಕ್ಕಳನ್ನು ಹೊಂದುವಂತೆ ಕಿಮ್ ಕರೆ ನೀಡಿದ್ದಾರೆ. ಬಳಿಕ ಅವರು ಭಾವುಕರಾಗಿದ್ದಾರೆ. ಬಿಳಿ ಕರವಸ್ತ್ರದಿಂದ ಕಣ್ಣುಗಳನ್ನು ಒರೆಸಿಕೊಳ್ಳುವುದು ವಿಡಿಯೊದಲ್ಲಿ ಸೆರೆಯಾಗಿದೆ. ಈ ವೇಳೆ ಸಭೆಯಲ್ಲಿದ್ದ ಅನೇಕ ಮಹಿಳೆಯರು ಕೂಡ ಭಾವುಕರಾಗಿದ್ದಾರೆ. “ಜನನ ಪ್ರಮಾಣವನ್ನು ಹೆಚ್ಚಿಸಲು ಮತ್ತು ಮಕ್ಕಳ ಆರೈಕೆ, ಉತ್ತಮ ಶಿಕ್ಷಣವನ್ನು ಒದಗಿಸಲು ವಾವೆಲ್ಲ ಒಂದಾಗಿ ಕಾರ್ಯ ನಿರ್ವಹಿಸಬೇಕು. ಸಮಸ್ಯೆ ಪರಿಹಾರಕ್ಕೆ ತಾಯಂದಿರೊಂದಿಗೆ ನಾವೆಲ್ಲ ಕೈ ಜೋಡಿಸೋಣʼʼ ಎಂದು ಕಿಮ್ ಹೇಳಿದ್ದಾರೆ.

ಕಾರಣವೇನು?

ವಿಶ್ವಸಂಸ್ಥೆಯ ಅಂಕಿ-ಅಂಶಗಳ ಪ್ರಕಾರ, ಇತ್ತೀಚಿನ ದಶಕಗಳಲ್ಲಿ ಉತ್ತರ ಕೊರಿಯಾದಲ್ಲಿ ಜನನ ಪ್ರಮಾಣ ಕುಸಿತ ಕಂಡಿದೆ. 2023ರ ವೇಳೆಗೆ ಇಲ್ಲಿ ಜನಿಸುವ ಸರಾಸರಿ ಮಕ್ಕಳ ಸಂಖ್ಯೆ 1.8ರಷ್ಟಿದೆ. ಸ್ಪರ್ಧಾತ್ಮಕ ಶಾಲಾ ಮಾರುಕಟ್ಟೆ, ದುರ್ಬಲ ಮಕ್ಕಳ ಆರೈಕೆ, ಪುರುಷ ಕೇಂದ್ರಿತ ಕಾರ್ಪೊರೇಟ್ ಸಂಸ್ಕೃತಿ ಇತ್ಯಾದಿ ಇದಕ್ಕೆ ಕಾರಣ ಎಂದು ತಜ್ಞರು ಹೇಳುತ್ತಾರೆ.

1970-80ರ ದಶಕದಲ್ಲಿ ಜನಸಂಖ್ಯಾ ಬೆಳವಣಿಗೆಯನ್ನು ನಿಧಾನಗೊಳಿಸಲು ಉತ್ತರ ಕೊರಿಯಾ ಜನನ ನಿಯಂತ್ರಣ ಯೋಜನೆಗಳನ್ನು ಜಾರಿಗೆ ತಂದಿತ್ತು. ಈ ಮಧ್ಯೆ 1990ರ ದಶಕದ ಮಧ್ಯಭಾಗದಲ್ಲಿ ಕಾಣಿಸಿಕೊಂಡ ಕ್ಷಾಮದ ಪರಿಣಾಮ ಲಕ್ಷಾಂತರ ಮಂದಿ ಅಸುನೀಗಿದ್ದರು ಎಂದು ಮೂಲಗಳು ತಿಳಿಸಿವೆ.

ವಿವಿಧ ಕೊಡುಗೆಗಳ ಘೋಷಣೆ

ಇದೀಗ ಜನಸಂಖ್ಯೆ ಹೆಚ್ಚಿಸಲು ನಿರ್ಧರಿಸಿರುವ ಉತ್ತರ ಕೊರಿಯಾ ಮೂರು ಅಥವಾ ಅದಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿರುವ ಕುಟುಂಬಗಳಿಗೆ ವಿವಿಧ ಕೊಡುಗೆಗಳನ್ನು ಘೋಷಿಸಿದೆ. ಇಂತಹ ಕುಟುಂಬಗಳಿಗೆ ಉಚಿತ ವಸತಿ ವ್ಯವಸ್ಥೆ, ಸಬ್ಸಿಡಿ, ಉಚಿತ ಆಹಾರ, ಔಷಧ ಮತ್ತು ಗೃಹೋಪಯೋಗಿ ವಸ್ತುಗಳ ಪೂರೈಕೆ ಮತ್ತು ಈ ವರ್ಷ ಮಕ್ಕಳಿಗೆ ಶೈಕ್ಷಣಿಕ ಸವಲತ್ತುಗಳು ಸೇರಿದಂತೆ ಹಲವು ಕೊಡುಗೆಗಳನ್ನು ಪರಿಚಯಿಸಿದೆ ಎಂದು ಮೂಲಗಳು ವರದಿ ಮಾಡಿವೆ.

ಇದನ್ನೂ ಓದಿ: Viral video: ಭಾರತ ವಶಪಡಿಸಿಕೊಂಡು ಮೋದಿಗೆ ಬೇಡಿ ಬಿಗಿಯುವೆ! ಪಾಕ್‌ ಸೇನಾಧಿಕಾರಿಯ ಬಡಾಯಿ!

ಹ್ಯುಂಡೈ ಇನ್‌ಸ್ಟಿಟ್ಯೂಟ್‌ ವರದಿ ಪ್ರಕಾರ, ಉತ್ತರ ಕೊರಿಯಾದಲ್ಲಿ 2034ರಿಂದ ಜನಸಂಖ್ಯೆ ತೀವ್ರವಾಗಿ ಕುಗ್ಗುವ ಸಾಧ್ಯತೆ ಇದೆ. 2070ರ ವೇಳೆಗೆ ಇಲ್ಲಿನ ಜನಸಂಖ್ಯೆ 23.7 ಮಿಲಿಯನ್‌ (23,700,000)ಗೆ ಕುಸಿಯುವ ಅಂದಾಜಿದೆ ಎಂದು ಹೇಳಿದೆ. ಈ ಮಧ್ಯೆ ಪುರುಷ ಪ್ರಧಾನ ವ್ಯವಸ್ಥೆಯಿಂದಾಗಿ ಉತ್ತರ ಕೊರಿಯಾದಲ್ಲಿ ಮಹಿಳೆಯರ ವಿರುದ್ಧ ಕೌಟುಂಬಿಕ ಹಿಂಸಾಚಾರ ಮತ್ತು ಲೈಂಗಿಕ ಕಿರುಕುಳದ ಪ್ರಕರಣಗಳು ಹೆಚ್ಚಾಗುತ್ತಿದೆ. ಆದರೆ ಅದು ವರದಿಯಾಗುವುದಿಲ್ಲ ಎಂದು ಮಾನವ ಹಕ್ಕುಗಳ ಕಾರ್ಯಕರ್ತರು ಕಳವಳ ವ್ಯಕ್ತಪಡಿಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ

Continue Reading

ದೇಶ

Mamata Banerjee: ಸಲ್ಮಾನ್‌ ಖಾನ್‌ ಜತೆ ಮಮತಾ ಬ್ಯಾನರ್ಜಿ ಡ್ಯಾನ್ಸ್‌! ವಿಡಿಯೊ ಇಲ್ಲಿದೆ

Mamata Banerjee: 29ನೇ ಕೋಲ್ಕತ್ತಾ ಇಂಟರ್​ನ್ಯಾಷನಲ್ ಫಿಲ್ಮ್​ ಫೆಸ್ಟಿವಲ್‌ನಲ್ಲಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಡ್ಯಾನ್ಸ್‌ ಮಾಡಿದ್ದು, ವಿಡಿಯೊ ವೈರಲ್‌ ಆಗಿದೆ.

VISTARANEWS.COM


on

mamtha
Koo

ಕೋಲ್ಕತ್ತಾ: ಸದಾ ರಾಜಕೀಯದಲ್ಲಿ ಬ್ಯುಸಿ ಇರುವ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee) ರಾಜಕೀಯವನ್ನೆಲ್ಲ ಮರೆತು ವೇದಿಕೆ ಮೇಲೆ ಡ್ಯಾನ್ಸ್‌ ಮಾಡಿದ್ದಾರೆ. ಬಾಲಿವುಡ್‌ ನಟ ಸಲ್ಮಾನ್‌ ಖಾನ್‌ (Salman Khan) ಜತೆ ಮಮತಾ ಸ್ಟೆಪ್‌ ಮಾಡಿದ್ದು, ವಿಡಿಯೊ ವೈರಲ್‌ ಆಗಿದೆ. ನೇತಾಜಿ ಒಳಾಂಗಣ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ 29ನೇ ಕೋಲ್ಕತ್ತಾ ಇಂಟರ್​ನ್ಯಾಷನಲ್ ಫಿಲ್ಮ್​ ಫೆಸ್ಟಿವಲ್ (KIFF) ಮಂಗಳವಾರ (ಡಿಸೆಂಬರ್ 6) ಉದ್ಘಾಟನೆಗೊಂಡಿತು. ಈ ವೇಳೆ ಮಮತಾ ಡ್ಯಾನ್ಸ್‌ ಮಾಡಿ ಬೆರಗು ಮೂಡಿಸಿದರು.

ಸಲ್ಮಾನ್ ಖಾನ್ ಹಾಗೂ ಇತರ ಸೆಲೆಬ್ರಿಟಿಗಳು ದೀಪ ಬೆಳಗಿ ಕಾರ್ಯಕ್ರಮ ಉದ್ಘಾಟಿಸಿದರು. ಆ ವೇಳೆ ಮಮತಾ ಬ್ಯಾನರ್ಜಿ ವೇದಿಕೆ ಮೇಲೆ ಕುಳಿತಿದ್ದರು. ಈ ವೇಳೆ ಡ್ಯಾನ್ಸ್ ಮಾಡುವಂತೆ ಮಮತಾ ಬ್ಯಾನರ್ಜಿ ಬಳಿ ಬಂದು ಸಲ್ಮಾನ್ ಖಾನ್ ಮನವಿ ಮಾಡಿದರು. ಅದಕ್ಕೆ ಮಮತಾ ಬ್ಯಾನರ್ಜಿ ಒಪ್ಪಿ ಡ್ಯಾನ್ಸ್ ಮಾಡಿದ್ದಾರೆ. ಈ ವೇಳೆ ಸಲ್ಮಾನ್, ಮಮತಾ ಮಾತ್ರವಲ್ಲದೆ ಮಹೇಶ್ ಭಟ್, ಅನಿಲ್ ಕಪೂರ್, ಸೋನಾಕ್ಷಿ ಸಿನ್ಹಾ, ಶತ್ರುಘ್ನ ಸಿನ್ಹಾ ಕೂಡ ಸೊಂಟ ಬಳುಕಿಸಿದ್ದಾರೆ. ವೇದಿಕೆಯಲ್ಲೇ ಇದ್ದ ಸೌರವ್‌ ಗಂಗೂಲಿ ನಗುತ್ತಾ ಚಪ್ಪಾಳೆ ತಟ್ಟುತ್ತಿರುವುದು ವಿಡಿಯೊದಲ್ಲಿ ಕಂಡು ಬಂದಿದೆ.

ಮಮತಾ ಬ್ಯಾನರ್ಜಿ ಜಾಸ್ತಿ ಸ್ಟೆಪ್ಸ್‌ ಹಾಕಿಲ್ಲ. ಬರೀ ಕೈ ಬೀಸಿದ್ದಾರೆ. ಇದನ್ನೇ ಕೆಲವರು ಟ್ರೋಲ್‌ ಮಾಡುತ್ತಿದ್ದಾರೆ. ಅಲ್ಲದೆ ಮಮತಾ ಬ್ಯಾನರ್ಜಿ ಅವರಿಂದ ಸ್ಟೆಪ್‌ ಮಾಡಿಸಿದ ಸಲ್ಮಾನ್‌ ಖಾನ್‌ ಅವರಿಗೂ ಹಲವರು ಮೆಚ್ಚುಗೆ ಸೂಚಿಸಿದ್ದಾರೆ. ಡಿಸೆಂಬರ್ 12ರವರೆಗೆ ಚಲನಚಿತ್ರೋತ್ಸವ ನಡೆಯಲಿದೆ. ಈ ವೇಳೆ 39 ದೇಶಗಳ 219 ಚಲನಚಿತ್ರ ಪ್ರದರ್ಶನವಾಗಲಿದೆ. ಹಲವು ಸೆಲೆಬ್ರಿಟಿಗಳು, ನಿರ್ದೇಶಕರು, ವಿಮರ್ಶಕರು ಭಾಗಿ ಆಗಲಿದ್ದಾರೆ.

ಇದನ್ನೂ ಓದಿ: Aamir Khan: ಚೆನ್ನೈ ಪ್ರವಾಹ ಪೀಡಿತ ಸ್ಥಳದಿಂದ ಬಾಲಿವುಡ್‌ ನಟ ಆಮೀರ್ ಖಾನ್ ಗ್ರೇಟ್‌ ಎಸ್ಕೇಪ್‌

Continue Reading

ದೇಶ

Viral video: ಭಾರತ ವಶಪಡಿಸಿಕೊಂಡು ಮೋದಿಗೆ ಬೇಡಿ ಬಿಗಿಯುವೆ! ಪಾಕ್‌ ಸೇನಾಧಿಕಾರಿಯ ಬಡಾಯಿ!

ಪಾಕಿಸ್ತಾನದ ರಾಜಕಾರಣಿಗಳು ಹಾಗೂ ಕ್ರಿಕೆಟಿಗರು ಭಾರತದ ವಿರುದ್ಧ ಅಬ್ಬರದ ಹೇಳಿಕೆಗಳನ್ನು ನೀಡುವುದು ಸಾಮಾನ್ಯ. ಕಡೆಗೆ ತಮ್ಮ ನಾಲಿಗೆ ತಾವೇ ಕಚ್ಚಿಕೊಳ್ಳುವುದೂ ಸಾಮಾನ್ಯ. ಇದೂ ಕೂಡ ಅಂಥದೇ ಘಟನೆ.

VISTARANEWS.COM


on

viral video pak military officer
Koo

ಕರಾಚಿ: ಭಾರತ ಹಾಗೂ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ (PM Narendra Modi) ಬಗ್ಗೆ ನಾಲಿಗೆ ಹರಿಬಿಟ್ಟು ಮಂದಿಯ ಮುಂದೆ ಚಪ್ಪಾಳೆ ಗಿಟ್ಟಿಸಿಕೊಂಡ ಪಾಕಿಸ್ತಾನದ ಸೇನಾಧಿಕಾರಿಯೊಬ್ಬ (Pakistan military) ಆನ್‌ಲೈನ್‌ನಲ್ಲಿ ಭರ್ಜರಿ ಟ್ರೋಲ್‌ (Viral video) ಆಗುತ್ತಿದ್ದಾನೆ.

ಪಾಕಿಸ್ತಾನದ ರಾಜಕಾರಣಿಗಳು ಹಾಗೂ ಕ್ರಿಕೆಟಿಗರು ಭಾರತದ ವಿರುದ್ಧ ಅಬ್ಬರದ ಹೇಳಿಕೆಗಳನ್ನು ನೀಡುವುದು ಸಾಮಾನ್ಯ. ಕಡೆಗೆ ತಮ್ಮ ನಾಲಿಗೆ ತಾವೇ ಕಚ್ಚಿಕೊಳ್ಳುವುದೂ ಸಾಮಾನ್ಯ. ಇದೂ ಕೂಡ ಅಂಥದೇ ಘಟನೆ. ಪಾಕಿಸ್ತಾನ ಸೇನೆಯ ಹಿರಿಯ ಅಧಿಕಾರಿಯೊಬ್ಬ ಒಂದಷ್ಟು ಜನರ ಗುಂಪಿನ ನಡುವೆ “ಭಾರತವನ್ನು ವಶಪಡಿಸಿಕೊಳ್ಳುತ್ತೇವೆ, ಪ್ರಧಾನಿ ನರೇಂದ್ರ ಮೋದಿಯನ್ನು (PM Narendra Modi) ಬಂಧಿಸುತ್ತೇವೆ ಎಂದೆಲ್ಲಾ ಹೇಳಿದ್ದಾನೆ. ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ (Social Media) ವೈರಲ್ ಆಗುತ್ತಿದೆ.

ಮುಸ್ಲಿಮರನ್ನು ಭಾರತದ ವಿರುದ್ಧ ಎತ್ತಿ ಕಟ್ಟುವುದನ್ನೇ ರೂಢಿ ಮಾಡಿಕೊಂಡಿರುವ ಪಾಕ್‌ ಸೈನ್ಯಕ್ಕೆ ಸೇರಿದ ಅಧಿಕಾರಿಯೊಬ್ಬ ಹೀಗೆ ಮಾಡಿದ್ದಾನೆ. ವಿಡಿಯೋದಲ್ಲಿ ಆತನ ದ್ವೇಷದ ಭಾಷಣ ದಾಖಲಾಗಿದೆ. ಭಾರತದ ಆಡಳಿತಗಾರ ಮೋದಿಯನ್ನು ನಾವು ಗುಲಾಮರನ್ನಾಗಿ ಮಾಡಿಕೊಳ್ಳುತ್ತೇವೆ. ಮೋದಿ ಕೈಗೆ ಸರಪಳಿ ಹಾಕಿ ಬಂಧಿಸುವುದನ್ನು ನಮ್ಮನ್ನು ಬಿಟ್ಟು ಬೇರೆ ಯಾರು ಬಯಸುತ್ತಾರೆ ಎಂದಿದ್ದಾನೆ. ನಂತರ ಪ್ಯಾಲೆಸ್ತೀನ್ ಅನ್ನು ಇಸ್ರೇಲ್‌ನಿಂದ ಬಿಡಿಸಿ ಸ್ವಾತಂತ್ರ್ಯ ಕೊಡಿಸುತ್ತೇವೆ ಎಂದು ಹೇಳಿದ್ದಾನೆ.

ಈ ತಿಕ್ಕಲನ ಮಾತು ಕೇಳಿ ಅಲ್ಲಿದ್ದವರೇನೋ ಚಪ್ಪಾಳೆ ತಟ್ಟಿದ್ದಾರೆ, ನಿಜ. ಆದರೆ ಆನ್‌ಲೈನ್‌ನಲ್ಲಿ ಮಾತ್ರ ಆತ ಭರ್ಜರಿ ಟ್ರೋಲ್‌ಗೆ ಗುರಿಯಾಗಿದ್ದಾನೆ. ಪಾಕಿಸ್ತಾನದ ಸೈನ್ಯ ಈ ಹಿಂದೆ ಭಾರತದ ಎದುರು ಏಟು ತಿಂದ, ಅಪಮಾನಕ್ಕೊಳಗಾದ ಘಟನೆಗಳನ್ನು ನೆನಪಿಸಿ ಗೇಲಿ ಮಾಡಿದ್ದಾರೆ.

“ತಿನ್ನಲು ಏನೂ ಸಿಗದೇ ಅಕ್ಕ ಪಕ್ಕದ ದೇಶಗಳ ಮುಂದೆ ಭಿಕ್ಷೆ ಬೇಡುತ್ತಿದ್ದರೂ ಧಿಮಾಕಿನ ಮಾತಿಗೆ ಏನೂ ಕಡಿಮೆ ಇಲ್ಲ. ನಮ್ಮ ದೇಶಕ್ಕೆ ಬರುವ ಕನಸು ಕಾಣುವ ಮೊದಲು ನಿಮ್ಮ ದೇಶದ ಪ್ರಜೆಗಳಿಗೆ ಹೊಟ್ಟೆ ತುಂಬಾ ಊಟ ಹಾಕು” ಎಂದು ಕೆಲವರು ತರಾಟೆಗೆ ತೆಗೆದುಕೊಂಡಿದ್ದಾರೆ. “ಜನಗಳ ಮುಂದೆ ಭಾರತದ ಪ್ರಧಾನಿಯನ್ನು ಬಂಧಿಸುತ್ತೇವೆ ಎಂದು ಜಂಭ ಕೊಚ್ಚಿಕೊಳ್ಳುವ ಪಾಕ್‌ ಸೈನ್ಯದವರು ಕೊನೆಗೆ ಆ ದೇಶದ ಪ್ರಧಾನಿಗಳನ್ನೇ ಬಂಧಿಸುತ್ತಾರೆ. ಹಲವು ದಶಕಗಳಿಂದ ಇದು ನಡೆಯುತ್ತಲೇ ಇದೆ. ಇಮ್ರಾನ್ ಖಾನ್, ಪರ್ವೇಜ್‌ ಮುಷರ್ರಫ್‌, ನವಾಜ್ ಷರೀಫ್‌ ಅವರ ಗತಿ ನೋಡಿ” ಎಂದು ಇನ್ನು ಹಲವರು ಕಾಲೆಳೆದಿದ್ದಾರೆ.

“ಭಾರತದ ಪ್ರಧಾನಿಯನ್ನು ಬಂಧಿಸುವ ಯೋಚನೆ ಮಾಡುವ ಮುನ್ನ ಪಾಕಿಸ್ತಾನ 1971ರ ಯುದ್ಧವನ್ನು ನೆಪಿಸಿಕೊಳ್ಳಲಿ. ಇಡೀ ಜಗತ್ತಿನಲ್ಲಿ ಅತಿ ಹೆಚ್ಚು ಸೈನಿಕರು ಶರಣಾಗಿದ್ದು ನಿಮ್ಮ ದೇಶದಿಂದಲೇ” ಎಂದು ಬಾಂಗ್ಲಾ ವಿಮೋಚನೆ ಸಂದರ್ಭದ ಫೋಟೋ ಜೊತೆಗೆ ಪೋಸ್ಟ್‌ ಮಾಡಿ ಆತನ ಜನ್ಮ ಜಾಲಾಡಿದ್ದಾರೆ. ಬಾಂಗ್ಲಾ ದೇಶ ವಿಮೋಚನೆಗಾಗಿ ನಡೆದ ಯುದ್ಧದ ಸಂದರ್ಭ ಭಾರತದ ಸೈನ್ಯದ ಮುಂದೆ 93 ಸಾವಿರ ಪಾಕಿಸ್ತಾನದ ಸೈನಿಕರು ಶರಣಾಗಿದ್ದರು.

Continue Reading

ಕ್ರಿಕೆಟ್

Rahul Dravid : ರಿಚ್ಮಂಡ್​ ಸರ್ಕಲ್ ಫ್ಲೈಓವರ್​ ಕೆಳಗಡೆ ಕ್ರಿಕೆಟ್​ ಅಡಿದ ದ್ರಾವಿಡ್​, ಕುಂಬ್ಳೆ, ಶ್ರೀನಾಥ್​…

Rahul Dravid: ಅನಿಲ್ ಕುಂಬ್ಳೆ, ರಾಹುಲ್ ದ್ರಾವಿಡ್ ಸೇರಿದಂತೆ ಹಲವರ ಚಿತ್ರಗಳನ್ನು ಫೈಓವರ್​ಗಳ ಪಿಲ್ಲರ್​ಗಳಲ್ಲಿ ಬಿಡಿಸಿ ಅಭಿಮಾನಿಗಳಿಗೆ ಖುಷಿ ಕೊಡಲಾಗಿದೆ.

VISTARANEWS.COM


on

Rahul Dravid
Koo

ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕ್ರಿಕೆಟ್​ ಸಂಸ್ಕೃತಿ ವ್ಯಾಪಕವಾಗಿದೆ. ಈ ನಗರದಲ್ಲಿ ಕ್ರಿಕೆಟ್ ಆಟವನ್ನು ಆಟವನ್ನು ಹಾಗೂ ಆಟಗಾರರನ್ನು ಆರಾಧಿಸುತ್ತಾರೆ. ಹೀಗಾಗಿ ಬೆಂಗಳೂರು ಕೇಂದ್ರಿದವಾಗಿ ಕರ್ನಾಟಕದಿಂದ ಹಲವಾರು ಅಂತಾರಾಷ್ಟ್ರಿಯ ಕ್ರಿಕೆಟಿಗರು ಮೂಡಿ ಬಂದಿದ್ದಾರೆ. ಅವರೆಲ್ಲರೂ ಕ್ರಿಕೆಟ್​ ಕ್ಷೇತ್ರದಲ್ಲಿ ದೊಡ್ಡ ಹೆಸರು ಮಾಡಿದವರು. ಗುಂಡಪ್ಪ ವಿಶ್ವನಾಥ್​, ಜಾವಗಲ್​ ಶ್ರೀನಾಥ್​, ವೆಂಕಟೇಶ್ ಪ್ರಸಾದ್, ರಾಹುಲ್ ದ್ರಾವಿಡ್, ಅನಿಲ್​ ಕುಂಬ್ಳೆ ಈ ಪಟ್ಟಿಯ ಅಗ್ರಗಣ್ಯರು. ಇವರೆಲ್ಲರೂ ಸೇರಿಕೊಂಡು ಈಗ ಬೆಂಗಳೂರಿನ ಹೃದಯ ಭಾಗದಲ್ಲಿರುವ ರಿಚ್ಮಂಡ್​ ಸರ್ಕಲ್​ ಬಳಿ ಇರುವ ಫ್ಳೈಓವರ್​ ಕೆಳಗೆ ಆಡಿದರೆ ಹೇಗಿರುತ್ತದೆ. ಕ್ರಿಕೆಟ್ ಅಭಿಮಾನಿಗಳ ಪಾಲಿಗೆ ಅದು ಖಂಡಿತವಾಗಿಯೂ ಹಬ್ಬ. ಹಾಗಾದರೆ ಖಂಡಿತ ಬಂದು ನೋಡಿ. ಅವರೆಲ್ಲರೂ ಇಲ್ಲಿ ನಿರಂತರವಾಗಿ ಕ್ರಿಕೆಟ್ ಆಡುತ್ತಿದ್ದಾರೆ.

ಅಂದ ಹಾಗೆ ಅವರು ನಿಜವಾಗಿಯೂ ಕ್ರಿಕೆಟ್​​ ಆಡುತ್ತಿಲ್ಲ. ಅವರ ಚಿತ್ರವನ್ನು ಅಲ್ಲಿನ ಪಿಲ್ಲರ್​ಗಳಲ್ಲಿ ಬಿಡಿಸಲಾಗಿದೆ. ಹಾಗೆಂದು ನಿರಾಸೆಯಾಗುವುದು ಬೇಡ. ಆ ಚಿತ್ರಗಳನ್ನು ನೋಡುವುದು ಕೂಡ ಖುಷಿಯ ವಿಚಾರವೇ ಸರಿ. ಫ್ಲೈಓವರ್ ಗಳ ಕೆಳಗಿರುವ ಜಾಗವನ್ನು ಹೆಚ್ಚಿಸುವ ಉದ್ದೇಶದಿಂದ ‘ಬ್ರಾಂಡ್ ಬೆಂಗಳೂರು’ ಉಪಕ್ರಮದ ಭಾಗವಾಗಿ ಬೆಂಗಳೂರಿನ ಫ್ಲೈಓವರ್ ನ ಕಂಬಗಳ ಮೇಲೆ ರಾಜ್ಯದ ಕ್ರಿಕೆಟ್ ಐಕಾನ್ ಗಳನ್ನು ಭಿತ್ತಿಚಿತ್ರಗಳನ್ನು ಬರೆಯಲಾಗಿದೆ. ರೋಜರ್ ಬಿನ್ನಿ, ಸೈಯದ್ ಕಿರ್ಮಾನಿ, ವಿ ಸುಬ್ರಮಣ್ಯ, ಅನಿಲ್ ಕುಂಬ್ಳೆ, ರಾಹುಲ್ ದ್ರಾವಿಡ್ ಮತ್ತು ಜಾವಗಲ್ ಶ್ರೀನಾಥ್ ಅವರಂತಹ ಪೂಜ್ಯ ಆಟಗಾರರಿಗೆ ಈ ಭಿತ್ತಿಚಿತ್ರಗಳ ಮೂಲಕ ಗೌರವ ಸಲ್ಲಿಸಲಾಗಿದೆ.

ಚಿನ್ನಸ್ವಾಮಿ ಕ್ರೀಡಾಂಗಣದ ಹೊರತುಪಡಿಸಿ ಸಾರ್ವಜನಿಕ ಸ್ಥಳದಲ್ಲಿ ಇಂತಹ ಉಪಕ್ರಮ ಕೈಗೊಂಡಿರುವುದು ಇದೇ ಮೊದಲು. ಹೀಗಾಗಿ ಬೆಂಗಳೂರಿನ ಕ್ರಿಕೆಟ್​ ಪ್ರೇಮಿಗಳಿಗೆ ಇದು ಖುಷಿಯ ವಿಚಾರವಾಗಿದೆ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಸಹಯೋಗದೊಂದಿಗೆ ಲಾಭರಹಿತ ಸಂಸ್ಥೆಯಾದ ಇಂಡಿಯಾ ರೈಸಿಂಗ್ ಟ್ರಸ್ಟ್ (ಐಆರ್​ಟಿ) ಈ ಭಿತ್ತಿಚಿತ್ರಗಳನ್ನು ಬಿಡಿಸಿದೆ. ಕರ್ನಾಟಕದ ಪ್ರಸಿದ್ಧ ಕ್ರಿಕೆಟಿಗರ ಅಸಾಧಾರಣ ಕೌಶಲ್ಯ ಮತ್ತು ಕೊಡುಗೆಗಳನ್ನು ಸ್ಮರಿಸುವ ಉದ್ದೇಶದಿಂದ ಈ ಚಿತ್ರಗಳನ್ನು ಮಾಡಲಾಗಿದೆ.

ಜಿ.ಆರ್.ವಿಶ್ವನಾಥ್ ಅವರ ಸೊಗಸಾದ ಸ್ಕ್ವೇರ್​ ಜಟ್, ಬಿ.ಎಸ್.ಚಂದ್ರಶೇಖರ್ ಅವರ ಅಸಾಮಾನ್ಯ ಲೆಗ್ ಸ್ಪಿನ್, ಶಾಂತಾ ರಂಗಸ್ವಾಮಿ ಅವರ ಆಕ್ರಮಣಕಾರಿ ಬ್ಯಾಟಿಂಗ್ ಶೈಲಿ ಮತ್ತು ಇಎಎಸ್ ಪ್ರಸನ್ನ ಅವರ ಅಪರೂಪದ ಸ್ಪಿನ್ ಬೌಲಿಂಗ್​ ಕೌಶಲವನ್ನು ಚಿತ್ರಗಳ ಮೂಲಕ ವಿವರಿಸಲಾಗಿದೆ.

ಇದನ್ನೂ ಓದಿ : Chetan Sakariya : ಹರಾಜಿಗೆ ಮೊದಲೇ ಎಂಗೇಜ್ಮೆಂಟ್​ ಮಾಡಿಕೊಂಡ ಐಪಿಎಲ್​ನ ಸ್ಟಾರ್​ ಬೌಲರ್​

ಡಬಲ್ ರೋಡ್ (ಕೆಎಚ್ ರಸ್ತೆ) ಫ್ಲೈಓವರ್ ಮೂಲಕ ಹಾದುಹೋಗುವಾಗ, ಜನರು ಕರ್ನಾಟಕದ ಈ ಪ್ರಸಿದ್ಧ ಕ್ರಿಕೆಟಿಗರ ಪ್ರಯಾಣವನ್ನು ಕಣ್ತುಂಬಿಕೊಳ್ಳಬಹುದಾಗಿದೆ. ಹೆಚ್ಚುವರಿಯಾಗಿ. ಈ ಹಿಂದೆ ಡಬಲ್ ರೋಡ್ ಜಂಕ್ಷನ್ ಎಂದು ಕರೆಯಲ್ಪಡುತ್ತಿದ್ದ ರಿಚ್ಮಂಡ್ ಸರ್ಕಲ್ ಫ್ಲೈಓವರ್ ಕೆಳಗಿರುವ ಜಾಗವನ್ನು ‘ಕ್ರೀಡಾ ಜಂಕ್ಷನ್’ ಎಂದು ಮರುನಾಮಕರಣ ಮಾಡಲಾಗಿದೆ.

ಈ ಸ್ಥಳ ಏಕೆ?

ಚಿನ್ನಸ್ವಾಮಿ ಕ್ರೀಡಾಂಗಣ (ಕೆಎಸ್ ಸಿಎ), ಕಂಠೀರವ ಕ್ರೀಡಾಂಗಣ, ಕರ್ನಾಟಕ ರಾಜ್ಯ ಹಾಕಿ ಸಂಸ್ಥೆ (ಕೆಎಸ್ ಎಚ್ ಎ), ಬೆಂಗಳೂರು ಫುಟ್ಬಾಲ್ ಕ್ರೀಡಾಂಗಣ ಮತ್ತು ಕಬ್ಬನ್ ಪಾರ್ಕ್ ನಲ್ಲಿರುವ ಕರ್ನಾಟಕ ರಾಜ್ಯ ಲಾನ್ ಟೆನಿಸ್ ಅಸೋಸಿಯೇಷನ್ (ಕೆಎಸ್ ಎಲ್ ಟಿಎ) ನಗರದ ಐದು ಪ್ರಮುಖ ಕ್ರೀಡಾ ಸ್ಥಳಗಳು ಫ್ಲೈಓವರ್ ನ ಒಂದು ಮೈಲಿ ವ್ಯಾಪ್ತಿಯಲ್ಲಿವೆ. ಕ್ರೀಡಾ ಜಂಕ್ಷನ್ ಎಂಬ ಹೆಸರು ಅದಕ್ಕೆ ಸೂಕ್ತವಾಗಿದೆ. ಇಲ್ಲಿಂದ ಹಾದು ಹೋಗುವ ಎಲ್ಲ ರಸ್ತೆಗಳು ನಾನಾ ಕ್ರೀಡಾಂಗಣಗಳಿಗೆ ಹೋಗುತ್ತವೆ. ಬಲವಾದ ಕ್ರೀಡಾ ಸಂಸ್ಕೃತಿ ಹೊಂದಿರುವ ಹಲವಾರು ಶಾಲೆಗಳು (ಪ್ರತಿಷ್ಠಿತ ಅಂತರ-ಶಾಲಾ ಪಂದ್ಯಾವಳಿಗಳನ್ನು ಆಯೋಜಿಸುತ್ತವೆ), ಮತ್ತು ರಾಜ್ಯದ ಅನೇಕ ಐಕಾನ್​​ ಓದಿರುವ ಶಾಲೆಗಳು ಜಂಕ್ಷನ್​ನ ಹತ್ತಿರದಲ್ಲಿವೆ. ಸೇಂಟ್ ಜೋಸೆಫ್ಸ್ ಬಾಯ್ಸ್ & ಇಂಡಿಯನ್ ಹೈಸ್ಕೂಲ್ಸ್, ಬಿಷಪ್ ಕಾಟನ್, ಬಾಯ್ಸ್ & ಗರ್ಲ್ಸ್, ಬಾಲ್ಡ್ವಿನ್ ಹುಡುಗರು ಮತ್ತು ಹುಡುಗಿಯರು, ಕ್ಯಾಥೆಡ್ರಲ್, ಸೇಕ್ರೆಡ್ ಹಾರ್ಟ್ ಗರ್ಲ್ಸ್​​ ಈ ಪಟ್ಟಿಯಲ್ಲಿದೆ.

Continue Reading
Advertisement
cleaning
ದೇಶ8 mins ago

ಒಳ ಚರಂಡಿ ಸ್ವಚ್ಛಗೊಳಿಸುವಾಗ 5 ವರ್ಷಗಳಲ್ಲಿ 443 ಕಾರ್ಮಿಕರ ಸಾವು!

Ajitabh Bachchan, Younger Brother Of Amitabh At The Archies Film Screening
ಬಾಲಿವುಡ್9 mins ago

The Archies Film: ನಿಮಗೆ ಅಮಿತಾಭ್‌ ತಮ್ಮ ಅಜಿತಾಭ್‌ ಗೊತ್ತಾ? ಅವರೇ ಇವರು!

MLA Basanagouda Patil Yatnal and CM Siddaramaiah
ಕರ್ನಾಟಕ12 mins ago

CM Siddaramaiah: ಮುಸ್ಲಿಂ ಸಮಾವೇಶದಲ್ಲಿ ಸಿಎಂ ಪಕ್ಕ ಕುಳಿತಿದ್ದ ಐಸಿಸ್‌ ಸಂಪರ್ಕಿತ; ಸಾಕ್ಷಿ ಕೊಡುವೆನೆಂದ ಯತ್ನಾಳ್‌

We will catch the wild elephant that killed Arjuna
ಕರ್ನಾಟಕ25 mins ago

ಕಾರ್ಯಾಚರಣೆ ಸ್ಥಗಿತ; ಅರ್ಜುನನ ಕೊಂದ ಕಾಡಾನೆಯನ್ನು ಹಿಡಿದೇ ತೀರುವೆ-ಮಾವುತನ ಶಪಥ!

Khalistani Terrorist Pannun
ದೇಶ42 mins ago

ಸಂಸತ್ತಿನ ಮೇಲೆ ಡಿ.13ರಂದು ಉಗ್ರ ದಾಳಿ: ಬೆದರಿಕೆ ವಿಡಿಯೋ ಹರಿಬಿಟ್ಟ ಖಲಿಸ್ತಾನಿ ಉಗ್ರ ಪನ್ನುನ್‌

lidkar ambassador dolly dhananjay Officially
South Cinema57 mins ago

Dolly Dhananjay: ಸಂಭಾವನೆ ಪಡೆಯದೆ ಲಿಡ್ಕರ್‌ ರಾಯಭಾರಿಯಾದ ಡಾಲಿ ಧನಂಜಯ್‌!

Government Job Vistara Exclusive and CM Siddaramaiah
ಉದ್ಯೋಗ1 hour ago

Government Job: 2.47 ಲಕ್ಷ ಹುದ್ದೆ ಖಾಲಿ: ಸದನದಲ್ಲಿ ಸದ್ದು ಮಾಡಿದ ವಿಸ್ತಾರ EXCLUSIVE ಸ್ಟೋರಿ

kim
ವಿದೇಶ1 hour ago

Viral Video: ತುಂಬಿದ ಸಭೆಯಲ್ಲಿ ಕಣ್ಣೀರಿಟ್ಟ ಉತ್ತರ ಕೊರಿಯಾ ಸರ್ವಾಧಿಕಾರಿ!

narendra modi amit shah jp nadda
ದೇಶ2 hours ago

Assembly Election 2023: 3 ರಾಜ್ಯಗಳಲ್ಲೂ ಮುಖ್ಯಮಂತ್ರಿಯಾಗಿ ಬಿಜೆಪಿಯಿಂದ ಹೊಸ ಮುಖ

Vinay Gowda and sangeetha Bigg boss
ಬಿಗ್ ಬಾಸ್2 hours ago

BBK SEASON 10: ಪಾತ್ರದಿಂದ ಹೊರಗೆ ಬಂದ್ರೆ ಸಂಗೀತಾ ಟೀಮ್‌ಗೆ ʻಹುಚ್ಚೇಟುʼ ಕೊಡ್ತೀನಿ ಎಂದ ವಿನಯ್‌!

Sharmitha Gowda in bikini
ಕಿರುತೆರೆ2 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

7th Pay Commission
ನೌಕರರ ಕಾರ್ನರ್1 year ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

Kannada Serials
ಕಿರುತೆರೆ2 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ2 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

DCC Bank Recruitment 2023
ಉದ್ಯೋಗ10 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Kannada Serials
ಕಿರುತೆರೆ2 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Karnataka bandh Majestic
ಕರ್ನಾಟಕ2 months ago

Bangalore Bandh Live: ಚರ್ಚಿಲ್ ಮಾತು ಉಲ್ಲೇಖಿಸಿ ಸಿಎಂಗೆ ಜಲಪಾಠ ಮಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ!

Rajendra Singh Gudha
ದೇಶ5 months ago

Rajasthan Minister: ಸೀತಾ ಮಾತೆ ಸುಂದರಿ! ಅದ್ಕೆ ರಾಮ, ರಾವಣ ಆಕೆ ಹಿಂದೆ ಬಿದ್ದಿದ್ದರು; ಕಾಂಗ್ರೆಸ್ ಸಚಿವ

kpsc recruitment 2023 pdo recruitment 2023
ಉದ್ಯೋಗ5 months ago

PDO Recruitment 2023 : 350+ ಪಿಡಿಒ ಹುದ್ದೆಗಳಿಗೆ ಈ ಬಾರಿ ಕೆಪಿಎಸ್‌ಸಿ ಮೂಲಕ ನೇಮಕ

Village Accountant Recruitment
ಉದ್ಯೋಗ10 months ago

Village Accountant Recruitment : ರಾಜ್ಯದಲ್ಲಿ 2007 ಗ್ರಾಮ ಲೆಕ್ಕಿಗರ ಹುದ್ದೆ ಖಾಲಿ; ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳಿವೆ ನೋಡಿ

MLA Basanagouda Patil Yatnal and CM Siddaramaiah
ಕರ್ನಾಟಕ12 mins ago

CM Siddaramaiah: ಮುಸ್ಲಿಂ ಸಮಾವೇಶದಲ್ಲಿ ಸಿಎಂ ಪಕ್ಕ ಕುಳಿತಿದ್ದ ಐಸಿಸ್‌ ಸಂಪರ್ಕಿತ; ಸಾಕ್ಷಿ ಕೊಡುವೆನೆಂದ ಯತ್ನಾಳ್‌

We will catch the wild elephant that killed Arjuna
ಕರ್ನಾಟಕ25 mins ago

ಕಾರ್ಯಾಚರಣೆ ಸ್ಥಗಿತ; ಅರ್ಜುನನ ಕೊಂದ ಕಾಡಾನೆಯನ್ನು ಹಿಡಿದೇ ತೀರುವೆ-ಮಾವುತನ ಶಪಥ!

Government Job Vistara Exclusive and CM Siddaramaiah
ಉದ್ಯೋಗ1 hour ago

Government Job: 2.47 ಲಕ್ಷ ಹುದ್ದೆ ಖಾಲಿ: ಸದನದಲ್ಲಿ ಸದ್ದು ಮಾಡಿದ ವಿಸ್ತಾರ EXCLUSIVE ಸ್ಟೋರಿ

Government Job Vistara Exclusive
ಉದ್ಯೋಗ2 hours ago

Government Job : ‘ಖಾಲಿ’ ಸರ್ಕಾರದಲ್ಲಿ ಉದ್ಯೋಗಕ್ಕಿಲ್ಲ ಗ್ಯಾರಂಟಿ; ಭರ್ತಿಯಾಗದ 2.47 ಲಕ್ಷ ಹುದ್ದೆ!

read your daily horoscope predictions for december 6 2023
ಪ್ರಮುಖ ಸುದ್ದಿ9 hours ago

Dina Bhavishya : ಈ ರಾಶಿಯವರು ಸುಮ್ಮನಿದ್ದರೂ ನಡೆಯುತ್ತೆ ಕಲಹ!

CM Siddaramaiah and Black magic
ಕರ್ನಾಟಕ17 hours ago

Belagavi Winter Session: ಸಿದ್ದರಾಮಯ್ಯಗೆ ಮಾಟ – ಮಂತ್ರ; ಗಾಳಿ ಬಿಡಿಸಲು ರೇವಣ್ಣಗೆ ಅಶೋಕ್‌ ಮನವಿ!

R Ashok in assembly session
ಕರ್ನಾಟಕ18 hours ago

Belagavi Winter Session: ಟಿಸಿ ಬದಲಾಯಿಸಲು ಹಣ ಕೇಳ್ತಾರೆ, ರೈತರು ಬದುಕೋದು ಬೇಡವಾ? ಅಶೋಕ್‌ ಕ್ಲಾಸ್‌

R Ashok
ಕರ್ನಾಟಕ18 hours ago

Belagavi Winter Session: ಬರ ಪ್ರದೇಶಕ್ಕೆ ಹೋಗದ ಸಿಎಂ, ಸಚಿವರು; ಸರ್ಕಾರಕ್ಕೆ ಆರ್.‌ ಅಶೋಕ್‌ ಚಾಟಿ

dina bhavishya read your daily horoscope predictions for December 5 2023
ಪ್ರಮುಖ ಸುದ್ದಿ1 day ago

Dina Bhavishya : ಈ ರಾಶಿಯವರ ಅದೃಷ್ಟ ಸಂಖ್ಯೆ 1, 3! ನಿಮ್ಮ ಲಕ್ಕಿ ನಂಬರ್‌ ಏನು?

ead your daily horoscope predictions for december 4th 2023
ಪ್ರಮುಖ ಸುದ್ದಿ2 days ago

Dina Bhavishya : ಇಂದು ಹೂಡಿಕೆ ಮಾಡಿದ್ರೆ ಈ ರಾಶಿಯವರಿಗೆ ಡಬಲ್‌ ಧಮಾಕಾ!

ಟ್ರೆಂಡಿಂಗ್‌