Samantha Ruth Prabhu: ಮತ್ತೆ ಒಂದಾಗ್ತಾರಾ ಸಮಂತಾ-ನಾಗಚೈತನ್ಯ? ಫೋಟೊ ವೈರಲ್‌! Vistara News
Connect with us

South Cinema

Samantha Ruth Prabhu: ಮತ್ತೆ ಒಂದಾಗ್ತಾರಾ ಸಮಂತಾ-ನಾಗಚೈತನ್ಯ? ಫೋಟೊ ವೈರಲ್‌!

Samantha Ruth Prabhu: ನಾಗ ಚೈತನ್ಯ ಜತೆ ಬೇರ್ಪಟ್ಟ ಬಳಿಕ ಸಮಂತಾ ರುತ್​ ಪ್ರಭು ಅವರು ತಮ್ಮ ಸೋಶಿಯಲ್​ ಮೀಡಿಯಾ ಖಾತೆಗಳಲ್ಲಿ ಹಳೆಯ ಫೋಟೊಗಳನ್ನು ತೆಗೆದು ಹಾಕಿದ್ದರು. ಆದರೀಗ ಮಾಜಿ ದಂಪತಿ ಮತ್ತೆ ಒಂದಾಗಬಹುದು ಎಂದು ಕೆಲವರು ಕಮೆಂಟ್‌ ಮೂಲಕ ವ್ಯಕ್ತಪಡಿಸುತ್ತಿದ್ದಾರೆ.

VISTARANEWS.COM


on

Samantha Ruth Prabhu with Naga Chaitanya
Koo

ಬೆಂಗಳೂರು: ಈಗಾಗಲೇ ಸಮಂತಾ-ನಾಗಚೈತನ್ಯ (Samantha Ruth Prabhu) ವೈವಾಹಿಕ ಜೀವನಕ್ಕೆ ಅಂತ್ಯ ಹಾಡಿದ್ದಾಗಿದೆ. ಕೆಲವು ದಿನಗಳ ಹಿಂದೆ ನಾಗಚೈತನ್ಯ ಎರಡನೇ ಮದುವೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ ಎಂತಲೂ ವರದಿಯಾಗಿದೆ. ಆದರೀಗ ಸಮಂತಾ ಅವರ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಮದುವೆಯ ಫೋಟೊ ಮತ್ತೆ ಕಾಣಿಸಲು ಆರಂಭಿಸಿದೆ. ನಾಗ ಚೈತನ್ಯ ಜತೆ ಬೇರ್ಪಟ್ಟ ಬಳಿಕ ಸಮಂತಾ ರುತ್​ ಪ್ರಭು ಅವರು ತಮ್ಮ ಸೋಶಿಯಲ್​ ಮೀಡಿಯಾ ಖಾತೆಗಳಲ್ಲಿ ಹಳೆಯ ಫೋಟೊಗಳನ್ನು ತೆಗೆದು ಹಾಕಿದ್ದರು. ಆದರೀಗ ಮಾಜಿ ದಂಪತಿ ಮತ್ತೆ ಒಂದಾಗಬಹುದು ಎಂದು ಕೆಲವರು ಕಮೆಂಟ್‌ ಮೂಲಕ ವ್ಯಕ್ತಪಡಿಸುತ್ತಿದ್ದಾರೆ.

ಕಳೆದ ವರ್ಷ ತಮ್ಮ ದಾಂಪತ್ಯ ಜೀವನಕ್ಕೆ ಫುಲ್‌ಸ್ಟಾಪ್‌ ಇಡುತ್ತಿದ್ದಂತೆ ಸಮಂತಾ ಅವರು ನಾಗ ಚೈತನ್ಯ ಅವರೊಂದಿಗಿನ ಬಹುತೇಕ ಎಲ್ಲಾ ಚಿತ್ರಗಳನ್ನು ತೆಗೆದುಹಾಕಿದ್ದರು. ಆದರೀಗ ಮದುವೆಯ ಫೋಟೊವೊಂದು ಏಕಾಏಕಿ ಖಾತೆಯಲ್ಲಿ ಕಾಣಿಸತೊಡಗಿದೆ. ಈ ಸುದ್ದಿ ವೈರಲ್‌ ಆಗುತ್ತಿದ್ದಂತೆ ಬಹುತೇಕರು ʻʻಆದಷ್ಟು ಬೇಗ ಇಬ್ಬರೂ ಒಂದಾಗಿʼʼಎಂದು ಕಮೆಂಟ್‌ ಮಾಡಿದ್ದಾರೆ. ವರದಿಯ ಪ್ರಕಾರ ಈಗಾಗಲೇ ನಾಗ ಚೈತನ್ಯ ಅವರು ಶೋಭಿತಾ ಧೂಳಿಪಾಲ್‌ ಜತೆ ಡೇಟಿಂಗ್‌ ನಡೆಸುತ್ತಿದ್ದಾರೆ ಎನ್ನಲಾಗಿದೆ. ಈಗಾಗಲೇ ಸಮಂತಾ ತಮ್ಮ ವೈಯಕ್ತಿಕ ಜೀವನದ ಕಹಿ ಘಟನೆಗಳನ್ನು ಮರೆತು ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.

ಕರಣ್ ಜೋಹರ್ ಅವರ ಧರ್ಮ ಪ್ರೊಡಕ್ಷನ್ಸ್ ನಿರ್ಮಿಸುವ ಮುಂಬರುವ ಚಿತ್ರದಲ್ಲಿ ಸಮಂತಾ ರುತ್ ಪ್ರಭು ಮತ್ತು ಸಲ್ಮಾನ್ ಖಾನ್ ರೊಮ್ಯಾನ್ಸ್ ಮಾಡುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.ಈ ಚಿತ್ರಕ್ಕಾಗಿ ನಿರ್ದೇಶಕ ವಿಷ್ಣುವರ್ಧನ್ ಅವರೊಂದಿಗೆ ಸಮಂತಾ ಮಾತುಕತೆ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ. ವರದಿಯ ಪ್ರಕಾರ ಈ ಸಿನಿಮಾಗೆ ಸಮಂತಾ ಜತೆಗೆ ತ್ರಿಶಾ ಮತ್ತು ಅನುಷ್ಕಾ ಶೆಟ್ಟಿ ಕೂಡ ಇರಲಿದ್ದಾರೆ ಎಂದು ಹೇಳಲಾಗಿದೆ. ಸದ್ಯಕ್ಕೆ ಚಿತ್ರತಂಡದಿಂದ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ.

ಇದನ್ನೂ ಓದಿ: Samantha Ruth Prabhu: ನಿಜ ಜೀವನದಲ್ಲಿಯೂ ಒಂದಾಗಿ ಅಂದ್ರು ಫ್ಯಾನ್ಸ್‌; ಹೇಗಿತ್ತು ಸಮಂತಾ ʻಖುಷಿʼ?

ಸಲ್ಮಾನ್ ಖಾನ್ ಮತ್ತು ಕರಣ್ ಜೋಹರ್ ಒಟ್ಟಿಗೆ ಮತ್ತೆ ಸಿನಿಮಾ ಮಾಡಲಿದ್ದಾರೆ ಎಂದು ಈ ಮುಂಚೆಯೇ ಗಾಸಿಪ್‌ಗಳು ಹಬ್ಬಿತ್ತು. 1998ರಲ್ಲಿ ಕುಚ್ ಕುಚ್ ಹೋತಾ ಹೈನಲ್ಲಿ ಸಲ್ಮಾನ್ ಕಾಣಿಸಿಕೊಂಡ ನಂತರ ಬರೋಬ್ಬರಿ 25 ವರ್ಷಗಳ ಬಳಿಕ ಕರಣ್‌ ಜತೆ ಕೈ ಜೋಡಿಸುತ್ತಿದ್ದಾರೆ ಸಲ್ಮಾನ್‌. 2023ರ ನವೆಂಬರ್‌ನಲ್ಲಿ ಈ ಸಿನಿಮಾ ಸೆಟ್ಟೇರಲಿದೆ ಎಂದು ಹೇಳಲಾಗುತ್ತಿದೆ. ಪ್ರಿ-ಪ್ರೊಡಕ್ಷನ್ ಕೆಲಸವು ಆಗಸ್ಟ್ 2023ರಿಂದ ಶುರುವಾಗಲಿದೆ ಎಂದೂ ವರದಿಯಾಗಿದೆ.

ಸಮಂತಾ ಇತ್ತೀಚೆಗೆ ವಿಜಯ್ ದೇವರಕೊಂಡ ಜತೆ ʼಖುಷಿʼ ಚಿತ್ರದಲ್ಲಿ ಕಾಣಿಸಿಕೊಂಡರು. ಬಿಡುಗಡೆಗೊಂಡು ಯಶಸ್ವಿ ಪ್ರದರ್ಶನ ಕಂಡಿತು. ಸಮಂತಾ ಅವರಿಗೆ ವಿಜಯ್‌ ದೇವರಕೊಂಡ ಅವರ ಜತೆ ಇದು ಎರಡನೇ ಸಿನಿಮಾವಾಗಿದೆ. ಈ ಹಿಂದೆ 2018ರಲ್ಲಿ ನಟಿ ವಿಜಯ್‌ ಅವರೊಂದಿಗೆ ‘ಮಹಾನಟಿ’ ಸಿನಿಮಾದಲ್ಲಿ ಜತೆಯಾಗಿ ಕಾಣಿಸಿಕೊಂಡಿದ್ದರು. ಶೀಘ್ರದಲ್ಲೇ ಸಿಟಾಡೆಲ್‌ನ ಭಾರತೀಯ ಆವೃತ್ತಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ, ಇದರಲ್ಲಿ ವರುಣ್ ಧವನ್ ಸಹ ನಟಿಸಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News Special Face Book ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
ವೈವಿಧ್ಯಮಯ ಸುದ್ದಿಗಳಿಗಾಗಿ Vistara News Twitter ಪೇಜ್ ಫಾಲೋ ಮಾಡಿ
Continue Reading
Click to comment

Leave a Reply

Your email address will not be published. Required fields are marked *

South Cinema

Sai Pallavi: ಮದುವೆ‌ ವದಂತಿ ಬಗ್ಗೆ ಕೊನೆಗೂ ಬಾಯ್ಬಿಟ್ಟ ಸಾಯಿ ಪಲ್ಲವಿ!

Sai Pallavi: ಆ ಚಿತ್ರ ನೋಡಿದವರೆಲ್ಲ ಸಾಯಿ ಪಲ್ಲವಿ ಮದುವೆಯಾಗಿದ್ದಾರೆ ಎಂದೇ ನಂಬಿಕೊಂಡು ಚಿತ್ರವನ್ನು ಇನ್ನಷ್ಟು ವೈರಲ್ ಮಾಡಿದ್ದರು. ಇದೀಗ ನಟಿ ಈ ಬಗ್ಗೆ ಕ್ಲ್ಯಾರಿಟಿ ಕೊಟ್ಟಿದ್ದಾರೆ.

VISTARANEWS.COM


on

Edited by

Sai Pallavi
Koo

ಬೆಂಗಳೂರು: ಸೋಷಿಯಲ್‌ ಮೀಡಿಯಾದಲ್ಲಿ ಹಲವು ದಿನಗಳಿಂದ ಸಾಯಿ ಪಲ್ಲವಿ (Sai Pallavi) ಮದುವೆಯಾಗಿದ್ದಾರೆ ಎಂಬ ಸುದ್ದಿ ಸಖತ್‌ ವೈರಲ್‌ ಆಗಿತ್ತು. ನಟಿ ಖ್ಯಾತ ನಿರ್ದೇಶಕನ ಜತೆ ಸಿಂಪಲ್‌ ಆಗಿ ಮದುವೆಯಾಗಿದ್ದಾರೆ ಎಂದು ಹೇಳಾಗುತ್ತಿತ್ತು. ಈ ಅನುಮಾನಕ್ಕೆ ಕಾರಣವಾಗಿದ್ದು ಒಂದು ಫೋಟೊ. ಸಾಯಿ ಪಲ್ಲವಿ ಹಾರ ಹಾಕಿಕೊಂಡು ವ್ಯಕ್ತಿಯೊಬ್ಬರ ಪಕ್ಕ ನಿಂತಿದ್ದರು. ಆ ಚಿತ್ರ ನೋಡಿದವರೆಲ್ಲ ಸಾಯಿ ಪಲ್ಲವಿ ಮದುವೆಯಾಗಿದ್ದಾರೆ ಎಂದೇ ನಂಬಿಕೊಂಡು ಚಿತ್ರವನ್ನು ಇನ್ನಷ್ಟು ವೈರಲ್ ಮಾಡಿದ್ದರು. ಇದೀಗ ನಟಿ ಈ ಬಗ್ಗೆ ಕ್ಲ್ಯಾರಿಟಿ ಕೊಟ್ಟಿದ್ದಾರೆ.

ʻʻನಾನು ವದಂತಿಗಳಿಗೆ ಹೆದರುವುದಿಲ್ಲ. ಆದರೆ ಕುಟುಂಬ ಸ್ನೇಹಿತರ ವಿಚಾರಕ್ಕೆ ಬಂದಾಗ ಇಂತಹ ವಿಚಾರಗಳಿಗೆ ಪ್ರತಿಕ್ರಿಯೆ ನೀಡಲೇ ಬೇಕು. ಆ ಫೋಟೊ ನನ್ನ ಮದುವೆಯದ್ದಲ್ಲ. ಸಿನಿಮಾ ಮುಹೂರ್ತ ವೇಳೆ ತೆಗೆದ ಫೋಟೊ. ಸಮಾರಂಭದ ಫೋಟೊವನ್ನು ಈ ರೀತಿ ಉಪಯೋಗಿಸಿಕೊಂಡು ಕೆಟ್ಟ ಉದ್ದೇಶದಿಂದ ಆ ಚಿತ್ರವನ್ನು ವೈರಲ್ ಮಾಡಲಾಗಿದೆ. ನನ್ನ ಕೆಲಸದ ಬಗ್ಗೆ ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳಬೇಕಾದ ಸಮಯದಲ್ಲಿ, ಈ ರೀತಿಯ ಅನಾವಶ್ಯಕ ವಿಷಯಗಳ ಬಗ್ಗೆ ವಿವರಿಸುವ ಸನ್ನಿವೇಶ ಸೃಷ್ಟಿಯಾಗಿರುವ ಬಗ್ಗೆ ಬೇಸರವಿದೆʼʼಎಂದು ಟ್ವೀಟ್‌ ಮಾಡಿದ್ದಾರೆ.

ಸಾಯಿ ಸಾಂಪ್ರದಾಯಿಕ ಅವತಾರದಲ್ಲಿ ಬಿಳಿ ಕುರ್ತಾ ಮತ್ತು ಗೋಲ್ಡನ್-ಕಂದು ಬಣ್ಣದ ದುಪಟ್ಟಾವನ್ನು ಧರಿಸಿರುವ ಚಿತ್ರವು ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಾಗ ವದಂತಿ ಶುರುವಾಯಿತು. ಅವರ ಪಕ್ಕದಲ್ಲಿ ನಿಂತಿರುವ ವ್ಯಕ್ತಿ ಚಿತ್ರದ ನಿರ್ದೇಶಕ ರಾಜ್‌ಕುಮಾರ್ ಪೆರಿಯಸಾಮಿ. ಚಿತ್ರದ ಕ್ಲ್ಯಾಪ್‌ ಬೋರ್ಡ್‌ ಹಿಡಿದು ನಿಂತಿದ್ದರು. ಈವೆಂಟ್‌ನ ಇತರ ಚಿತ್ರಗಳಲ್ಲಿ, SK21 ಚಿತ್ರದ ನಾಯಕ ನಟ ಶಿವಕಾರ್ತಿಕೇಯನ್ ಮತ್ತು ಹಿರಿಯ ನಟ ಕಮಲ್ ಹಾಸನ್ ಕೂಡ ನಿಂತಿದ್ದಾರೆ. ಇಬ್ಬರೂ ಮಹೂರ್ತ ಸಮಾರಂಭದಲ್ಲಿ ವಿಶೇಷ ಅತಿಥಿಯಾಗಿದ್ದರು. ಕಳೆದ ವರ್ಷ ವಿಮರ್ಶಾತ್ಮಕವಾಗಿ ಮೆಚ್ಚುಗೆ ಗಳಿಸಿದ ಗಾರ್ಗಿ ಚಿತ್ರದಲ್ಲಿ ಅವರು ಕೊನೆಯ ಬಾರಿಗೆ ಕಾಣಿಸಿಕೊಂಡರು.

ಇದನ್ನೂ ಓದಿ: Sai Pallavi: ಮತ್ತೆ ಒಂದಾದ ‘ಲವ್ ಸ್ಟೋರಿ’ ಜೋಡಿ; ಸಾಯಿ ಪಲ್ಲವಿ ಫ್ಯಾನ್ಸ್‌ಗೆ ಗುಡ್‌ ನ್ಯೂಸ್‌!

ಸಾಯಿ ಪಲ್ಲವಿ ಟ್ವೀಟ್‌

ಇದನ್ನೂ ಓದಿ: Sai Pallavi: ಮತ್ತೆ ಒಂದಾದ ‘ಲವ್ ಸ್ಟೋರಿ’ ಜೋಡಿ; ಸಾಯಿ ಪಲ್ಲವಿ ಫ್ಯಾನ್ಸ್‌ಗೆ ಗುಡ್‌ ನ್ಯೂಸ್‌!

ಮತ್ತೆ ಒಂದಾದ ‘ಲವ್ ಸ್ಟೋರಿ’ ಜೋಡಿ

ಟಾಲಿವುಡ್ ಯುವ ಸಾಮ್ರಾಟ ನಾಗಚೈತನ್ಯ 23ನೇ ಸಿನಿಮಾಗೆ ನಾಯಕಿಯಾಗಿ ಸಾಯಿ ಪಲ್ಲವಿ (Sai Pallavi:) ಆಯ್ಕೆಯಾಗಿದ್ದಾರೆ. ʻಲವ್ ಸ್ಟೋರಿʼ ಸಿನಿಮಾ ಮೂಲಕ ಮೋಡಿ ಮಾಡಿದ್ದ ಈ ಜೋಡಿ ಮತ್ತೆ ಒಂದಾಗುತ್ತಿರುವುದು ನಿರೀಕ್ಷೆ ಹೆಚ್ಚಿಸಿದೆ. ಕಾರ್ತಿಕೇಯ-2ನಂತಹ ಪ್ಯಾನ್ ಇಂಡಿಯಾ ಬ್ಲಾಕ್ ಬಸ್ಟರ್ ಹಿಟ್ ಕೊಟ್ಟಿರುವ ಚಂದು ಮೊಂಡೇಟಿ ಈ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಸದ್ಯ NC23 ಎಂಬ ತಾತ್ಕಾಲಿಕ ಟೈಟಲ್ ಇಡಲಾಗಿದೆ. ತೆಲುಗಿನ ಖ್ಯಾತ ನಿರ್ಮಾಪಕ ಅಲ್ಲು ಅರವಿಂದ್ ಈ ಸಿನಿಮಾವನ್ನು ಪ್ರಸ್ತುತಪಡಿಸ್ತಿದ್ದು, ಬನ್ನಿ ವಾಸ್ ಗೀತಾ ಆರ್ಟ್ಸ್ ಬ್ಯಾನರ್‌ನಡಿ ನಿರ್ಮಾಣ ಮಾಡುತ್ತಿದ್ದಾರೆ.ಮೀನುಗಾರರ ಸಮುದಾಯದಲ್ಲಿ ನಡೆದ ನೈಜ ಘಟನೆಯನ್ನು ಆಧರಿಸಿ ನಿರ್ಮಿಸುತ್ತಿರುವ ಪ್ಯಾನ್ ಇಂಡಿಯಾ ಚಿತ್ರ ಇದಾಗಿದೆ.

Continue Reading

South Cinema

Atlee Kumar: ಲೋಕೇಶ್‌, ಕಾರ್ತಿಕ್ ಸುಬ್ಬರಾಜ್‌ಕ್ಕಿಂತ ನಾನು ಭಿನ್ನ ಎಂದ ಅಟ್ಲೀ!

Atlee Kumar: ಅಟ್ಲಿ ತಮ್ಮ ಮತ್ತು ಇತರ ಜನಪ್ರಿಯ ನಿರ್ದೇಶಕರ ನಡುವಿನ ವ್ಯತ್ಯಾಸಗಳ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ.

VISTARANEWS.COM


on

Edited by

Atlee Kumar
Koo

ಬೆಂಗಳೂರು: ಭಾರತೀಯ ಚಿತ್ರರಂಗದ ಅತ್ಯಂತ ಯಶಸ್ವಿ ನಿರ್ದೇಶಕರಲ್ಲಿ ಈಗ ಅಟ್ಲೀ (Atlee Kumar) ಕೂಡ ಒಬ್ಬರು. ಅಟ್ಲೀ ʻಜವಾನ್‌ʼ ಸಿನಿಮಾ ಮೂಲಕ ಹಿಂದಿ ಚಿತ್ರರಂಗಕ್ಕೂ ಎಂಟ್ರಿ ಕೊಟ್ಟಿದ್ದಾರೆ. ಇತರ ಯಶಸ್ವಿ ನಿರ್ದೇಶಕರ ನಡುವೆ ಹೋಲಿಕೆ ಮಾಡಲು ಈಗಾಗಲೇ ಶುರುವಾಗಿದೆ. ಅಟ್ಲಿ ತಮ್ಮ ಮತ್ತು ಇತರ ಜನಪ್ರಿಯ ನಿರ್ದೇಶಕರ ನಡುವಿನ ವ್ಯತ್ಯಾಸಗಳ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ.

ಅಟ್ಲೀ ತಮ್ಮ ಮತ್ತು ಇತರ ಜನಪ್ರಿಯ ನಿರ್ದೇಶಕರ ನಡುವಿನ ವ್ಯತ್ಯಾಸಗಳ ಬಗ್ಗೆ ಸಂವಾದದಲ್ಲಿ ಮಾತನಾಡಿ ʻʻಕಾರ್ತಿಕ್ ಸುಬ್ಬರಾಜ್, ಲೋಕೇಶ್ ಕನಕರಾಜ್, ಮತ್ತು ಪಾ ರಂಜಿತ್ ಅವರಂತಹ ಇತರ ಫೇಮಸ್‌ ತಮಿಳು ನಿರ್ದೇಶಕರಿಗಿಂತ ನಾನು ಭಿನ್ನ. ನೋಡಿದ ದೈಶ್ಯಗಳನ್ನೇ ಮತ್ತೆ ಮತ್ತೆ ತರುತ್ತಾರೆ ಎಂದು ಜನರು ಹಲವು ಬಾರಿ ನನ್ನನ್ನು ಟೀಕೆ ಮಾಡಿದ್ದುಂಟು. ಕಾರ್ತಿಕ್ ಸುಬ್ಬರಾಜ್, ಲೋಕೇಶ್ ಮತ್ತು ಪಾ ರಂಜಿತ್ ಅವರಂತಹ ನನ್ನ ಸ್ನೇಹಿತರನ್ನು ನೋಡಿದರೆ ಅವರ ಸಿನಿಮಾ, ಚಿತ್ರನಿರ್ಮಾಣ, ಸಾಮಾಜಿಕ ಸಮಸ್ಯೆಗಳು, ಇತ್ಯಾದಿ ಕಟೆಂಟ್‌ಗಳು ಒಳಗೊಂಡಿರುತ್ತದೆ. ನಾನು ಮಾಡುವ ಸಿನಿಮಾಗಿಂತ ಭಿನ್ನವಾಗಿರುತ್ತದೆ. ನಾನು ಮಾತ್ರ ಕಮರ್ಷಿಲ್‌ ಸಿನಿಮಾ ಮಾಡುವಲ್ಲಿ ನಂಬುವವನು. ಮಾಸ್‌ ಸಿನಿಮಾವಾಗಿಯೇ ಮಾಡಬೇಕು ಎಂದು ಹೇಳುವವನು. ನನ್ನ ಉದ್ದೇಶ ಪ್ರೇಕ್ಷಕರನ್ನು ರಂಜಿಸಲು ಮತ್ತು ನನ್ನ ಪಾತ್ರಗಳಿಗೆ ಅವರಿಗೆ ಭಾವನೆ ಮೂಡಿಸಲು. ನಾನು ಇಲ್ಲಿಯವರೆಗೆ ಯಶಸ್ವಿಯಾಗಿದ್ದೇನೆ ಎಂದು ನಾನು ಭಾವಿಸುತ್ತೇನೆʼʼಎಂದು ಹೇಳಿಕೊಂಡರು. ತಮಿಳಿನ ಇತರ ಪ್ರಮುಖ ನಿರ್ದೇಶಕರೊಂದಿಗೂ ತಾನು ಸ್ನೇಹಿತನಾಗಿದ್ದೇನೆ ಎಂದು ಅಟ್ಲೀ ಸ್ಪಷ್ಟಪಡಿಸಿದ್ದಾರೆ.

ಅಟ್ಲೀ ಅವರು ಅಲ್ಲು ಅರ್ಜುನ್ ಜತೆ ಸಿನಿಮಾ ಮಾಡಲಿದ್ದಾರೆ ಎಂಬ ವದಂತಿಗಳು ಇತ್ತು. ಈ ಬಗ್ಗೆ ಅಟ್ಲೀ ಮಾತನಾಡಿ ʻʻಅಲ್ಲು ಸರ್ ತುಂಬಾ ಒಳ್ಳೆಯ ಸ್ನೇಹಿತ. ನಾವಿಬ್ಬರೂ ಕಲೆಯನ್ನು ಪ್ರೀತಿಸುತ್ತೇವೆ. ಸಹಜವಾಗಿ, ನಾವು ಏನು ಸಿನಿಮಾ ಮಾಡಬೇಕು ಮತ್ತು ಹೇಗೆ ಸಿನಿಮಾ ಮಾಡಬೇಕು ಎಂಬ ಕಲ್ಪನೆಯನ್ನು ಹೊಂದಿದ್ದೇವೆ. ಚಿತ್ರವು ದೇವರ ಆಶೀರ್ವಾದದೊಂದಿಗೆ ಸರಿಯಾದ ಸ್ಕ್ರಿಪ್ಟ್ ರೂಪದಲ್ಲಿ ಸಿಗಬೇಕು. ಆದ್ದರಿಂದ ಒಳ್ಳೆಯ ಸ್ಕ್ರಿಪ್ಟ್‌ ಸಿಕ್ಕರೇ ಖಂಡಿತ ಮಾಡುತ್ತೇವೆʼʼಎಂದು ಹೇಳಿದರು.

ಇದನ್ನೂ ಓದಿ: Coming Movies 2023: Top 5 Most expected Upcoming movies on 2023

ವಿಜಯ್‌ ಜತೆ ಸಿನಿಮಾ ಮಾಡುವುದು ಪಕ್ಕಾ!

ಥೇರಿ, ಮೆರ್ಸಲ್ ಮತ್ತು ಬಿಗಿಲ್ ಈ ಜೋಡಿಯ ಈ ಎಲ್ಲ ಸಿನಿಮಾಗಳೂ ಹಿಟ್‌ ಆಗಿವೆ. ಈ ಜೋಡಿ ಲಕ್ಷಾಂತರ ಅಭಿಮಾನಿಗಳ ಹೃದಯವನ್ನು ಗೆದ್ದಿದೆ. ಇದೀಗ ಮತ್ತೆ ಹೊಸ ಸಿನಿಮಾ ಮೂಲಕ ದಳಪತಿ ವಿಜಯ್ ಮತ್ತು ಅಟ್ಲೀ ಒಂದಾಗುತ್ತಿದ್ದಾರೆ. ಸಂದರ್ಶನವೊಂದರಲ್ಲಿ ಜವಾನ್ ನಿರ್ದೇಶಕ ಅಟ್ಲೀ ನಾಲ್ಕನೇ ಬಾರಿಗೆ ವಿಜಯ್ ಜತೆ ಮತ್ತೆ ಸಿನಿಮಾ ಮಾಡುವುದಾಗಿ ಸುಳಿವು ಕೊಟ್ಟಿದ್ದಾರೆ.

ಈ ಬಗ್ಗೆ ಅಟ್ಲೀ ಮಾಧ್ಯಮವೊಂದರಲ್ಲಿ ಮಾತನಾಡಿ ʻನಾನು ಕೇವಲ 5 ಸಿನಿಮಾಗಳನ್ನು ಮಾಡಿದ್ದು, ಅದರಲ್ಲಿ 3 ವಿಜಯ್ ಅವರೊಂದಿಗೆ ಮಾಡಿರುವುದಾಗಿದೆ. ಹಾಗಾಗಿ, ಸಮಯ ಬಂದಾಗ ಮತ್ತೆ ಅವರ ಜತೆ ಸಿನಿಮಾ ಮಾಡುತ್ತೇನೆʼʼ ಎಂದು ಖಚಿತಪಡಿಸಿದ್ದಾರೆ.

Continue Reading

South Cinema

Shiva Rajkumar: ʻಘೋಸ್ಟ್ʼ ಸಿನಿಮಾ ಹಾಡಿಗೆ ಶಿವಣ್ಣನ ಫ್ಯಾನ್ಸ್‌ ಫಿದಾ!

Shiva Rajkumar:  ಹಾಡು ಸಖತ್‌ ಆಗಿದೆ ಎಂದು ಶಿವಣ್ಣನ ಫ್ಯಾನ್ಸ್‌ (GHOST OGM) ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಚಿತ್ರತಂಡ ‘ಒಎಂಜಿ ಮ್ಯೂಸಿಕ್’ ರಿಲೀಸ್ ಮಾಡಿದೆ. ಒಂದೇ ವಿಡಿಯೊದಲ್ಲಿ ಕನ್ನಡ, ಮಲಯಾಳಂ, ತಮಿಳಿನ ಲಿರಿಕ್ಸ್ ಇದೆ.

VISTARANEWS.COM


on

Edited by

Shiva Rajkumar
Koo

ಬೆಂಗಳೂರು: ಕರುನಾಡ ಚಕ್ರವರ್ತಿ ಶಿವ ರಾಜ್‌ಕುಮಾರ್ (Shiva Rajkumar) ನಾಯಕರಾಗಿ ನಟಿಸಿರುವ, ಬಹು ನಿರೀಕ್ಷಿತ “ಘೋಸ್ಟ್” ಚಿತ್ರದ ಸಾಂಗ್ ರಿಲೀಸ್ ಆಗಿದ್ದು, ಎಲ್ಲರ ಗಮನ ಸೆಳೆಯುತ್ತಿದೆ. ಈ ಹಾಡನ್ನು ಅರ್ಜುನ್‌ ಜನ್ಯಾ ಕಂಪೋಸ್‌ ಮಾಡಿದ್ದು, ಹಾಡು ಸಖತ್‌ ಆಗಿದೆ ಎಂದು ಶಿವಣ್ಣನ ಫ್ಯಾನ್ಸ್‌ (GHOST OGM) ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಚಿತ್ರತಂಡ ‘ಒಎಂಜಿ ಮ್ಯೂಸಿಕ್’ ರಿಲೀಸ್ ಮಾಡಿದೆ. ಒಂದೇ ವಿಡಿಯೊದಲ್ಲಿ ಕನ್ನಡ, ಮಲಯಾಳಂ, ತಮಿಳಿನ ಲಿರಿಕ್ಸ್ ಇದೆ.

ಈಗಾಗಲೇ ಸಿನಿಮಾದ ಥಿಯೇಟ್ರಿಕಲ್, ಸ್ಯಾಟಲೈಟ್ ಹಾಗೂ ಡಿಜಿಟಲ್ ಹಕ್ಕು ಭಾರಿ ಮೊತ್ತಕ್ಕೆ ಮಾರಾಟವಾಗಿದೆ. ಕನ್ನಡದ ಖ್ಯಾತ ನಿರ್ಮಾಣ ಸಂಸ್ಥೆ ಸಂದೇಶ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಸಂದೇಶ್ ಎನ್ ನಿರ್ಮಿಸಿರುವ, ಶ್ರೀನಿ ನಿರ್ದೇಶನದ ಈ ಸಿನಿಮಾ ಮತ್ತೆ ಸುದ್ದಿಯಲ್ಲಿದೆ .”ಆರ್ ಆರ್ ಆರ್”, “ಜವಾನ್” ಸೇರಿದಂತೆ ಅನೇಕ ಸೂಪರ್ ಹಿಟ್ ಚಿತ್ರಗಳನ್ನು ವಿತರಣೆ ಮಾಡಿರುವ ಪೆನ್ ಸ್ಟುಡಿಯೊ ಸಂಸ್ಥೆ ಈಗ “ಘೋಸ್ಟ್” ಚಿತ್ರದ ವಿತರಣಾ ಹಕ್ಕನ್ನು ಪಡೆದುಕೊಂಡಿದೆ.

ಈಗ ‘ಘೋಸ್ಟ್’ ಚಿತ್ರದ ತೆಲುಗು ಹಾಗೂ ಹಿಂದಿಯ ವಿತರಣಾ ಹಕ್ಕನ್ನು ಪಡೆದುಕೊಂಡಿದೆ ಎಂದು ಸಂದೇಶ್ ತಿಳಿಸಿದ್ದಾರೆ. ಅಂದಹಾಗೆ, ಎಷ್ಟು ಕೋಟಿ ಬಿಸ್ನೆಸ್ ಆಗಿದೆ ಎನ್ನುವ ಲೆಕ್ಕಾಚಾರವನ್ನು ತಂಡದವರು ನೀಡಿಲ್ಲ. ಇತ್ತೀಚೆಗೆ ಪೆನ್ ಸ್ಟುಡಿಯೊ ಸಂಸ್ಥೆ ಮುಖ್ಯಸ್ಥರಾದ ಜಯಂತಿ ಲಾಲ್ ಗಡ ಹಾಗೂ ನಿರ್ಮಾಪಕ ಸಂದೇಶ್ ಈ ಕುರಿತು ಮಾತನಾಡಿದ್ದರು. ಅಕ್ಟೋಬರ್ ಮೊದಲವಾರ “ಘೋಸ್ಟ್” ಚಿತ್ರದ ಪ್ರಚಾರಕ್ಕಾಗಿ ಶಿವ ರಾಜ್‌ಕುಮಾರ್ ಮುಂಬೈ, ದೆಹಲಿ ಮುಂತಾದ ಕಡೆ ತೆರಳುತ್ತಿದ್ದಾರೆ ಎಂದು ನಿರ್ಮಾಪಕರು ಮಾಹಿತಿ ನೀಡಿದ್ದಾರೆ‌.

ಇದನ್ನೂ Shiva Rajkumar: ನಿಖಿಲ್‌ ಸಿನಿಮಾ ಸೆಟ್‌ಗೆ ಸಡನ್‌ ಭೇಟಿ ಕೊಟ್ಟ ಹ್ಯಾಟ್ರಿಕ್‌ ಹೀರೊ ಶಿವರಾಜ್‌ಕುಮಾರ್‌!ಓದಿ:

ಬಾಲಿವುಡ್‌ ನಟ ಅನುಪಮ್‌ ಖೇರ್‌, ಜಯರಾಂ, ಸತ್ಯಪ್ರಕಾಶ್, ಪ್ರಶಾಂತ್ ನಾರಾಯಣನ್, ದತ್ತಣ್ಣ, ಅಭಿಜಿತ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.ಕೆಜಿಎಫ್‌ ಖ್ಯಾತಿಯ ನಟಿ ಅರ್ಚನಾ ಜೋಯಿಸ್ ಕಾಣಿಸಿಕೊಳ್ಳಲಿದ್ದಾರೆ. ಟೋಪಿವಾಲ, ಶ್ರೀನಿವಾಸ ಕಲ್ಯಾಣ, ಓಲ್ಡ್‌ ಮಾಂಕ್‌ ಸಿನಿಮಾ ಖ್ಯಾತಿಯ ಎಂ.ಜಿ.ಶ್ರೀನಿವಾಸ್‌ ಅವರು ಘೋಸ್ಟ್‌ ಸಿನಿಮಾನವನ್ನು ನಿರ್ದೇಶಿಸುತ್ತಿದ್ದಾರೆ. ಸಿನಿಮಾಗೆ ಅರ್ಜುನ್‌ ಜನ್ಯಾ ಸಂಗೀತ ಇದ್ದರೆ, ಸಂದೇಶ್‌ ನಾಗರಾಜ್‌ ನಿರ್ಮಾಪಕರಾಗಿದ್ದಾರೆ.ಅಕ್ಟೋಬರ್ 19ರಂದು ಸಿನಿಮಾ ರಿಲೀಸ್ ಆಗಲಿದೆ.

Continue Reading

South Cinema

Actress Nayanthara: ನಿರ್ದೇಶಕ ಅಟ್ಲೀ ಜತೆ ಇರುವ ಫೋಟೊ ಹಂಚಿಕೊಂಡ ನಯನತಾರಾ; ಮುನಿಸಿಗೆ ತೆರೆ ಎಳೆದರೆ?

Actress Nayanthara: ನಯನತಾರಾ ದಕ್ಷಿಣದ ಪ್ರಮುಖ ನಟಿ, ಆದ್ದರಿಂದ ಅವರು ಜವಾನ್ ಸಿನಿಮಾ ಬಗ್ಗೆ ಸಂತೋಷವಾಗಿರಲಿಲ್ಲ. ಇನ್ನು ಮುಂದೆ ಯಾವುದೇ ಬಾಲಿವುಡ್‌ ಸಿನಿಮಾಗಳಲ್ಲಿ ಕಾಣಿಸುವುದಿಲ್ಲ ಎಂದು ನಯನತಾರಾ ಅಸಮಾಧಾನ ಹೊರ ಹಾಕಿದ್ದಾರೆ ಎಂದು ವರದಿಯಾಗಿತ್ತು.

VISTARANEWS.COM


on

Edited by

Nayanthara wishes Atlee on birthday insta Post
Koo

ಬೆಂಗಳೂರು: ನಯನತಾರಾ ಮತ್ತು ಅಟ್ಲೀ (Actress Nayanthara) ನಡುವೆ ವೈಮನಸ್ಸಿದೆ ಎಂದು ವರದಿಯಾಗಿತ್ತು. ಆದರೀಗ ನಟಿ ಅಟ್ಲೀ ಅವರ ಜನುಮದಿನಕ್ಕೆ (Atlee on birthday) ಶುಭ ಹಾರೈಸುವ ಮೂಲಕ ಈ ವದಂತಿಗಳಿಗೆ ಅವರು ತೆರೆ ಎಳೆದಿದ್ದಾರೆ. ನಯನತಾರಾ ಅವರು ಇನ್‌ಸ್ಟಾ ಸ್ಟೋರಿಯಲ್ಲಿ ಜವಾನ್‌ನ (Jawan Set) ಸೆಟ್‌ಗಳಲ್ಲಿ ತೆರೆಮರೆಯ ಸ್ಟಿಲ್‌ಗಳ ಕೊಲಾಜ್ ಫೋಟೊಗಳನ್ನು ಪೋಸ್ಟ್ ಮಾಡಿದ್ದಾರೆ. ಸ್ಟಿಲ್ ಒಂದರಲ್ಲಿ ಅಟ್ಲೀ ಹಾಗೂ ನಯನತಾರಾ ಒಟ್ಟಿಗೆ ನಗುತ್ತಿರುವುದನ್ನೂ ಕಾಣಬಹುದು. ನಯನತಾರಾ ಅವರು ಶೀರ್ಷಿಕೆಯಲ್ಲಿ “ಜನ್ಮದಿನದ ಶುಭಾಶಯಗಳು ಅಟ್ಲೀ . ನಿಮ್ಮ ಬಗ್ಗೆ ತುಂಬಾ ಹೆಮ್ಮೆ ಇದೆʼʼ ಎಂದು ಬರೆದುಕೊಂಡಿದ್ದಾರೆ.

ಅಸಮಾಧಾನದ ವದಂತಿಗಳು ಹಬ್ಬಿದ್ದೇಕೆ?

ಶಾರುಖ್ ಖಾನ್ (Shah Rukh Khan) ಅವರ ಬ್ಲಾಕ್‌ಬಸ್ಟರ್ ಸಿನಿಮಾ ʻಜವಾನ್‌ʼನಲ್ಲಿ ನಟಿ ನಯನತಾರಾ(Nayanthara) ಏಜೆಂಟ್ ನರ್ಮದಾ ರಾಯ್‌ ಪಾತ್ರವನ್ನು ನಿರ್ವಹಿಸಿದ್ದಾರೆ. ಶಾರುಖ್‌-ನಯನತಾರಾ ಅವರ ಆನ್-ಸ್ಕ್ರೀನ್ ಕೆಮಿಸ್ಟ್ರಿಯನ್ನು ಅಭಿಮಾನಿಗಳು ಇಷ್ಟಪಟ್ಟಿದ್ದಾರೆ. ಆದರೆ, ನಯನತಾರಾ ಅವರಿಗೆ ಅಟ್ಲಿ ಕುರಿತು ಅಸಮಾಧಾನ ಇದೆ ಎಂದು ವರದಿಯಾಗಿತ್ತು. ಚಿತ್ರದಲ್ಲಿ ತಮ್ಮ ಪಾತ್ರವನ್ನು ಹಲವು ಕಡೆ ಕತ್ತರಿಸಿದ್ದರಿಂದ ಅಟ್ಲಿಯೊಂದಿಗೆ ನಯನತಾರಾ ತುಂಬಾ ಅಸಮಾಧಾನಗೊಂಡಿದ್ದಾರೆ ಎನ್ನಲಾಗಿತ್ತು. ಅಲ್ಲದೆ, ದೀಪಿಕಾ ಅವರ ಪಾತ್ರವನ್ನು ಹೆಚ್ಚು ಹೈಲೈಟ್‌ ಮಾಡಿರುವ ಬಗ್ಗೆ ನಟಿ ಬೇಸರ ವ್ಯಕ್ತಪಡಿಸಿದ್ದಾರೆ ಎಂದೂ ವರದಿಯಾಗಿತ್ತು.

ಚಿತ್ರದಲ್ಲಿ ವಿಕ್ರಮ್ ರಾಥೋಡ್ (ಶಾರುಖ್‌) ಪತ್ನಿಯಾಗಿ ದೀಪಿಕಾ ಪಡುಕೋಣೆ ವಿಶೇಷವಾಗಿ ಕಾಣಿಸಿಕೊಂಡಿದ್ದಾರೆ. ಮೂಲ ಪ್ರಕಾರ ದೀಪಿಕಾ ಅವರದ್ದು ಅತಿಥಿ ಪಾತ್ರವಲ್ಲ. ಬದಲಿಗೆ ಜವಾನ್ ಅನ್ನು “ಶಾರುಖ್‌-ದೀಪಿಕಾ” ಚಿತ್ರದಂತೆ ಕಾಣುವಂತೆ ಮಾಡಲಾಗಿದೆ ಎಂದು ಹೇಳಿದೆ. ಇದು ಅತಿಥಿ ಪಾತ್ರವಾಗಿರಲಿಲ್ಲ. ಜವಾನ್ ಅನ್ನು ಬಹುತೇಕ ಶಾರುಖ್‌-ದೀಪಿಕಾ ಚಿತ್ರದಂತೆ ಕಾಣುವಂತೆ ಮಾಡಲಾಗಿದೆ. ನಯನತಾರಾ ದಕ್ಷಿಣದ ಪ್ರಮುಖ ನಟಿ, ಆದ್ದರಿಂದ ಅವರು ಜವಾನ್ ಸಿನಿಮಾ ಬಗ್ಗೆ ಸಂತೋಷವಾಗಿರಲಿಲ್ಲ. ಇನ್ನು ಮುಂದೆ ಯಾವುದೇ ಬಾಲಿವುಡ್‌ ಸಿನಿಮಾಗಳಲ್ಲಿ ಕಾಣಿಸುವುದಿಲ್ಲ ಎಂದು ನಯನತಾರಾ ಅಸಮಾಧಾನ ಹೊರ ಹಾಕಿದ್ದಾರೆ ಎಂದು ವರದಿಯಾಗಿತ್ತು.

ಇದನ್ನೂ ಓದಿ: Actress Nayanthara: ದೀಪಿಕಾ ಹೈಲೈಟ್‌ ಆಗಿದ್ದಕ್ಕೆ ಬಾಲಿವುಡ್‌ ಸಿನಿಮಾ ಮಾಡದಿರಲು ನಯನತಾರಾ ನಿರ್ಧಾರ?

ಇತ್ತೀಚೆಗೆ ಮುಂಬೈನಲ್ಲಿ ‘ಜವಾನ್’ ಸಿನಿಮಾದ ಸಕ್ಸಸ್ ಮೀಟ್ ಆಯೋಜನೆ ಮಾಡಲಾಗಿತ್ತು. ಆದರೆ, ಇದರಲ್ಲಿ ನಯನತಾರಾ ಅವರು ಭಾಗಿ ಆಗಿರಲಿಲ್ಲ. ಶಾರುಖ್ ಖಾನ್, ದೀಪಿಕಾ ಪಡುಕೋಣೆ, ವಿಜಯ್ ಸೇತುಪತಿ, ಅನಿರುದ್ಧ್ ರವಿಚಂದರ್, ಅಟ್ಲಿ, ಸಾನ್ಯಾ ಮಲ್ಹೋತ್ರಾ ಹಾಗೂ ರಿಧಿ ದೋಗ್ರಾ ಭಾಗವಹಿಸಿದ್ದರು. ಜವಾನ್‌ ದೇಶೀಯ ಬಾಕ್ಸ್ ಆಫೀಸ್‌ನಲ್ಲಿ 500 ಕೋಟಿ ರೂ. ಮತ್ತು ವಿಶ್ವಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ 900 ಕೋಟಿ ರೂ. ಗಳಿಕೆ ದಾಟಿದೆ.

Continue Reading
Advertisement
3 Indian companies among America's happiest employees top 20 company list
ಪ್ರಮುಖ ಸುದ್ದಿ12 mins ago

Happiest Employees: ಅಮೆರಿಕದ ಹ್ಯಾಪಿಯೆಸ್ಟ್ ಕಂಪನಿಗಳ ಟಾಪ್‍ 20 ಪಟ್ಟಿಯಲ್ಲಿ ಭಾರತದ 3 ಕಂಪನಿ!

Team india
ಕ್ರಿಕೆಟ್17 mins ago

Team India : ಪಾಕಿಸ್ತಾನವನ್ನು ಹಿಮ್ಮೆಟ್ಟಿಸಿ 3 ಮಾದರಿಯ ಕ್ರಿಕೆಟ್​ನಲ್ಲಿ ವಿಶೇಷ ದಾಖಲೆ ಮಾಡಿದ ಟೀಮ್ ಇಂಡಿಯಾ

Cauvery Dispute cabinet meeting
ಕರ್ನಾಟಕ23 mins ago

Cabinet Meeting: ಸೆ.26ರವರೆಗೆ ನೀರು ಬಿಡುಗಡೆ ಫಿಕ್ಸ್‌; ಬಳಿಕ ಬಿಡುವುದಿಲ್ಲ ಎಂದು ಅಧಿವೇಶನ ಕರೆದು ನಿರ್ಣಯ?

Ruturaj Gaikwad
ಕ್ರಿಕೆಟ್1 hour ago

ind vs aus : ಮೊದಲ ಪಂದ್ಯದಲ್ಲಿ ಭಾರತ ತಂಡಕ್ಕೆ ಜಯ, ಆಸ್ಟ್ರೇಲಿಯಾ ವಿರುದ್ಧ ಸರಣಿಯಲ್ಲಿ 1-0 ಮುನ್ನಡೆ

Cat eyed snake
ಕರ್ನಾಟಕ1 hour ago

Cat Eyed Snake : ಬೆಕ್ಕಿನ ಕಣ್ಣಿನ ಸುಂದರಿಯರನ್ನು ನೋಡೇ ಇರ್ತೀರಿ, ಬೆಕ್ಕಿನ ಕಣ್ಣಿನ ಹಾವು ನೋಡಿದ್ದೀರಾ?

Dakshin Bharat Utsav
ಕರ್ನಾಟಕ1 hour ago

Dakshin Bharat Utsav: ಪ್ರವಾಸೋದ್ಯಮ ಉತ್ತೇಜಿಸಲು ಖಾಸಗಿ ವಲಯಕ್ಕೆ 550 ಸ್ಮಾರಕ ದತ್ತು: ಸಚಿವ ಎಚ್‌.ಕೆ. ಪಾಟೀಲ್

savings
ದೇಶ2 hours ago

Money Guide: ಅತ್ಯುತ್ತಮ ನಿವೃತ್ತ ಜೀವನಕ್ಕಾಗಿ ಟಾಪ್ 10 ಹಣ ಉಳಿತಾಯದ ಟಿಪ್ಸ್!

Mohammed Shami
ಕ್ರಿಕೆಟ್2 hours ago

Mohammed Shami : ಬೌಲಿಂಗ್​ನಲ್ಲಿ ಹೊಸ ಮಿಂಚು ಸೃಷ್ಟಿಸಿದ ಮೊಹಮ್ಮದ್ ಶಮಿ; ಏನಿದು ಸಾಧನೆ

Vijayanagara DC Diwakar MS Visit and inspection of hospital in Hagaribommanahalli
ವಿಜಯನಗರ2 hours ago

Vijayanagara News: ಹಗರಿಬೊಮ್ಮನಹಳ್ಳಿಯ ಆಸ್ಪತ್ರೆ, ಸರ್ಕಾರಿ ಕಚೇರಿಗಳಿಗೆ ಡಿಸಿ ದಿವಾಕರ್‌ ದಿಢೀರ್‌ ಭೇಟಿ

Neegilu Kavya Abhiyan programme at gubbi
ತುಮಕೂರು2 hours ago

Tumkur News: ಗುಬ್ಬಿಯಲ್ಲಿ ನೇಗಿಲು ಕಾವ್ಯ ಅಭಿಯಾನಕ್ಕೆ ಸಾಹಿತಿ ಸಂತೋಷ್ ಮಡೆನೂರು ಚಾಲನೆ

7th Pay Commission
ನೌಕರರ ಕಾರ್ನರ್11 months ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

DCC Bank Recruitment 2023
ಉದ್ಯೋಗ8 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Sphoorti Salu
ಸುವಚನ3 months ago

ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ

Govt employees ssociation
ಕರ್ನಾಟಕ7 months ago

7th pay commission | ಸರ್ಕಾರಿ ನೌಕರರಿಗೆ ವಾರಕ್ಕೆ 5 ದಿನ ಕೆಲಸ, ಹಳೆ ಪಿಂಚಣಿ ಯೋಜನೆ; ವೇತನ ಆಯೋಗದ ಮುಂದೆ ಬೇಡಿಕೆ ಪಟ್ಟಿ

kpsc recruitment 2023 pdo recruitment 2023
ಉದ್ಯೋಗ2 months ago

PDO Recruitment 2023 : 350+ ಪಿಡಿಒ ಹುದ್ದೆಗಳಿಗೆ ಈ ಬಾರಿ ಕೆಪಿಎಸ್‌ಸಿ ಮೂಲಕ ನೇಮಕ

Rajendra Singh Gudha
ದೇಶ2 months ago

Rajasthan Minister: ಸೀತಾ ಮಾತೆ ಸುಂದರಿ! ಅದ್ಕೆ ರಾಮ, ರಾವಣ ಆಕೆ ಹಿಂದೆ ಬಿದ್ದಿದ್ದರು; ಕಾಂಗ್ರೆಸ್ ಸಚಿವ

Village Accountant Recruitment
ಉದ್ಯೋಗ7 months ago

Village Accountant Recruitment : ರಾಜ್ಯದಲ್ಲಿ 2007 ಗ್ರಾಮ ಲೆಕ್ಕಿಗರ ಹುದ್ದೆ ಖಾಲಿ; ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳಿವೆ ನೋಡಿ

Entitled leave for employees involved in strike; Order from Govt
ನೌಕರರ ಕಾರ್ನರ್7 months ago

Govt Employees Strike : ಮುಷ್ಕರದಲ್ಲಿ ಭಾಗಿಯಾದ ನೌಕರರಿಗೆ ವೇತನ ಸಹಿತ ರಜೆ; ಸದ್ಯವೇ ಸರ್ಕಾರದಿಂದ ಆದೇಶ

betel nut smuggling Areca News
ಕರ್ನಾಟಕ9 months ago

Areca News | ಅಕ್ರಮ ಅಡಿಕೆ ಆಮದಿನ ಕಿಂಗ್‌ಪಿನ್‌ ಅರೆಸ್ಟ್‌; ಇನ್ನಾದರೂ ಏರೀತೆ ಅಡಿಕೆಯ ಬೆಲೆ?

7th Pay Commission
ಕರ್ನಾಟಕ11 months ago

7th Pay Commission | 7 ವೇತನ ಆಯೋಗ ರಚನೆಯ ಘೋಷಣೆ; ಹರ್ಷ ವ್ಯಕ್ತಪಡಿಸುತ್ತಿರುವ ಸರ್ಕಾರಿ ನೌಕರರು

Dina Bhavishya
ಪ್ರಮುಖ ಸುದ್ದಿ18 hours ago

Dina Bhavishya : ದಿನದ ಮಟ್ಟಿಗೆ ಈ ರಾಶಿಯವರು ಹೂಡಿಕೆ ಮಾಡ್ಬೇಡಿ!

Dina Bhavishya
ಪ್ರಮುಖ ಸುದ್ದಿ3 days ago

Dina Bhavishya : ನಂಬಿದ ವ್ಯಕ್ತಿಗಳು ಮೋಸ ಮಾಡ್ತಾರೆ ಹುಷಾರ್‌!

dina bhavishya
ಪ್ರಮುಖ ಸುದ್ದಿ5 days ago

Dina Bhavishya : ಆಪ್ತರೊಂದಿಗೆ ಜಗಳವಾದೀತು ಹುಷಾರ್‌!

Dina Bhavishya
ಪ್ರಮುಖ ಸುದ್ದಿ6 days ago

Dina Bhavishya : ಈ ರಾಶಿಯವರು ಇಂದು ಮುಟ್ಟಿದ್ದೆಲ್ಲಾ ಚಿನ್ನ!

Ramalinga Reddy
ಕರ್ನಾಟಕ6 days ago

ಇನ್ಮುಂದೆ ಹೇಗಂದ್ರೆ ಹಾಗೆ ದೇವಸ್ಥಾನ ಕಟ್ಟೋ ಹಾಗಿಲ್ಲ! ರಾಮಲಿಂಗಾ ರೆಡ್ಡಿ ಮಾಸ್ಟರ್ ಪ್ಲಾನ್

Bannerghatta Park
ಆರೋಗ್ಯ6 days ago

Nipah Virus : ನಿಫಾ ವೈರಸ್‌ ಭೀತಿ; ಬನ್ನೇರುಘಟ್ಟ ಪಾರ್ಕ್‌ನಲ್ಲಿ ಹೈ ಅಲರ್ಟ್

Villagers exclude menstruating women
ಕರ್ನಾಟಕ6 days ago

Tumkur News : ಮುಟ್ಟಾದ ಮಹಿಳೆಯರನ್ನು ಗ್ರಾಮದಿಂದ ಹೊರಗಿಟ್ಟು ಮೌಡ್ಯಾಚರಣೆ!

dina bhavishya
ಪ್ರಮುಖ ಸುದ್ದಿ7 days ago

Dina Bhavishya : ಈ ದಿನ ಭೂಮಿ, ಆಸ್ತಿ ಖರೀದಿಸುವ ಮುನ್ನ ಎಚ್ಚರ!

Kadri temple is the target for Shariq NIA reveals
ಕರ್ನಾಟಕ1 week ago

ಮಂಗಳೂರು ಸ್ಫೋಟ : ಶಾರಿಕ್‌ಗೆ ಕದ್ರಿ ದೇವಸ್ಥಾನವೇ ಟಾರ್ಗೆಟ್; ರಿವೀಲ್ ಮಾಡಿದ ಎನ್ಐಎ

Dina bhavishya
ಪ್ರಮುಖ ಸುದ್ದಿ1 week ago

Dina Bhavishya : ಈ ರಾಶಿಯವರು ಹೂಡಿಕೆ ಮಾಡಿದರೆ ನಷ್ಟ ಗ್ಯಾರಂಟಿ!

ಟ್ರೆಂಡಿಂಗ್‌