ನವದೆಹಲಿ: ಜಿ20 ಶೃಂಗ ಸಭೆಯ(G20 Summit 2023) ಮೊದಲ ದಿನವಾದ ಶನಿವಾರ ರಾತ್ರಿ, ವಿಶ್ವ ನಾಯಕರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು (Rashtrapati Draupadi Murmu) ಅವರು ಔತಣಕೂಟ (Dinner Party) ಏರ್ಪಡಿಸಿದ್ದರು. ಈ ವೇಳೆ, ವಿಶ್ವ ನಾಯಕರಿಗೆ ಒದಗಿಸಲಾಗುವ ಆಹಾರದ ಪಟ್ಟಿಯ ಚಿತ್ರವು ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ(Menu Viral).
ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರು ಚಿತ್ರದಲ್ಲಿ ಔತಣಕೂಟದಲ್ಲಿ ಬಡಿಸಲಾಗುವ ಆಹಾರ ಪದಾರ್ಥಗಳು, ಪಾನೀಯಗಳ ಬಗ್ಗೆ ಮಾಹಿತಿ ನೀಡಲಾಗಿದೆ.
ಸ್ಟಾರ್ಟರ್ ಆಗಿ ಕೆಲವು ಸಿರಿಧಾನ್ಯ ಫಾಕ್ಸ್‌ಟೇಲ್ ನೀಡಲಾಗಿದೆ. ಮೊಸರು, ಚಟ್ನಿ ಇತ್ಯಾದಿ. ಅದೇ ರೀತಿ, ಮುಖ್ಯ ಆಹಾರವಾಗಿ ವನವರನಂ ಪರಿಕಲ್ಪನೆಯಡಿ, ಹಲಿಸಿನ ಹಣ್ಣಿನಿಂದ ಮಾಡಿದ ಆಹಾರ, ಮಶೂರಮ್, ಸಿರಿಧಾನ್ಯ ತಯಾರಿಸಿದ ಆಹಾರ, ಕೇರಳ ಕೆಂಪು ಅನ್ನ ನೀಡಲಾಗಿತ್ತು.
ಜತೆಗೆ, ಮುಂಬೈ ಪೂವಾ ಕೂಡ ಗಮನ ಸೆಳೆಯಿತು. ಹಾಲು ಮತ್ತು ಗೋಧಿಯನ್ನು ಒಳಗೊಂಡ ಈರುಳ್ಳಿ ಪ್ರೇರಿತ ಸಾಫ್ಟ್ ಬನ್ ಇತ್ತು. ಏಲಕ್ಕಿ ಸುವಾಸನೆಯುಕ್ತ ಸ್ವೀಟ್ ಫ್ಲ್ಯಾಟ್ ಬ್ರೆಡ್ ಕೂಡ ಮೆನುವಿನಲ್ಲಿ ಜಾಗ ಪಡೆದಿದೆ.
ಈ ಸುದ್ದಿಯನ್ನೂ ಓದಿ: G20 Summit 2023: ಭಾರತ-ಇಂಗ್ಲೆಂಡ್ ಮಾತುಕತೆ! ಮಧ್ಯ ಪ್ರಾಚ್ಯ ವ್ಯಾಪಾರ-ತಾಂತ್ರಿಕ ಕಾರಿಡಾರ್ ಚರ್ಚೆ
ಇಷ್ಟೆಲ್ಲ ಆದ ಬಳಿಕ ಸಿಹಿ ತಿಂಡಗಳ ಲಿಸ್ಟ್‌ನಲ್ಲಿ ಮುಧರಿಮಾ, ಏಲಕ್ಕಿ ಸುವಾಸನೆಯುಕ್ತ ಬರ್ನ್‌ಯಾರ್ಡ್ ಸಿರಿಧಾನ್ಯ ಸಿಹಿ ಸೇರಿದಂತೆ ಇನ್ನಿತರ ಪದಾರ್ಥಗಳಿದ್ದವು. ಪಾನೀಯ ಮೆನುವಿನಲ್ಲಿ ಕಾಶ್ಮೀರಿ ಕಹ್ವಾ, ಫಿಲ್ಟರ್ ಕಾಫಿ ಮತ್ತು ಡಾರ್ಜಿಲಿಂಗ್ ಟೀ ನೀಡಲಾಗಿತ್ತು.