ವಾಷಿಂಗ್ಟನ್: ನಿಮಗೆ 5 ಕೋಟಿ ರೂ. ಲಾಟರಿ (Lottery) ಹೊಡೆದಿದೆ ಎಂದು ಕರೆ ಬರುತ್ತದೆ. ಲಾಟರಿ ಕುರಿತು ಮೆಸೇಜ್ ಕೂಡ ಬರುತ್ತದೆ. ನಂಬಿ ಅವರು ಕಳುಹಿಸಿದ ಲಿಂಕ್ ಮೇಲೆ ಕ್ಲಿಕ್ ಮಾಡಿದರೆ, ನಿಮ್ಮ ಖಾತೆಯಲ್ಲಿರುವ ಹಣ ಕಟ್ ಆಗುವುದು ಗ್ಯಾರಂಟಿ. ಇಂತಹ ಸ್ಕ್ಯಾಮ್‌ಗಳಿಂದಲೇ ಜನ ಎಚ್ಚೆತ್ತುಕೊಳ್ಳುತ್ತಿದ್ದಾರೆ. ಅನಾಮಧೇಯ ವ್ಯಕ್ತಿಗಳ ಕರೆಗಳಿಗೆ ಪ್ರತಿಕ್ರಿಯೆ ನೀಡಲ್ಲ. ಹೀಗೆ, ಬರುವ ಕರೆಗಳಲ್ಲ ಸ್ಕ್ಯಾಮ್ (Cyber Crime) ಎಂದು ತಿಳಿದುಕೊಂಡ ಅಮೆರಿಕದ (America) ಮಹಿಳೆಯೊಬ್ಬರು 1 ಕೋಟಿ ಲಾಟರಿ ಹೊಡೆದಿದೆ ಎಂಬುದಾಗಿ ಬಂದ ಕರೆಯನ್ನು ನಿರ್ಲಕ್ಷಿಸಿದ್ದಾರೆ. ಆದರೆ, ಅವರಿಗೆ ಒಂದು ಕೋಟಿ ರೂ. ಲಾಟರಿ ಮೊತ್ತವನ್ನು ತಲುಪಿಸಲು ಅಧಿಕಾರಿಗಳು ಹೆಣಗಾಡಿದ್ದಾರೆ.
ಹೌದು, ಗ್ರೇಟರ್ ಮ್ಯಾಂಚೆಸ್ಟರ್‌ನ ಹೀಲ್ಡ್ ಗ್ರೀನ್‌ನಲ್ಲಿರುವ ಅನೆ (Anne) ಎಂಬುವರು ಲಾಟರಿ ಟಿಕೆಟ್ ಖರೀದಿಸಿದ್ದರು. ಬಂದರೆ ಬರಲಿ, ಹೋದರೆ ಹೋಗಲಿ ಎಂಬ ಮನಸ್ಥಿತಿಯಲ್ಲಿ ಅವರು ಟಿಕೆಟ್ ಖರೀದಿಸಿದ್ದರು. ಟಿಕೆಟ್ ಖರೀದಿಸಿ ತುಂಬ ದಿನ ಆದ ಕಾರಣ ನಿರ್ಲಕ್ಷದಿಂದ ಇದ್ದರು. ಆದರೆ, ಕೆಲ ದಿನಗಳ ಹಿಂದಷ್ಟೇ ಅನೆ ಅವರಿಗೆ ಲಾಟರಿ ಕಂಪನಿಯ ಅಧಿಕಾರಿಗಳು ಅನೆ ಅವರಿಗೆ ಕರೆ ಮಾಡಿದ್ದಾರೆ. ನಿಮಗೆ ಒಂದು ಕೋಟಿ ರೂ. ಲಾಟರಿ ಹೊಡೆದಿದೆ ಎಂದು ಮಾಹಿತಿ ನೀಡಿದ್ದಾರೆ. ಆದರೆ, ಇದು ಸ್ಕ್ಯಾಮ್ ಎಂದ ಅನೆ, ಕಾಲ್ ಕಟ್ ಮಾಡಿದ್ದಾರೆ.
ಅನೆಗೆ ದುಡ್ಡು ಸಿಕ್ಕಿದ್ದು ಹೇಗೆ?
ಮಹಿಳೆಯು ಲಾಟರಿ ಹೊಡೆದಿದೆ ಎಂದು ಹೇಳಿದರೂ ನಂಬದ ಕಾರಣ ಅಧಿಕಾರಿಗಳು ಗೊಂದಲಕ್ಕೀಡಾಗಿದ್ದಾರೆ. ಈಗ ಏನು ಮಾಡುವುದು ಎಂದು ಅನೆ ಅವರಿಗೆ ಮೇಲ್ ಮಾಡಿದ್ದಾರೆ. ಲಾಟರಿ ಕುರಿತು ವಿವರಿಸಿದ್ದಾರೆ. ಆದರೆ, ಅನೆ ಅದೇ ನಿರ್ಲಕ್ಷ್ಯ ಧೋರಣೆ ಅನುಸರಿಸಿದ್ದಾರೆ. ಇ-ಮೇಲ್‌ಅನ್ನು ಅವರು ನಿರ್ಲಕ್ಷಿಸಿ ಸುಮ್ಮನಾಗಿದ್ದಾರೆ. ಇದರಿಂದಲೂ ಅಧಿಕಾರಿಗಳಿಗೆ ಗೊಂದಲ ಉಂಟಾಗಿದೆ. ಈಗ ಲಾಟರಿ ಮೊತ್ತವನ್ನು ಇಟ್ಟುಕೊಳ್ಳುವ ಹಾಗೂ ಇಲ್ಲ, ಕೊಡೋಣವೆಂದರೆ ಮಹಿಳೆಯು ಸಿಗುತ್ತಿಲ್ಲ. ಹಾಗಾಗಿ, ಅಧಿಕಾರಿಗಳಿಗೆ ಇದು ನುಂಗಲಾರದ ತುತ್ತಾಗಿ ಪರಿಣಮಿಸಿತ್ತು.
ಲಾಟರಿ ಕಂಪನಿ ಅಧಿಕಾರಿಗಳು ಅಷ್ಟಕ್ಕೇ ಸುಮ್ಮನಾಗಿಲ್ಲ. ಅನೆ ಅವರ ವಿಳಾಸವನ್ನು ಹುಡುಕಿದ್ದಾರೆ. ಗಲ್ಲಿ ಗಲ್ಲಿ ಸುತ್ತಾಡಿ ಕೊನೆಗೂ ಅನೆ ಅವರನ್ನು ಹುಡುಕಿ, ಅವರಿಗೆ ಒಂದು ಕೋಟಿ ರೂ. ಮೌಲ್ಯದ ಚೆಕ್ ನೀಡಿದ್ದಾರೆ. ಇದನ್ನು ಕಂಡ ಅನೆ ಹಾಗೂ ಸುತ್ತಮುತ್ತಲಿನವರಿಗೆ ಆಶ್ಚರ್ಯ ಉಂಟಾಗಿದೆ. “ನನಗೆ ಕರೆ ಮಾಡಿದರು, ಇ-ಮೇಲ್ ಮಾಡಿದರು. ಇದೆಲ್ಲ ಸ್ಕ್ಯಾಮ್ ಇರಬಹುದು ಎಂದು ಸುಮ್ಮನಾದೆ. ಆದರೆ, ಅಧಿಕಾರಿಗಳು ಮನೆಗೇ ಬಂದು ಚೆಕ್ ನೀಡಿದ್ದಾರೆ. ಇದರಲ್ಲಿ ಒಂದಷ್ಟು ಹಣವನ್ನು ದಾನವಾಗಿ ನೀಡುವೆ” ಎಂದು ಅನೆ ತಿಳಿಸಿದ್ದಾರೆ.
ಇದನ್ನೂ ಓದಿ: ಸೈಬರ್ ಸೇಫ್ಟಿ ಅಂಕಣ: ಮುದ್ರಾ ಯೋಜನೆಯ ಹೆಸರಲ್ಲಿ ರಾಷ್ಟ್ರವ್ಯಾಪಿ ಸೈಬರ್ ವಂಚನೆ