Site icon Vistara News

Sperminator: ಈತನಿಂದ ಗರ್ಭ ಧರಿಸಿದ ಹೆಂಗಸರು 180; 200 ಮಕ್ಕಳಿಗೆ ಅಪ್ಪ! ಆದರೂ ಅವಿವಾಹಿತ

Sperminator joe impregnated more than 180 women but he is still single

ನ್ಯೂಯಾರ್ಕ್‌: ಇಂಗ್ಲೆಂಡ್‌ ಮೂಲದ ಈ ವ್ಯಕ್ತಿ 180 ಮಹಿಳೆಯರನ್ನು ಗರ್ಭಿಣಿ ಮಾಡಿದ್ದಾನೆ (impregnated women) ಮತ್ತು 200 ಮಕ್ಕಳಿಗೆ (200 Sons) ತಂದೆಯಾಗಿದ್ದಾನೆ! ಆದರೂ ಈತ ಅವಿವಾಹಿತ (Still Single) ಎಂದರೆ ನಂಬುತ್ತೀರಾ? ಬೇರೆ ದಾರಿಯೇ ಇಲ್ಲ. ನಂಬಲೇಬೇಕು, ಯಾಕೆಂದರೆ, ಈತ ವೀರ್ಯ ದಾನಿ(Sperm Donor)! ಈತನ ಸಂತಾನಶಕ್ತಿ ಎಷ್ಟು ಸ್ಟ್ರಾಂಗ್ ಇದೆ ಅಂದ್ರೆ, ಮಕ್ಕಳಾಗದ ಬ್ರಿಟನ್ ಮಹಿಳೆಯರೆಲ್ಲ ಈತನ ವೀರ್ಯ ದಾನಕ್ಕೆ ಎದುರು ನೋಡುತ್ತಿರುತ್ತಾರೆ. ಅಂದ ಹಾಗೆ ವೀರ್ಯ ದಾನಿ ಯಾರೆಂದರೆ, 51 ವರ್ಷದ ಜೋ(Sperminator Jeo).

ಈಗಲೂ ಸಿಂಗಲ್ ಆಗಿರುವ ಬಗ್ಗೆ ತಾವೇ ಕಾರಣವನ್ನು ನೀಡುತ್ತಾರೆ. ವೀರ್ಯ ದಾನಿಯ ಜೀವನ ಶೈಲಿಯನ್ನು ಸಹಿಸಿಕೊಳ್ಳಬಲ್ಲ ವ್ಯಕ್ತಿಯನ್ನು ಕಂಡುಹಿಡಿಯುವುದು ತುಂಬಾ ಕಷ್ಟ. ಹಾಗಾಗಿ, ಇದುವರೆಗೂ ತನ್ನನ್ನು ಒಪ್ಪುವ ಯಾರೂ ಸಿಕ್ಕಿಲ್ಲ ಎನ್ನುತ್ತಾರೆ 51 ವರ್ಷದ ವೀರ್ಯ ದಾನಿ ಜೋ. ಇವರು ನ್ಯೂಕ್ಯಾಸಲ್‌ನಲ್ಲಿ ವಾಸವಾಗಿದ್ದಾರೆ.

ತಮ್ಮನ್ನು ತಾವು ಏಂಜೆಲ್ ಆಫ್ ದಿ ನಾರ್ತ್ ಎಂದು ಹೇಳಿಕೊಳ್ಳುವ ಜೋ, 13 ವರ್ಷಗಳಲ್ಲಿ 180ಕ್ಕೂ ಅಧಿಕ ಮಹಿಳೆಯರಿಗೆ ಗರ್ಭ ಧರಿಸಲು ವೀರ್ಯ ದಾನ ಮಾಡಿದ್ದಾರೆ ಮತ್ತು 200 ಮಕ್ಕಳಿಗೆ ಪರೋಕ್ಷವಾಗಿ ತಂದೆಯಾಗಿದ್ದಾರೆ. ಈ ವ್ಯಕ್ತಿ ಇಂಗ್ಲೆಂಡ್‌ನ ವಾಸಿಯಾಗಿದ್ದರೂ ವೀರ್ಯ ದಾನಕ್ಕಾಗಿ ಅಮೆರಿಕದಿಂದ ಅರ್ಜೇಂಟಿನಾ, ಸಿಂಗಾಪುರದವರೆಗೂ ನಾನಾ ದೇಶಗಳಿಗೆ ಭೇಟಿ ನೀಡಿದ್ದಾರೆ. ಸಾಕಷ್ಟು ಹೆಣ್ಣು ಮಕ್ಕಳಿಗೆ ಗರ್ಭ ಧರಿಸಲು ಅವಕಾಶ ಕಲ್ಪಿಸಿದ್ದಾರೆ.

ಅಮೆರಿಕದಂಥ ದೇಶಗಳಲ್ಲಿ ಕೃತಕ ಗರ್ಭಧಾರಣೆ ಮತ್ತು ವಿಟ್ರೊ ಫಲೀಕರಣ ಮಾಡಲು ಸಾಕಷ್ಟು ವೆಚ್ಚವಾಗುತ್ತದೆ. ಈ ವೆಚ್ಚ ಭರಿಸಲು ಸಾಧ್ಯವಾಗದವರು ಖಾಸಗಿ ವೀರ್ಯಾಣು ದಾನಿಗಳ ಕಡೆಗೆ ಹೆಚ್ಚು ಮುಖ ಮಾಡುತ್ತಿದ್ದಾರೆ. ಅಮೆರಿಕದಲ್ಲಿ ಕೃತಕ ಗರ್ಭಧಾರಣೆಗೆ ಸುಮಾರು 11,000 ಡಾಲರ್ ವೆಚ್ಚವಾಗುತ್ತದೆ.

ಗರ್ಭ ಧರಿಸಲು ಇಚ್ಛಿಸುವ ಮಹಿಳೆಯರು ಸಾಮಾಜಿಕ ಜಾಲತಾಣಗಳ ಮೂಲಕ ತಮ್ಮನ್ನು ಸಂಪರ್ಕಿಸುತ್ತಾರೆ ಎಂದು ಜೋ ಹೇಳಿದ್ದಾರೆ. ಬಳಿಕ, ಆ ಮಹಿಳೆಯರ ಪಿರಿಯಡ್ ಮತ್ತು ಇತರ ಮಾಹಿತಿಯನ್ನು ಕೇಳಿ ಪಡೆದುಕೊಳ್ಳುತ್ತಾರೆ. ಒಂದೊಮ್ಮೆ ಎಲ್ಲವೂ ಹೊಂದಾಣಿಕೆಯಾದರೆ, ಇಚ್ಛಿತ ಮಹಿಳೆಗೆ ಗರ್ಭಾದಾನಕ್ಕೆ ದಿನಾಂಕವನ್ನು ನೀಡಲಾಗುತ್ತದೆ. ಮಹಿಳೆಯರು ಎಐ(ಕೃತಕ ಗರ್ಭಧಾರಣೆ), ಪಿಐ(ಭಾಗಶಃ ಗರ್ಭಧಾರಣೆ) ಮತ್ತು ಎನ್ಐ(ನೈಸರ್ಗಿಕ ಗರ್ಭಧಾರಣೆ)… ಈ ಪೈಕಿ ಯಾವುದಾದರೂ ಒಂದು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ.

ಈ ಗರ್ಭಾದಾನದಲ್ಲಿ ನೈಸರ್ಗಿಕ ಗರ್ಭಧಾರಣೆ ಹೆಚ್ಚು ಪರಿಣಾಮಕಾರಿಯಾಗಿರುತ್ತದೆ. ಆದರೆ, ಗರ್ಭಣಿಯಾಗಲು ಬಯಸುವ ಮಹಿಳೆಯರು ಈಗಾಗಲೇ ಸಂಬಂಧದಲ್ಲಿರುತ್ತಾರೆ. ಇದರಿಂದ ಅವರ ಸಂಬಂಧಲ್ಲಿ ಬಿರುಕು ಮೂಡುವ ಸಾಧ್ಯತೆಗಳಿರುವುದರಿಂದ ಅವರು ಕೃತಕ ಗರ್ಭಧಾರಣೆಯನ್ನೇ ಹೆಚ್ಚಾಗಿ ಆಯ್ಕೆ ಮಾಡಿಕೊಳ್ಳುತ್ತಾರೆ ಎನ್ನುತ್ತಾರೆ ಜೋ. ಇನ್ನೂ ವಿಶೇಷ ಎಂದರೆ, ಜೋ ಎಂದೂ ಭೇಟಿಯಾಗದ ಇಬ್ಬರು ಮಹಿಳೆಯರು ಕೂಡ ಇವರ ವೀರ್ಯದಿಂದಲೇ ಗರ್ಭಿಣಿಯಾಗಿದ್ದಾರೆ. ಜೋ ಅವರ ಆ ಮಹಿಳೆಗೆ ತಮ್ಮ ವೀರ್ಯವನ್ನು ಕೋರಿಯರ್ ಮಾಡಿದ್ದರಂತೆ!

ಈ ಸುದ್ದಿಯನ್ನೂ ಓದಿ: High court : ನಿಮಗೆ ಆಗದಿದ್ದರೆ, ಬೇರೆಯವರ ವೀರ್ಯ, ಅಂಡಾಣುನಿಂದ ಮಗು ಮಾಡ್ಕೊಬಹುದು!

Exit mobile version