Site icon Vistara News

Viral News: ಇವರು ಅತಿ ಉದ್ದದ ಗಡ್ಡಧಾರಿ ಮಹಿಳೆ… ದಾಖಲಾಯಿತು ಗಿನ್ನೆಸ್ ರೆಕಾರ್ಡ್!

Beard Woman

ನವದೆಹಲಿ: ಗಡ್ಡ ಗಂಡಸರಿಗೆ ಸೌಂದರ್ಯದ ದ್ಯೂತಕ. ನಾನಾ ವಿನ್ಯಾಸದ ಗಡ್ಡಧಾರಿಗಳನ್ನು ನೋಡಬಹುದು. ಆದರೆ, ಅದೇ ಗಡ್ಡ ಹೆಂಗಸರಿಗೆ ಬಂದರೆ…! ಛೇ… ಯಾರೂ ಒಪ್ಪುವುದಿಲ್ಲ. ಅವರು ಕುರೂಪಿಯಾಗಿ ಕಾಣುತ್ತಾರೆ. ಆದರೆ, ಅಮೆರಿಕದ ಮಹಿಳೆಯೊಬ್ಬಳು ಗಡ್ಡ (longest beard) ಬೆಳೆಸಿಕೊಂಡೇ ಪ್ರಸಿದ್ದಿಯಾಗಿದ್ದಾಳೆ. ಅಷ್ಟೇ ಅಲ್ಲಿ ಗಿನ್ನೆಸ್ (Guinness World Record) ದಾಖಲೆ ಕೂಡ ಬರೆದಿದ್ದಾಳೆ. ಅಮೆರಿಕದ ಮಿಚಿಗನ್‌ (America woman) 38 ವರ್ಷದ ಎರಿನ್ ಹನಿಕಟ್ (Erin Honeycut) ಅವರು ಈ ವಿಶಿಷ್ಟ ಸಾಧನೆಯನ್ನು ಮಾಡಿದ್ದಾರೆ. ಹನಿಕಟ್‌ರ ದಾಖಲೆಯ 11.8 ಇಂಚಿನ ಗಡ್ಡವು ಆಕೆಯ ಪಾಲಿಸಿಸ್ಟಿಕ್ ಓವೆರಿಯನ್ ಸಿಂಡ್ರೋಮ್‌ನ ಪರಿಣಾಮವಾಗಿ ಬೆಳೆದಿದೆ. ಈ ಸ್ಥಿತಿಯು ಹಾರ್ಮೋನುಗಳ ಅಸಮತೋಲನವನ್ನು ಉಂಟುಮಾಡುತ್ತದೆ ಮತ್ತು ಹೆಚ್ಚುವರಿ ಕೂದಲು ಬೆಳವಣಿಗೆಗೆ ಕಾರಣವಾಗಬಹುದು ಎನ್ನುತ್ತಾರೆ ತಜ್ಞರು(Vrial News).

ಹನಿಕಟ್‌ ಅವರು 13 ವರ್ಷ ಇದ್ದಾಗ ಆಕೆಗೆ ಕಡ್ಡ ಮೂಡಲಾರಂಭಿಸಿತು. ಆರಂಭದಲ್ಲಿ ಗಡ್ಡವನ್ನು ಆಕೆಯು ಶೇವಿಂಗ್ ಮಾಡಲು ಪ್ರಯತ್ನಿಸಿದಳು. ದಿನಕ್ಕೆ ಮೂರು ಬಾರಿ ಶೇವಿಂಗ್ ಮಾಡುತ್ತಿದ್ದಳು. ವ್ಯಾಕ್ಸಿಂಗ್ ಮಾಡುತ್ತಿದ್ದಳು. ಅಲ್ಲದೇ, ಕೂದಲು ರಿಮೂವಲ್ ಪ್ರಾಡಕ್ಟ್‌ಗಳನ್ನು ಬಳಸಿಕೊಂಡು ಬೆಳೆಯುತ್ತಿರುವ ಕೂದಲುಗಳನ್ನು ತಡೆಯುವ ಪ್ರಯತ್ನ ಮಾಡಿದರು. ರಕ್ತದೊತ್ತಡದ ಪರಿಣಾಮ ಆಕೆಯು ತನ್ನ ದೃಷ್ಟಿಯನ್ನು ಭಾಗಶಃ ಕಳೆದುಕೊಂಡ ಬಳಿಕ, ಗಡ್ಡ ಶೇವಿಂಗ್ ಮಾಡುವುದನ್ನು ನಿಲ್ಲಿಸಿದಳು. ಗಡ್ಡ ಬೆಳೆಯಲು ಬಿಟ್ಟಳು.

ಈವರೆಗೆ 75 ವರ್ಷದ ವಿವಿಯನ್ ವ್ಹೀಲರ್ ಅವರ ಅತಿ ಉದ್ದನೆಯ ಗಡ್ಡ ಬೆಳೆಸಿದ ದಾಖಲೆಯನ್ನು ಹೊಂದಿದ್ದರು. ಈ ದಾಖಲೆಯನ್ನು 2023ರ ಫೆಬ್ರವರಿ 8ರಂದು ಅಧಿಕೃತವಾಗಿ ಹನಿಕಟ್ ಮುರಿದರು. ವಿವಿಯನ್ ವ್ಹೀಲರ್ ಅವರು 10.04 ಇಂಚ್ ಗಡ್ಡ ಬೆಳೆಸಿದ್ದರು. ಬ್ಯಾಕ್ಟೀರಿಯಾ ಸೋಂಕಿನಿಂದ ಆಕೆಯ ಕಾಲು ಸ್ವಾಧೀನ ಕಳೆದುಕೊಳ್ಳುವುದು ಸೇರಿದಂತೆ ಅನಾರೋಗ್ಯದ ಸಂಘರ್ಷದ ಹೊರತಾಗಿಯೂ ಹನಿಕಟ್ ಈ ಸಾಧನೆ ಮಾಡಿದ್ದಾರೆ.

ಈ ಎಲ್ಲ ಸವಾಲುಗಳ ಹೊರತಾಗಿಯೂ ಹನಿಕಟ್ ತಮ್ಮ ಜೀವನದೆಡೆಗೆ ಸಕಾರಾತ್ಮಕ ಧೋರಣೆಯನ್ನು ಬೆಳೆಸಿಕೊಂಡರು. ಈ ಧೋರಣೆಯೇ ತಮ್ಮ ನೋವುಗಳನ್ನು ಮರೆಸಲು ಸಾಧ್ಯಾಯಿತು ಎಂದು ನಂಬಿಕೊಂಡಿದ್ದಾರೆ. ಆಕೆಯ ಆಶಾವಾದಿ ವರ್ತನೆ ಮತ್ತು ತನ್ನ ಪ್ರೀತಿಪಾತ್ರರ ಬೆಂಬಲಕ್ಕೆ ಅರ್ಹಳು. ಇಂದು, ಅವಳು ಹೆಮ್ಮೆಯಿಂದ ತನ್ನ ದಾಖಲೆ ಮುರಿಯುವ ಗಡ್ಡವನ್ನು ಧರಿಸುತ್ತಾಳೆ, ಅದನ್ನು ತನ್ನ ಶಕ್ತಿ ಮತ್ತು ಪರಿಶ್ರಮದ ಸಂಕೇತವೆಂದು ನೋಡುತ್ತಾಳೆ. ಒಟ್ಟಾರೆಯಾಗಿ ಹನಿಕಟ್‌ ಅವರಿಗೆ ಗಡ್ಡ ಎನ್ನುವುದು ಸಾಮಾಜಿಕ ಆತಂಕಕ್ಕೆ ಕಾರಣವಾಗದೇ ಸಾಧನೆಗೆ ಪ್ರೇರಣೆಯಾಗಿರುವುದು ಅನುಕರಣನೀಯ ನಡೆಯಾಗಿದೆ.

Viral News : ಕಳ್ಳನಿಂದ ತಪ್ಪಿಸಿಕೊಂಡು ಮರಳಿ ಮಾಲೀಕನ ಮನೆ ಸೇರಿದ `ಜಾಣ ಎತ್ತುಗಳು’

ಯಾದಗಿರಿ: ಆ ರೈತನಿಗೆ ತಾನು ಸಾಕಿದ ಎತ್ತುಗಳೆಂದರೆ ಅಚ್ಚು ಮೆಚ್ಚು. ಕೃಷಿಗೆ ಬೆನ್ನೆಲುಬಾಗಿದ್ದ ಎತ್ತುಗಳು ಕಾಣದೆ ಇದ್ದಾಗ ಆ ರೈತನಿಗೆ ಬರ ಸಿಡಿಲು ಬಡಿದಂಗೆ ಆಗಿತ್ತು. ಎತ್ತುಗಳು ಕಳುವು (Theft Case) ಆಗಿವೆ ಎಂಬ ಸುದ್ದಿ ತಿಳಿಯುತ್ತಿದ್ದಂತೆ ಕುಸಿದು ಬಿದ್ದಿದ್ದ. ಪ್ರೀತಿಗೆ ಪಾತ್ರವಾದ ಎತ್ತುಗಳ ಇರಲಾರದೆ ಬದುಕಿಲ್ಲವೆಂದು ಕಣ್ಣೀರು ಹಾಕುವ ದೃಶ್ಯ ಎಂತಹವರಿಗೂ ಕರುಳು ಚುರುಕ್‌ ಎನ್ನುವಂತಿತ್ತು. ಆದರೆ ಆ ಜಾಣ ಎತ್ತುಗಳು ಕಳ್ಳರಿಂದ ತಪ್ಪಿಸಿಕೊಂಡು ಮರಳಿ ಮಾಲೀಕನ ಮನೆ ಸೇರಿದ ಅಪರೂಪದ ಘಟನೆ ನಡೆದಿದೆ.

ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಸಗರ ಗ್ರಾಮದಲ್ಲಿ ಈ ಘಟನೆ ಜರುಗಿದೆ. ಗ್ರಾಮದ ರೈತ ತಿರುಪತಿ ಎಂಬಾತ 10 ಎಕರೆ ಭೂಮಿಯಲ್ಲಿ ಕೃಷಿ ಮಾಡಿಕೊಂಡು ನೆಮ್ಮದಿ ಜೀವನ ನಡೆಸುತ್ತಿದ್ದರು. ಜತೆಗೆ ಎರಡು ಎತ್ತುಗಳು ಆತನ ಬದುಕಿಗೆ ಆಶ್ರಯವಾಗಿತ್ತು. ತಡರಾತ್ರಿ ತಿರುಪತಿ ಅವರ ಎರಡು ಎತ್ತುಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿದರು.

ತಿರುಪತಿ ಇಂದು ನಸುಕಿನ ಜಾವ ಎತ್ತುಗಳಿಗೆ ಮೇವು, ನೀರು ಹಾಕಲು ತೆರಳಿದ್ದರು. ಆದರೆ ಎಲ್ಲಿ ಹುಡುಕಾಡಿದರೂ 1.5 ಲಕ್ಷ ರೂಪಾಯಿ ಬೆಲೆ ಬಾಳುವ ಎತ್ತುಗಳು ಕಾಣಲಿಲ್ಲ. ಎತ್ತುಗಳು ಕಳ್ಳತನವಾಗಿರುವುದು ತಿಳಿಯುತ್ತಿದ್ದಂತೆ ಕಣ್ಣೀರು ಹಾಕಿದ್ದರು. ಎತ್ತುಗಳಿಗೆ ರೋಧಿಸುತ್ತಾ, ಅಳುತ್ತಾ ಊಟ ನೀರು ಬಿಟ್ಟು ಕುಳಿತಿದ್ದರು.

ಈ ವೈರಲ್ ಸುದ್ದಿಯನ್ನೂ ಓದಿ: Viral News : ನೀರಲ್ಲಿ ಕೊಚ್ಚಿ ಹೋಗುತ್ತಿದ್ದ ಎಮ್ಮೆಗಳು; ಕಾಲುವೆಗೆ ಹಾರಿ ರಕ್ಷಣೆ

10 ಕಿ.ಮೀ ದೂರದಿಂದ ಓಡೋಡಿ ಬಂದ ಎತ್ತುಗಳು

ಕಳ್ಳರಿಂದ ತಪ್ಪಿಸಿಕೊಂಡ ಎತ್ತುಗಳು ಸುಮಾರು 10 ಕಿಮೀ ದೂರದಿಂದ ಓಡಿ ಬಂದಿವೆ. ಮಾಲೀಕ ತಿರುಪತಿಯನ್ನು ಹುಡುಕುತ್ತಾ ಎತ್ತುಗಳು ಬಂದಿವೆ. ಗ್ರಾಮಕ್ಕೆ ಎತ್ತುಗಳು ಬಂದಿರುವ ವಿಷಯ ತಿಳಿಯುತ್ತಿದ್ದಂತೆ ತಿರುಪತಿ ಕುಟುಂಬಸ್ಥರು ಮನೆಗೆ ಕರೆದುಕೊಂಡು ಬಂದಿದ್ದಾರೆ.

ವಾಪಸ್‌ ಬಂದ ಎತ್ತುಗಳನ್ನು ಕಂಡೊಡನೆ ತಿರುಪತಿ ಅವುಗಳ ಮೈ ಸವರಿ, ತಬ್ಬಿಕೊಂಡು ಮುತ್ತಿಟ್ಟು ಪ್ರೀತಿ ತೋರಿದ್ದಾರೆ. ಗ್ರಾಮೀಣ ಭಾಗದಲ್ಲಿ ಎತ್ತುಗಳು ಕಳ್ಳತನ ಘಟನೆ ನಡೆಯುತ್ತಿದ್ದು ಪೊಲೀಸರು ಇಂತಹ ಘಟನೆ ನಡೆಯದಂತೆ ಅಗತ್ಯ ಕ್ರಮಕೈಗೊಳ್ಳಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version