Site icon Vistara News

Video Viral: ಸ್ಕೂಲ್ ಬಸ್‌ನಡಿ ಬಿದ್ದ ವಿದ್ಯಾರ್ಥಿ; ಪಾರಾಗಿದ್ದೇ ಪವಾಡ!

Video Viral Student falls under school bus He escaped with minor injuries

ಮಂಗಳೂರು: ತನ್ನದೇ ಶಾಲೆಯ ಸ್ಕೂಲ್ ಬಸ್‌ನಲ್ಲಿ (School Bus) ಮನೆಯ ಬಳಿ ಬಂದಿಳಿದ ವಿದ್ಯಾರ್ಥಿಯು ಅದೇ ಬಸ್‌ನಡಿ ಸಿಲುಕಿದ್ದು, ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾನೆ. ಬಸ್‌ ಇಳಿಯುತ್ತಿದ್ದಂತೆ ಬಸ್‌ ಮುಂಭಾಗಕ್ಕೆ ಬಂದ ವಿದ್ಯಾರ್ಥಿಯನ್ನು ಗಮನಿಸದೆ ಚಾಲಕ ಬಸ್‌ ಚಲಾಯಿಸಿದ್ದೇ ಈ ಘಟನೆಗೆ ಕಾರಣವಾಗಿದೆ. ಮಂಗಳೂರಿನ ಹೊರವಲಯದ ಕುಳಾಯಿ ಬಳಿ ಈ ಘಟನೆ ನಡೆದಿದೆ. ಈ ವಿಡಿಯೊ (Video Viral) ಈಗ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ವೈರಲ್‌ ಆಗಿದೆ.

ಸುರತ್ಕಲ್‌ನ‌ ಆಂಗ್ಲ‌ ಮಾಧ್ಯಮ ಶಾಲೆಯ ವಿದ್ಯಾರ್ಥಿ ಬಸ್‌ನಡಿ ಸಿಲುಕಿರುವುದು ಎಂದು ಗೊತ್ತಾಗಿದೆ. ಆತ ಅಪಾಯದಿಂದ‌ ಪಾರಾಗಿದ್ದಾನೆ. ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾನೆ.

ಏನಿದು ಘಟನೆ?

ಶಾಲೆಯ ಬಸ್ಸಿನಲ್ಲಿ ಬಂದು ಮನೆ ಸಮೀಪ ಇಳಿದ ವಿದ್ಯಾರ್ಥಿಯು ಬಸ್ ಚಲಾಯಿಸುವ‌ ಮೊದಲೇ ಬಸ್‌ನ ಮುಂಭಾಗದ ಮೂಲಕ ರಸ್ತೆ ದಾಟಲು ಮುಂದಾಗಿದ್ದಾನೆ. ಆದರೆ, ಇದು ಚಾಲಕನಿಗೆ ಗೊತ್ತಾಗಿಲ್ಲ. ಹೀಗಾಗಿ ಚಾಲಕ ಬಸ್‌ ಅನ್ನು ಮುಂದಕ್ಕೆ ಒಯ್ದಿದ್ದಾನೆ. ಆಗ ವಿದ್ಯಾರ್ಥಿಯು ಬಸ್‌ನಡಿ ಸಿಲುಕಿದ್ದಾನೆ. ಈ ವೇಳೆ ಎದುರು ಇದ್ದ ಇನ್ನೊಬ್ಬ ವಿದ್ಯಾರ್ಥಿ ಹಾಗೂ ಮಹಿಳೆಯೊಬ್ಬರು ಜೋರಾಗಿ ಕಿರುಚಿಕೊಂಡಿದ್ದಾರೆ.

ಇದನ್ನು ಗಮನಿಸಿದ ಬಸ್‌ ಚಾಲಕ ತಕ್ಷಣ ಬಸ್‌ ನಿಲ್ಲಿಸಿದ್ದಾನೆ. ಕೂಡಲೇ ಎಲ್ಲರೂ ಹೋಗಿ ಬಸ್‌ನಡಿ ನೋಡಿದ್ದಾರೆ. ಆದರೆ, ವಿದ್ಯಾರ್ಥಿಯು ಬಸ್‌ನ ಮಧ್ಯಕ್ಕೆ ಸಿಲುಕಿದ್ದರಿಂದ ಚಕ್ರ ಮೈಮೇಲೆ ಹರಿದಿರಲಿಲ್ಲ. ಹೀಗಾಗಿ ಸಣ್ಣ ಪುಟ್ಟ ಗಾಯಗಳೊಂದಿಗೆ ವಿದ್ಯಾರ್ಥಿ ಪಾರಾಗಿದ್ದಾನೆ. ಸ್ಕೂಲ್ ಬಸ್‌ನಲ್ಲಿ ನಿರ್ವಾಹಕ ಇಲ್ಲದಿರುವ ಕಾರಣ ಹೀಗಾಗಿದೆ. ಚಾಲಕನ ವಿರುದ್ಧ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಸ್‌ಗೆ ಡಿಕ್ಕಿ ಹೊಡೆದು ಹೊತ್ತಿ ಉರಿದ ಕಾರು, ಪ್ರಾಣ ಉಳಿಸಿದ ಡ್ರೈವರ್‌; ವಿಡಿಯೊ ಇದೆ!

ಬೆಂಗಳೂರು: ಕಾರೊಂದು ಬಿಎಂಟಿಸಿ ಬಸ್‌ಗೆ ಡಿಕ್ಕಿ ಹೊಡೆದು ಸುಟ್ಟು ಕರಕಲಾದ ಘಟನೆ (Car Hits bus and catches fire in Bangalore) ಬೆಂಗಳೂರಿನ ಚಂದ್ರಾ ಲೇಔಟ್‌ ಸಮೀಪದ ನಾಗರಬಾವಿ ರಿಂಗ್‌ ರಸ್ತೆಯಲ್ಲಿ (Nagarabavi Ring Road) ಮೂರು ತಿಂಗಳ ಹಿಂದೆ ನಡೆದಿತ್ತು. ಘಟನೆಯಲ್ಲಿ ಕಾರು ಬಸ್ಸಿಗೆ ಅಂಟಿಕೊಂಡಿದ್ದರಿಂದ ಬಸ್‌ಗೂ ಬೆಂಕಿ ಹತ್ತಿಕೊಂಡಿತ್ತು (video Viral). ಗೊತ್ತಾಗುತ್ತಿದ್ದಂತೆ ಬಸ್‌ನ ಚಾಲಕ ಪ್ರಯಾಣಿಕರನ್ನು ಇಳಿಸಿ ರಕ್ಷಿಸಿದ್ದಲ್ಲದೆ, ಸಮಯಪ್ರಜ್ಞೆ ಮೆರೆದು (Time sense of driver) ಬಸ್‌ನಿಂದ ಕಾರನ್ನು ಬೇರ್ಪಡಿಸಿದ್ದಾರೆ. ಈ ಮೂಲಕ ಬಸ್‌ ಸಂಪೂರ್ಣ ಸುಟ್ಟು ಹೋಗುವುದನ್ನು (Fire Accident) ತಪ್ಪಿಸಿದ್ದರು.

ಯಶವಂತಪುರದಿಂದ ನಾಯಂಡಹಳ್ಳಿ ಕಡೆ ತೆರಳುತ್ತಿದ್ದ ಬಸ್‌ ಚಂದ್ರಾ ಲೇಔಟ್ ಬಳಿ ನಿಂತಿತ್ತು. ಆಗ ಹಿಂಬದಿಯಿಂದ ವೇಗವಾಗಿ ಬಂದ ಕಾರೊಂದು ಬಸ್‌ಗೆ ಡಿಕ್ಕಿ ಹೊಡೆದಿತ್ತು. ಅತ್ಯಂತ ರಭಸದಿಂದ ಡಿಕ್ಕಿ ಹೊಡೆದ ಹಿನ್ನೆಲೆಯಲ್ಲಿ ಕ್ಷಣಾರ್ಧದಲ್ಲಿಯೇ ಬೆಂಕಿ ಹತ್ತಿಕೊಂಡಿತ್ತು. ಆಗ ಕಾರಿನ ಪ್ರಯಾಣಿಕರು ಕೂಡಲೇ ಇಳಿದು ಜೀವ ರಕ್ಷಿಸಿಕೊಂಡಿದ್ದರು.

ಇಷ್ಟರ ನಡುವೆ ಕಾರು ಬಸ್ಸಿಗೆ ಅಂಟಿಕೊಂಡು ಹೊತ್ತಿ ಉರಿಯತೊಡಗಿತ್ತು. ಬಸ್ಸನ್ನು ಸ್ವಲ್ಪ ಮಂದೆ ಕೊಂಡು ಹೋಗಲು ಪ್ರಯತ್ನಿಸಿದಾಗ ಅದು ಅಂಟಿಕೊಂಡಿದ್ದು ಗೊತ್ತಾಯಿತು. ಅದನ್ನು ಹೇಗಾದರೂ ಬೇರ್ಪಡಿಸಬೇಕು ಎಂದು ಯೋಚಿಸಿದ ಬಿಎಂಟಿಸಿ ಚಾಲಕ, ಕಾರು ಹೊತ್ತಿ ಉರಿಯುತ್ತಿದ್ದಂತೆಯೇ ಬಸ್ಸನ್ನು ಮುಂದಕ್ಕೆ ಚಲಾಯಿಸಿದರು. ಆಗ ಕಾರು ಕಳಚಿಕೊಳ್ಳಬಹುದು ಎನ್ನುವುದು ಅವರ ಯೋಚನೆಯಾಗಿತ್ತು. ಆದರೆ, ಅದು ಕಳಚಿಕೊಳ್ಳಲಿಲ್ಲ. ಬದಲಾಗಿ ಗಾಳಿಯ ವೇಗಕ್ಕೆ ಬೆಂಕಿ ಇನ್ನಷ್ಟು ಧಗಧಗಿಸಿತು.

ತಡೆಗೋಡೆಗೆ ಡಿಕ್ಕಿ ಹೊಡೆದು ಬಸ್ಸಿನಿಂದ ಕಾರನ್ನು ಬೇರ್ಪಡಿಸಲು ಪ್ರಯತ್ನ

ಈ ವೇಳೆ ಚಾಲಕ ಬಸ್ಸನ್ನು ಸ್ವಲ್ಪ ದೂರ ಹೋಗಿ ನಿಲ್ಲಿಸಿ ಇನ್ನೊಂದು ಪ್ಲ್ಯಾನ್‌ ಮಾಡಿದರು. ಇದೊಂದು ಡಬಲ್‌ ರೋಡ್‌ ಆಗಿದ್ದು, ಒಂದು ಭಾಗದಲ್ಲಿ ತಡೆಗೋಡೆ ಇದೆ. ಚಾಲಕ ಬಸ್ಸನ್ನು ಆ ತಡೆಗೋಡೆಗೆ ಡಿಕ್ಕಿ ಹೊಡೆಸಿ ಕಾರನ್ನು ಕದಲಿಸುವ ಪ್ರಯತ್ನವನ್ನು ಮಾಡಿದರು. ಆದರೆ, ಕಾರು ಬಿಡಿಸಿಕೊಳ್ಳಲೇ ಇಲ್ಲ.

ಇದನ್ನೂ ಓದಿ: Murder Case : ಕಲ್ಲಿನಿಂದ ಜಜ್ಜಿ ಅತ್ತೆಯನ್ನೇ ಕೊಂದ ಅಳಿಯ

ಈ ನಡುವೆ, ಕಾರು ಸುಟ್ಟು ಹೋಗುವ ವೇಗ ಜಾಸ್ತಿಯಾಯಿತು. ಪೆಟ್ರೋಲ್‌ ಟ್ಯಾಂಕ್‌ ಕೂಡಾ ಸಿಡಿಯಿತು. ಬಸ್ಸಿಗೂ ಬೆಂಕಿ ಹತ್ತಿಕೊಳ್ಳುವ ವೇಗ ಜಾಸ್ತಿಯಾಯಿತು. ಇಷ್ಟಾದರೂ ಚಾಲಕ ತನ್ನ ಪ್ರಯತ್ನವನ್ನು ಬಿಡಲಿಲ್ಲ, ವ್ಯವಧಾನವನ್ನು ಕಳೆದುಕೊಳ್ಳಲಿಲ್ಲ.

ಇದು ಡಬಲ್‌ ರೋಡ್‌ ಆಗಿದ್ದರಿಂದ ನಡುವೆ ಸಣ್ಣ ರಸ್ತೆ ವಿಭಜಕ ಇತ್ತು. ಚಾಲಕ ಬಸ್ಸನ್ನು ತಿರುಗಿಸಿ ಆ ತಡೆಗೋಡೆಯ ಮೇಲೆ ಕಾರನ್ನು ಹಾರಿಸಿದರು. ಆಗ ಅಂಟಿಕೊಂಡಿದ್ದ ಕಾರು ಕಳಚಿಕೊಂಡಿತು. ಈ ನಡುವೆ, ಕಾರು ಸಂಪೂರ್ಣ ಸುಟ್ಟು ಹೋದರೆ, ಬಸ್‌ಗೆ ಅಲ್ಲಿದ್ದವರೆಲ್ಲ ಸ್ವಲ್ಪ ಸ್ವಲ್ಪ ನೀರು ತಂದೇ ಸಿಂಪಡಿಸಿ ಬೆಂಕಿಯನ್ನು ಆರಿಸಿದರು.

ರಸ್ತೆ ವಿಭಜಕವನ್ನು ಹಾಯಿಸಿ ಕಾರು ಬೇರ್ಪಡಿಸಿದ ಬಗೆ..

ಒಟ್ಟಾರೆ ಘಟನೆಯ ಫುಲ್‌ ವಿಡಿಯೊ ಇಲ್ಲಿದೆ.

Exit mobile version