ಮುಂಬೈ: ಬಾರ್‌ನಲ್ಲಿ ತಡರಾತ್ರಿ ಪಾರ್ಟಿ(Mumbai Bar) ಮುಗಿಸಿ ಮೂವರು ಯುವತಿಯ ಮಾರಾಮಾರಿ ನಡೆದಿದ್ದು, ಕುಡಿದ ಅಮಲಿನಲ್ಲಿ ಪೊಲೀಸರ ಮೇಲೆಯೇ ಹಲ್ಲೆ ನಡೆಸಿದ್ದಾರೆ. ನಶೆಯಲ್ಲಿ ತೂರಾಡುತ್ತಿದ್ದ ಯುವತಿಯರ ವಿಡಿಯೋ ಸಾಮಾಜಿಕ ಜಾತಾಣದಲ್ಲಿ ಭಾರೀ ವೈರಲ್(Viral News) ಆಗಿದೆ. ಪಾರ್ಟಿಯ ಮೂಡಿನಲ್ಲಿದ್ದ ಯುವತಿಯರನ್ನು ಕೊನೆಗೆ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಮುಂಬೈನ ವಿರಾರ್ ಪ್ರದೇಶದ ಗೋಕುಲ್ ಟೌನ್‌ಶಿಪ್‌ನಲ್ಲಿ ಈ ಘಟನೆ ನಡೆದಿದೆ.
ಘಟನೆ ವಿವರ:
ಬಾರ್ ಅಂಡ್ ರೆಸ್ಟೊರೆಂಟ್‌ನ ಹೊರಗೆ ಮೂವರು ಯುವತಿಯರು ಪರಸ್ಪರ ಗಲಾಟೆ ಮಾಡುತ್ತಿದ್ದರು. ಇದರಿಂದ ಕಿರಿ ಕಿರಿ ಅನುಭವಿಸಿದ್ದ ಸ್ಥಳೀಯರು ಪೊಲೀಸರಿಗೆ ಕರೆ ಮಾಡಿ ತಕ್ಷಣ ಬರುವಂತೆ ಮನವಿ ಮಾಡಿದ್ದರು ಸ್ಥಳಕ್ಕೆ ಬಂದ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿ ಯುವತಿಯರನ್ನು ಸಮಾಧಾನಪಡಿಸಲು ಮುಂದಾಗುತ್ತಾರೆ. ಮತ್ತು ತಕ್ಷಣ ಅಲ್ಲಿಂದ ತೆರಳುವಂತೆ ಸೂಚಿಸುತ್ತಾರೆ. ಆಗ ಕೋಪಗೊಂಡ ಯುವತಿಯರು ಪೊಲೀಸರಿಗೇ ಆವಾಜ್ ಹಾಕಿದ್ದಾರೆ. ಸಾಲದೆಂಬುದಕ್ಕೆ ಪೊಲೀಸ್ ಪೇದೆಯೊಬ್ಬರ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ.
ಕಿಡಿದ ನಶೆಯಲ್ಲಿ ಪೊಲೀಸರನ್ನು ಅಚಾಚ್ಯ ಶಬ್ಧಗಳಿಂದ ನಿಂದಿಸಿದ ಯುವತಿಯರು, ಮಹಿಳಾ ಪೊಲೀಸ್ ಪೇದೆಯೊಬ್ಬರ ಕೈ ಕಚ್ಚಿದ್ದಲ್ಲದೆ, ಆಕೆಯ ಸಮವಸ್ತ್ರವನ್ನೂ ಹರಿದಿದ್ದಾರೆ. ಮತ್ತೊಬ್ಬ ಕಾನ್ ಸ್ಟೇಬಲ್ ತಲೆಗೆ ಬಕೆಟ್ ನಿಂದ ಹೊಡೆದಿದ್ದಾನೆ. ಅವರ ಕೈಯನ್ನೂ ಕಚ್ಚಿದ್ದಾರೆ. ಪೊಲೀಸರು ಆರೋಪಿಗಳನ್ನು ಕಾವ್ಯ, ಅಶ್ವಿನಿ ಮತ್ತು ಪೂಣಂ ಎಂದು ಗುರುತಿಸಿದ್ದಾರೆ. ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ನ್ಯಾಯಾಲಯದ ಆದೇಶದ ಮೇರೆಗೆ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಕೆಲವು ತಿಂಗಳ ಹಿಂದೆ ಕಲಬುರಗಿಯಲ್ಲೂ ಇಂತಹದ್ದೇ ಒಂದಿ ಘಟನೆ ನಡೆದಿತ್ತು. ಪರೀಕ್ಷೆ ವೇಳೆ ಕಾಪಿ ಮಾಡಲು ಅವಕಾಶ ನೀಡಲಿಲ್ಲ ಎಂದು ಇಬ್ಬರು ವ್ಯಕ್ತಿಗಳು ಪೊಲೀಸ್ ಮುಖ್ಯ ಪೇದೆ ಮೇಲೆ ಹಲ್ಲೆ ನಡೆಸಿದ್ದರು. ಲಾಠಿ ಕಸಿದು, ಕಲ್ಲಿನಿಂದ ಹೊಡೆದ ದೃಶ್ಯಗಳು ವಿಡಿಯೋದಲ್ಲಿ ಸೆರೆಯಾಗಿತ್ತು. ಜಿಲ್ಲೆಯ ಅಫಜಲಪುರ ತಾಲೂಕಿನ ಕರಜಗಿ ಪಿಯುಸಿ ಪರೀಕ್ಷಾ ಕೇಂದ್ರದಲ್ಲಿ ಮಾರ್ಚ್ 20ರಂದು ಹಲ್ಲೆ ಮಾಡಿದ ಆರೋಪಿಗಳ ಪೈಕಿ ಒಬ್ಬರ ಸಹೋದರಿಯ ಪರೀಕ್ಷೆ ಬರೆಯುತ್ತಿದ್ದರು. ಈ ವೇಳೆ ಈ ಆಕೆಯ ಅಣ್ಣ ತಾನು ತಂಗಿಗೆ ಸಹಾಯ ಮಾಡಲು ಮುಂದಾಗಿದ್ದ. ಈ ವೇಳೆ ಆತನನ್ನು ಪೊಲೀಸ್ ಹೆಡ್ ಕಾನ್ಸ್‌ಟೇಬಲ್ ತಡೆದಿದ್ದಾರೆ. ಇದಕ್ಕೆ ಆಕ್ರೋಶಗೊಂಡ ಸಹೋದರ ಪೋಲಸ್ ಅಂತಲೂ ನೋಡದೇ ಮನಬಂದಂತೆ ಹಲ್ಲೆ ಮಾಡಿದ್ದಾರೆ. ಅಫಜಲಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ತಂಗಿ ಪರವಾಗಿ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡಿ ಎಂದು ಯುವಕ ತಕರಾರು ಎತ್ತಿದ್ದ. ಅದಕ್ಕೆ ಒಪ್ಪದೇ ಇದ್ದಾಗ ಆರೋಪಿ ಹಲ್ಲೆ ಮಾಡಿದ್ದಾನೆ.