Site icon Vistara News

Viral News: ರಸ್ತೆಯಿಂದ ಹಿಡಿದು ಮೊಬೈಲ್‌ ಟವರ್‌ವರೆಗೆ; ಭಾರತದಲ್ಲಿ ಕಳ್ಳತನವಾದ ವಿಚಿತ್ರ ವಸ್ತುಗಳಿವು

#image_title

ಬೆಂಗಳೂರು: ಯಾವ ದೇಶವೇ ಆಗಿರಲಿ, ಕಳ್ಳತನ ಆಗಿಯೇ ಆಗುತ್ತದೆ. ಅದರಲ್ಲೂ ಭಾರತದಲ್ಲಂತೂ ಕಳ್ಳತನ ಸಾಮಾನ್ಯವೆನಿಸುವಂತಾಗಿಬಿಟ್ಟಿದೆ. ಚಿನ್ನ, ಹಣ, ಬೆಲೆ ಬಾಳುವ ವಸ್ತುಗಳು ಕಳ್ಳತನವಾಗುವುದನ್ನು ನೀವು ಕೇಳಿರುತ್ತೀರಿ. ಆದರೆ ಮೊಬೈಲ್‌ ಟವರ್‌, ರೈಲ್ವೆ ಹಳಿ, ರಸ್ತೆ ಕಳ್ಳತನವಾಗಿರುವ ವಿಚಾರ ನಿಮಗೆ ಗೊತ್ತೇ? ಇಲ್ಲಿದೆ ನೋಡಿ ಅಂತಹ ವಿಚಿತ್ರ ಕಳ್ಳತನಗಳ (Viral News) ವಿವರ.

ರೈಲ್ವೇ ಹಳಿಯೇ ಮಂಗಮಾಯ
ಈ ರೀತಿಯ ಕಳ್ಳತನ ಬಿಹಾರದ ಸಮಸ್ಟಿಪುರದಲ್ಲಿ ನಡೆದಿತ್ತು. ಲೋಹತ್‌ ಸಕ್ಕರೆ ಕಾರ್ಖಾನೆಯಿಂದ ಪಂದೌಲ್‌ಗೆ ಸಂಪರ್ಕಿಸುವ ಎರಡು ಕಿ.ಮೀ.ನಷ್ಟು ಉದ್ದದ ರೈಲ್ವೆ ಹಳಿಯನ್ನೇ ಕಳ್ಳರು ಕದ್ದಿದ್ದರು. ಸಕ್ಕರೆ ಕಾರ್ಖಾನೆಯು ಹಲವು ವರ್ಷಗಳ ಕಾಲ ಮುಚ್ಚಿದ್ದರಿಂದಾಗಿ ಅಲ್ಲಿ ರೈಲ್ವೆ ಸಂಚಾರವೂ ಇರಲಿಲ್ಲ. ಜನರ ಸಂಚಾರ ಇಲ್ಲದ ಹಿನ್ನೆಲೆ ಕಳ್ಳರು ಸುಲಭವಾಗಿ ರೈಲ್ವೆ ಹಳಿಗಳನ್ನೇ ಕದ್ದಿದ್ದಾರೆ. ಇದರಲ್ಲಿ ರೈಲ್ವೆ ಅಧಿಕಾರಿಗಳೂ ಶಾಮೀಲಾಗಿದ್ದರ ಬಗ್ಗೆ ವರದಿಯಾಗಿದ್ದು, ಇಬ್ಬರು ಅಧಿಕಾರಿಗಳನ್ನು ಕೆಲಸದಿಂದ ವಜಾ ಮಾಡಲಾಗಿತ್ತು.

ಇದನ್ನೂ ಓದಿ: Viral Video: ಕೋರ್ಟ್​ನ ಮೊದಲನೇ ಮಹಡಿಗೆ ಬಂದು ಕಿಟಕಿಯಿಂದ ನೋಡಿದ ಚಿರತೆ; ಹೊಡೆಯಲು ಹೋದ ವಕೀಲನಿಗೆ ಗಾಯ
ಮೊಬೈಲ್‌ ಟವರ್‌ ಕಾಣೆ
ಬಿಹಾರದ ಪಟಣಾದ ಸಬ್ಜಿ ಬಾಗ್‌ನಲ್ಲಿ ಕಳ್ಳರು 29 ಅಡಿಯಷ್ಟು ಎತ್ತರದ ಮೊಬೈಲ್‌ ಟವರ್‌ ಅನ್ನೇ ಕದ್ದಿದ್ದರು. ಏರ್ಸೆಲ್‌ ಸಂಸ್ಥೆಯು ಆ ಟವರ್‌ ಅನ್ನು 2006ರಲ್ಲಿ ಸ್ಥಾಪಿಸಿತ್ತು. ನಂತರ ಅದನ್ನು ಜಿಟಿಎಲ್‌ ಹೆಸರಿನ ಕಂಪನಿಗೆ ಮಾರಾಟ ಮಾಡಲಾಗಿತ್ತು. ಟೆಲಿಕಾಂ ಕಂಪನಿಯ ಉದ್ಯೋಗಿಗಳ ಸೋಗಿನಲ್ಲಿ ಬಂದಿದ್ದ ಕಳ್ಳರು ಟವರ್‌ ಅನ್ನು ಕಿತ್ತುಕೊಂಡು ಹೋಗಿದ್ದಾರೆ. ಇತ್ತೀಚೆಗೆ ಮೊಬೈಲ್‌ ಟವರ್‌ಗಳ ತಪಾಸಣೆ ನಡೆಸಿದಾಗ ಈ ಕಳ್ಳತನದ ವಿಚಾರ ಹೊರಬಿದ್ದಿದೆ.

ಕಬ್ಬಿಣದ ಸೇತುವೆಯೂ ಕಳ್ಳತನ
ಬಿಹಾರದ ರೋಹ್ತಾಸ್‌ ಜಿಲ್ಲೆಯಲ್ಲಿ ಸುಮಾರು 60 ಅಡಿಯ ಕಬ್ಬಿಣದ ಸೇತುವೆಯನ್ನೇ ಕಳ್ಳರು ಕದ್ದಿದ್ದರು. ಸೇತುವೆ ಹಲವು ವರ್ಷಗಳಿಂದ ನಿಷ್ಕ್ರಿಯವಾಗಿತ್ತು. ಕಳ್ಳರು ರಾಜ್ಯದ ನೀರಾವರಿ ಇಲಾಖೆಯ ಅಧಿಕಾರಿಗಳು ಎಂದು ಹೇಳಿಕೊಂಡು ಗ್ಯಾಸ್‌ ಕಟರ್‌ಗಳನ್ನು ಬಳಸಿಕೊಂಡು ಸೇತುವೆಯನ್ನು ಕೆಡವಿದ್ದಾರೆ. ಮೂರೇ ದಿನಗಳಲ್ಲಿ ಸಂಪೂರ್ಣ ಸೇತುವೆಯನ್ನು ಅಲ್ಲಿಂದ ಬೇರೆಡೆಗೆ ಸಾಗಿಸಿದ್ದಾರೆ. ಇದು ತಿಳಿದಿರದ ಗ್ರಾಮಸ್ಥರು ಯಾರೋ ಅಧಿಕಾರಿಗಳು ಏನೋ ಕೆಲಸ ಮಾಡುತ್ತಿದ್ದಾರೆ ಎಂದು ಅಚ್ಚರಿಯಿಂದ ನೋಡಿದ್ದಾರೆ.

ರಸ್ತೆಯನ್ನೇ ದರೋಡೆ ಮಾಡಿಬಿಟ್ಟರು!
ಮಧ್ಯಪ್ರದೇಶದ ಸಿಧಿ ಜಿಲ್ಲೆಯ ಹಳ್ಳಿಯೊಂದರಲ್ಲಿ, ಒಂದು ಕಿಲೋಮೀಟರ್ ರಸ್ತೆಯೇ ರಾತ್ರೋರಾತ್ರಿ ಕಣ್ಮರೆಯಾಯಿತು. ಈ ವಿಚಿತ್ರ ಕಳ್ಳತನದ ಬಗ್ಗೆ ದೂರು ನೀಡಲು ಗ್ರಾಮದ ಉಪಾಧ್ಯಕ್ಷರು ಮತ್ತು ಗ್ರಾಮಸ್ಥರು ಬೆಳಿಗ್ಗೆಯೇ ಪೊಲೀಸ್‌ ಠಾಣೆಗೆ ಆಗಮಿಸಿ ದೂರು ನೀಡಿದ್ದರು. ಹಿಂದಿನ ದಿನದವರೆಗೂ ರಸ್ತೆ ಇತ್ತು ಆದರೆ ರಾತ್ರೋರಾತ್ರಿ ಕಣ್ಮರೆಯಾಯಿತು ಎನ್ನುವುದು ಅವರ ದೂರು.

ಇದನ್ನೂ ಓದಿ: Viral News : ಯುಪಿಎಸ್‌ಸಿ ಪರೀಕ್ಷೆ ಬರೆಯುವವರಿಗಾಗಿ ಸ್ಫೂರ್ತಿದಾಯಕ ಪೋಸ್ಟ್‌; ವೈರಲ್‌ ಆಯ್ತು ಫೋಟೋ

Exit mobile version