Viral News: ರಸ್ತೆಯಿಂದ ಹಿಡಿದು ಮೊಬೈಲ್‌ ಟವರ್‌ವರೆಗೆ; ಭಾರತದಲ್ಲಿ ಕಳ್ಳತನವಾದ ವಿಚಿತ್ರ ವಸ್ತುಗಳಿವು - Vistara News

ವೈರಲ್ ನ್ಯೂಸ್

Viral News: ರಸ್ತೆಯಿಂದ ಹಿಡಿದು ಮೊಬೈಲ್‌ ಟವರ್‌ವರೆಗೆ; ಭಾರತದಲ್ಲಿ ಕಳ್ಳತನವಾದ ವಿಚಿತ್ರ ವಸ್ತುಗಳಿವು

ದೇಶದಲ್ಲಿ ನಡೆದಿರುವ ನಾಲ್ಕು ವಿಚಿತ್ರ ಕಳ್ಳತನಗಳು (Viral News) ವಿವರ ಇಲ್ಲಿವೆ. ರಸ್ತೆಗಳಿಂದ ಹಿಡಿದು ಮೊಬೈಲ್‌ ಟವರ್‌ಗಳೂ ಕಳ್ಳತನವಾಗಿರುವುದಾಗಿ ವರದಿಯಾಗಿದೆ.

VISTARANEWS.COM


on

ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಯಾವ ದೇಶವೇ ಆಗಿರಲಿ, ಕಳ್ಳತನ ಆಗಿಯೇ ಆಗುತ್ತದೆ. ಅದರಲ್ಲೂ ಭಾರತದಲ್ಲಂತೂ ಕಳ್ಳತನ ಸಾಮಾನ್ಯವೆನಿಸುವಂತಾಗಿಬಿಟ್ಟಿದೆ. ಚಿನ್ನ, ಹಣ, ಬೆಲೆ ಬಾಳುವ ವಸ್ತುಗಳು ಕಳ್ಳತನವಾಗುವುದನ್ನು ನೀವು ಕೇಳಿರುತ್ತೀರಿ. ಆದರೆ ಮೊಬೈಲ್‌ ಟವರ್‌, ರೈಲ್ವೆ ಹಳಿ, ರಸ್ತೆ ಕಳ್ಳತನವಾಗಿರುವ ವಿಚಾರ ನಿಮಗೆ ಗೊತ್ತೇ? ಇಲ್ಲಿದೆ ನೋಡಿ ಅಂತಹ ವಿಚಿತ್ರ ಕಳ್ಳತನಗಳ (Viral News) ವಿವರ.

ರೈಲ್ವೇ ಹಳಿಯೇ ಮಂಗಮಾಯ
ಈ ರೀತಿಯ ಕಳ್ಳತನ ಬಿಹಾರದ ಸಮಸ್ಟಿಪುರದಲ್ಲಿ ನಡೆದಿತ್ತು. ಲೋಹತ್‌ ಸಕ್ಕರೆ ಕಾರ್ಖಾನೆಯಿಂದ ಪಂದೌಲ್‌ಗೆ ಸಂಪರ್ಕಿಸುವ ಎರಡು ಕಿ.ಮೀ.ನಷ್ಟು ಉದ್ದದ ರೈಲ್ವೆ ಹಳಿಯನ್ನೇ ಕಳ್ಳರು ಕದ್ದಿದ್ದರು. ಸಕ್ಕರೆ ಕಾರ್ಖಾನೆಯು ಹಲವು ವರ್ಷಗಳ ಕಾಲ ಮುಚ್ಚಿದ್ದರಿಂದಾಗಿ ಅಲ್ಲಿ ರೈಲ್ವೆ ಸಂಚಾರವೂ ಇರಲಿಲ್ಲ. ಜನರ ಸಂಚಾರ ಇಲ್ಲದ ಹಿನ್ನೆಲೆ ಕಳ್ಳರು ಸುಲಭವಾಗಿ ರೈಲ್ವೆ ಹಳಿಗಳನ್ನೇ ಕದ್ದಿದ್ದಾರೆ. ಇದರಲ್ಲಿ ರೈಲ್ವೆ ಅಧಿಕಾರಿಗಳೂ ಶಾಮೀಲಾಗಿದ್ದರ ಬಗ್ಗೆ ವರದಿಯಾಗಿದ್ದು, ಇಬ್ಬರು ಅಧಿಕಾರಿಗಳನ್ನು ಕೆಲಸದಿಂದ ವಜಾ ಮಾಡಲಾಗಿತ್ತು.

ಇದನ್ನೂ ಓದಿ: Viral Video: ಕೋರ್ಟ್​ನ ಮೊದಲನೇ ಮಹಡಿಗೆ ಬಂದು ಕಿಟಕಿಯಿಂದ ನೋಡಿದ ಚಿರತೆ; ಹೊಡೆಯಲು ಹೋದ ವಕೀಲನಿಗೆ ಗಾಯ
ಮೊಬೈಲ್‌ ಟವರ್‌ ಕಾಣೆ
ಬಿಹಾರದ ಪಟಣಾದ ಸಬ್ಜಿ ಬಾಗ್‌ನಲ್ಲಿ ಕಳ್ಳರು 29 ಅಡಿಯಷ್ಟು ಎತ್ತರದ ಮೊಬೈಲ್‌ ಟವರ್‌ ಅನ್ನೇ ಕದ್ದಿದ್ದರು. ಏರ್ಸೆಲ್‌ ಸಂಸ್ಥೆಯು ಆ ಟವರ್‌ ಅನ್ನು 2006ರಲ್ಲಿ ಸ್ಥಾಪಿಸಿತ್ತು. ನಂತರ ಅದನ್ನು ಜಿಟಿಎಲ್‌ ಹೆಸರಿನ ಕಂಪನಿಗೆ ಮಾರಾಟ ಮಾಡಲಾಗಿತ್ತು. ಟೆಲಿಕಾಂ ಕಂಪನಿಯ ಉದ್ಯೋಗಿಗಳ ಸೋಗಿನಲ್ಲಿ ಬಂದಿದ್ದ ಕಳ್ಳರು ಟವರ್‌ ಅನ್ನು ಕಿತ್ತುಕೊಂಡು ಹೋಗಿದ್ದಾರೆ. ಇತ್ತೀಚೆಗೆ ಮೊಬೈಲ್‌ ಟವರ್‌ಗಳ ತಪಾಸಣೆ ನಡೆಸಿದಾಗ ಈ ಕಳ್ಳತನದ ವಿಚಾರ ಹೊರಬಿದ್ದಿದೆ.

ಕಬ್ಬಿಣದ ಸೇತುವೆಯೂ ಕಳ್ಳತನ
ಬಿಹಾರದ ರೋಹ್ತಾಸ್‌ ಜಿಲ್ಲೆಯಲ್ಲಿ ಸುಮಾರು 60 ಅಡಿಯ ಕಬ್ಬಿಣದ ಸೇತುವೆಯನ್ನೇ ಕಳ್ಳರು ಕದ್ದಿದ್ದರು. ಸೇತುವೆ ಹಲವು ವರ್ಷಗಳಿಂದ ನಿಷ್ಕ್ರಿಯವಾಗಿತ್ತು. ಕಳ್ಳರು ರಾಜ್ಯದ ನೀರಾವರಿ ಇಲಾಖೆಯ ಅಧಿಕಾರಿಗಳು ಎಂದು ಹೇಳಿಕೊಂಡು ಗ್ಯಾಸ್‌ ಕಟರ್‌ಗಳನ್ನು ಬಳಸಿಕೊಂಡು ಸೇತುವೆಯನ್ನು ಕೆಡವಿದ್ದಾರೆ. ಮೂರೇ ದಿನಗಳಲ್ಲಿ ಸಂಪೂರ್ಣ ಸೇತುವೆಯನ್ನು ಅಲ್ಲಿಂದ ಬೇರೆಡೆಗೆ ಸಾಗಿಸಿದ್ದಾರೆ. ಇದು ತಿಳಿದಿರದ ಗ್ರಾಮಸ್ಥರು ಯಾರೋ ಅಧಿಕಾರಿಗಳು ಏನೋ ಕೆಲಸ ಮಾಡುತ್ತಿದ್ದಾರೆ ಎಂದು ಅಚ್ಚರಿಯಿಂದ ನೋಡಿದ್ದಾರೆ.

ರಸ್ತೆಯನ್ನೇ ದರೋಡೆ ಮಾಡಿಬಿಟ್ಟರು!
ಮಧ್ಯಪ್ರದೇಶದ ಸಿಧಿ ಜಿಲ್ಲೆಯ ಹಳ್ಳಿಯೊಂದರಲ್ಲಿ, ಒಂದು ಕಿಲೋಮೀಟರ್ ರಸ್ತೆಯೇ ರಾತ್ರೋರಾತ್ರಿ ಕಣ್ಮರೆಯಾಯಿತು. ಈ ವಿಚಿತ್ರ ಕಳ್ಳತನದ ಬಗ್ಗೆ ದೂರು ನೀಡಲು ಗ್ರಾಮದ ಉಪಾಧ್ಯಕ್ಷರು ಮತ್ತು ಗ್ರಾಮಸ್ಥರು ಬೆಳಿಗ್ಗೆಯೇ ಪೊಲೀಸ್‌ ಠಾಣೆಗೆ ಆಗಮಿಸಿ ದೂರು ನೀಡಿದ್ದರು. ಹಿಂದಿನ ದಿನದವರೆಗೂ ರಸ್ತೆ ಇತ್ತು ಆದರೆ ರಾತ್ರೋರಾತ್ರಿ ಕಣ್ಮರೆಯಾಯಿತು ಎನ್ನುವುದು ಅವರ ದೂರು.

ಇದನ್ನೂ ಓದಿ: Viral News : ಯುಪಿಎಸ್‌ಸಿ ಪರೀಕ್ಷೆ ಬರೆಯುವವರಿಗಾಗಿ ಸ್ಫೂರ್ತಿದಾಯಕ ಪೋಸ್ಟ್‌; ವೈರಲ್‌ ಆಯ್ತು ಫೋಟೋ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೀಡೆ

IPL 2024: ಕೆಕೆಆರ್ ಸೋಲು ಕಂಡು ಕಣ್ಣೀರು ಸುರಿಸಿದ ನಟ ಶಾರೂಖ್ ಖಾನ್‌; ಫೋಟೊ ವೈರಲ್​

IPL 2024: ನಿಧಾನಗತಿಯ ಓವರ್ ರೇಟ್ ಕಾಯ್ದುಕೊಂಡಿದ್ದ ಕಾರಣ ಕೆಕೆಆರ್​(KKR) ತಂಡದ ನಾಯಕ ಶ್ರೇಯಸ್​ ಅಯ್ಯರ್(Shreyas Iyer)​ ಅವರಿಗೆ 12 ಲಕ್ಷ ರೂ. ದಂಡ ವಿಧಿಸಲಾಗಿದೆ. ಸೋಲಿನ ಹತಾಶೆಯಲ್ಲಿದ್ದ ಅವರಿಗೆ ದಂಡದ ಬಿಸಿ ಕೂಡ ಮುಟ್ಟಿದಂತಾಗಿದೆ.

VISTARANEWS.COM


on

IPL 2024
Koo

ಕೋಲ್ಕತ್ತಾ: ಅಗ್ರಸ್ಥಾನಕ್ಕೇರುವ ಇರಾದೆಯೊಂದಿಗೆ ರಾಜಸ್ಥಾನ್​ ರಾಯಲ್ಸ್(RR)​ ವಿರುದ್ಧ ಆಡಲಿಳಿದಿದ್ದ ಕೆಕೆಆರ್(KKR)​ ತಂಡ ಜಾಸ್​ ಬಟ್ಲರ್​ ಅವರ ಅಜೇಯ ಶತಕದ(IPL 2024) ಆಟದಿಂದ ಸೋಲು ಕಂಡಿತ್ತು. ತವರಿನಲ್ಲೇ ಸೋಲು ಕಂಡ ಬೇಸರದಲ್ಲಿ ತಂಡದ ಸಹ ಮಾಲೀಕ, ಬಾಲಿವುಡ್​ ನಟ ಶಾರೂಖ್ ಖಾನ್‌(Shah Rukh Khan) ಅವರು ಕಣ್ಣೀರು ಸುರಿಸಿದ್ದಾರೆ. ಈ ವಿಡಿಯೊ ವೈರಲ್​ ಆಗಿದೆ.

ಪ್ರೇಕ್ಷಕರ ಗ್ಯಾಲರಿಯಲ್ಲಿ ಕುಳಿತಿದ್ದ ಶಾರೂಖ್ ಖಾನ್‌ ತನ್ನ ತಂಡ ಸೋಲು ಕಂಡಾಗ ಭಾವುಕರಾದರು. ಆದರೂ ಕೂಡ ಪಂದ್ಯ ಮುಗಿದ ಬಳಿಕ ಮೈದಾನಕ್ಕೆ ಹತಾಶರಾಗಿ ಕುಳಿತಿದ್ದ ತನ್ನ ತಂಡದ ಆಟಗಾರರನ್ನು ಸಮಾಧಾನ ಪಡೆಸಿದರು. ಅಲ್ಲದೆ ಡ್ರೆಸ್ಸಿಂಗ್​ ರೂಮ್​ಗೂ ತೆರಳಿ ಆಟಗಾರರಿಗೆ ಮುಂದಿನ ಪಂದ್ಯದಲ್ಲಿ ಉತ್ತಮವಾಗಿ ಆಡುವಂತೆ ಧೈರ್ಯ ತುಂಬಿದರು. ಜತೆಗೆ ಗೆಲುವು ಸಾಧಿಸಿದ ಎದುರಾಳಿ ತಂಡದ ಆಟಗಾರರನ್ನು ಕೂಡ ತಬ್ಬಿಕೊಂಡು ಅಭಿನಂದಿಸಿದರು.

ಪಂದ್ಯದಲ್ಲಿ ಮೊದಲು ಬ್ಯಾಟಿಂಗ್​ ನಡೆಸಿದ ಕೆಕೆಆರ್​ ಸುನೀಲ್‌ ನಾರಾಯಣ್‌ ಅವರ ಸ್ಫೋಟಕ ಶತಕದಿಂದಾಗಿ ನಿಗದಿತ 20 ಓವರ್​ಗಳಲ್ಲಿ 6 ವಿಕೆಟಿಗೆ 223 ರನ್ನುಗಳ ಬೃಹತ್‌ ಮೊತ್ತ ಪೇರಿಸಿತು. ಬೃಹತ್​ ಮೊತ್ತವನ್ನು ಬೆನ್ನಟ್ಟಿಕೊಂಡು ಹೋದ ರಾಜಸ್ಥಾನ್​ ನಾಟಕೀಯ ಕುಸಿತ ಕಂಡರೂ ಜಾಸ್‌ ಬಟ್ಲರ್‌ ಅವರ ಏಕಾಂಗಿ ಶತಕದ ಆಟದಿಂದ ಗರೋಚಕ 2 ವಿಕೆಟ್​ ಗೆಲುವು ಸಾಧಿಸಿತು. ಗೆಲುವಿನ ರನ್​ ಕೂಡ ಬಟ್ಲರ್​ ಅವರೇ ಬಾರಿಸಿ ತಂಡಕ್ಕೆ ಸ್ಮರಣೀಯ ಜಯ ತಂದುಕೊಟ್ಟರು. 60 ಎಸೆತ ಎದುರಿಸಿದ್ದು 9 ಬೌಂಡರಿ ಮತ್ತು 6 ಸಿಕ್ಸರ್‌ ನೆರವಿನಿಂದ 107 ರನ್‌ ಗಳಿಸಿ ಅಜೇಯರಾಗಿ ಉಳಿದರು. ಬಟ್ಲರ್‌ ಅವರ ಈ ಶತಕ ವೈಭವದಿಂದಾಗಿ ಸುನೀಲ್‌ ನಾರಾಯಣ್‌ ಅವರ ಸಾಧನೆ ವ್ಯರ್ಥವಾಯಿತು.

ಇದನ್ನೂ ಓದಿ IPL 2024: ಆರ್​ಸಿಬಿ ತಂಡದ ಹೀನಾಯ ಪ್ರದರ್ಶನಕ್ಕೆ ಕಾರಣ ತಿಳಿಸಿದ ಮಾಜಿ ಆಟಗಾರ

ಅಯ್ಯರ್​ಗೆ 12 ಲಕ್ಷ ದಂಡ


ಇದೇ ಪಂದ್ಯದಲ್ಲಿ ನಿಧಾನಗತಿಯ ಓವರ್ ರೇಟ್ ಕಾಯ್ದುಕೊಂಡಿದ್ದ ಕಾರಣ ಕೆಕೆಆರ್​(KKR) ತಂಡದ ನಾಯಕ ಶ್ರೇಯಸ್​ ಅಯ್ಯರ್(Shreyas Iyer)​ ಅವರಿಗೆ 12 ಲಕ್ಷ ರೂ. ದಂಡ ವಿಧಿಸಲಾಗಿದೆ. ಸೋಲಿನ ಹತಾಶೆಯಲ್ಲಿದ್ದ ಅವರಿಗೆ ದಂಡದ ಬಿಸಿ ಕೂಡ ಮುಟ್ಟಿದಂತಾಗಿದೆ.

‘ಇದು ಐಪಿಎಲ್‌ನ ನೀತಿ ಸಂಹಿತೆಯಡಿಯಲ್ಲಿ ಕನಿಷ್ಠ ಓವರ್‌ ರೇಟ್ ಅಪರಾಧಗಳಿಗೆ ಸಂಬಂಧಿಸಿದಂತೆ ಈ ಆವೃತ್ತಿಯಲ್ಲಿ ಕೆಕೆಆರ್ ತಂಡದ ಮೊದಲ ಅಪರಾಧವಾಗಿರುವುದರಿಂದ, ಶ್ರೇಯಸ್ ಐಯ್ಯರ್ ಅವರಿಗೆ 12 ಲಕ್ಷ ರೂ. ದಂಡ ವಿಧಿಸಲಾಗಿದೆ’ ಎಂದು ಐಪಿಎಲ್ ಪ್ರಕಟಣೆಯಲ್ಲಿ ತಿಳಿಸಿದೆ. ಐಪಿಎಲ್​ನ ಕೋಡ್​ ಆಫ್​ ಕಂಡಕ್ಟ್​ ಅಪರಾಧವನ್ನು ಅಯ್ಯರ್ ಒಪ್ಪಿಕೊಂಡಿದ್ದಾರೆ.

Continue Reading

ದೇಶ

Ananya Reddy: UPSCಯಲ್ಲಿ 3ನೇ ರ‍್ಯಾಂಕ್‌ ಪಡೆಯಲು ಅನನ್ಯಾ ರೆಡ್ಡಿಗೆ ಕೊಹ್ಲಿಯೇ ಸ್ಫೂರ್ತಿಯಂತೆ!

Ananya Reddy: ಮೆಹಬೂಬ್‌ನಗರ ಜಿಲ್ಲೆಯವರಾದ ಅನನ್ಯಾ ರೆಡ್ಡಿ ಅವರು ದೆಹಲಿ ವಿಶ್ವವಿದ್ಯಾಲಯದ ಮಿರಿಂಡ ಹೌಸ್‌ ಕಾಲೇಜಿನಲ್ಲಿ ಪದವಿ ಪಡೆದಿದ್ದಾರೆ. ಕ್ರಿಕೆಟ್‌ನಲ್ಲಿ ಆಸಕ್ತಿ ಹೊಂದಿರುವ ಇವರು ಮಕ್ಕಳಿಗೆ ಕಲಿಸುವುದರಲ್ಲಿ ಖುಷಿ ಕಂಡವರು. ಕೋಚಿಂಗ್‌ ಸೆಂಟರ್‌ಗಳಿಗೆ ಹೋಗದೆ, ತರಬೇತಿ ಪಡೆಯದೆ, ಸತತ ಅಧ್ಯಯನದ ಮೂಲಕ ಯುಪಿಎಸ್‌ಸಿಯಲ್ಲಿ ದೇಶಕ್ಕೇ ಮೂರನೇ ರ‍್ಯಾಂಕ್‌ ಪಡೆದಿರುವ ಇವರಿಗೆ ವಿರಾಟ್‌ ಕೊಹ್ಲಿಯೇ ಸ್ಫೂರ್ತಿಯಂತೆ!

VISTARANEWS.COM


on

Donuru Ananya Reddy
Koo

ತೆಲಂಗಾಣ: ಯುಪಿಎಸ್‌ಸಿ ನಾಗರಿಕ ಸೇವೆಗಳ ಪರೀಕ್ಷೆಯ ಫಲಿತಾಂಶ (UPSC Results 2023) ಪ್ರಕಟವಾಗಿದ್ದು, ಉತ್ತರ ಪ್ರದೇಶದ ಆದಿತ್ಯ ಶ್ರೀವಾಸ್ತವ್‌ (Aditya Srivastava) ಅವರು ಮೊದಲ ರ‍್ಯಾಂಕ್‌ ಗಳಿಸಿದ್ದಾರೆ. ಇನ್ನು, ತೆಲಂಗಾಣದ ಡೋನೂರು ಅನನ್ಯಾ ರೆಡ್ಡಿ (Donuru Ananya Reddy) ಅವರು ದೇಶಕ್ಕೇ ಮೂರನೇ ರ‍್ಯಾಂಕ್‌ ಪಡೆದಿದ್ದಾರೆ. ತೆಲಂಗಾಣದ ಮೆಹಬೂಬ್‌ನಗರ ಜಿಲ್ಲೆಯವರಾದ ಡೋನೂರು ಅನನ್ಯಾ ರೆಡ್ಡಿ ಅವರು ಕೋಚಿಂಗ್‌ ತರಬೇತಿ ಇಲ್ಲದೆಯೇ ಅಧ್ಯಯನ ಮಾಡಿ ಇಂತಹ ಸಾಧನೆಗೈದಿದ್ದಾರೆ. ಅಷ್ಟೇ ಅಲ್ಲ, ಕೊಹ್ಲಿಯು ಮೈದಾನದಲ್ಲಿ ರನ್‌ ಗಳಿಸಿದ ರೀತಿ ಪರೀಕ್ಷೆಯಲ್ಲಿ ರನ್‌ ಗಳಿಸಿದ ಅನನ್ಯಾ ರೆಡ್ಡಿ ಅವರಿಗೆ ರನ್‌ ಮಷೀನ್‌ ವಿರಾಟ್‌ ಕೊಹ್ಲಿಯೇ (Virat Kohli) ಸಾಧನೆಗೆ ಸ್ಫೂರ್ತಿ ಎಂದಿದ್ದಾರೆ.

“ವಿರಾಟ್‌ ಕೊಹ್ಲಿ ನನ್ನ ಫೇವರಿಟ್‌ ಕ್ರಿಕೆಟಿಗ. ಅವರ ಶಿಸ್ತು, ಎಂದಿಗೂ ಬಿಟ್ಟುಕೊಡಬಾರದು, ಹಿಂದಡಿ ಇಡಬಾರದು, ಮುನ್ನುಗ್ಗುತ್ತಿರಬೇಕು ಎಂಬ ಛಲ, ಅವರ ಆ್ಯಟಿಟ್ಯೂಡ್‌ ತುಂಬ ಇಷ್ಟ. ಅವರನ್ನೇ ಸ್ಫೂರ್ತಿಯಾಗಿ ತೆಗೆದುಕೊಂಡು, ಅವರಂತೆ ಪರಿಶ್ರಮ ವಹಿಸಿದ ಕಾರಣಕ್ಕಾಗಿ ನಾನು ಯುಪಿಎಸ್‌ಸಿಯಲ್ಲಿ ರ‍್ಯಾಂಕ್‌ ಪಡೆಯಲು ಸಾಧ್ಯವಾಯಿತು” ಎಂದು ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ. ಈ ವಿಡಿಯೊ ಈಗ ಭಾರಿ ವೈರಲ್‌ ಆಗಿದೆ.

ತರಬೇತಿ ಪಡೆಯದೆ ಓದಿ ರ‍್ಯಾಂಕ್‌

ಮೆಹಬೂಬ್‌ನಗರ ಜಿಲ್ಲೆಯವರಾದ ಅನನ್ಯಾ ರೆಡ್ಡಿ ಅವರು ದೆಹಲಿ ವಿಶ್ವವಿದ್ಯಾಲಯದ ಮಿರಿಂಡ ಹೌಸ್‌ ಕಾಲೇಜಿನಲ್ಲಿ ಪದವಿ ಪಡೆದಿದ್ದಾರೆ. ಕ್ರಿಕೆಟ್‌ನಲ್ಲಿ ಆಸಕ್ತಿ ಹೊಂದಿರುವ ಇವರು ಮಕ್ಕಳಿಗೆ ಕಲಿಸುವುದರಲ್ಲಿ ಖುಷಿ ಕಂಡವರು. ಪದವಿ ನಂತರ ಕಷ್ಟಪಟ್ಟು ಓದಿದ ಇವರು ಯಾವುದೇ ತರಬೇತಿ ಇಲ್ಲದೆಯೇ ಯುಪಿಎಸ್‌ಸಿಯಲ್ಲಿ ಮೂರನೇ ರ‍್ಯಾಂಕ್‌ ಪಡೆದಿದ್ದಾರೆ. ಮಾನವಶಾಸ್ತ್ರ ವಿಷಯದ ಕುರಿತು ಮಾತ್ರ ಇವರು ತರಬೇತಿ ಪಡೆದಿದ್ದು ಬಿಟ್ಟರೆ, ಉಳಿದ ತಯಾರಿಯನ್ನು ಅವರೇ ಮಾಡಿಕೊಂಡು, ಸತತ ಪರಿಶ್ರಮದ ಮೂಲಕ ಸಾಧನೆಯ ಮೆಟ್ಟಿಲು ಹತ್ತಿದ್ದಾರೆ.

ದೇಶಕ್ಕೇ ತೃತೀಯ ರ‍್ಯಾಂಕ್‌ ಪಡೆದ ಕುರಿತು ಅನನ್ಯಾ ರೆಡ್ಡಿ ಮಾಹಿತಿ ನೀಡಿದ್ದಾರೆ. “ನಾನು ಯಾವುದೇ ಕೋಚಿಂಗ್‌ ಸಂಸ್ಥೆಗಳಲ್ಲಿ ತರಬೇತಿ ಪಡೆದಿಲ್ಲ. ನಿತ್ಯ 12-14 ತಾಸು ಕಡ್ಡಾಯವಾಗಿ ಅಧ್ಯಯನ ಮಾಡುತ್ತಿದ್ದೆ. ನಾನು ಚಿಕ್ಕವಳಿದ್ದಾಗಲೇ ಸಮಾಜಕ್ಕೆ ನನ್ನಿಂದಾದ ಸೇವೆ ಮಾಡಬೇಕು ಎಂದು ಬಯಸಿದ್ದೆ. ಶಾಲೆಯಲ್ಲಿದ್ದಾಗಲೇ ಈ ದಿಸೆಯಲ್ಲಿ ಅಧ್ಯಯನ ಮಾಡುತ್ತಿದ್ದೆ. ಮುಖ್ಯ ಪರೀಕ್ಷೆ, ಸಂದರ್ಶನವನ್ನು ಆತ್ಮವಿಶ್ವಾಸದಿಂದ ಎದುರಿಸಿದ್ದೆ. ಆದರೆ, ಮೂರನೇ ರ‍್ಯಾಂಕ್‌ ಪಡೆಯುತ್ತೇನೆ ಎಂದುಕೊಂಡಿರಲಿಲ್ಲ” ಎಂಬುದಾಗಿ ಅನನ್ಯಾ ರೆಡ್ಡಿ ತಿಳಿಸಿದ್ದಾರೆ.

ದೇಶಕ್ಕೇ ಮೊದಲ ರ‍್ಯಾಂಕ್‌ ಪಡೆದ ಆದಿತ್ಯ ಶ್ರೀವಾಸ್ತವ್‌ ಅವರು ಉತ್ತರ ಪ್ರದೇಶದ ಲಖನೌ ಮೂಲದವರು. ಇವರು ಪ್ರಾಥಮಿಕ ಹಾಗೂ ಮಾಧ್ಯಮಿಕ ಶಿಕ್ಷಣವನ್ನು ಲಖನೌನಲ್ಲಿಯೇ ಮುಗಿಸಿದ್ದಾರೆ. ಐಐಟಿ ಕಾನ್ಪುರದಲ್ಲಿ ಎಂ.ಟೆಕ್‌ ಸ್ನಾತಕೋತ್ತರ ಪದವಿ ಪಡೆದ ಇವರು 15 ತಿಂಗಳು ಬಹುರಾಷ್ಟ್ರೀಯ ಕಂಪನಿಯೊಂದರಲ್ಲಿ ಕೆಲಸ ಮಾಡಿದ್ದರು. ಆದರೆ, ಐಎಎಸ್‌ ಅಧಿಕಾರಿಯಾಗಬೇಕು ಎಂಬ ಕನಸು ಹೊತ್ತ ಇವರು ಎಲೆಕ್ಟ್ರಿಕಲ್‌ ಎಂಜಿನಿಯರ್ ಉದ್ಯೋಗ ಬಿಟ್ಟು ಐಎಎಸ್‌ಗೆ ಅಧ್ಯಯನ ಮಾಡಲು ಆರಂಭಿಸಿದರು. ಈಗ ಇವರು ಯಶಸ್ಸು ಸಾಧಿಸಿದ್ದಾರೆ.

ಇದನ್ನೂ ಓದಿ: UPSC Results 2023: ಎಂಎನ್‌ಸಿ ಕೆಲಸ ಬಿಟ್ಟ ಆದಿತ್ಯಗೆ ಯುಪಿಎಸ್‌ಸಿ ಫಸ್ಟ್‌ ರ‍್ಯಾಂಕ್;‌ ಯಾರಿವರು?

Continue Reading

ವೈರಲ್ ನ್ಯೂಸ್

Viral video: ಫುಟ್‌ರೆಸ್ಟ್‌ ಮೇಲೆ ಮಗು ನಿಲ್ಲಿಸಿಕೊಂಡು ಬೆಂಗಳೂರು ದಂಪತಿ ಬೈಕ್‌ ರೈಡ್‌! ಬೆಚ್ಚಿಬಿದ್ದ ನೆಟಿಜನ್ಸ್

Viral video: ಸ್ಕೂಟರ್ ಅಥವಾ ಬೈಕ್‌ನಲ್ಲಿ ಇಬ್ಬರು ಸವಾರರ ನಡುವೆ ಮಕ್ಕಳನ್ನು ಅಪ್ಪಚ್ಚಿಯಾಗುವಂತೆ ಕೂರಿಸುವುದು ಸಾಮಾನ್ಯ. ಆದರೆ ಈ ವಿಲಕ್ಷಣ ಸಾಹಸದ ವಿಡಿಯೋ ಮಾತ್ರ ಸೋಶಿಯಲ್‌ ಮೀಡಿಯಾ ಬಳಕೆದಾರರಲ್ಲಿ ಆತಂಕ ಮೂಡಿಸಿದೆ. ಈ ದಂಪತಿಯ ʼಮೂರ್ಖತನ’ದ ಬಗ್ಗೆ ಆಕ್ರೋಶ ವ್ಯಕ್ತಡಿಸಿದ್ದಾರೆ.

VISTARANEWS.COM


on

viral video child on footrest
Koo

ಬೆಂಗಳೂರು: ಸಿಲಿಕಾನ್‌ ಸಿಟಿಯ (Silicon City) ಟ್ರಾಫಿಕ್‌ ದಿನದಿಂದ ದಿನಕ್ಕೆ ಅಪಾಯಕಾರಿಯಾಗುತ್ತಿರುವ ನಡುವೆಯೇ, ಅಜಾಗರೂಕತೆ ಹಾಗೂ ನಿರ್ಲಕ್ಷ್ಯದಿಂದ ವಾಹನ ಚಲಾಯಿಸುವ (Careless driving) ಪ್ರಕರಣಗಳೂ ಹೆಚ್ಚುತ್ತಿವೆ. ಇದೀಗ, ಸ್ಕೂಟರ್‌ನ ಫುಟ್‌ರೆಸ್ಟ್‌ (Foot rest) ಮೇಲೆ ಪುಟ್ಟ ಮಗುವನ್ನು ನಿಲ್ಲಿಸಿಕೊಂಡು ಬೈಕ್‌ ಚಲಾಯಿಸುತ್ತಿರುವ (Bike riding) ದಂಪತಿಯ ವಿಡಿಯೋ ವೈರಲ್‌ (Viral video) ಆಗುತ್ತಿದ್ದು, ಇದನ್ನು ನೋಡಿ ಬೆಚ್ಚಿಬಿದ್ದ ನೆಟಿಜನ್ಸ್‌ (Netizens) “ಆರ್‌ ಯು ಸೀರಿಯಸ್?” ಎಂದು ಪ್ರಶ್ನಿಸಿದ್ದಾರೆ.

ಸ್ಕೂಟರ್ ಅಥವಾ ಬೈಕ್‌ನಲ್ಲಿ ಇಬ್ಬರು ಸವಾರರ ನಡುವೆ ಮಕ್ಕಳನ್ನು ಅಪ್ಪಚ್ಚಿಯಾಗುವಂತೆ ಕೂರಿಸುವುದು ಸಾಮಾನ್ಯ. ಆದರೆ ಈ ವಿಲಕ್ಷಣ ಸಾಹಸದ ವಿಡಿಯೋ ಮಾತ್ರ ಸೋಶಿಯಲ್‌ ಮೀಡಿಯಾ ಬಳಕೆದಾರರಲ್ಲಿ ಆತಂಕ ಮೂಡಿಸಿದೆ. ಈ ದಂಪತಿಯ ʼಮೂರ್ಖತನ’ದ ಬಗ್ಗೆ ಆಕ್ರೋಶ ವ್ಯಕ್ತಡಿಸಿದ್ದಾರೆ.

ಬಹುಶಃ ಹಿಂದಿನ ವಾಹನದಲ್ಲಿದ್ದ ಯಾರೋ ಇದನ್ನು ವಿಡಿಯೋ ಮಾಡಿಕೊಂಡಿದ್ದು ಸೋಶಿಯಲ್‌ ಮೀಡಿಯಾ ʼXʼನಲ್ಲಿ ಹಾಕಿದ್ದಾರೆ. ಒಬ್ಬ ವ್ಯಕ್ತಿ ಸ್ಕೂಟರ್‌ ಚಲಾಯಿಸುತ್ತಿದ್ದು ಆತನ ಹಿಂದೆ ಮಹಿಳೆ ಕುಳಿತಿದ್ದಾಳೆ. ಪಕ್ಕದಲ್ಲಿರುವ ಫುಟ್‌ರೆಸ್ಟ್‌ನಲ್ಲಿ ಮಗುವನ್ನು ನಿಲ್ಲಿಸಲಾಗಿದೆ. ರಾತ್ರಿ ಬೆಂಗಳೂರಿನ ಬೀದಿಯಲ್ಲಿ ಟ್ರಾಫಿಕ್ ಮೂಲಕ ಸ್ಕೂಟರ್ ಸವಾರಿ ಮಾಡುವುದು ವಿಡಿಯೋದಲ್ಲಿದೆ. ಜನನಿಬಿಡ ರಸ್ತೆಯಲ್ಲಿ ಸಂಚರಿಸುವಾಗ ಮಹಿಳೆ ಮಗುವನ್ನು ಒಂದು ಕೈಯಿಂದ ಹಿಡಿದುಕೊಂಡಿದ್ದಾಳೆ.

ಇದು ಬೆಂಗಳೂರಿನ ವೈಟ್‌ಫೀಲ್ಡ್‌ನಲ್ಲಿ ನಡೆದಿದೆ ಎಂದು ವರದಿಯಾಗಿದೆ. ಈ ವೀಡಿಯೊಗೆ ಟೀಕೆಗಳ ಸುರಿಮಳೆ ಬಂದಿದೆ. ಕ್ರಮ ಕೈಗೊಳ್ಳುವಂತೆ ಟ್ರಾಫಿಕ್‌ ಪೊಲೀಸರನ್ನು ಒತ್ತಾಯಿಸಲಾಗಿದೆ. “ಇದು ಸಂಪೂರ್ಣ ಹಾಸ್ಯಾಸ್ಪದ” ಎಂದು ಒಬ್ಬರು ಪ್ರತಿಕ್ರಿಯಿಸಿದ್ದರೆ, “ಮಗುವಿನ ತಾಯಿ ಮತ್ತು ತಂದೆಯ ಮೇಲೆ ಕೇಸು ಹಾಕಿ ಇಬ್ಬರನ್ನೂ ಒಂದು ತಿಂಗಳು ಜೈಲಿನಲ್ಲಿಡಬೇಕು” ಎಂದು ಮತ್ತೊಬ್ಬರು ಆಕ್ರೋಶಿಸಿದ್ದಾರೆ. “ಕೇವಲ ಒಂದು ರಸ್ತೆ ಗುಂಡಿ ಅಥವಾ ಒಂದು ಸಣ್ಣ ಇಂಬ್ಯಾಲೆನ್ಸ್‌ ಕೂಡ ಈ ಆರಾಮದ ಸವಾರಿಯನ್ನು ನಾಶ ಮಾಡಬಹುದು” ಎಂದಿದ್ದಾರೆ ಮತ್ತೊಬ್ಬರು.

ಈ ಘಟನೆಯು ಸುರಕ್ಷತೆಗಿಂತ ಮನರಂಜನೆಗೆ ಆದ್ಯತೆ ನೀಡುತ್ತಿರುವ ಜನರ ಪ್ರವೃತ್ತಿಗೆ ಉದಾಹರಣೆಯಾಗಿದೆ. ಇತ್ತೀಚಿನ ಮತ್ತೊಂದು ಘಟನೆಯಲ್ಲಿ, ವ್ಯಕ್ತಿಯೊಬ್ಬರು ಮೊಬೈಲ್ ಗೇಮ್ ಆಡುತ್ತಾ ಮೋಟಾರ್ ಸೈಕಲ್ ಓಡಿಸುತ್ತಿರುವ ವಿಡಿಯೋ ವೈರಲ್ ಆಗಿತ್ತು. ಮತ್ತೊಬ್ಬ ವ್ಯಕ್ತಿ ಬೈಕ್‌ ಚಲಾಯಿಸುತ್ತಾ ಲ್ಯಾಪ್‌ಟಾಪ್‌ನಲ್ಲಿ ಕಾನ್ಫರೆನ್ಸ್‌ ಕಾಲ್‌ ಅನ್ನು ಅಟೆಂಡ್‌ ಮಾಡುತ್ತಿದ್ದುದೂ ವೈರಲ್‌ ಆಗಿತ್ತು. ಈ ಘಟನೆಗಳು ಸುರಕ್ಷತೆಯ ಬಗ್ಗೆ ನಮ್ಮ ಆದ್ಯತೆ ಇಲ್ಲದಿರುವುದನ್ನು ಸೂಚಿಸಿದ್ದು, ಮನರಂಜನೆ ಮತ್ತು ಥ್ರಿಲ್‌ಗಾಗಿ ನಮ್ಮ ಮತ್ತು ಇತರರ ಸುರಕ್ಷತೆಯ ಬಗ್ಗೆ ಕಾಳಜಿ ವಹಿಸುತ್ತಿಲ್ಲ ಎಂಬುದನ್ನು ಕಾಣಿಸಿದೆ.

ಇದನ್ನೂ ಓದಿ: Viral Video: ಮೆರವಣಿಗೆಯಲ್ಲಿ ಸಾಗಿ 200 ಕೋಟಿ ರೂ. ಜನರ ಮೇಲೆ ಸುರಿದ ಜೈನ ದಂಪತಿ; ವಿಡಿಯೊ ವೈರಲ್​

Continue Reading

ವೈರಲ್ ನ್ಯೂಸ್

Lok Sabha Election 2024: ಮನೆಯಲ್ಲೇ ಮತ ಹಾಕಿದ ಬಳಿಕ ಬಂತು ಮೃತ್ಯು! ಎದೆನೋವು ಇದ್ದರೂ ವೋಟಿಂಗ್‌ಗೆ ಕಾದ ಮಹಿಳೆ!

Lok Sabha Election 2024: ಮತದಾನದ ದಿನ ಅವರಿಗೆ ಎದೆ ನೋವು ಕಾಣಿಸಿಕೊಂಡಿತ್ತು. ಆದರೆ ಮತದಾನ ಮಾಡಿಯೇ ಆಸ್ಪತ್ರೆಗೆ ತೆರಳಲು ಅವರು ನಿಶ್ಚಯಿಸಿದ್ದರು. ಮತದಾನ ಮಾಡಿದ ಬಳಿಕವೇ ಕೋಟೇಶ್ವರ ಖಾಸಗಿ ಆಸ್ಪತ್ರೆಗೆ ತೆರಳಿ ಅಲ್ಲಿ ದಾಖಲಾಗಿದ್ದರು.

VISTARANEWS.COM


on

lok sabha election 2024 senior citizen death after voting
Koo

ಉಡುಪಿ: ಲೋಕಸಭೆ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ಮನೆಯಲ್ಲಿ ಮತದಾನ (Voting) ಮಾಡಿದ ಕೆಲವೇ ಕ್ಷಣಗಳಲ್ಲಿ ವಯೋವೃದ್ಧೆಯೊಬ್ಬರು ಮೃತಪಟ್ಟಿದ್ದಾರೆ. ಸಾವಿನ ಮುನ್ನದ ಕ್ಷಣಗಳಲ್ಲೂ ಹಕ್ಕು ಚಲಾಯಿಸಿದ ನಿರ್ವಹಿಸಿದ ಹಿರಿಯ ನಾಗರಿಕರ (Senior Citizen) ಈ ಕರ್ತವ್ಯಪ್ರಜ್ಞೆಗೆ ಶ್ಲಾಘನೆ ವ್ಯಕ್ತವಾಗಿದೆ.

ಪಿ.ಯಶೋದಾ ನಾರಾಯಣ ಉಪಾಧ್ಯ (83) ಮೃತಪಟ್ಟ ಹಿರಿಯ ಜೀವ. ಇವರು ಬ್ರಹ್ಮಾವರ ತಾಲೂಕು ಸಾಸ್ತಾನ ಪಾಂಡೇಶ್ವರ ಚಡಗರ ಅಗ್ರಹಾರದ ನಿವಾಸಿಯಾಗಿದ್ದು, ನಿವೃತ್ತ ಗ್ರಾಮ ಲೆಕ್ಕಾಧಿಕಾರಿ ದಿ.ನಾರಾಯಣ ಉಪಾಧ್ಯ ಅವರ ಪತ್ನಿಯಾಗಿದ್ದಾರೆ. ಹಿರಿಯ ನಾಗರಿಕರಿಗಾಗಿ ರೂಪಿಸಲಾಗಿರುವ ʼಮನೆಯಿಂದ ಮತʼ ಕಾರ್ಯಕ್ರಮದಡಿ ಮನೆಯಿಂದಲೇ ಮತದಾನ ಮಾಡಿದ್ದರು.

ಮತದಾನದ ದಿನ ಅವರಿಗೆ ಎದೆ ನೋವು ಕಾಣಿಸಿಕೊಂಡಿತ್ತು. ಆದರೆ ಮತದಾನ ಮಾಡಿಯೇ ಆಸ್ಪತ್ರೆಗೆ ತೆರಳಲು ಅವರು ನಿಶ್ಚಯಿಸಿದ್ದರು. ಮತದಾನ ಮಾಡಿದ ಬಳಿಕವೇ ಕೋಟೇಶ್ವರ ಖಾಸಗಿ ಆಸ್ಪತ್ರೆಗೆ ತೆರಳಿ ಅಲ್ಲಿ ದಾಖಲಾಗಿದ್ದರು. ರಾತ್ರಿ 9 ಗಂಟೆ ಸುಮಾರಿಗೆ ಚಿಕಿತ್ಸೆಗೆ ಸ್ಪಂದಿಸದೆ ಯಶೋದಮ್ಮ ಮೃತಪಟ್ಟಿದ್ದಾರೆ. ಮೃತರು ಪುತ್ರ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

ಇನ್ನೊಂದೇ ದಿನ ಅವಕಾಶ

ಲೋಕಸಭೆ ಚುನಾವಣೆಯ (Lok Sabha Election 2024) ʼಅಂಚೆ ಮತದಾನʼ (Postal ballet) ಕಾರ್ಯಕ್ರಮ ಏಪ್ರಿಲ್‌ 13ರಿಂದ ಆರಂಭವಾಗಿದ್ದು, ಏಪ್ರಿಲ್ 18ರವರೆಗೆ ನಡೆಯುತ್ತಿದೆ. 85 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು (Senior citizen) ಹಾಗೂ ಹಾಗೂ ವಿಶೇಷ ಚೇತನರಿಗೆ (Specially abled) ಮನೆಯಿಂದಲೇ ಅಂಚೆ ಮತದಾನ ಮಾಡುವ ಸೌಲಭ್ಯವನ್ನು ಇದರಲ್ಲಿ ನೀಡಲಾಗಿದೆ.

ನೋಂದಣಿ ಮಾಡಿಕೊಂಡ ಮತದಾರರ ಮನೆಗೆ ಮತಗಟ್ಟೆ ಅಧಿಕಾರಿಗಳ ತಂಡ ಭೇಟಿ ನೀಡುತ್ತದೆ. ಮತದಾರರ ಮನೆಗೆ ಇಬ್ಬರು ಮತಗಟ್ಟೆ ಅಧಿಕಾರಿಗಳು, ಭದ್ರತಾ ಸಿಬ್ಬಂದಿ, ವೀಡಿಯೋಗ್ರಾಫರ್ ತಂಡ ಭೇಟಿ ನೀಡಲಿದ್ದು, ಜೊತೆಗೆ ಪೊಲೀಸ್ ಸಿಬ್ಬಂದಿ ಹಾಗೂ ಒಬ್ಬ ಅಬ್ಸರ್ವರ್ ಕಡ್ಡಾಯವಿದೆ. ತಂಡವು ಮನೆಗೆ ತೆರಳಿ ಮತದಾನ ಗುರುತಿನ ಚೀಟಿ ಪರಿಶೀಲನೆ ಮಾಡಲಿದ್ದು, ಗೌಪ್ಯ ಮತದಾನಕ್ಕಾಗಿ ಅಂಚೆ ಮತಪತ್ರದಲ್ಲಿ ಮತ ಚಲಾಯಿಸಲು ಅವಕಾಶ ನೀಡುತ್ತದೆ.

ಈ ಎಲ್ಲಾ ಪ್ರಕ್ರಿಯೆ ವೀಡಿಯೋಗ್ರಫಿ ಮೂಲಕ ಕಡ್ಡಾಯ ಸೆರೆ ಹಿಡಿಯಲಾಗುತ್ತದೆ. ಪ್ರತಿ ಮತದಾರರ ಮನೆಗೆ ಎರಡು ಬಾರಿ ಟೀಮ್‌ ಭೇಟಿ ನೀಡಲಿದ್ದು, ಎರಡು ಬಾರಿಯೂ ಮತದಾನ ಪ್ರಕ್ರಿಯೆ ನಡೆಯದೇ ಇದ್ದರೆ ಮತ್ತೆ ಮತದಾನ ನಡೆಸಲು ಅವಕಾಶವಿರುವುದಿಲ್ಲ. ಮನೆಯಿಂದ ಮತದಾನಕ್ಕೆ 12ಡಿ ನಮೂನೆಯಲ್ಲಿ ನೋಂದಣಿ ಮಾಡಿಸಿಕೊಂಡಿರುವವರಿಗೆ ಮತಗಟ್ಟೆಗೆ ಬಂದು ವಿದ್ಯುನ್ಮಾನ ಮತಯಂತ್ರದಲ್ಲಿ ಮತ ಚಲಾಯಿಸುವ ಅವಕಾಶವಿರುವುದಿಲ್ಲ.

ಮತದಾರರ ಪಟ್ಟಿಯಲ್ಲಿ ಹೆಸರು ಇರಬೇಕು

ಮತದಾರರ ಪಟ್ಟಿಯಲ್ಲಿ ಮತದಾರರ ಹೆಸರು ಇಲ್ಲದಿದ್ದರೆ ಮತದಾನ ಮಾಡಲು ಅವಕಾಶವಿಲ್ಲ. ಆದರೆ, ವೋಟರ್ ಐಟಿ ಕಾರ್ಡ್‌ ಅಥವಾ ಮತದಾರರ ಫೋಟೋ ಸಹಿತ ಗುರುತಿನ ಚೀಟಿ ಕಾಣೆಯಾಗಿದ್ದರೆ ಮತದಾನ ಮಾಡಲು ಅವಕಾಶ ಇದೆ. ಆದರೆ ಅವರ ಹೆಸರು ಮತದಾರರ ಪಟ್ಟಿಯಲ್ಲಿ ಇರಲೇ ಬೇಕು. ಮತದಾರರು ಚುನಾವಣಾ ಆಯೋಗ ಪಟ್ಟಿ ಮಾಡಿರುವ 14 ವಿಧದ ಫೋಟೋ ಸಹಿತ ಗುರುತಿನ ಚೀಟಿಗಳ ಪೈಕಿ ಯಾವುದನ್ನಾದರೂ ತೋರಿಸಿ ಮತ ಚಲಾಯಿಸಬಹುದು. ಇದಕ್ಕಾಗಿ ಪ್ರತ್ಯೇಕವಾಗಿ ಫೋಟೋ ತೋರಿಸುವ ಅಗತ್ಯ ಇಲ್ಲ. ಆದರೆ, ಇವೆಲ್ಲವೂ ಮತದಾರರ ಪಟ್ಟಿಯಲ್ಲಿ ಮತದಾರರ ಹೆಸರು ಇದ್ದಾಗ ಮಾತ್ರ ಸಾಧ್ಯ.

ಇದನ್ನೂ ಓದಿ: Lok Sabha Election 2024: ವಿವಿಧ ಇಲಾಖೆಗಳ ಉದ್ಯೋಗಿಗಳಿಗೆ ಅಂಚೆ ಮತದಾನ ಸೌಲಭ್ಯ; ಯಾರಿಗೆಲ್ಲ ಇದೆ ಅವಕಾಶ?

Continue Reading
Advertisement
EVM
ಪ್ರಮುಖ ಸುದ್ದಿ17 mins ago

ವಿಸ್ತಾರ ಸಂಪಾದಕೀಯ: ಮತ್ತೆ ಮತಪತ್ರಗಳ ‘ಶಿಲಾಯುಗ’ಕ್ಕೆ ಹೋಗಲಾಗದು! ಆಧಾರರಹಿತವಾಗಿ ಮತಯಂತ್ರ ದೂಷಣೆ ಸರಿಯಲ್ಲ

Baking Powder
ಆಹಾರ/ಅಡುಗೆ18 mins ago

Baking Powder: ಬೇಕಿಂಗ್‌ ಪುಡಿ ಹುಟ್ಟಿದ ಕತೆ ಕುತೂಹಲಕರ! ಅಡುಗೆ ಮಾಡುವ ಇದರ ಹಿನ್ನೆಲೆ ಗೊತ್ತಿರಲಿ

daily horoscope predictions for April 18 2024
ಭವಿಷ್ಯ1 hour ago

Dina Bhavishya : ಈ ರಾಶಿಯವರು ಇಂದು ಕಾರಣಾಂತರಗಳಿಂದ ಮೋಸ ಹೋಗುವ ಸಾಧ್ಯತೆ ಇದೆ!

DD News Logo
ದೇಶ6 hours ago

DD News Logo: ರಾಮನವಮಿ ದಿನವೇ ಡಿಡಿ ನ್ಯೂಸ್‌ ಲೋಗೊ ಕೇಸರಿಮಯ; ತೀವ್ರವಾಯ್ತು ಚರ್ಚೆ!

Jai Shree Ram slogan
ಪ್ರಮುಖ ಸುದ್ದಿ6 hours ago

Jai Shree Ram slogan: ಹಿಂದು ಯುವಕರ ಮೇಲೆ ಹಲ್ಲೆ ಮಾಡಿದ್ದ ಮೂವರ ಬಂಧನ

Union Minister Pralhad Joshi election campaign in Hubli
ಹುಬ್ಬಳ್ಳಿ7 hours ago

Lok Sabha Election 2024: ಪ್ರಧಾನಿ ಮೋದಿ ನೇತೃತ್ವದ ಸರ್ಕಾರದಿಂದ ಸ್ವಚ್ಛ ಆಡಳಿತ: ಪ್ರಲ್ಹಾದ್‌ ಜೋಶಿ

Times Influential list 2024
ಕ್ರೀಡೆ7 hours ago

Times Influential list 2024: ಟೈಮ್ಸ್‌ ಪ್ರಭಾವಿ ಪಟ್ಟಿಯಲ್ಲಿ ಸ್ಥಾನ ಪಡೆದ ಸಾಕ್ಷಿ ಮಲಿಕ್,ಆಲಿಯಾ ಭಟ್

Terrorist Attack
ದೇಶ7 hours ago

Terrorist Attack: ಕಾಶ್ಮೀರದಲ್ಲಿ ಬಿಹಾರದ ಕಾರ್ಮಿಕನನ್ನು ಹತ್ಯೆಗೈದ ಉಗ್ರರು; ತಿಂಗಳಲ್ಲಿ 2ನೇ ದಾಳಿ

MP DK Suresh election campaign in various places of Channapattana
ಬೆಂಗಳೂರು ಗ್ರಾಮಾಂತರ8 hours ago

Lok Sabha Election 2024: ಚನ್ನಪಟ್ಟಣದ ವಿವಿಧೆಡೆ ಸಂಸದ ಡಿ.ಕೆ.ಸುರೇಶ್‌ ಮತಯಾಚನೆ

DC vs GT
ಕ್ರೀಡೆ8 hours ago

DC vs GT: ಡೆಲ್ಲಿ ದಾಳಿಗೆ ಚೆಲ್ಲಾಪಿಲ್ಲಿಯಾದ ಗುಜರಾತ್​; 6 ವಿಕೆಟ್​ ಹೀನಾಯ ಸೋಲು

Sharmitha Gowda in bikini
ಕಿರುತೆರೆ6 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ1 day ago

Dina Bhavishya : ಈ ಎರಡು ರಾಶಿಯವರು ಇಂದು ಹೂಡಿಕೆ ವ್ಯವಹಾರಕ್ಕೆ ತಲೆ ಹಾಕಲೇಬೇಡಿ

dina bhavishya
ಭವಿಷ್ಯ2 days ago

Dina Bhavishya : ಇವತ್ತು ಒಂದು ದಿನ ಈ ರಾಶಿಯವರು ಹೊಸ ಕೆಲಸಕ್ಕೆ ಕೈ ಹಾಕ್ಬೇಡಿ

HD Kumaraswamy apologised to womens for his statement and slams DK Shivakumar
Lok Sabha Election 20243 days ago

HD Kumaraswamy: ನನ್ನ ಹೇಳಿಕೆಯಿಂದ ನೋವಾಗಿದ್ದರೆ ವಿಷಾದಿಸುತ್ತೇನೆ; ಡಿಕೆಶಿ ವಿರುದ್ಧ ಹರಿಹಾಯ್ದ ಎಚ್‌ಡಿಕೆ

Dina Bhavishya
ಭವಿಷ್ಯ3 days ago

Dina Bhavishya : ಈ ರಾಶಿಯ ಉದ್ಯೋಗಿಗಳಿಗೆ ಕಾರ್ಯಸ್ಥಳದಲ್ಲಿ ಕಿರಿಕಿರಿ ಸಾಧ್ಯತೆ

Modi in Karnataka Modi roadshow in coastal area Mangalore Watch video
Lok Sabha Election 20243 days ago

Modi in Karnataka: ಕರಾವಳಿಯಲ್ಲಿ ಮೋದಿ ಮೋಡಿ; ಭರ್ಜರಿ ರೋಡ್‌ ಶೋ! ವಿಡಿಯೊ ನೋಡಿ

dina bhavishya
ಭವಿಷ್ಯ4 days ago

Dina Bhavishya: ಸತ್ಯ ಹೇಳಿದ್ರೆ ಈ ರಾಶಿಯವರಿಗೆ ಬಂಧುಗಳಿಂದ ಟೀಕೆಗಳು ಎದುರಾಗುತ್ತವೆ

Dina Bhavishya
ಭವಿಷ್ಯ5 days ago

Dina Bhavishya : ಹಣಕಾಸಿನ ವ್ಯವಹಾರಗಳಲ್ಲಿ ಈ ರಾಶಿಯವರಿಗೆ ಯಶಸ್ಸು ಕಟ್ಟಿಟ್ಟಬುತ್ತಿ

Rameshwaram Cafe Blast Fake IDs created and captured bombers hiding in Kolkata
ಕ್ರೈಂ6 days ago

Rameshwaram Cafe Blast: ನಕಲಿ ಐಡಿ ಸೃಷ್ಟಿಸಿ ಕೋಲ್ಕತ್ತಾದಲ್ಲಿ ಅಡಗಿದ್ದ ಬಾಂಬರ್‌ಗಳನ್ನು ಸೆರೆ ಹಿಡಿದಿದ್ದೇ ರೋಚಕ!

Dina Bhavishya
ಭವಿಷ್ಯ6 days ago

Dina Bhavishya : ಹತಾಶೆಯಲ್ಲಿ ಈ ರಾಶಿಯವರು ಆತುರದ ತೀರ್ಮಾನ ಕೈಗೊಳ್ಳಬೇಡಿ..

Lok Sabha Election 2024 Vokkaliga support us says DK Shivakumar
ಕರ್ನಾಟಕ7 days ago

Lok Sabha Election 2024: ಒಕ್ಕಲಿಗರ ಬೆಂಬಲ ನಮಗೇ; ನಿರ್ಮಲಾನಂದನಾಥ ಶ್ರೀ ಹೆಸರನ್ನು ರಾಜಕೀಯಕ್ಕೆ ಎಳೆದಿಲ್ಲ: ಡಿಕೆಶಿ ಸ್ಪಷ್ಟನೆ

ಟ್ರೆಂಡಿಂಗ್‌