ನವದೆಹಲಿ: ವಿಶ್ವ ದಾಖಲೆ ಮಾಡಿ (Guinness World Record) ಜನಪ್ರಿಯವಾಗುವುದಕ್ಕಾಗಿ ಜನರ ಎಂತೆಂಥ ವಿಲಕ್ಷಣ ಕೆಲಸಗಳಿಗೆ ಕೈ ಹಾಕುತ್ತಾರೆಂಬುದಕ್ಕೆ ಮತ್ತೊಂದು ನಿದರ್ಶನ ದೊರೆತಿದೆ. 39 ವರ್ಷದ ಡ್ಯಾನಿಶ್ ವ್ಯಕ್ತಿಯೊಬ್ಬರು (Danish Man) ತಮ್ಮ ಮೂಗಿನ ಹೊಳ್ಳೆಗಳಲ್ಲಿ (nostrils) 68 ಬೆಂಕಿಕಡ್ಡಿಗಳನ್ನು (Matchsticks) ಇಟ್ಟುಕೊಳ್ಳುವ ಮೂಲಕ ಅಸಾಮಾನ್ಯ ಗಿನ್ನೆಸ್ ವಿಶ್ವ ದಾಖಲೆ (GWR) ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ(Viral News).
ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್(GWR) ವೆಬ್‌ಸೈಟ್‌ನ ಪ್ರಕಾರ, ಡೆನ್ಮಾರ್ಕ್‌ನ ಪೀಟರ್ ವಾನ್ ಟ್ಯಾಂಗೆನ್ ಬುಸ್ಕೋವ್ ಅವರು ಮೂಗಿನಲ್ಲಿ ಅತಿ ಹೆಚ್ಚು ಬೆಂಕಿ ಕಡ್ಡಿಗಳನ್ನು ಇಟ್ಟುಕೊಳ್ಳುವ ಮೂಲಕ ವಿಶ್ವ ದಾಖಲೆಯನ್ನು ಸ್ಥಾಪಿಸಿದ್ದಾರೆ. ಅವರು ಇಂಥ ದಾಖಲೆಯನ್ನು ಹೊಂದಿದೆ ಜಗತ್ತಿನ ಮೊದಲ ವ್ಯಕ್ತಿಯಾಗಿದ್ದಾರೆ. ಈ ದಾಖಲೆಯನ್ನು ಗಳಿಸಲು ಅವರು ಕನಿಷ್ಠ 54 ಬೆಂಕಿ ಕಡ್ಡಿಯಗಳನ್ನು ಮೂಗಿನಲ್ಲಿ ಇಟ್ಟುಕೊಳ್ಳುವುದು ಅವಶ್ಯವಿತ್ತು.
"Surprisingly it didn’t really hurt."
— Guinness World Records (@GWR) February 18, 2024
ಮೂಗಿನಲ್ಲಿ ಬೆಂಕಿ ಕಡ್ಡಿಗಳನ್ನು ಇಟ್ಟುಕೊಳ್ಳುವ ಮೂಲಕ ವಿಶ್ವ ದಾಖಲೆ ಬರೆದಿರುವ ಬುಸ್ಕೋವ್ ತಮೆಗ ನೋವಾಗಲಿಲ್ಲ ಎಂದು ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್‌ಗೆ ತಿಳಿಸಿದ್ದಾರೆ. ನಾನು ಸಾಕಷ್ಟು ದೊಡ್ಡ ಮೂಗಿನ ಹೊಳ್ಳೆಗಳನ್ನು ಹೊಂದಿದ್ದೇನೆ ಮತ್ತು ಸಾಕಷ್ಟು ಹಿಗ್ಗುವ ಚರ್ಮವನ್ನು ಹೊಂದಿದ್ದೇನೆ. ಇದರಿಂದ ವಿಶ್ವ ದಾಖಲೆ ಮಾಡಲು ಭಾರೆ ನೆರವು ದೊರೆಯುತ ಎಂದು ಅವರು ಹೇಳಿದರು.
ಬುಸ್ಕೋವ್ ಅವರ ಮೂಗಿನ ಹೊಳ್ಳೆಗಳು 68 ಬೆಂಕಿ ಕಡ್ಡಿಗಳನ್ನು ತನ್ನೊಳಗೆ ಇಟ್ಟುಕೊಳ್ಳುವಷ್ಟು ಸಾಮರ್ಥ್ಯವನ್ನು ಹೊಂದಿವೆ. ಹಾಗಿದ್ದೂ, ಭವಿಷ್ಯದಲ್ಲಿ ಈ ದಾಖಲೆಯನ್ನು ಮುರಿಯುವ ಸಾಧ್ಯತೆಯನ್ನು ಅವರು ತಳ್ಳಿ ಹಾಕಲಿಲ್ಲ. “ನನಗೆ, ಸಾಮರ್ಥ್ಯದ ಹೆಚ್ಚಳಕ್ಕೆ ಕೆಲವು ತರಬೇತಿಯ ಅಗತ್ಯವಿರುತ್ತದೆ ಅಥವಾ ಬಹುಶಃ ನಾನು ವಯಸ್ಸಾದಂತೆ ನನ್ನ ಮೂಗು ಬೆಳೆಯುತ್ತದೆ” ಎಂದು ಅವರು ಹೇಳಿದ್ದಾರೆ.
ಬುಸ್ಕೋವ್ ಅವರು ತಮ್ಮದೇ ಆದ ವಿಶ್ವ ದಾಖಲೆಯನ್ನು ಸ್ಥಾಪಿಸಲು ಸಂತೋಷಪಡುತ್ತಾರೆ ಎಂದು ಹೇಳಿದರು. ನಾನೇ ಒಂದು ದಾಖಲೆಯನ್ನು ಪಡೆಯುತ್ತೇನೆ ಎಂದು ನಾನು ಎಂದಿಗೂ ಯೋಚಿಸಲಿಲ್ಲ. ನಾನು ಯಾವಾಗಲೂ ಜೀವನದ ಆಸಕ್ತಿದಾಯಕ ಮತ್ತು ವಿಚಿತ್ರವಾದ ಅಂಶಗಳನ್ನು ಹುಡುಕಲು ಪ್ರಯತ್ನಿಸುತ್ತೇನೆ. ನಾವು ಅದಕ್ಕೆ ತೆರೆದುಕೊಂಡರೆ ಅನುಭವಿಸಲು, ನೋಡಲು ಅಥವಾ ಮಾಡಲು ಹಲವಾರು ಅದ್ಭುತ ಸಂಗತಿಗಳಿವೆ ಸಿಗುತ್ತವೆ ಎಂದು ಅವರು ಹೇಳಿದರು.
ಈ ಸುದ್ದಿಯನ್ನೂ ಓದಿ: Viral News: ಜಗತ್ತಿನ ಅತಿ ಚಿಕ್ಕ ವಾಷಿಂಗ್ ಮೆಷಿನ್ ತಯಾರಿಸಿ ಗಿನ್ನೆಸ್ ದಾಖಲೆ ಬರೆದ ಆಂಧ್ರವಾಲಾ!