ನವದೆಹಲಿ: ಹೆಬ್ಬಾವುಗಳು (Python Snake) ಆಡು, ಕೋಳಿ, ಕುರಿಗಳನ್ನು ಒಂದೇ ಏಟಿಗೆ ನುಂಗಿ ನೀರು ಕುಡಿಯುವುದು ಗೊತ್ತು. ಆದರೆ, ಮನುಷ್ಯನೊಬ್ಬನನ್ನು ಹೆಬ್ಬಾವು (25 Year old Former) ಒಂದೇ ಏಟಿಗೆ ನುಂಗಿರುವುದು ಬಹುಶಃ ಅಪರೂಪ. ಈ ರೀತಿಯ ಘಟನೆ ವರ್ಷಗಳ ಹಿಂದೆ ವರದಿಯಾಗಿತ್ತು. ಈ ಸುದ್ದಿಯೀಗ ಮತ್ತೆ ಸೋಷಿಯಲ್ ಮೀಡಿಯಾದಲ್ಲಿ (Social Media) ವೈರಲ್ ಆಗಿದೆ(Viral News). ವರದಿಗಳ ಪ್ರಕಾರ, 25 ವರ್ಷದ ಇಂಡೋನೇಷ್ಯನ್ ರೈತ ಅಕ್ಬರ್ ಸಲುಬಿರೋ ಎಂಬಾತ 2017ರಲ್ಲಿ ಕಾಣೆಯಾಗಿದ್ದ. ಬಳಿಕ ಆತ, ಇಂಡೋನೇಷ್ಯಾದ ವೆಸ್ಟ್ ಸುಲವೇಶಿಯಲ್ಲಿ (Indonesia’s West Sulawesi) 23 ಅಡಿಯ ಹೆಬ್ಬಾವು ಹೊಟ್ಟೆಯಲ್ಲಿ ಶವವಾಗಿ ಪತ್ತೆಯಾಗಿದ್ದ!
ರೈತ ಸುಲವೇಶಿ ದ್ವೀಪದಲ್ಲಿರುವ ತನ್ನ ಹೊಲಕ್ಕೆ ಹೋಗಿದ್ದ. ಆಗ ಆತ ಕಣ್ಮರೆಯಾಗಿದ್ದ. 24 ಗಂಟೆಗಳ ಕಾಲ ಹುಡುಕಿದ ಬಳಿಕವೂ ಆತ ಪತ್ತೆಯಾಗದ ಕಾರಣ ಹಳ್ಳಿಗರು ಪೊಲೀಸರಿಗೆ ದೂರು ನೀಡಿದ್ದರು. ಅಕ್ಬರ್‌ನನ್ನು ಹುಡುಕಲು ಪೊಲೀಸರು ಕಾರ್ಯಾಚರಣೆ ನಡೆಸಿದರು. ಆದರೆ, ಯಾವುದೇ ಪ್ರಯೋಜನವಾಗಲಿಲ್ಲ. ಅಕ್ಬರ್‌ನ ಗೆಳೆಯ, ಕುಟುಂಬದ ಪಾಮ್ ತೋಟದ ಪಕ್ಕದಲ್ಲಿ ಹೆಬ್ಬಾವೊಂದನ್ನು ಪತ್ತೆ ಹಚ್ಚಿದರು. ಈ ಹೆಬ್ಬಾವು ಸಾಮಾನ್ಯಕ್ಕಿಂತಲೂ ಗಾತ್ರದಲ್ಲಿ ತುಸು ದೊಡ್ಡದಾಗಿತ್ತು. ಆಗ ಅನುಮಾನ ಬಂದು ಹೆಬ್ಬಾವು ಹೊಟ್ಟೆಯನ್ನು ಬಗೆದಾಗ ಅದರ ಒಳಗಡೆ ಅಕ್ಬರ್ ದೇಹ ಕಂಡು ಬಂತು. ಹಾವಿನ ದೇಹದಿಂದ ಅಕ್ಬರ್‌ನ ದೇಹವನ್ನು ಹೊರ ತೆಗೆದು ಫೋಟೋ ತೆಗೆದರು. ಈ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗಿದ್ದವು.
ಅಕ್ಬರ್‌ನನ್ನು ಇಡೀಯಾಗಿ ನುಂಗಿದ ಹೆಬ್ಬಾರುವ ಸುಮಾರು 7 ಮೀಟರ್ , ಅಂದರ 23 ಅಡಿ ಉದ್ದವಿತ್ತು. ಅಕ್ಬರ್ ನನ್ನು ನುಂಗಿದ ಹೆಬ್ಬಾವು 7 ಮೀಟರ್ (23 ಅಡಿ) ಉದ್ದವಿದ್ದು, ರೆಟಿಕ್ಯುಲೇಟೆಡ್ ಹೆಬ್ಬಾವು ಜಾತಿಗೆ ಸೇರಿತ್ತು. ಈ ಜಾತಿಯು ಪ್ರಪಂಚದ ಅತಿ ಉದ್ದದ ಸರೀಸೃಪವೆಂದು ತಿಳಿದುಬಂದಿದೆ. ಈ ಹಾವು ತನ್ನ ಬೇಟೆಯನ್ನು ಕೊಲ್ಲುವ ಮೊದಲು ಉಸಿರುಗಟ್ಟಿಸುತ್ತದೆ. ವರ್ಷಗಳ ಹಿಂದೆ ನಡೆದ ಈ ಘಟನೆಯು ಈಗ ಮತ್ತೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಎಷ್ಟೋ ಜನರು ನವಜಾತ ಶಿಶುಗಳನ್ನು ಬೇಡವೆಂದು ಆಸ್ಪತ್ರೆಯಲ್ಲೇ ಬಿಟ್ಟು ಹೋಗುವುದು ಅಥವಾ ರಸ್ತೆ ಬದಿಯಲ್ಲಿ ಎಸೆದು ಹೋಗುವುದನ್ನು ನಾವು ನೋಡಿದ್ದೇವೆ ಅಥವಾ ಅಂತಹ ಘಟನೆ ಬಗ್ಗೆ ಕೇಳಿದ್ದೇವೆ. ಇದೇ ರೀತಿಯ ಘಟನೆ ಇತ್ತೀಚೆಗೆ ಲೆಬನಾನ್ ದೇಶದಲ್ಲಿಯೂ ನಡೆದಿದೆ. ಆದರೆ ಬೀದಿ ನಾಯಿಯೊಂದರಿಂದಾಗಿ ಆ ಶಿಶು ಪ್ರಾಣ (Viral News) ರಕ್ಷಣೆಯಾಗಿದೆ.
ರಸ್ತೆ ಬದಿ ಕವರ್‌ನಲ್ಲಿದ್ದ ಶಿಶುವನ್ನು ಕಾಪಾಡಿದ ಬೀದಿ ನಾಯಿ!
ಲೆಬನಾನ್‌ನ ಸರ್ಕಾರಿ ಆಸ್ಪತ್ರೆಯೊಂದರ ಹೊರ ಭಾಗದಲ್ಲಿ ಯಾರೋ ಪೋಷಕರು ನವಜಾತ ಶಿಶುವನ್ನು ಪ್ಲಾಸ್ಟಿಕ್ ಕವರ್ ಒಂದರಲ್ಲಿ ಹಾಕಿ ಅದನ್ನು ರಸ್ತೆ ಬದಿಯಲ್ಲಿ ಎಸೆದು ಹೋಗಿದ್ದಾರೆ. ಅಲ್ಲೇ ಇದ್ದ ಬೀದಿ ನಾಯಿಯೊಂದು ಆ ಕವರ್ ಅನ್ನು ಬಾಯಿಯಲ್ಲಿ ಕಚ್ಚಿಕೊಂಡು ನಡೆದುಕೊಂಡು ಹೋಗಿದೆ. ಕವರ್‌ನಲ್ಲಿದ್ದ ಶಿಶು ಅಳುತ್ತಿದ್ದರಿಂದ ದಾರಿಹೋಕರು ನಾಯಿಯನ್ನು ಗಮನಿಸಿದ್ದಾರೆ. ನಾಯಿಯ ಬಾಯಿಯಿಂದ ಕವರ್‌ನ್ನು ತೆಗೆದುಕೊಂಡು ಅದರೊಳಗಿದ್ದ ಶಿಶುವನ್ನು ನೋಡಿದ್ದಾರೆ.
ಈ ಸುದ್ದಿಯನ್ನೂ ಓದಿ: Viral Video: ಇದೆಂಥ ಕ್ರೂರ ಮನಸ್ಥಿತಿ; ಪಕ್ಕದ ಮನೆಯವರ ನಾಯಿ ಮೇಲೆ ಆ್ಯಸಿಡ್ ಎರಚಿದ ಮಹಿಳೆ!
ತಕ್ಷಣವೇ ಆ ಶಿಶುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮಗುವಿಗೆ ಆಗಿದ್ದ ಸಣ್ಣ ಪುಟ್ಟ ಗಾಯಗಳಿಗೆ ಅಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ವಿಚಾರವನ್ನು ಫರೀದ್ ಹೆಸರಿನವರು ಅರೇಬಿಕ್ ಭಾಷೆಯಲ್ಲಿ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಹಾಗೆಯೇ ಆ ಮಗುವಿನ ಫೋಟೋವನ್ನು ಕೂಡ ಅವರು ಹಂಚಿಕೊಂಡಿದ್ದಾರೆ. “ಆದಷ್ಟು ಬೇಗ ಈ ಮಗುವನ್ನು ದತ್ತು ತೆಗೆದುಕೊಳ್ಳುವ ಕುಟುಂಬ ಸಿಗಲಿ” ಎಂದು ಅವರು ಟ್ವೀಟ್‌ನಲ್ಲಿ ಪ್ರಾರ್ಥಿಸಿದ್ದಾರೆ.