Viral Video: ಇದೆಂಥ ಕ್ರೂರ ಮನಸ್ಥಿತಿ; ಪಕ್ಕದ ಮನೆಯವರ ನಾಯಿ ಮೇಲೆ ಆ್ಯಸಿಡ್‌ ಎರಚಿದ ಮಹಿಳೆ! - Vistara News

ವೈರಲ್ ನ್ಯೂಸ್

Viral Video: ಇದೆಂಥ ಕ್ರೂರ ಮನಸ್ಥಿತಿ; ಪಕ್ಕದ ಮನೆಯವರ ನಾಯಿ ಮೇಲೆ ಆ್ಯಸಿಡ್‌ ಎರಚಿದ ಮಹಿಳೆ!

ಪಕ್ಕದ ಮನೆಯ ನಾಯಿ ತನ್ನ ಮನೆಯ ಬೆಕ್ಕನ್ನು ಓಡಿಸುಕೊಂಡು ಬರುತ್ತದೆ ಎನ್ನುವ ಕಾರಣಕ್ಕೆ ಮಹಿಳೆಯೊಬ್ಬಳು ನಾಯಿಯ ಮೇಲೆ ಆಸಿಡ್‌ ಸುರಿದಿರುವ ಘಟನೆ ಮಹಾರಾಷ್ಟ್ರದ ಮುಂಬೈನಲ್ಲಿ ನಡೆದಿದೆ. ಈ ಘಟನೆಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ (Viral Video) ಆಗಿದೆ.

VISTARANEWS.COM


on

acid attack on dog
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಮುಂಬೈ: ಸಾಕು ನಾಯಿಗಳೆಂದರೆ ಯಾರಿಗೆ ಇಷ್ಟವಿರುವುದಿಲ್ಲ ಹೇಳಿ. ಆದರೆ ಎಲ್ಲರೂ ನಾವು ಸಾಕಿರುವ ನಾಯಿಯನ್ನು ಇಷ್ಟಪಡುತ್ತಾರೆ ಎನ್ನುವುದು ಮೂರ್ಖತನವಾಗುತ್ತದೆ. ಕೆಲವೊಮ್ಮೆ ನಾಯಿಗಳನ್ನು ಕಂಡರೆ ಆಗದ ಜನರು ಅದಕ್ಕೆ ಏನಾದರೂ ಕೇಡು ಮಾಡಿಬಿಡುವ ಸಾಧ್ಯತೆಗಳೂ ಇರುತ್ತದೆ. ಅದೇ ರೀತಿ ಮುಂಬೈನಲ್ಲಿ ಮಹಿಳೆಯೊಬ್ಬಳು ತನ್ನ ಪಕ್ಕದ ಮನೆಯ ಸಾಕು ನಾಯಿಯ ಮೇಲೇ ಆ್ಯಸಿಡ್‌ ಸುರಿದಿರುವ ಘಟನೆ ಮಹಾರಾಷ್ಟ್ರದ ಮುಂಬೈನಲ್ಲಿ ನಡೆದಿದೆ. ಸದ್ಯ ಮಹಿಳೆಯನ್ನು ಪೊಲೀಸರು (Viral Video) ಬಂಧಿಸಿದ್ದಾರೆ.

35 ವರ್ಷದ ಶಬಿಸ್ತಾ ಸುಹೈಲ್‌ ಅನ್ಸಾರಿ ಹೆಸರಿನ ಮಹಿಳೆ ತನ್ನ ಮನೆಯಲ್ಲಿ ಬೆಕ್ಕು ಸಾಕಿದ್ದಾಳೆ. ಆಕೆಯ ಪಕ್ಕದ ಮನೆಯವರು ನಾಯಿಯನ್ನು ಸಾಕಿದ್ದಾರೆ. ಬ್ರೌನಿ ಹೆಸರಿನ ನಾಯಿ ಶಬಿಸ್ತಾ ಅವರ ಮನೆಯ ಬೆಕ್ಕನ್ನು ಓಡಿಸುಕೊಂಡು ಹೋಗುತ್ತಿತ್ತಂತೆ. ಈ ವಿಚಾರವಾಗಿ ಆಕೆ ಹಲವು ಬಾರಿ ಬ್ರೌನಿಯ ಮಾಲೀಕರ ಬಳಿ ದೂರು ನೀಡಿದ್ದಳಂತೆ. ಆದರೆ ಅವರು ಅದರ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳದೆ ಸುಮ್ಮನೆ ಇದ್ದರಂತೆ.

ಇದನ್ನೂ ಓದಿ: Viral Video : ಪುಟಾಣಿ ಮಾಡ್ತಿದೆ ಕಾವಾಲಯ್ಯ ಡ್ಯಾನ್ಸ್‌! ಆಹಾ ಎಷ್ಟು ಮುದ್ಮುದ್ದು

ಬುಧವಾರ ಬ್ರೌನಿ ಮನೆಯ ಹತ್ತಿರ ರಸ್ತೆ ಬದಿಯಲ್ಲಿ ಮಲಗಿರುವುದನ್ನು ಶಬಿಸ್ತಾ ನೋಡಿದ್ದಾಳೆ. ಅದನ್ನು ಕಂಡ ಆಕೆ ಒಂದಿಷ್ಟು ಆಸಿಡ್‌ ತಂದು ಮಲಗಿದ್ದ ನಾಯಿಯ ಮೇಲೆ ಸುರುಗಿದ್ದಾಳೆ. ನಂತರ ಅಲ್ಲಿಂದ ವಾಪಸು ತೆರಳಿದ್ದಾಳೆ. ಆಕೆ ಹೀಗೆ ಮಾಡುವಾಗ ಮುಖಕ್ಕೆ ವೇಲನ್ನು ಕಟ್ಟಿಕೊಂಡಿರುವುದನ್ನು ಕಾಣಬಹುದಾಗಿದೆ. ಆ್ಯಸಿಡ್‌ ದಾಳಿಗೆ ಒಳಗಾದ ನಾಯಿ ನೋವನ್ನು ತಡೆಯಲಾರದೆ ಓಡುವ ದೃಶ್ಯಗಳು ಕೂಡ ಅಲ್ಲಿದ್ದ ಸಿಸಿಟಿವಿಯ ಕ್ಯಾಮರಾದಲ್ಲಿ ಸೆರೆಯಾಗಿದೆ.

ಬುಧವಾರ ಸಂಜೆ ಆ ಕಟ್ಟಡದ ಮಾಲೀಕರಾದ ಬಾಳಾಸಾಹೇಬ್‌ ತುಕುರಾಮ್‌ ಅವರು ಬ್ರೌನಿ ಉದ್ದಾಡುತ್ತಾ ಬಿದ್ದಿರುವುದನ್ನು ಕಂಡಿದ್ದಾರೆ. ತಕ್ಷಣವೇ ಅದನ್ನು ಪ್ರಾಣಿಗಳ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆಸಿಡ್‌ ದಾಳಿಯಿಂದಾಗಿ ಬ್ರೌನಿ ಒಂದು ಕಣ್ಣು ಕಳೆದುಕೊಂಡಿದೆ. ಹಾಗೆಯೇ ಅದರ ದೇಹದಲ್ಲಿ ಸುಟ್ಟ ಗಾಯಗಳು ಉಂಟಾಗಿವೆ.

ಆಸ್ಪತ್ರೆಯಿಂದ ಮನೆಗೆ ಬಂದ ಬಾಳಾಸಾಹೇಬ್‌ ಅವರು ಸಿಸಿಟಿವಿ ಕ್ಯಾಮೆರಾವನ್ನು ಪರಿಶೀಲನೆ ಮಾಡಿದ್ದಾರೆ. ಆಗ ಅವರಿಗೆ ಶಬಿಸ್ತಾ ಅವರೇ ಬ್ರೌನಿ ಮೇಲೆ ಆ್ಯಸಿಡ್‌ ಹಾಕಿರುವುದು ತಿಳಿದುಬಂದಿದೆ. ಈ ವಿಚಾರವಾಗಿ ಅವರು ಪೊಲೀಸ್‌ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ. ತಕ್ಷಣವೇ ಕಾರ್ಯಪ್ರವರ್ತರಾದ ಪೊಲೀಸರು ಶಬಿಸ್ತಾರನ್ನು ಬಂಧಿಸಿದ್ದಾರೆ. ಆಕೆಯ ವಿರುದ್ಧ ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್‌ 429 ಮತ್ತು 11 (1) ಹಾಗೂ ಮಹಾರಾಷ್ಟ್ರ ಪೊಲೀಸ್‌ ಕಾಯ್ದೆಯ ಸೆಕ್ಷನ್‌ 119ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಶಬಿಸ್ತಾ ನಾಯಿಯ ಮೇಲೆ ಆ್ಯಸಿಡ್‌ ಸುರಿದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ಭಾರೀ ವೈರಲ್‌ ಆಗಿದೆ. ಕ್ರೂರಿಯಂತೆ ವರ್ತಿಸಿದ ಶಬಿಸ್ತಾ ಬಗ್ಗೆ ಜನರು ಆಕ್ರೋಶ ಹೊರಹಾಕುತ್ತಿದ್ದಾರೆ.

ಇತ್ತೀಚೆಗೆ ಇಂತಹದ್ದೇ ಒಂದು ಘಟನೆ ಮಧ್ಯಪ್ರದೇಶದ ಇಂದೋರ್‌ನಲ್ಲಿ ನಡೆದಿತ್ತು. ಅಕ್ಕ ಪಕ್ಕದ ಮನೆಯವರು ಸಾಕಿಕೊಂಡಿದ್ದ ನಾಯಿಗಳು ಜಗಳ ಆರಂಭಿಸಿದ್ದು, ಆ ಜಗಳ ನಾಯಿಗಳ ಮಾಲೀಕರಲ್ಲೂ ಶುರುವಾಗಿತ್ತು. ಅದೇ ಸಿಟ್ಟಿನಿಂದ ಒಂದು ನಾಯಿಯ ಮಾಲೀಕ ಗುಂಡು ಹಾರಿಸಿದ್ದು, ಇಬ್ಬರು ಮೃತರಾಗಿದ್ದರು. ಹಾಗೆಯೇ ಗರ್ಭಿಣಿ ಸೇರಿ ಒಟ್ಟು ಆರು ಮಂದಿ ಗಾಯಾಳುಗಳಾಗಿದ್ದರು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರಿಕೆಟ್

Viral Video: ವಿಚ್ಛೇದನ ಕೇಸ್​ ಹೆಚ್ಚಳಕ್ಕೆ ಇದುವೇ ಕಾರಣ ಎಂದ ಪಾಕ್​ ಕ್ರಿಕೆಟ್​ ತಂಡದ ಮಾಜಿ ನಾಯಕ

Viral Video: ಕಳೆದ ಮೂರು ವರ್ಷಗಳಲ್ಲಿ ಪಾಕಿಸ್ತಾನದಲ್ಲಿ ವಿಚ್ಛೇದನ ಪ್ರಮಾಣ ಸುಮಾರು 30 ಪ್ರತಿಶತದಷ್ಟು ಹೆಚ್ಚಳವಾಗಿದೆ. ಮಹಿಳೆಯರು ಕೆಲಸ ಮಾಡಲು ಆರಂಭಿಸಿದ್ದೇ ಇದಕ್ಕೆ ಪ್ರಮುಖ ಕಾರಣ ಎಂದು ಪಾಕಿಸ್ತಾನ ಮಾಜಿ ನಾಯಕ ಸಯೀದ್ ಅನ್ವರ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

VISTARANEWS.COM


on

viral video
Koo

ಕರಾಚಿ: ಇತ್ತೀಚಿನ ದಿನಗಳಲ್ಲಿ ವಿಚ್ಛೇದನ ಕೇಸ್​ ಹೆಚ್ಚಳವಾಗಲು(Rising divorce rate) ಪ್ರಮುಖ ಕಾರಣ ಏನೆಂಬುದನ್ನು ಪಾಕಿಸ್ತಾನ ಮಾಜಿ ಆಟಗಾರ ಮತ್ತು ನಾಯಕ ಸಯೀದ್ ಅನ್ವರ್(Saeed Anwar) ವಿವರಿಸಿದ್ದಾರೆ. ಮಹಿಳೆಯರು ಕೆಲಸ ಮಾಡಲು ಆರಂಭಿಸಿದ್ದೇ ವಿಚ್ಛೇದನ ಹೆಚ್ಚಳಕ್ಕೆ ಕಾರಣ ಎಂದು ಹೇಳಿದ್ದಾರೆ. ಅವರು ನೀಡಿರುವ ಈ ಹೇಳಿಕೆ ಇದೀಗ ಭಾರೀ ವಿವಾದ ಮತ್ತು ವೈರಲ್(Viral Video) ಆಗಿದೆ.

ಕಳೆದ ಮೂರು ವರ್ಷಗಳಲ್ಲಿ ಪಾಕಿಸ್ತಾನದಲ್ಲಿ ವಿಚ್ಛೇದನ ಪ್ರಮಾಣ ಸುಮಾರು 30 ಪ್ರತಿಶತದಷ್ಟು ಹೆಚ್ಚಳವಾಗಿದೆ. ಮಹಿಳೆಯರ ದುಡಿಯಲು ಆರಂಭಿಸಿದ ಕಾರಣ ಅವರು ಕೂಡ ಆರ್ಥಿಕವಾಗಿ ಸಧೃಡವಾಗಿದ್ದಾರೆ. ಹೀಗಾಗಿ ಅವರು ಮನೆಯ ಮೇಲೆ ನಿಯಂತ್ರಣವನ್ನು ಸಾಧಿಸುತ್ತಾರೆ. ಬೈಗುಳ ಕೇಳಿ ನರಕದಲ್ಲಿ ಜೀವನ ಮಾಡುವುದಕ್ಕಿಂತ, ನಾನೇ ಸಂಪಾದಿಸಬಲ್ಲೆ. ನಾನು ಸ್ವಂತವಾಗಿ ಸಂಸಾರ ನಡೆಸಬಲ್ಲೆ ಎಂಬ ಬಲವಾದ ನಂಬಿಕೆ ಬರುತ್ತದೆ. ಇದೇ ಕಾರಣದಿಂದ ವಿಚ್ಛೇದನ ಪ್ರಮಾಣ ಹೆಚ್ಚಾಗಿದೆ ಎಂದು ಅನ್ವರ್ ಹೇಳಿದರು.

“1.05 ನಿಮಿಷಗಳ ವಿಡಿಯೊದಲ್ಲಿ ಮಾತನಾಡಿದ ಅನ್ವರ್, ನಾನು ಜಗತ್ತಿನ ಹಲವು ರಾಷ್ಟ್ರಗಳಿಗೆ ಪ್ರಯಾಣಿಸಿದ್ದೇನೆ. ನಾನು ಈಗಷ್ಟೇ ಆಸ್ಟ್ರೇಲಿಯಾ, ಯುರೋಪ್‍ನಿಂದ ಹಿಂತಿರುಗುತ್ತಿದ್ದೇನೆ. ಅಲ್ಲಿ ಯುವಕರು ನರಳುತ್ತಿದ್ದಾರೆ. ಕುಟುಂಬಗಳು ಕೆಟ್ಟ ಸ್ಥಿತಿಯಲ್ಲಿವೆ. ದಂಪತಿಗಳು ಜಗಳವಾಡುತ್ತಿದ್ದಾರೆ. ವ್ಯವಹಾರದ ಸ್ಥಿತಿ ತುಂಬಾ ಕೆಟ್ಟದಾಗಿದೆ. ನ್ಯೂಜಿಲ್ಯಾಂಡ್​ ನಾಯಕ ಕೇನ್ ವಿಲಿಯಮ್ಸನ್ ಹಾಗೂ ಆಸ್ಟ್ರೇಲಿಯಾದ ಮಾಜಿ ಆಟಗಾರ ಕೂಡ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ಅನ್ವರ್ ಹೇಳಿದ್ದಾರೆ. ಈ ವಿಡಿಯೊ ವೈರಲ್​ ಆಗಿದೆ.

ಅನ್ವರ್ ಹೇಳಿಕೆಗೆ ಅನೇಕರು ಭಾರೀ ವಿರೋಧ ವ್ಯಕ್ತಪಡಿಸಿದ್ದಾರೆ. ಮೂಲಭೂತವಾಗಿ ನೀವು ಮಹಿಳೆಯರನ್ನು ಗುಲಾಮರನ್ನಾಗಿ ಮಾಡಬೇಕೆಂದು ಹೇಳುತ್ತಿದ್ದೀರಿ. ಮಹಿಳೆಯರಿಗೂ ರೆಕ್ಕೆಗಳನ್ನು ಬಿಚ್ಚಿ ಹಾರಾಡುವ ಅಕಾಶ ನೀಡಬೇಕು. ಆದರೆ ನೀವು ಅವರನ್ನು ಸಾಕುಪ್ರಾಣಿಗಳಂತೆ ಪುರುಷರಿಗೆ ಸೇವೆ ಸಲ್ಲಿಸಬೇಕೆಂಬ ಮನಸ್ಥಿತಿ ಹೊಂದಿದ್ದೀರಿ ಎಂದು ತಿರುಗೇಟು ನೀಡಿದ್ದಾರೆ.

ಇದನ್ನೂ ಓದಿ Viral Video: ಪನೀರ್‌ ಬಿರಿಯಾನಿಯಲ್ಲಿ ಚಿಕನ್‌ ಪೀಸ್‌.. ಜೊಮ್ಯಾಟೊದಿಂದ ಮತ್ತೊಂದು ಎಡವಟ್ಟು

“ಮಹಿಳೆಯರು ಕೆಲಸ ಮಾಡಲು ಮತ್ತು ಅವರ ಸಾಮರ್ಥ್ಯವನ್ನು ಅರಿತುಕೊಳ್ಳಲು ಸುರಕ್ಷಿತ ವಾತಾವರಣವನ್ನು ಕೇಳುವ ಬದಲು, ಅವರು ಮಹಿಳೆಯರನ್ನು ಮನೆಯಲ್ಲಿಯೇ ಇರಲು ಕೇಳುತ್ತಿದ್ದಾರೆ. ಸಿದ್ಧಾಂತದಲ್ಲಿ ಏನೋ ತಪ್ಪಾಗಿದೆ” ಎಂದು ಮತ್ತೊಬ್ಬ ಮಹಿಳೆ ಕಮೆಂಟ್​ ಮಾಡಿದ್ದಾರೆ. “ ಜಗತ್ತು ಮತಾಂತರಗೊಳ್ಳಬೇಕೆಂದು ಬಯಸುವ ನಿಮ್ಮಿಂದ ಇನ್ನೇನು ನಿರೀಕ್ಷಿಸಬಹುದು. “ಇದು ಮಹಿಳೆಯರಿಗೆ ತುಂಬಾ ಅವಮಾನಕರವಾಗಿದೆ” ಹೀಗೆ ಹಲವು ಮಹಿಳೇಯರು ಅನ್ವರ್​ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Continue Reading

ವೈರಲ್ ನ್ಯೂಸ್

Viral Video: ಪನೀರ್‌ ಬಿರಿಯಾನಿಯಲ್ಲಿ ಚಿಕನ್‌ ಪೀಸ್‌.. ಜೊಮ್ಯಾಟೊದಿಂದ ಮತ್ತೊಂದು ಎಡವಟ್ಟು

Viral Video:ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ಶುಕ್ಲಾ, ಪನ್ನೀರ್‌ ಬಿರಿಯಾನಿಯಲ್ಲಿ ಚಿಕನ್‌ ತುಂಡುಗಳು ಪತ್ತೆಯಾಗಿರುವ ಬಗ್ಗೆ ವಿಡಿಯೋವನ್ನು ಶೇರ್‌ ಮಾಡಿದ್ದಾರೆ. ಶುದ್ಧ ಸಸ್ಯಾಹಾರಿಯಾಗಿರುವ ಶುಕ್ಲಾ ಮಹಾರಾಷ್ಟ್ರದ ಪುಣೆ ಕರವೇನಗರದ ನಿವಾಸಿ. ಅವರು ಜೊಮ್ಯಾಟೊದಲ್ಲಿ ಪಿಕೆ ಬಿರಿಯಾನಿ ಹೌಸ್‌ನಿಂದ ಪನ್ನೀರ್‌ ಬಿರಿಯಾನಿ ಆರ್ಡರ್‌ ಮಾಡಿದ್ದರು. ಆರ್ಡರ್‌ ಬಂದಂತೆ ಅದನ್ನು ತೆರೆದು ನೋಡಿದಾಗ ಅದರಲ್ಲಿ ಪನ್ನೀರ್‌ ಜೊತೆಗೆ ಚಿಕನ್‌ ಪೀಸ್‌ಗಳೂ ಮಿಕ್ಸ್‌ ಆಗಿದ್ದು ಕಂಡು ಬಂದಿದೆ. ತಕ್ಷಣ ಅವರು ಈ ಬಗ್ಗೆ ಜೊಮ್ಯಾಟೊಗೆ ದೂರು ನೀಡಿದ್ದು, ಅವರಿಗೆ ಹಣವನ್ನು ಹಿಂದಿರುಗಿಸಲಾಗಿದೆ.

VISTARANEWS.COM


on

Viral video
Koo

ಪುಣೆ: ಹಸಿರು ಸಮವಸ್ತ್ರದ ಮೂಲಕ ವಿವಾದಕ್ಕೀಡಾಗಿದ್ದ ಜೊಮ್ಯಾಟೊ(Zomato) ಇದೀಗ ಮತ್ತೆ ಸುದ್ದಿಯಲ್ಲಿದೆ. ಜೊಮ್ಯಾಟೊದಿಂದ ಆರ್ಡರ್‌ ಮಾಡಲಾಗಿದ್ದ ಪನೀರ್‌ ಬಿರಿಯಾನಿ(Paneer Biriyani)ಯಲ್ಲಿ ಚಿಕನ್‌ ಪೀಸ್‌ ಸಿಕ್ಕಿದ್ದು, ಇದು ಧಾರ್ಮಿಕ ಭಾವನೆಗೆ ಧಕ್ಕೆ ತರುವ ಯತ್ನ ಎಂದು ಗ್ರಾಹಕರೊಬ್ಬರು ಆರೋಪಿಸಿರುವ ಘಟನೆ ವರದಿಯಾಗಿದೆ. ಪುಣೆ ಮೂಲದ ಪಂಕಜ್‌ ಶುಕ್ಲಾ ಎಂಬ ವ್ಯಕ್ತಿ ಎಕ್ಸ್‌ನಲ್ಲಿ ವಿಡಿಯೋ ಸಮೇತ ಪೋಸ್ಟ್‌ವೊಂದನ್ನು ಮಾಡಿದ್ದು, ಇದೀಗ ಈ ವಿಚಾರ ಎಲ್ಲೆಡೆ ವೈರಲ್‌(Viral Video) ಆಗುತ್ತಿದೆ.

ಶುಕ್ಲಾ ಆರೋಪ ಏನು?

ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ಶುಕ್ಲಾ, ಪನೀರ್‌ ಬಿರಿಯಾನಿಯಲ್ಲಿ ಚಿಕನ್‌ ತುಂಡುಗಳು ಪತ್ತೆಯಾಗಿರುವ ಬಗ್ಗೆ ವಿಡಿಯೋವನ್ನು ಶೇರ್‌ ಮಾಡಿದ್ದಾರೆ. ಶುದ್ಧ ಸಸ್ಯಾಹಾರಿಯಾಗಿರುವ ಶುಕ್ಲಾ ಮಹಾರಾಷ್ಟ್ರದ ಪುಣೆ ಕರವೇನಗರದ ನಿವಾಸಿ. ಅವರು ಜೊಮ್ಯಾಟೊದಲ್ಲಿ ಪಿಕೆ ಬಿರಿಯಾನಿ ಹೌಸ್‌ನಿಂದ ಪನೀರ್‌ ಬಿರಿಯಾನಿ ಆರ್ಡರ್‌ ಮಾಡಿದ್ದರು. ಆರ್ಡರ್‌ ಬಂದಂತೆ ಅದನ್ನು ತೆರೆದು ನೋಡಿದಾಗ ಅದರಲ್ಲಿ ಪನೀರ್‌ ಜೊತೆಗೆ ಚಿಕನ್‌ ಪೀಸ್‌ಗಳೂ ಮಿಕ್ಸ್‌ ಆಗಿದ್ದು ಕಂಡು ಬಂದಿದೆ. ತಕ್ಷಣ ಅವರು ಈ ಬಗ್ಗೆ ಜೊಮ್ಯಾಟೊಗೆ ದೂರು ನೀಡಿದ್ದು, ಅವರಿಗೆ ಹಣವನ್ನು ಹಿಂದಿರುಗಿಸಲಾಗಿದೆ.

ಇದಾದ ಬಳಿಕ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ಶುಕ್ಲಾ, ನನಗೆ ಪೂರ್ತಿ ಹಣ ರೀಫಂಡ್‌ ಆಗಿದೆಯಾದರೂ ಇದರಿಂದ ನನ್ನ ಧಾರ್ಮಿಕ ಭಾವನೆಗೆ ಧಕ್ಕೆಯುಂಟಾಗಿದೆ. ನಾನು ಅತ್ಯಂತ ಧಾರ್ಮಿಕ ವ್ಯಕ್ತಿಯಾಗಿರುವ ಕಾರಣ ಇದು ಪಾಪ ಕೃತ್ಯ ಆದಂತಾಗಿದೆ. ಜೊಮ್ಯಾಟೊದ ಎಡವಟ್ಟಿನಿಂದಾಗಿ ನನ್ನ ಧಾರ್ಮಿಕ ಭಾವನೆಗೆ ನೋವುಂಟಾಗಿದೆ ಎಂದು ವಿಡಿಯೋದಲ್ಲಿ ಹೇಳಿದ್ದಾರೆ. ಈ ಪೋಸ್ಟ್‌ಗೆ ತಕ್ಷಣ ರಿಯಾಕ್ಟ್‌ ಮಾಡಿರುವ ಜೊಮ್ಯಾಟೊ, ಯಾವುದೇ ವ್ಯಕ್ತಿಯ ಧಾರ್ಮಿಕ ಭಾವನೆಗೆ ಧಕ್ಕೆ ತರುವ ಉದ್ದೇಶ ನಮಗಿಲ್ಲ. ನಿಮ್ಮ ಆರ್ಡರ್ನ ಡಿಟೇಲ್ಸ್‌ ಕಳುಹಿಸಿ. ನಾವು ಚೆಕ್‌ ಮಾಡುತ್ತೇವೆ ಎಂದು ಹೇಳಿದೆ.

ಇದನ್ನೂ ಓದಿ:Bomb threat: ಏರ್‌ ಇಂಡಿಯಾ ವಿಮಾನಕ್ಕೆ ಬಾಂಬ್‌ ಬೆದರಿಕೆ; ಟಿಶ್ಯೂ ಪೇಪರ್‌ನಲ್ಲಿ ಬಂದಿತ್ತು ಸಂದೇಶ

ಇನ್ನು ಪಂಕಜ್‌ ಶುಕ್ಲಾ ಟ್ವೀಟ್‌ಗೆ ಅನೇಕ ನೆಟ್ಟಿಗರು ಪರ ವಿರೋಧವಾಗಿ ಪ್ರತಿಕ್ರಿಯಿಸಿದ್ದಾರೆ. ಶುದ್ಧ ಸಸ್ಯಹಾರಿ ಆಗಿರುವ ನೀವು ಏಕೆ ಮಾಂಸಾಹಾರ ಹೊಟೇಲ್‌ನಿಂದ ಆರ್ಡರ್‌ ಮಾಡಿದ್ದೀರಿ ಎಂದು ಕೆಲವರು ಪ್ರಶ್ನಿಸಿದರೆ, ಮತ್ತೂ ಕೆಲವರು ಶುದ್ಧ ಸಸ್ಯಹಾರಿ ಹೊಟೇಲ್‌ಗಳಿಂದಲೇ ಆರ್ಡರ್‌ ಮಾಡಿ. ಇಲ್ಲವಾದರೆ ಇಂತಹ ಘಟನೆಗಳು ನಡೆಯುತ್ತವೆ ಎಂದು ಹೇಳಿದ್ದಾರೆ.

Continue Reading

ವೈರಲ್ ನ್ಯೂಸ್

Viral Video: 160 ಕಿ.ಮೀ. ವೇಗದಲ್ಲಿ ಡ್ರೈವಿಂಗ್‌..ಇನ್‌ಸ್ಟಾಗ್ರಾಂನಲ್ಲಿ ಲೈವ್‌..ಡೆಡ್ಲಿ ಆಕ್ಸಿಡೆಂಟ್‌! ವೈರಲಾಯ್ತು ಶಾಕಿಂಗ್‌ ವಿಡಿಯೋ

Viral Video:ಅಹ್ಮದಾಬಾದ್‌ನಿಂದ ಮುಂಬೈಗೆ SUV ಕಾರಿನಲ್ಲಿ ರೋಡ್‌ ಟ್ರಿಪ್‌ ಹೊರಟಿದ್ದ ಐವರು ಯುವಕರು ಕಾರು ಚಲಾಯಿಸುತ್ತಲೇ ಇನ್‌ಸ್ಟಾಗ್ರಾಂ ಲೈವ್‌ ಹೋಗಿದ್ದಾರೆ. ಒಂದು ಅತೀ ವೇಗದ ಕಾರು ಚಾಲನೆ ಅದರ ಜೊತೆ ಇನ್‌ಸ್ಟಾಗ್ರಾಂನಲ್ಲಿ ಲೈವ್‌ ಹೀಗೆ ಎದುರಿಗೆ ಬರುತ್ತಿದ್ದ ಒಂದೊಂದೆ ವಾಹಗಳನ್ನು ಓವರ್‌ಟೇಕ್‌ ಮಾಡುತ್ತಾ ಹುಚ್ಚಾಟ ಮೆರೆದಿದ್ದಾರೆ. ಫುಲ್‌ ಎಂಜಾಯ್‌ ಮೂಡ್‌ನಲ್ಲಿದ್ದ ಯುವಕರ ಹುಚ್ಚಾಟದಿಂದ ಎದುರಿಗೆ ಬರುತ್ತಿದ್ದ ವಾಹನ ತಪ್ಪಿಸಲು ಹೋಗಿ ಮರವೊಂದಕ್ಕೆ ಡಿಕ್ಕಿ ಹೊಡೆದಿದ್ದಾರೆ. ಡಿಕ್ಕಿ ಹೊಡೆದ ರಭಸಕ್ಕೆ ಯುವಕರಿಬ್ಬರು ಸ್ಥಳದಲ್ಲೇ ಬಲಿಯಾಗಿದ್ದಾರೆ.

VISTARANEWS.COM


on

Viral Video
Koo

ಗುಜರಾತ್‌: ಮೋಜಿಗೆಂದು ವೇಗವಾಗಿ ವಾಹನ ಚಲಾಯಿಸಿ(Rash Driving) ಯುವಕರು ತಮ್ಮ ಪ್ರಾಣವನ್ನೇ ಕಳೆದುಕೊಳ್ಳುವ ಬಗ್ಗೆ ದಿನಾ ಒಂದಿಲ್ಲೊಂದು ಘಟನೆ ವರದಿ ಆಗುತ್ತಲೇ ಇರುತ್ತದೆ. ಅಂತಹದ್ದೇ ಮತ್ತೊಂದು ಘಟನೆ ಗುಜರಾತ್‌(Gujarat Accident)ನಲ್ಲಿ ನಡೆದಿದ್ದು, ಐವರು ಯುವಕರು ಇನ್‌ಸ್ಟಾ ಗ್ರಾಂ ಲೈವ್‌(Viral Video) ಹೋಗುತ್ತಾ ಕಾರನ್ನು ಪ್ರತಿ ಗಂಟೆಗೆ 160 ಕಿಲೋಮೀಟರ್‌ ವೇಗದಲ್ಲಿ ಚಲಾಯಿಸಿ ಕೊನೆಗೆ ಭೀಕರ ಅಪಘಾತಕ್ಕೀಡಾಗಿದ್ದಾರೆ. ಘಟನೆಯಲ್ಲಿ ಇಬ್ಬರು ಯುವಕರು ಸ್ಥಳದಲ್ಲೇ ಅಸುನೀಗಿದರೆ, ಉಳಿದ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಘಟನೆ ವಿವರ:

ಗುಜರಾತ್‌ನ ಕಛ್‌ ಪ್ರದೇಶದಲ್ಲಿ ಈ ದುರ್ಘಟನೆ ಸಂಭವಿಸಿದ್ದು, ಅಹ್ಮದಾಬಾದ್‌ನಿಂದ ಮುಂಬೈಗೆ SUV ಕಾರಿನಲ್ಲಿ ರೋಡ್‌ ಟ್ರಿಪ್‌ ಹೊರಟಿದ್ದ ಐವರು ಯುವಕರು ಕಾರು ಚಲಾಯಿಸುತ್ತಲೇ ಇನ್‌ಸ್ಟಾಗ್ರಾಂ ಲೈವ್‌ ಹೋಗಿದ್ದಾರೆ. ಒಂದು ಅತೀ ವೇಗದ ಕಾರು ಚಾಲನೆ ಅದರ ಜೊತೆ ಇನ್‌ಸ್ಟಾಗ್ರಾಂನಲ್ಲಿ ಲೈವ್‌ ಹೀಗೆ ಎದುರಿಗೆ ಬರುತ್ತಿದ್ದ ಒಂದೊಂದೆ ವಾಹಗಳನ್ನು ಓವರ್‌ಟೇಕ್‌ ಮಾಡುತ್ತಾ ಹುಚ್ಚಾಟ ಮೆರೆದಿದ್ದಾರೆ. ಫುಲ್‌ ಎಂಜಾಯ್‌ ಮೂಡ್‌ನಲ್ಲಿದ್ದ ಯುವಕರ ಹುಚ್ಚಾಟದಿಂದ ಎದುರಿಗೆ ಬರುತ್ತಿದ್ದ ವಾಹನ ತಪ್ಪಿಸಲು ಹೋಗಿ ಮರವೊಂದಕ್ಕೆ ಡಿಕ್ಕಿ ಹೊಡೆದಿದ್ದಾರೆ. ಡಿಕ್ಕಿ ಹೊಡೆದ ರಭಸಕ್ಕೆ ಯುವಕರಿಬ್ಬರು ಸ್ಥಳದಲ್ಲೇ ಬಲಿಯಾಗಿದ್ದಾರೆ. ಉಳಿದ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅಪಘಾತ ಸಂಭವಿಸುವುದಕ್ಕೂ ಮುನ್ನ ನಡೆದ ಈ ದೃಶ್ಯ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಜೋರಾಗಿ ಮ್ಯೂಸಿಕ್‌ ಹಾಕಿಕೊಂಡು ಯುವಕನೋರ್ವ “ನೋಡಿ ನಮ್ಮ ಕಾರು ಎಷ್ಟು ವೇಗವಾಗಿ ಹೋಗುತ್ತಿದೆ” ಎಂದು ಹೇಳುತ್ತಾ ಸ್ಪೀಡೋ ಮೀಟರ್‌ ಅನ್ನು ತೋರಿಸುತ್ತಾನೆ. ಅದು ಪ್ರತಿಗಂಟೆಗೆ 160 ಕಿ.ಮೀ ವೇಗ ತೋರಿಸುತ್ತಿತ್ತು. ಅಷ್ಟು ಹೊತ್ತಿಗೆ ಕಾರನ್ನು ಮತ್ತಷ್ಟು ವೇಗವಾಗಿ ಚಲಾಯಿಸಿ ಒಂದೊಂದೆ ವಾಹನಗಳನ್ನು ಹಿಂದಿಕ್ಕಲು ಶುರು ಮಾಡುತ್ತಾರೆ. ಆಗ ಮತ್ತೊರ್ವ ಯುವಕ ಯೆಸ್‌…ಒನ್‌ ಮೋರ್‌ ಎಂದು ಕಿರುಚುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.

ಇದನ್ನೂ ಓದಿ:Shyam Rangeela: ವಾರಾಣಸಿಯಲ್ಲಿ ಮೋದಿ ವಿರುದ್ಧ ಕಣಕ್ಕಿಳಿದ ಕಲಾವಿದನ ನಾಮಪತ್ರ ತಿರಸ್ಕಾರ!

ಈ ಘಟನೆ ಮೇ 2ರಂದು ಅದಾಸ್‌ ಪ್ರದೇಶದಲ್ಲಿ ಬೆಳಗ್ಗಿನ ಜಾವ 3.30 ಮತ್ತು 4.30ರ ನಡುವೆ ನಡೆದಿದ್ದು, ಮೃತರನ್ನು ಅಮನ್‌ ಮೆಹಬೂಬ್‌ ಭಾಯ್‌ ಶೇಖ್‌ ಮತ್ತು ಚಿರಾಗ್‌ ಕುಮಾರ್‌ ಕೆ ಪಟೇಲ್‌ ಎಂದು ಗುರುತಿಸಲಾಗಿದೆ. ಗಾಯಾಳುಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ಕಾರು ಚಲಾಯಿಸುತ್ತಿದ್ದ ಮುಸ್ತಾಫಾ ಅಲಿಯಾಸ್‌ ಶಹಬಾದ್‌ ಖಾನ್‌ ಪಠಾಣ್‌ ವಿರುದ್ಧ ಕೇಸ್‌ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Continue Reading

ಕ್ರೀಡೆ

Team India Coach Applications: ಭಾರತ ತಂಡದ ಕೋಚ್​ ಹುದ್ದೆಗೆ ಅರ್ಜಿ ಸಲ್ಲಿಸಿದ ಸಾವಿರಾರು ಅಭಿಮಾನಿಗಳು; ಫಜೀತಿಗೆ ಸಿಲುಕಿದ ಬಿಸಿಸಿಐ

Team India Coach Applications: ಸೋಮವಾರವಷ್ಟೇ ಬಿಸಿಸಿಐ(BCCI) ತನ್ನ ಅಧಿಕೃತ ಪ್ರಕಟನೆ ಮೂಲಕ ಹುದ್ದೆಗೆ ಅರ್ಜಿ ಆಹ್ವಾನಿಸಿತ್ತು. ಅರ್ಜಿ ಸಲ್ಲಿಸಲು ಮೇ 27 ಅಂತಿಮ ಗಡುವಾಗಿದೆ. ಬಿಸಿಸಿಐ ಆನ್​ಲೈನ್​ ಮೂಲಕ ಈ ಅರ್ಜಿ ಆಹ್ವಾನಿಸಿ ಇದೀಗ ಫಜೀತಿಗೆ ಸಿಲುಕಿದೆ. ಹೌದು, ಅನೇಕ ಕ್ರಿಕೆಟ್​ ಅಭಿಮಾನಿಗಳು(Cricket Fans Apply For India’s Head Coach) ಕೋಚ್​ ಹುದ್ದೆಗೆ ಅರ್ಜಿ ಸಲ್ಲಿಸಿದ್ದಾರೆ. ಈ ಕುರಿತ ಟ್ವೀಟ್​ಗಳು ವೈರಲ್​ ಆಗಿದೆ.

VISTARANEWS.COM


on

Team India Coach Applications
Koo

ಮುಂಬಯಿ: ಭಾರತ ಕ್ರಿಕೆಟ್‌ ತಂಡದ ಮುಖ್ಯ ಕೋಚ್‌ ಹುದ್ದೆಗೆ(Team India Coach Applications) ಅರ್ಜಿ ಆಹ್ವಾನಿಸಿರುವ ಬಿಸಿಸಿಐಗೆ ಇದೀಗ ದೊಡ್ಡ ತಲೆನೋವೊಂದು ಎದುರಾಗಿದೆ. ಸೋಮವಾರವಷ್ಟೇ ಬಿಸಿಸಿಐ(BCCI) ತನ್ನ ಅಧಿಕೃತ ಪ್ರಕಟನೆ ಮೂಲಕ ಹುದ್ದೆಗೆ ಅರ್ಜಿ ಆಹ್ವಾನಿಸಿತ್ತು. ಅರ್ಜಿ ಸಲ್ಲಿಸಲು ಮೇ 27 ಅಂತಿಮ ಗಡುವಾಗಿದೆ. ಬಿಸಿಸಿಐ ಆನ್​ಲೈನ್​ ಮೂಲಕ ಈ ಅರ್ಜಿ ಆಹ್ವಾನಿಸಿ ಇದೀಗ ಫಜೀತಿಗೆ ಸಿಲುಕಿದೆ. ಹೌದು, ಅನೇಕ ಕ್ರಿಕೆಟ್​ ಅಭಿಮಾನಿಗಳು(Cricket Fans Apply For India’s Head Coach) ಗೂಗಲ್​ ಅರ್ಜಿ ಪಡೆದುಕೊಂಡು ಕೋಚ್​ ಹುದ್ದೆಗೆ ಅರ್ಜಿ ಸಲ್ಲಿಸಿದ್ದಾರೆ. ಈ ಕುರಿತ ಟ್ವೀಟ್​ಗಳು ವೈರಲ್​ ಆಗಿದೆ.

ಶುಕ್ರವಾರ ಬಿಸಿಸಿಐ ಕಾರ್ಯದರ್ಶಿ ಜಯ್​ ಶಾ ಅವರು ಮುಖ್ಯ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ನಾವು 3 ವರ್ಷಗಳ ದೀರ್ಘ ಅವಧಿಗಾಗಿ ಕೋಚ್​ ಹುಡುಕಾಟದಲ್ಲಿದ್ದೇವೆ ಎಂದು ಹೇಳಿದ್ದರು. ಜತೆಗೆ ದ್ರಾವಿಡ್ ಅವರಿಗೂ​ ಮರು ಅರ್ಜಿ ಸಲ್ಲಿಸಬಹುದು ಎಂದು ಹೇಳಿದ್ದರು. ಆದರೆ, ದ್ರಾವಿಡ್​ ಕೋಚ್​ ಹುದ್ದೆಯಲ್ಲಿ ಮುಂದುವರಿಯಲು ಆಸಕ್ತಿ ಹೊಂದಿಲ್ಲ ಎಂದು ತಿಳಿದುಬಂದಿದೆ. ಹೀಗಾಗಿ ಬಿಸಿಸಿಐ ನೂತನ ಕೋಚ್​ ಹುಡುಕಾಟದಲ್ಲಿದೆ.

ಇದನ್ನೂ ಓದಿ Team India Coach: ಭಾರತ ಕ್ರಿಕೆಟ್‌ ತಂಡದ ಮುಖ್ಯ ಕೋಚ್‌ ಹುದ್ದೆಗೆ ಅರ್ಜಿ ಆಹ್ವಾನ; ಮೇ 27 ಕೊನೆಯ ದಿನ

2011ರಲ್ಲಿ ಗ್ಯಾರಿ ಕಸ್ಟನ್ ಮಾರ್ಗದರ್ಶನದಲ್ಲಿ ಭಾರತ 2ನೇ ಬಾರಿಗೆ ವಿಶ್ವಕಪ್​ ಗೆದ್ದಿತ್ತು. ಬಳಿಕ 2013ರಲ್ಲಿ ಡಂಕನ್​ ಪ್ಲೆಚರ್​ ಮಾರ್ಗದರ್ಶನದಲ್ಲಿ ಭಾರತ ಐಸಿಸಿ ಚಾಂಪಿಯನ್ಸ್​ ಟ್ರೋಫಿ ಜಯಿಸಿತ್ತು. ಇದಾದ ಬಳಿಕ ಭಾರತ ಇದುವರೆಗೂ ಯಾವುದೇ ಐಸಿಸಿ ಟ್ರೋಫಿ ಗೆದ್ದಿಲ್ಲ. ರವಿಶಾಸ್ತ್ರಿ ಮತ್ತು ರಾಹುಲ್​ ದ್ರಾವಿಡ್​ ಮಾರ್ಗದರ್ಶನಲ್ಲಿ 2 ಏಕದಿನ ವಿಶ್ವಕಪ್​ ಆಡಿದರೂ ಭಾರತ ಕಪ್​ ಗೆಲ್ಲಲು ಸಾಧ್ಯವಾಗಿಲ್ಲ. ಹೀಗಾಗಿ ವಿದೇಶಿ ಕೋಚ್​ ಆಯ್ಕೆಯೇ ಉತ್ತಮ ಎಂದು ಬಿಸಿಸಿಐ ಯೋಚಿಸಿದೆ ಎನ್ನಲಾಗಿದೆ.

ಸದ್ಯ ಪ್ಲೆಮಿಂಗ್​ ಮತ್ತು ಕ್ರಿಕೆಟ್ ಆಸ್ಟ್ರೇಲಿಯಾ ಕಂಡ ಯಶಸ್ವಿ ಕೋಚ್ ಗಳಲ್ಲಿ ಒಬ್ಬರಾದ ಜಸ್ಟಿನ್ ಲ್ಯಾಂಗರ್ ಹೆಸರು ಕೇಳಿ ಬಂದಿದೆ. ಇದರಲ್ಲಿ ಲ್ಯಾಂಗರ್​ ಅವರು ತಾವಾಗಿಯೇ ಕೋಚಿಂಗ್​ ಬಗ್ಗೆ ಆಸಕ್ತಿ ತೋರಿರುವ ಕಾರಣ ಬಿಸಿಸಿಐ ಅವರಿಗೆ ಮಣೆ ಹಾಕಿದರೂ ಅಚ್ಚರಿಯಿಲ್ಲ. ಲ್ಯಾಂಗರ್ ಮಾರ್ಗದರ್ಶನದಲ್ಲಿ ಆಸೀಸ್ ತಂಡ ಟಿ20 ವಿಶ್ವಕಪ್, ಇಂಗ್ಲೆಂಡ್​ ಎದುರಿನ ಪ್ರತಿಷ್ಠಿತ ಆ್ಯಶಸ್​ ಟೆಸ್ಟ್​ ಸರಣಿ ಗೆದ್ದಿತ್ತು. ಮೂರು ವರ್ಷಗಳ ಕಾಲ ಅವರು ಆಸೀಸ್​ ತಂಡದ ಕೋಚ್​ ಆಗಿ ಕರ್ತವ್ಯ ನಿರ್ವಹಿಸಿದ್ದರು. ಒಟ್ಟಾರೆಯಾಗಿ ಟಿ20 ವಿಶ್ವಕಪ್​ ಮುಗಿದ ಬಳಿಕ ಭಾರತ ತಂಡದ ಕೋಚ್​ ಯಾರಾಗಲಿದ್ದಾರೆ ಎನ್ನುವ ಸ್ಪಷ್ಟ ಚಿತ್ರಣ ಸಿಗಲಿದೆ.

ಆಯ್ಕೆ ಪ್ರಕ್ರಿಯೆ ಅರ್ಜಿಗಳ ಸಂಪೂರ್ಣ ಪರಿಶೀಲನೆಯನ್ನು ನಡೆಸಿ ನಂತರ ವೈಯಕ್ತಿಕ ಸಂದರ್ಶನಗಳು ಮತ್ತು ಶಾರ್ಟ್‌ಲಿಸ್ಟ್ ಮಾಡಿದ ಅಭ್ಯರ್ಥಿಗಳ ಮೌಲ್ಯಮಾಪನ ಒಳಗೊಂಡಿರುತ್ತದೆ ಎಂದು ಬಿಸಿಸಿಐ ತನ್ನ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ. ಆಯ್ಕೆಯಾದ ಹೊಸ ಕೋಚ್‌ ವಿಶ್ವಕಪ್‌ ಟೂರ್ನಿಯ ನಂತರ ತಕ್ಷಣವೇ ತಂಡದ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದ್ದಾರೆ.

ನೂತನ ಕೋಚ್​ ಆಗಿ ಆಯ್ಕೆಯಾದವರ ಕಾರ್ಯಾವಧಿ 2027ರ ಡಿಸೆಂಬರ್ 31ಕ್ಕೆ ಮುಕ್ತಾಯಗೊಳ್ಳುತ್ತದೆ. 2027ರಲ್ಲಿ ನಡೆಯುವ ಏಕದಿನ ವಿಶ್ವಕಪ್​ ಟೂರ್ನಿಯೂ ಈ ಕೋಚ್​ಗೆ ಸಿಗಲಿದೆ. ದ್ರಾವಿಡ್ ಕಳೆದ ವರ್ಷ ನಡೆದಿದ್ದ ಏಕದಿನ ವಿಶ್ವಕಪ್​ ಬಳಿಕವೇ ಕೋಚ್​ ಹುದ್ದೆಯಿಂದ ಕೆಳಗಿಳಿಯಲು ನಿರ್ಧರಿಸಿದ್ದರು. ಆದರೆ, ಬಿಸಿಸಿಐ ಟಿ20 ವಿಶ್ವಕಪ್​ ತನಕ ಅವರನ್ನು ಮುಂದುವರಿಯುವಂತೆ ಒತ್ತಾಯ ಮಾಡಿತ್ತು. ಹೀಗಾಗಿ ದ್ರಾವಿಡ್​ ಟಿ20 ವಿಶ್ವಕಪ್ ತನಕ ಈ ಹುದ್ದೆಯಲ್ಲಿ ಮುಂದುವರಿದರು.

Continue Reading
Advertisement
viral video
ಕ್ರಿಕೆಟ್3 mins ago

Viral Video: ವಿಚ್ಛೇದನ ಕೇಸ್​ ಹೆಚ್ಚಳಕ್ಕೆ ಇದುವೇ ಕಾರಣ ಎಂದ ಪಾಕ್​ ಕ್ರಿಕೆಟ್​ ತಂಡದ ಮಾಜಿ ನಾಯಕ

Sita Temple
ದೇಶ5 mins ago

Sita Temple: ಬಿಜೆಪಿಯಿಂದ ಶೀಘ್ರವೇ ಸೀತೆಗಾಗಿ ಮಂದಿರ ನಿರ್ಮಾಣ; ಅಮಿತ್‌ ಶಾ ಮಹತ್ವದ ಘೋಷಣೆ

Prajwal Revanna Case pen drive and hard disk were found during the raids in Hassan and Bengaluru
ಕ್ರೈಂ15 mins ago

Prajwal Revanna Case: ಹಾಸನ, ಬೆಂಗಳೂರು ದಾಳಿ ವೇಳೆ ಸಿಕ್ಕ ಪೆನ್‌ಡ್ರೈವ್‌, ಹಾರ್ಡ್‌ ಡಿಸ್ಕ್‌ ಎಷ್ಟು? ಎಫ್‌ಎಸ್‌ಎಲ್‌ಗೆ ರವಾನೆ

Chandu Champion Injured Kartik Aaryan looks intense
ಸಿನಿಮಾ19 mins ago

Chandu Champion: ಗುರುತೇ ಸಿಗದಂತೆ ಬದಲಾದ ಈ ಸ್ಟಾರ್‌ ನಟ ಯಾರು? ಪೋಸ್ಟರ್​ ವೈರಲ್​!

Money Guide
ಮನಿ-ಗೈಡ್28 mins ago

Money Guide: ಎನ್‌ಪಿಎಸ್‌ಗೆ 15 ವರ್ಷ; ಇಲ್ಲಿದೆ ಯೋಜನೆಯ ಸಂಪೂರ್ಣ ವಿವರ

Hoarding Collapse
ದೇಶ34 mins ago

Hoarding Collapse: 16 ಜನರ ಸಾವಿಗೆ ಕಾರಣವಾದ ಯಮಸ್ವರೂಪಿ ಹೋರ್ಡಿಂಗ್‌ ಕುಸಿತದ ವಿಡಿಯೊ ಇಲ್ಲಿದೆ!

Covaxin
ದೇಶ41 mins ago

Covaxin: ಕೋವಾಕ್ಸಿನ್‌ ಲಸಿಕೆ ಪಡೆದವರಿಗೂ ಬಿಗ್‌ ಶಾಕ್‌! ಆಘಾತಕಾರಿ ವರದಿ ಔಟ್‌

T20 World Cup 2024
ಕ್ರೀಡೆ1 hour ago

T20 World Cup 2024: ಟಿ20 ವಿಶ್ವಕಪ್​ನಲ್ಲಿ ‘ನಂದಿನಿ’ ಲಾಂಛನ; ಹರ್ಷ ವ್ಯಕ್ತಪಡಿಸಿದ ಸಿದ್ದರಾಮಯ್ಯ

pm narendra modi yogi adityanath
ಪ್ರಮುಖ ಸುದ್ದಿ1 hour ago

PM Narendra Modi: ʼಗೂಂಡಾರಾಜ್‌ʼ ನೆನಪಿಸಿದ ಮೋದಿ, ಉ.ಪ್ರದಲ್ಲಿ ʼಯೋಗಿ ಸ್ವಚ್ಛತಾ ಅಭಿಯಾನʼಕ್ಕೆ ಮೆಚ್ಚುಗೆ

Viral video
ವೈರಲ್ ನ್ಯೂಸ್2 hours ago

Viral Video: ಪನೀರ್‌ ಬಿರಿಯಾನಿಯಲ್ಲಿ ಚಿಕನ್‌ ಪೀಸ್‌.. ಜೊಮ್ಯಾಟೊದಿಂದ ಮತ್ತೊಂದು ಎಡವಟ್ಟು

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Prajwal Revanna Case
ಕರ್ನಾಟಕ1 day ago

Prajwal Revanna Case: ಪ್ರಜ್ವಲ್‌ ರೇವಣ್ಣ ಇಂದೇ ಜರ್ಮನಿಯಿಂದ ಭಾರತಕ್ಕೆ? ಎಸ್‌ಐಟಿ ಅಲರ್ಟ್‌

Dina Bhavishya
ಭವಿಷ್ಯ1 day ago

Dina Bhavishya : ಭೂ ವ್ಯವಹಾರಕ್ಕೆ ಇದು ಸೂಕ್ತ ಸಮಯ; ವ್ಯಾಪಾರದಲ್ಲಿ ಡಬಲ್‌ ಲಾಭ

HD Revanna Released first reaction after release will be acquitted of all charges
ರಾಜಕೀಯ2 days ago

HD Revanna Released: ರಿಲೀಸ್‌ ಬಳಿಕ ರೇವಣ್ಣ ಫಸ್ಟ್‌ ರಿಯಾಕ್ಷನ್;‌ ನ್ಯಾಯಾಂಗದ ಮೇಲೆ ನಂಬಿಕೆ ಇದೆ; ಆರೋಪ ಮುಕ್ತನಾಗುವೆ

CM Siddaramaiah says Our government is stable for 5 years BJP will disintegrate
Lok Sabha Election 20242 days ago

CM Siddaramaiah: ನಮ್ಮ ಸರ್ಕಾರ 5 ವರ್ಷ ಸುಭದ್ರ; ಚುನಾವಣೆ ಬಳಿಕ ಬಿಜೆಪಿ ಛಿದ್ರ ಎಂದ ಸಿಎಂ ಸಿದ್ದರಾಮಯ್ಯ!

I dont want to go to other states for Lok Sabha Election 2024 campaign for Congress says CM Siddaramaiah
Lok Sabha Election 20242 days ago

CM Siddaramaiah: ಕಾಂಗ್ರೆಸ್‌ ಪರ ಬೇರೆ ರಾಜ್ಯಗಳಿಗೆ ಪ್ರಚಾರಕ್ಕೆ ಹೋಗಲು ನನಗೆ ಇಷ್ಟವಿಲ್ಲ: ಸಿಎಂ ಸಿದ್ದರಾಮಯ್ಯ!

HD Revanna Bail I am not happy that Revanna has been released says HD Kumaraswamy
ರಾಜಕೀಯ2 days ago

HD Revanna Bail: ರೇವಣ್ಣ ಬಿಡುಗಡೆಯಾಗಿದ್ದಕ್ಕೆ ನಾನಂತೂ ಖುಷಿ ಪಡಲ್ಲ ಎಂದ ಎಚ್‌ಡಿಕೆ!

karnataka Rain Effected
ಬೆಂಗಳೂರು2 days ago

Karnataka Rain: ಮಿಡ್‌ನೈಟ್‌ ಮಳೆ ಅವಾಂತರ; ಮರಗಳು, ವಿದ್ಯುತ್‌ ಕಂಬಗಳು ಧರೆಗೆ, ಕುಸಿದು ಬಿದ್ದ ಮನೆ

Dina Bhavishya
ಭವಿಷ್ಯ2 days ago

Dina Bhavishya : ಉದ್ಯೋಗದ ಸ್ಥಳದಲ್ಲಿ ನಿಮ್ಮ ವಿರುದ್ಧ ಪಿತೂರಿ ಮಾಡ್ಬಹುದು ಎಚ್ಚರ!

HD Revanna Bail Revanna will not leave the country condition imposed by the court
ಕ್ರೈಂ3 days ago

HD Revanna Bail: ರೇವಣ್ಣ ದೇಶ ಬಿಡಂಗಿಲ್ಲ, ಕೆ.ಆರ್‌. ನಗರಕ್ಕೆ ಎಂಟ್ರಿ ಕೊಡಂಗಿಲ್ಲ! ಕೋರ್ಟ್‌ ವಿಧಿಸಿದ ಷರತ್ತು ಏನು?

HD Revanna Bail
ಕ್ರೈಂ3 days ago

HD Revanna Bail: ಎಚ್‌.ಡಿ ರೇವಣ್ಣಗೆ ಕೊನೆಗೂ ಜಾಮೀನು; ಎಸ್‌ಐಟಿಗೆ ಮುಖಭಂಗ!

ಟ್ರೆಂಡಿಂಗ್‌