Site icon Vistara News

Viral News : ಪೊಲೀಸರು ದಂಡ ಹಾಕಿದ್ದಕ್ಕೆ ಆಟೋ ರಿಕ್ಷಾಕ್ಕೇ ಬೆಂಕಿ ಹಚ್ಚಲು ಮುಂದಾದ ಚಾಲಕ!

Viral News Mangalore

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ (Dakhina Kannada News) ಬಂಟ್ವಾಳದಲ್ಲಿ ಆಟೋ ರಿಕ್ಷಾ ಚಾಲಕನೊಬ್ಬ (Auto Rikshaw driver) ತನ್ನದೇ ರಿಕ್ಷಾಕ್ಕೆ ಬೆಂಕಿ ಹಚ್ಚಲು ಮುಂದಾಗಿ ಸೀನ್‌ ಕ್ರಿಯೇಟ್‌ ಮಾಡಿದ್ದಾನೆ. ನಡು ರಸ್ತೆಯಲ್ಲಿ ಸ್ವಂತ ರಿಕ್ಷಾಕ್ಕೆ ಬೆಂಕಿ ಹಚ್ಚಲು (Driver tries to burn his own Auto) ಯತ್ನಿಸಿ ಬೀದಿ ರಂಪಾಟ (Road rage) ನಡೆಸಿದ್ದಾನೆ. ಅವನ್ಯಾಕೆ ತನ್ನದೇ ವಾಹನಕ್ಕೆ ಬೆಂಕಿ ಹಚ್ಚಲು ಯತ್ನಿಸುತ್ತಿದ್ದಾನೆ ಎನ್ನುವ ಕುತೂಹಲದಿಂದ ಗಮನಿಸಿದರೆ ಇಂಟ್ರೆಸ್ಟಿಂಗ್‌ (Viral News) ಆದ ಸಂಗತಿ ತಿಳಿದುಬಂತು.

ಅಂದ ಹಾಗೆ ಈ ರೀತಿ ತನ್ನ ವಾಹನಕ್ಕೆ ತಾನೇ ಬೆಂಕಿ ಹಚ್ಚಲು ಮುಂದಾದ ಚಾಲಕನ ಹೆಸರು ಮಹಮ್ಮದ್ ಅನ್ಸಾರ್. ಅವನು ಬಂಟ್ವಾಳ ಪರಿಸರದವನು. ಸೋಮವಾರ ಮಧ್ಯಾಹ್ನದ ಹೊತ್ತು ಅವನು ಆಟೋ ರಿಕ್ಷಾದಲ್ಲಿ ಸಾಗುತ್ತಿದ್ದ. ಆದರೆ, ಅವನು ಖಾಕಿ ಸಮವಸ್ತ್ರ ಧರಿಸಿರಲಿಲ್ಲ. ಮೊಬೈಲ್‌ನಲ್ಲಿ ಮಾತನಾಡಿಕೊಂಡು ಹೋಗುತ್ತಿದ್ದ.

ಆತನನ್ನು ಗಮನಿಸಿದ ಪೊಲೀಸರು ತಡೆ ಹಿಡಿದು ಟ್ರಾಫಿಕ್‌ ರೂಲ್ಸ್‌ಗಳನ್ನು ಬ್ರೇಕ್‌ ಮಾಡಿದ ಕಾರಣಕ್ಕಾಗಿ 2000 ರೂ. ದಂಡ ವಿಧಿಸಿದರು. ಹಾಗೆ ದಂಡ ಹಾಕುತ್ತಿದ್ದಂತೆಯೇ ನನ್ನ ಬಳಿ ದುಡ್ಡಿಲ್ಲ ಎಂದು ಹೇಳಿದ ಆತ ಮತ್ತೊಂದು ನಾಟಕ ಶುರು ಮಾಡಿದ. ಅದೇನೆಂದರೆ ತನ್ನದೇ ರಿಕ್ಷಾಕ್ಕೆ ಬೆಂಕಿ ಹಚ್ಚುವುದು!

ಹಣ ಕೊಡುವುದಿಲ್ಲ, ನನ್ನ ಬಳಿ ಇಲ್ಲ ಎನ್ನುತ್ತಲೇ ನಾನು ನನ್ನ ರಿಕ್ಷಾವನ್ನೇ ಸುಟ್ಟು ಹಾಕುತ್ತೇನೆ, ಆಗ ಯಾವ ಸಮಸ್ಯೆಯೂ ಇರುವುದಿಲ್ಲವಲ್ಲ ಎಂದು ಹೇಳುತ್ತಾ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಲು ಮುಂದಾದ. ಅಗ ಪೊಲೀಸರು ಆತನನ್ನು ತಡೆಯಲು ಮುಂದಾದರು. ಆಗ ಆತ ಇದು ನನ್ನ ರಿಕ್ಷಾ. ನಾನು ಬೇಕಾದರೂ ಮಾಡುತ್ತೇನೆ. ಅದನ್ನು ತಡೆಯಲು ನಾನು ನೀವು ಯಾರು? ಎಂದು ಆಕ್ರೋಶ ವ್ಯಕ್ತಪಡಿಸಿದ. ಅದರ ಜತೆಗೆ ಪೊಲೀಸ್‌ ವಾಹನಕ್ಕೂ ಪೆಟ್ರೋಲ್‌ ಸುರಿಯಲು ಮುಂದಾದ. ಆಗ ಪೊಲೀಸರು ಆತನನ್ನು ಹಿಡಿದು ಪೊಲೀಸ್‌ ವಾಹನದೊಳಗೆ ಹಾಕಲು ಯತ್ನಿಸಿದರು. ಆದರೆ ಅವನು ಅವರ ಕೈಯಿಂದ ತಪ್ಪಿಸಿಕೊಂಡ.

ಇದನ್ನೂ ಓದಿ : Viral News: 35 ಸಾವಿರ ರೂ.ಗೆ ಮಾರಾಟವಾಯ್ತು ಸಿಂಗಲ್‌ ಲಿಂಬೆ ಹಣ್ಣು ! ಏನಿದರ ವಿಶೇಷತೆ? ಯಾಕಾಗಿ ಬಂಗಾರದ ಬೆಲೆ?

ಈ ನಡುವೆ ಅಲ್ಲಿ ಸಾಕಷ್ಟು ಜನರು ನೆರೆದರು. ಅವರನ್ನು ಉದ್ದೇಶಿಸಿ ಮಾತನಾಡಿದ ಮಹಮ್ಮದ್‌ ಅನ್ಸಾರ್‌. ನಾನು ಯಾವುದೇ ತಪ್ಪು ಮಾಡಿಲ್ಲ. ಸುಮ್ಮನೆ ಕೇಸು ಹಾಕಿದ್ದಾರೆ. ಆ ಪೊಲೀಸರು ಬೆಲ್ಟ್‌ ಹಾಕಿರಲಿಲ್ಲ. ಅದು ತಪ್ಪಲ್ವಾ ಎಂದೆಲ್ಲ ಕೇಳಲು ಶುರು ಮಾಡಿದ.

ಈ ನಡುವೆ, ನನ್ನ ಬಳಿ ಹಣ ಇಲ್ಲ, ಎಲ್ಲಿಂದ ಕಟ್ಟುವುದು, ಇವತ್ತು ಮನೆಗೆ ಗ್ಯಾಸ್‌ ತೆಗೆದುಕೊಂಡು ಹೋಗಬೇಕು ನಾನೇನು ಮಾಡುವುದು ಎಂದೆಲ್ಲ ಹೇಳಿಕೊಂಡ. ಕೊನೆಗೆ ಆತನನ್ನು ಹೇಗೋ ಮಾಡಿ ಪೊಲೀಸ್‌ ಠಾಣೆಗೆ ಕರೆದುಕೊಂಡು ಹೋಗಲಾಯಿತು. ಬಿಸಿರೋಡ್ ಕೈಕಂಬ ಮುಖ್ಯ ಹೆದ್ದಾರಿಯಲ್ಲಿ ನಡೆದ ಘಟನೆಗೆ ಸಂಬಂಧಿಸಿ ಬಂಟ್ವಾಳ ನಗರ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Viral News : ಚಾಲಕನ ಬೀದಿ ರಂಪಾಟದ ವಿಡಿಯೊ ಇಲ್ಲಿದೆ

Exit mobile version