Site icon Vistara News

Viral News : ಚಾಲಕರ ನಡುವೆ ಕಿರಿಕ್‌;‌ ಇನೋವಾ ಕಾರನ್ನೇ ಇನ್ನೊಬ್ಬನ ಮೇಲೆ ಹರಿಸಲು ಯತ್ನಿಸಿದ ಡ್ರೈವರ್‌

Drivers fight in Bangalore

ಬೆಂಗಳೂರು: ಈಗ ಸಣ್ಣ ಪುಟ್ಟ ಕಾರಣಕ್ಕಾಗಿ ಜಗಳಕ್ಕೆ ಇಳಿಯುವುದು, ಒಮ್ಮಿಂದೊಮ್ಮೆಗೇ ಮೈಮೇಲೆ ಬೀಳುವುದು, ದಾಳಿ ಮಾಡುವ ಘಟನೆಗಳು ಹೆಚ್ಚುತ್ತಿವೆ. ಅದರಲ್ಲೂ ಬೆಂಗಳೂರಿನ ಟ್ರಾಫಿಕ್‌ನಲ್ಲಿ (Bangalore Traffic) ಮನುಷ್ಯ ಕೆಲವೊಮ್ಮೆ ಪ್ರಾಣಿಗಳಿಗಿಂತಲೂ ಕಡೆಯಾಗಿ ವರ್ತಿಸುವುದು ಕಾಣುತ್ತಿದೆ. ಇಲ್ಲಿ ಚಾಲಕರಿಬ್ಬರು ಯಾವುದೋ ಕಾರಣಕ್ಕೆ ಜಗಳವಾಡಿಕೊಂಡಿದ್ದಾರೆ (Fight between drivers). ಆಗ ಸಿಟ್ಟಿಗೆದ್ದ ಒಬ್ಬ ಇನ್ನೊಬ್ಬನ ಮೇಲೆ ಕಾರನ್ನು ಹರಿಸುವ ರೀತಿಯಲ್ಲಿ ತಳ್ಳಿಕೊಂಡು ಹೋಗಿದ್ದಾನೆ. ಸ್ವಲ್ಪ ಹೆಚ್ಚು ಕಡಿಮೆ ಆಗಿದ್ದರೂ ಪ್ರಾಣವೇ ಹೋಗಬಹುದಾದ ರೀತಿಯಲ್ಲಿ ಕ್ರೌರ್ಯವನ್ನು ಮೆರೆದ ಚಾಲಕನನ್ನು ಪೊಲೀಸರು ಹುಡುಕುತ್ತಿದ್ದಾರೆ (viral News).

ಈ ಘಟನೆ ನಡೆದಿರುವುದು ಬೆಂಗಳೂರಿನ ಹೆಬ್ಬಾಳ ಫ್ಲೈ ಓವರ್ (Hebbala Fly over) ಮೇಲೆ. ಕಳೆದ ನವೆಂಬರ್‌ 29ರಂದು ಬೆಳಗ್ಗೆ 8.30ರಿಂದ 9 ಗಂಟೆಯ ನಡುವೆ ಘಟನೆ ನಡೆದಿದೆ. ಇಬ್ಬರು ಚಾಲಕರ ನಡುವೆ ಯಾವುದೇ ಕಾರಣಕ್ಕೆ ಕಿರಿಕ್ ಉಂಟಾಗಿದೆ. ಆಗ ಒಬ್ಬ ಚಾಲಕನನ್ನು ಇನ್ನೊಬ್ಬ ಚಾಲಕ ಬಾನೆಟ್ ಮೂಲಕ ತಳ್ಳಿಕೊಂಡೇ ಹೋಗಿದ್ದಾನೆ.

Drivers fight in Bangalore

ಇನೋವಾ ಚಾಲಕ ಹಾಗೂ ಇಟಿಯಾಸ್ ಚಾಲಕನ ನಡುವೆ ಫ್ಲೈ ಓವರ್ ಮೇಲೆ ಕಿರಿಕ್ ಉಂಟಾಗಿದೆ. ಆಗ ಇಟಿಯಾಸ್‌ ಚಾಲಕ ತನ್ನ ಕಾರಿನಿಂದ ಇಳಿದು ಇನೋವಾ ಡ್ರೈವರ್‌ ನನ್ನು ಪ್ರಶ್ನೆ ಮಾಡಿದ್ದಾನೆ. ಆಗ ಇನ್ನೊವಾ ಚಾಲಕ ಇದನ್ನು ಕೇರ್‌ ಮಾಡದೆ ಮುಂದೆ ಹೋಗಲು ನೋಡಿದ್ದಾನೆ. ಆತ ಇಟಿಯಾಸ್‌ ಚಾಲಕ ಕಾರಿಗೆ ಅಡ್ಡವಾಗಿ ನಿಂತಿದ್ದಾನೆ.

ಇದನ್ನು ಗಮನಿಸಿದ ಇನೊವಾ ಚಾಲಕ ಆತ ಎದುರು ನಿಂತಿದ್ದನ್ನು ಗಮನಿಸಿಯೂ ಕಾರನ್ನು ಮೂವ್‌ ಮಾಡಿದ್ದಾನೆ. ಎದುರು ಅಡ್ಡಲಾಗಿ ನಿಂತವನನ್ನು ತಳ್ಳಿಕೊಂಡೇ ಕಾರು ಮುಂದಕ್ಕೆ ಹೋಗಿದೆ. ತುಂಬ ದೂರದವರೆಗೆ ಈ ಜಗಳ ಮುಂದುವರಿದಿದೆ. ಕೆಎ 05 ಎಎಲ್ 7999 ಇನೊವಾ ಕಾರಿನ ಚಾಲಕನೇ ಈ ರೀತಿಯಾಗಿ ಅತಿರೇಕದ ವರ್ತನೆ ಮೆರೆದಿರುವುದು.

ಇದನ್ನೂ ಓದಿ: Murder Case : ಸರಿಯಾಗಿ ನೋಡಿಕೊಳ್ತಿಲ್ಲ ಎಂದು ಪತ್ನಿಯನ್ನೇ ಕೊಂದ ಮಧುಮೇಹ ರೋಗಿ!

ಈ ಎಲ್ಲ ಘಟನೆಗಳು ಮತ್ತೊಂದು ಕಾರಿನ ಡ್ಯಾಷ್‌ ಬೋರ್ಡ್‌ ಕ್ಯಾಮೆರಾದಲ್ಲಿ ಸೆರೆಯಾಗಿವೆ. ಇವುಗಳನ್ನು ವ್ಯಕ್ತಿಯೊಬ್ಬರು ಎಕ್ಸ್‌ ನಲ್ಲಿ ಶೇರ್‌ ಮಾಡಿದ್ದಾರೆ. ಗಲಾಟೆಯಲ್ಲಿ ಪಾಲ್ಗೊಂಡ ಎರಡೂ ಕಾರುಗಳು ಹಳದಿ ಬೋರ್ಡ್‌ನ ಕಾರುಗಳಾಗಿದ್ದು, ವಾಹನದಲ್ಲಿ ಪ್ರಯಾಣಿಕರು ಕೂಡಾ ಇದ್ದರು. ಆದರೆ, ಇಬ್ಬರೂ ಚಾಲಕರು ಜಗಳಕ್ಕೆ ಇಳಿದು ಹಠ ಸಾಧಿಸಲು ಮುಂದಾಗಿದ್ದಾರೆ.

ಇದೀಗ ಪೊಲೀಸರು ಇಬ್ಬರೂ ಚಾಲಕರನ್ನು ಪತ್ತೆ ಹಚ್ಚಲು ಯತ್ನಿಸುತ್ತಿದ್ದಾರೆ. ವಾಹನದ ನಂಬರ್‌ ಸಿಕ್ಕಿರುವುದರಿಂದ ಮಾಲಕನನ್ನು ಪತ್ತೆ ಹಚ್ಚುವುದು ಕಷ್ಟದ ಕೆಲಸವೇನಲ್ಲ.

ಬೆಂಗಳೂರಿನಲ್ಲಿ ಸಣ್ಣ ಪುಟ್ಟ ಕಾರಣಗಳಿಗಾಗಿ ಈ ರೀತಿ ಅತಿರೇಕದಿಂದ ವರ್ತಿಸುವ ಘಟನೆಗಳು ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿವೆ. ಇತ್ತೀಚೆಗೆ ಸಣ್ಣ ಜಗಳವೊಂದರ ಕಾರಣಕ್ಕೆ ವ್ಯಕ್ತಿಯೊಬ್ಬರನ್ನು ಸುಮಾರು ಒಂದು ಕಿ.ಮೀ. ದೂರದವರೆಗೆ ಕಾರಿನ ಬಾನೆಟ್‌ ಮೇಲೆ ಕುಳಿತಿದ್ದಾಗಲೇ ವಾಹನ ಚಲಾಯಿಸಿದ ಘಟನೆ ನಡೆದಿತ್ತು.

ಅದಕ್ಕಿಂತ ಮೊದಲು ಯಾವುದೋ ಕಾರಣಕ್ಕೆ ಸಂಶಯ ಬಂದು ಬೈಕನ್ನು ತಡೆದು ನಿಲ್ಲಿಸಲು ಯತ್ನಿಸಿ, ಎಳೆದು ನಿಲ್ಲಿಸಿದ ವ್ಯಕ್ತಿಯೊಬ್ಬರನ್ನು ಆ ಕಳ್ಳ ಸುಮಾರು ಒಂದು ಕಿಲೋಮೀಟರ್‌ ದೂರಕ್ಕೆ ರಸ್ತೆಯಲ್ಲಿ ದರದರನೆ ಎಳೆದುಕೊಂಡ ಹೋದ ಘಟನೆಯೂ ನಡೆದಿತು.

Exit mobile version