Site icon Vistara News

Viral News: ಅಪ್ರಾಪ್ತ ಹಿಂದು ಹುಡುಗಿಗೆ ಅಶ್ಲೀಲ ಮೆಸೇಜ್‌ ಕಳುಹಿಸುತ್ತಿದ್ದ ಮುಸ್ಲಿಂ ಯುವಕನಿಗೆ ಬಿತ್ತು ಗೂಸಾ

Viral News

Viral News

ಡೆಹ್ರಾಡೂನ್: ಒಂದಷ್ಟು ಜನರ ಗುಂಪು ಮೊಬೈಲ್‌ ಅಂಗಡಿಯಾತನನ್ನು ರಸ್ತೆಗೆಳೆದು ಸರಿಯಾಗಿ ಥಳಿಸುತ್ತಾರೆ. ಮಹಿಳೆಯರೂ ಆತನಿಗೆ ಧರ್ಮದೇಟು ನೀಡುತ್ತಾರೆ. ಉತ್ತರಾಖಂಡದ ಹಲ್ದ್ವಾನಿಯಲ್ಲಿ ನಡೆದ ಈ ಘಟನೆಯ ವಿಡಿಯೊ ಸದ್ಯ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಅಷ್ಟಕ್ಕೂ ಜನರ ಗುಂಪು ಯಾಕೆ ಮೊಬೈಲ್‌ ಅಂಗಡಿಯಾತನನ್ನು ಥಳಿಸಿದ್ದು? ಏನಿದು ಘಟನೆ? ನಿಮ್ಮ ಎಲ್ಲ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ (Viral News).

ಘಟನೆಯ ಹಿಂದೆ ಲವ್‌ ಜಿಹಾದ್‌ನ ಶಂಕೆ ವ್ಯಕ್ತವಾಗುತ್ತಿದೆ. ಹಲ್ಲೆಗೊಳಗಾದ ಮುಸ್ಲಿಂ ಯುವ ಲವ್‌ ಜಿಹಾದ್‌ಗೆ ಪ್ರಯತ್ನಿಸುತ್ತಿದ್ದ. ಅದನ್ನು ರೆಡ್‌ ಹ್ಯಾಂಡಾಗಿ ಹಿಡಿದ ಸ್ಥಳೀಯರು ಆತನಿಗೆ ತಕ್ಕ ಶಾಸ್ತಿ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಗುರುವಾರ (ಏಪ್ರಿಲ್ 25) ಈ ಘಟನೆ ನಡೆದಿದೆ.

ಅನಿಲ್ ಶರ್ಮಾ ಎನ್ನುವವರು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ 1.39 ನಿಮಿಷಗಳ ಈ ವಿಡಿಯೊ ಹಂಚಿಕೊಂಡಿದ್ದಾರೆ. “ಉತ್ತರಾಖಂಡದ ಹಲ್ದ್ವಾನಿಯಲ್ಲಿ ನಡೆದ ಘಟನೆ ಇದು. ಹಿಂದೂಗಳು ಮುಸ್ಲಿಮರಿಗೆ ಅಂಗಡಿಗಳನ್ನು ಬಾಡಿಗೆಗೆ ನೀಡುತ್ತಾರೆ. ಬಳಿಕ ಮುಸ್ಲಿಮರು ಲವ್‌ ಜಿಹಾದ್‌ ಆರಂಭಿಸುತ್ತಾರೆ. ಇಲ್ಲೂ ಆಗಿದ್ದು ಅದೇ. ಮೊಬೈಲ್ ಅಂಗಡಿಯನ್ನು ನಡೆಸುತ್ತಿದ್ದ ಆರೋಪಿ ಅಥರುದ್ದೀನ್‌ ರೀಚಾರ್ಜ್‌ಗಾಗಿ ತನ್ನ ಬಳಿಗೆ ಬರುವ ಹಿಂದು ಹುಡುಗಿಯರಿಗೆ ಅಶ್ಲೀಲ ಸಂದೇಶ ಕಳುಹಿಸುತ್ತಿದ್ದ” ಎಂದು ಅವರು ಬರೆದುಕೊಂಡಿದ್ದಾರೆ.

ಘಟನೆಯ ವಿವರ

ಈ ಪ್ರಕರಣವು ಹಲ್ದ್ವಾನಿಯ ಕೊಟ್ವಾಲಿಯಲ್ಲಿ ನಡೆದಿದೆ. ಅಲ್ಲಿ ವಾಸಿಸುವ ಮಹಿಳೆಯೊಬ್ಬರು ಏಪ್ರಿಲ್ 25ರಂದು ಪೊಲೀಸರಿಗೆ ದೂರು ನೀಡಿದ್ದು, ತನ್ನ 17 ವರ್ಷದ ಮಗಳು ಕೆಲವು ದಿನಗಳ ಹಿಂದೆ ಮೊಬೈಲ್ ಫೋನ್ ರೀಚಾರ್ಜ್ ಮಾಡಲು ಅಥರುದ್ದೀನ್‌ನ ‘ದೆಹಲಿ ಮೊಬೈಲ್ ಶಾಪ್’ ತೆರಳಿದ್ದಳು. ಬಳಿಕ ಆತ ಮಗಳ ಮೊಬೈಲ್‌ಗೆ ಅಶ್ಲೀಲ ಮೆಸೇಜ್‌ ಕಳುಹಿಸಲು ಆರಂಭಿಸಿದ್ದ ಎಂದು ಆರೋಪಿಸಿದ್ದರು. ಜತೆಗೆ ಮೆಸೇಜ್‌ನ ಸ್ಕ್ರೀನ್‌ ಶಾಟ್‌ ಒದಗಿಸಿದ್ದರು.

ಅಪ್ರಾಪ್ತ ಬಾಲಕಿ ಸಂದೇಶಗಳಲ್ಲಿ ಅಥರುದ್ದೀನ್‌ನನ್ನು ಪದೇ ಪದೆ ‘ಸಹೋದರ’ ಎಂದೇ ಕರೆದಿರುವುದು ಕಂಡು ಬಂದಿದೆ. ಆದಾಗ್ಯೂ ಅವನು ಆಕೆ ಸಹೋದರ ಎಂದು ಕರೆಯುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದ. ಮಾತ್ರವಲ್ಲ ತನ್ನೊಂದಿಗೆ ಸ್ನೇಹ ಬೆಳೆಸಲು ಒತ್ತಾಯಿಸಿದ್ದ. ತನ್ನ ಕನಸಿನಲ್ಲಿ ನಿನ್ನನ್ನು ನೋಡಿದ್ದೇನೆ ಎಂದೂ ಪೂಸಿ ಹೊಡೆದಿದ್ದ. ತನ್ನನ್ನು ಸಿಖ್ ಎಂದು ಉಲ್ಲೇಖಿಸುವ ಮೂಲಕ ಅಪ್ರಾಪ್ತ ಬಾಲಕಿಯನ್ನು ಮೋಸಗೊಳಿಸಲು ಪ್ರಯತ್ನಿಸಿದ್ದಾನೆ ಎಂದು ಮಹಿಳೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಇಲ್ಲಿಗೇ ಮುಗಿದಿಲ್ಲ

ಅಥರುದ್ದೀನ್‌ ಕಿರುಕುಳ ಅಲ್ಲಿಗೆ ನಿಂತಿರಲಿಲ್ಲ. ಆತ ಅವಳನ್ನು ಕಾಲೇಜು ನಿಲ್ದಾಣದವರೆಗೂ ಹಿಂಬಾಲಿಸಿದ್ದ. ಜತೆಗೆ ದಾರಿಯಲ್ಲಿ ಅವಳ ಕೈಯನ್ನು ಹಿಡಿಯಲು ಪ್ರಯತ್ನಿಸಿದ್ದ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಆತನ ಕಿರುಕುಳದಿಂದ ಮಗಳು ಭಯಗೊಂಡಿದ್ದಾಳೆ ಮತ್ತು ಮಾನಸಿಕ ಖಿನ್ನತೆಗೆ ಜಾರಿದ್ದಾಳೆ. ಸರಿಯಾಗಿ ಊಟವನ್ನೂ ಮಾಡುತ್ತಿಲ್ಲ ಎಂದು ಮಹಿಳೆ ಬಹಿರಂಗಪಡಿಸಿದ್ದಾರೆ. ದೂರಿನಲ್ಲಿ ಮುಸ್ಲಿಂ ಯುವಕನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ. ಸದ್ಯ ಪೊಲೀಸರು ಅಥರುದ್ದೀನ್‌ನನ್ನು ವಶಕ್ಕೆ ಪಡೆದಿದ್ದಾರೆ. ಘಟನೆ ಬಗ್ಗೆ ತನಿಖೆ ಆರಂಭವಾಗಿದೆ.

ಇದನ್ನೂ ಓದಿ: Love jihad? : ಮೆಸೇಜ್‌ನಲ್ಲೇ ಹಿಂದು ಯುವತಿಯರನ್ನು ಸೆಳೆಯುತ್ತಿದ್ದ ಖದೀಮ ಫಯಾಜ್‌ಗೆ ಗೂಸಾ!

ಇತರರೊಂದಿಗೂ ಇದೇ ವರ್ತನೆ

ಘಟನೆ ಬಗ್ಗೆ ಬಜರಂಗ ದಳದ ಕಾರ್ಯಕರ್ತ ಜೋಗಿಂದರ್‌ ಸಿಂಗ್‌ ರಾಣಾ ಹೆಚ್ಚಿನ ಮಾಹಿತಿ ನೀಡಿದ್ದಾರೆ. ʼʼಆರೋಪಿ ಅಥರುದ್ದೀನ್‌ ಹಲ್ದ್ವಾನಿಯ ಮಖಾನಿ ರಸ್ತೆಯಲ್ಲಿ ತನ್ನ ಕುಟುಂಬದೊಂದಿಗೆ ವಾಸವಾಗಿದ್ದಾನೆ. ಈತ ಸಂತ್ರಸ್ತೆಗಿಂತ 10 ವರ್ಷ ಹಿರಿಯವನು. ತನ್ನ ತಂಗಿಯ ವಯಸ್ಸಿನ ಬಾಲಕಿ ಜತೆ ಅನುಚಿತವಾಗಿ ವರ್ತಿಸಿದ್ದಾನೆʼʼ ಎಂದು ಹೇಳಿದ್ದಾರೆ. ʼʼಅಲ್ಲದೆ ಅಂಗಡಿ ನಡೆಸಲು ಆತನ ಬಳಿ ಸೂಕ್ತ ದಾಖಲೆಗಳೇ ಇಲ್ಲ. ಅಲ್ಲದೆ ಆತನ ಮೊಬೈಲ್‌ನಲ್ಲಿ ಇನ್ನೂ ಅನೇಕ ಹಿಂದೂ ಹುಡುಗಿಯರ ಸಂಖ್ಯೆಗಳು ಕಂಡು ಬಂದಿವೆ. ಅವರೊಂದಿಗೆ ಅಶ್ಲೀಲವಾಗಿ ಚಾಟ್‌ ನಡೆಸಿರುವುದು ಕೂಡ ತಿಳಿದು ಬಂದಿದೆʼʼ ಎಂದು ಜೋಗಿಂದರ್‌ ಸಿಂಗ್‌ ರಾಣಾ ಹೇಳಿದ್ದಾರೆ.

Exit mobile version