Viral News: ಅಪ್ರಾಪ್ತ ಹಿಂದು ಹುಡುಗಿಗೆ ಅಶ್ಲೀಲ ಮೆಸೇಜ್‌ ಕಳುಹಿಸುತ್ತಿದ್ದ ಮುಸ್ಲಿಂ ಯುವಕನಿಗೆ ಬಿತ್ತು ಗೂಸಾ - Vistara News

ವೈರಲ್ ನ್ಯೂಸ್

Viral News: ಅಪ್ರಾಪ್ತ ಹಿಂದು ಹುಡುಗಿಗೆ ಅಶ್ಲೀಲ ಮೆಸೇಜ್‌ ಕಳುಹಿಸುತ್ತಿದ್ದ ಮುಸ್ಲಿಂ ಯುವಕನಿಗೆ ಬಿತ್ತು ಗೂಸಾ

Viral News: ಉತ್ತರಾಖಂಡದ ಹಲ್ದ್ವಾನಿಯಲ್ಲಿ ಹಿಂದು ಹುಡುಗಿಯರಿಗೆ ಅಶ್ಲೀಲ ಸಂದೇಶ ಕಳುಹಿಸುತ್ತಿದ್ದ ಮುಸ್ಲಿಂ ಯುವಕನಿಗೆ ಸ್ಥಳೀಯರು ತಕ್ಕ ಪಾಠ ಕಲಿಸಿದ್ದಾರೆ. ಮೊಬೈಲ್‌ ಅಂಗಡಿ ಇಟ್ಟುಕೊಂಡಿರುವ ಆರೋಪಿ ಅಥರುದ್ದೀನ್‌ ರೀಚಾರ್ಜ್‌ಗಾಗಿ ತನ್ನ ಬಳಿಗೆ ಬರುವ ಹಿಂದು ಹುಡುಗಿಯರಿಗೆ ಅಶ್ಲೀಲ ಸಂದೇಶ ಕಳುಹಿಸುತ್ತಿದ್ದ. ಈ ಬಗ್ಗೆ ಸಂತ್ರಸ್ತ ಅಪ್ರಾಪ್ತ ಬಾಲಕಿಯೊಬ್ಬರ ತಾಯಿ ಪೊಲೀಸರಿಗೆ ದೂರು ನೀಡಿದ್ದರು. ಇನ್ನು ಈತನ ವರ್ತನೆ ಬಗ್ಗೆ ಅನುಮಾನಗೊಂಡಿದ್ದ ಸ್ಥಳೀಯರು ಅಂಗಡಿಗೆ ದಾಳಿ ನಡೆಸಿ ಆತನಿಗೆ ಥಳಿಸಿದ್ದಾರೆ. ಸದ್ಯ ಘಟನೆಯ ವಿಡಿಯೊ ವೈರಲ್‌ ಆಗಿದೆ.

VISTARANEWS.COM


on

Viral News
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಡೆಹ್ರಾಡೂನ್: ಒಂದಷ್ಟು ಜನರ ಗುಂಪು ಮೊಬೈಲ್‌ ಅಂಗಡಿಯಾತನನ್ನು ರಸ್ತೆಗೆಳೆದು ಸರಿಯಾಗಿ ಥಳಿಸುತ್ತಾರೆ. ಮಹಿಳೆಯರೂ ಆತನಿಗೆ ಧರ್ಮದೇಟು ನೀಡುತ್ತಾರೆ. ಉತ್ತರಾಖಂಡದ ಹಲ್ದ್ವಾನಿಯಲ್ಲಿ ನಡೆದ ಈ ಘಟನೆಯ ವಿಡಿಯೊ ಸದ್ಯ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಅಷ್ಟಕ್ಕೂ ಜನರ ಗುಂಪು ಯಾಕೆ ಮೊಬೈಲ್‌ ಅಂಗಡಿಯಾತನನ್ನು ಥಳಿಸಿದ್ದು? ಏನಿದು ಘಟನೆ? ನಿಮ್ಮ ಎಲ್ಲ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ (Viral News).

ಘಟನೆಯ ಹಿಂದೆ ಲವ್‌ ಜಿಹಾದ್‌ನ ಶಂಕೆ ವ್ಯಕ್ತವಾಗುತ್ತಿದೆ. ಹಲ್ಲೆಗೊಳಗಾದ ಮುಸ್ಲಿಂ ಯುವ ಲವ್‌ ಜಿಹಾದ್‌ಗೆ ಪ್ರಯತ್ನಿಸುತ್ತಿದ್ದ. ಅದನ್ನು ರೆಡ್‌ ಹ್ಯಾಂಡಾಗಿ ಹಿಡಿದ ಸ್ಥಳೀಯರು ಆತನಿಗೆ ತಕ್ಕ ಶಾಸ್ತಿ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಗುರುವಾರ (ಏಪ್ರಿಲ್ 25) ಈ ಘಟನೆ ನಡೆದಿದೆ.

ಅನಿಲ್ ಶರ್ಮಾ ಎನ್ನುವವರು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ 1.39 ನಿಮಿಷಗಳ ಈ ವಿಡಿಯೊ ಹಂಚಿಕೊಂಡಿದ್ದಾರೆ. “ಉತ್ತರಾಖಂಡದ ಹಲ್ದ್ವಾನಿಯಲ್ಲಿ ನಡೆದ ಘಟನೆ ಇದು. ಹಿಂದೂಗಳು ಮುಸ್ಲಿಮರಿಗೆ ಅಂಗಡಿಗಳನ್ನು ಬಾಡಿಗೆಗೆ ನೀಡುತ್ತಾರೆ. ಬಳಿಕ ಮುಸ್ಲಿಮರು ಲವ್‌ ಜಿಹಾದ್‌ ಆರಂಭಿಸುತ್ತಾರೆ. ಇಲ್ಲೂ ಆಗಿದ್ದು ಅದೇ. ಮೊಬೈಲ್ ಅಂಗಡಿಯನ್ನು ನಡೆಸುತ್ತಿದ್ದ ಆರೋಪಿ ಅಥರುದ್ದೀನ್‌ ರೀಚಾರ್ಜ್‌ಗಾಗಿ ತನ್ನ ಬಳಿಗೆ ಬರುವ ಹಿಂದು ಹುಡುಗಿಯರಿಗೆ ಅಶ್ಲೀಲ ಸಂದೇಶ ಕಳುಹಿಸುತ್ತಿದ್ದ” ಎಂದು ಅವರು ಬರೆದುಕೊಂಡಿದ್ದಾರೆ.

ಘಟನೆಯ ವಿವರ

ಈ ಪ್ರಕರಣವು ಹಲ್ದ್ವಾನಿಯ ಕೊಟ್ವಾಲಿಯಲ್ಲಿ ನಡೆದಿದೆ. ಅಲ್ಲಿ ವಾಸಿಸುವ ಮಹಿಳೆಯೊಬ್ಬರು ಏಪ್ರಿಲ್ 25ರಂದು ಪೊಲೀಸರಿಗೆ ದೂರು ನೀಡಿದ್ದು, ತನ್ನ 17 ವರ್ಷದ ಮಗಳು ಕೆಲವು ದಿನಗಳ ಹಿಂದೆ ಮೊಬೈಲ್ ಫೋನ್ ರೀಚಾರ್ಜ್ ಮಾಡಲು ಅಥರುದ್ದೀನ್‌ನ ‘ದೆಹಲಿ ಮೊಬೈಲ್ ಶಾಪ್’ ತೆರಳಿದ್ದಳು. ಬಳಿಕ ಆತ ಮಗಳ ಮೊಬೈಲ್‌ಗೆ ಅಶ್ಲೀಲ ಮೆಸೇಜ್‌ ಕಳುಹಿಸಲು ಆರಂಭಿಸಿದ್ದ ಎಂದು ಆರೋಪಿಸಿದ್ದರು. ಜತೆಗೆ ಮೆಸೇಜ್‌ನ ಸ್ಕ್ರೀನ್‌ ಶಾಟ್‌ ಒದಗಿಸಿದ್ದರು.

ಅಪ್ರಾಪ್ತ ಬಾಲಕಿ ಸಂದೇಶಗಳಲ್ಲಿ ಅಥರುದ್ದೀನ್‌ನನ್ನು ಪದೇ ಪದೆ ‘ಸಹೋದರ’ ಎಂದೇ ಕರೆದಿರುವುದು ಕಂಡು ಬಂದಿದೆ. ಆದಾಗ್ಯೂ ಅವನು ಆಕೆ ಸಹೋದರ ಎಂದು ಕರೆಯುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದ. ಮಾತ್ರವಲ್ಲ ತನ್ನೊಂದಿಗೆ ಸ್ನೇಹ ಬೆಳೆಸಲು ಒತ್ತಾಯಿಸಿದ್ದ. ತನ್ನ ಕನಸಿನಲ್ಲಿ ನಿನ್ನನ್ನು ನೋಡಿದ್ದೇನೆ ಎಂದೂ ಪೂಸಿ ಹೊಡೆದಿದ್ದ. ತನ್ನನ್ನು ಸಿಖ್ ಎಂದು ಉಲ್ಲೇಖಿಸುವ ಮೂಲಕ ಅಪ್ರಾಪ್ತ ಬಾಲಕಿಯನ್ನು ಮೋಸಗೊಳಿಸಲು ಪ್ರಯತ್ನಿಸಿದ್ದಾನೆ ಎಂದು ಮಹಿಳೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಇಲ್ಲಿಗೇ ಮುಗಿದಿಲ್ಲ

ಅಥರುದ್ದೀನ್‌ ಕಿರುಕುಳ ಅಲ್ಲಿಗೆ ನಿಂತಿರಲಿಲ್ಲ. ಆತ ಅವಳನ್ನು ಕಾಲೇಜು ನಿಲ್ದಾಣದವರೆಗೂ ಹಿಂಬಾಲಿಸಿದ್ದ. ಜತೆಗೆ ದಾರಿಯಲ್ಲಿ ಅವಳ ಕೈಯನ್ನು ಹಿಡಿಯಲು ಪ್ರಯತ್ನಿಸಿದ್ದ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಆತನ ಕಿರುಕುಳದಿಂದ ಮಗಳು ಭಯಗೊಂಡಿದ್ದಾಳೆ ಮತ್ತು ಮಾನಸಿಕ ಖಿನ್ನತೆಗೆ ಜಾರಿದ್ದಾಳೆ. ಸರಿಯಾಗಿ ಊಟವನ್ನೂ ಮಾಡುತ್ತಿಲ್ಲ ಎಂದು ಮಹಿಳೆ ಬಹಿರಂಗಪಡಿಸಿದ್ದಾರೆ. ದೂರಿನಲ್ಲಿ ಮುಸ್ಲಿಂ ಯುವಕನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ. ಸದ್ಯ ಪೊಲೀಸರು ಅಥರುದ್ದೀನ್‌ನನ್ನು ವಶಕ್ಕೆ ಪಡೆದಿದ್ದಾರೆ. ಘಟನೆ ಬಗ್ಗೆ ತನಿಖೆ ಆರಂಭವಾಗಿದೆ.

ಇದನ್ನೂ ಓದಿ: Love jihad? : ಮೆಸೇಜ್‌ನಲ್ಲೇ ಹಿಂದು ಯುವತಿಯರನ್ನು ಸೆಳೆಯುತ್ತಿದ್ದ ಖದೀಮ ಫಯಾಜ್‌ಗೆ ಗೂಸಾ!

ಇತರರೊಂದಿಗೂ ಇದೇ ವರ್ತನೆ

ಘಟನೆ ಬಗ್ಗೆ ಬಜರಂಗ ದಳದ ಕಾರ್ಯಕರ್ತ ಜೋಗಿಂದರ್‌ ಸಿಂಗ್‌ ರಾಣಾ ಹೆಚ್ಚಿನ ಮಾಹಿತಿ ನೀಡಿದ್ದಾರೆ. ʼʼಆರೋಪಿ ಅಥರುದ್ದೀನ್‌ ಹಲ್ದ್ವಾನಿಯ ಮಖಾನಿ ರಸ್ತೆಯಲ್ಲಿ ತನ್ನ ಕುಟುಂಬದೊಂದಿಗೆ ವಾಸವಾಗಿದ್ದಾನೆ. ಈತ ಸಂತ್ರಸ್ತೆಗಿಂತ 10 ವರ್ಷ ಹಿರಿಯವನು. ತನ್ನ ತಂಗಿಯ ವಯಸ್ಸಿನ ಬಾಲಕಿ ಜತೆ ಅನುಚಿತವಾಗಿ ವರ್ತಿಸಿದ್ದಾನೆʼʼ ಎಂದು ಹೇಳಿದ್ದಾರೆ. ʼʼಅಲ್ಲದೆ ಅಂಗಡಿ ನಡೆಸಲು ಆತನ ಬಳಿ ಸೂಕ್ತ ದಾಖಲೆಗಳೇ ಇಲ್ಲ. ಅಲ್ಲದೆ ಆತನ ಮೊಬೈಲ್‌ನಲ್ಲಿ ಇನ್ನೂ ಅನೇಕ ಹಿಂದೂ ಹುಡುಗಿಯರ ಸಂಖ್ಯೆಗಳು ಕಂಡು ಬಂದಿವೆ. ಅವರೊಂದಿಗೆ ಅಶ್ಲೀಲವಾಗಿ ಚಾಟ್‌ ನಡೆಸಿರುವುದು ಕೂಡ ತಿಳಿದು ಬಂದಿದೆʼʼ ಎಂದು ಜೋಗಿಂದರ್‌ ಸಿಂಗ್‌ ರಾಣಾ ಹೇಳಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

Latest

Dog Bite : ಮಗುವಿಗೆ ಕಚ್ಚಿದ ನಾಯಿ; ಬೀದಿ ನಾಯಿಗಳಿಗೆ ಆಹಾರ ನೀಡುತ್ತಿದ್ದ ದಂಪತಿಗೆ ಥಳಿತ, ಇಲ್ಲಿದೆ ವಿಡಿಯೊ

Dog Bite: ಮಾಧ್ಯಮಗಳ ವರದಿಗಳ ಪ್ರಕಾರ, ನಾಯಿಯ ಕಡಿತಕ್ಕೆ ಒಳಗಾಗ ಮಗು ಗಂಭೀರವಾಗಿ ಗಾಯಗೊಂಡಿದೆ. ಘಟನೆಯ ನಂತರ ನಿವಾಸಿಗಳೆಲ್ಲರೂ ಒಟ್ಟಿಗೆ ಜಮಾಯಿಸಿ ಆ ಸೊಸೈಟಿಯಲ್ಲಿ ವಾಸಿಸುವ ನಾಯಿಗಳಿಗೆ ಆಹಾರ ನೀಡುವವರ ವಿರುದ್ಧ ಪ್ರತಿಭಟಿಸಿದರು. ನಾಯಿಗೆ ಆಹಾರ ಹಾಕುವ ದಂಪತಿ ಸೇರಿ ಹಲವರ ಮೇಲೆ ದೂರು ದಾಖಲಿಸಿದ್ದಾರೆ.

VISTARANEWS.COM


on

Dog bite
Koo

ನವ ದೆಹಲಿ: ನೋಯ್ಡಾದ ಸೆಕ್ಟರ್ -70 ರ (Noida Society) ವಸತಿ ಸೊಸೈಟಿಯಲ್ಲಿ ಬಾಲಕನೊಬ್ಬನಿಗೆ ಬೀದಿ ನಾಯಿಯೊಂದು ಕಚ್ಚಿದ ಪರಿಣಾಮ (Dog Bite) ಕೆರಳಿ ಕೆಂಡವಾದ ಅಪಾರ್ಟ್​ಮೆಂಟ್ ನಿವಾಸಿಗಳು, ಬೀದಿ ನಾಯಿಗಳಿಗೆ ಆಹಾರ ನೀಡುತ್ತಿದ್ದ ದಂಪತಿ ಮೇಲೆ ಹಲ್ಲೆ ನಡೆಸಿದ್ದಾರೆ ಈ ಘಟನೆಯ ವಿಡಿಯೊ ವೈರಲ್​ ಆಗಿದ್ದು ಪರ- ವಿರೋಧ ಚರ್ಚೆ ಜೋರಾಗಿ ನಡೆದಿದೆ. ಅದಕ್ಕಿಂತಲೂ ಹೆಚ್ಚಾಗಿ ಅಪಾರ್ಟ್​ಮೆಂಟ್​ ಒಳಗೆ ದೊಡ್ಡ ಸಂಖ್ಯೆಯಲ್ಲಿ ಜನರ ಏಕಾಏಕಿ ಜಮಾಯಿಸಿದ್ದು ಕಂಡು ಸಾಕಷ್ಟು ಜನರು ಇಂಥದ್ದು ನಡೆಯಬಾರದು ಎಂದು ಅಭಿಪ್ರಾಯಪಟ್ಟಿದ್ದಾರೆ.

ಮಾಧ್ಯಮಗಳ ವರದಿಗಳ ಪ್ರಕಾರ, ನಾಯಿಯ ಕಡಿತಕ್ಕೆ ಒಳಗಾಗ ಮಗು ಗಂಭೀರವಾಗಿ ಗಾಯಗೊಂಡಿದೆ. ಘಟನೆಯ ನಂತರ ನಿವಾಸಿಗಳೆಲ್ಲರೂ ಒಟ್ಟಿಗೆ ಜಮಾಯಿಸಿ ಆ ಸೊಸೈಟಿಯಲ್ಲಿ ವಾಸಿಸುವ ನಾಯಿಗಳಿಗೆ ಆಹಾರ ನೀಡುವವರ ವಿರುದ್ಧ ಪ್ರತಿಭಟಿಸಿದರು. ನಾಯಿಗೆ ಆಹಾರ ಹಾಕುವ ದಂಪತಿ ಸೇರಿ ಹಲವರ ಮೇಲೆ ದೂರು ದಾಖಲಿಸಿದ್ದಾರೆ.

ಇದನ್ನೂ ಓದಿ: Fireworks Blast : ಶಿವಕಾಶಿಯ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; 8 ಮಂದಿಯ ದುರ್ಮರಣ

ಉದ್ರಿಕ್ತ ಗುಂಪು ಶುಭಂ ಮತ್ತು ಸಂಕಲಿತಾ ಎಂಬ ಹೆಸರಿನ ದಂಪತಿ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಅವರು ಕೂಡ ಪೊಲೀಸ್​ ದೂರು ನೀಡಿದ್ದಾರೆ. ಇದೆ ವೇಳೆ ಪರಿಸ್ಥಿತಿ ನಿಯಂತ್ರಿಸಲು ಬಂದ ಪೊಲೀಸರನ್ನು ತಳ್ಳಿದ್ದಾರೆ ಎನ್ನಲಾಗಿದೆ. ಕರ್ತವ್ಯದಲ್ಲಿದ್ದ ಕಾನ್ಸ್​ಟೇಬಲ್​​ಗಳು ಈ ಬಗ್ಗೆ ದೂರು ನೀಡಿದ್ದಾರೆ. ಗಲಾಟೆ ವೇಳೆ ಕೆಲವರು ಸಿಸಿ ಟಿವಿ ಕ್ಯಾಮೆರಾಗಳನ್ನು ಆಫ್ ಮಾಡಲು ಸಹ ಪ್ರಯತ್ನಿಸಿದ್ದಾರೆ ಎನ್ನಲಾಗಿದೆ.

ದಂಪತಿಯ ಆರೋಪ

ಗಲಾಟೆಯನ್ನು ರೆಕಾರ್ಡ್ ಮಾಡಲು ಮುಂದಾದಾಗ ಅವರಲ್ಲಿ ಒಬ್ಬರು ನನ್ನ ಹೆಂಡತಿಯ ಫೋನ್ ಕಸಿದುಕೊಳ್ಳಲು ಪ್ರಯತ್ನಿಸಿದರು. ಅಲ್ಲದೆ ಅವಳಿಗೆ ಗಾಯ ಮಾಡಿದ್ದಾರೆ ಎಂದು ಶುಭಮ್ ಹೇಳಿದ್ದಾರೆ. ನನ್ನನ್ನು ರಕ್ಷಿಸಲು ಬಂದ ತನ್ನ ಕೆಲವು ಸ್ನೇಹಿತರನ್ನೂ ಎಳೆದಾಡಿದ್ದಾರೆ. ಅದರ ದೃಶ್ಯಗಳನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯಲಾಗಿದೆ ಎಂದು ಅವರು ಆರೋಪಿಸಿದ್ದಾರೆ.

ಪೀಪಲ್ ಫಾರ್ ಅನಿಮಲ್ಸ್ (ಪಿಎಫ್ಎ) ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ, ಗುಂಪಿನ ವೀಡಿಯೊವನ್ನು ಹಂಚಿಕೊಂಡಿದೆ. “ನೋಯ್ಡಾದ ಸೆಕ್ಟರ್ 70 ರ ಪಾನ್ ಒಯಾಸಿಸ್​ನಲ್ಲಿ ಹಿಂಸಾತ್ಮಕ ಗುಂಪು ನಾಯಿಗಳಿಗೆ ಆಹಾರ ಮತ್ತು ಆರೈಕೆ ಮಾಡುವ ಯುವ ದಂಪತಿ ಮೇಲೆ ದಾಳಿ ಮಾಡಿ ಕಾನೂನು ಉಲ್ಲಂಘಿಸಿದೆ. ಪೊಲೀಸರನ್ನು ಸಹ ತಳ್ಳಲಾಗಿದೆ. ಗಲಭೆಕೋರರ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳುವಂತೆ ಕೋರಿದೆ.

ನಾಯಿಗಳಿಗೆ ಸಂತಾನಶಕ್ತಿ ಹರಣ ಚಿಕಿತ್ಸೆ ಮಾಡಿಸಿ ಲಸಿಕೆ ಹಾಕಿದ ಆರೈಕೆದಾರಿಗೆ ಹಲ್ಲೆ ಮಾಡಲಾಗಿದೆ. ಅಶ್ಲೀಲವಾಗಿ ನಿಂದಿಸಲಾಗಿದೆ ಮತ್ತು ಕೊಲೆ ಬೆದರಿಕೆ ಹಾಕಲಾಗಿದೆ ಎಂದು ಪ್ರಾಣಿ ಕಲ್ಯಾಣ ಸಂಸ್ಥೆ ಹೇಳಿದೆ.

Continue Reading

ಕ್ರೀಡೆ

MS Dhoni: ಧೋನಿಗೆ ವಿಶೇಷ ಉಡುಗೊರೆ ನೀಡಿದ ಅಭಿಮಾನಿ; ವಿಡಿಯೊ ವೈರಲ್​

MS Dhoni: ಯಶ್​ ಎನ್ನುವ ಧೋನಿಯ ಅಪ್ಪಟ ಅಭಿಮಾನಿ ತಾನು ಬಿಡಿಸಿದ ಧೋನಿಯ ಚಿತ್ರವನ್ನು ಅವರಿಗೆ ಸ್ಮರಣಿಕೆಯಾಗಿ ನೀಡಿದ್ದಾನೆ. ಇದರ ವಿಡಿಯೊ ವೈರಲ್(Viral Video)​ ಆಗಿದೆ.

VISTARANEWS.COM


on

MS Dhoni
Koo

ಚೆನ್ನೈ: ಟೀಮ್​ ಇಂಡಿಯಾದ ಮಾಜಿ ಆಟಗಾರ ಮಹೇಂದ್ರ ಸಿಂಗ್​ ಧೋನಿ(MS Dhoni) ಯಾವಾಗಲೂ ತಮ್ಮ ವ್ಯಕ್ತಿತ್ವದಿಂದ ಅವರ ಅಭಿಮಾನಿಗಳ ಹೃದಯವನ್ನು ಗೆಲ್ಲುತ್ತಾರೆ. ಹೀಗಾಗಿ ಧೋನಿ ಎಂದರೆ ಅಭಿಮಾನಿಗಳಿಗೊಂದು ಎಮೋಷನ್ (ಭಾವನೆ). ಅವರು ಅಪಾರ ಸಂಖ್ಯೆಯ ಅಭಿಮಾನಿ ಬಳಗವನ್ನು(MS Dhoni Fan) ಹೊಂದಿದ್ದಾರೆ. ಅವರ ಭೇಟಿಗಾಗಿ ಅಭಿಮಾನಿಗಳು ಚಾತಕ ಪಕ್ಷಿಗಳಂತೆ ಕಾದು ಕುಳಿತಿರುತ್ತಾರೆ. ಕೆಲ ಅಭಿಮಾನಿಗಳು ಧೋನಿಯನ್ನು ಭೇಟಿಯಾಗಿ ಅವರಿಗೆ ವಿಶೇಷ ಉಡುಗೊರೆಯನ್ನು ನೀಡುತ್ತಾರೆ. ಇದೀಗ ಚೆನ್ನೈಯಲ್ಲಿ ಧೋನಿಯ ಅಪ್ಪಟ ಅಭಿಮಾನಿಯೊಬ್ಬ ತಾನು ಬಿಡಿಸಿದ ಧೋನಿಯ ಚಿತ್ರವನ್ನು ಅವರಿಗೆ ಸ್ಮರಣಿಕೆಯಾಗಿ ನೀಡಿದ್ದಾನೆ. ಇದರ ವಿಡಿಯೊ ವೈರಲ್(Viral Video)​ ಆಗಿದೆ.

ಯಶ್​ ಎನ್ನುವ ಈ ಅಭಿಮಾನಿ ಧೋನಿ ಕೆಲ ವರ್ಷಗಳ ಹಿಂದೆ ಭಾರತ ತಂಡ ಪರ ಆಡುತ್ತಿದ್ದಾಗ ಮತ್ತು ಈಗ ಇರುವ ಅವರ ಸ್ಟ್ರೈಲ್​ನ 2 ಚಿತ್ರಗಳನ್ನು ಬಿಡಿಸಿ ಇದರಲ್ಲೊಂದು ಚಿತ್ರಕಲೆಯನ್ನು ಧೋನಿಗೆ ನೀಡಿದ್ದಾನೆ. ಇದರಲ್ಲಿ ಆತನ ಹಸ್ತಾಕ್ಷರ ಕೂಡ ಹಾಕಲಾಗಿದೆ. ಇನ್ನೊಂದು ಚಿತ್ರವನ್ನು ಧೋನಿಯಿಂದ ಆಟೋಗ್ರಾಫ್​ ಹಾಕಿಸಿ ತನ್ನ ಬಳಿಯೆ ಇರಿಸಿಕೊಂಡಿದ್ದಾನೆ.

ಧೋನಿ ಅವರು ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಹೇಳಿ ಕೆಳವು ವರ್ಷಗಳಾಗಿವೆ. ಕೇವಲ ಐಪಿಎಲ್​ ಟೂರ್ನಿಯಲ್ಲಿ(IPL 2024) ಮಾತ್ರ ಆಡುತ್ತಿದ್ದಾರೆ. ಕಳೆದ ವರ್ಷವೇ ಧೋನಿ ಅವರು ಐಪಿಎಲ್​ಗೆ ವಿದಾಯ ಹೇಳಲು ನಿರ್ಧರಿಸಿದ್ದರು. ಆದರೆ ಅಭಿಮಾನಿಗಳ ಒತ್ತಾಯದ ಮೇರೆಗೆ ತಮ್ಮ ನಿವೃತ್ತಿಯನ್ನು ಮುಂದೆ ಹಾಕಿದ್ದರು. ಈ ಬಾರಿಯ ಟೂರ್ನಿ ಅವರಿಗೆ ವಿದಾಯದ ಟೂರ್ನಿಯಾಗಲಿದೆ. ಈ ಮೂಲಕ ಧೋನಿ ಎಲ್ಲ ಮಾದರಿಯ ಕ್ರಿಕಟ್​ಗೂ ಗುಡ್​ಬೈ ಹೇಳಲಿದ್ದಾರೆ.

ಇದನ್ನೂ ಓದಿ MS Dhoni : ಮಹೇಂದ್ರ ಸಿಂಗ್​ ಧೋನಿಗೆ ಗಾಯ, ಆಂತರಿಕ ಮಾಹಿತಿ ಬಹಿರಂಗ

ಈ ಬಾರಿಯ ಐಪಿಎಲ್​ ಆರಂಭದ ವೇಳೆಯೂ ಅಭಿಮಾನಿಯೊಬ್ಬ ಧೋನಿಯನ್ನು ಭೇಟಿಯಾಗಿ ವಿಷ್ಣುವಿನ ಮೂರ್ತಿಯನ್ನು ಉಡುಗೊರೆಯಾಗಿ ನೀಡಿದ್ದ. ಧೋನಿ ಚೆನ್ನೈಯ ಎಂ.ಎ ಚಿದಂಬರಂ ಸ್ಟೇಡಿಯಂನಲ್ಲಿ ಐಪಿಎಲ್​ ಸಿದ್ಧತೆಯದ್ದ ವೇಳೆ ಅಭಿಮಾನಿಯೊಬ್ಬರು ಭೇಟಿ ಮಾಡಿ ಸಾಲು ಹೊದಿಸಿ ಸನ್ಮಾನಿಸಿದ್ದ. ಜತೆಗೆ ಶ್ರೀ ವಿಷ್ಣುವಿನ ಮೂರ್ತಿಯನ್ನು ನೀಡಿದ್ದ. ಇದನ್ನು ಧೋನಿ ಸಂತಸದಿಂದಲೇ ಸ್ವೀಕರಿಸಿದ್ದರು.

ಧೋನಿ ಸ್ನಾಯು(Dhoni Muscle Tear) ನೋವಿನಿಂದ ಬಳಲುತ್ತಿದ್ದರೂ ಕೂಡ ತಂಡಕ್ಕೆ ಹಿನ್ನಡೆಯಾಗಬಾರದೆಂದು ವೈದ್ಯರ ಸಲಹೆಯನ್ನು ಲೆಕ್ಕಿಸದೇ ಈ ಬಾರಿಯ ಐಪಿಎಲ್​ ಆಡುತ್ತಿದ್ದಾರೆ ಎಂದು ತಂಡದ ಮೂಲಗಳು ಮಾಹಿತಿ ನೀಡಿದೆ. “ಧೋನಿ ತನ್ನ ಗಾಯವನ್ನು ಮರೆಮಾಚಿ ಆಡುತ್ತಿದ್ದಾರೆ. ಈ ವಿಚಾರ ಯಾರಿಗೂ ತಿಳಿದಿಲ್ಲ. ಅವರನ್ನು ಟೀಕಿಸುವವರಿಗೆ ಅವರು ಈ ತಂಡಕ್ಕಾಗಿ ಮಾಡುತ್ತಿರುವ ತ್ಯಾಗದ ಬಗ್ಗೆ ತಿಳಿದಿಲ್ಲ ”ಎಂದು ಸಿಎಸ್‌ಕೆ ಮೂಲಗಳು ತಿಳಿಸಿತ್ತು.

Continue Reading

ವೈರಲ್ ನ್ಯೂಸ್

Viral Video: ಬಸ್‌, ರೈಲಿನಲ್ಲಿ ಮಾತ್ರ ಅಲ್ಲ.. ಫ್ಲೈಟ್‌ನಲ್ಲೂ ನಡೆಯುತ್ತೆ ಸೀಟಿಗಾಗಿ ಮಾರಾಮಾರಿ

Viral Video: ತೈವಾನ್‌ನಿಂದ ಕ್ಯಾಲಿಫೋರ್ನಿಯಾ ಹೋಗುತ್ತಿದ್ದ EVA ವಿಮಾನದಲ್ಲಿ ಪ್ರಯಾಣಿಕರಿಬ್ಬರು ಸೀಟಿಗಾಗಿ ಮಾರಾಮಾರಿ ನಡೆಸಿದ್ದಾರೆ. ಈ ಗಲಾಟೆಯ ದೃಶ್ಯವನ್ನು ಸಹ ಪ್ರಯಾಣಿಕರೊಬ್ಬರು ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

VISTARANEWS.COM


on

Viral video
Koo

ಕ್ಯಾಲಿಪೋರ್ನಿಯಾ: ಬಸ್‌ ರೈಲಿನಲ್ಲಿ ಸೀಟಿಗಾಗಿ ಪ್ರಯಾಣಿಕರ ನಡುವೆ ಜಗಳ ಆಗುವುದನ್ನು ನಾವು ಅದೆಷ್ಟೋ ಬಾರಿ ಕಂಡಿರುತ್ತೇವೆ. ಆದರೆ ಇಲ್ಲಿ ವಿಮಾನ(Flight)ದಲ್ಲಿಯೂ ಪ್ರಯಾಣಿಕರು ಸೀಟಿಗಾಗಿ ಹೊಡೆದಾಟ ನಡೆಸಿರುವ ಅಪರೂಪ ಘಟನೆ ವರದಿಯಾಗಿದೆ. ತೈವಾನ್‌(Taiwan)ನಿಂದ ಕ್ಯಾಲಿಫೋರ್ನಿಯಾ(California) ಹೋಗುತ್ತಿದ್ದ EVA ವಿಮಾನದಲ್ಲಿ ಪ್ರಯಾಣಿಕರಿಬ್ಬರು ಸೀಟಿಗಾಗಿ ಮಾರಾಮಾರಿ ನಡೆಸಿದ್ದಾರೆ. ಈ ಗಲಾಟೆಯ ದೃಶ್ಯವನ್ನು ಸಹ ಪ್ರಯಾಣಿಕರೊಬ್ಬರು ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್‌(Viral Video) ಆಗಿದೆ.

ಘಟನೆ ವಿವರ:

ಸುಮಾರು 11.5ಗಂಟೆಗಳ ಸುದೀರ್ಘ ಪ್ರಯಾಣ ಬೆಳೆಸಿದ್ದ EVA ವಿಮಾನದಲ್ಲಿ ಮಂಗಳವಾರ ಈ ಘಟನೆ ನಡೆದಿದೆ ಎಂದು ಪತ್ರಿಕೆಯೊಂದು ವರದಿ ಮಾಡಿದೆ. ಪತ್ರಿಕೆಯ ವರದಿ ಪ್ರಕಾರ ಪಕ್ಷದಲ್ಲಿ ಕುಳಿತಿದ್ದ ವ್ಯಕ್ತಿ ನಿರಂತರವಾಗಿ ಕೆಮ್ಮುತ್ತಿದ್ದ ಕಾರಣ ಒಬ್ಬ ಪ್ರಯಾಣಿಕ ಖಾಲಿ ಇದ್ದ ಸೀಟ್‌ನಲ್ಲಿ ಹೋಗಗಿ ಕುಳಿತುಕೊಳ್ಳುತ್ತಾನೆ. ಆಗ ಮೊದಲೇ ಆ ಸೀಟ್‌ನಲ್ಲಿ ಕುಳಿತಿದ್ದ ವ್ಯಕ್ತಿ ಅಲ್ಲಿಗೆ ಬಮದು ತಕರಾರು ತೆಗೆದಿದ್ದಾನೆ. ಆಗ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಜಗಳವಾಗಿದೆ. ಜಗಳ ವಿಕೋಪಕ್ಕೆ ತಿರುಗಿ ಇಬ್ಬರೂ ಪರಸ್ಪರ ಬಡಿದಾಡಿಕೊಂಡಿದ್ದಾರೆ.

ಪ್ರಯಾಣಿಕರ ಜಗಳ ಬಿಡಿಸಲು ವಿಮಾನ ಸಿಬ್ಬಂದಿ ಹರಸಾಹಸ ಪಟ್ಟರು. ಇಬ್ಬರು ಹಿಡಿದೆಳೆದು ಜಗಳ ನಿಲ್ಲಿಸಲು ಅವರು ಎಲ್ಲಾ ಪ್ರಯಾತ್ನ ನಡೆಸಿದರು. ಮತ್ತೊಂದೆಡೆ ಇವರಿಬ್ಬರ ಜಗಳ ಕಂಡು ಇತರೆ ಪ್ರಯಾಣಿಕರು ಗಾಬರಿಗೊಂಡು ಕಿರುಚಾಡುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ. ಕೊನೆಗೆ ಇಬ್ಬರು ಸಮಾಧಾನಪಡಿಸಿ ಪರಸ್ಥಿತಿ ತಿಳಿಗೊಳಿಸುವಲ್ಲಿ ಸಿಬ್ಬಂದಿ ಸುಸ್ತು ಬಿದ್ದಿದ್ದರು. ಸ್ಯಾನ್‌ ಫ್ರಾನ್ಸಿಸ್ಕೋಕ್ಕೆ ವಿಮಾನ ಬಂದಿಳಿಯುತ್ತಿದ್ದಂತೆ ಇಬ್ಬರನ್ನೂ ಪೊಲೀಸರಿಗೆ ಒಪ್ಪಿಸಲಾಗಿದೆ.

ಈ ನಡುವೆ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿರುವ ಈ ವಿಡಿಯೋ 34,೦೦೦ ವ್ಯೂವ್ಸ್‌ ಪಡೆದುಕೊಂಡಿದ್ದು, ವಿಮಾನ ಸಿಬ್ಬಂದಿಯ ತಾಳ್ಮೇ ಮತ್ತು ಕರ್ತವ್ಯ ಪ್ರಜ್ಞೆಗೆ ಜನ ಸಲಾಂ ಹೇಳಿದ್ದಾರೆ. ಇನ್ನು ಆರೋಪಿಗಳಿಗೆ ಶಿಕ್ಷೆ ಆಗಿದೆಯೇ? ಅವರ ವಿರುದ್ಧ ಯಾವ ಕಾನೂನು ಕ್ರಮ ಕೈಗೊಳ್ಳಲಾಯಿತು ಎಂದು ಎಕ್ಸ್‌ ಬಳಕೆದಾರರೊಬ್ಬರು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ:Viral Video: ಪರ್ಸ್‌ ಎಗರಿಸಿ ಖುಷಿಯಲ್ಲಿದ್ದ ಕಳ್ಳನಿಗೆ ಕಾದಿತ್ತು ಬಿಗ್‌ ಶಾಕ್‌! ವಿಡಿಯೋ ಫುಲ್‌ ವೈರಲ್‌

ವಿಮಾನ ಪ್ರಯಾಣದ ವೇಳೆ ಅಶಿಸ್ತು ತೋರಿಸುವವರ ಬಗ್ಗೆ ವರದಿಯಾಗುವ ಪ್ರಕರಣಗಳು ಹೆಚ್ಚುತ್ತಿವೆ. ಏರ್ ಇಂಡಿಯಾ ವಿಮಾನದಲ್ಲೂ ಇಂತಹದ್ದೇ ಪ್ರಕರಣವೊಂದು ನಡೆದಿತ್ತು. ಪ್ರಯಾಣಿಕನೊಬ್ಬ ಮಲ-ಮೂತ್ರ ವಿಸರ್ಜನೆ ಮಾಡಿ, ಗಲೀಜು ಸೃಷ್ಟಿಸಿ ಬಂಧಿತನಾಗಿದ್ದ. ಮುಂಬಯಿ-ದೆಹಲಿ ಮಾರ್ಗದ ಎಐಸಿ 866 ಎಂಬ ವಿಮಾನದಲ್ಲಿ ಪ್ರಯಾಣ ಮಾಡುತ್ತಿದ್ದ ರಾಮ್ ಸಿಂಗ್ ಇಂಥ ಹೊಲಸು ಮಾಡಿದ್ದ. ಪೊಲೀಸರು ಎಫ್ ಐಆರ್ ದಾಖಲು ಮಾಡಿದ್ದಾರೆ.

Continue Reading

ಕ್ರೀಡೆ

Andre Russell: ಸ್ಟಾರ್​​ ನಟಿಯೊಂದಿಗೆ ಕೇಸರಿ ಲುಂಗಿಯಲ್ಲಿ ಮಸ್ತ್​ ಸ್ಟೆಪ್ಸ್ ಹಾಕಿದ ಆಂಡ್ರೆ ರಸೆಲ್

Andre Russell: ರಸೆಲ್​ ಕೇಸರಿ ಬಣ್ಣದ ಲುಂಗಿ ತೊಟ್ಟು, ಕಪ್ಪು ಬಣ್ಣದ ಬನಿಯನ್ ಹಾಗೂ ಸ್ಟೈಲಿಶ್ ಶರ್ಟ್​ ಧರಿಸಿ ಎಲ್ಲರ ಗಮನ ತನ್ನತ್ತ ಸೆಳೆದಿದ್ದಾರೆ. ಅವಿಕಾ ಗೋರ್ ನೀಲಿ ಸೀರೆಯಲ್ಲಿ ಮಿಂಚಿದ್ದಾರೆ ಮತ್ತು ಬೋಲ್ಡ್​ ಆಗಿ ಸೊಂಟ ಬಳುಕಿಸಿದ್ದಾರೆ. ಈ ಜೋಡಿಯ ಡ್ಯಾನ್ಸ್ ಕಂಡ ಅಭಿಮಾನಿಗಳು ಫಿದಾ ಆಗಿದ್ದಾರೆ.

VISTARANEWS.COM


on

Andre Russell
Koo

ಮುಂಬಯಿ: ವೆಸ್ಟ್​ ಇಂಡೀಸ್​ ತಂಡ ಸ್ಫೋಟಕ ಬ್ಯಾಟರ್​, ಕೆಕೆಆರ್(KKR)​ ತಂಡದ ಆಂಡ್ರೆ ರಸೆಲ್(Andre Russell) ಬಾಲಿವುಡ್​ ನಟಿ ಅವಿಕಾ ಗೋರ್(Avika Gor) ಜತೆ ಲುಂಗಿಯಲ್ಲಿ ಮಸ್ತ್​ ಸ್ಟೆಪ್ಸ್ ಹಾಕಿದ್ದಾರೆ. ​’ಲಡ್ಕಿ ತು ಕಮಲ್ ಕಿ’ ಎನ್ನುವ ಹಾಡಿಗೆ ರೆಸೆಲ್ ಅವಿಕಾ ಸೇರಿ ಹೆಜ್ಜೆ ಹಾಕಿರುವ ಈ ಹಾಡು ಯೂಟ್ಯೂಬ್​ನಲ್ಲಿ ಇಂದು(ಮೇ 9 ಗುರುವಾರ) ಬಿಡುಗಡೆಯಾಗಿದ್ದು, ಎಲ್ಲಡೆ ಸಂಚಲನ ಮೂಡಿಸಿದೆ.

ರಸೆಲ್​ ಕೇಸರಿ ಬಣ್ಣದ ಲುಂಗಿ ತೊಟ್ಟು, ಕಪ್ಪು ಬಣ್ಣದ ಬನಿಯನ್ ಹಾಗೂ ಸ್ಟೈಲಿಶ್ ಶರ್ಟ್​ ಧರಿಸಿ ಎಲ್ಲರ ಗಮನ ತನ್ನತ್ತ ಸೆಳೆದಿದ್ದಾರೆ. ಅವಿಕಾ ಗೋರ್ ನೀಲಿ ಸೀರೆಯಲ್ಲಿ ಮಿಂಚಿದ್ದಾರೆ ಮತ್ತು ಬೋಲ್ಡ್​ ಆಗಿ ಸೊಂಟ ಬಳುಕಿಸಿದ್ದಾರೆ. ಈ ಜೋಡಿಯ ಡ್ಯಾನ್ಸ್ ಕಂಡು ಅಭಿಮಾನಿಗಳು ಕೂಡ ಮೆಚ್ಚುಗೆ ಸೂಚಿಸಿದ್ದಾರೆ. ಅವಿಕಾ ಗೋರ್ ಭಾರತೀಯ ನಟಿಯಾಗಿದ್ದು, ಅವರು ಮುಖ್ಯವಾಗಿ ಹಿಂದಿ ಮತ್ತು ತೆಲುಗು ಚಲನಚಿತ್ರಗಳು ಮತ್ತು ಕಿರುತೆರೆಯಲ್ಲಿ ನಟಿಸುತ್ತಾರೆ.

ವಿಂಡೀಸ್​ ಆಟಗಾರರು ಕ್ರಿಕೆಟ್​ ಜತೆ ನಟನೆ, ಸಂಗೀತ, ಡ್ಯಾನ್ಸ್​ನಲ್ಲಿ ಅಪಾರ ಕ್ರೇಜ್​ ಹೊಂದಿರುತ್ತಾರೆ. ಈಗಾಗಲೇ ಯೂನಿವರ್ಸಲ್​ ಬಾಸ್ ಖ್ಯಾತಿಯ​ ಕ್ರಿಸ್ ಗೇಲ್ ಮತ್ತು ಡ್ವೇನ್ ಬ್ರಾವೋ ಹಲವು ಆಲ್ಬಮ್​ ಸಾಂಗ್​ ಮಾಡಿ ಖ್ಯಾತಿಗಳಿಸಿದ್ದಾರೆ. ಇದೀಗ ಈ ಸಾಲಿಗೆ ರಸೆಲ್​ ಕೂಡ ಸೇರಿದ್ದಾರೆ.


ಇತ್ತೀಚಿಗೆ ರಸೆಲ್ ತನ್ನ ಕಾರಿನಲ್ಲಿ ಪ್ರಯಾಣಿಸುವಾಗ ಮತ್ತು ವಿಮಾನ ಪ್ರಯಾಣದ ಸಮಯದಲ್ಲಿ ಶಾರುಖ್​ ಖಾನ್​ ನಟನೆಯ ಡಂಕಿ ಚಲನಚಿತ್ರದ ಅಪ್ರತಿಮ ಹಾಡು “ಲುಟ್ ಪುಟ್ ಗಯಾ” ಹಾಡನ್ನು ಹಾಡಿದ್ದರು. ಈ ವೇಳೆ ರಿಂಕು ಸಿಂಗ್​ ಕೂಡ ರಸೆಲ್​ಗೆ ಸಾಥ್​ ನೀಡಿದ್ದರು. ಈ ವಿಡಿಯೊ ಕೂಡ ವೈರಲ್​ ಆಗಿತ್ತು.

ಈ ಬಾರಿಯ ಐಪಿಎಲ್‌ನಲ್ಲಿ ರಸೆಲ್​ ಕೆಕೆಆರ್​ ಪರ ಬ್ಯಾಟಿಂಗ್​ ಮತ್ತು ಬೌಲಿಂಗ್​ ಎರಡೂ ವಿಭಾಗದಲ್ಲಿಯೂ ಉತ್ತಮ ಪ್ರದರ್ಶನ ತೋರುವ ಮೂಲಕ ಗಮನಸೆಳೆಯುತ್ತಿದ್ದಾರೆ. 11 ಪಂದ್ಯಗಳಲ್ಲಿ 198 ರನ್ ಗಳಿಸಿರುವ ರಸೆಲ್, ಬೌಲಿಂಗ್‌ನಲ್ಲೂ ಮಿಂಚಿ 13 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಸದ್ಯ ಕೆಕೆಆರ್​ 16 ಅಂಕದೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದುಕೊಂಡಿದೆ. ಇನ್ನೊಂದು ಪಂದ್ಯ ಗೆದ್ದರೆ ಪ್ಲೇ ಆಫ್​ ಟಿಕೆಟ್​ ಅಧಿಕೃತಗೊಳ್ಳಲಿದೆ.

ಇದನ್ನೂ ಓದಿ PBKS vs RCB: ಮಳೆಯ ಕೈಯಲ್ಲಿದೆ ಆರ್​ಸಿಬಿ-ಪಂಜಾಬ್​ ಪ್ಲೇ ಆಫ್​ ಭವಿಷ್ಯ

ಅಂಕಪಟ್ಟಿಯಲ್ಲಿ ಕುಸಿದ ಚೆನ್ನೈ


ಬುಧವಾರ ರಾತ್ರಿ ನಡೆದ ಐಪಿಎಲ್​ ಪಂದ್ಯದಲ್ಲಿ ಲಕ್ನೋ ಸೂಪರ್​ ಜೈಂಟ್ಸ್(Lucknow Super Giants)​ ವಿರುದ್ಧ 10 ವಿಕೆಟ್​ಗಳ ಭರ್ಜರಿ ಗೆಲುವು ಸಾಧಿಸಿದ ಸನ್​ರೈಸರ್ಸ್​ ಹೈದರಾಬಾದ್(Sunrisers Hyderabad)​ ತಂಡ ಪ್ಲೇ ಆಫ್​ ಸನಿಹಕ್ಕೆ ಬಂದು ನಿಂತಿದೆ. ಜತೆಗೆ ಅಂಕಪಟ್ಟಿಯಲ್ಲಿಯೂ(IPL 2024 Points Table) ಪ್ರಗತಿ ಸಾಧಿಸಿ ಮೂರನೇ ಸ್ಥಾನಿಯಾಗಿ ಕಾಣಿಸಿಕೊಂಡಿದೆ. ಈ ಹಿಂದೆ ಮೂರನೇ ಸ್ಥಾನಿಯಾಗಿದ್ದ ಹಾಲಿ ಚಾಂಪಿಯನ್​ ಚೆನ್ನೈ ತಂಡ ನಾಲ್ಕನೇ ಸ್ಥಾನಕ್ಕೆ ಕುಸಿದಿದೆ.

ಸದ್ಯ ಚೆನ್ನೈ, ಲಕ್ನೋ ಮತ್ತು ಡೆಲ್ಲಿ ಕ್ಯಾಪಿಟಲ್ಸ್​ ತಂಡಗಳು 12 ಅಂಕಗಳಿಸಿವೆ. ಹೀಗಾಗಿ ಈ ತಂಡಗಳ ಮಧ್ಯೆ ತೀವ್ರ ಪೈಪೋಟಿ ಏರ್ಪಟ್ಟಿದೆ. ರಾಜಸ್ಥಾನ್​ ರಾಯಲ್ಸ್​ ಮತ್ತು ಕೋಲ್ಕತ್ತಾ ನೈಟ್​ ರೈಡರ್ಸ್​ ತಂಡಗಳು ಬಹುತೇಕ ಪ್ಲೇ ಆಫ್​ ಪ್ರವೇಶಿಸುವುದು ಖಚಿತ. ಹೈದರಾಬಾದ್​ಗೆ ಇನ್ನೊಂದು ಪಂದ್ಯ ಗೆದ್ದರೂ ಸಾಕು. ಇಂದು ನಡೆಯುವ ಪಂದ್ಯದಲ್ಲಿ ಆರ್​ಸಿಬಿ ಮತ್ತು ಪಂಜಾಬ್​ ಕಿಂಗ್ಸ್​ ಮುಖಾಮುಖಿಯಾಗಲಿವೆ. ಪ್ಲೇ ಆಫ್​ ಕ್ಷೀಣ ಅವಕಾಶ ಹೊಂದಿರುವ ಉಭಯ ತಂಡಗಳಿಗೂ ಈ ಪಂದ್ಯದಲ್ಲಿ ಗೆಲುವು ಅತ್ಯಗತ್ಯ. ಹೀಗಾಗಿ ಈ ಪಂದ್ಯ ರೋಚಕವಾಗಿ ಸಾಗುವ ನಿರೀಕ್ಷೆಯಿದೆ.

Continue Reading
Advertisement
Akshaya Tritiya 2024
ಧಾರ್ಮಿಕ14 mins ago

Akshaya Tritiya 2024: ದೇಹ ಮತ್ತು ಮನಸ್ಸು ಪರಿಪೂರ್ಣತೆಯನ್ನು ಪಡೆಯುವ ದಿನ ಅಕ್ಷಯ ತೃತೀಯ

America v/s Russia
ವಿದೇಶ22 mins ago

America v/s Russia:ಭಾರತದ ಚುನಾವಣೆಯಲ್ಲಿ ಹಸ್ತಕ್ಷೇಪ; ರಷ್ಯಾ ಆರೋಪಕ್ಕೆ ಅಮೆರಿಕ ಹೇಳಿದ್ದೇನು?

Actor Prabhas
ಸಿನಿಮಾ35 mins ago

Actor Prabhas: ʼಕಣ್ಣಪ್ಪʼ ಚಿತ್ರಕ್ಕೆ ಎಂಟ್ರಿಕೊಟ್ಟ ಪ್ರಭಾಸ್‌; ಹೊಸ ಪೋಸ್ಟರ್‌ ರಿಲೀಸ್‌

Prajwal Revanna Case
ಕ್ರೈಂ38 mins ago

Prajwal Revanna case: ಪ್ರಜ್ವಲ್‌ ರೇವಣ್ಣ ಮೇಲೆ ಸುಳ್ಳು ಆರೋಪ ನೀಡಲು ಒತ್ತಡ: ಮಹಿಳೆ ದೂರು

karnataka SSLC result 2024
ಸಂಪಾದಕೀಯ57 mins ago

ವಿಸ್ತಾರ ಸಂಪಾದಕೀಯ: SSLC Result 2024: ಎಸ್ಸೆಸ್ಸೆಲ್ಸಿ ಫಲಿತಾಂಶ ಕುಸಿತದ ಜೊತೆಗೆ ಸಿಹಿ ಸುದ್ದಿಯೂ ಇದೆ

Digestion Tips
ಆರೋಗ್ಯ1 hour ago

Digestion Tips: ಜೀರ್ಣಾಂಗಗಳ ಕ್ಷಮತೆ ಹೆಚ್ಚಿಸುವುದು ಹೇಗೆ?

Karnataka Weather Forecast
ಮಳೆ2 hours ago

Karnataka Weather : 50 ಕಿ.ಮೀ ವೇಗದಲ್ಲಿ ಬೀಸುತ್ತೆ ಗಾಳಿ; ಗುಡುಗು ಸಹಿತ ಭಾರಿ ಮಳೆಗೆ ಯೆಲ್ಲೋ ಅಲರ್ಟ್‌ ಘೋಷಣೆ

Which Sweetener Is Better
ಆರೋಗ್ಯ2 hours ago

Which Sweetener Is Better: ಸಕ್ಕರೆ, ಬೆಲ್ಲ, ಕಲ್ಲುಸಕ್ಕರೆ- ಯಾವುದು ಒಳ್ಳೆಯದು?

Basavanna jayanti
ಧಾರ್ಮಿಕ3 hours ago

Basava Jayanti 2024: ಬದುಕಿನ ಪಾಠ ಕಲಿಸುವ ಬಸವಣ್ಣನ 10 ವಚನಗಳಿವು

Akshaya Tritiya 2024
ಪ್ರಮುಖ ಸುದ್ದಿ3 hours ago

Akshaya Tritiya 2024: ಸಕಲ ಸಮೃದ್ಧಿಗಳು ಕ್ಷಯಿಸದಂತೆ ಕಾಪಾಡುವ ಅಕ್ಷಯ ತೃತೀಯ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ3 hours ago

Dina Bhavishya: ಶುಭ ಶುಕ್ರವಾರ ಈ ರಾಶಿಯವರಿಗೆ ಖುಲಾಯಿಸಲಿದೆ ಲಕ್‌

Prajwal Revanna case Revanna bail plea to be heard on Monday Advocate Nagesh argument was as follows
ಕ್ರೈಂ10 hours ago

Prajwal Revanna Case: ರೇವಣ್ಣ ಜಾಮೀನು ಅರ್ಜಿ ಸೋಮವಾರಕ್ಕೆ: ಎಸ್‌ಐಟಿಗೆ ಹಿಗ್ಗಾಮುಗ್ಗಾ ತರಾಟೆ; ವಕೀಲ ನಾಗೇಶ್‌ ವಾದ ಹೀಗಿತ್ತು!

Prajwal Revanna Case Hasanambe is going to destroy this government HD Kumaraswamy curse
ರಾಜಕೀಯ11 hours ago

Prajwal Revanna Case: ಈ ಸರ್ಕಾರವನ್ನು ಹಾಸನಾಂಬೆ ಧ್ವಂಸ ಮಾಡಲಿದ್ದಾಳೆ: ಎಚ್‌ಡಿಕೆ ಶಾಪ

Prajwal Revanna Case DK Shivakumar alleged mastermind in 25000 pen drive allotment
ಹಾಸನ12 hours ago

Prajwal Revanna Case: 25,000 ಪೆನ್ ಡ್ರೈವ್ ಹಂಚಿಕೆಯಲ್ಲಿ ಡಿ.ಕೆ. ಶಿವಕುಮಾರ್ ಮಾಸ್ಟರ್ ಮೈಂಡ್ ಎಂದು ರಾಜ್ಯಪಾಲರಿಗೆ ದೂರು!

SSLC Result 2024 what is the reason for most of the students fail in SSLC
ಕರ್ನಾಟಕ19 hours ago

SSLC Result 2024: ಎಸ್‌ಎಸ್‌ಎಲ್‌ಸಿಯಲ್ಲಿ ಹೆಚ್ಚಿನ ಮಕ್ಕಳು ಫೇಲ್‌ ಆಗಲು ಶಿಕ್ಷಣ ಇಲಾಖೆಯ ಈ ನಿರ್ಧಾರವೇ ಕಾರಣ!

Sslc exam Result 2024
ಶಿಕ್ಷಣ19 hours ago

SSLC Result 2024 : ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಫೇಲಾದರೂ, ಕಡಿಮೆ ಅಂಕ ಬಂದರೂ ಡೋಂಟ್‌ ವರಿ; ಇನ್ನೂ ಇದೆ ಎರಡು ಚಾನ್ಸ್‌!

SSLC Result 2024 secret behind 20 percent grace marks
ಕರ್ನಾಟಕ19 hours ago

SSLC Result 2024: ಎಸ್‌ಎಸ್‌ಎಲ್‌ಸಿಯಲ್ಲಿ ಈ ಬಾರಿ ನೂರಕ್ಕೆ 25 ಅಂಕ ಪಡೆದವರೂ ಪಾಸ್! ಶೇ. 20 ಗ್ರೇಸ್ ಮಾರ್ಕ್ಸ್ ಕೊಟ್ಟಿದ್ದರ ಹಿಂದಿದೆ ಇಂಟರೆಸ್ಟಿಂಗ್ ಕತೆ!

SSLC Result 2024 78 schools get zero results in SSLC exams
ಬೆಂಗಳೂರು20 hours ago

SSLC Result 2024: ಎಸ್‌ಎಸ್‌ಎಲ್‌ಸಿ ಎಕ್ಸಾಂನಲ್ಲಿ ಸಿಕ್ಸರ್‌ ಬಾರಿಸಿದ ಗ್ರಾಮೀಣ ಪ್ರತಿಭೆಗಳು; 78 ಶಾಲೆಗಳಲ್ಲಿ ಶೂನ್ಯ ರಿಸಲ್ಟ್‌!

SSLC Result 2024 SSLC students get 20 percent grace marks but result is very poor
ಶಿಕ್ಷಣ20 hours ago

SSLC Result 2024: ಎಸ್‌ಎಸ್‌ಎಲ್‌ಸಿ ಮಕ್ಕಳಿಗೆ ಸಿಕ್ತು 20 ಪರ್ಸೆಂಟ್ ಗ್ರೇಸ್ ಮಾರ್ಕ್ಸ್‌! ಆದ್ರೂ ಫಲಿತಾಂಶ ತೀರಾ ಕಳಪೆ

SSLC Exam Result 2024 Announce
ಬೆಂಗಳೂರು21 hours ago

SSLC Result 2024: ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ; ಶೇ. 73.40 ವಿದ್ಯಾರ್ಥಿಗಳು ಪಾಸ್‌, ಉಡುಪಿ ಫಸ್ಟ್‌, ಯಾದಗಿರಿ ಲಾಸ್ಟ್‌

ಟ್ರೆಂಡಿಂಗ್‌