Site icon Vistara News

Viral News: ಇವನು ಅಂತಿಂತಾ ಕಳ್ಳನಲ್ಲ…ಮನೆ ಎಲ್ಲಾ ದೋಚಿ, ಲೆಟರ್‌ ಬರೆದಿಟ್ಟು ಕ್ಷಮೆ ಕೇಳ್ತಾನೆ!

Viral News

ಚೆನ್ನೈ: ಒಬ್ಬ ವ್ಯಕ್ತಿ ಕಳ್ಳನಾಗಬೇಕೆಂದರೆ ಅದರ ಹಿಂದೆ ಯಾವುದಾದರೂ ಬಲವಾದ ಕಾರಣವಿರುತ್ತೆ ಅನ್ನುತ್ತಾರೆ ಮನಶಾಸ್ತ್ರಜ್ಞರು. ಆದ್ರೆ ಒಮ್ಮೆ ಕಳ್ಳತನ ಮಾಡಿದ ಮೇಲೆ ಅದೇ ಕಸುಬು ಚೆನ್ನಾಗಿದೆ ಎಂದು ಮುಂದುವರೆಸುವವರೇ ಹೆಚ್ಚು. ಇನ್ನು ಕೆಲವೇ ಕೆಲವರು ಏನೋ ಅನಿವಾರ್ಯತೆಗೆ ಕಟ್ಟು ಬಿದ್ದು ಇಂತಹ ಕೆಲಸಕ್ಕೆ ಕೈ ಹಾಕುವುದೂ ಇದೆ. ಇದೀಗ ಮನೆಗೆ ನುಗ್ಗಿದ ಕಳ್ಳನೋರ್ವ ಸಾಮಾನುಗಳನ್ನೆಲ್ಲಾ ದೋಚಿ ಬಳಿಕ ಕ್ಷಮಾಪಣೆ ಪತ್ರ ಬರೆದಿಟ್ಟಿರುವ ಘಟನೆ(Viral News) ತಮಿಳುನಾಡಿನಲ್ಲಿ ನಡೆದಿದೆ.

ಘಟನೆ ವಿವರ

ಮೆಗ್ನಾನಪುರಂನ ಸಾತನ್‌ಕುಲಂನಲ್ಲಿ ಈ ಘಟನೆ ನಡೆದಿದ್ದು, ನಿವೃತ ಶಿಕ್ಷಕ ದಂಪತಿ ಮನೆಯಲ್ಲಿ ಜೂನ್‌ 17ರಂದು ಕಳ್ಳತನ ನಡೆದಿತ್ತು. ಸೆಲ್ವಿನ್‌ ಮತ್ತು ಅವರ ಪತ್ನಿ ತಮ್ಮ ಮಗನನ್ನು ಭೇಟಿಯಾಗಲು ಚೆನ್ನೈಗೆ ತೆರಳಿದ್ದರು. ಈ ವೇಳ ಕಳ್ಳನೋರ್ವ ಮನೆಗೆ ನುಗ್ಗಿದ್ದಾರೆ. ನುಗ್ಗಿ ಬೆಲೆ ಬಾಳುವ ವಸ್ತುಗಳನ್ನು ದೋಚಿ ಪರಾರಿಯಾಗಿದ್ದಾನೆ. ಇನ್ನು ದಂಪತಿ ತಾವು ಇಲ್ಲದಾಗ ಮನೆ ಸ್ವಚ್ಛಗೊಳಿಸಲು ಸೆಲ್ವಿ ಎಂಬ ಕೆಲಸದಾಕೆಯನ್ನು ನಿಯೋಜಿಸಿದ್ದರು. ಸೆಲ್ವಿ ಎಂದಿನಂತೆ ಮನೆ ಕೆಲಸಕ್ಕೆಂದು ಬಂದಾಗ ಬಾಗಿ ಒಡೆದಿರುವುದನ್ನು ಕಂಡು ಗಾಬರಿ ಆಗಿದ್ದಾಳೆ. ತಕ್ಷಣ ಮನೆಯ ಯಜಮಾನ ಸೆಲ್ವಿನ್‌ಗೆ ಕರೆ ಮಾಡಿ ವಿಷಯ ತಿಳಿಸಿದ್ದಳು.

ತಕ್ಷಣ ಸ್ಥಳಕ್ಕೆ ಬಂದ ಸೆಲ್ವಿನ್‌ ಕುಟುಂಬಸ್ಥರು ಪರಿಶೀಲನೆ ನಡೆಸಿದಾಗ 60,000 ನಗದು, 12 ಗ್ರಾಂ ಚಿನ್ನ ಮತ್ತು ಬೆಳ್ಳಿಯ ವಸ್ತುಗಳು ದೋಚಿರುವುದು ತಿಳಿದಿದೆ. ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ. ಆಗ ಪೊಲೀಸರಿಗೆ ಪತ್ರವೊಂದು ಪತ್ತೆಯಾಗಿತ್ತು. ಆ ಪತ್ರವನ್ನು ಕಳ್ಳನೇ ಮನೆಯ ಮಾಲೀಕನಿಗೆ ಬರೆದಿದ್ದು, “ದಯವಿಟ್ಟು ಕ್ಷಮಿ..ಒಂದು ತಿಂಗಳಲ್ಲಿ ನಿಮ್ಮ ಎಲ್ಲಾ ವಸ್ತುಗಳನ್ನು ವಾಪಸ್‌ ಮಾಡುತ್ತೇನೆ. ನನ್ನ ಮನೆಯ ಸದಸ್ಯರೊಬ್ಬರ ಆರೋಗ್ಯ ಸ್ಥಿತಿ ಬಹಳ ಹದಗೆಟ್ಟಿದೆ. ಅದಕ್ಕಾಗಿ ಈ ಕೃತ್ಯ ಎಸಗಿದ್ದೇನೆ” ಎಂದು ಬರೆದಿದ್ದ.

ಇನು ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದು, ಕಳ್ಳನಿಗಾಗಿ ಬಲೆ ಬೀಸಿದ್ದಾರೆ. ಕಳೆದ ವರ್ಷ ಕೇರಳದಲ್ಲಿ ಇಂತಹುದೇ ಘಟನೆ ನಡೆದಿದ್ದು, ಮೂರು ವರ್ಷದ ಮಗುವಿನ ಚಿನ್ನದ ಸರವನ್ನು ಕದ್ದ ಕಳ್ಳನೊಬ್ಬ ಅದನ್ನು ಮಾರಿ ಬಂದ ಹಣವನ್ನು ಕ್ಷಮಾಪಣೆ ಪತ್ರದೊಂದಿಗೆ ಹಿಂದಿರುಗಿಸಿದ್ದಾನೆ. ಪಾಲಕ್ಕಾಡ್ ಬಳಿ ಈ ಘಟನೆ ನಡೆದಿತ್ತು.

ಮಧ್ಯಪ್ರದೇಶದ ಭಿಂದ್ ನಗರದಲ್ಲೂ ಖದೀಮನೊಬ್ಬ ಪೊಲೀಸ್ ಅಧಿಕಾರಿಯ ಮನೆಗೆ ನುಗ್ಗಿ ಬೆಲೆ ಬಾಳುವ ವವಸ್ತುಗಳನ್ನು ಕಳ್ಳತನ ಮಾಡಿ ಪತ್ರ ಬರೆದಿಟ್ಟು ಕ್ಷಮೆ ಕೇಳಿರುವ ಘಟನೆ ನಡೆದಿತ್ತು. ನಗರದ ಪೊಲೀಸ್​ ಅಧಿಕಾರಿಯ ಮನೆಯಿಂದ ಬೆಲೆಬಾಳುವ ವಸ್ತುಗಳನ್ನು ಕದ್ದು ಕ್ಷಮೆಯಾಚಿಸುವ ಪತ್ರವೊಂದನ್ನು ಕಳ್ಳ ಬರೆದಿಟ್ಟು ಪರಾರಿಯಾಗಿದ್ದ. ಸ್ನೇಹಿತನ ಜೀವ ಉಳಿಸುವ ಸಲುವಾಗಿ ನಾನು ನಿಮ್ಮ ಮನೆಯಲ್ಲಿ ಕಳ್ಳತನ ಮಾಡುತ್ತಿದ್ದೇನೆ ಮತ್ತು ಕದ್ದ ಹಣವನ್ನು ಹಿಂದಿರುಗಿಸುತ್ತೇನೆ ಎಂದು ಕಳ್ಳ ತನ್ನ ಪತ್ರದಲ್ಲಿ ಬರೆದಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: BJP Muslim Candidate: ಉತ್ತರ ಪ್ರದೇಶದಲ್ಲಿ ಮೊದಲ ಬಾರಿಗೆ ಮುಸ್ಲಿಂ ಅಭ್ಯರ್ಥಿಗೆ ಬಿಜೆಪಿ ಟಿಕೆಟ್? ಏನಿದರ ಗುಟ್ಟು?

Exit mobile version