ಸಂಭಲ್ (ಉತ್ತರ ಪ್ರದೇಶ): ಇನ್ನೇನು ಹಸೆಮಣೆ ಏರಬೇಕೆಂಬ ಕ್ಷಣದಲ್ಲಿ ವರ ಮಾಡಿದ ದೊಡ್ಡ ಎಡವಟ್ಟಿನಿಂದ ವಧು ಮದುವೆಯನ್ನೇ ರದ್ದುಗೊಳಿಸಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಇದಕ್ಕೆ ಕಾರಣ ವರ ಸುಮಾರು 300 ಮಂದಿಯ ಎದುರು ವಧುವಿಗೆ ಮುತ್ತು (Kiss) ನೀಡಿದ್ದು. ಆತ ಸ್ನೇಹಿತರೊಂದಿಗೆ ಬೆಟ್ ಗೆಲ್ಲಲು ಹೋಗಿ, ಮದುವೆ ಇಲ್ಲದೇ ಮನೆಗೆ ಹೋಗಿದ್ದಾನೆ!(Viral News)
ಉತ್ತರದ ಪ್ರದೇಶದ ಸಂಭಲ್‌ನಲ್ಲಿ ಗುರುವಾರ ಈ ವಿಲಕ್ಷಣ ಘಟನೆ ನಡೆದಿದೆ. ಎಲ್ಲರೆದುರು ಮುತ್ತು ನೀಡಿದ ವರನ ವಿರುದ್ಧ ವಧು ಪೊಲೀಸ್ ಮೆಟ್ಟಿಲೇರಿ ದೂರು ದಾಖಲಿಸಿದ್ದಾರೆ. ಅದರಂತೆ ವಧು ನೀಡಿದ ದೂರಿನಲ್ಲಿ ವರನ ನಡತೆ ಬಗ್ಗೆ ನನಗೆ ಅನುಮಾನವಿದೆ. ಎಲ್ಲರ ಸಮ್ಮುಖದಲ್ಲಿ ಆತ ನನ್ನ ಘನತೆ ಬಗ್ಗೆ ಯೋಚಿಸದೆ, ಮುತ್ತು ನೀಡಿದ್ದು ನನಗೆ ಬೇಸರ ತಂದಿದೆ ಎಂದು ಹೇಳಿದ್ದಾರೆ.
ವರ ತನ್ನ ಗೆಳೆಯರ ಜತೆ ತಾನು ಮದುವೆಯಾಗುವ ಹುಡುಗಿಗೆ ಎಲ್ಲರ ಸಮ್ಮಖದಲ್ಲಿ ಮುತ್ತು ನೀಡುತ್ತೇನೆ ಎಂದು ಬೆಟ್ ಕಟ್ಟಿದ್ದ. ಅದರಂತೆ ಆತ 300 ಮಂದಿಯ ಮುಂದೆ ವಧುವಿಗೆ ಕಿಸ್ ನೀಡಿ ಚಾಲೆಂಜ್ ಗೆದ್ದಿದ್ದ. ಆದರೆ ತನ್ನ ಮದುವೆಯ ಚಾಲೆಂಜಿಂಗ್ನಲ್ಲಿ ಸೋತು ಹೋಗಿದ್ದಾನೆ! ಇನ್ನು ವರನ ಈ ವರ್ತನೆ ಬಗ್ಗೆ ಹಲವರು ಸಾಮಾಜಿಕ ಜಾಲತಾಣದಲ್ಲಿ ಛೀಮಾರಿ ಹಾಕಿದ್ದು, ವಧುವಿನ ಈ ದಿಟ್ಟ ನಿರ್ಧಾರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ | Viral news | ಅಪಘಾತದಲ್ಲಿ ಸ್ಮರಣಶಕ್ತಿ ಕಳೆದುಕೊಂಡ ಗಂಡ, ಹೆಂಡತಿಯಲ್ಲಿ ಮದುವೆಯಾಗು ಅಂದನಂತೆ!