Site icon Vistara News

Viral News: ತ್ರಿವಳಿ ತಲಾಖ್‌ನಿಂದ ಬೇಸತ್ತಿದ್ದ ಮಹಿಳೆ ಹಿಂದೂ ಧರ್ಮಕ್ಕೆ ಮತಾಂತರ; ದೇವಸ್ಥಾನದಲ್ಲಿ ಮರು ಮದುವೆ

Viral News

ಮಥುರಾ: ತ್ರಿವಳಿ ತಲಾಖ್‌(Triple Talaq) ಪಡೆದು ಗಂಡನಿಂದ ದೂರವಾಗಿ ನೊಂದಿದ್ದ ಮುಸ್ಲಿಂ ಮಹಿಳೆಯೊಬ್ಬಳು ಹಿಂದೂ ಧರ್ಮಕ್ಕೆ ಮತಾಂತರಗೊಂಡು ಹಿಂದೂ ಯುವಕನನ್ನು ಮದುವೆ ಆಗಿರುವ ಅಪರೂಪದ ಘಟನೆ(Viral News) ಉತ್ತರಪ್ರದೇಶ(Uttar Pradesh)ದಲ್ಲಿ ನಡೆದಿದೆ. ರುಬಿನಾ ಎಂಬ ಮಹಿಳೆ ತನ್ನ ಮೊಲದ ಪತಿಯಿಂದ ಬಹಳ ಬೇಸತ್ತಿದ್ದಳು. ಸಾಲದೆಂಬುದಕ್ಕೆ ಆತ ತ್ರಿವಳಿ ತಲಾಖ್‌ ಅನ್ನೂ ನೀಡಿದ್ದ. ಇದರಿಂದ ನೊಂದಿದ್ದ ರುಬಿನಾ ತನ್ನ ಧರ್ಮ ಬದಲಿಸಿಕೊಂಡು ಹಿಂದೂ ಯುವಕನನ್ನೇ ಕೈ ಕೈ ಹಿಡಿದಿದ್ದಾಳೆ.

ಮಥುರಾದಲ್ಲಿ ಈ ಘಟನೆ ನಡೆದಿದ್ದು, ರುಬಿನಾ ಏಳು ವರ್ಷಗಳ ಹಿಂದೆ ಪ್ರೀತಿಸಿ ಮದುವೆ ಆಗಿದ್ದಳು. ಆದರೆ ಪತಿಯ ಚಿತ್ರಹಿಂಸೆಯಿಂದ ಆಕೆ ಬೇಸತ್ತಿದ್ದಳು. ಕೊನೆಗೆ ಆತ ರುಬಿನಾಗೆ ತಲಾಖ್‌ ನೀಡಿದ್ದ. ಬಹಳ ನೊಂದಿದ್ದ ರುಬಿನಾ ತನ್ನ ಎರಡು ಮಕ್ಕಳನ್ನು ಗಂಡನ ಬಳಿಯೇ ಬಿಟ್ಟು ಮನೆ ಬಿಟ್ಟು ಹೊರಬಂದಿದ್ದಳು. ಇದಾದ ಬಳಿಕ ಆಕೆಗೆ ಪ್ರಮೋದ್‌ ಎಂಬಾತನ ಜೊತೆ ಪ್ರೇಮಾಂಕುರವಾಗಿದ್ದು, ಇದೀಗ ಆತನನ್ನೇ ವರಿಸಿದ್ದಾಳೆ. ಇದಕ್ಕೂ ಮುನ್ನ ಪ್ರೀತಿಗಾಗಿ ತನ್ನ ಧರ್ಮವನ್ನೇ ಬದಲಿಸಿಕೊಂಡಿದ್ದಾಳೆ.

ಇನ್‌ಸ್ಟಾಗ್ರಾಂನಲ್ಲಿ ಪ್ರೀತಿಯಾಗಿತ್ತು

Instagramನಲ್ಲಿ ರುಬಿನಾ ಮತ್ತು ಪ್ರಮೋದ್‌ ಕಶ್ಯಪ್‌ಗೆ ಪರಿಚಯವಾಗಿತ್ತು. ಕೆಲವು ಸಂಭಾಷಣೆಗಳ ನಂತರ ಇವರಿಬ್ಬರೂ ಸ್ನೇಹಿತರಾಗಿದ್ದರು. ನಿಧಾನವಾಗಿ ಸ್ನೇಹ ಪ್ರೀತಿಗೆ ತಿರುಗಿ ಮದುವೆಯಾಗಲು ನಿರ್ಧರಿಸಿದ್ದರು. ಇನ್ನು ಪ್ರಮೋದ್‌ ಕಶ್ಯಪ್‌ ರುಬಿನಾಳಗಿಂತ 8 ವರ್ಷ ಚಿಕ್ಕವನು. ಆತನನ್ನು ವರಿಸಲು ಮೊದಲು ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದು, ಹೆಸರನ್ನು ಪ್ರೀತಿ ಎಂದು ಬದಲಿಸಿಕೊಂಡಳು. ಇನ್ನು ಕೆ.ಕೆ. ಶಂಕಧರ್‌ ಎಂಬ ಅರ್ಚಕರ ನೇತೃತ್ವದಲ್ಲಿ ವಿವಾಹ ನಡೆದಿದ್ದು, ವಿವಾಹಕ್ಕೂ ಮುನ್ನ ರುಬಿನಾಳನ್ನು ಗೋ ಮೂತ್ರ ಮತ್ತು ಗಂಗಾಜಲದಿಂದ ಪವಿತ್ರಗೊಳಿಸಲಾಗಿದೆ. ನಂತರ ದಂಪತಿಗಳು Instagramನಲ್ಲಿ ಸಂಪರ್ಕಗೊಂಡರು. ಕೆಲವು ಸಂಭಾಷಣೆಗಳ ನಂತರ ಸ್ನೇಹಿತರಾದರು. ಹಿಂದೂ ಧರ್ಮಕ್ಕೆ ಮತಾಂತರಗೊಂಡ ನಂತರ, ಆ ಬಗ್ಗೆ ಪ್ರತಿಕ್ರಿಯಿಸಿರುವ ರುಬಿನಾ ನನಗೆ ಹಿಂದೂ ಧರ್ಮದ ಬಗ್ಗೆ ಬಹಳ ನಂಬಿಕೆ ಇದೆ. ಇಸ್ಲಾಂನಲ್ಲಿ ಮಹಿಳೆಯರಿಗೆ ಗೌರವ ಇಲ್ಲ. ಅಲ್ಲಿ ಮಹಿಳೆಯರು ಚಿತ್ರಹಿಂಸೆ ಅನುಭವಿಸುತ್ತಿದ್ದಾರೆ ಎಂದು ಹೇಳಿದ್ದಾರೆ.

ಇದನ್ನೂ ಓದಿ:Ujjaini Marulasiddeshwara Jatre: ಸಾಮಾಜಿಕ ಸೌಹಾರ್ದತೆ ಸಾರುವ ಶ್ರೀ ಉಜ್ಜಯಿನಿ ಮರುಳಸಿದ್ಧೇಶ್ವರ ಜಾತ್ರಾ ಮಹೋತ್ಸವ

ರುಬೀನಾ ಮತ್ತು ಪ್ರಮೋದ್‌ ಬರೇಲಿಗೆ ಹೋಗಿ ಹಿಂದೂ ಸಂಪ್ರದಾಯಗಳ ಮೂಲಕ ಮದುವೆಯಾಗಿದ್ದಾರೆ. ವೃಂದಾವನದ ಬಂಗಾರ್ ಕಾಶಿರಾಮ್ ಕಾಲೋನಿಯಲ್ಲಿ ವಾಸಿಸುತ್ತಿದ್ದ ರುಬಿನಾ ತನ್ನ ಪೂರ್ವಜರು ಮೊಘಲರ ಭಯದಿಂದ ಇಸ್ಲಾಂ ಧರ್ಮದ ಅನುಯಾಯಿಗಳಾದರು,. ಆದರೆ ನಾನು ಹಿಂದೂ ದೇವರುಗಳನ್ನು ನಂಬುತ್ತೇನೆ ಮತ್ತು ನಿತ್ಯ ಪ್ರಾರ್ಥಿಸುತ್ತೇನೆ ಎಂದು ತಿಳಿಸಿದರು. ರುಬಿನಾ ಇಸ್ಲಾಂ ಧರ್ಮದ ಮಹಿಳೆಯರನ್ನು ನಡೆಸಿಕೊಳ್ಳುವ ರೀತಿಯನ್ನು ಧಿಕ್ಕರಿಸಿದ್ದು ಮಾತ್ರವಲ್ಲದೆ, ‘ಹಲಾಲ್’ ಮತ್ತು ತಲಾಖ್‌ ಇವೆಲ್ಲ ಧರ್ಮದಲ್ಲಿನ ಅನಿಷ್ಠ ಪದ್ಧತಿ ಎಂದೂ ಕರೆದಿದ್ದಾರೆ. ಹಿಂದೂ ಧರ್ಮವನ್ನು ಸ್ವೀಕರಿಸುವಂತೆ ಯಾರೂ ಬಲವಂತ ಮಾಡಿಲ್ಲ. ಅದು ನನ್ನ ಆಯ್ಕೆ ಎಂದು ಸ್ಪಷ್ಟಪಡಿಸಿದ್ದಾರೆ.

Exit mobile version