Viral News: ತ್ರಿವಳಿ ತಲಾಖ್‌ನಿಂದ ಬೇಸತ್ತಿದ್ದ ಮಹಿಳೆ ಹಿಂದೂ ಧರ್ಮಕ್ಕೆ ಮತಾಂತರ; ದೇವಸ್ಥಾನದಲ್ಲಿ ಮರು ಮದುವೆ - Vistara News

ವೈರಲ್ ನ್ಯೂಸ್

Viral News: ತ್ರಿವಳಿ ತಲಾಖ್‌ನಿಂದ ಬೇಸತ್ತಿದ್ದ ಮಹಿಳೆ ಹಿಂದೂ ಧರ್ಮಕ್ಕೆ ಮತಾಂತರ; ದೇವಸ್ಥಾನದಲ್ಲಿ ಮರು ಮದುವೆ

Viral News: Instagramನಲ್ಲಿ ರುಬಿನಾ ಮತ್ತು ಪ್ರಮೋದ್‌ ಕಶ್ಯಪ್‌ಗೆ ಪರಿಚಯವಾಗಿತ್ತು. ಕೆಲವು ಸಂಭಾಷಣೆಗಳ ನಂತರ ಇವರಿಬ್ಬರೂ ಸ್ನೇಹಿತರಾಗಿದ್ದರು. ನಿಧಾನವಾಗಿ ಸ್ನೇಹ ಪ್ರೀತಿಗೆ ತಿರುಗಿ ಮದುವೆಯಾಗಲು ನಿರ್ಧರಿಸಿದ್ದರು. ಇನ್ನು ಪ್ರಮೋದ್‌ ಕಶ್ಯಪ್‌ ರುಬಿನಾಳಗಿಂತ 8 ವರ್ಷ ಚಿಕ್ಕವನು. ಆತನನ್ನು ವರಿಸಲು ಮೊದಲು ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದು, ಹೆಸರನ್ನು ಪ್ರೀತಿ ಎಂದು ಬದಲಿಸಿಕೊಂಡಳು.

VISTARANEWS.COM


on

Viral News
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಮಥುರಾ: ತ್ರಿವಳಿ ತಲಾಖ್‌(Triple Talaq) ಪಡೆದು ಗಂಡನಿಂದ ದೂರವಾಗಿ ನೊಂದಿದ್ದ ಮುಸ್ಲಿಂ ಮಹಿಳೆಯೊಬ್ಬಳು ಹಿಂದೂ ಧರ್ಮಕ್ಕೆ ಮತಾಂತರಗೊಂಡು ಹಿಂದೂ ಯುವಕನನ್ನು ಮದುವೆ ಆಗಿರುವ ಅಪರೂಪದ ಘಟನೆ(Viral News) ಉತ್ತರಪ್ರದೇಶ(Uttar Pradesh)ದಲ್ಲಿ ನಡೆದಿದೆ. ರುಬಿನಾ ಎಂಬ ಮಹಿಳೆ ತನ್ನ ಮೊಲದ ಪತಿಯಿಂದ ಬಹಳ ಬೇಸತ್ತಿದ್ದಳು. ಸಾಲದೆಂಬುದಕ್ಕೆ ಆತ ತ್ರಿವಳಿ ತಲಾಖ್‌ ಅನ್ನೂ ನೀಡಿದ್ದ. ಇದರಿಂದ ನೊಂದಿದ್ದ ರುಬಿನಾ ತನ್ನ ಧರ್ಮ ಬದಲಿಸಿಕೊಂಡು ಹಿಂದೂ ಯುವಕನನ್ನೇ ಕೈ ಕೈ ಹಿಡಿದಿದ್ದಾಳೆ.

ಮಥುರಾದಲ್ಲಿ ಈ ಘಟನೆ ನಡೆದಿದ್ದು, ರುಬಿನಾ ಏಳು ವರ್ಷಗಳ ಹಿಂದೆ ಪ್ರೀತಿಸಿ ಮದುವೆ ಆಗಿದ್ದಳು. ಆದರೆ ಪತಿಯ ಚಿತ್ರಹಿಂಸೆಯಿಂದ ಆಕೆ ಬೇಸತ್ತಿದ್ದಳು. ಕೊನೆಗೆ ಆತ ರುಬಿನಾಗೆ ತಲಾಖ್‌ ನೀಡಿದ್ದ. ಬಹಳ ನೊಂದಿದ್ದ ರುಬಿನಾ ತನ್ನ ಎರಡು ಮಕ್ಕಳನ್ನು ಗಂಡನ ಬಳಿಯೇ ಬಿಟ್ಟು ಮನೆ ಬಿಟ್ಟು ಹೊರಬಂದಿದ್ದಳು. ಇದಾದ ಬಳಿಕ ಆಕೆಗೆ ಪ್ರಮೋದ್‌ ಎಂಬಾತನ ಜೊತೆ ಪ್ರೇಮಾಂಕುರವಾಗಿದ್ದು, ಇದೀಗ ಆತನನ್ನೇ ವರಿಸಿದ್ದಾಳೆ. ಇದಕ್ಕೂ ಮುನ್ನ ಪ್ರೀತಿಗಾಗಿ ತನ್ನ ಧರ್ಮವನ್ನೇ ಬದಲಿಸಿಕೊಂಡಿದ್ದಾಳೆ.

ಇನ್‌ಸ್ಟಾಗ್ರಾಂನಲ್ಲಿ ಪ್ರೀತಿಯಾಗಿತ್ತು

Instagramನಲ್ಲಿ ರುಬಿನಾ ಮತ್ತು ಪ್ರಮೋದ್‌ ಕಶ್ಯಪ್‌ಗೆ ಪರಿಚಯವಾಗಿತ್ತು. ಕೆಲವು ಸಂಭಾಷಣೆಗಳ ನಂತರ ಇವರಿಬ್ಬರೂ ಸ್ನೇಹಿತರಾಗಿದ್ದರು. ನಿಧಾನವಾಗಿ ಸ್ನೇಹ ಪ್ರೀತಿಗೆ ತಿರುಗಿ ಮದುವೆಯಾಗಲು ನಿರ್ಧರಿಸಿದ್ದರು. ಇನ್ನು ಪ್ರಮೋದ್‌ ಕಶ್ಯಪ್‌ ರುಬಿನಾಳಗಿಂತ 8 ವರ್ಷ ಚಿಕ್ಕವನು. ಆತನನ್ನು ವರಿಸಲು ಮೊದಲು ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದು, ಹೆಸರನ್ನು ಪ್ರೀತಿ ಎಂದು ಬದಲಿಸಿಕೊಂಡಳು. ಇನ್ನು ಕೆ.ಕೆ. ಶಂಕಧರ್‌ ಎಂಬ ಅರ್ಚಕರ ನೇತೃತ್ವದಲ್ಲಿ ವಿವಾಹ ನಡೆದಿದ್ದು, ವಿವಾಹಕ್ಕೂ ಮುನ್ನ ರುಬಿನಾಳನ್ನು ಗೋ ಮೂತ್ರ ಮತ್ತು ಗಂಗಾಜಲದಿಂದ ಪವಿತ್ರಗೊಳಿಸಲಾಗಿದೆ. ನಂತರ ದಂಪತಿಗಳು Instagramನಲ್ಲಿ ಸಂಪರ್ಕಗೊಂಡರು. ಕೆಲವು ಸಂಭಾಷಣೆಗಳ ನಂತರ ಸ್ನೇಹಿತರಾದರು. ಹಿಂದೂ ಧರ್ಮಕ್ಕೆ ಮತಾಂತರಗೊಂಡ ನಂತರ, ಆ ಬಗ್ಗೆ ಪ್ರತಿಕ್ರಿಯಿಸಿರುವ ರುಬಿನಾ ನನಗೆ ಹಿಂದೂ ಧರ್ಮದ ಬಗ್ಗೆ ಬಹಳ ನಂಬಿಕೆ ಇದೆ. ಇಸ್ಲಾಂನಲ್ಲಿ ಮಹಿಳೆಯರಿಗೆ ಗೌರವ ಇಲ್ಲ. ಅಲ್ಲಿ ಮಹಿಳೆಯರು ಚಿತ್ರಹಿಂಸೆ ಅನುಭವಿಸುತ್ತಿದ್ದಾರೆ ಎಂದು ಹೇಳಿದ್ದಾರೆ.

ಇದನ್ನೂ ಓದಿ:Ujjaini Marulasiddeshwara Jatre: ಸಾಮಾಜಿಕ ಸೌಹಾರ್ದತೆ ಸಾರುವ ಶ್ರೀ ಉಜ್ಜಯಿನಿ ಮರುಳಸಿದ್ಧೇಶ್ವರ ಜಾತ್ರಾ ಮಹೋತ್ಸವ

ರುಬೀನಾ ಮತ್ತು ಪ್ರಮೋದ್‌ ಬರೇಲಿಗೆ ಹೋಗಿ ಹಿಂದೂ ಸಂಪ್ರದಾಯಗಳ ಮೂಲಕ ಮದುವೆಯಾಗಿದ್ದಾರೆ. ವೃಂದಾವನದ ಬಂಗಾರ್ ಕಾಶಿರಾಮ್ ಕಾಲೋನಿಯಲ್ಲಿ ವಾಸಿಸುತ್ತಿದ್ದ ರುಬಿನಾ ತನ್ನ ಪೂರ್ವಜರು ಮೊಘಲರ ಭಯದಿಂದ ಇಸ್ಲಾಂ ಧರ್ಮದ ಅನುಯಾಯಿಗಳಾದರು,. ಆದರೆ ನಾನು ಹಿಂದೂ ದೇವರುಗಳನ್ನು ನಂಬುತ್ತೇನೆ ಮತ್ತು ನಿತ್ಯ ಪ್ರಾರ್ಥಿಸುತ್ತೇನೆ ಎಂದು ತಿಳಿಸಿದರು. ರುಬಿನಾ ಇಸ್ಲಾಂ ಧರ್ಮದ ಮಹಿಳೆಯರನ್ನು ನಡೆಸಿಕೊಳ್ಳುವ ರೀತಿಯನ್ನು ಧಿಕ್ಕರಿಸಿದ್ದು ಮಾತ್ರವಲ್ಲದೆ, ‘ಹಲಾಲ್’ ಮತ್ತು ತಲಾಖ್‌ ಇವೆಲ್ಲ ಧರ್ಮದಲ್ಲಿನ ಅನಿಷ್ಠ ಪದ್ಧತಿ ಎಂದೂ ಕರೆದಿದ್ದಾರೆ. ಹಿಂದೂ ಧರ್ಮವನ್ನು ಸ್ವೀಕರಿಸುವಂತೆ ಯಾರೂ ಬಲವಂತ ಮಾಡಿಲ್ಲ. ಅದು ನನ್ನ ಆಯ್ಕೆ ಎಂದು ಸ್ಪಷ್ಟಪಡಿಸಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

ಮದುವೆಗೆ ಹೋದವರಿಗೆ 66 ಸಾವಿರ ರೂ. ನಗದು, ಭರ್ಜರಿ ಗಿಫ್ಟ್‌ ಕೊಟ್ಟ ದಂಪತಿ; ಎಲ್ಲಿ ಅಂತೀರಾ…?‌

ಚೀನಾದಲ್ಲಿ ನಡೆದ ಶ್ರೀಮಂತರ ಮದುವೆಗೆ ಜಗತ್ತಿನ ಮೂಲೆ ಮೂಲೆಯಿಂದ ಸಾವಿರಾರು ಜನ ಮದುವೆಗೆ ಹಾಜರಾಗಿದ್ದಾರೆ. ಮದುವೆಗೆ ಬರುವವರಿಗೆ ಎಲ್ಲರಿಗೂ ವಿಮಾನದ ಟಿಕೆಟ್‌ ಬುಕ್‌ ಮಾಡಲಾಗಿದೆ. ಫೈವ್‌ ಸ್ಟಾರ್‌ ಹೋಟೆಲ್‌ನಲ್ಲಿ ಅವರಿಗೆ ಉಳಿದುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ. ಅದ್ಧೂರಿ ಮದುವೆಯ ವಿಡಿಯೊ ಈಗ ಭಾರಿ ವೈರಲ್‌ ಆಗಿದೆ.

VISTARANEWS.COM


on

Rich Wedding
Koo

ಬೀಜಿಂಗ್‌: ಸಂಬಂಧಿಕರು, ಸ್ನೇಹಿತರು, ಹಿತೈಷಿಗಳ ಮದುವೆಗೆ ಹೋದರೆ ಮುಯ್ಯಿ ಮಾಡಿ ಬರುವುದು, ಉಡುಗೊರೆ ನೀಡಿ, ಶುಭ ಹಾರೈಸಿ ಬರುವುದು ವಾಡಿಕೆ. ಆದರೆ, ಮದುವೆಗೆ ಹೋದವರಿಗೇ ಯಾರೂ ಉಡುಗೊರೆ ಕೊಡುವುದಿಲ್ಲ. ಶ್ರೀಮಂತರ ಮದುವೆಯಾದರೆ ಸಣ್ಣ-ಪುಟ್ಟ ಉಡುಗೊರೆ ನೀಡುತ್ತಾರೆ. ಆದರೆ, ಚೀನಾದಲ್ಲಿ (China) ಹಾಗಲ್ಲ. ಶ್ರೀಮಂತ ಯುವಕ-ಯುವತಿಯು ಅದ್ಧೂರಿಯಾಗಿ (Rich Wedding) ಮದುವೆಯಾಗಿದ್ದು, ಮದುವೆಗೆ ಹಾಜರಾದವರಿಗೇ 66 ಸಾವಿರ ರೂ. ನಗದು ಉಡುಗೊರೆ ಸೇರಿ ಹಲವು ದುಬಾರಿ ಉಡುಗೊರೆಗಳನ್ನು ನೀಡಿದ್ದಾರೆ.

ಪ್ರವಾಸಿ ಇನ್‌ಫ್ಲುಯೆನ್ಸರ್‌ ಆಗಿರುವ ದಾನಾ ಚಾಂಗ್‌ ಅವರು ಶ್ರೀಮಂತರ ಮದುವೆಯೊಂದರ ವಿಡಿಯೊವನ್ನು ಹಂಚಿಕೊಂಡಿದ್ದಾರೆ. “ಏಷ್ಯಾದ ಅದ್ಧೂರಿ ಮದುವೆಯು ಅದ್ಧೂರಿಯಾಗಿದೆ. ನಾನು ನನ್ನ ಜೀವನದಲ್ಲಿಯೇ ಇಂತಹ ಅದ್ಧೂರಿ ಮದುವೆಯನ್ನು ನೋಡಿಲ್ಲ” ಎಂದು ಪೋಸ್ಟ್‌ ಮಾಡಿದ್ದಾರೆ. ಈ ವಿಡಿಯೊ ಈಗ ಭಾರಿ ವೈರಲ್‌ ಆಗಿದೆ. ಆದರೆ, ಅದು ಯಾರ ಮದುವೆ? ಯುವಕ-ಯುವತಿಯ ತಂದೆ-ತಾಯಿ ಯಾರು? ಅವರು ಎಷ್ಟು ಶ್ರೀಮಂತರು ಎಂಬುದು ಸೇರಿ ಯಾವುದೇ ಮಾಹಿತಿಯನ್ನು ಅವರು ಹಂಚಿಕೊಂಡಿಲ್ಲ.

ಮದುವೆಗೆ ಹಾಜರಾಗುವವರಿಗೆ ಏನೆಲ್ಲ ಸೌಲಭ್ಯ?

ಜಗತ್ತಿನ ಮೂಲೆ ಮೂಲೆಯಿಂದ ಸಾವಿರಾರು ಜನ ಮದುವೆಗೆ ಹಾಜರಾಗಿದ್ದಾರೆ. ಮದುವೆಗೆ ಬರುವವರಿಗೆ ಎಲ್ಲರಿಗೂ ವಿಮಾನದ ಟಿಕೆಟ್‌ ಬುಕ್‌ ಮಾಡಲಾಗಿದೆ. ಫೈವ್‌ ಸ್ಟಾರ್‌ ಹೋಟೆಲ್‌ನಲ್ಲಿ ಅವರಿಗೆ ಉಳಿದುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ. ಇನ್ನು, ಫೈವ್‌ ಸ್ಟಾರ್‌ ಹೋಟೆಲ್‌ನಿಂದ ಮದುವೆ ನಡೆಯುವ ಸ್ಥಳಕ್ಕೆ ರೋಲ್ಸ್‌ ರಾಯ್ಸ್‌ ಕಾರಿನ ವ್ಯವಸ್ಥೆಯನ್ನೂ ಮಾಡಲಾಗಿದೆ. ಇನ್ನು, ಮದುವೆ ಮಂಟಪದಲ್ಲಿ ಊಟ-ತಿಂಡಿ, ಐಸ್‌ಕ್ರೀಮ್‌ಗಳ ವೈವಿಧ್ಯತೆಗಂತೂ ಲೆಕ್ಕವೇ ಇರಲಿಲ್ಲ ಎಂದು ತಿಳಿದುಬಂದಿದೆ.

ಭಾರತದಲ್ಲೂ ಮುಕೇಶ್‌ ಅಂಬಾನಿ ಅವರಂತಹ ಶ್ರೀಮಂತರು ಅದ್ಧೂರಿಯಾಗಿ ಮದುವೆ ಮಾಡುತ್ತಾರೆ. ವಿರಾಟ್‌ ಕೊಹ್ಲಿ, ರಣವೀರ್‌ ಸಿಂಗ್‌ ಅವರಂತಹ ಸೆಲೆಬ್ರಿಟಿಗಳು ಇಟಲಿ ಸೇರಿ ಬೇರೆ ದೇಶಗಳಲ್ಲಿ ಅದ್ಧೂರಿಯಾಗಿ ಮದುವೆಯಾಗಿ, ಭಾರತದಲ್ಲಿ ರೆಸೆಪ್ಶನ್‌ ಇಟ್ಟುಕೊಳ್ಳುತ್ತಾರೆ. ಆದರೆ, ಯಾರೂ ಮದುವೆಗೆ ಬಂದವರಿಗೆ ಸಾವಿರಾರು ರೂ. ನಗದು, ದುಬಾರಿ ಉಡುಗೊರೆ ಕೊಡುವುದಿಲ್ಲ. ಕೊಡಬೇಕು ಎಂಬ ಸಂಪ್ರದಾಯ ಇಲ್ಲದಿದ್ದರೂ ಚೀನಾದಲ್ಲಿ ಮಾತ್ರ ಶ್ರೀಮಂತ ಯುವಕ-ಯುವತಿಯು ಉಡುಗೊರೆ ಕೊಟ್ಟು ಸುದ್ದಿಯಾಗಿದ್ದಾರೆ.

ಇದನ್ನೂ ಓದಿ: Sapthami Gowda: ʻಯುವʼ ಹೇಳಿದ್ದಕ್ಕೆ ಮುಂದುವರಿದೆ, ನನ್ನದೂ ತಪ್ಪಿದೆ; ಸಪ್ತಮಿ ಗೌಡ ಆಡಿಯೊ ವೈರಲ್!

Continue Reading

Latest

Viral Video: ಒಂಟಿ ಯುವತಿಯ ಮೇಲೆ ದುಷ್ಕರ್ಮಿಯ ದಾಳಿ; ಆಕೆ ಪಾರಾಗಿದ್ದು ಹೇಗೆ?

Viral Video: ಮಹಿಳೆಯರ ಮೇಲೆ ಒಂದಿಲ್ಲೊಂದು ಕಾರಣಕ್ಕೆ ಏನಾದರೂ ಕಿರುಕುಳ ನಡೆಯುತ್ತಲೇ ಇರುತ್ತದೆ. ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಯುವತಿಯೊಬ್ಬಳನ್ನು ಹಿಂದಿನಿಂದ ಬಂದ ಯುವಕನೊಬ್ಬ ಹಿಡಿದು ಎಳೆದಾಡಿದ. ಇದರಿಂದ ಹೆದರಿದ ಆಕೆ ಓಡಲು ಪ್ರಯತ್ನಿಸಿದರೂ ಆತ ಬಿಡಲಿಲ್ಲ. ಆ ವೇಳೆ ಒಬ್ಬ ದಾರಿಹೋಕ ಇದನ್ನು ಕಂಡು ಕಾಣದಂತೆ ಸುಮ್ಮನೆ ನಡೆದುಕೊಂಡು ಮುಂದೆ ಹೋದ. ಆದರೆ ಅಷ್ಟರಲ್ಲಿ ಬಸ್ಸೊಂದು ಬಂತು. ಮುಂದೇನಾಯಿತು? ಈ ವಿಡಿಯೊ ನೋಡಿ.

VISTARANEWS.COM


on

Viral Video
Koo

ಸಮಾಜದಲ್ಲಿ ಮಹಿಳೆಯರು ವಿವಿಧ ರೀತಿಯ ಕಿರುಕುಳಗಳಿಗೆ ಒಳಗಾಗುತ್ತಿದ್ದಾರೆ. ಆದರೆ ಕೆಲವರು ಕಂಡೂ ಕಾಣದಂತೆ ಸುಮ್ಮನಿದ್ದರೆ ಇನ್ನೂ ಕೆಲವರು ಮಹಿಳೆಯರ ಸಹಾಯಕ್ಕೆ ಬಂದು ಅವರನ್ನು ರಕ್ಷಿಸುವ ಮನೋಭಾವವುಳ್ಳವರಾಗಿರುತ್ತಾರೆ. ಅಂತಹದೊಂದು ಘಟನೆ ಇದೀಗ ನಡೆದಿದ್ದು, ಇದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗಿದೆ.

ಇತ್ತೀಚೆಗೆ ರಸ್ತೆಯಲ್ಲಿ ನಡೆದುಕೊಂಡು ಬರುತ್ತಿದ್ದ ಯುವತಿಯೊಬ್ಬಳಿಗೆ ಯುವಕನೊಬ್ಬ ಕಿರುಕುಳ ನೀಡುತ್ತಿದ್ದು, ಇದನ್ನು ಕಂಡು ಬಸ್‌ನ ಪ್ರಯಾಣಿಕರು ಆಕೆಯ ಸಹಾಯಕ್ಕೆ ಧಾವಿಸಿದ್ದಾರೆ. ಈ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.

ರಸ್ತೆಯಲ್ಲಿ ಯುವತಿಯೊಬ್ಬಳು ನಡೆದುಕೊಂಡು ಬರುತ್ತಿದ್ದಳು. ಆ ವೇಳೆ ಆಕೆಯ ಹಿಂದಿನಿಂದ ಬಂದ ಯುವಕನೊಬ್ಬ ಆಕೆಯನ್ನು ರಸ್ತೆಯ ಮೇಲೆ ಹಿಡಿದು ಎಳೆದಾಡಿದ. ಇದರಿಂದ ಹೆದರಿದ ಆಕೆ ಓಡಲು ಪ್ರಯತ್ನಿಸಿದರೂ ಆತ ಬಿಡಲಿಲ್ಲ. ಆ ವೇಳೆ ಒಬ್ಬ ದಾರಿಹೋಕ ಇದನ್ನು ಕಂಡೂ ಕಾಣದಂತೆ ಸುಮ್ಮನೆ ನಡೆದುಕೊಂಡು ಮುಂದೆ ಹೋದ. ಆದರೆ ರಸ್ತೆಯಲ್ಲಿ ಬರುತ್ತಿದ್ದ ಬಸ್‌ನ ಪ್ರಯಾಣಿಕರು ಈ ದೃಶ್ಯವನ್ನು ಕಂಡು ಬಸ್ ನಿಲ್ಲಿಸಿ ಅದರಲ್ಲಿದ್ದ ಪುರುಷರು ಒಟ್ಟಾಗಿ ಯುವತಿಯ ಸಹಾಯಕ್ಕೆ ಬಂದಿದ್ದಾರೆ. ಆ ಯುವಕನನ್ನು ಹಿಡಿದು ಹಿಗ್ಗಾಮುಗ್ಗಾ ಬಾರಿಸಿದ್ದಾರೆ.

ಇದನ್ನೂ ಓದಿ:  ಬಿಜೆಪಿಗೆ ಮತ ಹಾಕಿದ್ದಕ್ಕೆ ಪತ್ನಿಗೆ ತ್ರಿವಳಿ ತಲಾಖ್ ನೀಡಿದ ಪತಿ!

ಹಾಗಾಗಿ ಸಮಾಜದಲ್ಲಿ ಯಾವುದೇ ರೀತಿಯ ದುರ್ವತನೆಗಳನ್ನು ಕಂಡಾಗ ಅದನ್ನು ಎದುರಿಸಲು ಮುಂದಾಗಬೇಕು. ಕಿರುಕುಳದ ವಿರುದ್ಧ ಧ್ವನಿ ಎತ್ತಿ ನಿಲ್ಲುವುದು ಕೇವಲ ನಮ್ಮ ಜವಾಬ್ದಾರಿ ಮಾತ್ರವಲ್ಲ ಅದು ಸಾಮಾಜಿಕ ಕರ್ತವ್ಯ ಎಂಬುದನ್ನು ತಿಳಿಯಿರಿ. ಇದರಿಂದ ಸಮಾಜದಲ್ಲಾಗುವ ದೌರ್ಜನ್ಯಗಳ ವಿರುದ್ಧ ಹೋರಾಡಬಹುದು. ಹಾಗೂ ಅವುಗಳನ್ನು ನಿರ್ಮೂಲನೆ ಮಾಡಬಹುದು ಎಂಬ ಸಂದೇಶವನ್ನು ಈ ಘಟನೆ ಮತ್ತು ವಿಡಿಯೊ ಸಾರಿದೆ.

Continue Reading

Latest

Viral Video: ನಡುರಸ್ತೆಯಲ್ಲಿ ಶಿಕ್ಷಕಿಯ ಹಣೆಗೆ ಸಿಂಧೂರ ಹಚ್ಚಿ ಬಲವಂತವಾಗಿ ಮದುವೆಯಾದ ಯುವಕ!

Viral Video: ಕೆಲಸ ಮುಗಿಸಿ ತಂದೆಯೊಡನೆ ಮನೆಗೆ ಬರುತ್ತಿದ್ದ ಶಾಲಾ ಶಿಕ್ಷಕಿಯನ್ನು ಅಡ್ಡಗಟ್ಟಿದ ಯುವಕನೊಬ್ಬ ಬಲವಂತವಾಗಿ ಅವಳ ಹಣೆಗೆ ಸಿಂಧೂರ ಹಚ್ಚಿ ಮದುವೆಯಾಗಲು ಯತ್ನಿಸಿದ ಅಮಾನವೀಯವಾದ ಘಟನೆಯೊಂದು ನಡೆದಿದೆ. ಶಿಕ್ಷಕಿಯ ತಂದೆ ಯುವಕನಿಂದ ತಮ್ಮ ಮಗಳನ್ನು ರಕ್ಷಿಸಲು ಪ್ರಯತ್ನಿಸಲು ಒದ್ದಾಡುತ್ತಿದ್ದರೂ ಲೆಕ್ಕಿಸದೇ ಸಿಂಧೂರ ಹಚ್ಚಲು ಪ್ರಯತ್ನಿಸಿದ್ದಾನೆ. ಇನ್ನೊಬ್ಬ ಯುವಕ ಇದನ್ನು ವಿಡಿಯೊ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾನೆ. ಇದು ವೈರಲ್ ಆಗಿದೆ.

VISTARANEWS.COM


on

Viral Video
Koo

ಬಿಹಾರ: ಕೆಲವೊಂದು ಕಡೆಗಳಲ್ಲಿ ಮಹಿಳೆಯ ಕುತ್ತಿಗೆಗೆ ಮಾಂಗಲ್ಯ ಸರ ಕಟ್ಟಿದರೆ ಮದುವೆಯಾದ ಹಾಗೇ. ಅದೇರೀತಿ ಕೆಲವು ಕಡೆಗಳಲ್ಲಿ ಹಣೆಗ ಸಿಂಧೂರ ಹಚ್ಚಿದರೆ ಅವರಿಬ್ಬರು ದಂಪತಿ ಎಂದು ಪರಿಗಣಿಸುತ್ತಾರೆ. ಹಾಗಾಗಿ ಇಂತಹದೊಂದು ಸಂಪ್ರದಾಯವನ್ನಿಟ್ಟುಕೊಂಡು ಯುವಕನೊಬ್ಬ ಶಾಲಾ ಶಿಕ್ಷಕಿಯ ಹಣೆಗೆ ಸಿಂಧೂರ ಹಚ್ಚಿ ಆಕೆಯ ತಂದೆಯ ಎದುರೇ ಬಲವಂತವಾಗಿ ಮದುವೆಯಾಗಲು ಯತ್ನಿಸಿದ ಘಟನೆ ಬಿಹಾರದ ಬಂಕಾ ಜಿಲ್ಲೆಯ ಅಮರಪುರ ಬ್ಲಾಕ್‌ನಲ್ಲಿ ನಡೆದಿದೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ.

ವಿಡಿಯೊದಲ್ಲಿ ಶಾಲೆ ಕೆಲಸ ಮುಗಿಸಿ ಶಿಕ್ಷಕಿ ತನ್ನ ತಂದೆಯೊಂದಿಗೆ ಬೈಕಿನಲ್ಲಿ ಬರುವಾಗ ಯುವಕರಿಬ್ಬರು ಅವರನ್ನು ರಸ್ತೆಯಲ್ಲಿ ತಡೆದು ನಿಲ್ಲಿಸಿದ್ದಾರೆ. ಅದರಲ್ಲಿ ಒಬ್ಬ ಯುವಕ ಬಲವಂತವಾಗಿ ಆಕೆಯ ಹಣೆಗೆ ಸಿಂಧೂರವನ್ನು ಹಚ್ಚಲು ಪ್ರಯತ್ನಿಸಿದ್ದಾನೆ. ಯುವಕ ತನ್ನ ಮುಖವನ್ನು ಬಟ್ಟೆಯಿಂದ ಮುಚ್ಚಿಕೊಂಡಿದ್ದಾನೆ. ಹಾಗೇ ಶಿಕ್ಷಕಿಯ ತಂದೆ ಯುವಕನಿಂದ ತಮ್ಮ ಮಗಳನ್ನು ರಕ್ಷಿಸಲು ಪ್ರಯತ್ನಿಸುತ್ತಿದ್ದಾರೆ. ಶಿಕ್ಷಕಿ ತಲೆಯನ್ನು ತನ್ನ ದುಪ್ಪಟ್ಟದಿಂದ ಮುಚ್ಚಿಕೊಂಡಿದ್ದರು ಕೂಡ ಆತ ಸಿಂಧೂರ ಹಚ್ಚಿದ್ದಾನೆ. ಇನ್ನೊಬ್ಬ ಯುವಕ ಇದನ್ನು ವಿಡಿಯೊ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾನೆ. ಇದು ವೈರಲ್ ಆಗಿದೆ.

ವಿಡಿಯೊದಲ್ಲಿ ಯುವಕ ತನ್ನ ಜೀವನ ಆಕೆಯಿಂದ ಹಾಳಾಗಿದೆ ಎಂದು ಹೇಳಿದ್ದಾನೆ. ಈ ಘಟನೆ ಬಳಿಕ ಶಿಕ್ಷಕಿ ಯುವಕನ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾಳೆ. ದೂರಿನಲ್ಲಿ ಶಿಕ್ಷಕಿ, ಬಭಂಗಮಾ ನಿವಾಸಿ ಸೌರಭ್ ಸೋನು ಎಂಬ ಯುವಕನೊಬ್ಬ ಪೋನ್‌ನಲ್ಲಿ ತನಗೆ ವೈಯಕ್ತಿಕವಾಗಿ ಕಿರುಕುಳ ನೀಡುತ್ತಿದ್ದಾನೆ. ತಾನು ಬಿಪಿಎಸ್‌ಸಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಅಮರಪುರದ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡಲು ಶುರುಮಾಡಿದಾಗಿನಿಂದ ತನ್ನನ್ನು ಮದುವೆಯಾಗುವಂತೆ ಆತ ಒತ್ತಡ ಹಾಕುತ್ತಿದ್ದಾನೆ ಎಂದು ತಿಳಿಸಿದ್ದಾಳೆ. ಅಲ್ಲದೇ ಎರಡು ತಿಂಗಳ ಹಿಂದೆ ಯುವಕನ ವಿರುದ್ಧ ಲಿಖಿತ ದೂರು ನೀಡಿದ ಹಿನ್ನಲೆಯಲ್ಲಿ ಪೊಲೀಸರು ಆತನನ್ನು ಕರೆದು ಎಚ್ಚರಿಕೆ ನೀಡಿದ್ದರೂ ಕೂಡ ಆತ ಆಕೆಗೆ ಕಿರುಕುಳ ನೀಡುವುದನ್ನು ಮುಂದುವರಿಸಿದ್ದಾನೆ. ಇದೀಗ ಆತನ ವಿರುದ್ಧ ಮತ್ತೊಂದು ದೂರು ದಾಖಲಿಸಿದ ಶಿಕ್ಷಕಿ ನ್ಯಾಯಕ್ಕಾಗಿ ಕಾಯುತ್ತಿದ್ದಾಳೆ.

ಇದನ್ನೂ ಓದಿ:ರೈಲು ಪ್ರಯಾಣಿಕರೇ, ಬರ್ತ್‌ನಲ್ಲಿ ಮಲಗುವ ಕುರಿತ ಈ ಹೊಸ ರೂಲ್ಸ್‌ ನೆನಪಿನಲ್ಲಿರಲಿ!

ಈ ವಿಡಿಯೊ ಜೂನ್ 27ರಂದು ಪೋಸ್ಟ್ ಆಗಿದ್ದು, ಇದಕ್ಕೆ 3.5 ಲಕ್ಷ ಲೈಕ್ಸ್ ಬಂದಿದೆ. ಹಾಗೇ ಅನೇಕ ಜನರು ಇದಕ್ಕೆ ಕಾಮೆಂಟ್ ಮಾಡಿದ್ದಾರೆ. ಇಂತಹ ಘಟನೆಗಳು ಹಲವು ಕಡೆ ನಡೆಯುತ್ತಿರುತ್ತದೆ. ಇದರಿಂದ ಅದೆಷ್ಟೋ ಹೆಣ್ಣುಮಕ್ಕಳ ಜೀವನ ಹಾಳಾಗಿದೆ. ಹಾಗಾಗಿ ಭವಿಷ್ಯದಲ್ಲಿ ಮಹಿಳೆಯರ ಮೇಲೆ ಮತ್ತೆ ಇಂತಹ ಘಟನೆಗಳು ನಡೆಯದಂತೆ ಆರೋಪಿಗಳ ವಿರುದ್ಧ ಕಠಿಣ ಕ್ರಮ ತೆಗದುಕೊಳ್ಳುವಂತೆ ನೆಟ್ಟಿಗರು ಆಗ್ರಹಿಸಿದ್ದಾರೆ.

Continue Reading

Latest

Viral Video: ನೋಡುಗರ ಕಣ್ಮನ ಸೆಳೆಯುತ್ತಿದೆ ಅನಂತ್‌ ಅಂಬಾನಿ-ರಾಧಿಕಾ ಮರ್ಚೆಂಟ್ ವಿವಾಹ ಆಮಂತ್ರಣ ಪತ್ರಿಕೆ

Viral Video: ದೇಶದ ಆಗರ್ಭ ಶ್ರೀಮಂತ ಕುಟುಂಬದ ಕುಡಿಯಾದ ಅನಂತ್ ಅಂಬಾನಿ ಸದ್ಯದಲ್ಲಿಯೇ ರಾಧಿಕಾ ಮರ್ಚೆಂಟ್ ಅವರ ಕೈಹಿಡಿದು ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ. ಶ್ರೀಮಂತ ಕುಟುಂಬವೆಂದರೆ ಕೇಳಬೇಕಾ…? ಈಗಾಗಲೇ ಇವರಿಬ್ಬರ ನಿಶ್ಚಿತಾರ್ಥದ ವಿಡಿಯೊ, ಪ್ರೀ ವೆಡ್ಡಿಂಗ್ ವಿಡಿಯೊ ಸಿಕ್ಕಾಪಟ್ಟೆ ವೈರಲ್ ಆಗಿದೆ. ಈಗ ಮದುವೆ ಆಮಂತ್ರಣ ಪತ್ರಿಕೆ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದೆ. ಇದನ್ನು ನೋಡಿದವರು ಆಶ್ಚರ್ಯಗೊಳ್ಳುವುದರಲ್ಲಿ ಸಂಶಯವೇ ಇಲ್ಲ.

VISTARANEWS.COM


on

Viral Video
Koo

ಮುಂಬೈ : ಮದುವೆ ಜೀವನದಲ್ಲಿ ಬಹಳ ವಿಶೇಷವಾದದ್ದು. ಶ್ರೀಮಂತ ಕುಟುಂಬದವರು ಮದುವೆಗಳನ್ನು ಬಹಳ ಅದ್ಧೂರಿಯಾಗಿ ಮಾಡುತ್ತಾರೆ. ಅದರಲ್ಲಿ ಅಂಬಾನಿ ಕುಟುಂಬ ಕೂಡ ಒಂದು. ಸದ್ಯದಲ್ಲೇ ಅಂಬಾನಿ ಮನೆತನದ ಕುಡಿ ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಹಸೆಮಣೆ ಏರಲಿದ್ದಾರೆ. ಹಾಗಾಗಿ ಅವರ ಮದುವೆ ಆಮಂತ್ರಣದ ವಿಡಿಯೊ ಇನ್ ಸ್ಟಾಗ್ರಾಂನಲ್ಲಿ ಹರಿದಾಡುತ್ತಿದ್ದು, ಸಖತ್ ವೈರಲ್(Viral Video) ಆಗಿದೆ.

Viral Video

ರಿಲಯನ್ಸ್ ಕಂಪೆನಿಯ ಅಧ್ಯಕ್ಷ ಮುಖೇಶ್ ಅಂಬಾನಿ ಯವರ ಕಿರಿಯ ಪುತ್ರ ಅನಂತ್ ಅಂಬಾನಿ ಹಾಗೂ ಎನ್ ಕೋರ್ ಹೆಲ್ತ್ ಕೇರ್‌ನ ಸಿಇಒ, ವೈಸ್ ಚೇರ್ಮನ್ ವಿರೇನ್ ಮರ್ಚೆಂಟ್ ಅವರ ಪುತ್ರಿ ರಾಧಿಕಾ ಮರ್ಚೆಂಟ್ ಅವರ ವಿವಾಹ ಜುಲೈ 12 ರಂದು ಮುಂಬೈನಲ್ಲಿ ನಡೆಯಲಿದೆ.

Viral Video

ಈ ಹಿಂದೆ ನಡೆದ ವಿವಾಹ ನಿಶ್ಚಿತಾರ್ಥ ಸಮಾರಂಭ ಕೂಡ ಬಹಳ ಸಡಗರದಿಂದ ಆಚರಿಸಲಾಗಿತ್ತು. ಇದೀಗ ಶ್ರೀಮಂತಿಕೆ ಹಾಗೂ ಸಾಂಸ್ಕೃತಿಕ ಪರಂಪರೆ ಎರಡನ್ನೂ ಒಳಗೊಂಡಿರುವ ಮದುವೆಯ ಆಮಂತ್ರಣ ಬಹಳ ಸದ್ದು ಮಾಡುತ್ತಿದೆ. ಇದಕ್ಕೆ ಅನೇಕ ಜನರು ಆಕರ್ಷಿತರಾಗಿದ್ದಾರೆ.

Viral Video

ಆಮಂತ್ರಣ ವಿನ್ಯಾಸವನ್ನು ಸಾಂಪ್ರದಾಯಿಕ ಭಾರತೀಯ ದೇವಾಲಯಗಳಿಗೆ ಗೌರವ ನೀಡುವಂತದಾಗಿದೆ. ಇದನ್ನು ಬೆಳ್ಳಿಯಲ್ಲಿ ರಚಿಸಲಾಗಿದೆ. ಮತ್ತು ಅದರಲ್ಲಿ ಹಿಂದೂ ದೇವರುಗಳಾದ ಗಣೇಶ, ವಿಷ್ಣು, ಲಕ್ಷ್ಮಿ, ರಾಧಾಕೃಷ್ಣ ಮತ್ತು ದುರ್ಗಾದೇವಿಯ ಚಿತ್ರಗಳಿಂದ ಅಲಂಕರಿಸಲಾಗಿದೆ. ಸಾಮಾನ್ಯವಾಗಿ ಈ ದೇವರುಗಳನ್ನು ಜನರು ತಮ್ಮ ಮದುವೆ ಆಮಂತ್ರಣ ಪತ್ರಿಕೆಯಲ್ಲಿ ಹಾಕುತ್ತಾರೆ. ಹಾಗಾಗಿ ಅಂಬಾನಿ ಕುಟುಂಬದವರು ಕೂಡ ಈ ಸಂಪ್ರದಾಯವನ್ನು ಶ್ರದ್ಧೆಯಿಂದ ಪಾಲಿಸಿದ್ದಾರೆ ಎನ್ನಲಾಗಿದೆ.

ಆಮಂತ್ರಣ ಪತ್ರಿಕೆಯ ಕೆಂಪು ಬಣ್ಣದ ಹೊರಭಾಗವನ್ನು ಹೊಂದಿದ್ದು, ಅದರಲ್ಲಿರುವ ವಿಷಯವನ್ನು ಬಹಿರಂಗಪಡಿಸಲು ತೆರೆಯುವ ಬಾಗಿಲಿನ ವಿನ್ಯಾಸ ಮಾಡಲಾಗಿದೆ. ಈ ಆಮಂತ್ರಣ ಪೆಟ್ಟಿಗೆಯಲ್ಲಿ ಬೆಳ್ಳಿಯ ದೇವಾಲಯದೊಳಗೆ ಚಿನ್ನದ ವಿಗ್ರಹಗಳನ್ನು ಒಳಗೊಂಡಿದೆ.

Viral Video

ಅದರಲ್ಲಿ ಜುಲೈ 12ರಂದು ಶುಭವಿವಾಹ, ಜುಲೈ 13ಕ್ಕೆ ಶುಭ ಆಶೀರ್ವಾದ ಮತ್ತು ಜುಲೈ14ಕ್ಕೆ ಮಂಗಲ್ ಉತ್ಸವದೊಂದಿಗೆ ಮುಕ್ತಾಯಗೊಳ್ಳುತ್ತದೆ. ಪ್ರತಿಯೊಂದು ಕಾರ್ಯಕ್ರಮಕ್ಕೂ ಆಮಂತ್ರಣ ಪತ್ರಿಕೆಯನ್ನು ಪ್ರತ್ಯೇಕವಾಗಿ ಆ ಪೆಟ್ಟಿಗೆಯಲ್ಲಿ ಇರಿಸಲಾಗಿದೆ.

Viral Video

ಒಟ್ಟಾರೆ ವಿವಾಹ ಸಮಾರಂಭ ಬಹುದಿನಗಳ ಕಾಲ ನಡೆಯಲಿದೆ ಎನ್ನಲಾಗಿದೆ. ಅಷ್ಟೇ ಅಲ್ಲದೇ ಆಮಂತ್ರಣವು ನೀತಾ ಅಂಬಾನಿಯವರ ಕೈಬರಹದ ಟಿಪ್ಪಣಿಯನ್ನು ಒಳಗೊಂಡಿದೆ.

ಅದರಲ್ಲಿ ಅವರು ತಮ್ಮ ವೈಯಕ್ತಿಕ ಭಾವನೆಯನ್ನು ವ್ಯಕ್ತಪಡಿಸಿದ್ದಾರೆ ಮತ್ತು ಈ ಸಮಾರಂಭಕ್ಕೆ ಅತಿಥಿಗಳನ್ನು ಸಂತೋಷದಿಂದ ಆಹ್ವಾನಿಸಿದ್ದಾರೆ.

ಇದನ್ನೂ ಓದಿ: ಆರ್ಡರ್ ಮಾಡಿ 6 ವರ್ಷ ಕಳೆದರೂ ವಸ್ತು ಕಳುಹಿಸದ ಫ್ಲಿಪ್‌ಕಾರ್ಟ್!

ಒಟ್ಟಾರೆ ಈ ಆಮಂತ್ರಣ ಪತ್ರಿಕೆಯು ಅದರ ವಿನ್ಯಾಸದಿಂದಾಗಿ ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಪ್ರಶಂಸೆಗೆ ಒಳಗಾಗಿದೆ. ಇದರಲ್ಲಿ ಹಿಂದೂದೇವರನ್ನು ಚಿತ್ರಿಸಿದ ಕಾರಣ ಅಂಬಾನಿ ಕುಟುಂಬವದರಿಗೆ ದೇವರ ಬಗ್ಗೆ ಇರುವ ಗೌರವ ವ್ಯಕ್ತವಾಗುತ್ತದೆ. ಒಟ್ಟಾರೆ ಈ ಮದುವೆಯು ಭವ್ಯವಾಗಿ, ಬಹಳ ಅದ್ಧೂರಿಯಿಂದ ನಡೆಯುವುದಂತೂ ಖಂಡಿತ ಎಂಬುದು ಈ ಆಮಂತ್ರಣದಿಂದ ತಿಳಿಯುತ್ತದೆ.

Continue Reading
Advertisement
SHAFALI VERMA
ಕ್ರಿಕೆಟ್7 mins ago

SHAFALI VERMA: 40 ವರ್ಷದ ಟೆಸ್ಟ್​ ದಾಖಲೆ ಮುರಿದ ಭಾರತದ ಶಫಾಲಿ ವರ್ಮ

Rich Wedding
ಪ್ರಮುಖ ಸುದ್ದಿ14 mins ago

ಮದುವೆಗೆ ಹೋದವರಿಗೆ 66 ಸಾವಿರ ರೂ. ನಗದು, ಭರ್ಜರಿ ಗಿಫ್ಟ್‌ ಕೊಟ್ಟ ದಂಪತಿ; ಎಲ್ಲಿ ಅಂತೀರಾ…?‌

Actor Darshan A young woman came to Parappa Agrahara to see Darshan
ಕ್ರೈಂ17 mins ago

Actor Darshan: ಪರಪ್ಪನ ಅಗ್ರಹಾರಕ್ಕೆ ದರ್ಶನ್‌ ನೋಡಲು ಆಗಮಿಸಿದ ಯುವತಿ; ಯಾರಾಕೆ?

Valmiki Corporation Scam Zameer Ahmed appointed as Ballari district in-charge minister
ಬಳ್ಳಾರಿ21 mins ago

Valmiki Corporation Scam: ಬಿ ನಾಗೇಂದ್ರ ರಾಜೀನಾಮೆ ಬೆನ್ನಲ್ಲೇ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರಾಗಿ ಜಮೀರ್‌ ಅಹ್ಮದ್ ನೇಮಕ

T20 World Cup Final
ಕ್ರೀಡೆ44 mins ago

T20 World Cup Final: ಚೋಕರ್ಸ್ ಹಣೆಪಟ್ಟಿ ಕಳಚಿಕೊಳ್ಳುವುದೇ ದಕ್ಷಿಣ ಆಫ್ರಿಕಾ?; ನಾಳೆ ಫೈನಲ್​

Kannada Serials TRP Lakshmi Baramma in Top 5 new serials not in demand
ಕಿರುತೆರೆ52 mins ago

Kannada Serials TRP: ಟಾಪ್‌ 5ನಲ್ಲಿ ʻಲಕ್ಷ್ಮೀ ಬಾರಮ್ಮʼ; ಹೊಸ ಧಾರಾವಾಹಿಗಿಲ್ಲ ಬೇಡಿಕೆ!

ಕರ್ನಾಟಕ55 mins ago

CM Siddaramaiah: ಮೇಕೆದಾಟು ಯೋಜನೆಗೆ ತಮಿಳುನಾಡಿನ ತಕರಾರಿಲ್ಲ, ಕೇಂದ್ರ ಅನುಮತಿ ನೀಡಬೇಕು: ಸಿಎಂ ಸಿದ್ದರಾಮಯ್ಯ ಆಗ್ರಹ

ವಿದೇಶ1 hour ago

US Presidential Election: ರಂಗೇರುತ್ತಿದೆ ಅಮೆರಿಕ ಅಧ್ಯಕ್ಷೀಯ ಚುನಾವಣೆ; ಬೈಡೆನ್‌-ಟ್ರಂಪ್‌ ಮುಖಾಮುಖಿ; ಭರ್ಜರಿ ಟಾಕ್‌ ವಾರ್‌

NK Bailu victims to get relief soon says Incharge secretary Ritesh Kumar Singh
ಉತ್ತರ ಕನ್ನಡ1 hour ago

Uttara Kannada News: ಕಾರವಾರದ ಎನ್.ಕೆ. ಬೈಲು ಸಂತ್ರಸ್ತರಿಗೆ ತಕ್ಷಣ ಪರಿಹಾರಕ್ಕೆ ಸೂಚನೆ

Viral Video
Latest1 hour ago

Viral Video: ಒಂಟಿ ಯುವತಿಯ ಮೇಲೆ ದುಷ್ಕರ್ಮಿಯ ದಾಳಿ; ಆಕೆ ಪಾರಾಗಿದ್ದು ಹೇಗೆ?

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Rain
ಮಳೆ4 hours ago

Karnataka Rain : ಭಾರಿ ಮಳೆಗೆ ಪಾತಾಳ ಸೇರಿದ ಬಾವಿ; ಅಲೆಗಳ ಹೊಡೆತಕ್ಕೆ ಸಮುದ್ರಪಾಲಾದ ಮನೆ

Karnataka Weather Forecast
ಮಳೆ21 hours ago

Karnataka Weather : ಭಾರಿ ಮಳೆ ಹಿನ್ನೆಲೆ ದಕ್ಷಿಣ ಕನ್ನಡಕ್ಕೆ ರೆಡ್ ಅಲರ್ಟ್; ಶುಕ್ರವಾರವೂ ಶಾಲೆಗಳಿಗೆ ರಜೆ ಘೋಷಣೆ

karnataka Weather Forecast
ಮಳೆ22 hours ago

Karnataka Weather : ಭಾರಿ ಮಳೆಗೆ ಸೇತುವೆಯಿಂದ ಹೊಳೆಗೆ ಬಿದ್ದ ಕಾರು; ಮರ ಹಿಡಿದು ಪ್ರಾಣ ಉಳಿಸಿಕೊಂಡ ಸವಾರರು

Heart Attack
ಕೊಡಗು24 hours ago

Heart Attack : ಕೊಡಗಿನಲ್ಲಿ ಹೃದಯಾಘಾತಕ್ಕೆ ಯುವತಿ ಬಲಿ; ಹೆಚ್ಚಾಯ್ತು ಅಲ್ಪಾಯುಷ್ಯದ ಭಯ

karnataka Rains Effected
ಮಳೆ1 day ago

Karnataka Rain : ಧಾರಾಕಾರ ಮಳೆಗೆ ಸಡಿಲಗೊಂಡ ಗುಡ್ಡಗಳು; ಧರೆ ಕುಸಿದು ಮಣ್ಣಿನಡಿ ಸಿಲುಕಿದ ಇಬ್ಬರು ಮಕ್ಕಳು

karnataka Weather Forecast
ಮಳೆ4 days ago

Karnataka Weather : ಕರಾವಳಿಯಲ್ಲಿ ಮುಂದುವರಿದ ವರುಣಾರ್ಭಟ; ಸಾಂಪ್ರದಾಯಿಕ ಮೀನುಗಾರಿಕೆಗೂ ಬ್ರೇಕ್

karnataka weather Forecast
ಮಳೆ7 days ago

Karnataka Weather : ರಭಸವಾಗಿ ಹರಿಯುವ ನೀರಲ್ಲಿ ಸಿಲುಕಿದ ಬೊಲೆರೋ; ಬಿರುಗಾಳಿ ಸಹಿತ ಮಳೆ ಎಚ್ಚರಿಕೆ

International Yoga Day 2024
ಕರ್ನಾಟಕ1 week ago

International Yoga Day 2024: ಎಲ್ಲೆಲ್ಲೂ ಯೋಗಾಯೋಗ‌ಕ್ಕೆ ಮಂಡಿಯೂರಿದ ಜನತೆ

Karnataka Weather Forecast
ಮಳೆ1 week ago

Karnataka Weather : ಬಾಗಲಕೋಟೆ, ಬೆಂಗಳೂರು ಸೇರಿ ಚಿಕ್ಕಮಗಳೂರಲ್ಲಿ ಸುರಿದ ಗಾಳಿ ಸಹಿತ ಮಳೆ

Actor Darshan
ಮೈಸೂರು2 weeks ago

Actor Darshan : ಕೊಲೆ ಕೇಸ್‌ ಬೆನ್ನಲ್ಲೇ ನಟ ದರ್ಶನ್‌ ಸೇರಿ ಪತ್ನಿ ವಿಜಯಲಕ್ಷ್ಮಿಗೆ ಬಾರ್ ಹೆಡೆಡ್ ಗೂಸ್ ಸಂಕಷ್ಟ!

ಟ್ರೆಂಡಿಂಗ್‌