ಐರ್ಲೆಂಡ್: ತಾಯಿ ಕ್ಯಾನ್ಸರ್ (cancer) ವಿರುದ್ಧ ಹೋರಾಡುತ್ತಿದ್ದರೂ ಅವರನ್ನು ಮ್ಯಾನೇಜರ್ ಕೆಲಸಕ್ಕೆ ಬರಲು ಒತ್ತಾಯಿಸುತ್ತಿರುವುದಾಗಿ ಮಗಳು ಹಾಕಿರುವ ಪೋಸ್ಟ್ ವೊಂದು (post) ಸಾಮಾಜಿಕ ಜಾಲತಾಣದಲ್ಲಿ (social media) ವೈರಲ್ (viral news) ಆಗಿದ್ದು, ಕಂಪೆನಿಯ ಮ್ಯಾನೇಜರ್ ವಿರುದ್ಧ ನೆಟ್ಟಿಗರಿಂದ ಭಾರೀ ಆಕ್ರೋಶ ವ್ಯಕ್ತವಾಗಿದೆ.
ಕಳೆದ 18 ತಿಂಗಳಿನಿಂದ ತಾಯಿ 4ನೇ ಹಂತದ ಕ್ಯಾನ್ಸರ್‌ನೊಂದಿಗೆ ಹೋರಾಡುತ್ತಿದ್ದಾರೆ. ಆದರೆ ಅವರ ಮ್ಯಾನೇಜರ್ ಕೆಲಸಕ್ಕೆ ಮರಳುವಂತೆ ತಾಯಿಯ ಮೇಲೆ ಒತ್ತಡ ಹೇರುತ್ತಿರುವುದಾಗಿ ಕಾಲೇಜು ವಿದ್ಯಾರ್ಥಿ ಆನ್‌ಲೈನ್ ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾನೆ.
ರೆಡ್ಡಿಟ್ ನಲ್ಲಿ (reddit) ಕಳುಹಿಸಲಾದ ಇ ಮೇಲ್ ನ ಕಾಪಿಯನ್ನು @disneydoll96 ಎಂಬ ಹೆಸರಿನಲ್ಲಿ ಹಂಚಿಕೊಳ್ಳಲಾಗಿದೆ. ಇದರಲ್ಲಿ ಆಕೆಯ ಸಾಮರ್ಥ್ಯ, ಚಿಕಿತ್ಸೆಯ ಯೋಜನೆಗಳ ಜೊತೆಗೆ ಕೆಲಸ ಮಾಡಲು ಆಕೆಯ ಫಿಟ್‌ನೆಸ್ ಅನ್ನು ದೃಢೀಕರಿಸುವ ವೈದ್ಯರ ಟಿಪ್ಪಣಿಯನ್ನು ನೀಡುವಂತೆ ಆಕೆಯ ಕಚೇರಿ ಮ್ಯಾನೇಜರ್ ಕೇಳಿಕೊಂಡಿದ್ದಾನೆ. ತಾಯಿಯ ಮೇಲ್ವಿಚಾರಕರು ಕಳುಹಿಸಿದ ಇ-ಮೇಲ್‌ನ ಸ್ಕ್ರೀನ್‌ಶಾಟ್ ಅನ್ನು ಮಗಳು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾನೆ.
ಮಹಿಳೆಯ ಅನಾರೋಗ್ಯವನ್ನು ಕಡೆಗಣಿಸಿ, ಯಾವುದೇ ರೀತಿಯಲ್ಲಿ ಮಾನವೀಯ ಕಾಳಜಿ ತೋರದೆ ಕಚೇರಿಯಲ್ಲಿ ನಡೆಯುವ ಮರುದಿನದ ಮೀಟಿಂಗ್ ಗೆ ಹಾಜರಾಗಲು ಹೇಳಿರುವುದು ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ.
ಐರ್ಲೆಂಡ್‌ನಿಂದ ಹಂಚಿಕೊಂಡಿರುವ ಈ ಪೋಸ್ಟ್ ಭಾವನಾತ್ಮಕವಾಗಿದ್ದು, ಆರ್ಥಿಕ ಒತ್ತಡದ ನಡುವೆ ಮಾನಸಿಕ ಒತ್ತಡವನ್ನು ಉಂಟು ಮಾಡುವ ಪರಿಸ್ಥಿತಿಯ ಬಗ್ಗೆ ಹೇಳುತ್ತದೆ.
My Mum has stage 4 cancer in 5 areas and her boss has been pressuring her to come back to work.
byu/disneydoll96 inmildlyinfuriating
ಸಂಕಷ್ಠದಲ್ಲಿದೆ ಕುಟುಂಬ
ಅಂಗಡಿಯ ಮೇಲ್ವಿಚಾರಕಿಯಾಗಿರುವ ಮಹಿಳೆ ಕೆಲಸಕ್ಕೆ ಮರಳಲು ಬಯಸುತ್ತಿದ್ದಾರೆ. ಪತಿಯನ್ನು ಕಳೆದುಕೊಂಡಿರುವ ಮಹಿಳೆಯ ಮನೆಯಲ್ಲಿ ಆರ್ಥಿಕ ಸಂಕಷ್ಟವೂ ಎದುರಾಗಿದೆ. ಕುಟುಂಬ ನಿರ್ವಹಣೆಗಾಗಿ ಉದ್ಯೋಗ ಹುಡುಕುತ್ತಿರುವ ಮಗಳು ಈ ಪೋಸ್ಟ್ ಅನ್ನು ಹಂಚಿಕೊಂಡಿದ್ದಾಳೆ.
ಕ್ಯಾನ್ಸರ್ ನಾಲ್ಕನೇ ಹಂತ
ಈ ಬಗ್ಗೆ ಸಾಕಷ್ಟು ಮಂದಿ ಕಾಮೆಂಟ್ ಮಾಡಿದ್ದಾರೆ. ಇದರಲ್ಲಿ ಮಹಿಳೆಯ ಆರೋಗ್ಯದ ಬಗ್ಗೆ ಸಾಕಷ್ಟು ಮಂದಿ ಪ್ರಶ್ನೆಯನ್ನೂ ಕೇಳಿದ್ದಾರೆ. ಅದಕ್ಕೆ ಅವರ ಮಗಳು ಪ್ರತಿಕ್ರಿಯೆ ನೀಡಿದ್ದು, ತಾಯಿ ಈಗ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ. ಅವರ ರೋಗನಿರ್ಣಯದ ಬಳಿಕ ಸರಿಯಾದ ಚಿಕಿತ್ಸೆ ಪಡೆಯಲು ಹಣಕಾಸಿನ ತೊಂದರೆಯೂ ಎದುರಾಗಿದೆ. ಅವರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರ ತಂಡ ತಾಯಿಯ ಕ್ಯಾನ್ಸರ್ ನಾಲ್ಕನೇ ಹಂತದಲ್ಲಿದೆ ಎಂದು ಹೇಳಿದ್ದಾರೆ. ಚಿಕಿತ್ಸೆಯ ವೇಳೆ ಸಾಕಷ್ಟು ಹೋರಾಡುತ್ತಿದ್ದಾರೆ. ಬಹಳ ಸಮಯದಿಂದ ಕೀಮೋಥೆರಪಿಯಲ್ಲಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಮಗಳು ಹೇಳಿಕೊಂಡಿದ್ದಾಳೆ.
ನೆಟ್ಟಿಗರಿಂದ ಆಕ್ರೋಶ
ಇಷ್ಟೆಲ್ಲ ಗೊತ್ತಿದ್ದರೂ ಆಕೆಯನ್ನು ಕೆಲಸಕ್ಕೆ ಬರಲು ಒತ್ತಾಯಿಸುತ್ತಿರುವ ಮಹಿಳೆಯ ಮ್ಯಾನೇಜರ್ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ ಮತ್ತು ಅವರಿಗೆ ಸಾಂತ್ವನ ಹೇಳಿ ಹಲವಾರು ಸಲಹೆಗಳೂ ಬಂದಿವೆ.
.