Site icon Vistara News

Viral News: ಬಾಯ್‌ಫ್ರೆಂಡ್‌ನ ಗುಪ್ತಾಂಗವನ್ನೇ ಕಟ್‌ ಮಾಡಿ ಕಸದ ಬುಟ್ಟಿಗೆ ಎಸೆದ ಮಹಿಳೆ

Viral News

ನವದೆಹಲಿ: ಗಾಢನಿದ್ದೆಯಲ್ಲಿದ್ದ ಬಾಯ್‌ಫ್ರೆಂಡ್‌ನ ಗುಪ್ತಾಂಗವನ್ನೇ ಮಹಿಳೆಯೊಬ್ಬಳು ಕತ್ತರಿಸಿ ಎಸೆದಿರುವ ಘಟನೆ(Viral News) ಅಮೆರಿಕದ(America) ಕೊಲೋರಡೋ ಪ್ರದೇಶದಲ್ಲಿ ನರೆದಿದೆ. ತನ್ನನ್ನು ನೆಮ್ಮದಿಯಿಂದ ಮಲಗುವುದಕ್ಕೆ ಬಿಡದಿದ್ದ ಕಾರಣ ಮತ್ತು ಆತ ಮತ್ತೆ ತನ್ನನ್ನು ಗರ್ಭಿಣಿ(Pregnant)ಯನ್ನಾಗಿ ಮಾಡಿದ್ದಾನೆಂಬ ಕಾರಣಕ್ಕೆ ಕೋಪಗೊಂಡ ಮಹಿಳೆ ಬಾಯ್‌ಫ್ರೆಂಡ್‌ನ ಗುಪ್ತಾಂಗವನ್ನೇ ಕತ್ತರಿಸಿದ್ದಾಳೆ.

ಘಟನೆ ವಿವರ

ವುಡ್‌ಸ್ಪ್ರಿಂಗ್‌ ಸೂಟ್ಸ್‌ ಹೊಟೇಲ್‌ನಲ್ಲಿ ಘಟನೆ ನಡೆದಿದ್ದು, ಶೆಂಟಿಂಗ್‌ ಗೋ ಎಂಬ 32ವರ್ಷದ ಮಹಿಳೆ ತನ್ನ ಬಾಯ್‌ಫ್ರೆಂಡ್‌ ಅನ್ನು ಹಲವು ಬಾರಿ ಚುಚ್ಚಿದ್ದಾಳೆ. ಬಳಿಕ ಅವನ ಗುಪ್ತಾಂಗವನ್ನು ಕಟ್‌ ಮಾಡಿ ಎಸೆದಿದ್ದಾಳೆ. ಈ ವಿಚಾರ ತಿಳಿದ ಹೊಟೇಲ್‌ ಸಿಬ್ಬಂದಿ ತಕ್ಷಣ ಪೊಲೀಸರಿಗೆ ಕರೆ ಮಾಡಿದ್ದಾರೆ. ಪೊಲೀಸ್‌ ಸ್ಥಳಕ್ಕೆ ಬಂದು ನೋಡಿದಾಗ ಯುವಕ ರಕ್ತದ ಮಡುವಿನಲ್ಲಿ ಬಿದ್ದಿದ್ದ. ಆತನ ಗುಪ್ತಾಂಗವನ್ನು ಕತ್ತರಿಸಲಾಗಿತ್ತು. ಕತ್ತರಿಸಿಲಾಗಿದ್ದ ಗುಪ್ತಾಂಗ ಬೆಡ್‌ ಪಕ್ಕದಲ್ಲೇ ಇದ್ದ ಕಸದ ಬುಟ್ಟಿಯಲ್ಲಿ ಸಿಕ್ಕಿತ್ತು.

ಮತ್ತೆ ಗರ್ಭಿಯಾಗಿದ್ದ ಮಹಿಳೆ

ಕೊಲೆಯಾದ ವ್ಯಕ್ತಿ , ಶೆಂಟಿಂಗ್‌ ಗೋ ಇಚ್ಛೆಗೆ ವಿರುದ್ಧವಾಗಿ ಆಕೆಯ ಜೊತೆ ದೈಹಿಕ ಸಂಪರ್ಕ ಬೆಳೆಸಿ ಎರಡನೇ ಬಾರಿ ಗರ್ಭಿಣಿಯನ್ನಾಗಿ ಮಾಡಿದ್ದ. ಇದೇ ವಿಚಾರಕ್ಕೆ ಇಬ್ಬರ ನಡುವೆ ಭಾರೀ ಗಲಾಟೆಯಾಗಿತ್ತು. ಆಕೆಯನ್ನು ಮಲಗಲೂ ಬಿಡದೇ ವ್ಯಕ್ತಿ ಬಹಳಷ್ಟು ಕಿರಿ ಕಿರಿ ಮಾಡುತ್ತಿದ್ದ. ಇದರಿಂದ ಕೋಪಕೊಂಡ ಶೆಂಟಿಂಗ್‌ ಗೋ ಚಾಕುವಿನಿಂದ ಆತನನ್ನು ಚುಚ್ಚಿದ್ದಾಳೆ. ಬಳಿಕ ಆತನ ಗುಪ್ತಾಂಗ ಕಿತ್ತು ಕಸದ ಬುಟ್ಟಿಗೆ ಹಾಕಿದ್ದಾಳೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಸದ್ಯ ಪೊಲೀಸರು ಶೆಂಟಿಂಗ್‌ ಗೋಳನ್ನು ಅರೆಸ್ಟ್‌ ಮಾಡಿದ್ದು, ಮೃತ ವ್ಯಕ್ತಿಯ ಗುರುತು ಬಹಿರಂಗ ಪಡಿಸಿಲ್ಲ.

ಮಹಾರಾಷ್ಟ್ರದ ಪುಣೆಯಲ್ಲೂ ಇಂತಹದ್ದೇ ಒಂದು ಘಟನೆ ವರದಿಯಾಗಿದೆ. ವ್ಯಕ್ತಿಯೊಬ್ಬ ತನ್ನ ಪತಿಯ ಶೀಲ ಶಂಕಿಸಿ, ಆಕೆ ಗುಪ್ತಾಂಗಕ್ಕೆ ಮೊಳೆ ಜಡಿದು, ಬೀಗ ಹಾಕುವ ಮೂಲಕ ರಕ್ಕಸ ಕೃತ್ಯ ಎಸಗಿದ್ದಾನೆ. ಪುಣೆಯ ವಾಕಡ್‌ ಪ್ರದೇಶದಲ್ಲಿ ಮೇ 11ರಂದು ಪತಿಯು ಮೃಗದಂತೆ ವರ್ತಿಸಿದ್ದಾನೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆಯು ದೂರು ದಾಖಲಿಸಿದ ಬಳಿಕ ಪೊಲೀಸರು ದುಷ್ಟನನ್ನು ಬಂಧಿಸಿದ್ದಾರೆ. ಗುಪ್ತಾಂಗಕ್ಕೆ ಮೊಳೆ ಹೊಡೆದು, ಬೀಗ ಜಡಿದ ಪರಿಣಾಮ ಮಹಿಳೆಗೆ ತುರ್ತಾಗಿ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಸದ್ಯ ಅವರು ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ. ಮಾರಣಾಂತಿಕವಾಗಿ ಹಲ್ಲೆ ನಡೆಸಿದವನನ್ನು ನೇಪಾಳದ ಮೂಲದ, ಸದ್ಯ ಪಿಂಪ್ರಿ-ಚಿಂಚ್ವಾಡ್‌ನ ವಾಕಡ್‌ನಲ್ಲಿ ನೆಲೆಸಿದ ಉಪೇಂದ್ರ ಹುಡಕೆ (30) ಎಂಬುದಾಗಿ ಗುರುತಿಸಲಾಗಿದೆ.

ಇದನ್ನೂ ಓದಿ: Electric shock : ಮಳೆಗೆ ತುಂಡಾಗಿ ಬಿದ್ದ ವಿದ್ಯುತ್ ತಂತಿ; ಶಾಕ್‌ನಿಂದ ವ್ಯಕ್ತಿ ಸ್ಪಾಟ್‌ ಡೆತ್‌

ಪ್ರಕರಣದ ಕುರಿತು ತನಿಖಾಧಿಕಾರಿ ಬಾಲಾಜಿ ಮೆತೆ ಅವರು ಮಾಹಿತಿ ನೀಡಿದ್ದಾರೆ. “ಗಂಡ ಹಾಗೂ ಹೆಂಡತಿ ನೇಪಾಳದವರು. ಉದ್ಯೋಗ ಅರಸಿ ಅವರು ಮೇ ತಿಂಗಳ ಮೊದಲ ವಾರದಲ್ಲಿ ವಾಕಡ್‌ಗೆ ಬಂದು ನೆಲೆಸಿದ್ದರು. ಮೇ 11ರಂದು ಪಾನಮತ್ತನಾಗಿ ಬಂದ ವ್ಯಕ್ತಿಯು ಪತಿಯ ಮೇಲೆ ಹಲ್ಲೆ ನಡೆಸಿದ್ದಾನೆ. ಆಕೆಯ ಶೀಲ ಶಂಕಿಸಿದ ಆತನು ಒದ್ದು, ಆಕೆಯ ಕೈಕಾಲು ಕಟ್ಟಿ, ಗುಪ್ತಾಂಗಕ್ಕೆ ಮೊಳೆ ಜಡಿದು, ಚಾಕುವಿನಿಂದ ಹಲ್ಲೆ ನಡೆಸಿ, ಬೀಗ ಹಾಕಿದ್ದಾನೆ. ಮಹಿಳೆಯು ಅಂಗಲಾಚಿದರೂ ಆತನು ಬಿಟ್ಟಿಲ್ಲ” ಎಂದು ತಿಳಿಸಿದ್ದಾರೆ. ಮಹಿಳೆ ಅರಚುವ ಧ್ವನಿ ಕೇಳಿ ಪಕ್ಕದ ಮನೆಯ ಲಲಿತ್‌ ಪರಿಹಾರ್‌ ಎಂಬುವರು ಮನೆಗೆ ತೆರಳಿ ನೋಡಿದಾಗ, ಮಹಿಳೆಯು ರಕ್ತದ ಮಧ್ಯೆ ಬಿದ್ದಿರುವುದು ಕಂಡಿದೆ. ಕೂಡಲೇ ಅವರು ಸುತ್ತಮುತ್ತಲಿವರನ್ನು ಕರೆದ ಅವರು ಮಹಿಳೆಯನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಪ್ರಜ್ಞೆ ಕಳೆದುಕೊಂಡಿದ್ದ ಮಹಿಳೆಗೆ ಆಸ್ಪತ್ರೆಯಲ್ಲಿ ತುರ್ತು ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಇದಾದ ಬಳಿಕ ಅವರು ಚೇತರಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

Exit mobile version