ವಾಷಿಂಗ್ಟನ್: ನಾಯಿಗಳನ್ನು ಕ್ಯಾಮರಾದತ್ತ ನೋಡುವಂತೆ ಮಾಡಿ ಫೋಟೋ ತೆಗೆಯುವುದು ಅದೆಷ್ಟು ಕಷ್ಟದ ಕೆಲಸ ಎಂದು ನಾಯಿಗಳ ಮಾಲೀಕರಿಗೆ ತಿಳಿದಿರುತ್ತದೆ. ಅದರಲ್ಲೂ ಎರಡು ನಾಯಿಗಳಿದ್ದರಂತೂ ಅವೆರಡನ್ನೂ ಒಟ್ಟಿಗೆ ಕೂರಿಸಿ, ಫೋಟೋ ತೆಗೆಯುವುದು ಒಂದು ಸಾಹಸವೇ ಸರಿ. ಆದರೆ ಇಲ್ಲೊಬ್ಬ ವ್ಯಕ್ತಿ ಒಂದಲ್ಲ, ಎರಡಲ್ಲ, ಬರೋಬ್ಬರಿ ಹತ್ತು ನಾಯಿಗಳನ್ನು ಒಟ್ಟಿಗೆ ಕೂರಿಸಿ, ಕ್ಯಾಮರಾದತ್ತ ನೋಡುವಂತೆ ಮಾಡಿ ಫೋಟೋ ತೆಗೆದಿದ್ದಾನೆ. ಆ ಫೋಟೋ ಎಲ್ಲೆಡೆ ವೈರಲ್ (Viral Photo) ಆಗಿದೆ.
ಹೌದು. ಅಮೆರಿಕದ ಸ್ಯಾನ್‌ಫ್ರಾನ್ಸಿಸ್ಕೋದಲ್ಲಿ ವ್ಯಕ್ತಿಯೊಬ್ಬ ತಾನು ಸಾಕಿರುವ ವಿವಿಧ ತಳಿಯ ಒಟ್ಟು ಹತ್ತು ನಾಯಿಗಳನ್ನು ವಾಕಿಂಗ್ ಕರೆದುಕೊಂಡು ಹೋಗುತ್ತಿರುತ್ತಾನೆ. ಹಾಗೆಯೇ ದಾರಿ ಮಧ್ಯೆ ಅವುಗಳೆಲ್ಲವನ್ನು ಎತ್ತರಕ್ಕೆ ಅನುಗುಣವಾಗಿ ಸಾಲಾಗಿ ನಿಲ್ಲಿಸಿ ಫೋಟೋ ತೆಗೆಯುತ್ತಾನೆ. ಎಲ್ಲ ನಾಯಿಗಳು ಫೋಟೋಕೆ ಫೋಸ್ ಕೊಡುತ್ತಾವೆ ಕೂಡ. ಈ ರೀತಿಯಲ್ಲಿ ಆತ ಫೋಟೋ ತೆಗೆಯುತ್ತಿರುವುದನ್ನು ಇನ್ಯಾರೋ ಫೋಟೋ ತೆಗೆದಿದ್ದು, ಆ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಸಕತ್ ವೈರಲ್ ಆಗಿತ್ತು.
WE FOUND THE PHOTO https://t.co/qvGWBwjrMS pic.twitter.com/rGvQft5e3J
— WeRateDogs (@dog_rates) May 23, 2023
ಇದನ್ನೂ ಓದಿ: Viral Video : ನಾಯಿ ಕಾಲನ್ನು ಕಚ್ಚಿ ಎಳೆಯುತ್ತಿದ್ದರೂ ಲೆಕ್ಕಿಸದೆ ರೀಲ್ಸ್ ಮಾಡಿದ ವ್ಯಕ್ತಿ!
ತುಂಬ ಹುಡುಕಾಟದ ನಂತರ ಆ ರೀತಿಯಲ್ಲಿ ಫೋಟೋ ತೆಗೆದ ವ್ಯಕ್ತಿ ಯಾರು ಎನ್ನುವುದು ತಿಳಿದುಬಂದಿದೆ. ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋದ ರುನರೌಂಡ್ ಹೌಂಡ್ ಡಾಗ್ ವಾಕಿಂಗ್ ಸರ್ವಿಸ್‌ನಲ್ಲಿ ಕೆಲಸ ಮಾಡುವ ಜೋಶುವಾ ಜೆ.ಹರ್ಸ್‌ಮನ್ ವ್ಯಕ್ತಿ ಈ ನಾಯಿಗಳ ಮಾಲೀಕ. ಆತನೇ ಈ ರೀತಿ ಫೋಟೋ ತೆಗೆದಿದ್ದಾನೆ. ಆತ ತೆಗೆದ ಫೋಟೋ ಕೂಡ ಜಾಲತಾಣಗಳಲ್ಲಿ ಲಭ್ಯವಾಗಿದೆ. ಅದರಲ್ಲಿ ಎಲ್ಲ ನಾಯಿಗಳು ಕುಳಿತುಕೊಂಡು ಸಭ್ಯತೆಯಿಂದ ಫೋಸ್ ಕೊಡುವುದನ್ನು ಕಾಣಬಹುದಾಗಿದೆ.
ಈ ಫೋಟೋ ನೋಡಿರುವ ನೆಟ್ಟಿಗರು ಹುಬ್ಬೇರಿಸಿದ್ದಾರೆ. “ನಮ್ಮ ಬಳಿ ಇರುವ ಒಂದು ನಾಯಿಯ ಫೋಟೋ ತೆಗೆಯುವುದಕ್ಕೇ ನಾವು ಸಾಹಸ ಮಾಡುತ್ತೇವೆ. ಹಾಗಿರುವಾಗ ಹತ್ತು ನಾಯಿಗಳು ಹೀಗೆ ಒಟ್ಟಿಗೆ ಫೋಸ್ ಕೊಡುವುದೆಂದರೆ ಅದು ಅದ್ಭುತವೇ ಸರಿ” ಎಂದು ಜನರು ಕಾಮೆಂಟ್‌ಗಳನ್ನು ಮಾಡಲಾರಂಭಿಸಿದ್ದಾರೆ. ನಾಯಿಗಳು ಈ ರೀತಿ ಫೋಸ್ ಕೊಡುವುದಕ್ಕೆ ಏನು ಮಾಡಿದಿರಿ ಎಂದು ಜೋಶುವಾ ಅವರಿಗೆ ಪ್ರಶ್ನೆಗಳನ್ನೂ ಕೇಳಲಾರಂಭಿಸಿದ್ದಾರೆ.