ವೈರಲ್ ನ್ಯೂಸ್
Viral Photo : ನಾಯಿಗಳ ಗ್ರೂಪ್ ಫೋಟೋ! ಇದು ಮತ್ತಾರಿಂದಲೂ ಸಾಧ್ಯವಾಗದ ಕೆಲಸ
ಹತ್ತು ನಾಯಿಗಳು ಒಟ್ಟಿಗೆ ಕುಳಿತು ಕ್ಯಾಮರಾಕ್ಕೆ ಫೋಸ್ ಕೊಟ್ಟಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ (Viral Photo) ಆಗಿದೆ.
ವಾಷಿಂಗ್ಟನ್: ನಾಯಿಗಳನ್ನು ಕ್ಯಾಮರಾದತ್ತ ನೋಡುವಂತೆ ಮಾಡಿ ಫೋಟೋ ತೆಗೆಯುವುದು ಅದೆಷ್ಟು ಕಷ್ಟದ ಕೆಲಸ ಎಂದು ನಾಯಿಗಳ ಮಾಲೀಕರಿಗೆ ತಿಳಿದಿರುತ್ತದೆ. ಅದರಲ್ಲೂ ಎರಡು ನಾಯಿಗಳಿದ್ದರಂತೂ ಅವೆರಡನ್ನೂ ಒಟ್ಟಿಗೆ ಕೂರಿಸಿ, ಫೋಟೋ ತೆಗೆಯುವುದು ಒಂದು ಸಾಹಸವೇ ಸರಿ. ಆದರೆ ಇಲ್ಲೊಬ್ಬ ವ್ಯಕ್ತಿ ಒಂದಲ್ಲ, ಎರಡಲ್ಲ, ಬರೋಬ್ಬರಿ ಹತ್ತು ನಾಯಿಗಳನ್ನು ಒಟ್ಟಿಗೆ ಕೂರಿಸಿ, ಕ್ಯಾಮರಾದತ್ತ ನೋಡುವಂತೆ ಮಾಡಿ ಫೋಟೋ ತೆಗೆದಿದ್ದಾನೆ. ಆ ಫೋಟೋ ಎಲ್ಲೆಡೆ ವೈರಲ್ (Viral Photo) ಆಗಿದೆ.
ಹೌದು. ಅಮೆರಿಕದ ಸ್ಯಾನ್‌ಫ್ರಾನ್ಸಿಸ್ಕೋದಲ್ಲಿ ವ್ಯಕ್ತಿಯೊಬ್ಬ ತಾನು ಸಾಕಿರುವ ವಿವಿಧ ತಳಿಯ ಒಟ್ಟು ಹತ್ತು ನಾಯಿಗಳನ್ನು ವಾಕಿಂಗ್ ಕರೆದುಕೊಂಡು ಹೋಗುತ್ತಿರುತ್ತಾನೆ. ಹಾಗೆಯೇ ದಾರಿ ಮಧ್ಯೆ ಅವುಗಳೆಲ್ಲವನ್ನು ಎತ್ತರಕ್ಕೆ ಅನುಗುಣವಾಗಿ ಸಾಲಾಗಿ ನಿಲ್ಲಿಸಿ ಫೋಟೋ ತೆಗೆಯುತ್ತಾನೆ. ಎಲ್ಲ ನಾಯಿಗಳು ಫೋಟೋಕೆ ಫೋಸ್ ಕೊಡುತ್ತಾವೆ ಕೂಡ. ಈ ರೀತಿಯಲ್ಲಿ ಆತ ಫೋಟೋ ತೆಗೆಯುತ್ತಿರುವುದನ್ನು ಇನ್ಯಾರೋ ಫೋಟೋ ತೆಗೆದಿದ್ದು, ಆ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಸಕತ್ ವೈರಲ್ ಆಗಿತ್ತು.
WE FOUND THE PHOTO https://t.co/qvGWBwjrMS pic.twitter.com/rGvQft5e3J
— WeRateDogs (@dog_rates) May 23, 2023
ಇದನ್ನೂ ಓದಿ: Viral Video : ನಾಯಿ ಕಾಲನ್ನು ಕಚ್ಚಿ ಎಳೆಯುತ್ತಿದ್ದರೂ ಲೆಕ್ಕಿಸದೆ ರೀಲ್ಸ್ ಮಾಡಿದ ವ್ಯಕ್ತಿ!
ತುಂಬ ಹುಡುಕಾಟದ ನಂತರ ಆ ರೀತಿಯಲ್ಲಿ ಫೋಟೋ ತೆಗೆದ ವ್ಯಕ್ತಿ ಯಾರು ಎನ್ನುವುದು ತಿಳಿದುಬಂದಿದೆ. ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋದ ರುನರೌಂಡ್ ಹೌಂಡ್ ಡಾಗ್ ವಾಕಿಂಗ್ ಸರ್ವಿಸ್‌ನಲ್ಲಿ ಕೆಲಸ ಮಾಡುವ ಜೋಶುವಾ ಜೆ.ಹರ್ಸ್‌ಮನ್ ವ್ಯಕ್ತಿ ಈ ನಾಯಿಗಳ ಮಾಲೀಕ. ಆತನೇ ಈ ರೀತಿ ಫೋಟೋ ತೆಗೆದಿದ್ದಾನೆ. ಆತ ತೆಗೆದ ಫೋಟೋ ಕೂಡ ಜಾಲತಾಣಗಳಲ್ಲಿ ಲಭ್ಯವಾಗಿದೆ. ಅದರಲ್ಲಿ ಎಲ್ಲ ನಾಯಿಗಳು ಕುಳಿತುಕೊಂಡು ಸಭ್ಯತೆಯಿಂದ ಫೋಸ್ ಕೊಡುವುದನ್ನು ಕಾಣಬಹುದಾಗಿದೆ.
ಈ ಫೋಟೋ ನೋಡಿರುವ ನೆಟ್ಟಿಗರು ಹುಬ್ಬೇರಿಸಿದ್ದಾರೆ. “ನಮ್ಮ ಬಳಿ ಇರುವ ಒಂದು ನಾಯಿಯ ಫೋಟೋ ತೆಗೆಯುವುದಕ್ಕೇ ನಾವು ಸಾಹಸ ಮಾಡುತ್ತೇವೆ. ಹಾಗಿರುವಾಗ ಹತ್ತು ನಾಯಿಗಳು ಹೀಗೆ ಒಟ್ಟಿಗೆ ಫೋಸ್ ಕೊಡುವುದೆಂದರೆ ಅದು ಅದ್ಭುತವೇ ಸರಿ” ಎಂದು ಜನರು ಕಾಮೆಂಟ್‌ಗಳನ್ನು ಮಾಡಲಾರಂಭಿಸಿದ್ದಾರೆ. ನಾಯಿಗಳು ಈ ರೀತಿ ಫೋಸ್ ಕೊಡುವುದಕ್ಕೆ ಏನು ಮಾಡಿದಿರಿ ಎಂದು ಜೋಶುವಾ ಅವರಿಗೆ ಪ್ರಶ್ನೆಗಳನ್ನೂ ಕೇಳಲಾರಂಭಿಸಿದ್ದಾರೆ.
ವೈರಲ್ ನ್ಯೂಸ್
Viral Video: ಕ್ರೂರ ಮೊಸಳೆ-ಜಾಣ ಜಿಂಕೆ; ಒಂದೇ ಜಂಪ್ ನಲ್ಲಿ ಜೀವ ಉಳಿಯಿತು!
ಆನಂದ್ ಮಹೀಂದ್ರಾ ಅವರು ಸೋಮವಾರದ ಸ್ಫೂರ್ತಿ (Monday Motivation) ಎಂದು ಕ್ಯಾಪ್ಷನ್ ಬರೆದು ವಿಡಿಯೊ ಶೇರ್ ಮಾಡಿಕೊಂಡಿದ್ದಾರೆ. ಹಾಗೆ ಸಂದೇಶವೊಂದನ್ನು ಕೊಟ್ಟಿದ್ದಾರೆ. ನಾವು ಯಾವತ್ತೂ ಅಲರ್ಟ್ ಆಗಿರಬೇಕು ಎಂದಿದ್ದಾರೆ.
ಉದ್ಯಮಿ ಆನಂದ್ ಮಹೀಂದ್ರಾ ಅವರು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟೆ ಆ್ಯಕ್ಟಿವ್. ವಿಶೇಷವಾದ, ಹೊಸತನ ತುಂಬಿರುವ ವಿಡಿಯೊ, ಫೋಟೋಗಳನ್ನು ಅವರು ಶೇರ್ ಮಾಡಿಕೊಳ್ಳುತ್ತಿರುತ್ತಾರೆ. ನೀವು ಒಮ್ಮೆ ಅವರ ಟ್ವಿಟರ್ ಅಕೌಂಟ್ಗೆ ಭೇಟಿ ಕೊಟ್ಟರೆ ಅಂಥ ಹಲವು ವಿಡಿಯೊಗಳನ್ನು ನೋಡಬಹುದು.ಅಂದಹಾಗೇ ಆನಂದ್ ಮಹೀಂದ್ರಾ ಅವರು ಈಗ ಶೇರ್ ಮಾಡಿಕೊಂಡಿದ್ದು ಒಂದು ಜಿಂಕೆ ಮತ್ತು ಮೊಸಳೆ ವಿಡಿಯೊವನ್ನು. ಆ ವಿಡಿಯೊ (Viral Video) ನೋಡಿದರೆ ಒಂದು ಕ್ಷಣ ಮೈ-ಮನಸ್ಸು ಜುಂ ಎನ್ನುತ್ತದೆ.
ವನ್ಯಜೀವಿಗಳ ಲೋಕವೇ ಹಾಗೆ, ಅಲ್ಲಿ ಬೇಟೆಯಾಡುವ ದೊಡ್ಡ ಪ್ರಾಣಿಗಳ ಚುರುಕುತನ, ಅದನ್ನು ತಪ್ಪಿಸಿಕೊಳ್ಳುವ ಚಿಕ್ಕಪುಟ್ಟ ಪ್ರಾಣಿಗಳ ಚಾಣಾಕ್ಷತನ ಪ್ರಕೃತಿ ಸಹಜ. ಪ್ರತಿನಿತ್ಯವೂ ಇಂಥದ್ದೆಲ್ಲ ನಡೆಯುತ್ತಿದ್ದರೂ, ಅಪರೂಪಕ್ಕೆ ಅದು ಮನುಷ್ಯರ ಕಣ್ಣಿಗೆ ಗೋಚರಿಸುತ್ತದೆ. ವನ್ಯಜೀವಿ ಫೋಟೋ ಗ್ರಾಫರ್ಗಳ ಕ್ಯಾಮರಾದಲ್ಲಿ ಅಂಥ ದೃಶ್ಯಗಳು ಸೆರೆಯಾಗುತ್ತವೆ. ಇದೀಗ ಆನಂದ್ ಮಹೀಂದ್ರಾ ಶೇರ್ ಮಾಡಿಕೊಂಡಿರುವ ವಿಡಿಯೊ ಸಿಕ್ಕಾಪಟೆ ವೈರಲ್ ಆಗುತ್ತಿದೆ.
ಇಲ್ಲಿ ಬೇಟೆಗೆ ಬರುವ ಮೊಸಳೆಯ ಕ್ರೌರ್ಯ, ಒಂದೇ ಕ್ಷಣದಲ್ಲಿ ಜಿಂಕೆಯನ್ನು ಹಿಡಿದು ಬಾಯಿಗೆ ಹಾಕಿಕೊಳ್ಳಲು ಅದಕ್ಕಿರುವ ತವಕ ಮತ್ತು ಅಷ್ಟೇ ಸೆಕೆಂಡ್ಗಳಲ್ಲಿ ಜಿಂಕೆ ಒಂದು ಜಂಪ್ ಮಾಡಿ, ತಪ್ಪಿಸಿಕೊಳ್ಳುವ ದೃಶ್ಯವನ್ನು ನೋಡಬಹುದು. ಆ ಜಿಂಕೆ ನೀರು ಕುಡಿಯಲೆಂದು ಒಂದು ಕೊಳದ ಬಳಿ ಬಂದು ಇನ್ನೇನು ನೀರಿಗೆ ಬಾಯಿ ಹಾಕಿತ್ತು, ಅಷ್ಟರಲ್ಲಿ ಬೃಹದಾಕಾರದ ಮೊಸಳೆ ಜಿಂಕೆಯನ್ನು ಹಿಡಿದು ತಿನ್ನಲು, ದೊಡ್ಡದಾಗಿ ಬಾಯ್ತೆರೆದುಕೊಂಡು ನೀರಿಂದ ಹೊರಗೆ ಬಂದಿತ್ತು. ಆಹಾ..ಆ ಜಿಂಕೆಯ ಜಿಗಿತವನ್ನು ನೀವು ವಿಡಿಯೋದಲ್ಲೇ ನೋಡಬೇಕು..! ಕ್ರಿಕೆಟ್ನಲ್ಲೆಲ್ಲ 1 ಬಾಲ್ಗೆ 6 ರನ್ ಬೇಕಿದ್ದಾಗ, ಲಾಸ್ಟ್ ಬಾಲ್ನಲ್ಲಿ ಸಿಕ್ಸರ್ ಹೊಡೆದು ಗೆಲ್ಲಿಸುತ್ತಾರಲ್ಲ, ಜಿಂಕೆಯ ಜಿಗಿತವೂ ಹಾಗೇ ಗೋಚರಿಸುತ್ತದೆ. ಎಷ್ಟಾದರೂ ಜೀವದ ವಿಷಯ ಇದು ನೋಡಿ..ಅತ್ಯಂತ ಚಾಣಾಕ್ಷತನದಿಂದ ಜಿಂಕೆ ತನ್ನನ್ನು ತಾನು ಉಳಿಸಿಕೊಂಡಿದೆ.
ಆನಂದ್ ಮಹೀಂದ್ರಾ ಅವರು ಸೋಮವಾರದ ಸ್ಫೂರ್ತಿ (Monday Motivation) ಎಂದು ಕ್ಯಾಪ್ಷನ್ ಬರೆದು ವಿಡಿಯೊ ಶೇರ್ ಮಾಡಿಕೊಂಡಿದ್ದಾರೆ. ಹಾಗೆ ಸಂದೇಶವೊಂದನ್ನು ಕೊಟ್ಟಿದ್ದಾರೆ. ನಾವು ಯಾವತ್ತೂ ಅಲರ್ಟ್ ಆಗಿರಬೇಕು. ನಾವೆಲ್ಲಿದ್ದೇವೆ, ಏನಾಗುತ್ತಿದೆ ಎಂಬ ಬಗ್ಗೆ ಸದಾ ಗಮನ ಇಟ್ಟಿರಬೇಕು ಎಂದು ಹೇಳಿದ್ದಾರೆ. ಈಗಾಗಲೇ 3.56 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಪಡೆದಿರುವ ವಿಡಿಯೊಕ್ಕೆ 10 ಸಾವಿರಕ್ಕೂ ಹೆಚ್ಚು ಮಂದಿ ಲೈಕ್ಸ್ ಕೊಟ್ಟಿದ್ದಾರೆ. ನೆಟ್ಟಿಗರು ಅಚ್ಚರಿ ಮತ್ತು ಜಿಂಕೆಯ ಜಾಣತನವನ್ನು ಹೊಗಳುತ್ತಿದ್ದಾರೆ.
Reflexes. Keep them sharp. Mindfulness is a great virtue when starting the week. 😊 #MondayMotivation . pic.twitter.com/bZocQwThIM
— anand mahindra (@anandmahindra) June 5, 2023
ಪ್ರಮುಖ ಸುದ್ದಿ
Fact Check: ಸ್ವೀಡನ್‌ನಲ್ಲಿ ‘ಸೆಕ್ಸ್ ಚಾಂಪಿಯನ್‌ಶಿಪ್’, ರತಿಕ್ರೀಡೆ ಟೂರ್ನಿ ಗೆಲ್ಲಲು ರೆಡಿಯಾಗಿದ್ರು 20 ಮಂದಿ!
Fact Check:ಸ್ವೀಡನ್‌ನಲ್ಲಿ ಈ ತಿಂಗಳು ಸೆಕ್ಸ್ ಚಾಂಪಿಯನ್‌ಶಿಪ್ ನಡೆಯಲಿದೆ ಎಂಬ ಸುದ್ದಿ ಸಾಕಷ್ಟು ಸದ್ದು ಮಾಡಿತ್ತು. ಆದರೆ, ಈ ಬಗ್ಗೆ ಯಾವುದೇ ಖಚಿತ ಮಾಹಿತಿಗಳು ಇರಲಿಲ್ಲ.
ನವದೆಹಲಿ: ಸಾಮಾನ್ಯವಾಗಿ ಚಾಂಪಿಯನ್‌ಶಿಪ್ ಎಂದ ಕೂಡಲೇ ಕ್ರೀಡೆಗೆ ಸಂಬಂಧಿಸಿದ ಯಾವುದೇ ಪಂದ್ಯಾವಳಿ ಇರಬಹುದು ಎಂದು ಭಾವಿಸುತ್ತೇವೆ. ಸ್ವೀಡನ್‌ನಲ್ಲಿ (Sweden) ಆಯೋಜಿಸಲಾಗುತ್ತಿದೆ ಎನ್ನಲಾದ ಸೆಕ್ಸ್ ಚಾಂಪಿಯನ್‌ಶಿಪ್ (Sex Championship) ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಅಂದ ಹಾಗೆ, ಇದು ಸಾಮಾನ್ಯ ಕ್ರೀಡೆ ಅಲ್ಲ, ‘ರತಿಕ್ರೀಡೆ’ಗೆ ಸಂಬಂಧಿಸಿದ ಚಾಂಪಿಯನ್‌ಶಿಪ್! ಹೌದು, ಸ್ವೀಡನ್‌ನಲ್ಲಿ ಜೂನ್ ತಿಂಗಳಲ್ಲಿ ಸೆಕ್ಸ್ ಚಾಂಪಿಯನ್‌ಶಿಪ್ ಆಯೋಜಿಸಲಾಗುತ್ತಿದೆ ಎಂಬ ಸುದ್ದಿ ಸಖತ್ ವೈರಲ್ ಆಗಿದೆ(Fact Check).
ಟ್ವಿಟರ್‌ನಲ್ಲಿ ಮೊದಲು ಪ್ರಕಟವಾದ ಸುದ್ದಿಯ ವಿವರಗಳನ್ನು ಹಲವಾರು ಸುದ್ದಿವಾಹಿನಿಗಳು ಪ್ರಕಟಿಸಿದವು. ಈ ಸೆಕ್ಸ್ ಚಾಂಪಿಯನ್‌ಶಿಪ್ ಜೂನ್ 8 ರಂದು ಪ್ರಾರಂಭವಾಗುತ್ತದೆ ಮತ್ತು ಹಲವಾರು ವಾರಗಳವರೆಗೆ ಇರುತ್ತದೆ, ಭಾಗವಹಿಸುವವರು ಪ್ರತಿದಿನ ಆರು ಗಂಟೆಗಳ ಕಾಲ ಸ್ಪರ್ಧೆ ಮಾಡಬೇಕಾಗುತ್ತದೆ ಎಂದು ವರದಿಯಲ್ಲಿ ತಿಳಿಸಲಾಗಿತ್ತು. ಆದರೆ, ಈ ಸುದ್ದಿಯು ನಕಲಿ ಎಂದು ತಿಳಿದುಬಂದಿದೆ. ಸ್ವೀಡಿಷ್‌ನ ಗೋಟರ್ಬೋರ್ಗ್ಸ್-ಪೋಸ್ಟೆನ್ ಪ್ರಕಾರ, ಸೆಕ್ಸ್ ಚಾಂಪಿಯನ್‌ಶಿಪ್ ನಡೆಸುವ ಪ್ರಸ್ತಾಪಕ್ಕೆ ಅಲ್ಲಿ ಸರ್ಕಾರವು ಕಳೆದ ಏಪ್ರಿಲ್‌ನಲ್ಲಿ ಅನುಮತಿಯನ್ನು ನೀಡಿಲ್ಲ ಎನ್ನಲಾಗಿದೆ.
ಈಗಿರುವ ರದಿಗಳ ಪ್ರಕಾರ, ಸ್ವೀಡನ್‌ನಲ್ಲಿ ಫೆಡರೇಷನ್ ಆಫ್ ಸೆಕ್ಸ್ ಸಂಸ್ಥೆ ಇದೆ. ಅದರ ಮುಖ್ಸ್ಥ ಡ್ರಾಗನ್ ಬ್ರಾಸ್ಟಿಕ್ ಸೆಕ್ಸ್ ಚಾಂಪಿಯನ್‌ಶಿಪ್ ಆಯೋಜಿಸುವ ಬಗ್ಗೆ ನಿರ್ಧಾರ ಮಾಡಿದ್ದರು. ಆ ಮೂಲಕ ಮಾನವರ ಮೇಲೆ ಲೈಂಗಿಕತೆಯ ದೈಹಿಕ ಮತ್ತು ಮಾನಸಿಕ ಆರೋಗ್ಯದ ಪ್ರಭಾವವನ್ನು ಎತ್ತಿ ತೋರಿಸುವುದಾಗಿತ್ತು. ಆದರೆ, ರಾಷ್ಟ್ರೀಯ ಕ್ರೀಡಾ ಒಕ್ಕೂಟದ ಸದಸ್ಯರಾಗಲು ಸೆಕ್ಸ್ ಫೆಡರೇಶನ್‌ನ ಅರ್ಜಿಯನ್ನು ನಿರಾಕರಿಸಲಾಗಿದೆ ಎಂದು ಗೊಟರ್‌ಬೋರ್ಗ್ಸ್-ಪೋಸ್ಟನ್ ತನ್ನ ವರದಿಯಲ್ಲಿ ತಿಳಿಸಿತ್ತು. ಈ ವರ್ಷದ ಆರಂಭದಲ್ಲೇ ಬ್ರಾಸ್ಟಿಕ್ ಅವರು ತಮ್ಮ ಅರ್ಜಿಯನ್ನು ಸಲ್ಲಿಸಿದ್ದರು.
ಸೆಕ್ಸ್ ಚಾಂಪಿಯನ್ ಶಿಪ್ ನಮ್ಮ ಅವಶ್ಯಕತೆಗಳನ್ನು ಪೂರೈಸುವುದಿಲ್ಲ ಮತ್ತು ಈ ಅರ್ಜಿಯನ್ನು ತಿರಸ್ಕರಿಸಲಾಗಿದೆ. ನಾವು ಇತರ ಕೆಲಸಗಳನ್ನು ಮಾಡಬೇಕಾಗಿದೆ ಎಂದು ಕ್ರೀಡಾ ಒಕ್ಕೂಟದ ಮುಖ್ಯಸ್ಥ ಜಾರ್ನ್ ಎರಿಕ್ಸನ್ ಸ್ಥಳೀಯ ಸುದ್ದಿ ಔಟ್ಲೆಟ್ಗೆ ತಿಳಿಸಿದ್ದರು. ಫೆಡರೇಷನ್ ಆಫ್ ಸೆಕ್ಸ್‌ನ ಅಧ್ಯಕ್ಷ ಬ್ರಾಕ್ಟಿಕ್ ಅವರು ಸ್ವೀಡನ್‌ನಲ್ಲಿ ಸ್ಟ್ರಿಪ್ ಕ್ಲಬ್‌ಗಳನ್ನು ನಡೆಸುತ್ತಿದ್ದಾರೆ ಮತ್ತು ಲೈಂಗಿಕತೆಯನ್ನು ಕ್ರೀಡೆಯಾಗಿ ಪರಿಗಣಿಸಬೇಕೆಂದು ಅವರು ಒತ್ತಾಯಿಸುತ್ತಾರೆ.
ಇದನ್ನೂ ಓದಿ: Same Sex Marriage: ಸಲಿಂಗ ವಿವಾಹ ಕಾನೂನುಬದ್ಧಗೊಳಿಸಿದರೆ ಲೈಂಗಿಕ ರೋಗ ಉಲ್ಬಣ: ಆರ್‌ಎಸ್‌ಎಸ್ ಸಮೀಕ್ಷೆ ವರದಿ
ಚಟುವಟಿಕೆಗಳು ಅಥವಾ ‘ರತಿಕ್ರೀಡೆಗಳು’ 45 ನಿಮಿಷದಿಂದ 1 ಗಂಟೆಯ ಅವಧಿಯಾಗಿರುವ ಸಾಧ್ಯತೆಗಳಿರುತ್ತವೆ ಎಂಬ ಮಾಹಿತಿ ಇರುವ ಟ್ವೀಟ್‌ಗಳು ವೈರಲ್ ಆಗಿದ್ದವು. ಪ್ರತಿ ಭಾಗವಹಿಸುವವರು 5 ರಿಂದ 10 ಅಂಕಗಳನ್ನು ಗಳಿಸುವ ಮೂಲಕ 16 ವಿಭಾಗಗಳು ಇರುತ್ತವೆ ಎಂದು ತಿಳಿಸಲಾಗಿತ್ತು. ಮಜಾ ಅಂದರೆ, ಅಧಿಕೃತವಲ್ಲದೇ ಈ ಸುದ್ದಿಯನ್ನು ನಂಬಿ 20 ಜನರು ನೋಂದಣಿ ಕೂಡ ಮಾಡಿಸಿಕೊಂಡಿದ್ದರು.
ದೇಶ
ಯೂನಿವರ್ಸಿಟಿಯಲ್ಲಿ ಸೆಕ್ಯೂರಿಟಿ ಗಾರ್ಡ್ಗಳು, ವಿದ್ಯಾರ್ಥಿಗಳ ಮಧ್ಯೆ ಬಡಿದಾಟ, ವಾಹನಗಳು ಧ್ವಂಸ; 33 ಜನರ ಬಂಧನ
ಕಾಲೇಜು ವಿದ್ಯಾರ್ಥಿಗಳು ಮತ್ತು ಖಾಸಗಿ ಏಜೆನ್ಸಿಗೆ ಸೇರಿದ ಭದ್ರತಾ ಸಿಬ್ಬಂದಿ ನಡುವಿನ ಸಂಘರ್ಷದ ಹಲವು ವಿಡಿಯೊಗಳು ವೈರಲ್ ಆಗಿವೆ. ಸೋಷಿಯಲ್ ಮೀಡಿಯಾದಲ್ಲಿ ಭರ್ಜರಿ ಹರಿದಾಡುತ್ತಿವೆ.
ನವ ದೆಹಲಿ: ಕಾಲೇಜುಗಳಲ್ಲಿ, ಯೂನಿವರ್ಸಿಟಿಗಳಲ್ಲಿ ಹೊಡೆದಾಟ-ಗಲಾಟೆ ನಡೆಯುತ್ತಿರುತ್ತದೆ. ಎಂಥಾ ಸಣ್ಣಸಣ್ಣ ಕಾರಣಗಳೆಲ್ಲ ದೊಡ್ಡದಾಗಿ ಸಂಘರ್ಷಕ್ಕೆ ದಾರಿ ಮಾಡಿಕೊಟ್ಟುಬಿಡುತ್ತವೆ. ಹಾಗೇ, ಗ್ರೇಟರ್ ನೊಯ್ಡಾದ ಗೌತಮ ಬುದ್ಧ ಯೂನಿವರ್ಸಿಟಿ (ಸರ್ಕಾರಿ)ಯಲ್ಲೂ ಒಂದಷ್ಟು ವಿದ್ಯಾರ್ಥಿಗಳು ಮತ್ತು ಅದೇ ಯೂನಿವರ್ಸಿಟಿಯ ಸೆಕ್ಯೂರಿಟಿ ಗಾರ್ಡ್ಗಳ ಮಧ್ಯೆ ಮಾರಾಮಾರಿ ಜಗಳ ನಡೆದು, ಸದ್ಯ ಪೊಲೀಸರು 33 ಜನರನ್ನು ವಶಕ್ಕೆ ಪಡೆದಿದ್ದಾರೆ.
‘ಭಾನುವಾರ ಬೆಳಗ್ಗೆ 10.30ರ ಹೊತ್ತಿಗೆ ಒಂದಷ್ಟು ವಿದ್ಯಾರ್ಥಿಗಳು ಯೂನಿವರ್ಸಿಟಿಯ ಕ್ಯಾಂಪಸ್ನಲ್ಲಿರುವ ಮುಂಶಿ ಪ್ರೇಮಚಂದ್ ಹಾಸ್ಟೆಲ್ ಮುಂಭಾಗ ನಿಂತು ಸಿಗರೇಟ್ ಸೇದುತ್ತಿದ್ದರು. ಅಲ್ಲೆಲ್ಲ ಸಿಗರೇಟ್ ಸೇದುವುದು, ಮದ್ಯಪಾನ ಮಾಡುವುದೆಲ್ಲ ಕಟ್ಟುನಿಟ್ಟಾಗಿ ನಿಷಿದ್ಧ. ಅಂಥದ್ದರಲ್ಲಿ ವಿದ್ಯಾರ್ಥಿಗಳು ಹಾಸ್ಟೆಲ್ ಬಳಿ ಸ್ಮೋಕಿಂಗ್ ಮಾಡುತ್ತಿರುವದನ್ನು ನೋಡಿ ಅಲ್ಲಿನ ಸೆಕ್ಯೂರಿಟಿ ಗಾರ್ಡ್ಗಳು ವಿದ್ಯಾರ್ಥಿಗಳನ್ನು ಪ್ರಶ್ನಿಸಿದ್ದಾರೆ. ಇದೇ ಸಂಘರ್ಷಕ್ಕೆ ಕಾರಣವಾಯಿತು. ವಿದ್ಯಾರ್ಥಿಗಳು ಸೆಕ್ಯೂರಿಟಿ ಸಿಬ್ಬಂದಿಯನ್ನೇ ತರಾಟೆಗೆ ತೆಗೆದುಕೊಂಡರು. ಮಾತಿಗೆ ಮಾತು ಬೆಳೆದು ಮಾರಾಮಾರಿ ಹೊಡೆದಾಡಿಕೊಂಡಿದ್ದಾರೆ. ಸದ್ಯ 33ಜನರನ್ನು ವಶಕ್ಕೆ ಪಡೆದಿದ್ದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: MS Dhoni : ಇನ್ನು ಮುಂದೆ ಧೋನಿಗೆ ಕಾಲು ನೋವು ಬರದು; ಮುಂಬಯಿ ವೈದ್ಯರು ಹೀಗೆ ಹೇಳಿದ್ದು ಯಾಕೆ?
ಕಾಲೇಜು ವಿದ್ಯಾರ್ಥಿಗಳು ಮತ್ತು ಖಾಸಗಿ ಏಜೆನ್ಸಿಗೆ ಸೇರಿದ ಭದ್ರತಾ ಸಿಬ್ಬಂದಿ ನಡುವಿನ ಸಂಘರ್ಷದ ಹಲವು ವಿಡಿಯೊಗಳು ವೈರಲ್ ಆಗಿವೆ. ಸೋಷಿಯಲ್ ಮೀಡಿಯಾದಲ್ಲಿ ಭರ್ಜರಿ ಹರಿದಾಡುತ್ತಿವೆ. ಕೆಲವರು ಬಡಿಗೆಗಳನ್ನು ಹಿಡಿದುಕೊಂಡು ಬೈಕ್, ಕಾರುಗಳಿಗೆ ಬಡಿದು ಹಾನಿಗೊಳಿಸುತ್ತಿರುವುದನ್ನೂ ವಿಡಿಯೊದಲ್ಲಿ ನೋಡಬಹುದು. ಹುಡುಗರ ಬಾಯಯಲ್ಲಿ ಬರಿ ಬೈಗುಳವೇ ಕೇಳುತ್ತಿದೆ.
ವೈರಲ್ ನ್ಯೂಸ್
Video: ಯಾವ ಉದ್ಯೋಗಿಯೂ ಹೊರಗೆ ಹೋಗಬಾರದು; ಕಂಪನಿ ಬಾಗಿಲಿಗೆ ಸರಪಳಿ ಬೀಗ ಹಾಕಿದ ವಾಚ್ಮ್ಯಾನ್
ಉದ್ಯೋಗಿಗಳು ಅನುಮತಿ ಇಲ್ಲದೆ ಹೊರಗೆ ಹೋಗಬಾರದು ಎಂಬ ಕಾರಣಕ್ಕೆ ಹೀಗೆ ಮಾಡಿದ್ದಾಗಿ ವಾಚ್ಮ್ಯಾನ್ ಹೇಳುವುದು ವಿಡಿಯೊದಲ್ಲಿ ಕೇಳಿಸುತ್ತದೆ.
ಕಂಪನಿಗಳಲ್ಲಿ ಅವಧಿಗೂ ಮೀರಿ ಕೆಲಸ ಮಾಡಿಸಿಕೊಳ್ಳುವುದು ಸಾಮಾನ್ಯ. ಎಲ್ಲ ಕಂಪನಿಗಳಲ್ಲೂ ಅಲ್ಲವೆಂದರೂ ಸಾಮಾನ್ಯವಾಗಿ ಬಹುತೇಕ ಕಚೇರಿ/ಸಂಸ್ಥೆಗಳಲ್ಲಿ ಲಾಗಿನ್ ಆಗುವ ಸಮಯ ಮಾತ್ರ ಸರಿಯಾಗಿರಬೇಕು ಎಂಬ ನಿಯಮ ಮಾಡಿರುತ್ತಾರೆ ಹೊರತು, ಉದ್ಯೋಗಿಗಳು ಲಾಗೌಟ್ ಆಗುವ ಅಂದರೆ ಕೆಲಸ ಮುಗಿಸಿ ಹೊರಡುವ ಸಮಯಕ್ಕೆ ಯಾವುದೇ ನಿಯಮ ಇರುವುದಿಲ್ಲ. ಅವಧಿಗೂ ಮುನ್ನ ಹೋಗುವಂತಿಲ್ಲ. ಸಮಯಕ್ಕೆ ಸರಿಯಾಗಿ ಎದ್ದು ಹೋಗಬಹುದು. ಅಗತ್ಯ ಬಿದ್ದರೆ, ಕೆಲಸದ ಅವಧಿ ಮುಗಿದ ಬಳಿಕವೂ ಕುಳಿತುಕೊಳ್ಳಬೇಕು..ಇದು ಸಾಮಾನ್ಯವಾಗಿ ಉದ್ಯೋಗಸ್ಥರ ಜೀವನ.
ಹೀಗೆಲ್ಲ ಇರುವಾಗ ಕಂಪನಿಯೊಂದರಲ್ಲಿ ವಾಚ್ಮ್ಯಾನ್ವೊಬ್ಬರು ಬಾಗಿಲು ಮುಚ್ಚಿ, ಸರಪಳಿಯ ಬೀಗ ಹಾಕುತ್ತಿರುವ ವಿಡಿಯೊ ವೈರಲ್ ಆಗಿದೆ. ಉದ್ಯೋಗಿಗಳು ಅನುಮತಿ ಇಲ್ಲದೆ ಹೊರಗೆ ಹೋಗಬಾರದು ಎಂಬ ಕಾರಣಕ್ಕೆ ಹೀಗೆ ಮಾಡಿದ್ದಾಗಿ ಆತ ಹೇಳುವುದು ವಿಡಿಯೊದಲ್ಲಿ ಕೇಳಿಸುತ್ತದೆ. ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟೆ ವೈರಲ್ ಆಗುತ್ತಿದೆ. ಹಾಗೇ, ನೆಟ್ಟಿಗರ ಆಕ್ರೋಶಕ್ಕೂ ಕಾರಣವಾಗಿದೆ.
ಎಡ್ಟೆಕ್ ಕಂಪನಿಯೊಂದರಲ್ಲಿ ಉದ್ಯಮಿಯಾಗಿರುವ ರವಿ ಹಂಡಾ ಎಂಬುವರು ಈ ವಿಡಿಯೊವನ್ನು ಟ್ವಿಟರ್‌ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಹೀಗೆ ಬಾಗಿಲನ್ನು ಲಾಕ್ ಮಾಡಿದ್ದು ಯಾವ ಕಂಪನಿಯಲ್ಲಿ ಎಂಬುದು ಗೊತ್ತಾಗಿಲ್ಲ. ಹೀಗ್ಯಾಕೆ ಬಾಗಿಲನ್ನು ಮುಚ್ಚುತ್ತೀದ್ದೀರಿ ಎಂದು ವಿಡಿಯೊ ಮಾಡುತ್ತಿರುವವರು, ವಾಚ್ಮ್ಯಾನ್ನನ್ನು ಪ್ರಶ್ನೆ ಮಾಡಿದ್ದಕ್ಕೆ ಆತ ‘ಈ ಕಂಪನಿಯ ಮ್ಯಾನೇಜರ್ ಒಬ್ಬರು ಹೇಳಿದ್ದಕ್ಕೆ ಮಾಡುತ್ತಿದ್ದೇನೆ. ಇಲ್ಲಿನ ಯಾವ ಉದ್ಯೋಗಿಯೂ ನನ್ನ ಅನುಮತಿ ಪಡೆಯದೆಯೇ ಹೊರಗೆ ಹೋಗುವಂತಿಲ್ಲ. ಮನೆಗೂ ಹೋಗುವಂತಿಲ್ಲ. ಹೀಗಾಗಿ ಬಾಗಿಲನ್ನು ಲಾಕ್ ಮಾಡು ಎಂದಿದ್ದಾರೆ’ ಎಂದು ವಾಚ್ಮ್ಯಾನ್ ಹೇಳುತ್ತಾನೆ.
ವಿಡಿಯೊ ಸಿಕ್ಕಾಪಟೆ ವೈರಲ್ ಆಗುತ್ತಿದೆ. ವಿಡಿಯೊ ಶೇರ್ ಮಾಡಿಕೊಂಡಿರುವ ರವಿ ಹಂಡಾ ‘ಭಾರತದ ಎಡ್ಟೆಕ್ ಕಂಪನಿಗಳನ್ನು ಹುಟ್ಟುಹಾಕಿದವರು ಈಗ ಅವರ ಉದ್ಯೋಗಿಗಳನ್ನು ಹೀಗೆ ಕೂಡಿ ಹಾಕುತ್ತಿದ್ದಾರೆ. ಇಂಥ ನರಕಸದೃಶ ಕಂಪನಿಗಳನ್ನು ಈ ದೇಶದಿಂದ ಹೊರಹಾಕಬೇಕು. ಇನ್ಯಾವುದೇ ದೇಶದಲ್ಲೂ ಹೀಗೆ ಕಂಪನಿಗಳು ಬಾಗಿಲು ಹಾಕುವ ಧೈರ್ಯವನ್ನು ಮಾಡುವುದಿಲ್ಲ ಎಂದು ಕ್ಯಾಪ್ಷನ್ ಬರೆದುಕೊಂಡಿದ್ದಾರೆ.
Indian edtech founders are now literally locking in their employees.
— Ravi Handa (@ravihanda) June 3, 2023
Get the hell out of this country.
Nowhere else would anyone dare to pull off something like this. pic.twitter.com/zTFuN6vDCm
Context:pic.twitter.com/3U38egCfPv
— Divya Gandotra Tandon (@divya_gandotra) June 3, 2023
Coding Ninjas ಎಂಬ ಗುರುಗ್ರಾಮ ಮೂಲದ ಕಂಪನಿಯಲ್ಲಿ ಕಂಡು ಬಂದ ದೃಶ್ಯ ಇದಾಗಿದೆ. ವಿಡಿಯೊ ವೈರಲ್ ಆಗುತ್ತಿದ್ದಂತೆ Coding Ninjas ಕಂಪನಿ ಹೇಳಿಕೆ ಬಿಡುಗಡೆ ಮಾಡಿದ್ದು, ಈ ಬಗ್ಗೆ ವಿಷಾದ ವ್ಯಕ್ತಪಡಿಸುವುದಾಗಿ ತಿಳಿಸಿದೆ. ಹೀಗೆ ಬಾಗಿಲು ಹಾಕಲು ಸೂಚನೆ ನೀಡಿದ ಉದ್ಯೋಗಿಯನ್ನು ಪತ್ತೆ ಹಚ್ಚಲಾಯಿತು. ಅವರೂ ತಮ್ಮ ತಪ್ಪನ್ನು ಒಪ್ಪಿಕೊಂಡು ಕ್ಷಮೆ ಕೇಳಿದ್ದಾರೆ ಎಂದು ತಿಳಿಸಿದೆ. ಕಂಪನಿಯ ಸಂಸ್ಥಾಪಕರಿಗೂ ಈ ಬಗ್ಗೆ ವಿಷಯ ಗೊತ್ತಾಗಿದೆ. ಕ್ಷಮೆ ಕೇಳಿದರೂ ಉದ್ಯೋಗಿ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಮುಂದೆ ಹೀಗಾಗದಂತೆ ಎಚ್ಚರಿಕೆ ವಹಿಸಿದ್ದೇವೆ ಎಂದು Coding Ninjas ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ.
ಇನ್ನು ಕಂಪನಿಯ ಸಂಸ್ಥಾಪಕನ ಹೆಸರು ಅಂಕುಶ್ ಸಿಂಗ್ಲಾ ಎಂದಾಗಿದ್ದು, ಅವರೂ ಕೂಡ ಟ್ವೀಟ್ ಮಾಡಿಕೊಂಡಿದ್ದಾರೆ. ಕಳೆದ ವಾರ ನಮ್ಮ ಕಂಪನಿಯಲ್ಲಿ ಹೀಗಾಗಿದ್ದು ನಿಜ. ಸೇಲ್ಸ್ ವಿಭಾಗದ ಒಬ್ಬ ಮ್ಯಾನೇಜರ್ನಿಂದಾಗಿ ಸಮಸ್ಯೆಯಾಯಿತು. ತಕ್ಷಣವೇ ಕ್ರಮ ವಹಿಸಿದ್ದೇವೆ ಎಂದು ಹೇಳಿಕೊಂಡಿದ್ದಾರೆ. ಕಂಪನಿಯ ಹೇಳಿಕೆಗಳು ಮತ್ತು ಅಂಕುಶ್ ಸಿಂಗ್ಲಾ ಟ್ವೀಟ್ನ್ನು ಕೂಡ ರವಿ ಹಂಡಾ ಶೇರ್ ಮಾಡಿಕೊಂಡಿದ್ದಾರೆ. ಆದರೆ ನೆಟ್ಟಿಗರು ವಿಡಿಯೊ ನೋಡಿ, ಇದು ಅತಿರೇಕದ ವರ್ತನೆ ಎಂದು ಹೇಳಿದ್ದಾರೆ.
Company's official statement. pic.twitter.com/ygCHmaQJXN
— Ravi Handa (@ravihanda) June 3, 2023
-
ಕರ್ನಾಟಕ18 hours ago
Odisha Train Accident: ಒಡಿಶಾ ರೈಲು ದುರಂತಕ್ಕೆ ಕೋಮು ಬಣ್ಣ ನೀಡಿದ ಮಹಿಳೆ, ಒಡಿಶಾ ಪೊಲೀಸರಿಂದ ತನಿಖೆ
-
ಕರ್ನಾಟಕ16 hours ago
ವಿಶ್ವ ಪರಿಸರ ದಿನ: ಸಸಿ ನೆಡಿ, ಫೋಟೊ ಕಳುಹಿಸಿ; ವಿಸ್ತಾರ ನ್ಯೂಸ್ ಅಭಿಯಾನ
-
ಕರ್ನಾಟಕ9 hours ago
DK Shivakumar: ಹೊಸಕೆರೆಹಳ್ಳಿ ಕೆರೆ ಮಧ್ಯೆ ರಸ್ತೆ ಮಾಡಿದ್ದಕ್ಕೆ ಜಾಡಿಸಿದ ಡಿಕೆಶಿ; ಅಧಿಕಾರಿಗಳ ಅಮಾನತಿಗೆ ಆದೇಶ
-
ಕರ್ನಾಟಕ13 hours ago
Murder Case: ಟೋಲ್ ವಿಚಾರಕ್ಕೆ ಕಿರಿಕ್; ಹಾಕಿ ಸ್ಟಿಕ್ನಿಂದ ಬಡಿದು ಕೊಂದೇಬಿಟ್ಟರು ದುರುಳರು
-
ದೇಶ14 hours ago
Odisha Train Accident: ಗಾಯದ ಮೇಲೆ ಬರೆ ಎಂದರೆ ಇದೇ; ಒಡಿಶಾದಲ್ಲಿ ಹಳಿ ತಪ್ಪಿದ ಮತ್ತೊಂದು ರೈಲು
-
ದೇಶ17 hours ago
world environment day : ಇಂದು ವಿಶ್ವ ಪರಿಸರ ದಿನ 2023: ಈ ದಿನದ ಮಹತ್ವ, ಇತಿಹಾಸ, ಥೀಮ್ ತಿಳಿಯಿರಿ
-
ಪರಿಸರ9 hours ago
ವಿಶ್ವ ಪರಿಸರ ದಿನ: ‘ಸಸಿ ನೆಡಿ, ಫೋಟೊ ಕಳುಹಿಸಿ’ ವಿಸ್ತಾರ ಅಭಿಯಾನ; ನಿಮ್ಮ ಮತ್ತಷ್ಟು ಫೋಟೊಗಳು ಇಲ್ಲಿವೆ
-
ಕರ್ನಾಟಕ16 hours ago
ಕಲಬುರಗಿಯಲ್ಲಿ ಚಂಡಿಕಾ ಹೋಮದ ಬೆಂಕಿಯಲ್ಲಿ ಕಾಣಿಸಿಕೊಂಡ ದುರ್ಗಾ ದೇವಿ!; ಇಲ್ಲಿದೆ ನೋಡಿ ಫೋಟೊ