ಸಾಮಾಜಿಕ ಜಾಲತಾಣದಲ್ಲೊಂದು ಶಿವಲಿಂಗ ಸದ್ದು ಮಾಡುತ್ತಿದೆ. ಇದು ಅಂತಿಂಥ ಶಿವಲಿಂಗವಲ್ಲ. ಬೃಹತ್ ಶಿವಲಿಂಗ. ಇದು ಇದ್ದಕ್ಕಿದ್ದಂತೆ ಪ್ರತ್ಯಕ್ಷವಾಗಿದ್ದು ಜಿಮ್‌ನಲ್ಲಿ. ಜಿಮ್‌ನಲ್ಲಿ ಶಿವಲಿಂಗವಾ ಎಂದು ಆಶ್ಚರ್ಯಪಡಬೇಡಿ. ಗ್ವಾಲಿಯರ್‌ನ ಜಿಮ್ ಒಂದರಲ್ಲಿ ಭಾರೀ ಶಿವಲಿಂಗವೊಂದು ಎದ್ದು ನಿಂತಿದ್ದು, ಸಾಮಾಜಿಕ ಜಾಲತಾಣದಲ್ಲೀಗ ಇದರ ಚಿತ್ರ ವೈರಲ್ (Viral Post) ಆಗಿದೆ. ಕ್ರಿಯಾತ್ಮಕವಾಗಿ ಯೋಚಿಸುವವರು ಎಲ್ಲಿ ಎಂಥದ್ದಕ್ಕೂ ಜೀವ ಕೊಡಬಲ್ಲರು ಎಂಬುದಕ್ಕೆ ಇದು ಸಾಕ್ಷಿಯಾಗಿ ನಿಂತಿದೆ.
ವಿಶೇಷವೆಂದರೆ ಇದು ಅಂತಿಂಥ ಶಿವಲಿಂಗವಲ್ಲ. ಈ ಶಿವಲಿಂಗ ತಯಾರಾಗಿದ್ದು ಜಿಮ್ ಪರಿಕರಗಳಿಂದಲೇ. ಹೌದು. ದಿನನಿತ್ಯ ಜಿಮ್‌ನಲ್ಲಿ ದೇಹದಂಡಿಸಲು ಬಳಕೆಯಾಗುವ ವೈಟ್ ಪ್ಲೇಟ್‌ಗಳು, ಡಂಬೆಲ್‌ಗಳು, ಹಗ್ಗ ಹಾಗೂ ಇತರ ಕೆಲವು ಜಿಮ್‌ನಲ್ಲಿ ಲಭ್ಯವಿರುವ ವಸ್ತುಗಳಿಂದಲೇ ಈ ಶಿವಲಿಂಗ ಇದೀಗ ಎದ್ದು ನಿಂತಿದೆ. ಜಿಮ್ ವಸ್ತುಗಳನ್ನು ಹೊರತುಪಡಿಸಿದರೆ ಹೂವಿನ ಮಾಲೆ, ಹಾಗೂ ದೀಪಗಳನ್ನು ಮಾತ್ರ ಅಲಂಕಾರಕ್ಕೆ ಬಳಸಲಾಗಿದೆ.
A gym owner from Gwalior recreates a Shivling using gym equipment pic.twitter.com/0KvEeO9Nvw
— Colours of Bharat (@ColoursOfBharat) November 7, 2022
ಗ್ವಾಲಿಯರ್ ಮೂಲದ ಜಿಮ್ ಒಡೆಯರೊಬ್ಬರು ಈ ಶಿವಲಿಂಗವನ್ನು ತನ್ನ ಜಿಮ್‌ನಲ್ಲಿ ಮಾಡಿದ್ದು ಕೇವಲ ಜಿಮ್ ಪರಿಕರಗಳನ್ನು ಮಾತ್ರ ಇದಕ್ಕೆ ಬಳಸಿಕೊಂಡಿದ್ದಾರೆ. ಸೂಕ್ಷ್ಮವಾಗಿ ಚಿತ್ರವನ್ನು ಗಮನಿಸಿದರೆ ಎಷ್ಟು ಕ್ರಿಯಾಶಿಲತೆಯಿಂದ ಕಲಾತ್ಮಕವಾಗಿ ಶಿವಲಿಂಗವನ್ನು ನಿರ್ಮಿಸಲಾಗಿದೆ ಎಂದು ಅರ್ಥವಾಗುತ್ತದೆ. ಶಿವಲಿಂಗವನ್ನು ನಿರ್ಮಿಸಿ, ವೃತ್ತಾಕಾರವಾಗಿ ಡಂಬೆಲ್‌ಗಳನ್ನು ಜೋಡಿಸಿರುವುದು, ಹಣೆಯ ಮೂರುನಾಮಕ್ಕೂ ಪಿಂಕ್ ಡಂಬೆಲ್‌ಗಳನ್ನು ಬಳಸಿರುವುದು ಎಲ್ಲವೂ ಜಿಮ್ ಒಡೆಯನ ಕ್ರಿಯಾಶೀಲ ಕಲಾತ್ಮಕ ಯೋಚನೆಯನ್ನು ತೋರಿಸುತ್ತದೆ. ಒಂದೇ ಬಗೆಯ ಪರಿಕರಗಳನ್ನು ಬಳಸಿರುವ ರೀತಿ ಹಾಗೂ ಅದು ಶಿವಲಿಂಗದ ರೀತಿಯಲ್ಲಿ ಅದ್ಭುತವಾಗಿ ಮೂಡಿ ಬಂದಿರುವುದೇ ಹಲವರ ಮನಸೂರೆಗೊಂಡಿದೆ.
ಈ ಚಿತ್ರ ಟ್ವಿಟರ್‌ನಲ್ಲಿ ಪೋಸ್ಟ್ ಆಗುತ್ತಿದ್ದಂತೆ ಸಾವಿರಾರು ಮಂದಿ ಜಿಮ್ ಒಡೆಯ ಕ್ರಿಯಾತ್ಮಕ ಆಲೋಚನೆಎ ತಲೆದೂಗಿದ್ದಾರೆ. ಜಿಮ್‌ನಲ್ಲಿ ಇಂತಹ ವಸ್ತುಗಳಿಂದ ಭಕ್ತಿಯ ಭಾವವವನ್ನು ಹೀಗೂ ಹರಿಸಬಹುದೆಂದು ಕ್ರಿಯಾತ್ಮಕವಾಗಿ ತೋರಿಸಿದ್ದೀರಿ ಎಂದು ಜನರು ಆತನ ಐಡಿಯಾಕ್ಕೆ ಫಿದಾ ಆಗಿದ್ದಾರೆ. ಭಕ್ತಿ ಎಂದರೆ ಇದು ಎಂದು ಕೆಲವರು ಕಾಮೆಂಟ್ ಮಾಡಿದರೆ, ಇನ್ನೂ ಕೆಲವರು ಈ ಜಿಮ್ ಒಡೆಯ ಕ್ರಿಯಾಶೀಲತೆ, ಆಧ್ಯಾತ್ಮ, ಪರಿಶ್ರಮ ಎಲ್ಲವುಗಳ ಸಮ್ಮಿಲನವಾಗಿದ್ದಾರೆ ಎಂದು ಹೊಗಳಿದ್ದಾರೆ.
ಇದನ್ನೂ ಓದಿ: Viral Post: ಪಾನ್ ದೋಸೆ: ವಿಚಿತ್ರ ದೋಸೆಯ ವಿರುದ್ಧ ದೋಸೆಪ್ರಿಯರು ಗರಂ!