Viral Post: ಪಾನ್ ದೋಸೆ: ವಿಚಿತ್ರ ದೋಸೆಯ ವಿರುದ್ಧ ದೋಸೆಪ್ರಿಯರು ಗರಂ! - Vistara News

ವೈರಲ್ ನ್ಯೂಸ್

Viral Post: ಪಾನ್ ದೋಸೆ: ವಿಚಿತ್ರ ದೋಸೆಯ ವಿರುದ್ಧ ದೋಸೆಪ್ರಿಯರು ಗರಂ!

ಸುಮಾರು ಒಂದುವರೆ ಲಕ್ಷ ಜನರು ಈ ವಿಡಿಯೋ ನೋಡಿದ್ದು, ʻಪಾನ್‌ ದೋಸೆ, ಈ ಗ್ರಹವನ್ನು ಬಿಡುವ ಸಮಯ ಬಂದಿದೆʼ ಎಂಬ ಶೀರ್ಷಿಕೆಯನ್ನೂ ಹೊತ್ತಿದೆ. ಕೆಲವರು, ʻಈ ದೋಸೆ ವಿಡಿಯೋನ ಎರಡನೇ ಭಾಗವನ್ನೂ ನಮಗೆ ವೀಕ್ಷಿಸಲು ನೀಡಿದರೆ, ನೆಮ್ಮದಿಯಿಂದ ಟ್ವಿಟರ್‌ನಿಂದ ನಿರ್ಗಮಿಸುತ್ತೇವೆʼ ಎಂದು ತಮಾಷೆಯಾಗಿ ಕಾಮೆಟ್‌ ಮಾಡಿದ್ದಾರೆ.

VISTARANEWS.COM


on

paan dosa
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬಹುಶಃ ದೋಸೆಯ ಮೇಲೆ ನಡೆದಷ್ಟು ಚಿತ್ರವಿಚಿತ್ರ ಪ್ರಯೋಗಗಳು ಯಾವ ಆಹಾರದ ಮೇಲೂ ಆಗಿರಲಿಕ್ಕಿಲ್ಲವೇನೋ. ದಕ್ಷಿಣ ಭಾರತೀಯರ ಸಾಂಪ್ರದಾಯಿಕ ದೋಸೆ ನಾನಾ ಬಗೆಯಲ್ಲಿ ರೂಪಾಂತರಗೊಂಡು ವಿಶ್ವದಾದ್ಯಂತ ಜನಪ್ರಿಯತೆ ಗಳಿಸಿದೆ. ಆಗಾಗ ಹೊಸ ಹೊಸ ರೂಪಗಳಲ್ಲಿ ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಳ್ಳುತ್ತಲೇ ಇರುವ ದೋಸೆ ಕೆಲವೊಮ್ಮೆ ಸಾಂಪ್ರದಾಯಿಕ ದೋಸೆಯನ್ನು ಇಷ್ಟಪಡುವವರ ಕೆಂಗಣ್ಣಿಗೆ ಗುರಿಯಾಗುತ್ತಲೂ ಇರುತ್ತದೆ. ಈ ಬಾರಿಯ ಈ ಹೊಸ ರೂಪಾಂತರವೂ ಹಲವರ ಕೋಪಕ್ಕೆ ಕಾರಣವಾಗಿದೆ. ಈ ಬಾರಿ ಹಸಿರು ಬಣ್ಣದ ಪಾನ್‌ (ವೀಳ್ಯದೆಲೆ) ದೋಸೆ (paan dosa) ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಹಸಿರು ಬಣ್ಣದ ಹಿಟ್ಟನ್ನು ಬಿಸಿ ಬಿಸಿ ತವಾದ ಮೇಲೆ ಸುರಿದು, ದೋಸೆ ಹೊಯ್ದ ಮೇಲೆ ಕತ್ತರಿಸಿದ ವೀಳ್ಯದೆಲೆ, ಚೆರ್ರಿ, ಒಣ ದ್ರಾಕ್ಸಿ, ಆಪ್ರಿಕಾಟ್‌, ಖರ್ಜೂರ, ಅಂಜೂರ, ಟೂಟಿ ಫ್ರೂಟಿ ಹಾಗೂ ಇನ್ನೂ ಅನೇಕ ಬಗೆಯ ಒಣಹಣ್ಣುಗಳ ಮಿಶ್ರಣವನ್ನು ಮಸಾಲೆ ಇಡುವಂತೆ ದೋಸೆಯ ಮೇಲೆ ಇಟ್ಟು, ಸಾಕಷ್ಟು ಬೆಣ್ಣೆಯನ್ನೂ ಈ ದೋಸೆಗೆ ಸುರಿದು, ವೀಳ್ಯದೆಲೆ ಸಿರಪ್ಪನ್ನೂ ಇದರ ಮೇಲೆ ಸುರಿಯುವ ಮೂಲಕ ಸ್ವೀಟ್‌ ಪಾನ್‌ ಮಾದರಿಯಲ್ಲಿ ಪಾನ್‌ ದೋಸೆ ಮಾಡುವ ಬಗೆಯನ್ನು ಸಾಮಾಜಿಕ ಜಾಲತಾಣದಲ್ಲಿ (viral post) ಹರಿಬಿಡಲಾಗಿದೆ. ಹ್ಯಾಪಿ ಎಂಬ ಟ್ವಿಟರ್‌ ಬಳಕೆದಾರರೊಬ್ಬರು ಇದನ್ನು ಹಂಚಿಕೊಂಡಿದ್ದು ಇದು ಸಾಕಷ್ಟು ಚರ್ಚೆಗೂ ಕಾರಣವಾಗಿದೆ.

ಬಹಳಷ್ಟು ಮಂದಿ ಈ ದೋಸೆ ನೋಡಿ ಶಾಕ್‌ ಆಗಿದ್ದು, ಇಂತಹ ವಿಚಿತ್ರವಾದ ದೋಸೆಯನ್ನು ಮಾಡಿರುವುದಕ್ಕೆ ಆಶ್ಚರ್ಯವನ್ನೂ ವ್ಯಕ್ತಪಡಿಸಿದ್ದಾರೆ. ಈ ದೋಸೆ, ಯಾವುದೋ ದೋಸೆ ಅಂಗಡಿಯಲ್ಲಿ ದೊರೆಯುವ ದೋಸೆಯ ವಿಧವಾಗಿದ್ದು ಈ ದೋಸೆ ಎಲ್ಲಿ ದೊರೆಯುತ್ತದೆ ಎಂಬ ಬಗ್ಗೆ ಯಾವುದೇ ಮಾಹಿತಿಗಳಿಲ್ಲ.

ಸುಮಾರು ಒಂದುವರೆ ಲಕ್ಷ ಜನರು ಈ ವಿಡಿಯೋ ನೋಡಿದ್ದು, ʻಪಾನ್‌ ದೋಸೆ, ಈ ಗ್ರಹವನ್ನು ಬಿಡುವ ಸಮಯ ಬಂದಿದೆʼ ಎಂಬ ಶೀರ್ಷಿಕೆಯನ್ನೂ ಹೊತ್ತಿದೆ. ಕೆಲವರು, ʻಈ ದೋಸೆ ವಿಡಿಯೋನ ಎರಡನೇ ಭಾಗವನ್ನೂ ನಮಗೆ ವೀಕ್ಷಿಸಲು ನೀಡಿದರೆ, ನೆಮ್ಮದಿಯಿಂದ ಟ್ವಿಟರ್‌ನಿಂದ ನಿರ್ಗಮಿಸುತ್ತೇವೆʼ ಎಂದು ತಮಾಷೆಯಾಗಿ ಕಾಮೆಟ್‌ ಮಾಡಿದ್ದಾರೆ.

ಇನ್ನೂ ಕೆಲವರು, ʻಈ ಗ್ರಹದ ಮೇಲೆ ಇನ್ನೂ ಯಾವೆಲ್ಲ ದೋಸೆಯನ್ನು ನೋಡುವುದಕ್ಕಿದೆಯೋ, ದೇವರೇʼ ಎಂದು ತಲೆ ಮೇಲೆ ಕೈಹೊತ್ತು ಕೂತಿದ್ದಾರಂತೆ. ಇನ್ನೂ ಒಬ್ಬರು ಇದರಲ್ಲಿ ಶೇಕಡಾ ಒಂದರಷ್ಟು ಮಾತ್ರ ಪಾನ್‌ ಕಾಣಿಸುತ್ತಿದ್ದು, ಉಳಿದದ್ದೆಲ್ಲವೂ ಬಣ್ಣ ಹಾಕಿದಂತೆ ಕಾಣುತ್ತಿದೆ ಎಂದಿದ್ದಾರೆ. ಮತ್ತೊಬ್ಬರು, ಮೆಯೋನೀಸ್‌, ಕೆಚಪ್‌ ಪಾನ್‌ ದೋಸೆಗಾಗಿ ಕಾಯುತ್ತಿದ್ದೇವೆ ಎಂದು ನಗೆಯಾಡಿದ್ದಾರೆ.

ಇದು ಪಾನ್‌ ದೋಸೆಯಾ ಅಥವಾ ರೇಡಿಯೋ ಆಕ್ಟಿವ್‌ ದೋಸೆಯಾ ಎಂದು ಮತ್ತೊಬ್ಬರು ಪ್ರಶ್ನಿಸಿದ್ದಾರೆ. ಉತ್ತರ ಭಾರತೀಯ ಬೀದಿಬದಿಯ ದೋಸೆ ಅಂಗಡಿಯ ಮಂದಿ ನಿಜಕ್ಕೂ ದೋಸೆಯನ್ನು ಕೆಡಿಸುತ್ತಿದ್ದಾರೆ. ಎಲ್ಲದಕ್ಕೂ ಚೀಸ್‌ ಬಳಸುವ ಮೂಲಕ ದೋಸೆಯ ಮೇಲೂ ಹುಚ್ಚುತನದ ಪ್ರಯೋಗ ಮಾಡುತ್ತಿದ್ದಾರೆ ಎಂದೂ ಕಿಡಿ ಕಾರಿದ್ದಾರೆ.

ಒಟ್ಟಾರೆಯಾಗಿ, ಎಲ್ಲ ದೋಸೆ ಪ್ರಿಯರಿಗೂ ಈ ಹಸಿರು ಪಾನ್‌ ದೋಸೆಯನ್ನು ನೋಡಿ ಎದೆ ಧಸಕ್ಕೆಂದಿದೆ! ಇನ್ನೂ ಎಷ್ಟು ದಿನ ಹೀಗೆ ನಮ್ಮ ಕಣ್ಣಿನಿಂದ ದೋಸೆಯ ಮೇಲಾಗುವ ಅನ್ಯಾಯವನ್ನು ನೋಡಬೇಕು ಎಂಬುದು ಇಲ್ಲಿ ಹಲವರ ಪ್ರಶ್ನೆ.

ಇದನ್ನೂ ಓದಿ: Viral Video: ಪಾಕ್ ಪ್ರಧಾನಿಗೆ ಹಗ್ ಮಾಡಲು ಒಪ್ಪದ ಟರ್ಕಿ ಅಧ್ಯಕ್ಷ! ಪಾಕ್ ಪಿಎಂಗೆ ನೆಟ್ಟಿಗರಿಂದ ಮಂಗಳಾರತಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ವೈರಲ್ ನ್ಯೂಸ್

Viral Video: ವಿಷ ಸೇವಿಸಿ ವಿಡಿಯೊ ರೆಕಾರ್ಡ್ ಮಾಡಿ ಯುವಕ ಆತ್ಮಹತ್ಯೆ; ಸಾವಿಗೆ ಕಾರಣವೇನು?

Viral Video: ಹಿಮಾಚಲ ಪ್ರದೇಶದ ಹಮೀರ್ಪುರದಲ್ಲಿ ಯುವಕನೊಬ್ಬ ವಿಷಯುಕ್ತ ಮಾತ್ರೆ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸಾಯುವ ಮುನ್ನ ಘಟನೆಯನ್ನು ಚಿತ್ರೀಕರಿಸಿ ಆತ್ಮಹತ್ಯೆಯ ಕಾರಣವನ್ನು ವಿವರಿಸಿದ್ದಾನೆ. ಸದ್ಯ ಈ ವಿಡಿಯೊ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಗ್ರಾಮದ ಮುಖ್ಯಸ್ಥ ಮತ್ತು ಆತನ ಸಹಚರರ ಕಿರುಕುಳಕ್ಕೆ ಹೇಗೆ ಬಲಿಯಾದೆ ಎನ್ನುವುದನ್ನು ವಿವರಿಸಿದ್ದಾನೆ. ಸದ್ಯ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

VISTARANEWS.COM


on

Viral Video
Koo

‍ಧರ್ಮಶಾಲಾ: ಬೆಚ್ಚಿ ಬೀಳಿಸುವ ಘಟನೆಯೊಂದರಲ್ಲಿ ಯುವಕನೊಬ್ಬ ವಿಷಯುಕ್ತ ಮಾತ್ರೆ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸಾಯುವ ಮುನ್ನ ಘಟನೆಯನ್ನು ಚಿತ್ರೀಕರಿಸಿ ಆತ್ಮಹತ್ಯೆಯ ಕಾರಣವನ್ನು ವಿವರಿಸಿದ್ದಾನೆ. ಸದ್ಯ ಈ ವಿಡಿಯೊ ವೈರಲ್‌ ಆಗಿದೆ (Viral Video). ಹಿಮಾಚಲ ಪ್ರದೇಶದ ಹಮೀರ್ಪುರದಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ. ಮೃತನನ್ನು 22 ವರ್ಷದ ಸುನಿಲ್ ತಿವಾರಿ ಅಲಿಯಾಸ್ ಛೋಟು ಎಂದು ಗುರುತಿಸಲಾಗಿದೆ.

ಸಾಯುವ ಮೊದಲು ಸುನಿಲ್ ತಿವಾರಿ 1 ನಿಮಿಷ 22 ಸೆಕೆಂಡುಗಳ ವಿಡಿಯೊ ರೆಕಾರ್ಡ್ ಮಾಡಿದ್ದಾನೆ. ಅದರಲ್ಲಿ ಆತ ಗ್ರಾಮದ ಮುಖ್ಯಸ್ಥ ಮತ್ತು ಆತನ ಸಹಚರರ ಕಿರುಕುಳಕ್ಕೆ ಹೇಗೆ ಬಲಿಯಾದೆ ಎನ್ನುವುದನ್ನು ವಿವರಿಸಿದ್ದಾನೆ. ಸದ್ಯ ಈ ವಿಡಿಯೊ ನೋಡಿದ ನೆಟ್ಟಿಗರು ಆಘಾತ ವ್ಯಕ್ತಪಡಿಸಿದ್ದಾರೆ.

ವಿಡಿಯೊದಲ್ಲಿ ಏನಿದೆ?

ಹೊಲದಲ್ಲಿ ಕುಳಿತಿರುವ ಸುನಿಲ್ ತಿವಾರಿಯನ್ನು ತೋರಿಸುವ ಮೂಲಕ ವಿಡಿಯೊ ಆರಂಭವಾಗುತ್ತದೆ. ಬಳಿಕ ಆತ ವಿಷದ ಬಾಟಲಿಯನ್ನು ಕ್ಯಾಮೆರಾದ ಎದುರು ಹಿಡಿಯುತ್ತ, ಅಳುತ್ತ ಮಾತನಾಡುತ್ತಾನೆ. ಗ್ರಾಮದ ಮುಖ್ಯಸ್ಥ ಮತ್ತು ಅವನ ಸಹಚರರು ಹೇಗೆ ಕಿರುಕುಳ ನೀಡಿದರು ಎನ್ನುವುದನ್ನು ವಿವರಿಸುತ್ತಾನೆ. ಜತೆಗೆ ವಿಷದ ಮಾತ್ರೆ ಸೇವಿಸಿರುವುದಾಗಿ ತಿಳಿಸಿದ್ದಾನೆ. ಸಾಯಲು ಎಷ್ಟು ಸಮಯ ತೆಗೆದುಕೊಳ್ಳುತ್ತದೆ ಎಂಬುದರ ಬಗ್ಗೆ ಗೊತ್ತಿಲ್ಲ ಎಂದೂ ಹೇಳುತ್ತಾನೆ.

“ಗ್ರಾಮದ ಮುಖ್ಯಸ್ಥ ಮತ್ತು ಅವನ ಸಹಚರರು ನನಗೆ ಚಿತ್ರಹಿಂಸೆ ನೀಡಿದ್ದಾರೆ ಮತ್ತು ಅದಕ್ಕಾಗಿಯೇ ಇಂದು ನಾನು ನನ್ನ ಜೀವನವನ್ನು ಕೊನೆಗೊಳಿಸಲು ನಿರ್ಧರಿಸಿದ್ದೇನೆ. ನಾನು ಈ ವಿಷವನ್ನು ಸೇವಿಸಿದ್ದೇನೆ ಮತ್ತು ನಾನು ಎಷ್ಟು ಹೊತ್ತು ಬದುಕುತ್ತೇನೆ ಎಂಬುದು ನನಗೆ ತಿಳಿದಿಲ್ಲ. ನಾನು 5 ಜನರ ವಿರುದ್ಧ ಎಫ್ಐಆರ್ ದಾಖಲಿಸಿದ್ದೇನೆ. ನಾನು ಇಂದು ಹೊರಡುತ್ತಿದ್ದೇನೆ. ನಿಮ್ಮ ಪ್ರಾರ್ಥನೆಯಲ್ಲಿ ನನ್ನನ್ನು ನೆನಪಿಸಿಕೊಳ್ಳಿ. ನಾನು ನಿಮ್ಮನ್ನು ಮತ್ತೆ ಎಂದಿಗೂ ಭೇಟಿಯಾಗುವುದಿಲ್ಲʼʼ ಎಂದು ಸುನಿಲ್‌ ಹೇಳಿದ್ದಾನೆ. ಈ ವಿಡಿಯೊವನ್ನು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಲಾಗಿದೆ.

ವರದಿಗಳ ಪ್ರಕಾರ, ಸುನಿಲ್ ಅವರನ್ನು ಬುಧವಾರ ಸಂಜೆ ಗಂಭೀರ ಸ್ಥಿತಿಯಲ್ಲಿ ಝಾನ್ಸಿಯ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾನೆ. ʼʼಕೆಲವು ವ್ಯಕ್ತಿಗಳೊಂದಿಗಿನ ವಿವಾದದ ನಂತರ ನನ್ನ ಸಹೋದರ ಸುನಿಲ್ ವಿಷ ಮಾತ್ರೆಗಳನ್ನು ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆʼʼ ಎಂದು ಆರೋಪಿಸಿ ಸುನಿಲ್ ಸಹೋದರ ಶೀತಲ್ ಬುಧವಾರ ಮಜ್ಗವಾನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಇದನ್ನೂ ಓದಿ: Viral News: ತಂಗಿಗೆ ಟಿವಿ ಗಿಫ್ಟ್‌ ಕೊಡಲು ಮುಂದಾದ ಪತಿಯನ್ನು ಕೊಲ್ಲಿಸಿದ ಪತ್ನಿ!

ಇಬ್ಬರ ಬಂಧನ

ಸೋಷಿಯಲ್‌ ಮೀಡಿಯಾದಲ್ಲಿ ಈ ವಿಡಿಯೊ ವೈರಲ್‌ ಆಗುತ್ತಿದ್ದಂತೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಸುನಿಲ್‌ ತನ್ನ ವಿಡಿಯೊದಲ್ಲಿ ಉಲ್ಲೇಖಿಸಿರುವ ಇಬ್ಬರನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಬರೈಲ್ ಗ್ರಾಮದ ಮುಖ್ಯಸ್ಥ ದಿನೇಶ್, ರಾಜ್ ಕುಮಾರ್, ಪ್ರಶಾಂತ್, ಧನ್ನಿ ಮತ್ತು ಆಯುಷ್ ವಿರುದ್ಧ ಐಪಿಸಿ ಸೆಕ್ಷನ್ 30 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಏಪ್ರಿಲ್ 18ರಂದು ಹರಿದ್ವಾರ ಬಾಬಾ ಗ್ರಾಮದ ಹೊರಗೆ ಸುನಿಲ್ ಮತ್ತು ಧನ್ನಿ ನಡುವೆ ವಾಗ್ವಾದ ನಡೆದಿತ್ತು. ಪೊಲೀಸರು ಘಟನಾ ಸ್ಥಳಕ್ಕೆ ಬಂದಾಗ ಸುನಿಲ್ ತನ್ನ ಸಂಬಂಧಿಕರೊಂದಿಗೆ ಹೊರಟು ಹೋಗಿದ್ದ. ಬಳಿಕ ಎರಡೂ ಕಡೆಯವರಿಗೆ ಠಾಣೆಗೆ ಬರಲು ತಿಳಿಸಲಾಗಿತ್ತು. ಆದರೆ ಹಾಜರಾಗಿರಲಿಲ್ಲ ಎಂದು ಮೂಲಗಳು ತಿಳಿಸಿವೆ.

Continue Reading

ಕ್ರೀಡೆ

DC vs GT: ಕೊಹ್ಲಿಯಂತೆ ಅದ್ಭುತ ಫೀಲ್ಡಿಂಗ್​ ನಡೆಸಿ ಡೆಲ್ಲಿಗೆ ಗೆಲುವು ತಂದ ಟ್ರಿಸ್ಟಾನ್ ಸ್ಟಬ್ಸ್

DC vs GT: ಗುಜರಾತ್​ ವಿರುದ್ಧದ ಪಂದ್ಯದಲ್ಲಿ ವಿಸ್ಫೋಟಕ ಬ್ಯಾಟಿಂಗ್​ ನಡೆಸಿದ ಟ್ರಿಸ್ಟಾನ್ ಸ್ಟಬ್ಸ್ ಕೇವಲ 7 ಎಸೆತಗಳಿಂದ 26 ರನ್​ ಬಾರಿಸಿದರು. ಈ ಇನಿಂಗ್ಸ್​ನಲ್ಲಿ 2 ಸಿಕ್ಸರ್​ ಮತ್ತು 3 ಬೌಂಡರಿ ಸಿಡಿಯಿತು.

VISTARANEWS.COM


on

DC vs GT
Koo

ನವದೆಹಲಿ: ವಿರಾಟ್​ ಕೊಹ್ಲಿ(Virat Kohli) ಅವರು ಇದೇ ವರ್ಷಾರಂಭದಲ್ಲಿ ಅಫಘಾನಿಸ್ತಾನ ವಿರುದ್ಧದ ಟಿ20 ಪಂದ್ಯದಲ್ಲಿ ಸೂಪರ್​ ಮ್ಯಾನ್​ ರೀತಿಯಲ್ಲಿ ಹಾರಿ ಸಿಕ್ಸರ್​ ತಡೆದು ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಇದೇ ರೀತಿಯಲ್ಲಿ ನಿನ್ನೆ (ಬುಧವಾರ) ನಡೆದ ಗುಜರಾತ್​ ಟೈಟಾನ್ಸ್​(DC vs GT) ವಿರುದ್ಧದ ಐಪಿಎಲ್(IPL 2024)​ ಪಂದ್ಯದಲ್ಲಿಯೂ ಡೆಲ್ಲಿ ತಂಡದ ಆಟಗಾರ ಟ್ರಿಸ್ಟಾನ್ ಸ್ಟಬ್ಸ್(Tristan Stubbs) ಕೂಡ ಸಿಕ್ಸರ್​ ತಡೆದು ಡೆಲ್ಲಿ ತಂಡಕ್ಕೆ ಗೆಲುವು ತಂದುಕೊಟ್ಟಿದ್ದಾರೆ. ಟ್ರಿಸ್ಟಾನ್ ಸ್ಟಬ್ಸ್ ಫೀಲ್ಡಿಂಗ್​ನ ಈ ಫೋಟೊ ಎಲ್ಲಡೆ ವೈರಲ್​ ಆಗಿದ್ದು ಮಾಜಿ ಕ್ರಿಕೆಟಿಗರು ಕೊಹ್ಲಿ 2.0 ವರ್ಷನ್​ ಎಂದು ಹೇಳಿದ್ದಾರೆ.

ಗುಜರಾತ್ ಇನ್ನಿಂಗ್ಸ್‌ನ 19 ನೇ ಓವರ್‌ನಲ್ಲಿ ಈ ಘಟನೆ ಸಂಭವಿಸಿತು. ರೋಮಾಂಚನಕಾರಿ ಕ್ಲೈಮ್ಯಾಕ್ಸ್​ನಲ್ಲಿ ರಶೀದ್ ಖಾನ್ ಸ್ಟ್ರೈಕ್‌ನಲ್ಲಿದ್ದರು. ರಸಿಖ್ ಸಲಾಮ್‌ ಎಸೆದ ನಿಧಾನಗತಿಯ ಎಸೆತವನ್ನು ರಶೀದ್​ ಖಾನ್​ ಸಿಕ್ಸರ್​ಗೆ ಬಡಿದಟ್ಟಿದರು. ಈ ವೇಳೆ ಬೌಂಡರಿ ಲೈನ್​ನಲ್ಲಿ ನಿಂತಿದ್ದ ಟ್ರಿಸ್ಟಾನ್ ಸ್ಟಬ್ಸ್ ಎತ್ತರಕ್ಕೆ ಜಿಗಿದು ಸಿಕ್ಸರ್​ ತಡೆದರು. ಅವರು ಈ ಸಿಕ್ಸರ್​ ತಡೆದಯೇ ಹೋಗಿದ್ದರೆ ಡೆಲ್ಲಿ ಸೋಲು ಕಾಣುತ್ತಿತ್ತು. ಡೆಲ್ಲಿ ಗೆದ್ದದ್ದು ಕೇವಲ 4 ರನ್​ ಅಂತರದಿಂದ.

ಗುಜರಾತ್​ ವಿರುದ್ಧದ ಪಂದ್ಯದಲ್ಲಿ ವಿಸ್ಫೋಟಕ ಬ್ಯಾಟಿಂಗ್​ ನಡೆಸಿದ ಟ್ರಿಸ್ಟಾನ್ ಸ್ಟಬ್ಸ್ ಕೇವಲ 7 ಎಸೆತಗಳಿಂದ 26 ರನ್​ ಬಾರಿಸಿದರು. ಈ ಇನಿಂಗ್ಸ್​ನಲ್ಲಿ 2 ಸಿಕ್ಸರ್​ ಮತ್ತು 3 ಬೌಂಡರಿ ಸಿಡಿಯಿತು.

ಇಲ್ಲಿನ ಅರುಣ್​ ಜೇಟ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್​ ಸೋತು ಬ್ಯಾಟಿಂಗ್​ಗೆ ಇಳಿಸಲ್ಪಟ್ಟ ಡೆಲ್ಲಿ ಕ್ಯಾಪಿಟಲ್ಸ್​ ರಿಷಭ್​ ಪಂತ್​(88*) ಮತ್ತು ಅಕ್ಷರ್​ ಪಟೇಲ್​(66) ಅವರ ಸಮಯೋಚಿತ ಬ್ಯಾಟಿಂಗ್​ ನೆರವಿನಿಂದ ನಿಗದಿತ 20 ಓವರ್​ಗಳಲ್ಲಿ 4 ವಿಕೆಟ್​ಗೆ 224 ರನ್​ ಪೇರಿಸಿತು. ಜವಾಬಿತ್ತ ಗುಜರಾತ್ ದಿಟ್ಟ ಹೋರಾಟ ನಡೆಸಿದರೂ 8 ವಿಕೆಟ್​ಗೆ 220 ರನ್​ ಬಾರಿಸಿ ಸಣ್ಣ ಅಂತರದಿಂದ ​ಸೋಲೊಪ್ಪಿಕೊಂಡಿತು.

ಇದನ್ನೂ ಓದಿ IPL 2024: ಸಿಕ್ಸರ್​ನಿಂದ ಗಾಯಗೊಂಡ ಕ್ಯಾಮೆರಮನ್​ಗೆ ವಿಡಿಯೊ ಮೂಲಕ ಕ್ಷಮೆ ಕೇಳಿದ ರಿಷಭ್​ ಪಂತ್​​

ಚೇಸಿಂಗ್​ ವೇಳೆ ಕೆಲ ಕ್ರಮಾಂಕದಲ್ಲಿ ಶಕ್ತಿ ಮೀರಿ ಬ್ಯಾಟಿಂಗ್​ ನಡೆಸಿದ ಡೇವಿಡ್​ ಮಿಲ್ಲರ್​ ಅರ್ಧಶತಕ ಬಾರಿಸುವ ಮೂಲಕ ಒಂದು ಹಂತದಲ್ಲಿ ಗುಜರಾತ್​ ಪಾಳಯದಲ್ಲಿ ಗೆಲುವಿನ ಆಸೆ ಚಿಗುರೊಡೆಯುವಂತೆ ಮಾಡಿದರು. ಆದರೆ ಉಳಿದ ಆಟಗಾರರಿಂದ ಉತ್ತಮ ಸಾಥ್​ ಸಿಗದ ಕಾರಣ ದೊಡ್ಡ ಹೊಡೆತಗಳಿಗೆ ಕೈ ಹಾಕಿ ರಾಸಿಖ್ ಸಲಾಂ ಅವರಿಗೆ ಕ್ಯಾಚ್​ ನೀಡಿ ವಿಕೆಟ್​ ಕೈಚೆಲ್ಲಿದರು. ಈ ವಿಕೆಟ್​ ಪತನದ ಬಳಿಕ ರಶೀದ್​ ಖಾನ್​ ಮತ್ತು ಸಾಯಿ ಕಿಶೋರ್​ ಸಿಡಿದು ನಿಂತರು. ಅಂತಿಮ ಓವರ್​ನಲ್ಲಿ ಗೆಲುವಿಗೆ 19 ರನ್​ ತೆಗೆಯುವ ಸವಾಲಿನಲ್ಲಿ ರಶೀದ್​ ಅವರು ಮುಕೇಶ್​ ಕುಮಾರ್​ಗೆ ಸತತ 2 ಬೌಂಡರಿ ಮತ್ತು ಒಂದು ಸಿಕ್ಸರ್​ ಬಾರಿಸಿ ಪಂದ್ಯವನ್ನು ರೋಚಕ ಹಂತಕ್ಕೆ ತಂದು ನಿಲ್ಲಿಸಿದರು. ಅಂತಿಮ ಎಸೆತದಲ್ಲಿ ಗೆಲುವಿಗೆ 5 ರನ್​ ಬೇಕಿದ್ದಾಗ ಇದನ್ನು ಬಾರಿಸುವಲ್ಲಿ ರಶೀದ್​ ಎಡವಿದರು. ಡೆಲ್ಲಿ ರೋಚಕ 4 ರನ್​ಗಳ ಗೆಲುವು ಸಾಧಿಸಿತು.

Continue Reading

ವೈರಲ್ ನ್ಯೂಸ್

Arunachal Pradesh landslide: ಅರುಣಾಚಲದಲ್ಲಿ ಭೂಕುಸಿತ, ಚೀನಾ ಗಡಿ ಪ್ರದೇಶಕ್ಕೆ ಸಂಪರ್ಕ ಬಂದ್‌

Arunachal Pradesh landslide: ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ನಿನ್ನೆ ರಾಷ್ಟ್ರೀಯ ಹೆದ್ದಾರಿ-313ರಲ್ಲಿ ಹುನ್ಲಿ ಮತ್ತು ಅನಿನಿ ನಡುವೆ ಭಾರೀ ಭೂಕುಸಿತ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಭೂಕುಸಿತ ಹಾಗೂ ಕತ್ತರಿಸಿಹೋದ ರಸ್ತೆಯ ಮೂಲಕ ನೀರಿನ ಪ್ರವಾಹ ಹರಿಯುತ್ತಿರುವ ಹಲವು ವೀಡಿಯೊಗಳು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ (viral video) ಆಗಿವೆ.

VISTARANEWS.COM


on

arunachal pradesh landslide
Koo

ಗುವಾಹಟಿ: ಮಳೆಯಿಂದ (Rain) ಉಂಟಾದ ಭಾರೀ ಭೂಕುಸಿತದಿಂದ (Landslide) ಅರುಣಾಚಲ ಪ್ರದೇಶದ ಹೆದ್ದಾರಿಯ ಪ್ರಮುಖ ಭಾಗ ಕೊಚ್ಚಿ (Arunachal Pradesh landslide) ಹೋಗಿದ್ದು, ಚೀನಾ ಗಡಿಗೆ (China Border) ಹೊಂದಿಕೊಂಡಿರುವ ಜಿಲ್ಲೆ ದಿಬಾಂಗ್ ಕಣಿವೆಯೊಂದಿಗೆ ರಸ್ತೆ ಸಂಪರ್ಕ ಕತ್ತರಿಸಿಹೋಗಿದೆ.

ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ನಿನ್ನೆ ರಾಷ್ಟ್ರೀಯ ಹೆದ್ದಾರಿ-313ರಲ್ಲಿ ಹುನ್ಲಿ ಮತ್ತು ಅನಿನಿ ನಡುವೆ ಭಾರೀ ಭೂಕುಸಿತ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಭೂಕುಸಿತ ಹಾಗೂ ಕತ್ತರಿಸಿಹೋದ ರಸ್ತೆಯ ಮೂಲಕ ನೀರಿನ ಪ್ರವಾಹ ಹರಿಯುತ್ತಿರುವ ಹಲವು ವೀಡಿಯೊಗಳು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ (viral video) ಆಗಿವೆ. ಹೆದ್ದಾರಿಯ ಒಂದು ಭಾಗ ಕಾಣೆಯಾಗಿರುವುದನ್ನು ಇವು ತೋರಿಸಿವೆ.

ರಸ್ತೆ ತುಂಡಾಗಿದ್ದು, ವಾಹನಗಳು ಇನ್ನೊಂದು ಬದಿಗೆ ದಾಟಲು ಅಸಾಧ್ಯವಾಗಿದೆ. ಈ ಕಷ್ಟಕರವಾದ ಭೂಪ್ರದೇಶದಲ್ಲಿ ಹೆದ್ದಾರಿಯನ್ನು ಜೀವನಾಡಿ ಎಂದು ಪರಿಗಣಿಸುವ ಸ್ಥಳೀಯರು ಮತ್ತು ಭದ್ರತಾ ಪಡೆಗಳಿಗೆ ಇದರಿಂದ ಭಾರೀ ತೊಂದರೆಯಾಗಿದೆ. ರಾಷ್ಟ್ರೀಯ ಹೆದ್ದಾರಿಗಳು ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ ಲಿಮಿಟೆಡ್ (NHIDCL) ಈ ಹೆದ್ದಾರಿಯ ಹಾನಿಗೊಳಗಾದ ಭಾಗವನ್ನು ಸರಿಪಡಿಸಲು ಮುಂದಾಗಿದೆ.

ಪ್ರಸ್ತುತ, ಕತ್ತರಿಸಿಹೋಗಿರುವ ಪ್ರದೇಶಕ್ಕೆ ಆಹಾರ ಮತ್ತು ಇತರ ಅಗತ್ಯ ವಸ್ತುಗಳ ಕೊರತೆ ಆಗಿಲ್ಲ. “ಹುನ್ಲಿ ಮತ್ತು ಅನಿನಿ ನಡುವಿನ ಹೆದ್ದಾರಿಗೆ ವ್ಯಾಪಕವಾದ ಹಾನಿಯಿಂದಾಗಿ ಪ್ರಯಾಣಿಕರಿಗೆ ಉಂಟಾಗುತ್ತಿರುವ ಅನನುಕೂಲತೆಯನ್ನು ನಿವಾರಿಸಲು ಯತ್ನಿಸಲಾಗುತ್ತಿದೆ. ಈ ರಸ್ತೆಯು ದಿಬಾಂಗ್ ಕಣಿವೆಯನ್ನು ದೇಶದ ಇತರ ಭಾಗಗಳಿಗೆ ಸಂಪರ್ಕಿಸುತ್ತದೆ. ಹೀಗಾಗಿ ಶೀಘ್ರವಾಗಿ ಸಂಪರ್ಕವನ್ನು ಮರುಸ್ಥಾಪಿಸಲು ಸೂಚನೆಗಳನ್ನು ನೀಡಲಾಗಿದೆ” ಎಂದು ಅರುಣಾಚಲ ಪ್ರದೇಶದ ಸಚಿವ ಪೆಮಾ ಖಂಡು ಆನ್‌ಲೈನ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ದಿಬಾಂಗ್ ವ್ಯಾಲಿ ಆಡಳಿತದ ಪ್ರಕಾರ ಹೆದ್ದಾರಿ ಮರುಸ್ಥಾಪನೆಗೆ ಕನಿಷ್ಠ ಮೂರು ದಿನಗಳು ಬೇಕಾಗಬಹುದು. ಭೂಕುಸಿತ ಉಂಟಾಗುವ ಪ್ರದೇಶಗಳಲ್ಲಿ ಮತ್ತು ಜಲಮೂಲಗಳಿಂದ ಹಾಗೂ ಮೀನುಗಾರಿಕೆಯಂತಹ ಚಟುವಟಿಕೆಗಳಿಂದ ದೂರವಿರಲು ಆಡಳಿತವು ಜನರಿಗೆ ಮನವಿ ಮಾಡಿದೆ. ರಾತ್ರಿಯಲ್ಲಿ ಪ್ರಯಾಣಿಸುವುದರ ವಿರುದ್ಧ ಮತ್ತು ಮಳೆಗಾಲದಲ್ಲಿ ಮಣ್ಣನ್ನು ಕತ್ತರಿಸದಂತೆ ಎಚ್ಚರಿಕೆ ನೀಡಿದೆ.

ಇದನ್ನೂ ಓದಿ: Viral video: ಸೇನಾ ಹೆಲಿಕಾಪ್ಟರ್‌ಗಳ ಭಯಾನಕ ಡಿಕ್ಕಿ; 10 ಸಾವು

Continue Reading

ಕ್ರೀಡೆ

IPL 2024: ಧೋನಿ, ಚೆನ್ನೈ ಪಂದ್ಯ ನೋಡಲು ದೆಹಲಿ ವರೆಗೂ ನಡೆದುಕೊಂಡು ಹೋಗುವೆ ಎಂದ ಶತಾಯುಷಿ ಅಭಿಮಾನಿ; ವಿಡಿಯೊ ವೈರಲ್​

IPL 2024: 103 ವರ್ಷದ(103-year-old CSK fan) ಎಸ್ ರಾಮದಾಸ್(S Ramdas) ಅವರು ಧೋನಿಯನ್ನು(MS Dhoni) ಭೇಟಿ ಮಾಡುವ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ. ಜತೆಗೆ ಚೆನ್ನೈ ಮತ್ತು ಧೋನಿಯನ್ನು ನೋಡಲು ದೆಹಲಿಯ ವರೆಗೂ ನಡೆದುಕೊಂಡೇ ಹೋಗುವೆ ಎಂದು ಹೇಳಿದ್ದಾರೆ. ಈ ವಿಡಿಯೊವನ್ನು ಚೆನ್ನೈ ಫ್ರಾಂಚೈಸಿ ತನ್ನ ಅಧಿಕೃತ ಟ್ವಿಟರ್​ ಎಕ್ಸ್​ನಲ್ಲಿ ಹಂಚಿಕೊಂಡಿದೆ.

VISTARANEWS.COM


on

IPL 2024
Koo

ಚೆನ್ನೈ: ಚೆನ್ನೈ ಸೂಪರ್​ ಕಿಂಗ್ಸ್(Chennai Super Kings)​ ಹಾಗೂ ಮಹೇಂದ್ರ ಸಿಂಗ್​ ಧೋನಿಯ ಅಪಟ್ಟ ಅಭಿಮಾನಿಯಾಗಿರುವ 103 ವರ್ಷದ(103-year-old CSK fan) ಎಸ್ ರಾಮದಾಸ್(S Ramdas) ಅವರು ಧೋನಿಯನ್ನು(MS Dhoni) ಭೇಟಿ ಮಾಡುವ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ. ಜತೆಗೆ ಚೆನ್ನೈ ಮತ್ತು ಧೋನಿಯನ್ನು ನೋಡಲು ದೆಹಲಿಯ ವರೆಗೂ ನಡೆದುಕೊಂಡೇ ಹೋಗುವೆ ಎಂದು ಹೇಳಿದ್ದಾರೆ. ಈ ವಿಡಿಯೊವನ್ನು ಚೆನ್ನೈ ಫ್ರಾಂಚೈಸಿ ತನ್ನ ಅಧಿಕೃತ ಟ್ವಿಟರ್​ ಎಕ್ಸ್​ನಲ್ಲಿ ಹಂಚಿಕೊಂಡಿದೆ.

ರಾಮದಾಸ್ ಅವರು ಕ್ರಿಕೆಟ್​ನ ಕಟ್ಟಾ ಅಭಿಮಾನಿಯಾಗಿದ್ದು ಇಂದಿಗೂ ಐಪಿಎಲ್ ಪಂದ್ಯಗಳನ್ನು ವೀಕ್ಷಿಸಲು ಸಮಯ ತೆಗೆದುಕೊಳ್ಳುತ್ತಾರೆ. ಬ್ರಿಟಿಷ್ ಮಿಲಿಟರಿಯ ಸೈನ್ಯದ ಭಾಗವಾಗಿದ್ದ ರಾಮದಾಸ್ ಕ್ರಿಕೆಟ್ ಆಡಲು ಹೆದರುತ್ತಿದ್ದರಂತೆ. ಆದರೆ ಸಿಎಸ್‌ಕೆ ಜರ್ಸಿ ಧರಿಸಿ ಟಿವಿ ಮುಂದೆ ಕುಳಿತು ಐಪಿಎಲ್ ಆಟವನ್ನು ನೋಡಲು ಇಷ್ಟಪಡುತ್ತೇನೆ ಎಂದು ಹೇಳಿದ್ದಾರೆ.

ಮಗ ತಂದೆಯ ಬಳಿ ನೀವು ಎಂಎಸ್ ಧೋನಿಯನ್ನು ಭೇಟಿಯಾಗಲು ಬಯಸುತ್ತೀರಾ ಎಂದು ಕೇಳಿದಾಗ “ಓಹ್ ಹೌದು” ಎಂದಿದ್ದಾರೆ. ಸೂಪರ್ ಕಿಂಗ್ಸ್ ಒಳಗೊಂಡ ಐಪಿಎಲ್ ಪಂದ್ಯವನ್ನು ಮತ್ತು ಧೋನಿಯನ್ನು ನೋಡಲು ರಾಜಧಾನಿಗೆ ಪ್ರಯಾಣಿಸಲು ನೀವು ಸಿದ್ಧರಿದ್ದೀರಾ ಎಂದು ಕೇಳಿದಾಗ “ನಾನು ದೆಹಲಿಯವರೆಗೂ ನಡೆದುಕೊಂಡು ಹೋಗುತ್ತೇನೆ” ಎಂದು ರಾಮದಾಸ್ ಹೇಳಿದರು. 103 ವರ್ಷದ ಈ ಅಭಿಮಾನಿಯ ವಿಡಿಯೊ ವೈರಲ್​ ಆಗಿದೆ. ಮುಂದಿನ ಪಂದ್ಯದಲ್ಲಿ ಈ ಶತಾಯುಷಿ ಅಭಿಮಾನಿಗೆ ಚೆನ್ನೈ ಪಂದ್ಯ ವೇಳೆ ಕಾಣಿಸಿಕೊಂಡು ಧೋನಿಯನ್ನು ಭೇಟಿಯಾದರೂ ಅಚ್ಚರಿಯಿಲ್ಲ.

ಎಂ.ಎಸ್.ಧೋನಿ(MS Dhoni), ಕ್ಯಾಪ್ಟನ್‌ ಕೂಲ್‌, ಮಾಹಿ, ತಾಲಾ… ಎಂದೆಲ್ಲ ಪ್ರೀತಿಯಿಂದ ಕರೆಸಿಕೊಳ್ಳುವ ಮಹೇಂದ್ರ ಸಿಂಗ್‌ ಧೋನಿ ಎಂದರೆ ಅಭಿಮಾನಿಗಳಿಗೊಂದು ಎಮೋಷನ್ (ಭಾವನೆ). ಅವರು ಅಪಾರ ಸಂಖ್ಯೆಯ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಕಳೆದ ವರ್ಷವೇ ಧೋನಿ ಅವರು ಐಪಿಎಲ್​ಗೆ ವಿದಾಯ ಹೇಳಲು ನಿರ್ಧರಿಸಿದ್ದರು. ಆದರೆ ಅಭಿಮಾನಿಗಳ ಒತ್ತಾಯದ ಮೇರೆಗೆ ತಮ್ಮ ನಿವೃತ್ತಿಯನ್ನು ಮುಂದೆ ಹಾಕಿದ್ದರು. ಈ ಬಾರಿಯ ಟೂರ್ನಿ ಅವರಿಗೆ ವಿದಾಯದ ಟೂರ್ನಿಯಾಗಲಿದೆ. ಈ ಮೂಲಕ ಧೋನಿ ಎಲ್ಲ ಮಾದರಿಯ ಕ್ರಿಕಟ್​ಗೂ ಗುಡ್​ಬೈ ಹೇಳಲಿದ್ದಾರೆ. ಹೀಗಾಗಿ ಧೋನಿ ಅವರ ಬ್ಯಾಟಿಂಗ್​ ಕುಣ್ತುಂಬಿಕೊಳ್ಳಲು ಅವರ ಅಭಿಮಾನಿಗಳು ಪ್ರತಿ ಪಂದ್ಯದ ವೇಳೆಯೂ ಬಹಳ ನಿರೀಕ್ಷೆಯಿಂದ ಕಾಯುತ್ತಿರುತ್ತಾರೆ.

ಇದನ್ನೂ ಓದಿ IPL 2024: ಐಪಿಎಲ್​ನಲ್ಲಿ ವಿಶೇಷ ದಾಖಲೆ ಬರೆಯಲು ಸಜ್ಜಾದ ಆರ್​ಸಿಬಿ

ಮೊಣಕಾಲು ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಧೋನಿ ಕಳೆದ ವರ್ಷ ಮುಂಬೈಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಈ ಬಾರಿಯ ಐಪಿಎಲ್​ನ ಮೊದಲ ಪಂದ್ಯದಲ್ಲಿಯೇ ಧೋನಿ ಗಾಯದ ಸಮಸ್ಯೆಯಿಂದ ಬಳಲುತ್ತಿರುವುದು ಕಂಡು ಬಂದಿತ್ತು. ಕಳೆದ ಮುಂಬೈ ಮತ್ತು ಕೆಕೆಆರ್​ ವಿರುದ್ಧದ ಪಂದ್ಯದಲ್ಲಿ ಬ್ಯಾಟಿಂಗ್​ ನಡೆಸಿದ ವೇಳೆ ಕುಂಟುತಾ ನಡೆದಾಡಿದ ಫೋಟೊ ಮತ್ತು ವಿಡಿಯೊ ವೈರಲ್​ ಆಗಿತ್ತು. ಕಳೆದ ಮುಂಬೈ ವಿರುದ್ಧದ ಪಂದ್ಯದಲ್ಲಿ ಹಾರ್ದಿಕ್​ ಪಾಂಡ್ಯಗೆ ಹ್ಯಾಟ್ರಿಕ್​ ಸಿಕ್ಸರ್​ಗಳ ರುಚಿ ತೋರಿಸಿದ್ದರು. ವಯಸ್ಸು 42 ಆದರೂ, ತಮ್ಮ ಬ್ಯಾಟಿಂಗ್​ ಫಾರ್ಮ್​ ಮಾತ್ರ ಈ ಹಿಂದಿನಂತೆಯೇ ಇದೆ.​

Continue Reading
Advertisement
Viral Video
ವೈರಲ್ ನ್ಯೂಸ್1 min ago

Viral Video: ವಿಷ ಸೇವಿಸಿ ವಿಡಿಯೊ ರೆಕಾರ್ಡ್ ಮಾಡಿ ಯುವಕ ಆತ್ಮಹತ್ಯೆ; ಸಾವಿಗೆ ಕಾರಣವೇನು?

deadly murder
Latest25 mins ago

Deadly Murder: ಬರ್ಗರ್‌ ತಿಂದನೆಂದು ಸ್ನೇಹಿತನನ್ನೇ ಗುಂಡಿಟ್ಟು ಕೊಂದ!

Chemistry paper leak case
ಕೋರ್ಟ್26 mins ago

Chemistry paper leak : ದ್ವಿತೀಯ ಪಿಯು ರಸಾಯನಶಾಸ್ತ್ರ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ; 17 ಆರೋಪಿಗಳು ಖುಲಾಸೆ

Ranji Trophy
ಪ್ರಮುಖ ಸುದ್ದಿ47 mins ago

Ranji Trophy : ರಣಜಿ ಟ್ರೋಫಿ ಆಡುವವರಿಗೆ ಇನ್ನು ಮುಂದೆ ಒಂದು ಕೋಟಿ ರೂ. ವೇತನ!

Fire Tragedy
ದೇಶ1 hour ago

Fire Tragedy: ಹೋಟೆಲ್‌ನಲ್ಲಿ ಭೀಕರ ಅಗ್ನಿ ದುರಂತ; 6 ಮಂದಿ ಸಾವು

World Malaria Day April 25
ಆರೋಗ್ಯ1 hour ago

World Malaria Day: ಮಲೇರಿಯಾದಿಂದ ಮಕ್ಕಳನ್ನು ರಕ್ಷಿಸಿಕೊಳ್ಳುವುದು ಹೇಗೆ?

Bismah Maroof
ಕ್ರೀಡೆ1 hour ago

Bismah Maroof : ಹೆಣ್ಣು ಮಗುವಿನ ಸಮೇತ ಆಡಲು ಹೋಗುತ್ತಿದ್ದ ಪಾಕಿಸ್ತಾನದ ಮಹಿಳಾ ಕ್ರಿಕೆಟರ್ ನಿವೃತ್ತಿ

Modi in Karnataka Pm Modi to visit Karnataka on April 28 and 29 Raichur conference maybe cancelled
Lok Sabha Election 20241 hour ago

Modi in Karnataka: ಏಪ್ರಿಲ್‌ 28 – 29ರಂದು ರಾಜ್ಯಕ್ಕೆ ಮೋದಿ; ರಾಯಚೂರು ಸಮಾವೇಶ ರದ್ದು?

Lok Sabha Election
ಕರ್ನಾಟಕ1 hour ago

Lok Sabha Election: ನಾಳೆ ಮೊದಲ ಹಂತದ ಮತದಾನ; ಬೆಂಗಳೂರಿನಲ್ಲಿ ಏನಿರತ್ತೆ? ಏನಿರಲ್ಲ?

KKR vs PBKS
ಕ್ರೀಡೆ2 hours ago

KKR vs PBKS: ಪಂಜಾಬ್​ಗೆ ಮಸ್ಟ್​ ವಿನ್​ ಗೇಮ್; ಕೆಕೆಆರ್​ ಎದುರಾಳಿ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Neha Murder Case in hubblli
ಹುಬ್ಬಳ್ಳಿ2 hours ago

Neha Murder Case : ಮನೆ ಸುತ್ತಮುತ್ತ ಅನಾಮಧೇಯ ವ್ಯಕ್ತಿಗಳ ಓಡಾಟ; ಸಂತಾಪ ನೆಪದಲ್ಲಿ ನೇಹಾ ಬೆಡ್‌ರೂಂ ಚಿತ್ರೀಕರಣ!

Neha Murder Case
ಹುಬ್ಬಳ್ಳಿ2 hours ago

Neha Murder case : ನೇಹಾ ಹತ್ಯೆ; ಕಾರು ಚಾಲಕ, ಅಕೌಂಟೆಂಟ್‌ ಸಿಐಡಿ ವಶಕ್ಕೆ! ಅಜ್ಞಾತ ಸ್ಥಳದಲ್ಲಿ ವಿಚಾರಣೆ

Neha Murder case CID Officer
ಹುಬ್ಬಳ್ಳಿ5 hours ago

Neha Murder Case : ರಹಸ್ಯ ಸ್ಥಳದಲ್ಲಿ ಫಯಾಜ್‌; ನೇಹಾ ಪೋಷಕರಿಗೆ ಸಿಐಡಿ ತಂಡದಿಂದ 1 ಗಂಟೆ ಸುದೀರ್ಘ ವಿಚಾರಣೆ

Lok sabha election 2024
Lok Sabha Election 20247 hours ago

Lok Sabha Election 2024 : ಕರ್ನಾಟಕದಲ್ಲಿ ಮೊದಲ ಹಂತದ ಮತದಾನ; ಪ್ರವಾಸಿ ತಾಣಗಳ ಪ್ರವೇಶಕ್ಕೆ ಪ್ರವಾಸಿಗರಿಗೆ ನಿಷೇಧ

Dina Bhavishya
ಭವಿಷ್ಯ2 days ago

Dina Bhavishya : ಇಂದು ಈ ರಾಶಿಯ ಉದ್ಯೋಗಿಗಳಿಗೆ ಯಶಸ್ಸು ಕಟ್ಟಿಟ್ಟ ಬುತ್ತಿ

Dina Bhavishya
ಭವಿಷ್ಯ3 days ago

Dina Bhavishya : ಈ ರಾಶಿಯವರು ತರಾತುರಿಯಲ್ಲಿ ಯಾವುದೇ ಹೂಡಿಕೆ ಮಾಡ್ಬೇಡಿ

Bengaluru karaga 2024
ಬೆಂಗಳೂರು3 days ago

Bengaluru Karaga 2024 : ಅದ್ಧೂರಿಯಾಗಿ ನೆರವೇರಿದ ಹಸಿ ಕರಗ; ಐತಿಹಾಸಿಕ ಕರಗ ಶಕ್ತ್ಯೋತ್ಸವಕ್ಕೆ ಕ್ಷಣಗಣನೆ

Murder Case in yadagiri rakesh and fayas
ಯಾದಗಿರಿ3 days ago

Murder Case : ಹಿಂದು ಯುವಕ ರೊಟ್ಟಿ ಕೇಳಿದ್ದಕ್ಕೆ ಗುಪ್ತಾಂಗಕ್ಕೆ ಒದ್ದು ಕೊಂದರು ಅನ್ಯಕೋಮಿನ ಯುವಕರು!

bomb Threat case in Bengaluru
ಬೆಂಗಳೂರು3 days ago

Bomb Threat: ಬಾಂಬ್‌ ಇಟ್ಟಿರುವುದಾಗಿ ಬೆಂಗಳೂರಿನ ಕದಂಬ ಹೋಟೆಲ್‌ಗೆ ಬೆದರಿಕೆ ಪತ್ರ; ಪೊಲೀಸರು ದೌಡು

CET Exam 2024
ಬೆಂಗಳೂರು3 days ago

CET 2024 Exam : ಔಟ್‌ ಆಫ್‌ ಸಿಲಬಸ್‌ ಪ್ರಶ್ನೆಗೆ ಆಕ್ರೋಶ; ಕೈ ಕೈ ಮಿಲಾಯಿಸಿದ ಪೊಲೀಸರು- ಎವಿಬಿಪಿ ಕಾರ್ಯಕರ್ತರು

ಟ್ರೆಂಡಿಂಗ್‌