Site icon Vistara News

Viral Video: ಅಮೆರಿಕಾಸ್ ಗಾಟ್ ಟ್ಯಾಲೆಂಟ್‌ನಲ್ಲಿ ವೀಕ್ಷಕರ ಮನಗೆದ್ದ ಭಾರತೀಯ ಮೂಲದ ಬಾಲಕಿ

Viral Video

ಅಮೆರಿಕಾಸ್ ಗಾಟ್ ಟ್ಯಾಲೆಂಟ್‌ ಶೋನಲ್ಲಿ (America’s Got Talent) ಭಾರತೀಯ ಮೂಲದ (Indian origin) ಒಂಬತ್ತು ವರ್ಷದ ಬಾಲಕಿ ಪ್ರಣೈಸ್ಕಾ ಮಿಶ್ರಾ ತನ್ನ ಅಸಾಧಾರಣ ಗಾಯನ ಸಾಮರ್ಥ್ಯದಿಂದ ತೀರ್ಪುಗಾರರನ್ನು ಮೂಕವಿಸ್ಮಿತಗೊಳಿಸಿದ್ದು ಮಾತ್ರವಲ್ಲದೆ ಪ್ರೇಕ್ಷಕರಿಂದ ಅಪಾರ ಮೆಚ್ಚುಗೆಯನ್ನು ಗಳಿಸಿದ್ದಾಳೆ.

ಅಮೆರಿಕ ಗಾಟ್ ಟ್ಯಾಲೆಂಟ್‌ನ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ (youtube channel) ಆಕೆಯ ಗಾಯನ ಪ್ರಸ್ತುತಿಯನ್ನು ಹಂಚಿಕೊಳ್ಳಲಾಗಿದ್ದು, ಅದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ (Viral Video) ಆಗಿದೆ.

ಮಿಶ್ರಾ ಮಾತನಾಡಿ, ನಾನು ಯಾವಾಗಲೂ ಹಾಡುವುದನ್ನು ಇಷ್ಟಪಡುತ್ತೇನೆ. ಅದು ನನಗೆ ಸಂತೋಷವನ್ನು ನೀಡುತ್ತದೆ. ನಾನು ನಾಲ್ಕು ವರ್ಷದವಳಿದ್ದಾಗ ನನ್ನ ಬಳಿ ಮೈಕ್ರೊಫೋನ್ ಇತ್ತು. ಮುಂದೊಂದು ದಿನ ನಾನು ಇಡೀ ಜಗತ್ತಿಗಾಗಿ ಹಾಡುತ್ತೇನೆ ಎಂದು ಭಾವಿಸಿದ್ದೆ. ಅದು ಈಗ ನಿಜವಾಗಿದೆ ಎಂದು ಹೇಳಿದಳು.

ಆಕರ್ಷಕವಾದ ಗುಲಾಬಿ ಬಣ್ಣದ ಡ್ರೆಸ್‌ ಧರಿಸಿರುವ ಮಿಶ್ರಾ ವೇದಿಕೆಯ ಮೇಲೆ ತಮ್ಮ ನೆಚ್ಚಿನ ಗಾಯಕರು ಮತ್ತು ತೀರ್ಪುಗಾರರ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾಳೆ. “ರಿವರ್ ಡೀಪ್, ಮೌಂಟೇನ್ ಹೈ” ಹಾಡಿಗೆ ಅವಳ ಶಕ್ತಿಯುತ ಧ್ವನಿ ಪ್ರೇಕ್ಷಕರನ್ನು ಬೆರಗುಗೊಳಿಸಿದೆ. ಉತ್ಸಾಹಭರಿತ ಹರ್ಷೋದ್ಗಾರಗಳನ್ನು ಕೇಳಿ ಬಂದಿವೆ. ಮಿಶ್ರಾ ಅವರ ಬಗ್ಗೆ ತುಂಬಾ ಪ್ರಭಾವಿತರಾದ ತೀರ್ಪುಗಾರರಲ್ಲಿ ಒಬ್ಬರಾದ ಹೈಡಿ ಕ್ಲುಮ್ ಅವರು ಗೋಲ್ಡನ್ ಬಜರ್ ಅನ್ನು ಹೊಡೆದು ಅವಳನ್ನು ಅಪ್ಪಿಕೊಳ್ಳಲು ವೇದಿಕೆಯ ಮೇಲೆ ಧಾವಿಸಿದರು.


ಇತ್ತೀಚೆಗೆ ಪೋಸ್ಟ್ ಮಾಡಲಾದ ಈ ವಿಡಿಯೋವು 24,000ಕ್ಕೂ ಹೆಚ್ಚು ಲೈಕ್ ಗಳು ಮತ್ತು ಹಲವಾರು ಕಾಮೆಂಟ್‌ಗಳ ಪಡೆದಿದ್ದು, ಸುಮಾರು ಎರಡು ಮಿಲಿಯನ್ ವೀಕ್ಷಣೆಗಳನ್ನು ತ್ವರಿತವಾಗಿ ಗಳಿಸಿದೆ.

ಇದನ್ನೂ ಓದಿ: Viral Video: ಸ್ವಾಗತಿಸಲು ಖುಷಿಯಿಂದ ಕಾಯುತ್ತಿದ್ದ ಕಪ್ಪು ವರ್ಣದ ಮಹಿಳೆಗೆ ಜೋ ಬೈಡನ್ ಅವಮಾನ; ನಾಚಿಕೆಯಾಗಬೇಕು ಅಮೆರಿಕಕ್ಕೆ!

ಒಬ್ಬ ಬಳಕೆದಾರರು ಕಾಮೆಂಟ್‌ನಲ್ಲಿ ʼʼಅವಳು ತುಂಬಾ ಸಲೀಸಾಗಿ ಹಾಡನ್ನು ಹಾಡಿದಳು. ಜೊತೆಗೆ ನೃತ್ಯ ಮಾಡುತ್ತ ಸುತ್ತಲೂ ಚಲಿಸುತ್ತಿದ್ದಳು ಪಿಚ್‌ನಲ್ಲಿಯೇ! ಗೋಲ್ಡನ್ ಬಜರ್ ಅನ್ನು ಸ್ವೀಕರಿಸಿದ್ದಕ್ಕಾಗಿ ಅಭಿನಂದನೆಗಳುʼʼ ಎಂದು ಹೇಳಿದ್ದಾರೆ. ಮತ್ತೊಬ್ಬರು, ಅವಳು 9 ವರ್ಷದವಳು. ಇಷ್ಟು ನಿಯಂತ್ರಣದಲ್ಲಿ ಅವಳ ಧ್ವನಿಯಲ್ಲಿ ಈಗಾಗಲೇ ಪ್ರೌಢತೆ ಎದ್ದು ಕಾಣುತ್ತಿದೆ ಎಂದು ಹೇಳಿದ್ದಾರೆ. ವಾಯ್ಸ್ ಟು ಬೆಲ್ಟಿಂಗ್ ಬಹಳ ಅದ್ಭುತವಾಗಿತ್ತು. ಅವಳು ಸ್ಟಾರ್. 9ನೇ ವಯಸ್ಸಿಗೇ ಪವರ್‌ಹೌಸ್ ಆಗಿದ್ದಾಳೆ. ಇನ್ನು 20ನೇ ವಯಸ್ಸಿನಲ್ಲಿ ಊಹಿಸಿ ಎಂದು ಹೇಳಿದ್ದಾರೆ.

Exit mobile version