Site icon Vistara News

Viral Video: ಮೈದುನನ ಇಬ್ಬರು ಮಕ್ಕಳನ್ನು ವಿಷವಿಕ್ಕಿ ಕೊಂದಳು, ಮೂರನೇ ಮಗುವನ್ನು ಕೊಲ್ಲುವಾಗ ಸಿಕ್ಕಿ ಬಿದ್ದಳು!

Viral Video

ಮೈದುನನ ಮಗನಿಗೆ ಮಹಿಳೆಯೊಬ್ಬಳು ವಿಷವಿಕ್ಕಿರುವ (poison) ಘಟನೆ ರಾಜಸ್ಥಾನದ (Rajasthan) ಬಾರ್ಮರ್ ಜಿಲ್ಲೆಯ ಭದ್ರೇಸ್ ಗ್ರಾಮದಲ್ಲಿ ನಡೆದಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ (social media) ವೈರಲ್ (Viral Viral Video) ಆಗಿದೆ. ಇದಕ್ಕೆ ನೆಟ್ಟಿಗರಿಂದ ತೀವ್ರ ಆಕ್ರೋಶವೂ ವ್ಯಕ್ತವಾಗುತ್ತಿದೆ.

ಮಲಗಿದ್ದ ಮಗುವಿಗೆ ಮಹಿಳೆಯೊಬ್ಬರು ವಿಷ ನೀಡುತ್ತಿರುವ ಆಘಾತಕಾರಿ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಎನ್‌ಸಿಎಂ ಇಂಡಿಯಾ ಕೌನ್ಸಿಲ್ ಫಾರ್ ಮೆನ್ ಅಫೇರ್ಸ್ ಹಂಚಿಕೊಂಡಿದೆ. ಇದು ಎಕ್ಸ್ ನಲ್ಲಿ ಭಾರಿ ವೈರಲ್ ಆಗಿದೆ.

ರಾಜಸ್ಥಾನದ ಭದ್ರೇಸ್ ಗ್ರಾಮದಲ್ಲಿ ಹಿರಿಯ ಸಹೋದರನ ಪತ್ನಿ ಗಂಡನ ಕಿರಿಯ ಸಹೋದರನ ಮಗುವಿಗೆ ವಿಷ ನೀಡಿರುವುದಾಗಿ ಹೇಳಲಾಗಿದೆ. ಕಿರಿಯ ಸಹೋದರನ ಇಬ್ಬರು ಮಕ್ಕಳು ಇದೇ ರೀತಿ ಸಾವನ್ನಪ್ಪಿದ್ದರು. ಈ ಬಗ್ಗೆ ಮಗುವಿನ ತಾಯಿಯು ಗಂಡನ ಸಹೋದರನ ಪತ್ನಿ ಜೇಥನಿ ಮೇಲೆ ಅನುಮಾನ ವ್ಯಕ್ತಪಡಿಸಿದ್ದಳು.

ಹಿಂದೆ ಇಬ್ಬರು ಮಕ್ಕಳು ಇದೇ ರೀತಿ ಸಾವನ್ನಪ್ಪಿದ್ದರಿಂದ ಈ ಬಾರಿ ಎಚ್ಚರಿಕೆಯಿಂದ ಇದ್ದಳು. ಮಗುವಿನ ಹಾಸಿಗೆಯ ಬಳಿ ರೆಕಾರ್ಡ್ ಮಾಡಲು ಕೆಮರಾ ಇರಿಸಿದ್ದಳು. ಸುತ್ತಮುತ್ತ ಅನುಮಾನಾಸ್ಪದ ಚಟುವಟಿಕೆ ನಡೆಯುತ್ತಿರುವುದನ್ನು ಪರೀಕ್ಷಿಸುತ್ತಿದ್ದಳು.

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಜೇಥನಿ ಎಂಬಾಕೆ ಕೋಣೆಗೆ ಪ್ರವೇಶಿಸುತ್ತಾಳೆ. ಮಗು ಒಂಟಿಯಾಗಿ ಮಲಗಿರುವುದನ್ನು ನೋಡಿ ಮಗುವಿನ ಮೇಲೆ ಇರಿಸಿದ್ದ ಸೊಳ್ಳೆ ಪರದೆಯನ್ನು ಸದ್ದಿಲ್ಲದೆ ತೆಗೆದು ಕೆಲವು ಹನಿಗಳನ್ನು ಮಗುವಿನ ಬಾಯಿಗೆ ಹಾಕಿದಳು.


ಮಗುವನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಲಾಯಿತು. ಮೂರು ದಿನಗಳ ಕಾಲ ಐಸಿಯುನಲ್ಲಿ ಹೋರಾಡಿದ ಮಗು ಈಗ ಚೇತರಿಸಿಕೊಂಡಿದೆ. ಸಾಮಾಜಿಕ ಜಾಲತಾಣದಲ್ಲಿ ಹಂಚಿರುವ ಈ ವಿಡಿಯೋವನ್ನು ಈವರೆಗೆ 17.9 ಲಕ್ಷ ಮಂದಿ ವೀಕ್ಷಿಸಿದ್ದಾರೆ. ಇದನ್ನು ನೋಡಿರುವ ಸಾಕಷ್ಟು ಮಂದಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Miracle case : ಮುರ್ತುಜಾ ಖಾದ್ರಿ ಪವಾಡ; ಅಂತ್ಯಕ್ರಿಯೆ ಮಾಡುವಾಗಲೇ ಕೆಮ್ಮಿದ ಮಗು!

ವೈರಲ್ ಆಗಿರುವ ಈ ವಿಡಿಯೋ ಕುರಿತು ಬಾರ್ಮರ್ ಪೊಲೀಸರು ಪ್ರತಿಕ್ರಿಯಿಸಿದ್ದು, ಇದು ಭದ್ರೇಸ್ ಗ್ರಾಮದ ಮುಖೇಶ್ ಪ್ರಜಾಪತ್ ಅವರ ಮಗನಿಗೆ ವಿಷವಿಕ್ಕಿರುವ ವಿಡಿಯೋ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.

ಇನ್ನೊಂದು ಮಾಹಿತಿ ಪ್ರಕಾರ ಪೊಲೀಸರು ಮಹಿಳೆಯನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ. ಯಾವ ಕಾರಣಕ್ಕೆ ಆಕೆ ಈ ರೀತಿ ಮಾಡಿದ್ದಳೆಂದು ಹೇಳಿಲ್ಲ ಎನ್ನಲಾಗಿದೆ.

Exit mobile version