Site icon Vistara News

Viral Video: ಛೇ…ಇವರೆಂಥಾ ರಾಕ್ಷಸರು! ಕೈ ಕಾಲು ಕಟ್ಟಿ ಥಳಿಸಿ ದಲಿತ ಯುವಕನ ಹತ್ಯೆ

Viral Video

ರಾಜಸ್ಥಾನ: ದಲಿತ ಯುವಕ(Dalit Youth)ನನ್ನು ಅಪಹರಿಸಿ ಹಗ್ಗದಲ್ಲಿ ಕಟ್ಟಿ ಥಳಿಸಿ ಕೊಂದಿರುವ ಅಮಾನವೀಯ ಘಟನೆ ರಾಜಸ್ಥಾನ(Rajasthan)ದಲ್ಲಿ ನಡೆದಿದೆ. ಜುನ್‌ಜುನ್‌ ಜಿಲ್ಲೆಯಲ್ಲಿ ಈ ಭೀಕರ ಘಟನೆ ನಡೆದಿದ್ದು, ಮೃತ ದುರ್ದೈವಿಯನ್ನು ರಾಮೇಶ್ವರ ವಾಲ್ಮೀಕಿ(Rameshwar Valmiki) ಎಂದು ಗುರುತಿಸಲಾಗಿದೆ. ಇನ್ನು ಈ ಶಾಕಿಂಗ್‌ ಘಟನೆಯ ವಿಡಿಯೋವನ್ನು(Viral Video) ಸ್ವತಃ ದುಷ್ಕರ್ಮಿಗಳೇ ಮಾಡಿದ್ದು, ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಇದಾದ ಬಳಿಕ ಆಪ್‌ ಮುಖಂಡ ಸಂಜಯ್‌ ಸಿಂಗ್‌ ಎಕ್ಸ್‌ನಲ್ಲಿ ಹಂಚಿಕೊಂಡಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ಕಿಡಿ ಕಾರಿದ್ದಾರೆ.

ಘಟನೆ ವಿವರ:

ಮೇ ̆̆14 ರಂದು ಜುನ್‌ಜನ್‌ ಜಿಲ್ಲೆಯ ಬಲೋಡಾ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಅಕ್ರಮ ಮದ್ಯ ದಂಧೆಕೋರರು ರಾಮೇಶ್ವರ ವಾಲ್ಮೀಕಿಯನ್ನು ಅಪಹರಿಸಿದ್ದರು, ಇದಾದ ಬಳಿಕ ನಾಲ್ಕೈದು ಜನ ಸೇರಿಕೊಂಡು ಆತನ ಕೈ ಮತ್ತು ಕಾಲುಗಳನ್ನು ಕಟ್ಟಿ ಮನಸೋಇಚ್ಛೆ ಹಲ್ಲೆ ನಡೆಸಿದ್ದಾರೆ. ಅಷ್ಟೇ ಅಲ್ಲದೇ ಹಲ್ಲೆ ನಡೆಸುತ್ತಿರುವ ವಿಡಿಯೋವನ್ನೂ ಕೂಡ ಮಾಡಿದ್ದಾರೆ. ವಿಡಿಯೋದಲ್ಲಿ ವಾಲ್ಮೀಕಿಯ ಕಾಲುಗಳನ್ನು ಹಗ್ಗದಿಂದ ಒಂದು ರಾಡ್‌ಗೆ ಕಟ್ಟಿ ಮತ್ತೊಬ್ಬ ಆತನ ಕೈಗಳನ್ನು ಹಿಡಿದಿರುತ್ತಾನೆ. ಮತ್ತೊಬ್ಬ ಕಿಡಿಗೇಡಿ ಕೋಲಿನಿಂದ ಹಲ್ಲೆ ನಡೆಸುತ್ತಿರುವುದನ್ನು ಕಾಣಬಹುದಾಗಿದೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ವಾಲ್ಮೀಕಿ ಕೊನೆಯುಸಿಳೆದಿದ್ದಾನೆ.

ಬಿಜೆಪಿ ವಿರುದ್ಧ ಆಪ್‌ ಕಿಡಿ

ಇನ್ನು ವಾಲ್ಮೀಕಿ ಮೇಲಿನ ಹಲ್ಲೆಯ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್‌ ಮಾಡಿರುವ ಆಪ್‌ ಮುಖಂಡ ಸಂಜಯ್‌ ಸಿಂಗ್‌ ಪ್ರಧಾನಿ ಮೋದಿ ಮತ್ತು ರಾಜಸ್ಥಾನ ಸಿಎಂ ಭಜನ್‌ಲಾಲ್‌ ವಿರುದ್ಧ ಕಿಡಿ ಕಾರಿದ್ದಾರೆ. ಇದು ರಾಜಸ್ಥಾನದಲ್ಲಿ ಡಬಲ್‌ ಎಂಜಿನ್‌ ಸರ್ಕಾರದ ನೈಜ ಸ್ಥಿತಿ. ದಲಿತರ ಮೀಸಲಾತಿ ಕಿತ್ತುಕೊಂಡು ಅವರು ಹೊಡೆದು ಬಡಿದು ಕೊಲ್ಲಲು ಬಿಜೆಪಿಗೆ 400 ಸ್ಥಾನಗಳು ಬೇಕಾಗಿವೆ. ಬಿಜೆಪಿ ಅಧಿಕಾರಕ್ಕೆ ಬಂದಾಗಲೆಲ್ಲಾ ದಲಿತರ ಮೇಲೆ ದೌರ್ಜನ್ಯ ನಡೆಯುತ್ತಲೇ ಇರುತ್ತದೆ ಎಂದು ಆಕ್ರೋಶ ಹೊರ ಹಾಕಿದ್ದಾರೆ.

ಇದನ್ನೂ ಓದಿ:Mother Dies: ಅವಳಿ ಮಕ್ಕಳಿಗೆ ಜನ್ಮ ನೀಡಿದ ತಾಯಿ ಸಾವು; 35 ಲಕ್ಷ ಬಿಲ್‌ ಕಟ್ಟಿ ಮೃತದೇಹ ತೆಗೆದುಕೊಳ್ಳಿ ಎಂದ ಆಸ್ಪತ್ರೆ!

ಐವರ ಬಂಧನ

ಇನ್ನು ಘಟನೆ ಬೆಳಕಿಗೆ ಬರುತ್ತಿದ್ದಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಐವರು ಕಿಡಿಗೇಡಿಗಳನ್ನು ಅರೆಸ್ಟ್‌ ಮಾಡಿದ್ದಾರೆ. ದೀಪೇಂದ್ರ ಅಲಿಯಾಸ್ ಚಿಂಟು ರಜಪೂತ್, ಪ್ರವೀಣ್ ಅಲಿಯಾಸ್ ಪಿಕೆ ಮೇಘವಾಲ್, ಪ್ರವೀಣ್ ಅಲಿಯಾಸ್ ಬಾಬಾ ಮೇಘವಾಲ್, ಸುಭಾಷ್ ಅಲಿಯಾಸ್ ಚಿಂಟು ಮೇಘವಾಲ್, ಮತ್ತು ಸತೀಶ್ ಅಲಿಯಾಸ್ ಸುಖ ಮೇಘವಾಲ್ ಬಂಧಿತ ಆರೋಪಿಗಳು. ಆರೋಪಿಗಳು ಈ ಹಿಂದೆಯೂ ಇತರ ಅಪರಾಧಗಳಲ್ಲಿ ಭಾಗಿಯಾಗಿದ್ದಾರೆ ಎಂಬ ವರದಿಗಳಿವೆ. ಸೂರಜ್‌ಗಢ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Exit mobile version