Site icon Vistara News

Viral Video: ಪ್ರಧಾನಿ ನರೇಂದ್ರ ಮೋದಿಯನ್ನು ಟೀಕಿಸಿದ ವ್ಯಕ್ತಿಗೆ ಹಿಗ್ಗಾಮುಗ್ಗಾ ಥಳಿತ

viral video modi assault case

ಬೆಂಗಳೂರು: ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Narendra Modi) ಅವರನ್ನು ಅವಾಚ್ಯವಾಗಿ ಟೀಕಿಸಿದ ವ್ಯಕ್ತಿಯೊಬ್ಬನನ್ನು ಗುಂಪೊಂದು ಹಿಗ್ಗಾಮುಗ್ಗಾ ಥಳಿಸಿರುವ (Assault case) ಘಟನೆ ಬೆಂಗಳೂರಿನ (Bangalore Crime) ಮೆಜೆಸ್ಟಿಕ್ ಕೆಎಸ್ಆರ್‌ಟಿಸಿ ಬಸ್‌ ನಿಲ್ದಾಣದ ಬಳಿ ನಡೆದಿದೆ. ಈ ಘಟನೆಯ ವಿಡಿಯೋ ವೈರಲ್‌ (Viral Video) ಆಗಿದೆ.

ಹದಿನೈದು ಜನರ ಗುಂಪು ಯುವಕನ ಮೇಲೆ ಹಲ್ಲೆ ನಡೆಸಿದೆ. ಯುವಕನೊಬ್ಬ ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸಿದ್ದಲ್ಲದೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಹಾಡಿ ಹೊಗಳಿದ್ದ ಎನ್ನಲಾಗಿದೆ. ಈ ಯುವಕನ ಮೇಲೆ ರೊಚ್ಚಿಗೆದ್ದ ಗುಂಪು ಹಲ್ಲೆ ಮಾಡಿ ಮೋದಿ, ಮೋದಿ ಎಂದು ಕೂಗು ಎಂದು ಬಲವಂತ ಮಾಡಿದೆ. ಆದರೆ ಯುವಕ ಇದಕ್ಕೆ ಒಪ್ಪದಿದ್ದಾಗ ಮತ್ತಷ್ಟು ಹಲ್ಲೆ ಮಾಡಿದೆ.

ಸುಮಾರು ಹದಿನೈದು ಜನರ ಯುವಕರ ಗುಂಪು ಯುವಕನ ಮೇಲೆ ಹಲ್ಲೆ ನಡೆಸಿದೆ. ಮಾತ್ರವಲ್ಲ, ನೀನು ಮೋದಿಗೆ ಬೈಯ್ಯುವ ಹಾಗಿಲ್ಲ, ನೀನು ಸಿದ್ದರಾಮಯ್ಯ ಫಾಲೋವರ್ ಆಗಿದ್ದರೆ ನಿಮ್ಮ ಮನೆಯಲ್ಲಿ ಇಟ್ಟುಕೊ ಎಂದು ಎಚ್ಚರಿಸಿದೆ. ಅಲ್ಲದೆ, ಮೋದಿ ಎಂದು ಹೆಸರು ಹೇಳು ಎಂದು ಹಲ್ಲೆ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ. ಈ ಗುಂಪು ಯುವಕನ ಮೇಲೆ ಹಲ್ಲೆ ನಡೆಸಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ಸದ್ಯ ಯುವಕನನ್ನು ಉಪ್ಪಾರಪೇಟೆ ಉಪ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಲಾಗಿದೆ. ‌ಘಟನೆ ಸಂಬಂಧ ಇದುವರೆಗೆ ಯಾವುದೇ ಪ್ರಕರಣ ದಾಖಲಾಗಿಲ್ಲ. ಹಲ್ಲೆ ನಡೆಸಿದವರನ್ನು ಪೊಲೀಸರು ಶೋಧಿಸುತ್ತಿದ್ದಾರೆ. ವಿಡಿಯೋವನ್ನು ಸೂಕ್ಷ್ಮವಾಗಿ ಪರಿಶೀಲಿಸಲಾಗುತ್ತಿದೆ.

ಮೂರು ವರ್ಷಗಳಿಂದ ಕಾಣೆಯಾಗಿದ್ದ ವ್ಯಕ್ತಿಯ ಅಸ್ಥಿಪಂಜರ ಮನೆಯಲ್ಲೇ ಇತ್ತು!

ಧಾರವಾಡ: ವ್ಯಕ್ತಿಯೊಬ್ಬರು ಕಣ್ಮರೆಯಾಗಿ ಮೂರು ವರ್ಷಗಳ ನಂತರ ಅವರ ಅಸ್ಥಿಪಂಜರ (Body Found) ಪತ್ತೆಯಾಗಿದೆ. ಅದೂ ಧಾರವಾಡ (Dharwad news) ನಗರದಲ್ಲಿ ಅವರ ಸ್ವಂತ ಮನೆಯಲ್ಲೇ! ಶವ ಮನೆಯಲ್ಲಿ ಮಲಗಿದ ಸ್ಥಿತಿಯಲ್ಲೇ ಕಂಡುಬಂದಿದೆ. ಆದರೆ ಮೂರು ವರ್ಷಗಳಿಂದ ಯಾರೂ ಇದನ್ನು (Viral News) ಗಮನಿಸಿಲ್ಲ!

ಧಾರವಾಡದ ಮಾಳಮಡ್ಡಿ ಬಡಾವಣೆಯ ಕೆನರಾ ಬ್ಯಾಂಕ್ ಬಳಿ ಘಟನೆ ನಡೆದಿದೆ. ಚಂದ್ರಶೇಖರ್ ಎಂಬ ಈ ವ್ಯಕ್ತಿ ಮೂರು‌ ವರ್ಷಗಳಿಂದ ಎಲ್ಲೂ ಕಾಣಿಸಿರಲಿಲ್ಲ. ಕಳೆದ ತಿಂಗಳು ಈತ ಕಾಣುತ್ತಿಲ್ಲ ಎಂದು ಧಾರವಾಡ ವಿದ್ಯಾಗಿರಿ ಠಾಣೆಯಲ್ಲಿ ಒಬ್ಬರು ದೂರು ಕೊಟ್ಟಿದ್ದರು. ಚಂದ್ರಶೇಖರ್‌ ಅವರನ್ನು ಎಲ್ಲ ಕಡೆ ಹುಡುಕಾಡಿದ್ದ ಪೊಲೀಸರು, ನಿನ್ನೆ ಅವರ ಮನೆಗೆ ಹೋಗಿದ್ದರು. ಅಲ್ಲಿ ಹೋದಾಗ‌ ಪೊಲೀಸರಿಗೆ ಅಚ್ಚರಿಯಾಗುವಂತೆ ಚಂದ್ರಶೇಖರ್ ಅಸ್ಥಿಪಂಜರ ಮನೆಯಲ್ಲೇ ಪತ್ತೆಯಾಗಿದೆ.

ಚಂದ್ರಶೇಖರ್ ತಮ್ಮ ಪತ್ನಿಯ ಸಾವಿನ ನಂತರ ಮನೆಯಲ್ಲಿ ಒಬ್ಬನೇ ಇರುತ್ತಿದ್ದರು. ಅದಾದ ಬಳಿಕ ಕೋವಿಡ್ ಬಂದಿತ್ತು. ಕೋವಿಡ್ ವೇಳೆಯೇ ಇವರು ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿದೆ. ಮೃತ ವ್ಯಕ್ತಿಯ ಸಂಬಂಧಿಕರು ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ಇರುವ ಬಗ್ಗೆ ಮಾಹಿತಿ ಇದೆ. ಯಾರೂ ಇವರ ಬಗ್ಗೆ ಹೆಚ್ಚಿನ ಮಾಹಿತಿ ಸಂಗ್ರಹಿಸಿರಲಿಲ್ಲ.

ಇವರು ಹಾಲು, ಪೇಪರ್‌ ಕೂಡ ಹಾಕಿಸಿಕೊಳ್ಳುತ್ತಿರಲಿಲ್ಲ. ಹೀಗಾಗಿ ವ್ಯಕ್ತಿ ಸತ್ತದ್ದು ಯಾರ ಗಮನಕ್ಕೂ ಬಂದಿಲ್ಲ. ಸುತ್ತಮುತ್ತ ಮನೆಗಳಿದ್ದರೂ ಯಾರಿಗೂ ಗೊತ್ತಾಗಿಲ್ಲ ಎಂಬುದು ವಿಚಿತ್ರ. ಸದ್ಯ ಅಸ್ಥಿಪಂಜರವನ್ನು ವಶಕ್ಕೆ ಪಡೆದ ಪೊಲೀಸರು, ಇದು ಅವರದೇನಾ ಎಂದು ತಿಳಿಯಲು ವಿಧಿವಿಜ್ಞಾನ ತಪಾಸಣೆಗೆ ಕಳಿಸಿದ್ದಾರೆ.

ಇದನ್ನೂ ಓದಿ: BMTC Conductor: 5 ರೂ. ಚಿಲ್ಲರೆ ಕೊಡದೆ ಪ್ರಯಾಣಿಕನ ಮೇಲೆ ಹಲ್ಲೆ; ಬಿಎಂಟಿಸಿ ಕಂಡಕ್ಟರ್‌ ಸಸ್ಪೆಂಡ್!

Exit mobile version