Site icon Vistara News

Viral Video: ಥೂ..ಇವನೆಂಥಾ ಕ್ರೂರಿ! ಸತ್ತ ನಾಯಿಯನ್ನು ಕಾರಿಗೆ ಕಟ್ಟಿ ಎಳೆದೊಯ್ದ ಪಾಪಿ

Viral Video

ಅಹ್ಮದಾಬಾದ್‌: ದೇಶದ ನಾನಾ ಕಡೆಗಳಲ್ಲಿ ಮೂಕ ಪ್ರಾಣಿಗಳ ವಿರುದ್ಧದ ಕ್ರೌರ್ಯ ಆಗಾಗ ಬೆಳಕಿಗೆ ಬರುತ್ತಿರುತ್ತವೆ. ಅದರಲ್ಲೂ ಬೀದಿ ನಾಯಿಗಳ ಮೇಲೆ ಅಮಾನುಷ ಕೃತ್ಯ ನಡೆಯುತ್ತಲೇ ಇರುತ್ತದೆ. ಇದೀಗ ಅಂತಹದ್ದೇ ಒಂದು ಘಟನೆ ಗುಜರಾತ್‌(Gujarat)ನ ಅಹಮದಾಬಾದ್‌ನಲ್ಲಿ ನಡೆದಿದೆ. ಪಾಪಿಯೋರ್ವ ಸತ್ತ ಬೀದಿ ನಾಯಿಯನ್ನು ತನ್ನ ಕಾರಿನ ಹಿಂಬದಿಗೆ ಕಟ್ಟಿ ಎಳೆದುಕೊಂಡು ಕೆಲ ದೂರ ಹೋಗಿರುವ ಭೀಕರ ಘಟನೆ ವರದಿಯಾಗಿದೆ. ಘಟನೆ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್‌(Viral Video) ಆಗಿದೆ.

ವಿಡಿಯೋದಲ್ಲೇನಿದೆ?

ಟೊಯೋಟಾ ಇನೋವಾ ಕಾರಿಗೆ ಸತ್ತ ನಾಯಿಯನ್ನು ಕಟ್ಟಿ ಅಹಮಾದಾಬಾದ್‌ ಹೆದ್ದಾರಿಯಲ್ಲಿ ಎಳೆದುಕೊಂಡು ಹೋಗುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಫುಲ್‌ ವೈರಲ್‌ ಆಗಿದ್ದು, ನೆಟ್ಟಿಗರು ಆಕ್ರೋಶ ಹೊರ ಹಾಕಿದ್ದಾರೆ. ಆದರೆ ಘಟನೆ ಬಗ್ಗೆ ಇದುವರೆಗೆ ಯಾವುದೇ ಪೊಲೀಸ್‌ ಕೇಸ್‌ ದಾಖಲಾಗಿಲ್ಲ. ಅದೂ ಅಲ್ಲದೇ ಇದು ನಿಖರವಾಗಿ ಯಾವ ಸ್ಥಳದಲ್ಲಿ ನಡೆದಿದೆ ಎಂಬ ಬಗ್ಗೆಯೂ ಮಾಹಿತಿ ಸಿಕ್ಕಿಲ್ಲ.

ಇನ್ನು ಘಟನೆಗೆ ಅನೇಕರು ಖಂಡನೆ ವ್ಯಕ್ತಪಡಿಸಿದ್ದು, ಪ್ರಾಣಿಗಳ ವಿರುದ್ಧ ಕ್ರೌರ್ಯ ಮೆರೆಯುವ ಕ್ರೂರಿಗಳ ವಿರುದ್ಧ ಕಟ್ಟು ನಿಟ್ಟಿನ ಕ್ರಮ ಜರುಗಿಸಬೇಕೆಂದು ಆಗ್ರಹಿಸಿದ್ದಾರೆ. “ನಿಜವಾಗಿಯೂ ಮಾನವೀಯತೆ ಎಷ್ಟು ಕ್ರೂರವಾಗಿ ಮಾರ್ಪಟ್ಟಿದೆ…! ಶವವಾದರೂ ಹೀಗೆ ಎಳೆದುಕೊಂಡು ಹೋಗಬೇಕೇ, ಕಟ್ಟಿಹಾಕಬೇಕೇ? ಡ್ರೈವರ್ ತನ್ನ ಆತ್ಮೀಯರ ಶವವನ್ನು ಹೀಗೆ ತೆಗೆದುಕೊಂಡು ಹೋಗುತ್ತಾನೆಯೇ?” ಎಂದು ಒಬ್ಬ ನೆಟ್ಟಿಗ ಕಿಡಿ ಕಾರಿದ್ದಾರೆ. ಅಹಮದಾಬಾದ್‌ನಲ್ಲಿ ವ್ಯಕ್ತಿಯೊಬ್ಬ ಮಾನವೀಯತೆ ಮರೆತಿದ್ದಾನೆ. ಸತ್ತ ನಾಯಿಯನ್ನು ಗಾಡಿಗೆ ಕಟ್ಟಿ ಈ ರೀತಿ ಎಳೆದುಕೊಂಡು ಹೋಗುವುದು ಎಷ್ಟು ಸೂಕ್ತ? ನಾಚಿಕೆಗೇಡಿನ ಸಂಗತಿ ಇದು ಎಂದು ಮತ್ತೊಬ್ಬರು ಕಮೆಂಟ್‌ ಮಾಡಿದ್ದಾರೆ.

ವೈರಲ್ ವಿಡಿಯೋಗೆ ಪೇಟಾ ಪ್ರತಿಕ್ರಿಯೆ

ಭಾರತೀಯ ಪ್ರಾಣಿದಯಾ ಸಂಘವಾಗಿರುವ PETA ಕೂಡ ವೀಡಿಯೊಗೆ ಪ್ರತಿಕ್ರಿಯಿಸಿದೆ, “ಈ ಘಟನೆಯ ಬಗ್ಗೆ ವಿವರವಾದ ಮಾಹಿತಿಯನ್ನು ಒದಗಿಸಲು ನಮ್ಮ ತುರ್ತು ಸಂಖ್ಯೆ 98201 22602 ಗೆ ಕರೆ ಮಾಡಿ ಅಥವಾ ನಿಮ್ಮ ಸಂಪರ್ಕ ವಿವರಗಳನ್ನು ಒದಗಿಸಿ ಇದರಿಂದ ನಾವು ನಿಮ್ಮನ್ನು ಸಂಪರ್ಕಿಸಬಹುದು.” ಎಂದು ಎಕ್ಸ್‌ನಲಿ ಪೋಸ್ಟ್‌ ಮಾಡಿದೆ.

Exit mobile version