Site icon Vistara News

Viral Video: ಛೇ..ಇವನೆಂಥಾ ಪಾಪಿ..! ನಾಯಿ ಮೇಲೆ ಪದೇ ಪದೇ ಹಲ್ಲೆ ನಡೆಸಿ ವಿಕೃತಿ

Viral Video

ಗುರುಗ್ರಾಮ: ನಾಯಿಯನ್ನು ವಾಕಿಂಗ್‌ ಕರೆದುಕೊಂಡು ಹೋಗುವ ಕೆಲಸದವನು ಅದರ ಮೇಲೆ ಮಾರಣಾಂತಿಕ ಹಲ್ಲೆ(Thrashing pet) ನಡೆಸಿರುವ ಘಟನೆ ಗುರುಗ್ರಾಮ(Gurugram)ದಲ್ಲಿ ನಡೆದಿದೆ. ಅಪಾರ್ಟ್‌ಮೆಂಟ್‌ನ ಲಿಫ್ಟ್‌ವೊಂದರಲ್ಲಿ ಈ ಭೀಕರ ಘಟನೆ ನಡೆದಿದ್ದು, ಸಿಸಿಟಿವಿಯಲ್ಲಿ ದೃಶ್ಯ ಸೆರೆಯಾಗಿದೆ. ಇನ್ನು ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌(Viral Video) ಆಗಿದ್ದು, ಕಿಡಿಗೇಡಿಯ ಕೃತ್ಯಕ್ಕೆ ಖಂಡನೆ ವ್ಯಕ್ತವಾಗಿದೆ.

ಆರ್ಚಿಡ್‌ ಗಾರ್ಡನ್ಸ್‌ ಸೊಸೈಟಿಯ ಸೆಕ್ಟರ್‌ 54ರಲ್ಲಿ ಈ ಘಟನೆ ನಡೆದಿದ್ದು, ಗೋಲ್ಡನ್‌ ರಿಟ್ರೀವರ್‌ ನಾಯಿಯನ್ನು ವಾಕಿಂಗ್‌ ಕರೆದುಕೊಂಡು ಹೋಗುವ ವ್ಯಕ್ತಿಯೊಬ್ಬ ಲಿಫ್ಟ್‌ನಲ್ಲಿ ನಾಯಿಯ ಮುಖಕ್ಕೆ ಪದೇ ಪದೇ ಕೈಯಲ್ಲಿದ್ದ ಕೋಲಿನಂತಹ ಸಾಧನದಿಂದ ಹೊಡೆದಿದ್ದಾರೆ. ಬಳಿಕ ಕೈಯಿಂದಲೂ ನಾಯಿ ಬೆನ್ನಿಗೂ ಏಟು ಕೊಡುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ. ಇನ್ನು ಘಟನೆ ಬಗ್ಗೆ ತಿಳಿಯುತ್ತಿದ್ದಂತೆ ನಾಯಿಯ ಮಾಲೀಕರು ಯಾವುದೇ ದೂರು ನೀಡಿಲ್ಲ. ಆತನನ್ನು ಕೆಲಸದಿಂದ ತೆಗೆದು ಹಾಕಿದ್ದಾರೆ. ಆತ ಯಾವ ಕಾರಣಕ್ಕಾಗಿ ಈ ಕೃತ್ಯ ಎಸಗಿದ್ದಾನೆ ಎಂದು ತಿಳಿದುಬಂದಿಲ್ಲ.

ಇದನ್ನೂ ಓದಿ:Narendra Modi: ನಾಮಪತ್ರ ಸಲ್ಲಿಕೆಗೂ ಮುನ್ನ ಗಂಗಾರತಿ ಮಾಡಿದ ಮೋದಿ-ಇಲ್ಲಿದೆ ಲೈವ್‌

ಇಂತಹದ್ದೇ ಒಂದು ಘಟನೆ ಕೆಲವು ದಿನಗಳ ಹಿಂದೆ ದೆಹಲಿಯಲ್ಲಿ ನಡೆದಿತ್ತು. ನಾಯಿ ಬೊಗಳಿದ್ದಕ್ಕೆ ನೆರೆಮನೆಯ ವ್ಯಕ್ತಿಯೊಬ್ಬ ನಾಯಿ ಹಾಗೂ ಅದರ ಮಾಲೀಕನಿಗೆ ಕಬ್ಬಿಣದ ರಾಡ್​ನಿಂದ ಹೊಡೆದ ಆಘಾತಕಾರಿ ಘಟನೆ ದೆಹಲಿಯ ಪಶ್ಚಿಮ ವಿಹಾರ್​ ಪ್ರದೇಶದಲ್ಲಿ ನಡೆದಿತ್ತು. ಪಶ್ಚಿಮ ವಿಹಾರ್ ಏರಿಯಾದಲ್ಲಿರುವ ನಿವಾಸಿಯೊಬ್ಬರು ನಾಯಿಯನ್ನು ಸಾಕಿದ್ದರು. ಅದೇ ಏರಿಯಾದಲ್ಲಿದ್ದ ಪಕ್ಕದ ಮನೆಯ ವ್ಯಕ್ತಿಯೊಬ್ಬ ನಾಯಿ ಬೊಗಳುತ್ತೆ ಎಂಬ ಕಾರಣಕ್ಕೆ ನೇರವಾಗಿ ಬಂದು ನಾಯಿಯ ತಲೆಗೆ ಕಬ್ಬಿಣದ ರಾಡ್​ನಿಂದ ಹೊಡೆದಿದ್ದಾನೆ. ಈ ವೇಳೆ ತಡೆಯಲು ಬಂದ ನಾಯಿಯ ಮಾಲೀಕನಿಗೂ ರಾಡ್​ನಿಂದ ಹೊಡೆದಿದ್ದಾನೆ. ಇನ್ನು ರಾಡ್​ನಿಂದ ಗಂಭೀರ ಗಾಯಗೊಂಡ ನಾಯಿ ಹಾಗೂ ಆತನ ಮಾಲೀಕ ನೆಲದ ಮೇಲೆ ಕುಸಿದು ಬಿದ್ದಿದ್ದರು.. ತಕ್ಷಣವೇ ಮತ್ತೊಬ್ಬ ಇದನ್ನು ತಡೆಯಲು ಬಂದಿದ್ದಾನೆ. ತುಂಬಾ ಸಮಯದವರೆಗೂ ಗಲಾಟೆ ನಡೆದಿದೆ. ಈ ವೇಳೆ ತಡೆಯಲು ಬಂದ ಮತ್ತೊಬ್ಬ ವ್ಯಕ್ತಿಯ ತಲೆಗೂ ಗಂಭೀರವಾಗಿ ಹಲ್ಲೆ ಮಾಡಿದ್ದ.

ಘಟನೆ ನಡೆದ ಸಂಪೂರ್ಣ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಬೆಚ್ಚಿಬೀಳಿಸುವಂತಿದೆ. ಇನ್ನು ತೀವ್ರ ರಕ್ತಸ್ರಾವದಿಂದ ಒದ್ದಾಡುತ್ತಿದ್ದ ನಾಯಿ ಹಾಗೂ ಅದರ ಮಾಲೀಕರನ್ನ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗಿದೆ. ಸದ್ಯ ಈ ಘಟನೆಯ ದೃಶ್ಯಾವಳಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಘಟನೆ ಸಂಬಂಧ ನಾಯಿಯ ಮಾಲೀಕ ರಕ್ಷಿತ್ ಎಂಬುವವರು ಪಶ್ಚಿಮ ವಿಹಾರ್​ ಪೊಲೀಸ್​ ಠಾಣೆಯಲ್ಲಿ ಹಲ್ಲೆ ಮಾಡಿದ ವ್ಯಕ್ತಿಯ ಮೇಲೆ ದೂರು ನೀಡಿದ್ದರು. ದೂರಿನನ್ವಯ ಹಲ್ಲೆ ಮಾಡಿದ ವ್ಯಕ್ತಿ ಮೇಲೆ ಪ್ರಾಣಿಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

Exit mobile version