Site icon Vistara News

Viral Video: ರೆಸ್ಟೋರೆಂಟ್‌ನಲ್ಲಿ ಪತ್ನಿಯನ್ನು ಹೊಡೆದು ಕೊಂದ ಮಾಜಿ ಸಚಿವ; ಶಾಕಿಂಗ್‌ ವಿಡಿಯೋ ಎಲ್ಲೆಡೆ ವೈರಲ್‌

Viral Video

CCTV Video Captures Ex Kazakh Minister Beating His Wife To Death

ಕಜಕೀಸ್ತಾನ: ರೆಸ್ಟೋರೆಂಟ್‌ವೊಂದರಲ್ಲಿ ಮಾಜಿ ಸಚಿವನೋರ್ವ ತನ್ನ ಪತ್ನಿಯನ್ನು ದಾರುಣವಾಗಿ ಥಳಿಸಿದ್ದು, ಪರಿಣಾಮವಾಗಿ ಎಂಟು ಗಂಟೆಗಳಲ್ಲಿ ಆಕೆ ಕೊನೆಯುಸಿರೆಳೆದಿರುವ ಘಟನೆ ಕಜಕೀಸ್ತಾನ(Kajakistan)ದಲ್ಲಿ ನಡೆದಿದೆ. ಘಟನೆಯ ಶಾಕಿಂಗ್‌ ವಿಡಿಯೋ(Viral Video) ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದ್ದು, ಬೆಚ್ಚಿಬೀಳುವಂತಿದೆ. ಕಜಕೀಸ್ತಾನದ ಮಾಜಿ ಆರ್ಥಿಕ ಸಚಿವನಾಗಿದ್ದ ಕುವಾಂಡಿಕ್ ಬಿಶಿಂಬಾಯೆವ್ ತನ್ನ 31 ವರ್ಷದ ಸಲ್ತಾನೇಟ್‌ ನ್ಯೂಕೆನೋವಾ ಮೇಲೆ ಈ ಡೆಡ್ಲಿ ಅಟ್ಯಾಕ್‌(Deadly Attack) ಮಾಡಿದ್ದಾನೆ. ಫ್ಯಾಮಿಲಿ ರೆಸ್ಟೋರೆಂಟ್‌ನಲ್ಲಿ ಪತ್ನಿ ಕೂದಲು ಹಿಡಿದು ಎಳೆದು ತಂದ ಬಿಶಿಂಬಾಯೆವ್, ಆಕೆಯ ಮುಖಾಮೂತಿ ನೋಡದೇ ಚಚ್ಚುತ್ತಿರುವುದನ್ನು ವಿಡಿಯೋದಲ್ಲಿ ಗಮನಿಸಬಹುದಾಗಿದೆ.

ಕಳೆದ ವರ್ಷ ನವೆಂಬರ್‌ನಲ್ಲಿ ಈ ಘಟನೆ ನಡೆದಿದ್ದು, ಗಂಭೀರವಾವಾಗಿ ಗಾಯಗೊಂಡಿದ್ದ ಸಲ್ತಾನೇಟ್‌ ನ್ಯೂಕೆನೋವಾ ಎಂಡು ಗಂಟೆಗಳ ಬಳಿಕ ಕೊನೆಯುಸಿರೆಳೆದಿದ್ದಾಳೆ. ಈ ಪ್ರಕರಣದ ವಿಚಾರಣೆ ಕೋರ್ಟ್‌ನಲ್ಲಿ ನಡೆಯುತ್ತಿದ್ದು, ವಿಚಾರಣೆ ವೇಳೆ ಸಿಸಿಟಿವಿ ವಿಡಿಯೋವನ್ನು ಪ್ರದರ್ಶಿಸಲಾಯಿತು. ಹೀಗಾಗಿ ಈ ವಿಚಾರ ಮತ್ತೊಮ್ಮೆ ಸುದ್ದಿಯಾಗಿದೆ. ಇನ್ನು ಈ ಆರೋಪಿಗೆ ಕಠಿಣ ಶಿಕ್ಷೆ ಆಗಬೇಕೆಂದು ಒತ್ತಾಯಿಸಿ ಮಧ್ಯ ಏಷ್ಯಾದ ರಾಷ್ಟಗಳ ಹತ್ತು ಸಾವಿರಕ್ಕೂ ಅಧಿಕ ಜನರು ಸಹಿ ಹಾಕಿರುವ ಅರ್ಜಿಯನ್ನು ಕೋರ್ಟ್‌ಗೆ ಸಲ್ಲಿಸಲಾಗಿದೆ.

ಬಿಶಿಂಬಾಯೆವ್ (44) ಮಾಜಿ ಪ್ರಧಾನಿ ನರ್ಸುಲ್ತಾನ್ ನಜರ್ಬಯೇವ್ ನೇತೃತ್ವದ ಸರ್ಕಾರದಲ್ಲಿ ಸಚಿವರಾಗಿ ಕಾರ್ಯನಿರ್ಹಿಸುತ್ತಿದ್ದ. 2018ರಲ್ಲಿ ಲಂಚ ಪ್ರಕರಣದಲ್ಲಿ ಆತ ಎರಡು ವರ್ಷ ಜೈಲು ಶಿಕ್ಷೆಗೆ ಗುರಿಯಾಗಿದ್ದ. ಕಳೆದ ವರ್ಷದ ನವೆಂಬರ್‌ನಲ್ಲಿ ಆತನ ಪತ್ನಿ ಸಂಬಂಧಿಕರ ರೆಸ್ಟೋರೆಂಟ್‌ವೊಂದರಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟಿದ್ದಳು. ಒಂದು ವಾರದವರೆಗೆ ಬಿಶಿಂಬಾಯೆವ್ ತನಗೇನು ಗೊತ್ತಿಲ್ಲ, ತಾನೊಬ್ಬ ಅಮಾಯಕ ಎಂಬಂತೆ ಪೊಲೀಸರ ಎದುರು ನಟಿಸಿದ್ದ. ಆತನ ವಿರುದ್ಧ ಸಾಕ್ಷ್ಯಾಧಾರ ಸಿಗದಂತೆ ರೆಸ್ಟೋರೆಂಟ್‌ ಮಾಲೀಕ, ಸಿಬ್ಬಂದಿಗಳೂ ಸಹಕರಿಸಿದ್ದರು. ಆದರೆ ಕೋರ್ಟ್‌ನಲ್ಲಿ ತಾನೇ ಆಕೆಯಲ್ಲಿ ಹೊಡೆದು ಸಾಯಿಸಿರೋದಾಗಿ ಒಪ್ಪಿಕೊಂಡಿದ್ದಾನೆ.

ಇದನ್ನೂ ಓದಿ: Mallikarjuna Kharge: ಪ್ರಧಾನಿ ಮೋದಿ ವಡೋದರಾ ಬಿಟ್ಟು ವಾರಣಾಸಿಗೆ ಓಡಲಿಲ್ಲವೇ?; ಖರ್ಗೆ ಕಿಡಿ

ವೈದ್ಯರ ಮಾಹಿತಿ ಪ್ರಕಾರ ಸಲ್ತಾನೇಟ್‌ ನ್ಯೂಕೆನೋವಾ ತಲೆಗೆ ಗಂಭೀರವಾಗಿ ಏಟು ಬಿದ್ದ ಕಾರಣ ಆಕೆ ಮೃತಪಟ್ಟಿದ್ದಳು. ಇನ್ನು ಆಕೆಯ ಸಹೋದರ ಕೋರ್ಟ್‌ನಲ್ಲಿ ಸಾಕ್ಷಿ ಹೇಳಿದ್ದು, ತನ್ನ ಸಹೋದರಿ ಕೌಟುಂಬಿಕ ದೌರ್ಜನ್ಯಕ್ಕೆ ಬಲಿಯಾಗಿರುವುದರಲ್ಲಿ ಯಾವುದೇ ಅನುಮಾನಗಳಿಲ್ಲ. ಆರೋಪಿಗೆ ಅತ್ಯಂತ ಕಠಿಣ ಶಿಕ್ಷೆ ಆಗಲೇಬೇಕೆಂದು ಒತ್ತಾಯಿಸಿದ್ದಾನೆ. ಈಗಾಗಲೇ ಮೃತಳಿಗೆ ಸಂಬಂಧಿಸಿದ ಎಲ್ಲಾ ವೈದ್ಯಕೀಯ ದಾಖಲೆಗಳನ್ನು ವಕೀಲರು ಕೋರ್ಟ್‌ಗೆ ಸಲ್ಲಿಸಿದ್ದಾರೆ. ರಷ್ಯಾದಂತೆ ಕಜಕೀಸ್ತಾದಲ್ಲೂ ಪುರುಷ ಪ್ರಧಾನ ಸಂಸ್ಕೃತಿ ಚಾಲ್ತಿಯಲ್ಲಿದ್ದು, ಹೀಗಾಗಿ ಕೌಟುಂಬಿಕ ಕಲಹ, ಲೈಂಗಿಕ ದೌರ್ಜನ್ಯ ಮೊದಲಾದ ಅಪರಾಧಗಳು ಹೆಚ್ಚಾಗಿವೆ.2018ರಲ್ಲಿ ವಿಶ್ವಸಂಸ್ಥೆ ನೀಡಿರುವ ವರದಿ ಪ್ರಕಾರ ಪ್ರತಿ ವರ್ಷ 400 ಕ್ಕೂ ಅಧಿಕ ಮಹಿಳೆಯರು ಕೌಟುಂಬಿಕ ಕಲಹಕ್ಕೆ ಬಲಿಯಾಗುತ್ತಿದ್ದಾರೆ.

Exit mobile version